ಎಂ.ಎಲ್.ವಸಂತಕುಮಾರಿ
ವಿಕಿಪೀಡಿಯ ಇಂದ
| ಎಂ.ಎಲ್.ವಸಂತಕುಮಾರಿ | |
|---|---|
| ಚಿತ್ರ:MLV1.jpg |
|
| ಹಿನ್ನೆಲೆ ಮಾಹಿತಿ |
'ಎಂ.ಎಲ್.ವಸಂತಕುಮಾರಿ'(ಜುಲೈ 3, 1928 - ಒಕ್ಟೊಬರ್ 31, 1990) ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಎಂ.ಎಲ್.ವಿ ಎಂದೇ ಪ್ರಸಿದ್ಧರಾದ ಇವರ ಸಂಪೂರ್ಣ ಹೆಸರು ಮದ್ರಾಸ್ ಲಲಿತಾಂಗಿ ವಸಂತಕುಮಾರಿ.ಆ ಕಾಲದಲ್ಲಿ ಕರ್ನಾಟಕ ಸಂಗೀತದ ಮಹಿಳಾ ತ್ರಿವಳಿಗಳೆಂದೇ ಪ್ರಖ್ಯಾತರಾದವರಲ್ಲಿ ಡಿ.ಕೆ.ಪಟ್ಟಮ್ಮಾಳ್ ಹಾಗೂ ಎಂ.ಎಸ್.ಸುಬ್ಬುಲಕ್ಷ್ಮಿಯವರೊಂದಿಗೆ ಇವರೂ ಒಬ್ಬರು.ಪ್ರಸಿದ್ಧ ಸಂಗೀತಜ್ಙ ಜಿ.ಎನ್.ಬಾಲಸುಬ್ರಹ್ಮಣ್ಯಮ್ ರವರ ಶಿಷ್ಯೆಯಾಗಿದ್ದ ಇವರ ಶಿಷ್ಯವೃಂದದಲ್ಲಿ ಸುಧಾ ರಘುನಾಥನ್,ಎ.ಕನ್ಯಾಕುಮಾರಿ,ಚಾರುಮತಿ ರಾಮಚಂದ್ರನ್ ಮುಂತಾದವರು ಪ್ರಸಿದ್ಧರು.ಪುರಂದರದಾಸರ ದೇವರನಾಮಗಳನ್ನು ಕಛೇರಿಗಳಲ್ಲಿ ಹಾಡಿ ಕಛೇರಿಗಳಲ್ಲಿ ಅವುಗಳಿಗೊಂದು ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟವರಲ್ಲಿ ಒಬ್ಬರು.ಇವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅಲ್ಲದೆ ೧೯೭೭ರಲ್ಲಿ ಭಾರತ ಸರಕಾರದಿಂದ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಅತ್ಯಂತ ಚಿಕ್ಕ ಪ್ರಾಯದಲ್ಲಿಯೇ ಕರ್ನಾಟಕ ಸಂಗೀತದ ಅತ್ಯುಚ್ಛ್ಹಪ್ರಶಸ್ಥಿಯಾದ "ಸಂಗೀತ ಕಲಾನಿಧಿ" ಇವರಿಗೆ ಒಲಿದು ಬಂದಿದೆ.