ಎಂ.ಕೆ.ಇಂದಿರಾ
ಎಂ.ಕೆ.ಇಂದಿರಾ ( ೧೯೧೭,ಜನೆವರಿ ೫-)
ಜನನ ಹಾಗೂ ಬಾಲ್ಯ : [ಬದಲಾಯಿಸಿ]
ತೀರ್ಥಹಳ್ಳಿಯಲ್ಲಿ ಜನಿಸಿದರು. ಇವರ ತಂದೆ 'ತರೀಕೆರೆ ಸೂರ್ಯನಾರಾಯಣರಾವ್'; ತಾಯಿ 'ಬನಶಂಕರಮ್ಮ. ಅನೇಕ ಸುಪ್ರಸಿದ್ಧ ಕನ್ನಡಿಗರು, ಎಂ. ಕೆ. ಇಂದಿರ ರ, ಸಂಬಂಧಿಗಳು. ಸುಪ್ರಸಿದ್ಧ ಶಿಶುಸಾಹಿತಿ, ಹೊಯಿಸಳ, ಇಂದಿರಾರವರ ಸೋದರಮಾವ. ಪ್ರಜಾವಾಣಿಯ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾವ್ (ಟಿಎಸ್ಸಾರ್), ಇವರ ತಮ್ಮ. ಜನಪ್ರಿಯಸಾಹಿತಿ, ಹಾಗೂ ಆಕಾಶವಾಣಿ ನಿರ್ದೇಶಕ, ಡಾ. ಎಚ್.ಕೆ.ರಂಗನಾಥ್, ಇವರ ಚಿಕ್ಕಮ್ಮನ ಮಗ.
ಶಿಕ್ಷಣ, ಮದುವೆ, ಹಾಗೂ ಬರವಣಿಗೆ [ಬದಲಾಯಿಸಿ]
ಕನ್ನಡ ಮಾಧ್ಯಮಿಕ ಶಾಲೆಯ ೨ ನೆಯ ತರಗತಿಯವರೆಗೆ ಮಾತ್ರ ಇವರ ಶಿಕ್ಷಣ. ೧೨ನೆಯ ವರ್ಷಕ್ಕೆ ಇವರ ಮದುವೆಯಾಯಿತು. ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ೧೯೬೩ರಲ್ಲಿ. ತುಂಗಭದ್ರ ಇವರ ಮೊದಲ ಕೃತಿ. ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ ೬೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸದಾನಂದ, ಫಣಿಯಮ್ಮಈ ಕಾದಂಬರಿಗಳಿಗೆ ಹಾಗು ನವರತ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೭೫ರಲ್ಲಿ 'ಶ್ರೇಷ್ಠ ಲೇಖಕಿ' ಹಾಗು 'ಶ್ರೇಷ್ಠ ಚಿತ್ರಕತೆ' ಪ್ರಶಸ್ತಿ ಇವರಿಗೆ ಲಭಿಸಿವೆ. ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು."ನಮನ"