ಎಸ್ಕಿಮೋ-ಅಲ್ಯೂಟ್ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್ಕಿಮೋ-ಅಲ್ಯೂಟ್
ಭೌಗೋಳಿಕ
ವ್ಯಾಪಕತೆ:
ಗ್ರೀನ್‍ಲ್ಯಾಂಡ್, ಉತ್ತರ ಕೆನಡ, ಅಲಾಸ್ಕಾ ಮತ್ತು ಸೈಬೀರಿಯಾ
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 

ಉತ್ತರ ಅಮೇರಿಕದಲ್ಲಿ ಈ ಭಾಷೆಗಳ ವಿಸ್ತಾರ

ಎಸ್ಕಿಮೋ-ಅಲ್ಯೂಟ್' ಗ್ರೀನ್‍ಲ್ಯಾಂಡ್, ಕೆನಡಾಆರ್ಕ್ಟಿಕ್ ಪ್ರದೇಶ, ಅಲಾಸ್ಕಾ ಮತ್ತು ಸೈಬೀರಿಯಾದ ಕೆಲ ಭಾಗಗಳಲ್ಲಿ ಸ್ಥಳೀಯವಾಗಿರುವ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಈ ಕುಟುಂಬದೊಳಗೆ ಉತ್ತರ ಅಲಾಸ್ಕಾ, ಕೆನಡಾ ಮತ್ತು ಗ್ರೀನ್‍ಲ್ಯಾಂಡ್ ಪ್ರದೇಶಗಳಲ್ಲಿ ಉಪಯೋಗದಲ್ಲಿರುವ ಇನ್ಯುಇಟ್ ಭಾಷೆಗಳು, ಪಶ್ಚಿಮ ಅಲಾಸ್ಕಾ ಮತ್ತು ಸೈಬೀರಿಯಗಳಲ್ಲಿ ಉಪಯೋಗದಲ್ಲಿರುವ ಯುಪ್ಯಿಕ್ ಭಾಷೆಗಳು ಹಾಗು ಅಲ್ಯೂಷ್ಯನ್ ದ್ವೀಪಗಳಲ್ಲಿ ಉಪಯೋಗದಲ್ಲಿರುವ ಅಲ್ಯೂಟ್ ಭಾಷೆ ಸೇರುತ್ತವೆ.

ವಿಂಗಡಣೆ[ಬದಲಾಯಿಸಿ]

ಎಸ್ಕಿಮೋ-ಅಲ್ಯೂಟ್

ಅಲ್ಯೂಟ್ ಭಾಷೆ
ಎಸ್ಕಿಮೋ (ಯುಪ್ಯಿಕ್, ಯುಇಟ್ ಮತ್ತು ಇನ್ಯುಇಟ್)
ಮಧ್ಯ ಅಲಾಸ್ಕಾದ ಯುಪ್ಯಿಕ್ ಭಾಷೆ (10,000 ಜನ)
ಅಲುಟೀಇಕ್ ಭಾಷೆ (400 ಜನ)
ಸೈಬೀರಿಯದ ಯುಪ್ಯಿಕ್ ಭಾಷೆ ಅಥವಾ ಯುಇಟ್ (1400 ಜನ)
ನೌಕನ್ (70 ಜನ)
ಇನ್ಯುಇಟ್ ಭಾಷೆಗಳು ಅಥವಾ ಇನುಪಿಕ್ (75,000 ಜನ)
ಸಿರೆನಿಕ್ (ಅಳಿದುಹೋಗಿರುವ ಭಾಷೆ)