ಎಡ್ಮಂಡ್ ಕಾರ್ಟ್ ರೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೮೯೦ ಯ 'ಡಾಬಿ ಸ್ವಯಂ ಚಾಲಿತ ಮಗ್ಗ', 'ಟೆಕ್ಸ್ ಟೈಲ್ ಮರ್ಕ್ಯುರಿ' ಎಂಬ ಪ್ರತಿಷ್ಠಿತ ಬ್ರಿಟಿಷ್ ಪತ್ರಿಕೆಯ ಪುಟಗಳಿಂದ

ಎಡ್ಮಂಡ್ ಕಾರ್ಟ್‌ರೈಟ್‌,'ರವರು ಸ್ವಯಂಚಾಲಿತ ಮಗ್ಗದ ನಿರ್ಮಿತಿಯಲ್ಲಿ ಪ್ರಸಿದ್ಧರಾಗಿದ್ದಾರೆ. [೧](೧೭೪೩-೧೮೨೩) ಬ್ರಿಟನ್ ನಲ್ಲಿ 'ಔದ್ಯೋಗಿಕ ಕ್ರಾಂತಿ'ಯಾದ ಸಮಯದಲ್ಲಿ ಪ್ರಪ್ರಥಮವಾಗಿ ಅದು ಶುರುವಾಗಿದ್ದು ಹತ್ತಿದಾರ ನಿರ್ಮಾಣ, ಹಾಗೂ ಬಟ್ಟೆ ತಯಾರಿಸುವ ಯಂತ್ರಗಳಿಂದ ಹಬೆಯ ಸಹಾಯದಿಂದ ಚಲಿಸಲ್ಪಡುವ ಇಂಜಿನ್ ಗಳು ಮತ್ತು ಕಲ್ಲಿದ್ದಲಿನ ಸಹಾಯದಿಂದ ಚಲಿಸುವ ಯಂತ್ರಗಳೂ ಆ ನಿಟ್ಟಿನಲ್ಲಿ ಬರುತ್ತವೆ.

ಜನನ,ವಿದ್ಯಾರ್ಜನೆ, ವೃತ್ತಿಜೀವನ[ಬದಲಾಯಿಸಿ]

ಬ್ರಿಟನ್ನಿನ ಸಂಶೋಧಕರಾಗಿದ್ದ 'ಎಡ್ಮಂಡ್ ಕಾರ್ಟ್‌ರೈಟ್‌'ರವರು ೧೭೪೩ ರಲ್ಲಿ ಬ್ರಿಟನ್ ನ,'ನಾಟಿಂಗ್‌ಹ್ಯಾಮ್‌ಷೈರಿ'ನಲ್ಲಿ ೨೪,ಏಪ್ರಿಲ್,೧೭೪೩ ರಲ್ಲಿ ಜನಿಸಿದರು.[೨] ಅವರ ತಂದೆ ಒಬ್ಬ ಜಮೀನುದಾರರು. 'ಆಕ್ಸ್ ಫರ್ಡ್ ವಿಶ್ವವಿದ್ಯಾಲಯ'ದಲ್ಲಿ ಶಿಕ್ಷಣ ಪಡೆದರು. ನಂತರ ಒಂದು ಚರ್ಚ್ ನಲ್ಲಿ ಕೆಲಸ ಹಿಡಿದರು. ಮುಂದೆ 'ಲಿಂಕನ್ ಕೆಥೆಡ್ರಲ್' ನಲ್ಲಿ ಅಧಿಕಾರಿಯಾಗಿ ೧೭೮೬ ರ ವರೆಗೆ ತಮ್ಮ ಮರಣದ ಸಮಯದ ತನಕ ಅಲ್ಲಿಯೇ ದುಡಿದರು. ಕಾರ್ಟ್‌ರೈಟ್‌ರವರು ಡೆರ್ಬಿಷೈರಿನಲ್ಲಿದ್ದ ಬ್ರಿಟನ್ನಿನ ಮತ್ತೊಬ್ಬ ಸಂಶೋಧಕ 'ರಿಚರ್ಡ್ ಆರ್ಕ್‌ರೈಟ್‌'ರವರ (೧೭೩೨-೧೭೯೨) ಹತ್ತಿ-ನೂಲುವ ಗಿರಣೆಗಳಿಗೆ ಭೇಟಿ ನೀಡಿದಾಗ ನೇಯ್ಗೆಯ ಹೊಸ ವಿಧಾನಗಳನ್ನು ಕಂಡುಹಿಡಿಯುವುದರಲ್ಲಿ ಆಸಕ್ತಿ ಹುಟ್ಟಿತು. ಇದರ ಫಲವಾಗಿ, ಅವರು ೧೭೮೫ ರಲ್ಲಿ ಶಕ್ತಿ-ಚಾಲಿತ ಮಗ್ಗವನ್ನು (power loom) ಸಂಶೋಧಿಸಿದರು. ಮೊದಲ ಪವರ್ ಲೂಮ್ ೧೭೮೫ ರಲ್ಲಿ ಪೇಟೆಂಟ್ ಗಳಿಸಲಾಯಿತು. ಆದರೆ ಅದು ಬಹಳ ಜನಪ್ರಿಯವಾಗಲಿಲ್ಲ. ಮುಂದೆ ಅದರಲ್ಲಿ ಹಲವಾರು ಹೊಸ ಹೊಸ ಬದಲಾವಣೆಗಳನ್ನು ತರಲಾಯಿತು.ಆ ಶಕ್ತಿ-ಚಾಲಿತ ಮಗ್ಗವನ್ನು 'ಮ್ಯಾಂಚೆಸ್ಟರ್‌ನ ಗಿರಣಿ'ಯೊಂದರಲ್ಲಿ ಸ್ಥಾಪಿಸಿದಾಗ ಅಲ್ಲಿನ ಕೆಲಸಗಾರರು ಆ ಯಂತ್ರದಿಂದ ತಮ್ಮ ಉದ್ಯೋಗಕ್ಕೆ ಧಕ್ಕೆ ಬರುವುದೆಂದು ಹೆದರಿ, ತಮ್ಮ ಪ್ರತಿಭಟನೆಯಿಂದ ಅಂತಹ ಹೊಸ ಆವಿಶ್ಕಾರಿತ ಯಂತ್ರಗಳನ್ನು ಸುಟ್ಟುಹಾಕಿದರು.

'ಡಾನ್ ಕೇಸ್ಟರ್' ನಲ್ಲಿ ಕಾರ್ಖಾನೆ ಸ್ಥಾಪನೆ[ಬದಲಾಯಿಸಿ]

'ಕಾರ್ಟ್ ರೈಟ್' ಈಗ 'ಡಾನ್ ಕೇಸ್ಟರ್' ನಲ್ಲಿ ಯಂತ್ರ ಮಗ್ಗಗಳನ್ನು ಕಲೆಹಾಕಿ, ಒಂದು ಕಾರ್ಖಾನೆಯನ್ನು ಸ್ಥಾಪಿಸಿದರು. ಆದರೆ ವ್ಯವಹಾರಜ್ಞಾನವಿಲ್ಲದೆ ಆ ಹೊಸಪ್ರಯೋಗಗಳು ಹೆಚ್ಚು ಸಹಾಯಕಾರಿಯಾಗಲಿಲ್ಲ. ೧೭೯೩ ರಲ್ಲಿ ಅವರು ದಿವಾಳಿಯಾಗಿ ತಮ್ಮ ಕಾರ್ಖಾನೆಯನ್ನು ಮುಚ್ಚಬೇಕಾಯಿತು. ಆಗ 'ಮ್ಯಾನ್ ಚೆಸ್ಟರ್' ನ ಒಂದು ಕಂಪೆನಿ ೪೦೦ ಮಗ್ಗಗಳನ್ನು ಖರೀದಿಸಿತು. ಆದರೆ ಅದು ಬೆಂಕಿಯ ಅಪಘಾತದಲ್ಲಿ ನಾಶವಾಯಿತು. ಆ ಅಪಘಾತವನ್ನು ಮಾಡಿದವರು 'ಕೈಮಗ್ಗದ ಕಾರೀಗರ್' ಗಳು. ತಮ್ಮ ಕೆಲಸಕ್ಕೆ ಧಕ್ಕೆ ಬರುವುದೆಂದು ಹೆದರಿ ಅವರು, ಕಾರ್ಟ್ ರೈಟ್ ನ ಹೊಸ ಸಂಶೋಧನೆಗಳಿಗೆ ತಣ್ಣೀರೆರಚಿದರು. 'ಕಾರ್ಟ್ ರೈಟ್', ೧೭೯೬ ರಲ್ಲಿ ಲಂಡನ್ ನಗರಕ್ಕೆ ಹೋದರು. ಬ್ರಿಟನ್ನಿನ ಔದ್ಯೋಗಿಕ ಕ್ರಾಂತಿಯಸಮಯದಲ್ಲಿ 'ಕೈಮಗ್ಗಕ್ಕೆ ಹೋಲಿಸಿದರೆ, ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಲು ಸೃಷ್ಟಿಸಿದ ಯಂತ್ರಗಳಲ್ಲಿ ಈ 'ಶಕ್ತಿ-ಚಾಲಿತ ಮಗ್ಗ'ವೂ ಒಂದಾಗಿತ್ತು.

ಮತ್ತಿತರ ಸಂಶೋಧನೆಗಳು[ಬದಲಾಯಿಸಿ]

'ಎಡ್ಮಂಡ್ ಕಾರ್ಟ್‌ರೈಟ್‌'ರವರು ೧೭೮೯ರಲ್ಲಿ 'ಉಣ್ಣೆ-ಹಿಕ್ಕುವ ಯಂತ್ರ'ವನ್ನು (wool-combing machine) ಸಂಶೋಧಿಸಿದರು. ಅವರು ೧೭೯೭ರಲ್ಲಿ 'ಆಲ್ಕೋಹಾಲ್ ಇಂಧನ'ವಾಗಿರುವ 'ಉಗಿ-ಎಂಜಿನ್‌'ನನ್ನು (steam engine) ನಿರ್ಮಿಸಿ, ಅದರ 'ಪೇಟೆಂಟ್' ಗಳಿಸಿದರು. 'ರಾಬರ್ಟ್ ಫುಲ್ಟನ್‌'ರವರ (೧೭೬೫-೧೮೧೫) 'ಉಗಿದೋಣಿ'ಯ (steamboat) ಬಗ್ಗೆ ನಡೆಸಿದ ಸಂಶೋಧನಾ ಪ್ರಯೋಗಗಳಿಗೆ ಅವರು ತಮ್ಮ ಸಹಕಾರ ನೀಡಿದರು. ಹಲವಾರು ಹೊಸ ವಿಶಯಗಳ ಬಗ್ಗೆ ಸಂಶೋಧನೆ ನಡೆಸಿದರು. ೧೮೦೯ ರಲ್ಲಿ ಲಂಡನ್ ನ 'ಹೌಸ್ ಆಫ್ ಕಾಮನ್ಸ್,' ಕಾರ್ಟ್ ರೈಟ್ ಕೆಲಸಗಳನ್ನು ಹೊಗಳಿ ಮತಕೊಟ್ಟರು. ಜೊತೆಗೆ ೧೦,೦೦೦ ಉಪಹಾರಕೊಟ್ಟರು.

ಹೊಸರೀತಿಯ ಕಾರ್ಯವಿಧಾನಗಳ ಪ್ರಯತ್ನ[ಬದಲಾಯಿಸಿ]

ಇಟ್ಟಿಗೆಗಳನ್ನು ಕೂಡಿಸಿ ವಿನ್ಯಾಸಮಾಡುವ ಪದ್ಧತಿ, ಮತ್ತು ನೆಲದ ವಿನ್ಯಾಸ ರಚನೆ, ಮೊದಲಾದ ಹೊಸ ರಚನೆಗಳ ಬಗ್ಗೆ ಅವರು ಕೆಲಸಮಾಡಲು ಆರಂಭಿಸಿದರು. ಆದರೆ ಅದು ಹೆಚ್ಚು ಉಪಯೋಗಕ್ಕೆ ಬರಲಿಲ್ಲ.

ನಿಧನ[ಬದಲಾಯಿಸಿ]

'ಎಡ್ಮಂಟ್ ಕಾರ್ಟ್‌ರೈಟ್‌'೧೮೨೩ರಲ್ಲಿ 'ಕೆಂಟ್‌' ನಗರದಲ್ಲಿ ನಿಧನರಾದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Edmund Cartwright (1743-1823) BBC' at Historic Figures at the BBC']
  2. "ಕಣಜ, 'ಎಡ್ಮಂಡ್ ಕಾರ್ಟ್ ರೈಟ್,ಸ್ವಯಂಚಾಲಿತ ಮಗ್ಗದ ನಿರ್ಮಾಪಕರು'". Archived from the original on 2016-03-06. Retrieved 2014-12-22.