ಎಸ್.ಜಾನಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಾ. ಎಸ್.ಜಾನಕಿ

ಡಾ. ಎಸ್.ಜಾನಕಿ (ಜನನ:೧೯೩೮ಏಪ್ರಿಲ್ ೨೩ ) ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿಯರಲ್ಲೊಬ್ಬರು. ಮೂಲತ: ಆಂಧ್ರ ಪ್ರದೇಶದವರಾದರೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ.

೧೯೩೮ ಏಪ್ರಿಲ್ ೨೩ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಎಂಬಲ್ಲಿ ಅವರ ಜನನ. ಅವರು ೩ ವರ್ಷದ ಮಗುವಾಗಿದ್ದಾಗಿನಿಂದ ಹಾಡಲು ಆರಂಭಿಸಿದರೆಂದು ಹೇಳಲಾಗುತ್ತದೆ. ೧೯೫೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಕೃಷ್ಣಗಾರುಡಿಗಾಗಿ ಇವರು ಪ್ರಪ್ರಥಮವಾಗಿ ಹಾಡಿದ್ದು. ಇದರ ಶೀರ್ಷಿಕೆ ಗೀತೆ 'ಭಲೇ ಭಲೇ ಗಾರುಡಿ ಬರುತಿಹ ನೋಡಿ' ಸಂಗೀತ ನಿರ್ದೇಶಕ ಪೆಂಡ್ಯಾಲ ಅವರೊಂದಿಗೆ ಹಾಡಿದ್ದಾರೆ. ಇಲ್ಲಿಯವರೆಗೂ ಸುಮಾರು ೧೭,೦೦೦ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ನಾಲ್ಕು ಬಾರಿ ರಾಷ್ಟೀಯ ಪುರಸ್ಕಾರ ಪಡೆದಿದ್ದಾರೆ. ಇದಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಹಾಡಿ ಅಲ್ಲಿಯ ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.೨೦೦೯ರಲ್ಲಿ ಮೈಸೂರು ವಿ.ವಿ.ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇದು ಎಸ್.ಜಾನಕಿಯವರ ಅಧಿಕೃತ ಜಾಲತಾಣ. ನಮನ

[ಬದಲಾಯಿಸಿ] ಡಾ. ಎಸ್.ಜಾನಕಿ ಕಂಠದಲ್ಲಿರುವ ಕೆಲವು ಗೀತೆಗಳು

"ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ"ಎಂಬ ಕುವೆಂಪು ರಚನೆಯ ಸುದರ್ಶನ್‌ರವರ ಸ್ವರ ಸಂಯೋಜನೆಗೆ ಎಸ್.ಜಾನಕಿ ಅವರೊಂದಿಗೆ ರಾಮಚಂದ್ರರಾವ್ (ರಾಮಚಂದ್ರರಾವ್ ಅವರು ಖ್ಯಾತ ಹಿನ್ನಲೆ ಗಾಯಕಿ ಪಿ.ಸುಶೀಲಾ ಅವರ ಸೋದರ ಸಂಬಂಧಿ.) ಕಂಠ ಕೈಜೋಡಿಸಿ ಹಾಡಿದ ಹಾಡು ಕೇವಲ ಹಾಡಾಗದೆ ಕೇಳುಗರಿಗೆ ರೋಮಾಂಚನ ಉಂಟು ಮಾಡುತ್ತದೆ. ೧೯೬೫ ರಲ್ಲಿ ತೆರೆಕಂಡ ಮಿಸ್.ಲೀಲಾವತಿ ಚಿತ್ರದ ಈ ಗೀತೆ ತನ್ನದೇ ಆದ ಮೈಲಿಗಲ್ಲು ನಿರ್ಮಿಸಿದ ಖ್ಯಾತಿಗೆ ಒಳಗಾಗಿದೆ.

ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ

"http://kn.wikipedia.org/w/index.php?title=ಎಸ್.ಜಾನಕಿ&oldid=223152" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು