ಎಚ್.ಎಂ. ತಿಮ್ಮಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನ[ಬದಲಾಯಿಸಿ]

ಶ್ರೀ ಎಚ್.ಎಂ. ತಿಮ್ಮಪ್ಪ

ತಂದೆ ಶ್ರೀ ಹೆಗಡೆ ಮರಿಯಪ್ಪನವರು ಮತ್ತು ತಾಯಿ ಶ್ರೀಮತಿ ಎಂ. ದೇವಕಮ್ಮನವರ ಮಗನಾಗಿ ದಿ. 08-11-1939 ರಂದು ಕರ್ನಾಟಕರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲಸಿಯಲ್ಲಿ ಜನಿಸಿದರು. ಸ್ವಗ್ರಾಮವಾದ ಕಲಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ್ದರಿಂದ ಕೆಲವು ಕಾಲ ಮನೆಯಲ್ಲಿಯೇ ವಾಸ. ತದನಂತರ ವಾರಾನ್ನ ಮಾಡಿಕೊಂಡು ಲಿಂಗದಹಳ್ಳಿ ವೇದಪಾಠ ಶಾಲೆಯಲ್ಲಿ ವೇದಾಧ್ಯಯನ. ಆ ವೇದಪಾಠ ಶಾಲೆಯೂ ಹೆಚ್ಚುಕಾಲ ನಡೆಯದೇ ಇದ್ದುದರಿಂದ ಪುನಃ ಮನೆಗೆ ಮರಳಿ ಅಣ್ಣಂದಿರೊಡನೆ ಕೃಷಿ ಕೆಲಸ. ಓದಬೇಕೆಂಬ ತುಡಿತವಿದ್ದರೂ ಅನುಕೂಲವಾದ ಅವಕಾಶವಿರಲಿಲ್ಲ. ಸಂಸ್ಕೃತ ವಿದ್ವಾಂಸರೂ ಅವರ ಒತ್ತಿನ ಅಣ್ಣನವರೂ ಆದ ವೆಂಕಟಗಿರಿಯಣ್ಣನ ವಿವಾಹವಾದ ಬಳಿಕ ಅವರೊಂದಿಗೆ ಬಂಗಾರಪೇಟೆಯಲ್ಲಿ ಅವರ ಮನೆಯಲ್ಲಿಯೇ ಇದ್ದುಕೊಂಡು ಖಾಸಗಿಯಾಗಿ ಸ್ವಪ್ರಯತ್ನದಿಂದ ಕನ್ನಡ ಪಂಡಿತ್ ಪರೀಕ್ಷೆ, ಹಿಂದಿ ರತ್ನ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣ. ಗಮಕ ಪ್ರೌಢ ಪರೀಕ್ಷೆಯಲ್ಲಿ ಉತ್ತೀರ್ಣ. ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ.

ವೃತ್ತಿ ಜೀವನ[ಬದಲಾಯಿಸಿ]

1969ರಲ್ಲಿ ಸಾಗರದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ವೃತ್ತಿಜೀವನ ಆರಂಭ. ವೃತ್ತಿಯೊಂದಿಗೆ ಬಿ.ಇಡಿ. ಪದವಿ ಗಳಿಕೆ. ನಂತರ 1984ರಲ್ಲಿ ಶಿರವಂತೆ ಸರ್ಕಾರಿ ಪ್ರೌಢಶಾಲೆಗೆ ವರ್ಗ. ಪ್ರೌಢಶಾಲಾ ಮುಖ್ಯೋಪಾಧ್ಯಾಯನಾಗಿ ಕೆಲಸ. 1998ರಲ್ಲಿ ನಿವೃತ್ತಿ.

ಸಾಮಾಜಿಕ ಸಂಬಂಧ[ಬದಲಾಯಿಸಿ]

  • ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕೆಲಸ. ಸಾಗರದ ಮಲೆನಾಡು ಗಮಕ ಕಲಾಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಸುಮಾರು ಹನ್ನೆರಡು ವರ್ಷ ಕಾರ್ಯನಿರ್ವಹಣೆ.
  • ಕೆಳದಿ ವಸ್ತು ಸಂಗ್ರಹಾಲಯಕ್ಕೆ ಸುಮಾರು ಐದು ಸಾವಿರ ಹಸ್ತ ಪ್ರತಿ ದಾಖಲೆ ಸಂಗ್ರಹ.
  • 1996ರಲ್ಲಿ ಭದ್ರಾವತಿ ಆಕಾಶವಾಣಿಯಲ್ಲಿ ಸ್ವರಚಿತ ಕವನ ವಾಚನ. ಸ್ಥಳ ಹಾಗೂ ಪರಸ್ಥಳಗಳಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ.
  • ಶತಾವಧಾನಿ ಶ್ರೀ ಆರ್. ಗಣೇಶ್ ಅವರ ಅಷ್ಟಾವಧಾನದಲ್ಲಿ ಪೃಚ್ಛಕನಾಗಿ ಕಾರ್ಯನಿರ್ವಹಣೆ.

ಸಾಹಿತ್ಯ ಕೃಷಿ[ಬದಲಾಯಿಸಿ]

ಪ್ರಕಟವಾದವು[ಬದಲಾಯಿಸಿ]

  1. ಹವ್ಯಕರ ಇತಿಹಾಸ (ಸಂಶೋಧನಾ ಗ್ರಂಥ) 1990 (ಪ್ರತಿಗಳು ಇಲ್ಲ)
  2. ಚಿನ್ನದ ಚೆಂಡು (ಗೀತರೂಪಕ) 2006 (ಪ್ರತಿಗಳು ಇಲ್ಲ)
  3. ವೈದಿಕ ಸಂಸ್ಕಾರ ಸಾರ ಸಂಗ್ರಹ 2006 (ಪೂರ್ವ ಷೋಡಶ ಸಂಸ್ಕಾರ - ಅಪರ ಷೋಡಶ ಸಂಸ್ಕಾರಗಳು) ಪ್ರತಿಗಳು ಇಲ್ಲ
  4. ಭರ್ತೃಹರಿ ನೀತಿ ಶತಕಂ - 2010 (ಪದ್ಯರೂಪ ಭಾಮಿನಿ ಷಟ್ಪದಿ)
  5. ಹವ್ಯಕರ ಇತಿಹಾಸ ದರ್ಶನ -2012 (ಸಂಶೋಧನಾ ಗ್ರಂಥ)
  6. ಚೆನ್ನುಡಿ ಶತಕ
  7. ಹಲವಾರು ಪ್ರಸಿದ್ಧ ಕನ್ನಡ ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ, ಬಿಡಿ ಲೇಖನಗಳು, ಕವಿತೆಗಳು ಪ್ರಕಟ.

ಅಪ್ರಕಟಿತ ಗ್ರಂಥಗಳು[ಬದಲಾಯಿಸಿ]

  1. ನಾಟಕಗಳು
  2. ಹವ್ಯಕರ ಆಡುಭಾಷೆ - ಒಂದು ಅಧ್ಯಯನ
  3. ಹವ್ಯಕರ ಆಡುಭಾಷೆ ನುಡಿಮುತ್ತುಗಳು
  4. ಭರ್ತೃಹರಿಯ ಶೃಂಗಾರ ಶತಕ ಕನ್ನಡಾನುವಾದ - ಭಾಮಿನಿ ಷಟ್ಪದಿ.
  5. ಕಾವ್ಯ ವಾಹಿನಿ (ಬಿಡಿ ಕವನಗಳ ಸಂಗ್ರಹ)
  6. ಸಂಗ್ರಹ - ಮಾರ್ಕಂಡೇಯ ಪುರಾಣ -ಭಾಮಿನಿ ಷಟ್ಪದಿ ಕಾವ್ಯ

ಪ್ರಶಸ್ತಿ ಮತ್ತ ಗೌರವ[ಬದಲಾಯಿಸಿ]

  • ಪಂಜಜೆ ಶಂಕರಭಟ್ಟರ ಕಾವ್ಯ ಪ್ರಶಸ್ತಿ 1999
  • ಹವ್ಯಕ ಸಂಘ ಸಾಗರ 1999
  • ಅಖಿಲ ಹವ್ಯಕ ಮಹಾಸಭೆ, ಬೆಂಗಳೂರು 2003
  • ಹವ್ಯಕ ಸಾಗರ ರಿ. ಸಾಗರ 2013
  • ಮಲೆನಾಡು ಗಮಕ ಕಲಾ ಸಂಘ ರಿ. ಸಾಗರ ಇಲ್ಲಿ 19-12-2013ರಂದು ನಡೆದ ಚೆನ್ನುಡಿ ಶತಕ ವಾಚನ- ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಸನ್ಮಾನ.