ಊರ್ಮಿಳಾ
ವಿಕಿಪೀಡಿಯ ಇಂದ
ಊರ್ಮಿಳೆ ರಾಮಾಯಣದ ಪ್ರಕಾರ ಮಿಥಿಲೆಯ ರಾಜ ಜನಕನ ಪುತ್ರಿ ಮತ್ತು ಸೀತೆಯ ತಂಗಿ. ತಂದೆಯ ವಚನದಂತೆ ಶ್ರೀರಾಮಚಂದ್ರನು ವನವಾಸಕ್ಕೆಂದು ತನ್ನ ಮಡದಿಯ ಜೊತೆ ಕಾಡಿಗೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯ ಪತಿ ಲಕ್ಷ್ಮಣನು ಸಹಾ ಕಾಡಿಗೆ ಹೋಗಲು ಇಚ್ಛಿಸಿದಾಗ ಶ್ರೀರಾಮಚಂದ್ರನು ತನ್ನ ನಾದಿನಿಯಾದ ಊರ್ಮಿಳೆಯ ಅಂತರಾಳದಲ್ಲಿನ ವ್ಯಾಕುಲತೆಯನ್ನು ಅರಿಯುವಲ್ಲಿ ವಿಫಲನಾಗಿ, ತನ್ನ ಜೊತೆ ಲಕ್ಷ್ಮಣನನ್ನು ಸಹಾ ಕಾಡಿಗೆ ಕರೆದೊಯ್ಯುತ್ತಾನೆ. ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ.
| ವಾಲ್ಮೀಕಿ ವಿರಚಿತ ರಾಮಾಯಣ |
|---|
| ಪಾತ್ರಗಳು |
| ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |
| ಇತರೆ |
| ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |