ಎಂ.ರಂಗರಾವ್
Wikipedia ಇಂದ
ಕನ್ನಡ ಚಿತ್ರಸಂಗೀತದಲ್ಲಿ ಮಧುರಗೀತೆಗಳ ಪರಂಪರೆಗೆ ನಾಂದಿ ಹಾಕಿದವರು ಎಂ.ರಂಗರಾವ್.(ಜನನ : ಅಕ್ಟೋಬರ್ ೧೫,೧೯೩೨ - ಮರಣ : ೧೯೯೧)
ಪರಿವಿಡಿ |
[ಬದಲಾಯಿಸಿ] ಹಿನ್ನೆಲೆ
ರಂಗರಾವ್ ಜನಿಸಿದ್ದು ಆಂಧ್ರ ಪ್ರದೇಶದ ಕವಲೇರು ಗ್ರಾಮದಲ್ಲಿ. ತಾಯಿ ರಂಗಮ್ಮನವರ ಪ್ರಭಾವದಿಂದ ಬಾಲ್ಯದಲ್ಲೇ ಸಂಗೀತಾಭಿರುಚಿ ಬೆಳೆದು ಬಂತು.ವೀಣೆಯನ್ನು ಕಲಿತರು.ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವಿ ಪಡೆದರು.
[ಬದಲಾಯಿಸಿ] ಚಿತ್ರರಂಗ ಪ್ರವೇಶ
ತೆಲುಗಿನ 'ಸ್ವರ್ಗ ಸೀಮಾ ಯೋಗಿ ವೇಮನ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದ ಪ್ರವೇಶ.'ತ್ಯಾಗಯ್ಯ' ಚಿತ್ರದಲ್ಲಿ ಆಕಸ್ಮಿಕವಾಗಿ ವೀಣೆ ನುಡಿಸುವ ಅವಕಾಶ ಒದಗಿ ಬಂತು.
[ಬದಲಾಯಿಸಿ] ಸಂಗೀತ ನಿರ್ದೇಶಕನಾಗಿ
ಚಲನಚಿತ್ರ ನಿರ್ದೇಶಕ ಎಂ.ಆರ್.ವಿಠಲ್ ನಿರ್ದೇಶನದ ಕನ್ನಡ ಚಿತ್ರ ನಕ್ಕರೆ ಅದೇ ಸ್ವರ್ಗದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಕನ್ನಡದಲ್ಲಿ ಅತೀ ಹೆಚ್ಚು ಸುಶ್ರಾವ್ಯ ಗೀತೆಗಳನ್ನು ಕೊಟ್ಟವರಲ್ಲಿ ರಂಗರಾವ್ ಅತ್ಯಂತ ಪ್ರಮುಖರು. ಅವರ "ಒಲವೇ ಜೀವವ ಸಾಕ್ಷಾತ್ಕಾರ..." "ಬಾಳೊಂದು ಭಾವಗೀತೆ..." "ಬಣ್ಣಾ ಬಣ್ಣಾ.." "ನೂರೊಂದು ನೆನಪು ಎದೆಯಾಳದಿಂದ..." "ಈ ಬಂಧನಾ.." "ನಮ್ಮೀ ಬಾಳೇ..." "ಓ ಪ್ರಿಯತಮಾ.." "ಸದಾ ಕಣ್ಣಲಿ..." "ಕೋಗಿಲೆ ಹಾಡಿದೆ.." "ತೆರೆದಿದೆ ಮನೆ ಓ ಬಾ ಅಥಿತಿ.." "ಬೆಳ್ಳಿ ಮೂಡಿತು..." "ಅರಳಿದೆ..ಅರಳಿದೆ.." ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಲ್ಲದೇ ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.
[ಬದಲಾಯಿಸಿ] ಇವರ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು
- ನಕ್ಕರೆ ಅದೇ ಸ್ವರ್ಗ
- ಮನಸ್ಸಿದ್ದರೆ ಮಾರ್ಗ
- ಹಣ್ಣೆಲೆ ಚಿಗುರಿದಾಗ
- ಕರುಳಿನ ಕರೆ
- ಸಾಕ್ಷಾತ್ಕಾರ
- ಎಡಕಲ್ಲು ಗುಡ್ಡದ ಮೇಲೆ
- ಹುಡುಗಾಟದ ಹುಡುಗಿ
- ಬಹದ್ದೂರ್ ಗಂಡು
- ಬಂಧನ
- ಒಲವಿನ ಉಡುಗೊರೆ
- ಗಾನಯೋಗಿ ರಾಮಣ್ಣ - ಚಿತ್ರ ಬಿಡುಗಡೆಯಾಗಲಿಲ್ಲ.
- ಹೊಸಬೆಳಕು
- ಶ್ರಾವಣ ಬಂತು
- ಕಲ್ಲು ವೀಣೆ ನುಡಿಯಿತು
- ನಾಗ ಕಾಳ ಬೈರವ
- ರಂಗನಾಯಕಿ
- ಹೃದಯ ಪಲ್ಲವಿ
- ಮನೆಯೇ ಮಂತ್ರಾಲಯ
- ಸಮಯದ ಗೊಂಬೆ
- ಕವಿರತ್ನ ಕಾಳಿದಾಸ
- ಮುದುಡಿದ ತಾವರೆ ಅರಳಿತು
- ಶುಭ ಮಿಲನ
- ಇತ್ಯಾದಿ....
[ಬದಲಾಯಿಸಿ] ಭಕ್ತಿಗೀತೆಗಳ ಹರಿಕಾರ
ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ ಭಕ್ತಿಗೀತೆಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ.ಶರಣು ಶರಣಯ್ಯ ಶರಣು ಬೆನಕ,ಉಡುಪಿ ಇದು,ಮಲೆನಾಡಿನ ಈ ಸೊಬಗಿನ,ವಾರ ಬಂತಮ್ಮ...-ಮುಂತಾದ ಗೀತೆಗಳು ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಾಪಿತವಾಗಿವೆ.
[ಬದಲಾಯಿಸಿ] ಪ್ರಶಸ್ತಿ/ಪುರಸ್ಕಾರಗಳು
೧. ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು:
೨.ರಾಷ್ತ್ರ ಪ್ರಶಸ್ತಿ ಪಡೆದ ಚಿತ್ರ:
ರಂಗರಾವ್ ಸುಮಾರು ೧೧೦ ಚಿತ್ರಗಳ ೮೦೦ ಸುಮಧುರ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆ ನೀಡಿದ್ದಾರೆ.ಪಿತ್ತಕೋಶದ ಕ್ಯಾನ್ಸರ್‌ನಿಂದ ೧೯೯೧ರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು.