ಉತ್ತರ ಐರ್ಲೆಂಡ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Northern Ireland
Tuaisceart Éireann
Norlin Airlann
Location of ಉತ್ತರ ಐರ್ಲೆಂಡ್‌‌ (orange) – in the European continent (caramel & white) – in the United Kingdom (caramel)
Location of ಉತ್ತರ ಐರ್ಲೆಂಡ್‌‌ (orange)

– in the European continent (caramel & white)
– in the United Kingdom (caramel)

Capital
and largest city
Belfast
Official languagesEnglish
Irish
Ulster Scots1
Ethnic groups
99.15% White (91.0% Northern Ireland born, 8.15% other white), 0.41% Asian, 0.10% Irish Traveller, 0.34% others.[೧]
GovernmentConstitutional monarchy
Consociationalism
• Monarch
Elizabeth II
David Cameron MP
Peter Robinson MLA
Martin McGuinness MLA MP
Owen Paterson MP
Establishment
3 May 1921
Area
• Total
13,843 km2 (5,345 sq mi)
Population
• 2009 estimate
1,789,000[೨]
• 2001 census
1,685,267
• Density
122/km2 (316.0/sq mi)
GDP (PPP)2002 estimate
• Total
£33.2 billion
• Per capita
£19,603
CurrencyPound sterling (GBP)
Time zoneUTC+0 (GMT)
• Summer (DST)
UTC+1 (BST)
Driving sideleft
Calling code+443
ISO 3166 codeGB-NIR
Internet TLD.uk2
  1. Officially recognised languages: Northern Ireland has no official language. The use of English has been established through precedent. Irish and Ulster Scots are officially recognised minority languages
  2. .ie, in common with the ಐರ್ಲೆಂಡ್‌ ಗಣರಾಜ್ಯ, and also .eu, as part of the European Union. ISO 3166-1 is GB, but .gb is unused
  3. +44 is always followed by 28 when calling landlines. The code is 028 within the UK and 048 from the ಐರ್ಲೆಂಡ್‌ ಗಣರಾಜ್ಯ

ಉತ್ತರ ಐರ್ಲೆಂಡ್ (ಐರಿಷ್:Tuaisceart Éireann, ಅಲ್ಸ್ಟರ್ ಸ್ಕಾಟ್ಸ್: ನಾರ್ಲಿನ್ ಏರ್ಲನ್ನ್ ) ಯುನೈಟೆಡ್ ಕಿಂಗ್ಡಮ್ ನ ನಾಲ್ಕು ರಾಷ್ಟ್ರಗಳಲ್ಲಿ ಒಂದಾಗಿದೆ.[೩][೪] ಐರ್ಲೆಂಡ್‌‌ ನ ದ್ವೀಪದ ಈಶಾನ್ಯ ಭಾಗದಲ್ಲಿ ನೆಲೆಯಾಗಿರುವ ಇದು, ದಕ್ಷಿಣ ಹಾಗು ಪಶ್ಚಿಮಕ್ಕೆ ರಿಪಬ್ಲಿಕ್ ಆಫ್ ಐರ್ಲೆಂಡ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. 2001 UK ಜನಗಣತಿಯ ಸಮಯದಲ್ಲಿ ಇದು 1,685,000ರಷ್ಟು ಜನಸಂಖ್ಯೆ ಹೊಂದಿತ್ತು, ಇದರಲ್ಲಿ ದ್ವೀಪದ ಒಟ್ಟಾರೆ ಜನಸಂಖ್ಯೆಯು ಸುಮಾರು 30% ಹಾಗು ಯುನೈಟೆಡ್ ಕಿಂಗ್ಡಮ್ ಜನಸಂಖ್ಯೆಯಲ್ಲಿ ಸುಮಾರು 3%ನಷ್ಟು ಸೇರಿದೆ. ಅಲ್ಸ್ಟರ್ ನ ಐರಿಶ್ ಪ್ರಾಂತದ ಒಂಬತ್ತು ಕೌಂಟಿಗಳಲ್ಲಿ ಆರನ್ನು ಉತ್ತರ ಐರ್ಲೆಂಡ್‌‌ ಒಳಗೊಂಡಿದೆ. ಯುನೈಟೆಡ್ ಕಿಂಗ್ಡಮ್ ವಿಭಾಗದ ಒಂದು ವಿಶಿಷ್ಟ ಪ್ರದೇಶವಾಗಿ 3 ಮೇ 1921ರಲ್ಲಿ ಗವರ್ನಮೆಂಟ್ ಆಫ್ ಐರ್ಲೆಂಡ್ ಆಕ್ಟ್ 1920 ಇದನ್ನು ಸೃಷ್ಟಿಸಿತು.[೫] ಆದಾಗ್ಯೂ ಇದರ ಸಾಂವಿಧಾನಿಕ ಮೂಲಗಳು ಗ್ರೇಟ್ ಬ್ರಿಟನ್ ಹಾಗು ಐರ್ಲೆಂಡ್‌‌ ನಡುವೆ 1800ರಲ್ಲಿ ನಡೆದ ಆಕ್ಟ್ ಆಫ್ ಯೂನಿಯನ್ ಅನ್ನು ಆಧರಿಸಿವೆ. 50 ವರ್ಷಗಳಿಗೂ ಮಿಗಿಲಾಗಿ ಇದು ತನ್ನದೇ ಆದ ಪರಂಪರಾಗತ ಆಡಳಿತ ವ್ಯವಸ್ಥೆ ಹಾಗು ಸಂಸತ್ತನ್ನು ಹೊಂದಿತ್ತು. ಈ ಪದ್ದತಿಗಳನ್ನು 1972ರಲ್ಲಿ ಅಮಾನತುಗೊಳಿಸುವುದರ ಜೊತೆಗೆ 1973ರಲ್ಲಿ ರದ್ದುಪಡಿಸಲಾಯಿತು. ಸ್ವಯಮಾಡಳಿತವನ್ನು ಮತ್ತೆ ಸ್ಥಾಪಿಸಬೇಕೆಂಬ ಸತತ ಪ್ರಯತ್ನಗಳು ಅಂತಿಮವಾಗಿ ಇಂದಿನ ಉತ್ತರ ಐರ್ಲೆಂಡ್ ಎಕ್ಸಿಕ್ಯುಟಿವ್(ಕಾರ್ಯಾಂಗ) ಹಾಗು ಉತ್ತರ ಐರ್ಲೆಂಡ್ ಅಸೆಂಬ್ಲಿಯ ಸ್ಥಾಪನೆಗೆ ಕಾರಣವಾದವು. ಅಸೆಂಬ್ಲಿಯು, ವಿಭಿನ್ನ ಸಮುದಾಯಗಳ ಬೆಂಬಲ ಅಗತ್ಯವಿರುವ ಸಹಯೋಗ ಪ್ರಜಾಪ್ರಭುತ್ವ ಸೂತ್ರಗಳನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಐರ್ಲೆಂಡ್‌‌, ಹಲವು ವರ್ಷಗಳ ಕಾಲ ಹಿಂಸಾಚಾರ ಹಾಗು ತೀವ್ರವಾದ ಜನಾಂಗೀಯ-ರಾಜಕೀಯ ಘರ್ಷಣೆಗಳ ಸ್ಥಳವೆನಿಸಿತ್ತು - ಬಿಕ್ಕಟ್ಟುಗಳನ್ನು - ರಾಷ್ಟ್ರೀಯತಾವಾದಿ ಪಕ್ಷದಲ್ಲಿ ಪ್ರಬಲವಾಗಿದ್ದ ರೋಮನ್ ಕ್ಯಾಥೊಲಿಕ್ ರು ಹಾಗು ಯೂನಿಯನಿಸ್ಟ್ ಪಕ್ಷದಲ್ಲಿ ಪ್ರಬಲವಾಗಿದ್ದ ಪ್ರಾಟೆಸ್ಟನ್ಟ್ ಗಳು ಸೃಷ್ಟಿಸಿದರು. ಯೂನಿಯನಿಸ್ಟ್ ಗಳು(ಏಕೀಕರಣವಾದಿಗಳು), ಉತ್ತರ ಐರ್ಲೆಂಡ್ ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿಯೇ ಉಳಿಯಬೇಕೆಂದು ವಾದಿಸಿದರೆ,[೬] ರಾಷ್ಟ್ರೀಯತಾವಾದಿಗಳು ಬ್ರಿಟಿಶ್ ಆಡಳಿತದಿಂದ ಮುಕ್ತಗೊಂಡು ಉಳಿದ ಐರ್ಲೆಂಡ್ ನೊಂದಿಗೆ ರಾಜಕೀಯವಾಗಿ ಒಂದುಗೂಡಬೇಕೆಂದು ಬಯಸಿದರು.[೭][೮][೯][೧೦] 1998ರಲ್ಲಿ ಸಹಿ ಹಾಕಲಾದ "ಗುಡ್ ಫ್ರೈಡೆ ಅಗ್ರಿಮೆಂಟ್" ನ ತರುವಾದ, ಬಿಕ್ಕಟ್ಟಿನಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಅರೆಸೈನಿಕ ಗುಂಪುಗಳು ತಮ್ಮ ಸಶಸ್ತ್ರ ಕಾರ್ಯಾಚರಣೆಯನ್ನು ಕೈಬಿಟ್ಟವು. ತನ್ನ ಅಪರೂಪದ ಇತಿಹಾಸದ ಕಾರಣದಿಂದ, ಸಂಕೇತಗಳ ಬಗ್ಗೆ ವಿವಾದಾಂಶ, ಉತ್ತರ ಐರ್ಲೆಂಡ್‌‌ ನ ಹೆಸರು ಹಾಗು ಅದರ ವಿವರಣೆಯು ಸಂಕೀರ್ಣವಾಗಿದೆ, ಹಾಗು ಇದೇ ರೀತಿಯಾಗಿ ಪೌರತ್ವ ಹಾಗು ಸ್ವಸ್ವರೂಪವೂ ಸಹ ಇದಕ್ಕೆ ಹೊರತಾಗಿಲ್ಲ. ಸಾಧಾರಣವಾಗಿ, ಯೂನಿಯನಿಸ್ಟ್ ಗಳು ತಮ್ಮನ್ನು ತಾವು ಬ್ರಿಟಿಶ್ ಎಂದು ಪರಿಗಣಿಸಿದರೆ ರಾಷ್ಟ್ರೀಯತಾವಾದಿಗಳು ತಮ್ಮನ್ನು ತಾವು ಐರಿಶ್ ಎಂದು ಘೋಷಿಸಿಕೊಳ್ಳುತ್ತಾರೆ, ಆದಾಗ್ಯೂ ಈ ಸ್ವಸ್ವರೂಪಗಳು ಅತ್ಯವಶ್ಯವಾಗಿ ಪರಸ್ಪರ ಏಕನಿಷ್ಠವಲ್ಲ.

ಇತಿಹಾಸ[ಬದಲಾಯಿಸಿ]

ಹಿನ್ನೆಲೆ[ಬದಲಾಯಿಸಿ]

ಚಿತ್ರ:Carson signing Solemn League and Covenant.jpg
ಸ್ವಯಮಾಧಿಕಾರಕ್ಕೆ ವಿರುದ್ಧವಾಗಿ 1912ರಲ್ಲಿ ಸಹಿಹಾಕಲಾದ ಅಲ್ಸ್ಟರ್ ಒಪ್ಪಂದ

ಇಂದಿನ ಉತ್ತರ ಐರ್ಲೆಂಡ್ ಪ್ರದೇಶವು 16ನೇ ಶತಮಾನದ ನಂತರದ ಭಾಗದಲ್ಲಿ ಇಂಗ್ಲೀಷರ ವಸಾಹತು ನೀತಿಗಳಿಗೆ ವಿರುದ್ಧವಾಗಿ ನಡೆದ ಐರಿಶ್ ವಾರ್ ಆಫ್ ರೆಸಿಸ್ಟೆನ್ಸ್ ಸಂಭವಿಸಿದ ಮೂಲ ಆಧಾರ ಸ್ಥಳವಾಗಿದೆ. ಇಂಗ್ಲೀಷರ ನಿಯಂತ್ರಣದಲ್ಲಿದ್ದ ಕಿಂಗ್ಡಮ್ ಆಫ್ ಐರ್ಲೆಂಡ್‌‌ ನ್ನು ಇಂಗ್ಲಿಷ್ ರಾಜ, ಹೆನ್ರಿ VII 1542ರಲ್ಲಿ ಘೋಷಿಸುತ್ತಾನೆ. ಆದರೆ ಐರಿಶ್ ಪ್ರತಿರೋಧದಿಂದಾಗಿ ಐರ್ಲೆಂಡ್ ನಲ್ಲಿ ಇಂಗ್ಲೀಷರ ಆಳ್ವಿಕೆಯು ಅಸಾಧ್ಯವೆನಿಸಿತು. ಐರ್ಲೆಂಡ್ ನಲ್ಲಿ ಇಂಗ್ಲಿಷ್ ಆಡಳಿತವನ್ನು ವಿಸ್ತರಿಸುವ ಉದ್ದೇಶದಿಂದ, ವಸಾಹತು ನೀತಿಗಳನ್ನು ರೂಪಿಸಲಾಗಿತ್ತು. ಕಿನ್ಸೇಲ್ ಕದನದಲ್ಲಿ ಐರಿಶ್ ಪರಾಭವ ಅನುಸರಿಸಿ, ಪ್ರದೇಶದ ಗೇಲಿಕ್(ಹಾಗು ರೋಮನ್ ಕ್ಯಾಥೊಲಿಕ್) ಶ್ರೀಮಂತ ಪ್ರಭುತ್ವವು 1607ರಲ್ಲಿ ಯುರೋಪ್ ಭೂಖಂಡಕ್ಕೆ ಪಲಾಯನ ಮಾಡಿತು. ಅಲ್ಲದೇ ಪ್ರಾಟೆಸ್ಟನ್ಟ್ ಇಂಗ್ಲಿಷ್(ಮುಖ್ಯವಾಗಿ ಆಂಗ್ಲಿಕನ್) ಹಾಗು ಸ್ಕಾಟಿಷ್ (ಪ್ರಮುಖವಾಗಿ ಪ್ರೆಸ್ಬಿಟೇರಿಯನ್) ನೆಲೆವಾಸಿಗಳು ರೂಪಿಸಿದ ಪ್ರಮುಖ ವಸಾಹತು ನೀತಿಗಳಿಗೆ ಈ ಪ್ರದೇಶವು ಗುರಿಯಾಯಿತು. 1610 ಹಾಗು 1717ರ ನಡುವೆ ಬಹುಶಃ 100,000ರಷ್ಟು ಲೋಲೆಂಡ್ (ಕೆಳಭಾಗದ)ಪ್ರದೇಶದವರು ಸ್ಕಾಟ್ಲೆಂಡ್ ನಿಂದ ಇಲ್ಲಿಗೆ ಬಂದರು. ನಂತರದ ದಿನಗಳಲ್ಲಿ ಮೂರು ಐರಿಶ್ ಜನರಿಗೆ ಐದರಂತೆ ಸ್ಕಾಟ್ ಗಳು ಹಾಗು ಒಬ್ಬ ಇಂಗ್ಲಿಷ್ಮನ್ ಅಲ್ಸ್ಟರ್ ಗೆ ಕಾಲಿರಿಸಿದರು.[೧೧] ಇಂಗ್ಲಿಷ್ ಆಡಳಿತವನ್ನು ವಿರೋಧಿಸಿ ಐರಿಶ್ ಶ್ರೀಮಂತ ಪ್ರಭುತ್ವದವರು ನಡೆಸಿದ 1641ರ ದಂಗೆಯು, ಅಲ್ಸ್ಟರ್ ನಲ್ಲಿ ವಲಸಿಗರ ಹತ್ಯೆಯೊಂದಿಗೆ ಕೊನೆಗೊಂಡಿತು. ಇದು ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗು ಐರ್ಲೆಂಡ್‌‌ ನಡುವಿನ ಯುದ್ಧಕ್ಕೆ ನಾಂದಿ ಹಾಡುವುದರ ಜೊತೆಗೆ ಸರ್ಕಾರದಲ್ಲಿ ಧಾರ್ಮಿಕ ಅಸಹನೆಯ ಕಿಡಿ ಹೊತ್ತಿಸಿತು. ಈ ಯುದ್ಧದಲ್ಲಿ ಇಂಗ್ಲಿಷ್ ಸೇನಾಬಲದ ವಿಜಯ ಹಾಗು 16ನೇ ಶತಮಾನದ ಕೊನೆಯ ಭಾಗದಲ್ಲಿ ನಡೆದ ಮತ್ತೊಂದು ಯುದ್ಧದಲ್ಲಿ ಇದೇ ರೀತಿಯಾದ ಯಶಸ್ಸು, ಐರ್ಲೆಂಡ್‌‌ ನಲ್ಲಿ ಆಂಗ್ಲಿಕನ್ ಆಡಳಿತವನ್ನು ದೃಢಪಡಿಸಿತು. ಉತ್ತರ ಐರ್ಲೆಂಡ್‌‌ ನಲ್ಲಿ, ಡೆರ್ರಿಯ ಮುತ್ತಿಗೆ (1698) ಹಾಗು ನಂತರದ ಬೋಯ್ನೆ ಕದನದಲ್ಲಿ (1690) ಗಳಿಸಿದ ಯಶಸ್ಸುಗಳನ್ನು ಇಂದಿಗೂ ಯೂನಿಯನಿಸ್ಟ್ ಸಮುದಾಯವು ಆಚರಿಸುತ್ತದೆ.(ಆಂಗ್ಲಿಕನ್ ಹಾಗು ಪ್ರೆಸ್ಬಿಟೇರಿಯನ್ ಎರಡೂ) 1691ರ ಯಶಸ್ಸಿನ ಹಿನ್ನೆಲೆಯಲ್ಲಿ, ಕಾನೂನುಗಳ ಒಂದು ಸರಣಿಯು ರಾಜಕೀಯವಾಗಿ ಹಾಗು ವಸ್ತುತಃ ಕ್ಯಾಥೊಲಿಕ್ ಸಮುದಾಯವನ್ನು ಪ್ರಮುಖವಾಗಿ ಪದಚ್ಯುತಗೊಳಿಸುವ ಉದ್ದೇಶದಿಂದ ರೂಪಿಸಲಾಗಿತ್ತು, ಆದರೆ ಆಡಳಿತದಲ್ಲಿದ್ದ ಪ್ರೆಸ್ಬಿಟೇರಿಯನ್ ಸಮುದಾಯಕ್ಕೂ ಸಹ ಐರ್ಲೆಂಡ್ ನಲ್ಲಿದ್ದ ಆಂಗ್ಲಿಕನ್ ಆಡಳಿತಾತ್ಮಕ ವರ್ಗ ಈ ಕಾನೂನುಗಳನ್ನು ವಿಧಿಸಿತು. ಮುಕ್ತ ಸಾಂಸ್ಥಿಕಗಳ ಬಹಿರಂಗ ತಾರತಮ್ಯದ ಹಿನ್ನೆಲೆಯಲ್ಲಿ, 18ನೇ ಶತಮಾನವು ಈ ಪ್ರದೇಶದಲ್ಲಿ ಸಮುದಾಯಗಳಲ್ಲಿ ರಹಸ್ಯ, ತೀವ್ರವಾದಿ ಸಂಘಗಳ ಬೆಳವಣಿಗೆ ಕಂಡಿತು. ಜೊತೆಗೆ ಪಂಥೀಯ ಬಿಕ್ಕಟ್ಟುಗಳು ಹಿಂಸಾಚಾರದ ರೂಪ ಪಡೆದವು. ಬ್ಯಾಟಲ್ ಆಫ್ ಡೈಮಂಡ್ ನಂತಹ ಘಟನೆಗಳನ್ನು ಅನುಸರಿಸಿ ಈ ಶತಮಾನದ ಕೊನೆಯ ಭಾಗದಲ್ಲಿ ಇದು ಹಂತ ಹಂತವಾಗಿ ಬೆಳೆಯಿತು, ಇದು ಕ್ಯಾಥೊಲಿಕ್ ಸಮುದಾಯದ ರಕ್ಷಕರ ಮೇಲೆ ಆಂಗ್ಲಿಕನ್ ಹಾಗು ಪ್ರೆಸ್ಬಿಟೇರಿಯನ್ ಪೀಪ್ ಓ'ಡೇ ಬಾಯ್ಸ್ ರ ಪಾರಮ್ಯವನ್ನು ತೋರುವುದರ ಜೊತೆಗೆ ಇದು (ಆಂಗ್ಲಿಕನ್) ಆರೆಂಜ್ ಆರ್ಡರ್ ನ ರಚನೆಗೆ ದಾರಿಯಾಯಿತು. ಬೆಲ್‌ಫಾಸ್ಟ್ ಮೂಲದ ಸೊಸೈಟಿ ಆಫ್ ದಿ ಯುನೈಟೆಡ್ ಐರಿಷ್ಮೆನ್ ವಿಭಿನ್ನ ಸಮುದಾಯ ಹಾಗು ಫ್ರೆಂಚ್ ಕ್ರಾಂತಿಯಿಂದ ಉತ್ತೇಜನಗೊಂಡು ಆರಂಭಿಸಿದ 1798ರ ದಂಗೆಯು ಬ್ರಿಟನ್ ನೊಂದಿಗೆ ಐರ್ಲೆಂಡ್‌‌ ಹೊಂದಿರುವ ಸಾಂವಿಧಾನಿಕ ಸಂಬಂಧವನ್ನು ಮುರಿಯಲು ಪ್ರಯತ್ನಿಸುವುದರ ಜೊತೆಗೆ ಐರಿಷ್ಮೆನ್ ಹಾಗು ಎಲ್ಲ ಸಮುದಾಯಗಳ ಸ್ತ್ರೀಯರನ್ನು ಒಟ್ಟುಗೂಡಿಸಲು ಯತ್ನಿಸಿತು. ಇದನ್ನು ಅನುಸರಿಸಿ, ಪಂಥೀಯತೆಯನ್ನು ನಿಗ್ರಹಿಸುವುದು ಹಾಗು ಪಕ್ಷಪಾತಿ ಕಾನೂನನ್ನು ರದ್ದುಪಡಿಸಲು ಒತ್ತಡ ಹೇರುವ ಪ್ರಯತ್ನ(ಹಾಗು ಐರ್ಲೆಂಡ್‌‌ ನಲ್ಲಿ ಫ್ರೆಂಚ್ ಮಾದರಿಯ ಗಣತಂತ್ರವಾದವು ವ್ಯಾಪಿಸುವುದನ್ನು ತಡೆಗಟ್ಟುವುದು), ಬ್ರಿಟನ್ ಸಾಮ್ರಾಜ್ಯದ ಸರ್ಕಾರವು ಎರಡು ಸಾಮ್ರಾಜ್ಯಗಳು ವಿಲೀನಗೊಳ್ಳಬೇಕೆಂದು ಒತ್ತಡ ಹೇರಿತು. 1801ರಲ್ಲಿ ರೂಪುಗೊಂಡ ಹೊಸ ರಾಜ್ಯ, ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡ್‌‌ನ್ನು, ಲಂಡನ್ ನಲ್ಲಿದ್ದ ಸಂಸತ್ತು ಹಾಗು ಒಂದೇ ಸರ್ಕಾರದ ಆಡಳಿತದಲ್ಲಿತ್ತು. 1717 ಹಾಗು 1775ರ ನಡುವೆ ಅಲ್ಸ್ಟರ್ ನ ಸುಮಾರು 250,೦೦೦ ಜನರು ಅಮೆರಿಕನ್ ವಸಾಹತು ನೆಲೆಗಳಿಗೆ ವಲಸೆ ಹೋದರು.[೧೨] U.S.ನಲ್ಲಿ ವಲಸೆ ಬಂದ 27 ದಶಲಕ್ಷಕ್ಕೂ ಅಧಿಕ ಸ್ಕಾಟ್ಸ್-ಐರಿಶ್ ಮೂಲದ ಜನರು ನೆಲೆಸಿದ್ದಾರೆಂದು ಅಂದಾಜಿಸಲಾಗಿದೆ[೧೩]

ಐರ್ಲೆಂಡ್‌ ನ ವಿಭಜನೆ[ಬದಲಾಯಿಸಿ]

ಇದರ ಪ್ರಕಾರವಾಗಿ, ಐರ್ಲೆಂಡ್‌‌ ಹಾಗು ಗ್ರೇಟ್ ಬ್ರಿಟನ್ ನಡುವಿನ ಮುಂದುವರಿದ ಸಂಬಂಧಕ್ಕೆ ಬೆಂಬಲ ನೀಡಿದವರನ್ನು ಯೂನಿಯನಿಸ್ಟ್ (ಏಕೀಕರಣವಾದಿಗಳು) ಎಂದು ಕರೆಯಲಾಗುತ್ತದೆ. ಈಗ ಉತ್ತರ ಐರ್ಲೆಂಡ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ, ಹೆಚ್ಚಿನವರು ಪ್ರಾಟೆಸ್ಟನ್ಟ್ ಗಳಾಗಿದ್ದರು.(ಆಂಗ್ಲಿಕನ್ ಹಾಗು ಪ್ರೆಸ್ಬಿಟೇರಿಯನ್). 19ನೇ ಶತಮಾನದಲ್ಲಿ, ಅಂದರೆ 18ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡ ಕಾನೂನು ಸುಧಾರಣೆ ಗಳು ಕ್ಯಾಥೊಲಿಕ್ಸ್ ಗಳ ವಿರುದ್ಧವಾಗಿದ್ದ ಕಾನೂನು ತಾರತಮ್ಯವನ್ನು ತೆಗೆದು ಹಾಕಿದವು. ಜೊತೆಗೆ ಪ್ರಗತಿಪರ ಕಾರ್ಯಕ್ರಮಗಳು ರೈತರಿಗೆ ತಮ್ಮ ಒಡೆಯರಿಂದ ಭೂಮಿಯನ್ನು ಹಿಂದಕ್ಕೆ ಪಡೆಯಲು ನೆರವಾದವು. ಶತಮಾನದ ಕೊನೆಯಲ್ಲಿ, ಯುನೈಟೆಡ್ ಕಿಂಗ್ಡಮ್ ನೊಳಗೆ ಐರ್ಲೆಂಡ್ ಗೆ ಸ್ವಯಮಾಧಿಪತ್ಯವು ಸಾಧ್ಯವಾಯಿತು; ಆಗ ಸ್ವಯಂಪ್ರಭುತ್ವ ವೆಂದು ಕರೆಯಲ್ಪಡುವ ಈ ಕಾಲ ಸನ್ನಿಹಿತವಾಗಿತ್ತು. 1912ರಲ್ಲಿ, ಇದು ಖಾತ್ರಿಯಾಯಿತು. ಪಾರ್ಲಿಮೆಂಟ್ ಆಕ್ಟ್ 1911 ಮಂಡಿಸಿದ ವಿವಾದಾತ್ಮಕ ಆಯವ್ಯಯವನ್ನು ಆಧರಿಸಿ, ಹೌಸ್ ಆಫ್ ಕಾಮನ್ಸ್ ಹಾಗು ಹೌಸ್ ಆಫ್ ಲಾರ್ಡ್ಸ್ ನಡುವೆ ಉಂಟಾದ ಭಿನ್ನಾಭಿಪ್ರಾಯವು, ಲಾರ್ಡ್ಸ್ ಗಳ ವಿಟೋ ಅಧಿಕಾರವನ್ನು ರದ್ದುಗೊಳಿಸಿತು. ಹೌಸ್ ಆಫ್ ಲಾರ್ಡ್ಸ್ ಗಳ ವಿಟೋ, ಸ್ವಯಮಾಧಿಕಾರವನ್ನು ಕಾನೂನುಬದ್ಧಗೊಳಿಸದಿರಲು ಯೂನಿಯನಿಸ್ಟ್ ಗಳ ಮುಖ್ಯ ಆಧಾರವಾಗಿತ್ತು ಏಕೆಂದರೆ ಹೌಸ್ ಆಫ್ ಲಾರ್ಡ್ಸ್ ಗಳಲ್ಲಿ ಬಹುತೇಕ ಸದಸ್ಯರು ಯೂನಿಯನಿಸ್ಟ್ ಪಕ್ಷದವರಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಸ್ವಯಮಾಧಿಕಾರವನ್ನು ವಿರೋಧಿಸುತ್ತಿದ್ದ ಕನ್ಸರ್ವೇಟಿವ್ ಪಕ್ಷದ ನಾಯಕರುಗಳಾದ ಆಂಡ್ರ್ಯೂ ಬೋನರ್ ಲಾ ಹಾಗು ಡಬ್ಲಿನ್ ಮೂಲದ ವಕೀಲ ಸರ್ ಎಡ್ವರ್ಡ್ ಕಾರ್ಸನ್ ಐರ್ಲೆಂಡ್ ನ ತೀವ್ರವಾದಿ ಯೂನಿಯನಿಸ್ಟ್ ಗಳಿಗೆ, ಹಿಂಸಾಚಾರ ನಡೆಸುವುದಾಗಿ ಬೆದರಿಕೆ ಹಾಕಿದರು. 1914ರಲ್ಲಿ, ಅಲ್ಸ್ಟರ್ ಸ್ವಯಂಸೇವಕರ ಬಳಕೆಗಾಗಿ ಸಾಮ್ರಾಜ್ಯಶಾಹಿ ಜರ್ಮನಿಯಿಂದ ಸಾವಿರಾರು ಬಂದೂಕುಗಳು ಹಾಗು ಸ್ಫೋಟಕ ಸಾಮಗ್ರಿಗಳನ್ನು ಕಳ್ಳಸಾಗಣೆ ಮಾಡಿದರು, ಅಲ್ಸ್ಟರ್ ಸ್ವಯಂಸೇವಕರು ಸ್ವಯಮಾಧಿಕಾರವನ್ನು ವಿರೋಧಿಸಿದ ಒಂದು ಅರೆಸೈನಿಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಯೂನಿಯನಿಸ್ಟ್ ಗಳು ಐರ್ಲೆಂಡ್‌‌ ದ್ವೀಪದಲ್ಲಿ ಒಟ್ಟಾರೆಯಾಗಿ ಅಲ್ಪ ಸಂಖ್ಯೆಯಲ್ಲಿದ್ದರು, ಆದರೆ ಅಲ್ಸ್ಟರ್ ನ ಉತ್ತರ ಪ್ರಾಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗು ಅಂಟ್ರಿಂ ಕೌಂಟಿ ಹಾಗು ಡೌನ್ ಕೌಂಟಿಯಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜೊತೆಗೆ ಅರ್ಮಗ್ಹ್ ಕೌಂಟಿ ಹಾಗು ಲಂಡನ್ ಡೆರ್ರಿ ಕೌಂಟಿ ಯಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಫೆರ್ಮನಗ್ಹ್ ಕೌಂಟಿ ಹಾಗು ಟೈರಾನ್ ಕೌಂಟಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಕೇಂದ್ರಿಕೃತರಾಗಿದ್ದರು.[೧೪] ಈ ಆರು ಕೌಂಟಿಗಳು ನಂತರದಲ್ಲಿ ಉತ್ತರ ಐರ್ಲೆಂಡ್ ನ ಭಾಗವಾದವು.

Prime Ministers
of Northern Ireland
Lord Craigavon (1922–1940)
John Miller Andrews (1940–1943)
Lord Brookeborough (1943–1963)
Captain Terence O'Neill (1963–1969)
James Chichester-Clark (1969–1971)
Brian Faulkner (1971–1972)
ಸೊಮ್ಮೆ ಯುದ್ಧದ ಸಮಯದಲ್ಲಿ ರಾಯಲ್‌ ಐರಿಷ್‌ ರೈಫಲ್ಸ್‌ ಇನ್‌ಫ್ಯಂಟ್ರಿ

1914ರಲ್ಲಿ, ಥರ್ಡ್ ಹೋಂ ರೂಲ್ ಆಕ್ಟ್, ಈ ಆರು ಕೌಂಟಿಗಳು ಐರ್ಲೆಂಡ್‌‌ ನ ಉಳಿದ ಕೌಂಟಿಗಳಿಂದ "ತಾತ್ಕಾಲಿಕ"ವಾಗಿ ವಿಭಜಿಸುವ ನಿಬಂಧನೆಯನ್ನು ಒಳಗೊಂಡಿದ್ದವು. ಇದಕ್ಕೆ ರಾಜವಂಶದಿಂದ ಸಮ್ಮತಿಯೂ ದೊರಕಿತು. ಆದಾಗ್ಯೂ, ಮೊದಲ ವಿಶ್ವಯುದ್ಧದ ಹಿನ್ನೆಲೆಯಲ್ಲಿ ಇದನ್ನು ಜಾರಿಗೆ ತರುವ ಮೊದಲೇ ರದ್ದುಗೊಳಿಸಲಾಯಿತು. ಯುದ್ಧವು ಕೆಲವು ವಾರಗಳಲ್ಲಿ ಅಂತ್ಯಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವವಾಗಿ ಇದು ನಾಲ್ಕು ವರ್ಷಗಳ ಕಾಲ ನಡೆಯಿತು. ಯುದ್ಧದ ಅಂತ್ಯದಲ್ಲಿ, ನಿಬಂಧನೆಯು ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಬಹುತೇಕ "ರಾಷ್ಟ್ರೀಯತಾವಾದಿ" ಬಹುಮತದ ಸಾರ್ವಜನಿಕ ಅಭಿಪ್ರಾಯವು (ಇವರು ಬ್ರಿಟನ್ ನಿಂದ ಸಂಪೂರ್ಣ ಸ್ವಾತಂತ್ರ ಬಯಸಿದರು.) ಯುದ್ಧ ಸಮಯದಲ್ಲಿ ಸ್ವಯಮಾಧಿಕಾರದ ಕೋರಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯದ ಕೋರಿಕೆಗೆ ಬದಲಾಯಿತು. 1919ರಲ್ಲಿ, ಡೇವಿಡ್ ಲಾಯ್ಡ್ ಜಾರ್ಜ್ ಒಂದು ಹೊಸ ಮಸೂದೆ ಪ್ರಸ್ತಾಪಿಸಿದರು, ಇದರಂತೆ ಐರ್ಲೆಂಡ್‌‌ ಸ್ವಯಮಾಧಿಕಾರದ ಎರಡು ಪ್ರದೇಶಗಳಾಗಿ ವಿಭಜನೆಯಾಯಿತು: ಇಪ್ಪತ್ತಾರು ಕೌಂಟಿಗಳು ಡಬ್ಲಿನ್ ನ ಆಡಳಿತದಲ್ಲಿದ್ದರೆ, ಆರು ಕೌಂಟಿಗಳು ಬೆಲ್‌ಫಾಸ್ಟ್ ನ ಆಡಳಿತದಲ್ಲಿದ್ದವು. ಈ ಎರಡೂ ಪ್ರದೇಶಗಳ ನಡುವಿನ ಆಡಳಿತ ಯೋಜನೆಗಳನ್ನು ಲಾರ್ಡ್ ಲೆಫ್ಟಿನೆಂಟ್ ಆಫ್ ಐರ್ಲೆಂಡ್ ಗೆ ಹಂಚಿಕೆ ಮಾಡಲಾಗಿತ್ತು. ಇವರು ಎರಡೂ ವಿಭಾಗಗಳಿಗೆ ಸರ್ಕಾರಗಳನ್ನು ಹಾಗು ಕೌನ್ಸಿಲ್ ಆಫ್ ಐರ್ಲೆಂಡ್ ನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಹೊಂದಿದ್ದರು, ಇದರಿಂದಾಗಿ ಒಂದು ಏಕ-ಐರ್ಲೆಂಡ್ ಸಂಸತ್ತು ಹುಟ್ಟಿಕೊಳ್ಳಬಹುದೆಂದು ಲಾಯ್ಡ್ ಜಾರ್ಜ್ ನಂಬಿದ್ದರು.[೧೫] ಆದಾಗ್ಯೂ ಘಟನೆಗಳು ಸರ್ಕಾರದ ಯೋಜನೆಗಳನ್ನು ಹಿಂದಿಕ್ಕಿದವು. 1918ರ ಸಾರ್ವತ್ರಿಕ ಚುನಾವಣೆಯಲ್ಲಿ, ಸ್ವಾತಂತ್ರ್ಯ ಪರವಾದ ಸಿನ್ನ್ ಫೆಯಿನ್, ನೂರೈದು ಪಾರ್ಲಿಮೆಂಟರಿ ಸೀಟುಗಳಲ್ಲಿ ಎಪ್ಪತ್ತ ಮೂರು ಸೀಟುಗಳನ್ನು ಐರ್ಲೆಂಡ್ ನಲ್ಲಿ ಗೆಲ್ಲುವುದರ ಜೊತೆಗೆ ಐರ್ಲೆಂಡ್ ನಲ್ಲಿ ನ್ಯಾಯಾಲಯಾತಿರಿಕ್ತ ಸಂಸತ್ತನ್ನು ಸ್ಥಾಪಿಸಿದರು. 1921ರಲ್ಲಿ, ಲಾಯ್ಡ್ ಜಾರ್ಜ್ ರ ಗವರ್ನಮೆಂಟ್ ಆಫ್ ಐರ್ಲೆಂಡ್‌‌ ಆಕ್ಟ್ 1920ಯನ್ನು ಆಧರಿಸಿ[೧೬], ಐರ್ಲೆಂಡ್‌‌ ಹಾಗು ಬ್ರಿಟನ್ ನಡುವಿನ ಸ್ವಾತಂತ್ರ ಹೋರಾಟದ ಸಮಯದಲ್ಲಿ ಉತ್ತರ ಐರ್ಲೆಂಡ್ ಹಾಗು ದಕ್ಷಿಣ ಐರ್ಲೆಂಡ್‌‌ ಎಂದು ಐರ್ಲೆಂಡ್‌‌ ಇಬ್ಭಾಗವಾಯಿತು. 6 ಡಿಸೆಂಬರ್ 1922ರಲ್ಲಿ ಕೊನೆಗೊಂಡ ಯುದ್ಧಾನಂತರದಲ್ಲಿ ಪರಿಣಮಿಸಿದ ಒಪ್ಪಂದದ ಪ್ರಕಾರ, ಉತ್ತರ ಐರ್ಲೆಂಡ್, ಹೊಸದಾಗಿ ಸ್ವಾತಂತ್ರ್ಯ ಪಡೆದ ಐರಿಶ್ ಫ್ರೀ ಸ್ಟೇಟ್ ನ ಸ್ವಯಮಾಧಿಕಾರದ ಭಾಗವಾಯಿತು.

ಉತ್ತರ ಐರ್ಲೆಂಡ್‌‌[ಬದಲಾಯಿಸಿ]

ಆದಾಗ್ಯೂ, ನಿರೀಕ್ಷೆಯಂತೆ, ಸಂಭಾವ್ಯ ಅವಕಾಶದಲ್ಲಿ ಭಾಗವಹಿಸದಿರಲು ಉತ್ತರ ಐರ್ಲೆಂಡ್‌‌ ನ ಸಂಸತ್ತು ಮರುದಿನವೇ ವಿಘಟನೆಯಾಯಿತು.[೧೭] (ಒಂದು ತಿಂಗಳ ನಂತರ). ಸ್ವಲ್ಪ ಕಾಲಾನಂತರ, ಐರಿಶ್ ಫ್ರೀ ಸ್ಟೇಟ್ ಹಾಗು ಉತ್ತರ ಐರ್ಲೆಂಡ್‌‌ ನಡುವಿನ ಗಡಿಗಳನ್ನು ನಿರ್ಧರಿಸಲು ಒಂದು ಆಯೋಗವನ್ನು ಸ್ಥಾಪಿಸಲಾಯಿತು. ಫ್ರೀ ಸ್ಟೇಟ್ ನಲ್ಲಿ ಆರಂಭಗೊಂಡ ಅಂತರ್ಯುದ್ಧದ ಕಾರಣದಿಂದಾಗಿ, ಆಯೋಗದ ಕಾರ್ಯವು 1925ರ ತನಕ ವಿಳಂಬಗೊಂಡಿತು. ಡಬ್ಲಿನ್ ನಲ್ಲಿದ್ದ ನಾಯಕರುಗಳು, ಫ್ರೀ ಸ್ಟೇಟ್ ಗೆ ಬದಲಾವಣೆಯಾಗುವುದರೊಂದಿಗೆ ದೇಶೀಯ ಪ್ರದೇಶಗಳೊಂದಿಗೆ ಉತ್ತರ ಐರ್ಲೆಂಡ್‌‌ ನ ಭೂಪ್ರದೇಶವು ಗಣನೀಯವಾಗಿ ಕಡಿಮೆಯಾಗಬಹುದೆಂದು ನಿರೀಕ್ಷಿಸಿದರು. ಆದಾಗ್ಯೂ, ಆಯೋಗವು ಇದಕ್ಕೆ ವಿರುದ್ಧ ನಿರ್ಣಯ ಕೈಗೊಂಡಿತು. ಜೊತೆಗೆ ವರದಿಯು, ಸಣ್ಣ ಭಾಗಗಳನ್ನು ಫ್ರೀ ಸ್ಟೇಟ್ ನಿಂದ ಉತ್ತರ ಐರ್ಲೆಂಡ್‌‌ ಗೆ ವಹಿಸಿಕೊಡಬೇಕೆಂದು ಶಿಫಾರಸು ಮಾಡಿತು. ವಾದವಿವಾದಗಳನ್ನು ತಡೆಗಟ್ಟಲು, ವರದಿಯನ್ನು ನಿರೋಧಿಸಲಾಯಿತು. ಅಲ್ಲದೇ, UKಯ ಸಾರ್ವಜನಿಕ ಸಾಲದ ನಿರ್ಬಂಧ ಹೊತ್ತ ಫ್ರೀ ಸ್ಟೇಟ್ ನ ವರ್ಜನಕ್ಕೆ ಬದಲಿಯಾಯಿತು. ಇದು ಕೌನ್ಸಿಲ್ ಆಫ್ ಐರ್ಲೆಂಡ್‌‌ ನ ವಿಲೀನದೊಂದಿಗೆ(ಉತ್ತರ ಐರ್ಲೆಂಡ್‌‌ ನ ಸರ್ಕಾರದ ಪ್ರಯತ್ನದಿಂದ), ಹಾಗು ಆರಂಭದಲ್ಲಿ ಆರು ಕೌಂಟಿಗಳ ಗಡಿಯನ್ನು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ನಿರ್ವಹಿಸಲಾಯಿತು.

ಆಂಗ್ಲೋ-ಐರಿಷ್ ಒಪ್ಪಂದಕ್ಕೆ ಸಹಿಹಾಕಲಾದ ಪುಟ .

ಜೂನ್ 1940ರಲ್ಲಿ, ಐರಿಶ್ ರಾಜ್ಯವು ಮಿತ್ರರಾಷ್ಟ್ರದೊಂದಿಗೆ ಜೊತೆಗೂಡುವುದನ್ನು ಉತ್ತೇಜಿಸಲು, ಬ್ರಿಟಿಶ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್, ಟಾವೋಯಿಸೀಚ್ ಎಮೊನ್ ಡೆ ವಲೇರಗೆ ಯುನೈಟೆಡ್ ಕಿಂಗ್ಡಮ್ ಐರಿಶ್ ಒಗ್ಗಟ್ಟನ್ನು ಸಾಧಿಸುವುದಾಗಿ ಸೂಚಿಸುತ್ತಾರೆ, ಆದರೆ ಚರ್ಚಿಲ್ ಈ ರೀತಿ ಮಾಡುವುದಿಲ್ಲವೆಂದು ನಂಬಿದ, ಡೆ ವಲೇರ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.[೧೮] (ಡಬ್ಲಿನ್ ಸರ್ಕಾರಕ್ಕೆ ಈ ರೀತಿಯಾದ ಪ್ರಸ್ತಾಪವನ್ನು ಇರಿಸಿದ್ದರ ಬಗ್ಗೆ ಬ್ರಿಟಿಶ್ ಉತ್ತರ ಐರ್ಲೆಂಡ್‌‌ ಸರ್ಕಾರಕ್ಕೆ ಮಾಹಿತಿಯನ್ನು ನೀಡಿರಲಿಲ್ಲ, ಜೊತೆಗೆ ಡಿ ವಲೇರರ ನಿರಾಕರಣೆಯನ್ನು 1970ರವರೆಗೂ ಪ್ರಕಟಿಸಿರಲಿಲ್ಲ). ಐರ್ಲೆಂಡ್ ಆಕ್ಟ್ 1949 ಸಂಸತ್ತು ಹಾಗು ಸರ್ಕಾರಕ್ಕೆ ಮೊದಲ ಕಾನೂನುಬದ್ಧ ಖಾತರಿಯನ್ನು ನೀಡಿತು, ಇದರಂತೆ ತನ್ನ ಬಹುತೇಕ ನಾಗರೀಕರ ಒಪ್ಪಿಗೆಯಿಲ್ಲದ ಯುನೈಟೆಡ್ ಕಿಂಗ್ಡಮ್ ಉತ್ತರ ಐರ್ಲೆಂಡ್ ನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತಿರಲಿಲ್ಲ. 1960ರಲ್ಲಿ ಆರಂಭಗೊಂಡ ಬಿಕ್ಕಟ್ಟುಗಳು, ಸುಮಾರು ಮೂವತ್ತು ವರ್ಷಗಳ ತೀವ್ರತರ ಹಿಂಸಾಚಾರ ಮರುಕಳಿಸಿದ ಘಟನೆಗಳು ಉತ್ತರ ಐರ್ಲೆಂಡ್‌‌ ನ ರಾಷ್ಟ್ರೀಯತಾವಾದ ಸಮುದಾಯ(ಪ್ರಮುಖವಾಗಿ ರೋಮನ್ ಕ್ಯಾಥೋಲಿಕರು) ಹಾಗು ಯೂನಿಯನಿಸ್ಟ್ ಸಮುದಾಯ(ಪ್ರಮುಖವಾಗಿ ಪ್ರಾಟೆಸ್ಟೆಂಟ್) ಗಳ ನಡುವೆ ನಡೆಯಿತು, ಪರಿಣಾಮವಾಗಿ ಇದರಲ್ಲಿ 3,254 ಜನರ ಹತ್ಯೆಯಾಯಿತು.[೧೯] ಯುನೈಟೆಡ್ ಕಿಂಗ್ಡಮ್ ನೊಳಗೆ ಉತ್ತರ ಐರ್ಲೆಂಡ್ ನ ವಿವಾದಿತ ಸ್ಥಾನಮಾನವು ಘರ್ಷಣೆಗೆ ಹಾಗು ಪ್ರಬಲರಾಗಿದ್ದ ಯೂನಿಯನಿಸ್ಟ್ ಗಳು ಅಲ್ಪಸಂಖ್ಯೆಯಲ್ಲಿದ್ದ ರಾಷ್ಟ್ರೀಯತಾವಾದಿಗಳ ವಿರುದ್ಧ ನಡೆಸುತ್ತಿದ್ದ ತಾರತಮ್ಯವೂ ಸಹ ಕಾರಣವಾಯಿತು.[೨೦] ಹಿಂಸಾಚಾರವು, ಅರೆಸೈನಿಕ ಗುಂಪುಗಳ ಸಶಸ್ತ್ರ ಕಾರ್ಯಾಚರಣೆಯಿಂದ ವಿಶಿಷ್ಟವಾಗಿತ್ತು, ಇದರಲ್ಲಿ ಪ್ರಾವಿಷನಲ್ IRA ಕ್ಯಾಂಪೈನ್ ಆಫ್ 1969-1997 ಸಹ ಒಳಗೊಂಡಿತ್ತು, ಇದು ಉತ್ತರ ಐರ್ಲೆಂಡ್‌‌ ನಲ್ಲಿ ಬ್ರಿಟಿಶ್ ಆಡಳಿತವನ್ನು ಕೊನೆಗಾಣಿಸುವುದು ಹಾಗು ಒಂದು ಹೊಸ "ಸಂಪೂರ್ಣ-ಐರ್ಲೆಂಡ್‌‌", "ಮೂವತ್ತೆರಡು ಕೌಂಟಿ" ಐರಿಶ್ ಗಣರಾಜ್ಯದ ರಚನೆ ಮಾಡುವ ಉದ್ದೇಶ ಹೊಂದಿತ್ತು, ಹಾಗು ಬ್ರಿಟಿಶ್ ಸ್ವರೂಪ ಹಾಗು ಉತ್ತರ ಐರ್ಲೆಂಡ್‌‌ ನಲ್ಲಿ ಯೂನಿಯನಿಸ್ಟ್ ರ ಪ್ರಾಬಲ್ಯ ಎರಡರಿಂದಲೂ ಪ್ರತಿಕ್ರಿಯೆಯಾಗಿ 1966ರಲ್ಲಿ ಅಲ್ಸ್ಟರ್ ವಾಲೆನ್ಟೀರ್ ಫೋರ್ಸ್ ರಚನೆಯಾಯಿತು. ರಾಜ್ಯದ ಭದ್ರತಾ ಸೇನೆಗಳು - ಬ್ರಿಟಿಶ್ ಸೇನೆ ಹಾಗು ಆರಕ್ಷಕ ದಳ (ರಾಯಲ್ ಅಲ್ಸ್ಟರ್ ಕಾನ್ಸ್ಟ್ಯಾಬ್ಯುಲರಿಗಳೂ) ಸಹ ಹಿಂಸಾಚಾರದಲ್ಲಿ ಭಾಗಿಯಾಗಿದ್ದವು. ಘರ್ಷಣೆಯಲ್ಲಿ ಅದರ ಸೇನಾಬಲವು ತಟಸ್ಥತೆ, ಉತ್ತರ ಐರ್ಲೆಂಡ್‌‌ ನಲ್ಲಿ ಕಾನೂನು ಹಾಗು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುವ ಪ್ರಯತ್ನ ಹಾಗು ಉತ್ತರ ಐರ್ಲೆಂಡ್‌‌ ಗೆ ಪ್ರಜಾಸತ್ತೀಯ ಸ್ವಯಮಾಧಿಕಾರವು ಜನರ ಹಕ್ಕಾಗಿದೆ ಎಂದು ಬ್ರಿಟಿಶ್ ಸರ್ಕಾರದ ದೃಷ್ಟಿಕೋನವಾಗಿತ್ತು. ಐರಿಶ್ ಗಣತಂತ್ರವಾದಿಗಳು, ಘರ್ಷಣೆಯಲ್ಲಿ ರಾಜ್ಯದ ಸೇನಾಬಲಗಳು "ಕಾದಾಳು"ಗಳಾಗಿದ್ದವೆಂದು ಪರಿಗಣಿಸಿತು, ಇದಕ್ಕೆ ಸಾಕ್ಷಿಯಾಗಿ ರಾಜ್ಯದ ಸೇನಾಬಲಗಳು ಹಾಗು ನಿಷ್ಠಾವಂತ ಅರೆಸೈನಿಕ ದಳಗಳ ನಡುವಿನ ತಂತ್ರವೆಂದು ಆರೋಪಿಸಿತು. ತನಿಖಾದಳ ಪೋಲಿಸ್ ಓಂಬುಡ್ಸ್ಮನ್ ನಡೆಸಿದ "ಬಾಲ್ಲಸ್ಟ್" ತನಿಖೆಯು ಬ್ರಿಟಿಶ್ ಸೇನಾಬಲಗಳು, ಹಾಗು ಅದರಲ್ಲೂ ವಿಶೇಷವಾಗಿ RUCಗಳು ನಿಷ್ಠಾವಂತ ಅರೆಸೈನಿಕ ದಳಗಳೊಂದಿಗೆ ತಂತ್ರ ಹೂಡಿದ್ದನ್ನು ದೃಢಪಡಿಸಿತು, ಇವರುಗಳು ಹತ್ಯೆಯಲ್ಲಿ ಭಾಗಿಗಳೆಂದೂ, ಹಾಗು ಇಂತಹ ಆರೋಪಗಳ ಮೇಲೆ ಹಿಂದೆ ನಡೆಸಲಾಗಿದ್ದ ತನಿಖೆಗಳನ್ನು ಆಧರಿಸಿ ನ್ಯಾಯ ನೀಡುವಾಗ ಅಡಚಣೆಯನ್ನು ಒಡ್ಡಿದ್ದವು,[೨೧] ಆದಾಗ್ಯೂ ಎಷ್ಟರ ಮಟ್ಟಿಗೆ ತಂತ್ರವು ನಡೆದಿತ್ತೆಂಬುದರ ಬಗ್ಗೆ ಇಂದಿಗೂ ತೀವ್ರ ವಿವಾದವಿದೆ. ಭದ್ರತಾ ಪರಿಸ್ಥಿತಿಗಳು ಹದಗೆಟ್ಟ ಪರಿಣಾಮವಾಗಿ, ಉತ್ತರ ಐರ್ಲೆಂಡ್‌‌ ನ ಸ್ವಯಮಾಧಿಕಾರದ ಪ್ರಾದೇಶಿಕ ಸರ್ಕಾರವನ್ನು 1972ರಲ್ಲಿ ತಾತ್ಕಾಲಿಕವಾಗಿ ವಜಾಗೊಳಿಸಲಾಯಿತು. ಹಿಂಸಾಚಾರದ ಜೊತೆಯಲ್ಲಿ, ಉತ್ತರ ಐರ್ಲೆಂಡ್‌‌ ನ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ರಾಜಕೀಯ ಬಿಕ್ಕಟ್ಟು ಉಂಟಾಯಿತು, ಇದರಲ್ಲಿ ಹಿಂಸಾಕೃತ್ಯ ವಿರೋಧಿಸಿದವರು, ಉತ್ತರ ಐರ್ಲೆಂಡ್‌‌ ನ ಭವಿಷ್ಯದ ಸ್ಥಾನಮಾನದ ಬಗ್ಗೆ ದನಿ ಎತ್ತಿದವರು ಹಾಗು ಉತ್ತರ ಐರ್ಲೆಂಡ್ ನೊಳಗೆ ಸರ್ಕಾರವನ್ನು ರೂಪಿಸಬೇಕೆಂದು ಪ್ರತಿಪಾದಿಸಿದವರೂ ಸೇರಿದ್ದರು. 1973ರಲ್ಲಿ, ಉತ್ತರ ಐರ್ಲೆಂಡ್‌‌ ಯುನೈಟೆಡ್ ಕಿಂಗ್ಡಮ್ ನೊಳಗೆ ಉಳಿಯಬೇಕೆ, ಅಥವಾ ಸಂಘಟಿತ ಐರ್ಲೆಂಡ್‌‌ ನ ಭಾಗವಾಗಬೇಕೆ ಎಂಬುದನ್ನು ನಿರ್ಧರಿಸುವ ಸಲುವಾಗಿ ಒಂದು ಜನಾಭಿಪ್ರಾಯ ಸಂಗ್ರಹಿಸಿತು. ಒಟ್ಟಾರೆ ಅಭಿಮತ ಸಂಗ್ರಹಣೆಯಲ್ಲಿ ಮತದಾರರಲ್ಲಿನ ಸರಿಸುಮಾರು 57.5%ನಷ್ಟು ಜನರು ಯಥಾಸ್ಥಿತಿ ಮುಂದುವರಿಸಬೇಕೆಂದು ಬೆಂಬಲ ನೀಡಿದರು.(98.9%), ಕೇವಲ 1%ನಷ್ಟು ಕ್ಯಾಥೋಲಿಕರು ಇದಕ್ಕೆ ವಿರುದ್ಧವಾಗಿ ಮತ ನೀಡುವುದರ ಜೊತೆಗೆ SDLP ಆಯೋಜಿಸಿದ್ದ ಬಹಿಷ್ಕಾರದಲ್ಲಿ ಪಾಲ್ಗೊಂಡರು.[೨೨]

ಇತ್ತೀಚಿನ ಇತಿಹಾಸ[ಬದಲಾಯಿಸಿ]

First Ministers deputy First Minsters
David Trimble (1999-2001) Seamus Mallon (1999-2001)
Reg Empey (acting) (2001)  
David Trimble (2001-2002) Mark Durkan (2001-2002)
Ian Paisley (2007-2008) Martin McGuinness (2007-)
Peter Robinson (2008-)  
Arlene Foster (acting) (2010)  
  John O'Dowd (acting) (2011)

ಬಿಕ್ಕಟ್ಟುಗಳನ್ನು ಶಾಂತಿ ಪ್ರಕ್ರಿಯೆಯ ಮೂಲಕ ಆತಂಕದೊಂದಿಗೆಯೇ ಕೊನೆಗೊಳಿಸಲಾಯಿತು. ಇದರಲ್ಲಿ ಹೆಚ್ಚಿನ ಅರೆಸೈನಿಕ ಸಂಸ್ಥೆಗಳು ಮಾಡಿದ ಕದನ ವಿರಾಮದ ಘೋಷಣೆ ಹಾಗು ತಮ್ಮ ಶಸ್ತ್ರಾಸ್ತ್ರಗಳ ಸಂಪೂರ್ಣ ಕಾರ್ಯಾಚರಣೆಯಿಂದ ತೆಗೆದು ಹಾಕುವ ಘೋಷಣೆ ಮಾಡಿದ್ದು ಸೇರಿತ್ತು, ಆರಕ್ಷಕ ದಳದ ಸುಧಾರಣೆ, ರಸ್ತೆಗಳಿಂದ ಹಾಗು ಗಡಿಯ ಸೂಕ್ಷ್ಮ ಪ್ರದೇಶಗಳಾದ ದಕ್ಷಿಣ ಅರ್ಮಗ್ಹ್ ಹಾಗು ಫೆರ್ಮನಗ್ಹ್ ನಿಂದ ಸೇನಾ ಪಡೆಗಳನ್ನು ಬೆಲ್ ಫಾಸ್ಟ್ ಒಪ್ಪಂದದಂತೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಲಾಯಿತು.(ಇದನ್ನು ಸಾಮಾನ್ಯವಾಗಿ "ಗುಡ್ ಫ್ರೈಡೆ ಅಗ್ರಿಮೆಂಟ್" ಎಂದು ಕರೆಯಲಾಗುತ್ತದೆ) ಇದು ದೀರ್ಘಾವಧಿಯ ಬ್ರಿಟಿಷ್ ಸ್ಥಾನವನ್ನು ಪುನರುಚ್ಚರಿಸಿತು, ಇದನ್ನು ಯಶಸ್ವೀ ಐರಿಶ್ ಸರ್ಕಾರಗಳು ಈ ಹಿಂದೆ ಸಂಪೂರ್ಣವಾಗಿ ಪರಿಗಣಿಸಿರಲಿಲ್ಲ, ಇದರಂತೆ ಜನಾದೇಶದ ಬಹುಮತ ದೊರೆಯುವವರೆಗೂ ಉತ್ತರ ಐರ್ಲೆಂಡ್‌‌ ಯುನೈಟೆಡ್ ಕಿಂಗ್ಡಮ್ ನೊಳಗೆ ಉಳಿಯಬೇಕಿತ್ತು. ಐರಿಶ್ ಸರ್ಕಾರದ ಸಂವಿಧಾನವಾದ ಬಂರೀಚ್ಟ್ ನ ಹೆಯಿರೆಯನ್ನ್ ನನ್ನು ಸಂಪೂರ್ಣ ಐರ್ಲೆಂಡ್ ನ ಮೇಲೆ "ಐರಿಶ್ ರಾಷ್ಟ್ರ"ದ ಸಾರ್ವಭೌಮತ್ವದ ಸಮರ್ಥನೆಯನ್ನು ತೆಗೆದುಹಾಕಲು 1999ರಲ್ಲಿ ತಿದ್ದುಪಡಿ ಮಾಡಲಾಯಿತು.(ನಿಬಂಧನೆ 2), ಹಿಂದೆ ಐರಿಶ್ ಫ್ರೀ ಸ್ಟೇಟ್ ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ಮೇಲೆ ಐರ್ಲೆಂಡ್‌‌ ಕೇವಲ ಕಾನೂನು ನಿಯಂತ್ರಣ ಹೊಂದಬಹುದೆಂದು, ಈ ಸಮರ್ಥನೆಯನ್ನು ಮಾನ್ಯತೆಯೊಂದಿಗೆ ಅಧಿಕೃತವನ್ನಾಗಿ ಮಾಡಲಾಯಿತು. ಹೊಸ ಎರಡು ಹಾಗು ಮೂರನೇ ನಿಬಂಧನೆಗಳನ್ನು, ಹಿಂದಿನ ನಿಬಂಧನೆಗಳಿಗೆ ಬದಲಿಯಾಗಿ ಸಂವಿಧಾನಕ್ಕೆ ಸೇರಿಸಲಾಯಿತು, ಉತ್ತರ ಐರ್ಲೆಂಡ್ ನ ಸ್ಥಾನಮಾನವನ್ನು ಸೂಚ್ಯವಾಗಿ ಪರಿಗಣಿಸಲಾಯಿತು, ಹಾಗು ಉಳಿದ ಯುನೈಟೆಡ್ ಕಿಂಗ್ಡಮ್ ಹಾಗು ಐರ್ಲೆಂಡ್ ನೊಂದಿಗೆ ಅದರ ಸಂಬಂಧಗಳು, ಎರಡು ನ್ಯಾಯಾಲಯ ವ್ಯಾಪ್ತಿಗೆ ಬರುವ ಬಹು ಸಂಖ್ಯೆಯ ಮತದಾರರೊಂದಿಗಿನ ಒಪ್ಪಂದದಿಂದ ಮಾತ್ರ ಬದಲಾವಣೆ ಮಾಡಬಹುದಿತ್ತು.(ಪ್ರತ್ಯೇಕವಾಗಿ ಐರ್ಲೆಂಡ್ ನಲ್ಲಿ ಮತದಾನ). ಈ ಅಂಶವು 1998ರಲ್ಲಿ ಸಹಿ ಹಾಕಲಾದ ಬೆಲ್ ಫಾಸ್ಟ್ ಒಪ್ಪಂದಕ್ಕೂ ಸಹ ಪ್ರಮುಖವಾಗಿತ್ತು. ಇದನ್ನು ಉತ್ತರ ಐರ್ಲೆಂಡ್ ಹಾಗು ಗಣತಂತ್ರ ಎರಡರಿಂದಲೂ ಏಕಕಾಲಿಕವಾಗಿ ನಡೆಸಲಾದ ಜನಾಭಿಪ್ರಾಯ ಸಂಗ್ರಹಣೆಯಿಂದ ಊರ್ಜಿತಗೊಳಿಸಲಾಯಿತು. ಇದೇ ಸಮಯದಲ್ಲಿ, ಭವಿಷ್ಯಾನ್ವಯದ ಭಾಗವಾಗಿ ಬ್ರಿಟಿಷ್ ಸರ್ಕಾರವು ಮೊದಲ ಬಾರಿಗೆ "ಐರಿಶ್ ಆಯಾಮ"ವನ್ನು ಗುರುತಿಸಿತು: ಹೀಗೆ ಇದರ ಆಧಾರತತ್ತ್ವದಂತೆ ಒಟ್ಟಾರೆ ಐರ್ಲೆಂಡ್‌‌ ದ್ವೀಪದ ಜನರು ಯಾವುದೇ ಬಾಹ್ಯ ಮಧ್ಯಸ್ಥಿಕೆಯಿಲ್ಲದೆ, ಉತ್ತರ ಹಾಗು ದಕ್ಷಿಣ ಭಾಗಗಳ ನಡುವಿನ ಸಮಸ್ಯೆಗಳನ್ನು ಪರಸ್ಪರ ಒಪ್ಪಿಗೆಯಿಂದ ಬಗೆಹರಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ.[೨೩] ನಂತರದ ಹೇಳಿಕೆಯು ರಾಷ್ಟ್ರೀಯತಾವಾದಿಗಳು ಹಾಗು ಗಣತಂತ್ರವಾದಿಗಳಿಂದ ಒಪ್ಪಂದಕ್ಕೆ ಯಶಸ್ವಿಯಾಗಿ ಬೆಂಬಲ ಪಡೆಯಲು ಪ್ರಮುಖ ಕಾರಣವಾಯಿತು. ಇದು {0}ಉತ್ತರ ಐರ್ಲೆಂಡ್‌‌{/0}ನೊಳಗೆ ಪರಂಪರಾಗತ ಅಧಿಕಾರ ಹಂಚಿಕೆಯ ಸರ್ಕಾರವನ್ನೂ ಸಹ ಸ್ಥಾಪಿಸಿತು, ಇದರಂತೆ ಸರ್ಕಾರವು ಯೂನಿಯನಿಸ್ಟ್ ಹಾಗು ರಾಷ್ಟ್ರೀಯತಾವಾದಿ ಪಕ್ಷಗಳೆರಡನ್ನೂ ಒಳಗೊಂಡಿರಬೇಕು. ಅಸೆಂಬ್ಲಿಯಲ್ಲಿ (ಸ್ಟೋರ್ಮೊಂಟ್ಗೇಟ್) ಸಿನ್ನ್ ಫೆಯಿನ್ ಗಾಗಿ ಕೆಲಸ ಮಾಡುತ್ತಿದ್ದ ಜನರ ಮೇಲೆ ಕಣ್ಣಿಟ್ಟಿದ್ದ ಆರೋಪವನ್ನು ಪೋಲಿಸ್ ಸರ್ವೀಸ್ ಆಫ್ ಉತ್ತರ ಐರ್ಲೆಂಡ್‌‌(PSNI) ಹೊತ್ತ ನಂತರ 2002ರಲ್ಲಿ ಬ್ರಿಟಿಷ್ ಸರ್ಕಾರವು ಈ ವ್ಯವಸ್ಥೆಗಳನ್ನು ರದ್ದುಪಡಿಸಿತು. ಪರಿಣಾಮವಾಗಿ ಸಿನ್ನ್ ಫೆಯಿನ್ ಪಕ್ಷದ ಸದಸ್ಯರ ವಿರುದ್ಧ ಮಾಡಲಾದ ಆರೋಪವೂ ಕುಸಿದುಬಿದ್ದಿತು. 28 ಜುಲೈ 2005ರಲ್ಲಿ ಪ್ರಾವಿಷನಲ್ IRA ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಜೊತೆಗೆ ಅದು ತನ್ನ ಸಂಪೂರ್ಣ ಶಸ್ತ್ರಾಗಾರವೆಂದು ಪರಿಗಣಿಸಿದ್ದನ್ನು ಅಲ್ಲಿಂದೀಚೆಗೆ ಕಾರ್ಯಾಚರಣೆಯಿಂದ ತೆಗೆದುಹಾಕಿತು. ಕಾರ್ಯಾಚರಣೆಯಿಂದ ತೆಗೆದುಹಾಕುವ ಈ ಅಂತಿಮ ಕ್ರಮವನ್ನು 1998ರ ಬೆಲ್ಫಾಸ್ಟ್ ಒಪ್ಪಂದದ ಪ್ರಕಾರ, ಹಾಗು ಇಂಡಿಪೆಂಡೆಂಟ್ ಇಂಟರ್ನ್ಯಾಷನಲ್ ಕಮಿಷನ್ ಆನ್ ಡಿಕಮಿಶನಿಂಗ್ ನ ಮೇಲ್ವಿಚಾರಣೆಯಲ್ಲಿ ಹಾಗು ಚರ್ಚ್ ಗೆ ಸೇರದ ಎರಡು ಸಾಕ್ಷ್ಯಗಳೊಂದಿಗೆ ಮಾಡಿತು. ಆದಾಗ್ಯೂ, ಹಲವು ಏಕೀಕರಣವಾದಿಗಳು ತ್ರಿಶಂಕುವಾಗಿಯೇ ಉಳಿದರು. ಈ IRA ಡಿಕಮಿಶನಿಂಗ್ (ನಿವೃತ್ತಿಗೊಳಿಸುವಿಕೆ)ನಿಷ್ಠಾವಂತ ಅರೆಸೈನಿಕ ವಾದಗಳಿಗೆ ವಿರುದ್ಧವಾಗಿತ್ತು, ಇವರು ಇಲ್ಲಿಯವರೆಗೂ ಹಲವು ಆಯುಧಗಳನ್ನು ಕಾರ್ಯಾಚರಣೆಯಿಂದ ತೆಗೆದು ಹಾಕಲು ನಿರಾಕರಿಸಿದ್ದರು. ಇದು ರಾಜಕೀಯ ಪ್ರಗತಿಯ ಮೇಲೆ ಮತ್ತಷ್ಟು ಪ್ರಮುಖ ಪ್ರಭಾವ ಬೀರಬಹುದೆಂಬುದನ್ನು ಪರಿಗಣಿಸಿರಲಿಲ್ಲ; ಏಕೆಂದರೆ ನಿಷ್ಠಾವಂತ ಅರೆಸೈನಿಕ ದಳವು ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದು, ಮಹತ್ವದ ಬೆಂಬಲ ಗಳಿಸುವಲ್ಲಿ ಅಸಮರ್ಥವಾಗಿತ್ತು. ಜೊತೆಗೆ ಭವಿಷ್ಯದಲ್ಲಿ ಸರ್ಕಾರದ ಒಂದು ಭಾಗವಾಗಿ ಸ್ಥಾನ ಗಳಿಸುವಲ್ಲಿ ಅಸಮರ್ಥವಾಗಿತ್ತು. ಮತ್ತೊಂದು ಕಡೆಯಲ್ಲಿ, ಸಿನ್ನ್ ಫೆಯಿನ್, ತಮ್ಮ ತೀವ್ರವಾದಿ ಗಣತಂತ್ರವಾದದೊಂದಿಗೆ(ವಾಸ್ತವ ಹಾಗು ಗ್ರಹಣೆ), ಉತ್ತರ ಐರ್ಲೆಂಡ್‌‌ ನಲ್ಲಿ ಅತ್ಯಂತ ದೊಡ್ಡ ರಾಷ್ಟ್ರೀಯತವಾದಿ ಪಕ್ಷವಾಗಿದೆ. 2003ರ ಅಸೆಂಬ್ಲಿ ಚುನಾವಣೆಯಲ್ಲಿ ಅಸೆಂಬ್ಲಿಗೆ ಆಯ್ಕೆಯಾದ ರಾಜಕಾರಣಿಗಳನ್ನು ಒಟ್ಟಾಗಿ 15 ಮೇ 2006ರಲ್ಲಿ ಒಂದೆಡೆ ಸೇರಿಸಲಾಯಿತು. ಉತ್ತರ ಐರ್ಲೆಂಡ್ ನಲ್ಲಿ ಪರಂಪರಾಗತ ಸರ್ಕಾರದ ಮರುಸ್ಥಾಪನೆಯ ಮೊದಲ ಹಂತವಾಗಿ ಇದನ್ನು ಹೀಗೆ ವಿವರಿಸಲಾಯಿತು. ಉತ್ತರ ಐರ್ಲೆಂಡ್‌‌ ನ ಮೊದಲ ಮಂತ್ರಿ ಹಾಗು ಉತ್ತರ ಐರ್ಲೆಂಡ್ ನ ಮೊದಲ ಉಪಮಂತ್ರಿ ಹಾಗು ಎಕ್ಸಿಕ್ಯುಟಿವ್ ಗಾಗಿ(ಶಾಸಕಾಂಗಕ್ಕಾಗಿ) ಸದಸ್ಯರುಗಳ ಆಯ್ಕೆಗಾಗಿ(25 ನವೆಂಬರ್ 2006ಕ್ಕೆ ಮುಂಚಿತವಾಗಿ) ನಾರ್ದರ್ನ್ ಐರ್ಲೆಂಡ್ ಆಕ್ಟ್ 2006ರ ಅಡಿ [೨೪] ಅಧಿಕೃತವಾಗಿ ನಿಯಮ ಮಾಡಲಾಯಿತು. 7 ಮಾರ್ಚ್ 2007ರಲ್ಲಿನ ನಡೆದ ಚುನಾವಣೆಯನ್ನು ಪರಿಗಣಿಸಿ, ಪರಂಪರಾಗತ ಸರ್ಕಾರವು ಉತ್ತರ ಐರ್ಲೆಂಡ್ ನಲ್ಲಿ 8 ಮೇ 2007ರಲ್ಲಿ ಮರುಸ್ಥಾಪನೆಯಾಯಿತು. ಡೆಮೋಕ್ರ್ಯಾಟಿಕ್ ಯೂನಿಯನಿಸ್ಟ್ ಪಾರ್ಟಿ(DUP) ಯ ಇಯಾನ್ ಪೈಸ್ಲೆಯ್ ನಾಯಕರಾಗಿ ಹಾಗು ಸಿನ್ನ್ ಫೆಯಿನ್ ನ ಉಪನಾಯಕ ಮಾರ್ಟಿನ್ ಮ್ಯಾಕ್ಗಿನ್ನಿಸ್ ಕ್ರಮವಾಗಿ ಮೊದಲ ಮಂತ್ರಿ ಹಾಗು ಮೊದಲ ಉಪಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.[೨೫] ಪ್ರಸಕ್ತದಲ್ಲಿ ಪೀಟರ್ ರಾಬಿನ್ಸನ್ ಮೊದಲ ಮಂತ್ರಿಯಾಗಿದ್ದು, ಇವರು ಡೆಮೋಕ್ರ್ಯಾಟಿಕ್ ಯೂನಿಯನಿಸ್ಟ್ ಪಾರ್ಟಿಯಿಂದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರ ಮತ್ತು ರಾಜಕೀಯ[ಬದಲಾಯಿಸಿ]

ಸ್ಟೊರ್‌ಮಾಂಟ್‌ನಲ್ಲಿನ ಸಂಸತ್‌ ಕಟ್ಟಡಗಳು, ಬೆಲ್‌ಫಾಸ್ಟ್‌, ವಿಧಾನಸಭಾ ಗದ್ದುಗೆ

ಉತ್ತರ ಐರ್ಲೆಂಡ್‌‌, ಯುನೈಟೆಡ್ ಕಿಂಗ್ಡಮ್ ನೊಳಗೆ ಪರಂಪರಾಗತ ಆಡಳಿತ ವ್ಯವಸ್ಥೆ ಹೊಂದಿದೆ. ತನ್ನ ಸದಸ್ಯರನ್ನೊಳಗೊಂಡ ಉತ್ತರ ಐರ್ಲೆಂಡ್‌‌ ಅಸೆಂಬ್ಲಿಯೊಂದಿಗೆ ಉತ್ತರ ಐರ್ಲೆಂಡ್‌‌ ಎಕ್ಸಿಕ್ಯುಟಿವ್, UK ಸರ್ಕಾರ ಹಾಗು UK ಸಂಸತ್ತಿನೊಂದಿಗೆ ಪರಂಪರಾಗತ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಇವುಗಳು ಹೊರತೋರದ ಸಂಬಂಧಪಟ್ಟ ಸಂಗತಿಗಳಿಗೆ ಜವಾಬ್ದಾರಿಯುತವಾಗಿವೆ. ಅಸೆಂಬ್ಲಿಗೆ ಚುನಾವಣೆಗಳು ಏಕ ವರ್ಗಾವಣಾಭಿಮತದ ಮೂಲಕ ನಡೆಯುತ್ತವೆ. ಜೊತೆಗೆ ವೆಸ್ಟ್ ಮಿನಿಸ್ಟರ್ ನ 18 ಮತಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಿಂದ ಆರು ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಇದು ಯುರೋಪಿಯನ್ ಒಕ್ಕೂಟದ ಮತದಾರರ ಪ್ರದೇಶವೂ ಸಹ ಆಗಿದೆ. ಉತ್ತರ ಐರ್ಲೆಂಡ್‌‌, ಹೌಸ್ ಆಫ್ ಕಾಮನ್ಸ್ ಗೆ 18 ಜನ ಮೆಂಬರ್ಸ್ ಆಫ್ ಪಾರ್ಲಿಮೆಂಟ್(MP)ಗಳನ್ನು ಆಯ್ಕೆ ಮಾಡಿ ಕಳುಹಿಸುತ್ತದೆ; ಇದರಲ್ಲಿ ಪ್ರತಿಯೊಬ್ಬರಿಗೂ ಸ್ಥಾನ ದೊರೆಯುವುದಿಲ್ಲ, ಆದಾಗ್ಯೂ ಸಿನ್ನ್ ಫೆಯಿನ್ಪಕ್ಷದಿಂದ ಆಯ್ಕೆಯಾದ MPಗಳು (ಪ್ರಸಕ್ತದಲ್ಲಿ ಐವರು)ಆದರೆ ಇವರು ಬ್ರಿಟೇನ್ ರಾಣಿ ಪ್ರಭುತ್ವದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಿಲ್ಲ.ಸಂಪೂರ್ಣ ಐರ್ಲೆಂಡ್ ಸ್ವತಂತ್ರ ರಾಜ್ಯದ ಬಗ್ಗೆ ನಂಬಿಕೆ ಇರುವವರು) ಉತ್ತರ ಐರ್ಲೆಂಡ್ ನ ಕಾರ್ಯಾಲಯವು ಉತ್ತರ ಐರ್ಲೆಂಡ್ ನಲ್ಲಿರುವ UK ಸರ್ಕಾರವನ್ನು ಮೀಸಲಿಡಲ್ಪಟ್ಟ ವಿಷಯಗಳಿಗಾಗಿ ಪ್ರತಿನಿಧಿಸುತ್ತದೆ. ಅಲ್ಲದೇ UK ಸರಕಾರದೊಳಗೆ ಸಂಬಂಧಪಟ್ಟ ಉತ್ತರ ಐರಿಶ್ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತದೆ. ಉತ್ತರ ಐರ್ಲೆಂಡ್ ನ ಕಛೇರಿಗೆ ಉತ್ತರ ಐರ್ಲೆಂಡ್ ನ ಪ್ರಮುಖ ಕಾರ್ಯದರ್ಶಿಯು ನೇತೃತ್ವ ವಹಿಸುತ್ತಾರೆ, ಇವರು ಯುನೈಟೆಡ್ ಕಿಂಗ್ಡಮ್ ನ ಸಚಿವ ಸಂಪುಟದಲ್ಲಿ ಸ್ಥಾನ ಹೊಂದಿರುತ್ತಾರೆ. ಉತ್ತರ ಐರ್ಲೆಂಡ್‌‌, ಇಂಗ್ಲೆಂಡ್, ವೇಲ್ಸ್ ಹಾಗು ಸ್ಕಾಟ್ಲ್ಯಾಂಡ್ ಗೆ ವಿಭಿನ್ನವಾಗಿ ವಿಶಿಷ್ಟ ಕಾನೂನು ವ್ಯಾಪ್ತಿಯನ್ನು ಹೊಂದಿದೆ.[೨೬]

ಉತ್ತರ ಐರ್ಲೆಂಡ್ ನಲ್ಲಿರುವ ಪ್ರಮುಖ ರಾಜಕೀಯ ಅಭಿಪ್ರಾಯಭೇದಂತೆ, ಉತ್ತರ ಐರ್ಲೆಂಡ್‌‌, ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿಯೇ ಮುಂದುವರೆಯಬೇಕೆಂದು ಹಲವರು ಬಯಸುತ್ತಾರೆ. ಯೂನಿಯನಿಸ್ಟ್(ಏಕೀಕರಣವಾದಿಗಳು) ಅಥವಾ ನಿಷ್ಟಾವಂತರು ಹಾಗು ರಾಷ್ಟ್ರೀಯತಾವಾದಿಗಳು ಅಥವಾ ಗಣತಂತ್ರವಾದಿಗಳ ನಡುವೆ ಈ ಪ್ರತ್ಯೇಕತೆ ಏರ್ಪಟ್ಟಿದೆ. ಇವರು ಯುನೈಟೆಡ್ ಕಿಂಗ್ಡಮ್ ನಿಂದ ಮುಕ್ತಗೊಂಡ ಉತ್ತರ ಐರ್ಲೆಂಡ್‌‌, ಐರ್ಲೆಂಡ್‌‌ ನ ಉಳಿದ ಭಾಗಗಳೊಂದಿಗೆ ವಿಲೀನಗೊಳ್ಳಬೇಕೆಂದು ಬಯಸುತ್ತಾರೆ. ಈ ಎರಡು ಪರಸ್ಪರ ವಿರುದ್ಧ ಅಭಿಪ್ರಾಯಗಳು ಆಳವಾದ ಸಾಂಸ್ಕೃತಿಕ ಪ್ರತ್ಯೇಕತೆಗಳ ಜೊತೆಗೆ ಸಂಬಂಧ ಹೊಂದಿದೆ. ಸ್ಕಾಟಿಷ್, ಇಂಗ್ಲಿಷ್, ವೆಲ್ಷ್ ಹಾಗು ಹುಗುಯೇನೋಟ್ ಮೂಲದವರಾದ ಯೂನಿಯನಿಸ್ಟ್ ಗಳು ಭಾರಿ ಪ್ರಮಾಣದಲ್ಲಿ ಪ್ರಾಟೆಸ್ಟೆಂಟ್ ಪಂಥದವರಾಗಿದ್ದಾರೆ. ಜೊತೆಗೆ ಓಲ್ಡ್ ಗೇಲಿಕ್ ಐರಿಷ್ಮೆನ್ ಗಳೂ ಸಹ ಪ್ರಾಟೆಸ್ಟೆಂಟ್ ನ ಒಂದು ಪಂಥಕ್ಕೆ ಮತಾಂತರಗೊಂಡಿದ್ದಾರೆ. ರಾಷ್ಟ್ರೀಯತಾವಾದಿಗಳು ಪ್ರಧಾನವಾಗಿ ಕ್ಯಾಥೊಲಿಕ್ ಪಂಥದವರಾಗಿದ್ದು, ಹಿಂದಿನ ನಿವಾಸಿಗಳ ಮೂಲದವರಾಗಿದ್ದಾರೆ. ಇವರಲ್ಲಿ ಅಲ್ಪ ಸಂಖ್ಯೆಯ ಸ್ಕಾಟಿಷ್ ಹೈಲ್ಯಾಂಡರ್ಸ್ ಹಾಗು ಪ್ರಾಟೆಸ್ಟೆಂಟ್ ಪಂಥಕ್ಕೆ ಮತಾಂತರಗೊಂಡವರಾಗಿದ್ದಾರೆ. ಸ್ಟೋರ್ಮೊಂಟ್ ಆಡಳಿತದಡಿ ರಾಷ್ಟ್ರೀಯತಾವಾದಿಗಳ ವಿರುದ್ಧದ ತಾರತಮ್ಯ, (1921–1972) 1960ರಲ್ಲಿ ರಾಷ್ಟ್ರೀಯತಾವಾದಿ ನಾಗರೀಕ ಹಕ್ಕುಗಳ ಚಳವಳಿಗೆ ದಾರಿಮಾಡಿಕೊಟ್ಟಿತು.[೨೭] ಕೆಲವು ಯೂನಿಯನಿಸ್ಟ್ ಗಳು, ಯಾವುದೇ ಪಕ್ಷಪಾತವು ಕೇವಲ ಧಾರ್ಮಿಕ ಅಥವಾ ರಾಜಕೀಯ ಅಂಧಾಭಿಮಾನದಿಂದ ಹುಟ್ಟಿಕೊಂಡಿಲ್ಲ. ಆದರೆ ಹೆಚ್ಚು ಸಂಕೀರ್ಣವಾದ ಸಾಮಾಜಿಕ-ಆರ್ಥಿಕ, ಸಾಮಾಜಿಕ-ರಾಜಕೀಯ ಹಾಗು ಭೌಗೋಳಿಕ ಅಂಶಗಳ ಪರಿಣಾಮವಾಗಿದೆಯೆಂದು ವಾದಿಸುತ್ತಾರೆ.[೨೮] ಅದೇನೇ ಕಾರಣವಿದ್ದರೂ, ಪಕ್ಷಪಾತದ ಅಸ್ತಿತ್ವ, ಹಾಗು ರಾಷ್ಟ್ರೀಯತಾವಾದಿಗಳ ಆಕ್ರೋಶವನ್ನು ನಿರ್ವಹಿಸಿದ ರೀತಿಯು ದೀರ್ಘಾವಧಿಯಲ್ಲಿ ನಡೆದ ದಿ ಟ್ರಬಲ್ಸ್ ಎಂಬ ಸಂಘರ್ಷಕ್ಕೆ ಪ್ರಮುಖ ಕಾರಣೀಭೂತ ಅಂಶವಾಯಿತು. ರಾಜಕೀಯ ಅಶಾಂತಿಯು 1968 ಹಾಗು 1994ರ ನಡುವೆ ಹಿಂಸಾಚಾರದ ಹಂತ ತಲುಪಿತು.[೨೯] 2007ರಂತೆ, 36%ನಷ್ಟು ಜನಸಂಖ್ಯೆಯು ತಮ್ಮನ್ನು ತಾವು ಯೂನಿಯನಿಸ್ಟ್ ಗಳೆಂದು ಕರೆದುಕೊಂಡರೆ, 24%ರಷ್ಟು ಜನರು ರಾಷ್ಟ್ರೀಯತಾವಾದಿಗಳೆಂದು ಕರೆದುಕೊಳ್ಳುತ್ತಾರೆ. ಜೊತೆಗೆ 40%ನಷ್ಟು ಜನರು ತಾವು ಯಾವುದಕ್ಕೂ ಸೇರಿಲ್ಲವೆಂದು ವಿವರಿಸುತ್ತಾರೆ.[೩೦] 2009ರ ಜನಾಭಿಪ್ರಾಯ ಸಂಗ್ರಹಣೆಯ ಪ್ರಕಾರ, 69%ನಷ್ಟು ಜನರು, ಯುನೈಟೆಡ್ ಕಿಂಗ್ಡಮ್ ನೊಂದಿಗೆ ಉತ್ತರ ಐರ್ಲೆಂಡ್‌ ನ ಸದಸ್ಯತ್ವವು ದೀರ್ಘಕಾಲಿಕವಾಗಿರಬೇಕೆಂದು ತಮ್ಮ ಇಚ್ಛೆ ವ್ಯಕ್ತಪಡಿಸುತ್ತಾರೆ. (ನೇರವಾದ ಆಡಳಿತ ವ್ಯವಸ್ಥೆ ಅಥವಾ ಪರಂಪರಾಗತ ಆಡಳಿತ ವ್ಯವಸ್ಥೆ),ಗಾಗಿ ‌21%ನಷ್ಟು ಜನರು ಐರ್ಲೆಂಡ್‌ ಒಕ್ಕೂಟದೊಂದಿಗೆ ಅದರ ಸದಸ್ಯತ್ವಕ್ಕೆ ತಮ್ಮ ಆದ್ಯತೆಯನ್ನು ವ್ಯಕ್ತಪಡಿಸುತ್ತಾರೆ.[೩೧] ಈ ವ್ಯತ್ಯಾಸಕ್ಕೆ, UK (91%)ಯೊಳಗೆ ಐರ್ಲೆಂಡ್ ಭಾಗವಾಗಿರಬೇಕೆಂಬ ಪ್ರಾಟೆಸ್ಟೆಂಟ್ ಗಳ ಭಾರಿ ಪ್ರಮಾಣದ ಆಯ್ಕೆಯೇ ಕಾರಣವೆಂದು ವಿವರಿಸಬಹುದು, ಆದರೆ ಕ್ಯಾಥೋಲಿಕ್ಕರ ಆಯ್ಕೆಗಳು ಸಾಂವಿಧಾನಿಕ ಪ್ರಶ್ನೆಗೆ ಹಲವಾರು ಪರಿಹಾರಗಳನ್ನು ಕೋರುತ್ತವೆ, ಇದರಲ್ಲಿ UK (47%)ಯ ಉಳಿದ ಭಾಗ, ಸಂಘಟಿತ ಐರ್ಲೆಂಡ್ (40%), ಉತ್ತರ ಐರ್ಲೆಂಡ್‌‌ ಪ್ರತ್ಯೇಕ ರಾಷ್ಟ್ರವಾಗುವುದು ಹಾಗು ಕೆಲವರು ಏನೂ "ತಿಳಿದಿಲ್ಲ"(5%)ಎಂಬಲ್ಲಿದ್ದಾರೆ.[೩೨] ಅಧಿಕೃತ ಮತಗಳ ಸಂಖ್ಯೆಯು, ಅಭ್ಯರ್ಥಿ, ಭೂಗೋಳ, ವೈಯಕ್ತಿಕ ನಿಷ್ಠೆ ಹಾಗು ಐತಿಹಾಸಿಕ ಮತಚಲಾವಣೆ ಮಾದರಿಗೆ ಸಂಬಂಧಿಸಿದ ಸಂಗತಿಗಳ ಜೊತೆಯಲ್ಲಿ "ರಾಷ್ಟ್ರೀಯ ಪ್ರಶ್ನೆ"ಯ ಮೇಲಿನ ಅಭಿಪ್ರಾಯಗಳನ್ನು ಬಿಂಬಿಸುತ್ತದೆ. ಇದು ಉತ್ತರ ಐರ್ಲೆಂಡ್‌‌ ನ 54%ರಷ್ಟು ಮತದಾರರು ಪ್ರೋ-ಯೂನಿಯನಿಸ್ಟ್ ಪಕ್ಷಕ್ಕೆ ಮತ ನೀಡಿದರೆ, 42%ನಷ್ಟು ಜನರು ಪ್ರೋ-ನ್ಯಾಷಿನಲಿಸ್ಟ್ ಪಕ್ಷಕ್ಕೆ ಮತ ಹಾಕುತ್ತಾರೆ ಹಾಗು 4%ನಷ್ಟು ಜನರು "ಇತರ" ಪಕ್ಷಗಳಿಗೆ ಮತ ನೀಡುತ್ತಾರೆ. ಉತ್ತರ ಐರ್ಲೆಂಡ್ ನ ಸಾಂವಿಧಾನಿಕ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಫಲಿತಾಂಶವು ಅತ್ಯವಶ್ಯವಾಗಿ ಮತದಾರ ಸಮುದಾಯದ ನಿಲುವಲ್ಲವೆಂದು ಜನಾಭಿಪ್ರಾಯ ಸಂಗ್ರಹಣೆಯು ಸತತವಾಗಿ ಪ್ರದರ್ಶಿಸುತ್ತಿದೆ. ಉತ್ತರ ಐರ್ಲೆಂಡ್‌‌ ನ ಹೆಚ್ಚಿನ ಜನಸಂಖ್ಯೆಯು ಕಡೆಪಕ್ಷ ಹೆಸರಿನಿಂದ ಕ್ರಿಶ್ಚಿಯನ್ ಎನಿಸಿದೆ. ಜನಾಂಗೀಯ-ರಾಜಕೀಯ ನಿಷ್ಠಾವಂತರು ಸಂಪೂರ್ಣವಾಗಿ ಅಲ್ಲದಿದ್ದರೂ ರೋಮನ್ ಕ್ಯಾಥೊಲಿಕ್ ಹಾಗು ಪ್ರಾಟೆಸ್ಟೆಂಟ್ ಪಂಥಕ್ಕೆ ಸೇರಿದವರಾಗಿದ್ದಾರೆ ಹಾಗು ವಿರುದ್ಧವಾದ ಅಭಿಪ್ರಾಯಗಳನ್ನು ವರ್ಗೀಕರಿಸಲು ಪಂಥದ ಹೆಸರುಗಳನ್ನೂ ಬಳಸಲಾಗುತ್ತದೆ. ಆದಾಗ್ಯೂ ಇದು, ಬಹಳ ಸಂಕೀರ್ಣವಾದ ಐರಿಶ್ ಕೊಶ್ಚನ್ ಗೆ ಸಂಬಂಧಿಸಿದಂತೆ ಇದು ಹೆಚ್ಚು ಅಪ್ರಸ್ತುತವಾಗುತ್ತದೆ. ಹಲವು ಮತದಾರರು(ಧಾರ್ಮಿಕ ಸದಸ್ಯತ್ವವನ್ನು ಪರಿಗಣಿಸದೆ) ಯೂನಿಯನಿಸಂನ ಕನ್ಸರ್ವೇಟಿವ್ ನೀತಿಗಳೆಡೆಗೆ ಆಕರ್ಷಿತರಾಗಿದ್ದಾರೆ, ಆದರೆ ಇತರ ಮತದಾರರು ಇದಕ್ಕೆ ಬದಲಾಗಿ ಸಾಂಪ್ರದಾಯಿಕವಾಗಿ ಎಡಪಂಥೀಯರಾಗಿರುವ, ರಾಷ್ಟ್ರೀಯತಾವಾದಿ ಪಕ್ಷ ಸಿನ್ನ್ ಫೆಯಿನ್ ಹಾಗು ಸೋಶಿಯಲ್ ಡೆಮೋಕ್ರ್ಯಾಟಿಕ್ ಅಂಡ್ ಲೇಬರ್ ಪಾರ್ಟಿ (SDLP) ಹಾಗು ಅವುಗಳಿಗೆ ಅನುಗುಣವಾದ ಪಕ್ಷದ ಆಧಾರಗಳಾದ ಡೆಮೋಕ್ರ್ಯಾಟಿಕ್ ಸೋಷಿಯಲಿಸಂ ಹಾಗು ಸೋಶಿಯಲ್ ಡೆಮೋಕ್ರೆಸಿಗಳೆಡೆಗೆ ಆಕರ್ಷಿತರಾಗಿದ್ದಾರೆ. ಬಹುತೇಕವಾಗಿ, ಪ್ರಾಟೆಸ್ಟೆಂಟ್ ಗಳು ಗ್ರೇಟ್ ಬ್ರಿಟನ್ ನೊಂದಿಗೆ ಪ್ರಬಲ ಸಂಬಂಧ ಹೊಂದಿರುವುದಾಗಿ ಅಭಿಪ್ರಾಯಪಡುತ್ತಾರೆ. ಅಲ್ಲದೇ ಉತ್ತರ ಐರ್ಲೆಂಡ್, ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿಯೇ ಉಳಿಯಬೇಕೆಂದು ಆಶಿಸುತ್ತಾರೆ. ಆದಾಗ್ಯೂ ಹಲವು ಕ್ಯಾಥೋಲಿಕ್ಕರು, ಸಾಧಾರಣವಾಗಿ ಸಂಘಟಿತ ಐರ್ಲೆಂಡ್ ಗಾಗಿ ಹಾರೈಸುತ್ತಾರೆ ಅಥವಾ ಸಾಂವಿಧಾನಿಕ ಪ್ರಶ್ನೆಯನ್ನು ಹೇಗೆ ಪರಿಹರಿಸಬೇಕೆಂಬುದರ ಬಗ್ಗೆ ಅಷ್ಟಾಗಿ ಖಚಿತತೆಯನ್ನು ಹೊಂದಿಲ್ಲ. ನಾರ್ದನ್ ಐರ್ಲೆಂಡ್‌‌ ಲೈಫ್ ಅಂಡ್ ಟೈಮ್ಸ್ 2009ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಉತ್ತರ ಐರಿಶ್ ಕ್ಯಾಥೋಲಿಕ್ಕರಲ್ಲಿ 47%ನಷ್ಟು ಜನರು, ನೇರ ಆಡಳಿತ (8%)ಅಥವಾ ಪರಂಪರಾಗತ ಆಡಳಿತ ವ್ಯವಸ್ಥೆಯ (39%) ಮೂಲಕ ಉತ್ತರ ಐರ್ಲೆಂಡ್‌‌, ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿ ಉಳಿಯಬೇಕೆಂಬ ಆಶಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ.[೩೩] ಇತ್ತೀಚಿನ ಉತ್ತರ ಐರ್ಲೆಂಡ್‌‌ ನ ಜನಗಣತಿಯ ಪ್ರಕಾರ ಪ್ರಾಟೆಸ್ಟೆಂಟ್ ಗಳು ಉತ್ತರ ಐರ್ಲೆಂಡ್ ನಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರ ಐರ್ಲೆಂಡ್ ಅಸೆಂಬ್ಲಿಯ ರಚನೆಯು ಜನಸಂಖ್ಯೆಯೊಳಗೆ ವಿವಿಧ ಪಕ್ಷಗಳ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. 108 MLAಗಳಲ್ಲಿ, 55 ಯೂನಿಯನಿಸ್ಟ್ ಗಳು ಹಾಗು 44 ಮಂದಿ ನ್ಯಾಷನಲಿಸ್ಟ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.(ಉಳಿದ ಒಂಬತ್ತು ಸದಸ್ಯರನ್ನು "ಇತರ" ಪಕ್ಷದವರೆಂದು ವರ್ಗೀಕರಿಸಲಾಗಿದೆ.)

ಪೌರತ್ವ ಹಾಗು ಐಡೆನ್ಟಿಟಿ(ಗುರುತಿಸಿಕೊಳ್ಳುವಿಕೆ)[ಬದಲಾಯಿಸಿ]

ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿರುವ ಉತ್ತರ ಐರ್ಲೆಂಡ್ ನ ಜನರು ಬ್ರಿಟಿಶ್ ಪ್ರಜೆಗಳಾಗಿದ್ದಾರೆ. ಐರ್ಲೆಂಡ್ ನಲ್ಲಿ ಜನಿಸಿದ ಕಾರಣದಿಂದಾಗಿ ಅವರು ಐರಿಶ್ ಪೌರತ್ವಕ್ಕೂ ಸಹ ಅರ್ಹರಾಗಿದ್ದಾರೆ, ಇದನ್ನು 1998ರಲ್ಲಿ ಬ್ರಿಟಿಶ್ ಹಾಗು ಐರಿಶ್ ಸರ್ಕಾರಗಳ ನಡುವೆ ನಡೆದ ಬೆಲ್ಫಾಸ್ಟ್ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ, ಇದರಂತೆ: ಉತ್ತರ ಐರ್ಲೆಂಡ್‌‌ ನ ಎಲ್ಲರೂ ತಮ್ಮನ್ನು ತಾವು ಐರಿಶ್ ಅಥವಾ ಬ್ರಿಟಿಶ್ ಎಂದು ಗುರುತಿಸಿಕೊಳ್ಳುವುದು ಅಥವಾ ಎರಡೂ ಪೌರತ್ವಗಳ ಮೂಲಕ ಗುರುತಿಸಿಕೊಳ್ಳುವುದು ಅವರ ಜನ್ಮಸಿದ್ಧ ಹಕ್ಕಾಗಿದೆ, ಅವರು ಆಯ್ಕೆ ಮಾಡಿಕೊಂಡ ಪೌರತ್ವದ ಪ್ರಕಾರವಾಗಿ[ಎರಡೂ ಸರ್ಕಾರಗಳು]ಬ್ರಿಟಿಶ್ ಹಾಗು ಐರಿಶ್ ಪೌರತ್ವವನ್ನು ಎರಡೂ ಸರ್ಕಾರಗಳು ಅಂಗೀಕರಿಸಿರುವ ಬಗ್ಗೆ ದೃಢಪಡಿಸಬೇಕು. ಇದು ಉತ್ತರ ಐರ್ಲೆಂಡ್ ನ ಸ್ಥಾನಮಾನದಲ್ಲಿ ಆಗುವ ಯಾವುದೇ ಭವಿಷ್ಯದ ಬದಲಾವಣೆಗಳ ಮೇಲೆ ಇದು ಪರಿಣಾಮ ಬೀರಬಾರದು.‌‌ ಒಪ್ಪಂದದ ಪರಿಣಾಮವಾಗಿ, ಐರ್ಲೆಂಡ್‌‌ ನ ಸಂವಿಧಾನವನ್ನು[೩೪] ತಿದ್ದುಪಡಿ ಮಾಡಲಾಯಿತು, ಇದರಂತೆ, ಐರ್ಲೆಂಡ್ ದ್ವೀಪದ ಇತರ ಯಾವುದೇ ಭಾಗದಲ್ಲಿರುವಂತೆ ಉತ್ತರ ಐರ್ಲೆಂಡ್‌‌ ನಲ್ಲಿ ಜನಿಸಿದ ಜನರು ಐರಿಶ್ ಪ್ರಜೆಗಳೆಂದು ಅರ್ಹಗೊಳಿಸಲಾಯಿತು ಆದಾಗ್ಯೂ, ಎರಡೂ ಸರ್ಕಾರಗಳು, ಉತ್ತರ ಐರ್ಲೆಂಡ್ ನಲ್ಲಿ ಜನಿಸಿದ ಎಲ್ಲ ವ್ಯಕ್ತಿಗಳಿಗೆ ತನ್ನ ಪೌರತ್ವ ನೀಡುತ್ತದೆ. ಎರಡೂ ಸರ್ಕಾರಗಳು ಉತ್ತರ ಐರ್ಲೆಂಡ್‌‌ ನಲ್ಲಿ ಜನಿಸಿದ ಕೆಲವರನ್ನು ಬಹಿಷ್ಕರಿಸುತ್ತದೆ.(ಉದಾಹರಣೆಗೆ, ಉತ್ತರ ಐರ್ಲೆಂಡ್ ನಲ್ಲಿ ಜನಿಸಿದ ಕೆಲ ವ್ಯಕ್ತಿಗಳ ಪೋಷಕರು UK ಅಥವಾ ಐರಿಶ್ ಪ್ರಜೆಯಾಗಿಲ್ಲದಿದ್ದರೆ ಪೌರತ್ವ ನೀಡಲು ನಿರಾಕರಿಸುತ್ತದೆ.) ಐರಿಶ್ ನಿರ್ಬಂಧವನ್ನು 2004ರ ಐರಿಶ್ ಸಂವಿಧಾನದ ಇಪ್ಪತ್ತೇಳನೆ ತಿದ್ದುಪಡಿಯ ಮೂಲಕ ಜಾರಿಗೆ ತರಲಾಯಿತು. 1971 ಹಾಗು 2006ರ ನಡುವೆ ನಡೆಸಲಾದ ಹಲವಾರು ಅಧ್ಯಯನಗಳು ಹಾಗು ಸಮೀಕ್ಷೆಗಳು, ಸಾಧಾರಣವಾಗಿ, ಉತ್ತರ ಐರ್ಲೆಂಡ್‌‌ ನ ಪ್ರಾಟೆಸ್ಟೆಂಟ್ ತಮ್ಮನ್ನು ತಾವು ಮೂಲವಾಗಿ 'ಬ್ರಿಟಿಷರೆಂದು' ಗುರುತಿಸಿಕೊಳ್ಳುತ್ತಾರೆ, ಆದರೆ ರೋಮನ್ ಕ್ಯಾಥೋಲಿಕ್ಕರು ತಮ್ಮನ್ನು ತಾವು ಮೂಲವಾಗಿ 'ಐರಿಶರೆಂದು' ಗುರುತಿಸಿಕೊಳ್ಳುತ್ತಾರೆಂದು ಸೂಚಿಸುತ್ತದೆ.[೩೫][೩೬][೩೭][೩೮][೩೯][೪೦][೪೧][೪೨] ಆದಾಗ್ಯೂ, ಇದು ಉತ್ತರ ಐರ್ಲೆಂಡ್ ನೊಳಗೆ ಜಟಿಲವಾದ ಐಡೆನ್ಟಿಟಿಗಳಿಗೆ ಕಾರಣವಾಗುವುದಿಲ್ಲ, ಹಲವರು ಪ್ರಾಥಮಿಕವಾಗಿ, ಅಥವಾ ದ್ವಿತೀಯಕ ಐಡೆನ್ಟಿಟಿಯಾಗಿ ತಮ್ಮನ್ನು ತಾವು "ಅಲ್ಸ್ಟರ್" ಅಥವಾ "ಉತ್ತರ ಐರಿಶ್" ಎಂದು ಪರಿಗಣಿಸುತ್ತಾರೆ. 2008ರ ಒಂದು ಸಮೀಕ್ಷೆಯು, 57%ನಷ್ಟು ಪ್ರಾಟೆಸ್ಟೆಂಟ್ ಗಳು ತಮ್ಮನ್ನು ತಾವು ಬ್ರಿಟಿಷರೆಂದು ಗುರುತಿಸಿಕೊಂಡಿರುವುದನ್ನು ಪತ್ತೆ ಮಾಡಿತು. ಈ ನಡುವೆ 32%ನಷ್ಟು ಜನರು ಉತ್ತರ ಐರಿಷರೆಂದು, 6%ನಷ್ಟು ಜನರು ಅಲ್ಸ್ಟರ್ ಮೂಲದವರೆಂದು ಹಾಗು 4%ನಷ್ಟು ಜನರು ಐರಿಷರೆಂದೂ ಗುರುತಿಸಿಕೊಳ್ಳುತ್ತಾರೆ. 1998ರಲ್ಲಿ ನಡೆಸಲಾದ ಮತ್ತೊಂದು ಸಮೀಕ್ಷೆಗೆ ಹೋಲಿಸಿದರೆ, ಬ್ರಿಟಿಶ್ ಅಥವಾ ಅಲ್ಸ್ಟರ್ ಎಂದು ಗುರುತಿಸಿಕೊಳ್ಳುವ ಪ್ರಾಟೆಸ್ಟೆಂಟ್ ಗಳ ಸಂಖ್ಯೆ ಕಡಿಮೆಯಾಗಿದೆ; ಹಾಗು ಉತ್ತರ ಐರಿಶ್ ಎಂದು ಗುರುತಿಸಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. 2008ರ ಸಮೀಕ್ಷೆಯು 61%ನಷ್ಟು ಕ್ಯಾಥೋಲಿಕ್ಕರು ತಮ್ಮನ್ನು ತಾವು ಐರಿಶ್ ಎಂದು ವಿವರಿಸಿಕೊಂಡರೆ, 25%ನಷ್ಟು ಜನರು ಉತ್ತರ ಐರಿಶ್ ಎಂದು, 8% ಬ್ರಿಟಿಷರೆಂದು ಹಾಗು 1% ಅಲ್ಸ್ಟರ್ ಎಂದು ಗುರುತಿಸಿಕೊಳ್ಳುತ್ತಾರೆ. ಈ ಸಂಖ್ಯೆಗಳು 1998ರ ಫಲಿತಾಂಶಗಳಿಂದಲೂ ಬಹುತೇಕ ಬದಲಾವಣೆಯಾಗಿಲ್ಲ.[೪೩][೪೪]

ಉತ್ತರ ಐರ್ಲೆಂಡ್‌‌ ನ ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ ನ ಜನಸಂಖ್ಯೆಯು 1978ರಿಂದಲೂ ವಾರ್ಷಿಕವಾಗಿ ಹೆಚ್ಚಾಗುತ್ತಿದೆ.

ಜನಾಂಗೀಯತೆ[ಬದಲಾಯಿಸಿ]

  • ಶ್ವೇತವರ್ಣೀಯರು: 1,670,988 (99.15%)
    • ಉತ್ತರ ಐರ್ಲೆಂಡ್‌‌ ನಲ್ಲಿ ಜನಿಸಿದವರು: 91.0%
    • ಇತರ UK ಅಥವಾ ಐರ್ಲೆಂಡ್‌‌ ಗಣರಾಜ್ಯದಲ್ಲಿ ಜನಿಸಿದವರು: 7.2%
    • ಐರಿಶ್ ಪ್ರವಾಸಿಗರು: 1,710 (0.10%)
  • ಏಷಿಯನ್ನರು: 6,824
    • ಚೈನೀಸ್: 4,145 (0.25%)
    • ಭಾರತೀಯರು: 1,567 (0.09%)
    • ಪಾಕಿಸ್ತಾನಿಗಳು: 666 (0.04%)
    • ಬಾಂಗ್ಲಾದೇಶಿಗಳು: 252 (0.01%)
    • ಇತರ ಏಷಿಯನ್ನರು: 194 (0.01%)
  • ಕಪ್ಪುವರ್ಣೀಯರು: 1,136
    • ಕಪ್ಪು ಆಫ್ರಿಕನ್ನರು: 494 (0.03%)
    • ಕಪ್ಪು ಕೆರೆಬಿಯನ್ನರು: 255 (0.02%)
    • ಇತರ ಕಪ್ಪುವರ್ಣೀಯರು: 387 (0.02%)
  • ಇತರ ಜನಾಂಗೀಯ ಗುಂಪುಗಳು: 1,290 (0.08%)
  • ಮಿಶ್ರಿತ ಜನರು: 3,319 (0.20%)

ಧರ್ಮ[ಬದಲಾಯಿಸಿ]

Religious background in Northern Ireland
Religion Percent
Protestant
  
53%
Roman Catholic
  
44%
Non-religion/Other
  
3%

ಉತ್ತರ ಐರ್ಲೆಂಡ್‌‌ ನ ಜನಸಂಖ್ಯೆಯು 1 ಡಿಸೆಂಬರ್ 2008ರಲ್ಲಿ 1,759,000 ಇರಬಹುದೆಂದು ಅಂದಾಜಿಸಲಾಗಿದೆ.[೪೫] 2001ರ ಜನಗಣತಿಯ ಪ್ರಕಾರ, 45.57%ರಷ್ಟು ಜನರು ಪ್ರಾಟೆಸ್ಟೆಂಟ್ ಅಥವಾ ಕ್ಯಾಥೊಲಿಕ್ ಅಲ್ಲದ ಇತರ ಪಂಥಕ್ಕೆ ಸೇರಿದವರೆಂದು ಗುರುತಿಸಲಾಗಿದೆ. (20.69% ಪ್ರೆಸ್ಬಿಟೇರಿಯನ್, 15.30% ಚರ್ಚ್ ಆಫ್ ಐರ್ಲೆಂಡ್‌‌, 3.51% ಮೆಥಾಡಿಸ್ಟ್, 6.07% ಕ್ರೈಸ್ತ/ಕ್ರೈಸ್ತ ಸಮುದಾಯಕ್ಕೆ ಸಂಬಂಧಿಸಿದ ಇತರ ಪಂಥಗಳಿಗೆ ಸೇರಿದವರಾಗಿದ್ದಾರೆ.) 40.26%ರಷ್ಟು ಜನರನ್ನು ಕ್ಯಾಥೊಲಿಕ್ ಎಂದು, 0.30%ರಷ್ಟು ಜನರು ಕ್ರೈಸ್ತಧರ್ಮವಲ್ಲದ ಇತರ ಧರ್ಮಗಳಿಗೆ ಹಾಗು 13.88%ರಷ್ಟು ಯಾವುದೇ ಧರ್ಮವನ್ನು ಹೊಂದಿರದ ಜನರೆಂದು ಗುರುತಿಸಲಾಗಿದೆ.[೪೬] ಸಮುದಾಯದ ಹಿನ್ನೆಲೆಯಲ್ಲಿ, 53.1%ರಷ್ಟು ಉತ್ತರ ಐರಿಶ್ ಜನಸಂಖ್ಯೆಯು ಪ್ರಾಟೆಸ್ಟೆಂಟ್ ಹಿನ್ನೆಲೆಯನ್ನು, 43.8%ರಷ್ಟು ಕ್ಯಾಥೊಲಿಕ್ ಹಿನ್ನೆಲೆಯನ್ನು, 0.4%ನಷ್ಟು ಕ್ರೈಸ್ತಧರ್ಮವಲ್ಲದ ಹಿನ್ನೆಲೆಯನ್ನು ಹೊಂದಿದ್ದಾರೆ ಹಾಗು 2.7%ರಷ್ಟು ಯಾವುದೇ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರದವರಿದ್ದಾರೆ.[೪೭][೪೮] ಜನಸಂಖ್ಯೆಯು 2011ರ ಹೊತ್ತಿಗೆ 1.8 ದಶಲಕ್ಷ ದಾಟಬಹುದೆಂದು ಊಹಿಸಲಾಗಿದೆ.[೪೯]

ಉತ್ತರ ಐರ್ಲೆಂಡ್‌‌ ನಲ್ಲಿ ಬಳಕೆಯಾಗುವ ಸಂಕೇತಗಳು[ಬದಲಾಯಿಸಿ]

ನಾರಿನ ಗಿಡದಲ್ಲಿ ಬಿಡುವ ಹೂವು ಉತ್ತರ ಐರ್ಲೆಂಡ್‌‌ ನಲ್ಲಿ ಚಿಹ್ನೆಯಾಗಿ ಬಳಸಲಾಗುತ್ತದೆ. <ಸೂಚಕ ಹೆಸರು="NI ಚಿಹ್ನೆ">[90]</ref>

ಉತ್ತರ ಐರ್ಲೆಂಡ್‌‌ ನಲ್ಲಿನ ಸಮುದಾಯ ವಿಭಿನ್ನ ವರ್ಣದ ಜನಮಾನಸವನ್ನು ಒಳಗೊಂಡಿದೆ. ರಾಷ್ಟ್ರದೆಡೆಗೆ ಇವರ ನಿಷ್ಠೆಯು ಕೆಲವು ಪ್ರದೇಶಗಳಲ್ಲಿ ಲಾಂದ್ರ ಕಂಬದ ಮೇಲೆ ಹಾರಾಡುವ ಧ್ವಜಗಳ ಮೂಲಕ ಕಂಡುಬರುತ್ತದೆ. ಕೆಲವು ನಿಷ್ಠಾವಂತ ಜನರಿರುವ ಪ್ರದೇಶಗಳಲ್ಲಿ ಯೂನಿಯನ್ ಧ್ವಜ ಹಾಗು ಹಿಂದಿನ ಉತ್ತರ ಐರ್ಲೆಂಡ್‌‌ ಧ್ವಜವನ್ನು ಹಾರಿಸಲಾಗುತ್ತದೆ.ಅಲ್ಲದೇ 1848ರಲ್ಲಿ ಐರ್ಲೆಂಡ್ ನ ಧ್ವಜವೆಂದು ಗಣತಂತ್ರವಾದಿಗಳು ಹಾರಿಸಿದ ತ್ರಿವರ್ಣ ಧ್ವಜವು, ಕೆಲವು ಗಣತಂತ್ರವಾದಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಅಂಚುಕಲ್ಲುಗಳನ್ನೂ ಸಹ ಕೆಂಪು-ಬಿಳಿ-ನೀಲಿ ಅಥವಾ ಹಸಿರು-ಬಿಳಿ-ಕಿತ್ತಳೆ(ಅಥವಾ ಹೊಂಬಣ್ಣ) ಬಣ್ಣವನ್ನು ಬಳಿಯಲಾಗಿರುತ್ತದೆ, ಇದು ಸ್ಥಳೀಯ ಜನರು ಯೂನಿಯನಿಸ್ಟ್/ನಿಷ್ಠಾವಂತರಿಗೆ ಬೆಂಬಲ ನೀಡುತ್ತಾರೋ ಅಥವಾ ರಾಷ್ಟ್ರೀಯತಾವಾದಿ/ಗಣತಂತ್ರವಾದಕ್ಕೆ ಬೆಂಬಲ ನೀಡುತ್ತಾರೋ ಎಂಬುದರ ಮೇಲೆ ಅವಲಂಬಿತವಾಗಿದೆ.[೫೦] ಯೂನಿಯನ್ ಧ್ವಜ ಅಧಿಕೃತ ಧ್ವಜವಾಗಿದೆ.[೫೧] ಉತ್ತರ ಐರ್ಲೆಂಡ್‌‌ ಧ್ವಜವು, ಉತ್ತರ ಐರ್ಲೆಂಡ್‌‌ ನ ಹಿಂದಿನ ಸರ್ಕಾರಿ ಧ್ವಜವಾಗಿತ್ತು.(ಇದು "ಅಲ್ಸ್ಟರ್ ಧ್ವಜ" ಅಥವಾ "ರೆಡ್ ಹ್ಯಾಂಡ್ ಫ್ಲ್ಯಾಗ್" ಎಂದೂ ಸಹ ಕರೆಯಲ್ಪಡುತ್ತದೆ.) ಇದು ಹಿಂದಿನ ಉತ್ತರ ಐರ್ಲೆಂಡ್‌‌ ನ ಸಂಸತ್ತಿನ ಅಧಿಕಾರವನ್ನು ಆಧರಿಸಿದೆ, ಹಾಗು ಇದನ್ನು ಅಧಿಕೃತವಾಗಿ ಉತ್ತರ ಐರ್ಲೆಂಡ್‌‌ ನ ಸರ್ಕಾರ ಹಾಗು ಅದರ ಏಜೆನ್ಸಿಗಳು 1953 ಹಾಗು 1972ರ ನಡುವೆ ಬಳಕೆ ಮಾಡುತ್ತಿದ್ದವು. 1972ರಿಂದೀಚೆಗೆ, ಇದಕ್ಕೆ ಯಾವುದೇ ಅಧಿಕೃತ ಸ್ಥಾನಮಾನಗಳಿಲ್ಲ. ಉತ್ತರ ಐರ್ಲೆಂಡ್‌‌ ನಲ್ಲಿ UK ಧ್ವಜಗಳ ನೀತಿಯು ಈ ರೀತಿಯಾಗಿ ನಿರೂಪಿಸುತ್ತದೆ: ಫ್ಲ್ಯಾಗ್ಸ್ ರೆಗ್ಯುಲೆಶನ್ ನ ಅಡಿಯಲ್ಲಿ ಅಲ್ಸ್ಟರ್ ಧ್ವಜ ಹಾಗು St. ಪ್ಯಾಟ್ರಿಕ್ ನ ಶಿಲುಬೆ ಮುದ್ರೆಗೆ ಯಾವುದೇ ಸ್ಥಾನಮಾನವಿಲ್ಲ, ಇವುಗಳನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸುವುದಕ್ಕೆ ಅನುಮತಿಯಿಲ್ಲ. [೫೨] ಯೂನಿಯನ್ ಧ್ವಜ ಹಾಗು ಅಲ್ಸ್ಟರ್ ಧ್ವಜವನ್ನು ಮುಖ್ಯವಾಗಿ ಯೂನಿಯನಿಸ್ಟ್ ಗಳು ಬಳಕೆ ಮಾಡುತ್ತಿದ್ದರು.[೫೩] ಐರಿಶ್ ರಗ್ಬಿ ಫುಟ್ಬಾಲ್ ಯೂನಿಯನ್ ಹಾಗು ಚರ್ಚ್ ಆಫ್ ಐರ್ಲೆಂಡ್ St. ಪ್ಯಾಟ್ರಿಕ್ ನ ಧ್ವಜವನ್ನು ಬಳಕೆಮಾಡುತ್ತವೆ. ಸಂಪೂರ್ಣ ದ್ವೀಪವು UKಯ ಭಾಗವಾಗಿದ್ದಾಗ ಐರ್ಲೆಂಡ್ ಅನ್ನು ಪ್ರತಿನಿಧಿಸಲು ಇದನ್ನು ಬಳಸಲಾಗುತ್ತಿತ್ತು ಹಾಗು ಕೆಲ ಬ್ರಿಟಿಶ್ ಸೇನಾ ದಳಗಳು ಇದನ್ನು ಬಳಸುತ್ತಿದ್ದವು. ವಿದೇಶಿ ಧ್ವಜಗಳೂ ಸಹ ಕಂಡುಬರುತ್ತವೆ, ಉದಾಹರಣೆಗೆ ಪ್ಯಾಲೇಸ್ಟೇನಿಯನ್ ಧ್ವಜಗಳು ಕೆಲ ರಾಷ್ಟ್ರೀಯತಾವಾದಿ ಪ್ರದೇಶಗಳಲ್ಲಿ ಹಾಗು ಇಸ್ರೇಲಿ ಧ್ವಜಗಳು ಕೆಲವು ಯೂನಿಯನಿಸ್ಟ್ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇದು ಸ್ಕಾಟಿಷ್ ತಂಡಗಳೊಂದಿಗೆ ಪಂದ್ಯಗಳನ್ನಾಡುವ ಸಮಯದಲ್ಲೂ ಕಂಡುಬರುತ್ತದೆ. ಯುನೈಟೆಡ್ ಕಿಂಗ್ಡಮ್ ನ ರಾಷ್ಟ್ರಗೀತೆ "ಗಾಡ್ ಸೇವ್ ದಿ ಕ್ವೀನ್" ಹಾಡನ್ನು ಸಾಮಾನ್ಯವಾಗಿ ಉತ್ತರ ಐರ್ಲೆಂಡ್ ನಲ್ಲಿ ಸರ್ಕಾರಿ ಸಮಾರಂಭಗಳಲ್ಲಿ ವಾದ್ಯಗಳ ಮೂಲಕ ನುಡಿಸಲಾಗುತ್ತದೆ. ಕಾಮನ್ವೆಲ್ತ್ ಪಂದ್ಯಗಳಲ್ಲಿ, ಉತ್ತರ ಐರ್ಲೆಂಡ್, ಅಲ್ಸ್ಟರ್ ಧ್ವಜವನ್ನು ಬಳಸುತ್ತದೆ ಹಾಗು ಲಂಡನ್ ಡೆರ್ರಿ ಏರ್ (ಸಾಧಾರಣವಾಗಿ ಡ್ಯಾನಿ ಬಾಯ್ ಎಂದು ಪದ್ಯವನ್ನು ರಚಿಸಲಾಗಿರುತ್ತದೆ)ಅನ್ನು ತನ್ನ ರಾಷ್ಟ್ರಗೀತೆಯಾಗಿ ಬಳಸುತ್ತದೆ.[೫೪][೫೫] ಉತ್ತರ ಐರ್ಲೆಂಡ್‌‌ ಫುಟ್ಬಾಲ್ ತಂಡವೂ ಸಹ ಅಲ್ಸ್ಟರ್ ಧ್ವಜವನ್ನು ಬಳಕೆ ಮಾಡುತ್ತದೆ. ಅಲ್ಲದೇ ತನ್ನ ರಾಷ್ಟ್ರಗೀತೆಯಾಗಿ "ಗಾಡ್ ಸೇವ್ ದಿ ಕ್ವೀನ್" ನನ್ನು ಬಳಸಿಕೊಳ್ಳುತ್ತದೆ.[೫೬] ಗೇಲಿಕ್ ಅಥ್ಲೆಟಿಕ್ ಅಸೋಸಿಯೇಶನ್ ನ ಪ್ರಮುಖ ಪಂದ್ಯಗಳಿಗೆ ಐರ್ಲೆಂಡ್ ಗಣರಾಜ್ಯದ ರಾಷ್ಟ್ರಗೀತೆಯೊಂದಿಗೆ ಚಾಲನೆ ನೀಡಲಾಗುತ್ತದೆ, ಅಮ್ಹ್ರನ್ ನ ಬಹ್ಫಿಯನ್ನ್ (ಯೋಧನ ಹಾಡು)", ಈ ಗೀತೆಯನ್ನು ಕೆಲವು ಇತರ ಎಲ್ಲ-ಐರ್ಲೆಂಡ್ ಕ್ರೀಡಾ ಸಂಸ್ಥೆಗಳೂ ಸಹ ಬಳಸುತ್ತವೆ.[೫೭] 1995ರಿಂದೀಚೆಗೆ, ಐರ್ಲೆಂಡ್ ರಗ್ಬಿ ಯೂನಿಯನ್ ತಂಡವು ವಿಶೇಷವಾಗಿ ರಚಿಸಲಾದ ಹಾಡು, "ಐರ್ಲೆಂಡ್'ಸ್ ಕಾಲ್" ನ್ನು ತಂಡದ ಗೀತೆಯಾಗಿ ಬಳಸುತ್ತಿದೆ. ಐರ್ಲೆಂಡ್ ಗಣರಾಜ್ಯದ ರಾಷ್ಟ್ರಗೀತೆಯನ್ನು, ಆತಿಥೇಯ ರಾಷ್ಟ್ರದ ಮೇಲಿನ ಸೌಜನ್ಯಕ್ಕಾಗಿ ಡಬ್ಲಿನ್ ನಲ್ಲಿ ನಡೆಯುವ ಪಂದ್ಯಗಳಲ್ಲೂ ಸಹ ನುಡಿಸಲಾಗುತ್ತದೆ.[೫೮] ಉತ್ತರ ಐರಿಶ್ ಭಿತ್ತಿಚಿತ್ರಗಳು, ಉತ್ತರ ಐರ್ಲೆಂಡ್‌‌ ನ ಪ್ರಖ್ಯಾತ ಗುಣಲಕ್ಷಣಗಳಾಗಿವೆ. ಇದು ಹಿಂದಿನ ಹಾಗು ಇಂದಿನ ವಿಭಜನೆಗಳನ್ನು ನಿರೂಪಿಸುವುದರ ಜೊತೆಗೆ ಶಾಂತಿ ಹಾಗು ಸಾಂಸ್ಕೃತಿಕ ವೈವಿಧ್ಯತೆ, ಎರಡನ್ನೂ ಸಹ ಸಾಕ್ಷ್ಯಪೂರ್ವಕವಾಗಿ ಪ್ರದರ್ಶಿಸುತ್ತದೆ. 1970ರಿಂದೀಚೆಗೆ ಸರಿಸುಮಾರು 2,000 ಭಿತ್ತಿಚಿತ್ರಗಳು ಉತ್ತರ ಐರ್ಲೆಂಡ್‌‌ ನಲ್ಲಿ ದಾಖಲುಗೊಂಡಿವೆ(ಕಾಂಫ್ಲಿಕ್ಟ್ ಆರ್ಚಿವ್ ಆನ್ ದಿ ಇಂಟರ್ನೆಟ್/ಮ್ಯೂರಲ್ಸ್ ಅನ್ನು ನೋಡಿ).

ಭೂವಿವರಣೆ ಹಾಗೂ ಹವಾಮಾನ[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ ನ ನಕ್ಷೆ

ಉತ್ತರ ಐರ್ಲೆಂಡ್‌‌, ಕಳೆದ ಹಿಮಯುಗದಿಂದ ಹಾಗು ಹಿಂದಿನ ಹಲವಾರು ಸಂದರ್ಭಗಳಿಂದ ಬಹುತೇಕವಾಗಿ ಹಿಮದ ಪದರದಿಂದ ಮುಚ್ಚಲ್ಪಟ್ಟಿದೆ, ಈ ಪರಂಪರೆಯನ್ನು, ಕೌಂಟಿಗಳಾದ ಫೆರ್ಮನಗ್ಹ್, ಅರ್ಮಗ್ಹ್, ಆಂಟ್ರಿಂ ಹಾಗು ಅದರಲ್ಲೂ ವಿಶೇಷವಾಗಿ ಡೌನ್ ಕೌಂಟಿಯಲ್ಲಿರುವ ಉರುಳೆದಿಬ್ಬಗಳ ವ್ಯಾಪಕ ಹರವಿನಿಂದ ಕಾಣಬಹುದು. ಉತ್ತರ ಐರ್ಲೆಂಡ್‌‌ ಭೂವಿವರಣೆಯ ಪ್ರಧಾನ ವಿಷಯವೆಂದರೆ 151 square miles (391 km2)ಯಲ್ಲಿರುವ ಲೌಗ್ಹ್ ನೆಯಗ್ಹ್, ಇದು ಐರ್ಲೆಂಡ್‌ ದ್ವೀಪ ಹಾಗು ಬ್ರಿಟಿಶ್ ಐಲ್ಸ್‌ ಎರಡಕ್ಕೂ ಸೇರಿರುವ ಅತ್ಯಂತ ದೊಡ್ಡ ತಾಜಾನೀರಿನ ಸರೋವರವಾಗಿದೆ. ಎರಡನೇ ಅತ್ಯಂತ ವಿಸ್ತಾರವಾದ ಸರೋವರ ವ್ಯವಸ್ಥೆಯು ಫೆರ್ಮನಗ್ಹ್ ನ ಲೋಯರ್ ಹಾಗು ಅಪ್ಪರ್ ಲೌಗ್ಹ್ ಎರ್ನೆಯಲ್ಲಿ ಕಂಡುಬರುತ್ತದೆ. ಉತ್ತರ ಆಂಟ್ರಿಂ ಕರಾವಳಿಗೆ ಅನತಿದೂರದಲ್ಲಿರುವ ರಾತ್ಲಿನ್ ಉತ್ತರ ಐರ್ಲೆಂಡ್‌‌ ನ ಅತ್ಯಂತ ದೊಡ್ಡ ದ್ವೀಪವಾಗಿದೆ. ಸ್ಟ್ರಾಂಗ್ಫೋರ್ಡ್ ಲೌಗ್ಹ್, ಬ್ರಿಟಿಶ್ ಐಲ್ಸ್ ನ ಅತ್ಯಂತ ವಿಶಾಲ ಕಡಲಚಾಚಾಗಿದೆ, ಇದು 150 km2 (58 sq mi)ರಷ್ಟು ಪ್ರದೇಶವನ್ನು ವ್ಯಾಪಿಸಿದೆ. ವ್ಯಾಪಕವಾದ ಚಿನ್ನದ ನಿಕ್ಷೇಪ, ಗ್ರ್ಯಾನೈಟ್ ಕಲ್ಲು, ಮೌರ್ನೆ ಪರ್ವತಗಳು ಹಾಗು ಬಸಾಲ್ಟ್ ಆಂಟ್ರಿಂ ಪ್ರಸ್ಥಭೂಮಿ, ಜೊತೆಗೆ ದಕ್ಷಿಣ ಅರ್ಮಗ್ಹ್ ನ ಸಣ್ಣ ಶ್ರೇಣಿಗಳು ಹಾಗು ಫೆರ್ಮನಗ್ಹ್-ಟೈರೋನ್ ಗಡಿಯುದ್ದಕ್ಕೂ ಸ್ಪೆರ್ರಿನ್ ಪರ್ವತಗಳಲ್ಲಿ ಗಣನೀಯ ಪ್ರಮಾಣದ ಒಳಪ್ರದೇಶಗಳಿವೆ.(ಇದು ಕಾಲೇಡೋನಿಯನ್ ಬಾಗು ಪರ್ವತಗಳ ವಿಸ್ತರಣೆಯಾಗಿದೆ). ಆದರೆ ಪರ್ವತಗಳಲ್ಲಿ ಯಾವುದೂ ಅಂತಹ ವಿಶೇಷವಾಗಿ ಎತ್ತರವಾಗಿಲ್ಲ, ಜೊತೆಗೆ ಆಕರ್ಷಕ ಮೌರ್ನೆಸ್ ನಲ್ಲಿರುವ ಸ್ಲಿಯೇವೆ ಡೋನಾರ್ಡ್ 849 metres (2,785 ft)ರಷ್ಟು ಎತ್ತರದಲ್ಲಿದೆ, ಇದು ಉತ್ತರ ಐರ್ಲೆಂಡ್ ನ ಅತ್ಯಂತ ಎತ್ತರದ ಸ್ಥಳವಾಗಿದೆ. ಕೇವ್ ಹಿಲ್ ಬೆಲ್‌ಫಾಸ್ಟ್ ನ ಅತ್ಯಂತ ಪ್ರಸಿದ್ಧ ಶಿಖರವಾಗಿದೆ. ಆಂಟ್ರಿಂ ಪ್ರಸ್ಥಭೂಮಿಯನ್ನು ಸೃಷ್ಟಿಸಿದ ಜ್ವಾಲಾಮುಖಿಯು, ಉತ್ತರ ಆಂಟ್ರಿಂ ಕರಾವಳಿಯಲ್ಲಿರುವ ಜೈಂಟ್'ಸ್ ಕಾಸ್ವೇಯ ವಿಲಕ್ಷಣವಾದ ಜ್ಯಾಮಿತೀಯ ಸ್ತಂಭಗಳನ್ನೂ ಸಹ ರೂಪಿಸಿತು. ಉತ್ತರ ಆಂಟ್ರಿಂ ನಲ್ಲಿ ಕ್ಯಾರಿಕ್-ಏ-ರೆಡೆ ಹಗ್ಗ ಸೇತುವೆ, ಮುಸ್ಸೆನ್ಡೆನ್ ದೇವಾಲಯ ಹಾಗು ಗ್ಲೆನ್ಸ್ ಆಫ್ ಆಂಟ್ರಿಂ ಸಹ ಇದೆ.

ದಿ ಜೈಂಟ್'ಸ್ ಕಾಸ್ವೇ, ಕೌಂಟಿ ಆಂಟ್ರಿಂ

ಲೋಯರ್ ಹಾಗು ಅಪ್ಪರ್ ಬಾನ್ನ್ ನದಿ, ಫಾಯ್ಲೇ ನದಿ ಹಾಗು ಬ್ಲ್ಯಾಕ್ ವಾಟರ್ ನದಿ, ವ್ಯಾಪಕವಾದ ಫಲವತ್ತಾದ ತಗ್ಗು ಪ್ರದೇಶಗಳನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ ಅತ್ಯುತ್ತಮವಾದ ಬೇಸಾಯ ಯೋಗ್ಯ ಭೂಮಿಯು ಉತ್ತರ ಹಾಗು ಪೂರ್ವ ಡೌನ್ ನಲ್ಲಿ ಕಂಡುಬರುತ್ತದೆ. ಆದಾಗ್ಯೂ ಹೆಚ್ಚಿನ ಪರ್ವತ ಪ್ರದೇಶವು ಅಂಚಿನಲ್ಲಿದ್ದು ಪಶು ಸಂಗೋಪನೆಗೆ ಯೋಗ್ಯವಾಗಿದೆ. ಲಗಾನ್ ನದಿಯ ಕಣಿವೆಯು ಬೆಲ್‌ಫಾಸ್ಟ್ ನ ಪ್ರಾಬಲ್ಯ ಪಡೆದಿದೆ, ಇದರ ಪಟ್ಟಣ ಪ್ರದೇಶವು ಉತ್ತರ ಐರ್ಲೆಂಡ್ ನ ಮೂರನೇ ಒಂದು ಭಾಗಕ್ಕೂ ಅಧಿಕ ಜನಸಂಖ್ಯೆಯನ್ನು ಒಳಗೊಂಡಿರುವುದರ ಜೊತೆಗೆ ಲಗಾನ್ ಕಣಿವೆ ಹಾಗು ಬೆಲ್‌ಫಾಸ್ಟ್ ಲೌಗ್ಹ್ ನ ಎರಡೂ ದಂಡೆಗಳಲ್ಲಿ ಭಾರಿ ನಗರೀಕರಣ ಹಾಗು ಕೈಗಾರಿಕೀಕರಣ ನಡೆದಿದೆ.

ಕಾರ್ರಿಕ್ಕ್-ಏ-ರೆಡೆ ರೋಪ್ ಬ್ರಿಡ್ಜ್

ಸಂಪೂರ್ಣ ಉತ್ತರ ಐರ್ಲೆಂಡ್ ನಲ್ಲಿ ಸಮಶೀತೋಷ್ಣದ ಸಮುದ್ರತೀರದ ಹವಾಮಾನವಿದೆ, ಪೂರ್ವಕ್ಕಿಂತ ಹೆಚ್ಚಾಗಿ ಪಶ್ಚಿಮದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ, ಆದಾಗ್ಯೂ ಮೋಡ ಕವಿದ ವಾತಾವರಣವು ಪ್ರದೇಶದುದ್ದಕ್ಕೂ ಸತತವಾಗಿ ಕಂಡುಬರುತ್ತದೆ. ವರ್ಷದ ಎಲ್ಲ ಅವಧಿಗಳಲ್ಲಿ ಹವಾಮಾನದ ಬಗ್ಗೆ ಊಹೆ ಮಾಡಲಾಗುವುದಿಲ್ಲ, ಹಾಗು ಋತುಮಾನಗಳು ವಿಭಿನ್ನವಾಗಿದ್ದರೂ ಸಹ, ಯುರೋಪ್ ಒಳನಾಡು ಅಥವಾ ಉತ್ತರ ಅಮೆರಿಕದ ಪಶ್ಚಿಮ ಕರಾವಳಿಗಿಂತ ಹೆಚ್ಚಾಗಿ ಇವುಗಳ ಬಗ್ಗೆ ಗಮನಾರ್ಹವಾಗಿ ಕಡಿಮೆ ಪ್ರಮಾಣದಲ್ಲಿ ಊಹೆ ಮಾಡಲಾಗುತ್ತದೆ. ಬೆಲ್‌ಫಾಸ್ಟ್ ನ ಸರಾಸರಿ ಗರಿಷ್ಠ ಹಗಲು ಸಮಯವು ಜನವರಿಯಲ್ಲಿ 6.5 °C (43.7 °F) ಹಾಗು ಜುಲೈನಲ್ಲಿ 17.5 °C (63.5 °F)ರಷ್ಟಿರುತ್ತದೆ. ತೇವದ ವಾತಾವರಣ ಹಾಗು 16ನೇ ಹಾಗು 17ನೇ ಶತಮಾನಗಳಲ್ಲಿ ವ್ಯಾಪಕವಾದ ಅರಣ್ಯ ನಾಶದಿಂದಾಗಿ ಈ ಪ್ರದೇಶವು ಸಮೃದ್ಧವಾದ ಹಸಿರು ಹುಲ್ಲುಗಾವಲಿನಿಂದ ಕೂಡಿದೆ. ಅತ್ಯಧಿಕ ಗರಿಷ್ಠ ತಾಪಮಾನ : 30.8 °C ಗ್ಯಾರಿಸನ್, ಫೆರ್ಮನಗ್ಹ್ ಕೌಂಟಿ ಸಮೀಪದ ಕ್ನೋಕ್ಕರೇವನ್ ನಲ್ಲಿ 30 ಜೂನ್ 1976ರಲ್ಲಿ ಹಾಗು 12 ಜುಲೈ 1983ರಲ್ಲಿ ಬೆಲ್‌ಫಾಸ್ಟ್ ನಲ್ಲಿ ಕಂಡುಬಂದಿತು. ಅತ್ಯಂತ ಕಡಿಮೆ ತಾಪಮಾನ : -17.5 °C ಬಾನ್ಬ್ರಿಡ್ಜ್ ಡೌನ್ ಕೌಂಟಿ ಸಮೀಪದ ಮಗ್ಹೇರಲ್ಲಿಯಲ್ಲಿ 1 ಜನವರಿ 1979ರಲ್ಲಿ ಕಂಡುಬಂದಿತು.

Belfastದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 13
(55)
14
(57)
19
(66)
21
(70)
26
(79)
28
(82)
29
(84)
28
(82)
26
(79)
21
(70)
16
(61)
14
(57)
29
(84)
ಅಧಿಕ ಸರಾಸರಿ °C (°F) 6
(43)
7
(45)
9
(48)
12
(54)
15
(59)
18
(64)
18
(64)
18
(64)
16
(61)
13
(55)
9
(48)
7
(45)
12
(54)
ಕಡಮೆ ಸರಾಸರಿ °C (°F) 2
(36)
2
(36)
3
(37)
4
(39)
6
(43)
9
(48)
11
(52)
11
(52)
9
(48)
7
(45)
4
(39)
3
(37)
6
(43)
Record low °C (°F) −13
(9)
−12
(10)
−12
(10)
−4
(25)
−3
(27)
−1
(30)
4
(39)
1
(34)
−2
(28)
−4
(25)
−6
(21)
−11
(12)
−13
(9)
Average precipitation mm (inches) 80
(3.15)
52
(2.05)
50
(1.97)
48
(1.89)
52
(2.05)
68
(2.68)
94
(3.7)
77
(3.03)
80
(3.15)
83
(3.27)
72
(2.83)
90
(3.54)
846
(33.31)
Source: [೫೯]

ಪ್ರಾಂತಗಳು[ಬದಲಾಯಿಸಿ]

ಉತ್ತರ ಐರ್ಲೆಂಡ್‌‌, ಆರು ಐತಿಹಾಸಿಕ ಪ್ರಾಂತಗಳನ್ನು ಒಳಗೊಂಡಿದೆ: ಕೌಂಟಿ ಆಂಟ್ರಿಂ, ಕೌಂಟಿ ಅರ್ಮಗ್ಹ್, ಕೌಂಟಿ ಡೌನ್, ಕೌಂಟಿ ಫೆರ್ಮನಗ್ಹ್, ಕೌಂಟಿ ಲಂಡನ್ ಡೆರ್ರೀ,[೬೦] ಕೌಂಟಿ ಟೈರೋನ್

ಸೈಲೆಂಟ್ ವ್ಯಾಲಿ ಜಲಾಶಯ, ಕೌಂಟಿ ಡೌನ್

ಈ ಪ್ರಾಂತಗಳನ್ನು ಸ್ಥಳೀಯ ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಲಾಗುತ್ತಿಲ್ಲ; ಬದಲಿಗೆ ವಿವಿಧ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, ಮೂಲತಃ ಪ್ರಾಂತಗಳಿಂದಲೇ ಹೆಸರನ್ನು ಪಡೆದುಕೊಂಡಿರುವ ಇಪ್ಪತ್ತಾರು ಉತ್ತರ ಐರ್ಲೆಂಡ್‌‌ ಜಿಲ್ಲೆಗಳಿವೆ. ಫೆರ್ಮನಗ್ಹ್ ಜಿಲ್ಲಾಡಳಿತ ಮಂಡಳಿಯು ತನ್ನ ಹೆಸರನ್ನು ಹೊಂದಿರುವ ಪ್ರಾಂತದ ಗಡಿಗೆ ಸಮೀಪದಲ್ಲಿದೆ. ಮತ್ತೊಂದು ಕಡೆಯಲ್ಲಿ ಕಾಲೇರೈನ್ ಬರೋ ಮಂಡಳಿಯು, ಕೌಂಟಿ ಲಂಡನ್ ಡೆರ್ರಿ ಯಲ್ಲಿ ಕಾಲೇರೈನ್ ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.

ಲೋಯರ್ ಲೌಗ್ಹ್ ಎರ್ನೆ, ಕೌಂಟಿ ಫೆರ್ಮನಗ್ಹ್

ಸರ್ಕಾರಿ ಉದ್ದೇಶಗಳಿಗೆ ಕೌಂಟಿಗಳನ್ನು ಪ್ರಸಕ್ತದಲ್ಲಿ ಬಳಸದಿದ್ದರೂ, ಅವುಗಳು ಸ್ಥಳಗಳನ್ನು ವಿವರಿಸುವ ಜನಪ್ರಿಯ ಮಾರ್ಗವಾಗಿ ಹಾಗೆಯೇ ಉಳಿದಿವೆ. ಐರಿಶ್ ಪಾಸ್ ಪೋರ್ಟ್ ಗೆ ಅರ್ಜಿ ಹಾಕಬೇಕಾದಾಗ ಮಾತ್ರ ಇದನ್ನು ಅಧಿಕೃತವಾಗಿ ಬಳಸಲಾಗುತ್ತದೆ, ಇದರಲ್ಲಿ ಅರ್ಜಿ ಸಲ್ಲಿಸುವವರು ತಾವು ಜನಿಸಿದ ಕೌಂಟಿಯನ್ನು ನಮೂದಿಸಬೇಕಾಗುತ್ತದೆ. ಪ್ರಾಂತ ಹೆಸರು ಐರಿಶ್ ಹಾಗು ಇಂಗ್ಲಿಷ್ ಎರಡರ ಪಾಸ್ ಪೋರ್ಟ್ ಮಾಹಿತಿ ಪುಟದಲ್ಲಿ ಕಂಡುಬರುತ್ತದೆ, ಇದಕ್ಕೆ ವ್ಯತಿರಿಕ್ತವಾಗಿ ಯುನೈಟೆಡ್ ಕಿಂಗ್ಡಮ್ ನ ಪಾಸ್ ಪೋರ್ಟ್ ಮಾಹಿತಿ ಪುಟದಲ್ಲಿ, ಜನಿಸಿದ ಪಟ್ಟಣ ಅಥವಾ ನಗರದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಗೇಲಿಕ್ ಅಥ್ಲೆಟಿಕ್ ಅಸೋಸಿಯೇಶನ್ ಇಂದಿಗೂ ಕೌಂಟಿಗಳನ್ನು ತನ್ನ ಸಂಸ್ಥೆಯ ಪ್ರಾಥಮಿಕ ಆಧಾರವಾಗಿ ಬಳಸಿಕೊಳ್ಳುತ್ತದೆ ಹಾಗು ಪ್ರತಿ GAA ಕೌಂಟಿಯ ಪ್ರಾತಿನಿಧಿಕ ತಂಡಗಳ ಪ್ರದೇಶವನ್ನು ಹೊಂದಿದೆ.

ಪ್ರಾಂತದ ಗಡಿಗಳು ಇಂದಿಗೂ ಆರ್ಡ್ನೆನ್ಸ್ ಸರ್ವೇ ಆಫ್ ನಾರ್ದನ್ ಐರ್ಲೆಂಡ್ ನಕ್ಷೆಗಳಲ್ಲಿ ಹಾಗು ಫಿಲ್ಲಿಪ್ಸ್ ಸ್ಟ್ರೀಟ್ ಭೂಪಟಗಳಲ್ಲಿ ಕಂಡುಬರುತ್ತವೆ. ಅಧಿಕೃತ ಬಳಕೆಯು ಕೊನೆಗೊಂಡ ನಂತರ, ಪ್ರಾಂತದ ಗಡಿಗಳ ಸಮೀಪವಿರುವ ಸುತ್ತಮುತ್ತಲಿನ ಪಟ್ಟಣಗಳು ಹಾಗು ನಗರಗಳ ಬಗ್ಗೆ ಸಾಮಾನ್ಯವಾಗಿ ತಪ್ಪು ಗ್ರಹಿಕೆಗಳು ಉಂಟಾಗುತ್ತವೆ. ಉದಾಹರಣೆಗೆ, ಕೌಂಟಿ ಡೌನ್ ಹಾಗು ಕೌಂಟಿ ಆಂಟ್ರಿಂ ನಡುವೆ ವಿಭಜನೆಯಾಗಿರುವ ಬೆಲ್‌ಫಾಸ್ಟ್ ಹಾಗು ಲಿಸ್ಬರ್ನ್(ಆದಾಗ್ಯೂ, ಎರಡೂ ನಗರಗಳ ಹೆಚ್ಚಿನ ಜನರು ಆಂಟ್ರಿಂ ನಲ್ಲಿ ನೆಲೆಸಿರುತ್ತಾರೆ).

ಬೆಲ್‌ಫಾಸ್ಟ್‌ ಸಿಟಿ ಹಾಲ್

ನಗರಗಳು[ಬದಲಾಯಿಸಿ]

ಉತ್ತರ ಐರ್ಲೆಂಡ್ ನಲ್ಲಿ ನಗರದ ಸ್ಥಾನಮಾನವನ್ನು ಗಳಿಸಿರುವ ಐದು ಪ್ರಮುಖ ನೆಲೆಗಳಲ್ಲಿ ಈ ಕೆಳಕಂಡ ನಗರಗಳು ಸೇರಿವೆ:

  • ಅರ್ಮಗ್ಹ್
  • ಬೆಲ್‌ಫಾಸ್ಟ್‌
  • ಡೆರ್ರಿ
  • ಲಿಸ್ಬರ್ನ್
  • ನೆವ್ರಿ
ಕಾರ್ರಿಕ್ಕ್ ಫೆರ್ಗುಸ್ ಕೋಟೆಮನೆ - 1177ರಲ್ಲಿ ನಿರ್ಮಿಸಲಾದ ನಾರ್ಮನ್ ಕೋಟೆ

ಪಟ್ಟಣಗಳು ಹಾಗು ಹಳ್ಳಿಗಾಡು ಪ್ರದೇಶಗಳು[ಬದಲಾಯಿಸಿ]

ದೋನಘಡೀ ಬಂದರು ಹಾಗು ಬೆಳಕುಮನೆ

ಈ ಕೆಳಗೆ ನೀಡಲಾಗಿರುವುದು ಉತ್ತರ ಐರ್ಲೆಂಡ್‌‌ ನಲ್ಲಿರುವ ಪಟ್ಟಣಗಳ ಪಟ್ಟಿ.(ಕಡೆ ಪಕ್ಷ 4,500 ನಿವಾಸಿಗಳನ್ನುಳ್ಳ ನೆಲೆಗಳು).

  • ಅಂಟ್ರಿಮ್
  • ಬ್ಯಾಲಿಕ್ಯಾಸಲ್, ಬ್ಯಾಲಿಕ್ಲೇರ್, ಬ್ಯಾಲಿಮೇನ, ಬ್ಯಾಲಿಮನಿ, ಬ್ಯಾಲಿನಹಿಂಚ್, ಬ್ಯಾನ್ಬ್ರಿಡ್ಜ್, ಬಂಗೋರ್
  • ಕ್ಯಾರಿಕ್ಫೆರ್ಗುಸ್, ಕ್ಯಾರಿಡಫ್ಫ್, ಕೋಲಿಸ್ಲ್ಯಾಂಡ್, ಕೊಲೆರೈನ್, ಕೊಂಬೆರ್, ಕುಕ್ಸ್ಟೌನ್, ಕ್ರೈಗ್ವೊನ್
  • ದೋನಘಡೀ, ಡೌನ್ ಪ್ಯಾಟ್ರಿಕ್, ಡ್ರೋಮೋರ್, ಡನ್ಡೊನಾಲ್ಡ್, ಡಂಗನಾನ್
  • ಎನ್ನಿಸ್ಕಿಲ್ಲೇನ್
  • ಹಾಲಿವುಡ್
  • ಕಿಲ್ಕೀಲ್
  • ಲರ್ನೆ, ಲಿಮವಾಡಿ, ಲುರ್ಗನ್
  • ಮಗ್ಹೆರಫೆಲ್ಟ್
  • ನ್ಯೂಕ್ಯಾಸಲ್, ನ್ಯೂಟೌನ್ ಅಬ್ಬೆ, ನ್ಯೂಟೌನ್ಆರ್ಡ್ಸ್
  • ಒಮಗ್ಹ್
  • ಪೋರ್ಟಡೌನ್, ಪೋರ್ಟ್ರಶ್, ಪೋರ್ಟ್ಸ್ಟೇವರ್ಟ್
  • ರಾನ್ಡಲ್ಸ್ ಟೌನ್
  • ಸ್ಟ್ರಬಾನೆ
  • ವಾರ್ರೆನ್ಪಾಯಿಂಟ್

ಕಾನೂನು[ಬದಲಾಯಿಸಿ]

ಉತ್ತರ ಐರ್ಲೆಂಡ್ ನ ಕಾನೂನು ಹಾಗು ಆಡಳಿತಾತ್ಮಕ ವ್ಯವಸ್ಥೆಗಳು, ಯುನೈಟೆಡ್ ಕಿಂಗ್ಡಮ್ ನ ವಿಭಜನಾ ಪೂರ್ವ ವ್ಯವಸ್ಥೆಗಳಿಂದ ಹುಟ್ಟಿಕೊಂಡಿವೆ. ಜೊತೆಗೆ ಇದನ್ನು 1921ರಿಂದ 1972ರವರೆಗಿನ ಪರಂಪರಾಗತ ಆಡಳಿತ ವ್ಯವಸ್ಥೆಯಿಂದ ಅಭಿವೃದ್ಧಿಪಡಿಸಲಾಗಿದೆ. 1972ರಿಂದ 1999ರವರೆಗೆ, (1974ರಲ್ಲಿ ಸ್ವಲ್ಪ ಕಾಲಾವಧಿಯನ್ನು ಹೊರತುಪಡಿಸಿ) ಉತ್ತರ ಐರ್ಲೆಂಡ್‌‌ ಗೆ ಸಂಬಂಧಿಸಿದ ಕಾನೂನು ಹಾಗು ಆಡಳಿತವನ್ನು ವೆಸ್ಟ್ ಮಿನಿಸ್ಟರ್ ನಿಂದ ನೇರವಾಗಿ ನಿರ್ವಹಣೆ ಮಾಡಲಾಗುತ್ತಿತ್ತು. 1999 ಹಾಗು 2002ನೇ ಇಸವಿಗಳ ನಡುವೆ(ಸರ್ಕಾರವು ಅಲ್ಪಕಾಲ ವಜಾಗೊಂಡಿದ್ದನ್ನು ಹೊರತುಪಡಿಸಿ), ಹಾಗು ಮೇ 2007ರಿಂದೀಚೆಗೆ ಪರಂಪರಾಗತ ಆಡಳಿತ ವ್ಯವಸ್ಥೆಯು ಉತ್ತರ ಐರ್ಲೆಂಡ್ ಗೆ ಹಿಂದಿರುಗಿದೆ.

ಆರ್ಥಿಕತೆ[ಬದಲಾಯಿಸಿ]

ಹಾರ್ಲಂಡ್ & ವೊಲ್ಫ್ಫ್ ನೌಕಾಂಗಣದಲ್ಲಿ ಕ್ರೇನುಗಳು, ನವೀಕರಿಸಲಾಗುವ ಇಂಧನ ಶಕ್ತಿ ಕೈಗಾರಿಕೆಗಾಗಿ ಬೃಹತ್ ಉತ್ಪಾದನೆಯನ್ನು ಇದೀಗ ಬೇರೆಡೆ ವಿಭಜನೆ ಮಾಡಲಾಗಿದೆ

ಯುನೈಟೆಡ್ ಕಿಂಗ್ಡಮ್ ಅನ್ನು ರೂಪಿಸುವ ನಾಲ್ಕು ಆರ್ಥಿಕತೆಗಳಲ್ಲಿ ಉತ್ತರ ಐರ್ಲೆಂಡ್ ನ ಆರ್ಥಿಕತೆಯು ಅತ್ಯಂತ ಚಿಕ್ಕಗಾತ್ರದ್ದಾಗಿದೆ. ಉತ್ತರ ಐರ್ಲೆಂಡ್, ಸಾಂಪ್ರದಾಯಿಕವಾಗಿ ಒಂದು ಕೈಗಾರಿಕಾ ಆರ್ಥಿಕ ಸ್ವರೂಪ ಹೊಂದಿದ್ದು, ಅದರಲ್ಲೂ ವಿಶೇಷವಾಗಿ ಹಡಗು ನಿರ್ಮಾಣ, ಹಗ್ಗ ತಯಾರಿಕೆ ಹಾಗು ಜವಳಿ ಉತ್ಪಾದನೆಗಳಲ್ಲಿ ಹೆಚ್ಚಿನ ಖ್ಯಾತಿ ಗಳಿಸಿದೆ. ಆದರೆ ಅಲ್ಲಿಂದೀಚೆಗೆ ಭಾರಿ ಕೈಗಾರಿಕೆಯಲ್ಲಿ ಸೇವಾಕ್ಷೇತ್ರಗಳು ಅದರಲ್ಲೂ ಪ್ರಾಥಮಿಕವಾಗಿ ಸಾರ್ವಜನಿಕ ಕ್ಷೇತ್ರಗಳು ಅವುಗಳ ಸ್ಥಾನವನ್ನು ತುಂಬಿವೆ. ಸ್ಥಳೀಯ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ತೀರ ಇತ್ತೀಚಿಗೆ ಆರ್ಥಿಕತೆಯು, ಮುಂದುವರಿದ ತಂತ್ರಜ್ಞಾನ ಕ್ಷೇತ್ರಗಳಿಗೆ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳ ಬೃಹತ್ ಬಂಡವಾಳ ಹೂಡಿಕೆಯಿಂದ ಅನುಕೂಲತೆ ಹೊಂದಿದೆ. ಈ ದೊಡ್ಡ ವ್ಯಾಪಾರ ಸಂಸ್ಥೆಗಳು ಸರಕಾರದ ಅನುದಾನಗಳು ಹಾಗು ಉತ್ತರ ಐರ್ಲೆಂಡ್ ನ ನುರಿತ ಕಾರ್ಯಪಡೆಯಿಂದ ಆಕರ್ಷಿತವಾಗಿದೆ.

ಸಾರಿಗೆ[ಬದಲಾಯಿಸಿ]

ಲಾರ್ನೆ ಬಂದರು

ಉತ್ತರ ಐರ್ಲೆಂಡ್‌‌, ನಿಂದ ಮೂರು ವಿಮಾನ ಸಾರಿಗೆ ಸೇವಾ ನಿಲ್ದಾಣಗಳಿವೆ - ಆಂಟ್ರಿಂ ಸಮೀಪದಲ್ಲಿರುವ ಬೆಲ್ಫಾಸ್ಟ್ ಇಂಟರ್ನ್ಯಾಷನಲ್, ಪೂರ್ವ ಬೆಲ್ಫಾಸ್ಟ್ ನಲ್ಲಿರುವ ಜಾರ್ಜ್ ಬೆಸ್ಟ್ ಬೆಲ್ಫಾಸ್ಟ್ ಸಿಟಿ, ಹಾಗು ಕೌಂಟಿ ಲಂಡನ್ ಡೆರ್ರಿಯಲ್ಲಿರುವ ಸಿಟಿ ಆಫ್ ಡೆರ್ರಿ. ಲಾರ್ನೆ ಹಾಗು ಬೆಲ್ಫಾಸ್ಟ್ ನಲ್ಲಿರುವ ಪ್ರಮುಖ ಬಂದರುಗಳು, ಗ್ರೇಟ್ ಬ್ರಿಟನ್ ಹಾಗು ಉತ್ತರ ಐರ್ಲೆಂಡ್‌‌ ನಡುವೆ ಪ್ರಯಾಣಿಕರು ಹಾಗು ಸರಕನ್ನು ರವಾನೆ ಮಾಡುತ್ತವೆ. ಪ್ರಯಾಣಿಕರಿಗಾಗಿರುವ ರೈಲುಗಳು, ಉತ್ತರ ಐರ್ಲೆಂಡ್‌‌ ರೈಲ್ವೇಸ್ ಮೂಲಕ ಕಾರ್ಯನಿರ್ವಹಿಸುತ್ತವೆ. ಇಯರ್ನ್ರಾಡ್ ಇರೆಯನ್ನ್ (ಐರಿಶ್ ರೈಲು)ನೊಂದಿಗೆ ಉತ್ತರ ಐರ್ಲೆಂಡ್‌‌ ರೈಲ್ವೇಸ್, ಡಬ್ಲಿನ್ ಹಾಗು ಬೆಲ್ಫಾಸ್ಟ್ ನಡುವೆ ಜಂಟಿ ಉದ್ಯಮ ಸೇವೆಗಳನ್ನು ಒದಗಿಸುವಲ್ಲಿ ಸಹಕರಿಸುತ್ತವೆ. ಪ್ರಮುಖ ಮೋಟಾರುಮಾರ್ಗಗಳೆಂದರೆ:

  • ದಕ್ಷಿಣ ಹಾಗು ಪಶ್ಚಿಮಕ್ಕೆ ಬೆಲ್ಫಾಸ್ಟ್ ಗೆ ಸಂಪರ್ಕವನ್ನು ಕಲ್ಪಿಸುವ M1, ಇದು ಡುಂಗನ್ನೋನ್ ನಲ್ಲಿ ಕೊನೆಗೊಳ್ಳುತ್ತದೆ.
  • ಪೋರ್ಟಡೌನ್ ಗೆ M1ನ ಸಂಪರ್ಕ ಕಲ್ಪಿಸುವ M12
  • ಬೆಲ್ಫಾಸ್ಟ್ ನ್ನು ಉತ್ತರಭಾಗದೊಂದಿಗೆ ಸಂಪರ್ಕ ಕಲ್ಪಿಸುವ M2. M2ನ ಸಂಬಂಧಿಸದ ಒಂದು ಭಾಗವೂ ಸಹ ಬಾಲ್ಲಿಮೇನಗೆ ಉಪಮಾರ್ಗವನ್ನು ಕಲ್ಪಿಸುತ್ತದೆ.
  • M22, ರಾನ್ಡಲ್ಸ್ಟೌನ್ ಸಮೀಪದಲ್ಲಿ M2ಗೆ ಸಂಪರ್ಕ ಕಲ್ಪಿಸುತ್ತದೆ.
  • M3, ಬೆಲ್ಫಾಸ್ಟ್ ನಲ್ಲಿ M1 ಹಾಗು M2ನೊಂದಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ A2 ಜಂಟಿ ವಾಹನ ರಸ್ತೆಯೊಂದಿಗೆ ಬಾಂಗೋರ್ ಗೆ ಸಂಪರ್ಕ ಕಲ್ಪಿಸುತ್ತದೆ.
  • M5 ನ್ಯೂಟೌನ್ ಅಬ್ಬೆಯೊಂದಿಗೆ ಬೆಲ್ಫಾಸ್ಟ್ ನ ಸಂಪರ್ಕ ಕಲ್ಪಿಸುತ್ತದೆ.

ಉತ್ತರ ಐರ್ಲೆಂಡ್‌‌ ನ ಲಾರ್ನೆಗೆ ಹಾಗು ಐರ್ಲೆಂಡ್‌‌ ಗಣರಾಜ್ಯದ ರೊಸ್ಸ್ಲಾರೆ ಬಂದರಿಗೆ ಸಂಪರ್ಕ ಕಲ್ಪಿಸುವ ಕ್ರಾಸ್-ಬಾರ್ಡರ್ ರಸ್ತೆಯನ್ನು, EU ಅನುದಾನಿತ ಯೋಜನೆಯ ಭಾಗವಾಗಿ ಉತ್ತಮಪಡಿಸಲಾಗಿದೆ. ಯುರೋಪಿಯನ್ ರೂಟ್ E01, ಲಾರ್ನೆಯಿಂದ ಐರ್ಲೆಂಡ್ ದ್ವೀಪ, ಸ್ಪೇನ್ ಹಾಗು ಪೋರ್ಚುಗಲ್ ಮೂಲಕ ಸೇವಿಲ್ಲೇಗೆ ಸಂಪರ್ಕ ಕಲ್ಪಿಸುತ್ತದೆ.

ಸಂಸ್ಕೃತಿ[ಬದಲಾಯಿಸಿ]

ಉತ್ತರ ಐರ್ಲೆಂಡ್ ನ ಬೆಲ್ ಫಾಸ್ಟ್ ನಲ್ಲಿ ಅಲ್ಸ್ಟರ್ ಫ್ರೈಯನ್ನು ಬಡಿಸಲಾಗುತ್ತದೆ
ಟ್ವೆಲ್ಫ್ತ್ ಬ್ಯಾಂಕ್ & ಸಾರ್ವಜನಿಕ ರಜಾದಿನವಾಗಿದ್ದು ವಾರ್ಷಿಕ ಪ್ರಾಟೆಸ್ಟೆಂಟ್ ಹಬ್ಬವಾಗಿದೆ, ಇದು ಆರೆಂಜ್ ಪಥಸಂಚಲನ-ಮೆರವಣಿಗೆಗಳನ್ನು ಒಳಗೊಂಡಿದೆ

ಅಂತರರಾಷ್ಟೀಯ ಖ್ಯಾತಿಯಲ್ಲದೇ ಅದರ ಸುಧಾರಣೆಯೊಂದಿಗೆ, ಉತ್ತರ ಐರ್ಲೆಂಡ್ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಮುಖ ಆಕರ್ಷಣೆಗಳಲ್ಲಿ ಸಾಂಸ್ಕೃತಿಕ ಉತ್ಸವಗಳು, ಸಂಗೀತ ಹಾಗು ಕಲಾತ್ಮಕ ಸಂಪ್ರದಾಯಗಳು, ಆಸಕ್ತಿ,ಕುತೂಹಲ ಕೆರಳಿಸುವ ಹಳ್ಳಿಗಾಡಿನ ಹಾಗು ಭೂಗೋಳಿಕ ಪ್ರದೇಶಗಳು, ಸಾರ್ವಜನಿಕ ಗೃಹಗಳು, ಆತಿಥ್ಯ ನೀಡುವ ಸ್ವಾಗತಿಸುವ ಪರಿ ಹಾಗು ಕ್ರೀಡೆಗಳು(ವಿಶೇಷವಾಗಿ ಗಾಲ್ಫ್ ಹಾಗು ಮೀನುಗಾರಿಕೆ). 1987ರಿಂದೀಚೆಗೆ ಸಾರ್ವಜನಿಕ ಗೃಹಗಳಿಗೆ, ಕೆಲವು ವಿರೋಧಗಳ ನಡುವೆಯೂ ಭಾನುವಾರದಂದು ತೆರೆಯಲು ಅವಕಾಶ ನೀಡಲಾಗಿದೆ.

ಅಲ್ಸ್ಟರ್ ಸೈಕಲ್,(ಐರಿಶ್ ನ ಐತಿಹಾಸಿಕ ಪೌರಾಣಿಕ ಕಥಾಚಕ್ರ) ಉಲಯಿಡ್ ನ ಸಾಂಪ್ರದಾಯಿಕ ನಾಯಕರುಗಳನ್ನು ಮುಖ್ಯ ವಸ್ತುಗಳನ್ನಾಗಿರಿಸಿಕೊಂಡ ಗದ್ಯ ಹಾಗು ಪದ್ಯದ ದೊಡ್ಡ ಭಾಗ, ಉಲಯಿಡ್ ಇದೀಗ ಪೂರ್ವ ಅಲ್ಸ್ಟರ್ ನಲ್ಲಿ ಸ್ಥಿತವಾಗಿದೆ. ಇದು ಐರಿಶ್ ಪುರಾಣದಲ್ಲಿ ಬರುವ ನಾಲ್ಕು ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಘಟನಾವಳಿ ಕಾಂಚೋಬರ್ ಮ್ಯಾಕ್ ನೆಸ್ಸ ನ ಆಳ್ವಿಕೆಯ ಸುತ್ತ ಕೇಂದ್ರೀಕೃತ ಚಕ್ರವಾಗಿದೆ, ಈತ ಕ್ರಿಸ್ತನ ನ ಸಮಯದಲ್ಲಿ ಅಲ್ಸ್ಟರ್ ನ ರಾಜನಾಗಿದ್ದನೆಂದು ಹೇಳಲಾಗುತ್ತದೆ. ಈತ ಎಮೈನ್ ಮಚ ದಿಂದ ಆಳ್ವಿಕೆಯನ್ನು ಮಾಡುತ್ತಿದ್ದ.(ಇದೀಗ ಇದು ಅರ್ಮಗ್ಹ್ ಸಮೀಪದ ನವನ್ ಫೋರ್ಟ್ ನಲ್ಲಿದೆ), ಹಾಗು ಈತ ಮೆಡ್ಬ್ ರಾಣಿ ಹಾಗು ಕಾನ್ನಚ್ಟ್ ನ ರಾಜ ಐಲಿಲ್ ಹಾಗು ಅವನ ಮಿತ್ರ ಫೆರ್ಗುಸ್ ಮ್ಯಾಕ್ ರೋಯಿಚ್ ನೊಂದಿಗೆ ತೀವ್ರ ವೈಷಮ್ಯ ಹೊಂದಿದ್ದ. ಘಟನಾವಳಿಯ ಪ್ರಧಾನ ನಾಯಕನೆಂದರೆ ಕಾಂಚೋಬರ್ ನ ಸೋದರಳಿಯ ಕುಚುಲಯಿನ್ನ್.

ಭಾಷೆಗಳು[ಬದಲಾಯಿಸಿ]

ಇಂಗ್ಲೀಷ್[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ ನಲ್ಲಿ ಮಾತನಾಡಲಾಗುವ ಇಂಗ್ಲಿಷ್ ಉಪಭಾಷೆ, ಸ್ಕಾಟ್ಲ್ಯಾಂಡ್ ನಿಂದ ಪ್ರಭಾವ ಹೊಂದಿದೆ, ಸ್ಕಾಟ್ಸ್ ಪದಗಳಾದ ವೀ ಯನ್ನು 'ಲಿಟಲ್'(ಸ್ವಲ್ಪ) ಹಾಗು ಆಯೆ ಯನ್ನು 'ಎಸ್'(ಹೌದು)ನ ಬದಲಾಗಿ ಬಳಸಲಾಗುತ್ತದೆ. ಕೆಲವರು ತಮಾಷೆಯಾಗಿ ಈ ಉಪಭಾಷೆಯನ್ನು ಧ್ವನಿವಿಜ್ಞಾನದ ಪ್ರಕಾರವಾಗಿ ನಾರನ್ ಐರನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಪ್ರಾಟೆಸ್ಟೆಂಟ್ ಗಳು ಹಾಗು ಕ್ಯಾಥೋಲಿಕ್ಕುಗಳ ನಡುವಿನ ಉಚ್ಚಾರಣೆಯಲ್ಲಿ ಕೆಲವು ಸೂಕ್ಷ್ಮ ಅಂತರಗಳಿವೆಯೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ, ಇದರ ಉತ್ತಮ ಉದಾಹರಣೆಯೆಂದರೆ h ಅಕ್ಷರದ ಉಚ್ಚಾರಣೆ, ಇದನ್ನು ಪ್ರಾಟೆಸ್ಟೆಂಟ್ ಗಳು, ಬ್ರಿಟಿಶ್ ಇಂಗ್ಲಿಷ್ ನಲ್ಲಿರುವಂತೆ "aitch" ಎಂದು ಉಚ್ಚರಿಸಿದರೆ, ಕ್ಯಾಥೋಲಿಕ್ಕರು ಇದನ್ನು ಹಿಬರ್ನೋ-ಇಂಗ್ಲಿಷ್ ನಲ್ಲಿರುವಂತೆ "haitch" ಎಂದು ಉಚ್ಚರಿಸುತ್ತಾರೆ. ಆದಾಗ್ಯೂ, ಧಾರ್ಮಿಕ ಹಿನ್ನೆಲೆಗಿಂತ ಭೌಗೋಳಿಕತೆಯು, ಉಪಭಾಷೆಯನ್ನು ನಿರ್ಧರಿಸುವಲ್ಲಿ ಹೆಚ್ಚು ಪ್ರಮುಖವಾಗುತ್ತದೆ. ಇಂಗ್ಲಿಷ್ ನ್ನು, ಉತ್ತರ ಐರಿಶ್ ಜನಸಂಖ್ಯೆಯಲ್ಲಿ ಬಹುಪಾಲು ಅಂದರೆ 100%ನಷ್ಟು ಜನರು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, ಆದಾಗ್ಯೂ ಗುಡ್ ಫ್ರೈಡೆ ಅಗ್ರಿಮೆಂಟ್ ನಡಿ, ಐರಿಶ್ ಹಾಗು ಅಲ್ಸ್ಟರ್ ಸ್ಕಾಟ್ಸ್(ಸ್ಕಾಟ್ಸ್ ಭಾಷೆಯ ಒಂದು ಉಪಭಾಷೆ), ಕೆಲವೊಂದು ಬಾರಿ ಉಲ್ಲನ್ಸ್ ಎಂದು ಕರೆಯಲ್ಪಡುತ್ತದೆ, ಇದು "ಉತ್ತರ ಐರ್ಲೆಂಡ್‌‌ ನ ಸಾಂಸ್ಕೃತಿಕ ಶ್ರೀಮಂತಿಕೆಯ ಭಾಗವೆಂದೇ" ಗುರುತಿಸಲಾಗುತ್ತದೆ.[೬೧]

ಇಂಗ್ಲಿಷ್, ಐರಿಶ್, ಹಾಗು ಅಲ್ಸ್ಟರ್ ಸ್ಕಾಟ್ಸ್ ನಲ್ಲಿರುವ ಬಹುಭಾಷಾ ಸಂಕೇತ
ಉತ್ತರ ಐರ್ಲೆಂಡ್‌‌ ಪ್ರದೇಶಗಳಲ್ಲಿರುವ ಮೂರನೇ ಒಂದು ಭಾಗಕ್ಕೂ ಅಧಿಕ ಜನರು ಐರಿಶ್ ಭಾಷೆಯನ್ನೂ ಮಾತನಾಡಬಲ್ಲರೆಂದು 2001ರ ಜನಗಣತಿಯು ಮಾಹಿತಿ ನೀಡುತ್ತದೆ.

ಐರಿಷ್[ಬದಲಾಯಿಸಿ]

ಐರಿಶ್ ಭಾಷೆಯು(ಗೈಲಿಗೆ), ಸಂಪೂರ್ಣ ಐರ್ಲೆಂಡ್‌‌ ದ್ವೀಪದ ಮೂಲ ಭಾಷೆಯಾಗಿದೆ.[೬೨] ಈ ಭಾಷೆಯನ್ನು 17ನೇ ಶತಮಾನದಲ್ಲಿ ಅಲ್ಸ್ಟರ್ ಪ್ಲ್ಯಾನ್ಟೇಶನ್ಸ್ ಗೆ ಮುಂಚೆ ಇಂದಿನ ಉತ್ತರ ಐರ್ಲೆಂಡ್ ನುದ್ದಕ್ಕೂ ಪ್ರಮುಖವಾಗಿ ಮಾತನಾಡಲಾಗುತ್ತಿತ್ತು. ಉತ್ತರ ಐರ್ಲೆಂಡ್‌‌ ನುದ್ದಕ್ಕೂ ಕಂಡುಬರುವ ಹೆಚ್ಚಿನ ಸ್ಥಳಗಳ ಹೆಸರುಗಳು ಅವುಗಳ ಗೇಲಿಕ್ ಮೂಲದ ಆಂಗ್ಲ ರೂಪಾಂತರಗಳಾಗಿವೆ. ಗೇಲಿಕ್ ಭಾಷೆಯಲ್ಲಿರುವ ಸ್ಥಳದ ಹೆಸರುಗಳು, ಸಾವಿರಾರು ಕಿರುಬೀದಿಗಳು, ರಸ್ತೆಗಳು, ಟೌನ್ ಲ್ಯಾಂಡ್ ಗಳು, ಪಟ್ಟಣಗಳು, ಹಳ್ಳಿಗಳು ಹಾಗು ಅದರ ಎಲ್ಲ ಆಧುನಿಕ ನಗರಗಳಲ್ಲಿ ಕಂಡುಬರುತ್ತವೆ. ಉದಾಹರಣೆಗೆ ಬೆಲ್ಫಾಸ್ಟ್-ಬೆಯಲ್ ಫೆಯಿರ್ಸ್ಟೆ ಯಿಂದ ವ್ಯುತ್ಪತ್ತಿ ಹೊಂದಿದೆ, ಶಂಕಿಲ್-ಸೇಯನ್ ಸಿಲ್ ಹಾಗು ಲೌಗ್ಹ್ ನೆಯಗ್ಹ್-ಲೋಚ್ ಎನ್ಎಟಾಚ್ ನಿಂದ ವ್ಯುತ್ಪತ್ತಿ ಮೂಲ ಹೊಂದಿದೆ. ಉತ್ತರ ಐರ್ಲೆಂಡ್‌‌ ನಲ್ಲಿ ಐರಿಶ್ ಭಾಷೆಯು, ದೀರ್ಘಕಾಲದಿಂದಲೂ ಐರಿಶ್ ರಾಷ್ಟ್ರೀಯತೆಯೊಂದಿಗೆ ತಳುಕು ಹಾಕಿಕೊಂಡಿದೆ. ಭಾಷೆಯನ್ನು ಒಂದು ಸಾಮಾನ್ಯ ಪರಂಪರೆ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ 19ನೇ ಶತಮಾನದ ಪ್ರಮುಖ ಪ್ರಾಟೆಸ್ಟೆಂಟ್ ಗಣತಂತ್ರವಾದಿಗಳು ಹಾಗು ಪ್ರಾಟೆಸ್ಟೆಂಟ್ ಏಕೀಕರಣವಾದಿಗಳ ವಾತ್ಸಲ್ಯದಾಯಕ ಅಂಶವಾಗಿತ್ತು. ಐರ್ಲೆಂಡ್ ದ್ವೀಪದಲ್ಲಿ ಮೂರು ಪ್ರಮುಖ ಉಪಭಾಷೆಗಳಿವೆ - ಅಲ್ಸ್ಟರ್, ಮುನ್ಸ್ಟರ್ ಹಾಗು ಕಾನ್ನಚ್ಟ್. ಪ್ರತಿ ಉಪಭಾಷೆಯನ್ನು ಮಾತನಾಡುವವರು, ಇತರರು ಮಾತನಾಡುವುದನ್ನು ಅರ್ಥಮಾಡಿಕೊಳ್ಳಲು ಪ್ರಯಾಸಪಡುತ್ತಿದ್ದರು. ಉತ್ತರ ಐರ್ಲೆಂಡ್‌‌ ನಲ್ಲಿ ಅಲ್ಸ್ಟರ್ ಉಪಭಾಷೆಯನ್ನು ಮಾತನಾಡಲಾಗುತ್ತದೆ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ, ಗಣತಂತ್ರವಾದಿ ಕ್ರಿಯಾ ಸಿದ್ಧಾಂತಿಗಳು ಭಾಷೆಯೊಂದಿಗೆ ತಳುಕು ಹಾಕಿಕೊಂಡಾಗ ಭಾಷೆಯು ಐರ್ಲೆಂಡ್ ನುದ್ದಕ್ಕೂ ರಾಜಕೀಯ ತುಳಿತಕ್ಕೆ ಒಳಗಾಯಿತು. 20ನೇ ಶತಮಾನದಲ್ಲಿ, ರಾಜಕೀಯ ಪ್ರಯೋಜನಕ್ಕಾಗಿ ಭಾಷೆಯನ್ನು ಹೆಚ್ಚು ವಿಭಾಗಿಸಲಾಗುತ್ತಿದೆಯೆಂದು ಏಕೀಕರಣವಾದಿಗಳು ಅಭಿಪ್ರಾಯಪಟ್ಟರು ಹಾಗು ಈ ನಿಟ್ಟಿನಲ್ಲಿ, ಸಮುದಾಯದಲ್ಲಿ ಹಲವರು ಇದಕ್ಕೆ ಸಿನ್ನ್ ಫೆಯಿನ್ ಕಾರಣವೆಂದು ಆರೋಪಿಸಿದರು. ಐರ್ಲೆಂಡ್ ವಿಭಜನೆಯಾದ ನಂತರ, ಭಾಷೆಯನ್ನು ಹೊಸ ಉತ್ತರ ಐರ್ಲೆಂಡ್ ನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಕಡೆಗಣಿಸಲಾಯಿತು. ಪ್ರಮುಖವಾಗಿ ಇಂಗ್ಲಿಷ್ ಭಾಷೆಯ ಬಳಕೆಯು, ಅನನಕೂಲವಾದ ದಿ ಟ್ರಬಲ್ಸ್ ನ ಹೆಚ್ಚಳಕ್ಕೆ ಕಾರಣವಿರಬಹುದೆಂದು ವಾದಿಸಲಾಗುತ್ತದೆ.[೬೩][dubious ] ಪ್ರಧಾನವಾಗಿ ಕ್ಯಾಥೋಲಿಕ್/ನ್ಯಾಷನಲಿಸ್ಟ್/ರಿಪಬ್ಲಿಕನ್ ಜಿಲ್ಲೆಗಳಲ್ಲಿ ಕೆಲವು ಸ್ಥಳೀಯ ಜಿಲ್ಲಾ ಮಂಡಳಿಗಳು ನಿರ್ಮಿಸಿದ, ಬದಲಾವಣೆ ಮಾಡಲಾಗದ ಕಾನೂನು ರಸ್ತೆಯ ದ್ವಿಭಾಷಿ ಹೆಸರುಗಳು(ಇಂಗ್ಲಿಷ್/ಐರಿಶ್),[೬೪] ಯೂನಿಯನಿಸ್ಟ್ ಗಳಿಂದ ರೂಪಿತವಾದ 'ನಿರುತ್ಸಾಹಕಾರಿ ಅಂಶವೆಂದು' ಗ್ರಹಿಸಬಹುದು. ಅಲ್ಲದೇ ಈ ಅಂಶಗಳು, ವಿಭಿನ್ನ ಪಂಗಡಗಳಲ್ಲಿ ಉತ್ತಮ ಸಾಮುದಾಯಿಕ ಸಂಬಂಧಗಳನ್ನು ಪೋಷಿಸುವಲ್ಲಿ ಸಹಾಯಕವಾಗಿರುವುದಿಲ್ಲ. ಆದಾಗ್ಯೂ ಯುನೈಟೆಡ್ ಕಿಂಗ್ಡಮ್ ನೊಳಗಿರುವ ಇತರ ರಾಷ್ಟ್ರಗಳಲ್ಲಿ, ಉದಾಹರಣೆಗೆ ವೇಲ್ಸ್ ಹಾಗು ಸ್ಕಾಟ್ಲ್ಯಾಂಡ್, ಕ್ರಮವಾಗಿ ವೆಲ್ಶ್ ಹಾಗು ಸ್ಕಾಟ್ಸ್ ಗೇಲಿಕ್ ದ್ವಿಭಾಷಿ ಸಂಕೇತಗಳ ಬಳಸುತ್ತವೆ. ಈ ಕಾರಣದಿಂದಾಗಿ, ಉತ್ತರ ಐರ್ಲೆಂಡ್ ನ ರಾಷ್ಟ್ರೀಯತಾವಾದಿಗಳು ಈ ನಿಟ್ಟಿನಲ್ಲಿ ಸಮಾನತೆಗಾಗಿ ವಾದಿಸುತ್ತಾರೆ. ಉತ್ತರ ಐರ್ಲೆಂಡ್ ನಲ್ಲಿ 2001ರಲ್ಲಿ ನಡೆಸಲಾದ ಜನಗಣತಿಗೆ ಪ್ರತಿಕ್ರಿಯೆಯಾಗಿ, 10%ನಷ್ಟು ಜನಸಂಖ್ಯೆಯು ತಮಗೆ "ಸ್ವಲ್ಪಮಟ್ಟಿಗಿನ ಐರಿಶ್ ಜ್ಞಾನವಿರುವುದಾಗಿ" ವಾದಿಸಿದರೆ,[೬೫] 4.7%ರಷ್ಟು ಜನರು ತಮಗೆ ಐರಿಶ್ "ಮಾತನಾಡಲು, ಓದಲು, ಬರೆಯಲು ಹಾಗು ಗ್ರಹಿಸಲು" ಸಾಧ್ಯವೆಂದು ಹೇಳುತ್ತಾರೆ.[೬೫] ಇದನ್ನು ಜನಗಣತಿಯ ಒಂದು ಭಾಗವಾಗಿ ಅಲ್ಲದಿದ್ದರೂ ಸಮೀಕ್ಷೆಯ ಒಂದು ಭಾಗವಾಗಿ ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ 1%ನಷ್ಟು ಜನರು, ಭಾಷೆಯನ್ನು ತಮ್ಮ ಮನೆಗಳಲ್ಲಿ ಪ್ರಮುಖವಾಗಿ ಮಾತನಾಡಲಾಗುತ್ತದೆಂದು ಹೇಳಿದರು.[೬೬] ಸಾರ್ವಜನಿಕ ಸಲಹೆಯನ್ನು ಅನುಸರಿಸಿ, ಈ ಅವಧಿಯಲ್ಲಿ ಐರಿಶ್ ಭಾಷೆಗೆ ಪ್ರತ್ಯೇಕ,ನಿರ್ದಿಷ್ಟ ಕಾನೂನಿನ ರಚನೆಯನ್ನು ಮಾಡದಿರಲು ನಿರ್ಣಯ ಕೈಗೊಳ್ಳಲಾಯಿತು, ಆದರೆ ಇದಕ್ಕೆ ಪ್ರತಿಕ್ರಿಯಿಸಿದ 75%ನಷ್ಟು ಜನರು(ಸ್ವ-ಆಯ್ಕೆ) ಇಂತಹ ಕಾನೂನು ರಚನೆಗೆ ತಮ್ಮ ಸಮ್ಮತಿಯನ್ನು ಸೂಚಿಸಿದ್ದರು.[೬೭] ಅಲ್ಸ್ಟರ್ ಐರಿಶ್[೬೮][ಮಡಿದ ಕೊಂಡಿ] ಅಥವಾ ಡೋನೆಗಲ್ ಐರಿಶ್,[೬೮] ಉಪಭಾಷೆಯಾಗಿದ್ದು ಸಮೀಪದಲ್ಲಿ ಸ್ಕಾಟ್ಸ್ ಗೇಲಿಕ್ ಭಾಷೆಯನ್ನು ಹೋಲುತ್ತದೆ. ಉಪಭಾಷೆಯ ಕೆಲ ಪದಗಳು ಹಾಗು ಪದಗುಚ್ಚಗಳು ಸ್ಕಾಟ್ಸ್ ಗೇಲಿಕ್ ನೊಂದಿಗೆ ಹಂಚಿಕೆಯಾಗುತ್ತವೆ. ಪೂರ್ವ ಅಲ್ಸ್ಟರ್ ನ ಉಪಭಾಷೆಗಳು - ರಾತ್ಲಿನ್ ದ್ವೀಪ ಹಾಗು ಗ್ಲೆನ್ಸ್ ಆಫ್ ಆಂಟ್ರಿಂ - ಆರ್ಗಿಲ್ ನಲ್ಲಿ ಈ ಹಿಂದೆ ಮಾತನಾಡಲಾಗುತ್ತಿದ್ದ ಸ್ಕಾಟಿಷ್ ಗೇಲಿಕ್ ಗೆ ಬಹಳ ಸದೃಶವಾಗಿವೆ, ಈ ಪ್ರದೇಶವು ರಾತ್ಲಿನ್ ದ್ವೀಪಕ್ಕೆ ಸಮೀಪದಲ್ಲಿದ್ದು ಸ್ಕಾಟ್ಲ್ಯಾಂಡ್ ನ ಭಾಗವಾಗಿದೆ. ಅಲ್ಸ್ಟರ್ ಗೇಲಿಕ್, ಭೌಗೋಳಿಕ ಹಾಗು ಭಾಷಿಕವಾಗಿ, ಒಂದೊಮ್ಮೆ ವ್ಯಾಪಕವಾಗಿ ಮಾತನಾಡಲಾಗುತ್ತಿದ್ದ ಗೇಲಿಕ್ ನ ಪ್ರಮುಖ ಉಪಭಾಷೆಯಾಗಿದೆ. ಇದನ್ನು ಐರ್ಲೆಂಡ್‌‌ ನ ದಕ್ಷಿಣ ಭಾಗದಿಂದ ಹಿಡಿದು ಸ್ಕಾಟ್ಲ್ಯಾಂಡ್ ನ ಉತ್ತರಭಾಗದವರೆಗೂ ಮಾತನಾಡುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ, ಮುನ್ಸ್ಟರ್ ಐರಿಶ್ ಭಾಷೆಯನ್ನು ಹಲವು ಪುನರುಜ್ಜೀವಕರು ಮೆಚ್ಚಿಕೊಳ್ಳುವುದರ ಜೊತೆಗೆ, 1960ರಲ್ಲಿ ಕಾನ್ನಚ್ಟ್ ಐರಿಶ್ ಗೆ ಭಾಷಾ ಬದಲಾವಣೆ ಮಾಡಿಕೊಂಡರು. ಇದೀಗ ಈ ಉಪಭಾಷೆಯನ್ನು ಐರ್ಲೆಂಡ್ ನಲ್ಲಿ ಹಲವರು ಮಾತನಾಡಲು ಬಯಸುತ್ತಾರೆ. ಐರಿಶ್ ಭಾಷೆಯನ್ನು ಮಾತನಾಡುವ ಹಲವು ಯುವಜನಾಂಗದವರು, ಐರಿಶ್ ಭಾಷೆಯು ಪ್ರಸಾರಿಕವಾಗಿ ಬಿತ್ತರಗೊಳ್ಳುವ ಹಾಗು ವಿವಿಧ ಉಪಭಾಷೆಗಳಿಗೆ ಒಡ್ಡಿಕೊಂಡಿರುವ ಕಾರಣದಿಂದಾಗಿ ಉಪಭಾಷೆಗಳೆಡೆಗೆ ಕಡಿಮೆ ಗೊಂದಲ ಹೊಂದಿದ್ದಾರೆ. (TG4) ಐರಿಶ್ ಭಾಷೆಯ ಬರವಣಿಗೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಏಕೆಂದರೆ ಐರಿಶ್ ಸರ್ಕಾರವು ರೂಪಿಸಿದ ಉತ್ತಮ ಮಟ್ಟದ ಕಾಗುಣಿತಾಕ್ಷರ ಹಾಗು ವ್ಯಾಕರಣವನ್ನು ಇದು ಒಳಗೊಂಡಿದೆ. ಇದು ಹಲವು ಉಪಭಾಷಾ ರೂಪಗಳ ನಡುವಿನ ಹೊಂದಾವಣೆಯನ್ನು ಪ್ರತಿಬಿಂಬಿಸುತ್ತದೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಅಲ್ಸ್ಟರ್ ಐರಿಶ್ ಭಾಷೆಯನ್ನು ಮಾತನಾಡುವವರು, ಅಲ್ಸ್ಟರ್ ರೂಪಗಳು ಸಾಧಾರಣವಾಗಿ ಗುಣಮಟ್ಟದಿಂದ ಅನುಕೂಲವನ್ನು ಪಡೆದಿಲ್ಲವೆಂದು ಗುರುತಿಸುತ್ತಾರೆ. ಉತ್ತರ ಐರ್ಲೆಂಡ್ ನಲ್ಲಿ ಐರಿಶ್ ನ್ನು ಕಲಿಯುವ ಎಲ್ಲರೂ, ಭಾಷೆಯ ಈ ಸ್ವರೂಪವನ್ನು ಬಳಕೆ ಮಾಡುತ್ತಾರೆ. ಅಲ್ಸ್ಟರ್ ಐರಿಶ್ ಭಾಷೆಯ ಸ್ವ-ಮಾಹಿತಿ ಸರಣಿಗಳಲ್ಲಿ ನೌ ಯು ಆರ್ ಟಾಕಿಂಗ್ ಹಾಗು ಟುಸ್ ಮೈತ್ ಗಳು ಸೇರಿವೆ. ಬರಹಗಾರ ಸೀಮಸ್ ಓ ಸೇಯರ್ಕೈಗ್ಹ್, 1953ರಲ್ಲಿ ಐರಿಶ್ ಸರ್ಕಾರವು ಕೈಗ್ಹ್ ಡೆಯನ್ ಅಥವಾ ಐರಿಶ್ ಭಾಷೆಗೆ ಗುಣಮಟ್ಟ ವನ್ನು ತರುವ ಪ್ರಯತ್ನಗಳ ಬಗ್ಗೆ ಒಂದೊಮ್ಮೆ ಎಚ್ಚರಿಕೆ ನೀಡಿದ್ದರು, ಇದರಿಂದ ಉಂಟಾಗುವ ಪರಿಣಾಮವು "Gaedhilg nach mbéidh suim againn inntí mar nár fhás sí go nádúrtha as an teangaidh a thug Gaedhil go hÉirinn" ಹೀಗಿರಬಹುದೆಂದು ಬರೆದಿದ್ದರು(ನಮಗೆ ಹೆಚ್ಚಿನ ಆಸಕ್ತಿಯನ್ನು ಗೇಲಿಕ್ ಭಾಷೆಯು ಉಂಟುಮಾಡುತ್ತಿಲ್ಲ, ಗೇಲ್ಸ್ ಐರ್ಲೆಂಡ್ ಗೆ ತಂದ ಭಾಷೆಯಾಗಿ ಇದು ಸ್ವಾಭಾವಿಕವಾಗಿ ಬೆಳವಣಿಗೆಯನ್ನು ಹೊಂದಿಲ್ಲ). ಅಲ್ಸ್ಟರ್ ಐರಿಶ್ ಉಪಭಾಷೆಯನ್ನು ಐತಿಹಾಸಿಕ ಒಂಬತ್ತು ಕೌಂಟಿ ಅಲ್ಸ್ಟರ್ ನ ಪ್ರದೇಶದುದ್ದಕ್ಕೂ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೌಂಟಿ ಡೋನೆಗಲ್ ನ ಗೇಲ್ತಚ್ಟ್ ಪ್ರದೇಶ ಹಾಗು ಪಶ್ಚಿಮ ಬೆಲ್ಫಾಸ್ಟ್ ನ "Gaeltacht Quarter". Archived from the original on 7 ಆಗಸ್ಟ್ 2007. Retrieved 23 ನವೆಂಬರ್ 2010. ಪ್ರದೇಶ. ಮೇಯೋ ಐರಿಶ್, ಡೋನೆಗಲ್ ಐರಿಶ್ ನೊಂದಿಗೆ ಬಲವಾದ ನಂಟನ್ನು ಹೊಂದಿದೆ.

ಅಲ್ಸ್ಟರ್ ಸ್ಕಾಟ್ಸ್[ಬದಲಾಯಿಸಿ]

ಅಲ್ಸ್ಟರ್ ಸ್ಕಾಟ್ಸ್, ಉತ್ತರ ಐರ್ಲೆಂಡ್ ನಲ್ಲಿ ಮಾತನಾಡಲಾಗುವ ಸ್ಕಾಟ್ಸ್ ಭಾಷೆಯ ವಿವಿಧತೆಗಳನ್ನು ಒಳಗೊಂಡಿದೆ. ಏಯೋಡನ್ ಮ್ಯಾಕ್ ಪೋಯಿಲಿನ್[೬೯], "ಹೆಚ್ಚಿನವರು ಅಲ್ಸ್ಟರ್-ಸ್ಕಾಟ್ಸ್ ಒಂದು ಉಪಭಾಷೆ ಅಥವಾ ಸ್ಕಾಟ್ಸ್ ನ ವಿಭಿನ್ನ ಭಾಷೆಯೆಂದು ವಾದಿಸಿದರೆ, ಮತ್ತೆ ಕೆಲವರು ಅಲ್ಸ್ಟರ್-ಸ್ಕಾಟ್ಸ್, ಸ್ಕಾಟ್ಸ್ ಗಳ ಪ್ರತ್ಯೇಕ ಭಾಷೆಯೆಂದು ವಾದಿಸುತ್ತಾರೆ ಅಥವಾ ಸೂಚಿಸುತ್ತಾರೆಂದು" ಸ್ಪಷ್ಟಪಡಿಸುತ್ತಾರೆ. ಅಲ್ಸ್ಟರ್ ಸ್ಕಾಟ್ಸ್ ಒಂದು ವಿಶಿಷ್ಟ ಭಾಷೆಯಾಗುವ ಸಂದರ್ಭ ಬಂದಾಗ, ಸ್ಕಾಟ್ಸ್ ಗಳ ಸ್ಥಾನಮಾನ ಅಭದ್ರತೆಯಿಂದ ಕೂಡಿದ್ದ ಸಮಯದಲ್ಲಿ ಒದಗಿಬಂದಿತು. ಇದು ಎಷ್ಟು ವಿಚಿತ್ರವಾಗಿತ್ತೆಂದರೆ, ಇದು ಭಾಷಾಧ್ಯಾಯನದ ಚರ್ಚೆಗೆ ಗುರಿಯಾಗುವುದು ಅಸಂಭವವೆನಿಸಿತ್ತು." ಸರಿಸುಮಾರು 2%ನಷ್ಟು ಜನರು ಅಲ್ಸ್ಟರ್ ಸ್ಕಾಟ್ಸ್ ಭಾಷೆಯನ್ನು ಮಾತನಾಡುವುದಾಗಿ ವಾದಿಸುತ್ತಾರೆ.[೭೦] ಆದಾಗ್ಯೂ, ಪ್ರಮುಖ ಭಾಷೆಯಾಗಿ ತಮ್ಮ ಮನೆಗಳಲ್ಲಿ ಬಳಸುವವರ ಸಂಖ್ಯೆಯು ನಗಣ್ಯವಾಗಿದೆ.[೬೬] ಕಾಲೇಜು ತರಗತಿಗಳಲ್ಲಿ ಇದರ ಅಧ್ಯಯನವನ್ನು ಮಾಡಬಹುದು.[೭೧] ಆದರೆ ಒಬ್ಬ ಮೂಲ ಇಂಗ್ಲಿಷ್ ಮಾತನಾಡುವವನಿಗೆ "[ಭಾಷೆ] ಇದು ತುಲನಾತ್ಮಕವಾಗಿ ಸುಲಭವಾಗಿ ಗ್ರಾಹ್ಯವಾಗುತ್ತದೆ. ಅಲ್ಲದೇ ಇದರ ಬಗೆಗಿನ ಹೆಚ್ಚಿನ ಮಟ್ಟದ ಅಧ್ಯಯನದಲ್ಲೂ ಸಹ ಶಬ್ದಸಂಗ್ರಹದ ಮೂಲಕ ಸುಲಭವಾಗಿ ಗ್ರಹಿಸಬಹುದು."[೬೯] St ಆಂಡ್ರ್ಯೂಸ್ ಒಪ್ಪಂದವು "ಅಲ್ಸ್ಟರ್ ಸ್ಕಾಟ್ಸ್ ಭಾಷೆ, ಪರಂಪರೆ ಹಾಗು ಸಂಸ್ಕೃತಿಯನ್ನು ಅಭಿವೃದ್ದಿಪಡಿಸಿ ಬೆಳೆಸುವ" ಅಗತ್ಯವನ್ನು ಗುರುತಿಸುತ್ತದೆ.[೭೨]

ಇತರೆ ಭಾಷೆಗಳು[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ ನಲ್ಲಿ ಜನಾಂಗೀಯ ಅಲ್ಪಸಂಖ್ಯಾತರ ಸಂಖ್ಯೆಯು ಹೆಚ್ಚಾಗುತ್ತಿದೆ. ಉತ್ತರ ಐರ್ಲೆಂಡ್‌‌ ನ ಏಶಿಯನ್ ಸಮುದಾಯಗಳಲ್ಲಿ ಚೈನೀಸ್ ಹಾಗು ಉರ್ದು ಭಾಷೆಗಳನ್ನು ಮಾತನಾಡಲಾಗುತ್ತದೆ. ಚೈನೀಸ್ ಸಮುದಾಯವು ಸಾಮಾನ್ಯವಾಗಿ ಉತ್ತರ ಐರ್ಲೆಂಡ್ "ಮೂರನೇ ಅತ್ಯಂತ ದೊಡ್ಡ" ಸಮುದಾಯವೆಂದು ಸೂಚಿಸಲಾದರೂ ಸಹ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಚಿಕ್ಕದಾಗಿದೆ. 2004ರಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ಹೊಸ ಸದಸ್ಯ ರಾಷ್ಟ್ರಗಳು ಸೇರ್ಪಡೆಗೊಂಡ ನಂತರ, ಮಧ್ಯ ಹಾಗು ಪೂರ್ವ ಯುರೋಪಿಯನ್ ಭಾಷೆಗಳು, ಅದರಲ್ಲೂ ವಿಶೇಷವಾಗಿ ಪೋಲಿಷ್ ಭಾಷೆಯು, ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತಿದೆ. ಉತ್ತರ ಐರ್ಲೆಂಡ್‌‌ ನ ಅತ್ಯಂತ ಸಾಮಾನ್ಯ ಸಂಕೇತ ಭಾಷೆಯೆಂದರೆ ಬ್ರಿಟಿಶ್ ಸೈನ್ ಲಾಂಗ್ವೇಜ್(BSL), ಆದರೆ ಕ್ಯಾಥೋಲಿಕ್ಕರು ತಮ್ಮ ಕಿವುಡು ಮಕ್ಕಳನ್ನು ಡಬ್ಲಿನ್ ನ ಶಾಲೆಗಳಿಗೆ ಕಳುಹಿಸಲು ಒಲವು ತೋರಿದರು.(St ಜೋಸೆಫ್'ಸ್ ಇನ್ಸ್ಟಿಟ್ಯೂಟ್ ಫಾರ್ ಡೆಫ್ ಬಾಯ್ಸ್ ಹಾಗು St. ಮೇರಿ'ಸ್ ಇನ್ಸ್ಟಿಟ್ಯೂಟ್ ಫಾರ್ ಡೆಫ್ ಗರ್ಲ್ಸ್), ಐರಿಶ್ ಸೈನ್ ಲಾಂಗ್ವೇಜ್ (ISL)ಅನ್ನು ರಾಷ್ಟ್ರೀಯತಾವಾದಿ ಸಮುದಾಯಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಎರಡು ಭಾಷೆಗಳು ಪರಸ್ಪರ ಸಂಬಂಧ ಹೊಂದಿಲ್ಲ: BSL, ಬ್ರಿಟಿಶ್ ಸಮುದಾಯದೊಳಗೆ ಬಳಸಲ್ಪಟ್ಟರೆ(ಇದು ಔಸ್ಲನ್ ನನ್ನೂ ಸಹ ಒಳಗೊಳ್ಳುತ್ತದೆ), ಹಾಗು ISL ಫ್ರೆಂಚ್ ಸಮುದಾಯದೊಳಗೆ ಬಳಕೆಯಾಗುತ್ತದೆ.(ಇದರಲ್ಲಿ ಅಮೆರಿಕನ್ ಸೈನ್ ಲಾಂಗ್ವೇಜ್ ಸೇರಿದೆ.)

ಭೌಗೋಳಿಕ ಪರಿಭಾಷೆಯಲ್ಲಿ ನಾಮಸೂಚಿಯಲ್ಲಿನ ಭಿನ್ನತೆಗಳು[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ಗಿರುವ ಪರ್ಯಾಯ ಹೆಸರುಗಳು[ಬದಲಾಯಿಸಿ]

ಉತ್ತರ ಐರ್ಲೆಂಡ್ ನ ಒಳಭಾಗದ ಹಾಗು ಹೊರಭಾಗದ ಹಲವರು, ತಮ್ಮ ದೃಷ್ಟಿಕೋನಕ್ಕೆ ಅನುಸಾರವಾಗಿ, ಉತ್ತರ ಐರ್ಲೆಂಡ್ ಗೆ ಇತರ ಹೆಸರುಗಳನ್ನೂ ಬಳಸುತ್ತಾರೆ.

ಚಿತ್ರ:Derry mural.jpg
ಫ್ರೀ ಡೆರ್ರಿ ಭಿತ್ತಿಚಿತ್ರ

ಆದಾಗ್ಯೂ, ಸ್ಕಾಟ್ಲ್ಯಾಂಡ್ ಗೆ ವಿಸ್ತರಿಸಿದ ಡಾಲ್ ರಿಯಾತದ ಪ್ರಾಚೀನ ಕ್ಷೇತ್ರವನ್ನು, ಹೆಸರುಗಳ ಬಗ್ಗೆ ಭಿನ್ನಾಭಿಪ್ರಾಯವಿದೆ ಎನ್ನಲಾಗುತ್ತದೆ. ಅಲ್ಲದೇ ಈ ಅಸಮ್ಮತಿಯು ರಾಜಕೀಯ ಸಂಕೇತಗಳ ಮೂಲಕ, ಶಬ್ದಗಳ ಬಳಕೆ ಇಲ್ಲದೇ ಕೆಲವು ನಗರ ಕೇಂದ್ರ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇದರ ಅತ್ಯಂತ ಉತ್ತಮ ಉದಾಹರಣೆಯೆಂದರೆ, ಉತ್ತರ ಐರ್ಲೆಂಡ್‌‌ ನ ಎರಡನೇ ನಗರವನ್ನು "ಡೆರ್ರಿ" ಎಂದು ಕರೆಯಬೇಕೆ ಅಥವಾ "ಲಂಡನ್ ಡೆರ್ರಿ" ಎಂದು ಕರೆಯಬೇಕೆ? ಎಂಬ ದ್ವಂದ್ವ. ಭಾಷೆಯ ಆಯ್ಕೆ ಹಾಗು ಉತ್ತರ ಐರ್ಲೆಂಡ್‌‌ ನಲ್ಲಿರುವ ಭಿನ್ನತೆಗಳು ಸಾಮಾನ್ಯವಾಗಿ ಸಾಂಸ್ಕೃತಿಕ, ಜನಾಂಗೀಯ ಹಾಗು ಮಾತನಾಡುವವರ ಧಾರ್ಮಿಕ ಸ್ವರೂಪವನ್ನು ಪ್ರಕಟಿಸುತ್ತವೆ. ಉತ್ತರ ಐರ್ಲೆಂಡ್ ನ ಮೊದಲ ಉಪಮಂತ್ರಿ, ಸೀಮಸ್ ಮಲ್ಲೋನ್ ರನ್ನು ಏಕೀಕರಣವಾದಿ ಪಕ್ಷಗಳ ರಾಜಕಾರಣಿಗಳು, ಈ ಪ್ರದೇಶವನ್ನು "ನಾರ್ತ್ ಆಫ್ ಐರ್ಲೆಂಡ್" ಎಂದು ಉಲ್ಲೇಖಿಸಿದ್ದಕ್ಕಾಗಿ ಟೀಕಿಸುತ್ತಾರೆ, ಈ ನಡುವೆ ಸಿನ್ನ್ ಫೆಯಿನ್ ಪಕ್ಷವು "ಆರು ಕೌಂಟಿಗಳು" ಎಂದು ಉಲ್ಲೇಖಿಸುವುದಕ್ಕಾಗಿ ಇಂದಿಗೂ ಕೆಲವು ಐರಿಶ್ ದಿನಪತ್ರಿಕೆಗಳು ಟೀಕಿಸುತ್ತವೆ.[೭೩] ಯಾವುದೇ ಗುಂಪಿಗೆ ಸೇರದವರದ್ದು, ಒಂದು ಗುಂಪಿನ ಬಗ್ಗೆ ಒಲವನ್ನು ಹೊಂದಿರುವವರು ಸಾಮಾನ್ಯವಾಗಿ ಆ ಗುಂಪಿನ ಭಾಷೆಯನ್ನು ಬಳಸುತ್ತಾರೆ. ಬ್ರಿಟಿಶ್ ಮಾಧ್ಯಮದಲ್ಲಿ ಏಕೀಕರಣವಾದವನ್ನು ಬೆಂಬಲಿಸುವವರು(ಇದರಲ್ಲಿ ಗಮನಾರ್ಹವಾದುದೆಂದರೆ ಡೈಲಿ ಟೆಲಿಗ್ರ್ಯಾಫ್ ಹಾಗು ಡೈಲಿ ಎಕ್ಸ್ಪ್ರೆಸ್ ) ಕ್ರಮವಾಗಿ ಉತ್ತರ ಐರ್ಲೆಂಡ್ "ಅಲ್ಸ್ಟರ್" ಎಂದು ಕರೆಯುತ್ತಾರೆ.[೭೪] ಐರ್ಲೆಂಡ್ ನಲ್ಲಿರುವ ಕೆಲವು ರಾಷ್ಟ್ರೀಯತಾವಾದಿ ಹಾಗು ಗಣತಂತ್ರವಾದಿ ಪಕ್ಷದೆಡೆಗೆ ಒಲವು ಹೊಂದಿರುವ ಮಾಧ್ಯಮಗಳು ಬಹುತೇಕವಾಗಿ "ನಾರ್ತ್ ಆಫ್ ಐರ್ಲೆಂಡ್" ಅಥವಾ "ಸಿಕ್ಸ್ ಕೌನ್ಟೀಸ್" ಎಂದು ಕರೆಯುತ್ತವೆ. ಉತ್ತರ ಐರ್ಲೆಂಡ್‌‌ ನಲ್ಲಿರುವ ಸರ್ಕಾರಿ ಹಾಗು ಸಾಂಸ್ಕೃತಿಕ ಸಂಘಟನೆಗಳು, ವಿಶೇಷವಾಗಿ 1980ರಷ್ಟು ಹಿಂದಿನಿಂದಲೂ[ಸೂಕ್ತ ಉಲ್ಲೇಖನ ಬೇಕು], ತಮ್ಮ ಶೀರ್ಷಿಕೆಗಳಲ್ಲಿ ಸಾಮಾನ್ಯವಾಗಿ "ಅಲ್ಸ್ಟರ್" ಎಂಬ ಪದವನ್ನು ಬಳಸುತ್ತಾರೆ; ಉದಾಹರಣೆಗೆ, ಯೂನಿವರ್ಸಿಟಿ ಆಫ್ ಅಲ್ಸ್ಟರ್, ಅಲ್ಸ್ಟರ್ ಮ್ಯೂಸಿಯಂ, ಅಲ್ಸ್ಟರ್ ಆರ್ಕೆಸ್ಟ್ರಾ, ಹಾಗು BBC ರೇಡಿಯೋ ಅಲ್ಸ್ಟರ್ ಆದಾಗ್ಯೂ, 1990ರಿಂದಲೂ ಕೆಲ ಸುದ್ದಿ ಪ್ರಕಟಣೆಗಳು, ಎಲ್ಲ ವಿವಾದಾಸ್ಪದ ಪದಗಳು ಹಾಗು ಅಧಿಕೃತ ಹೆಸರುಗಳಾದ ಉತ್ತರ ಐರ್ಲೆಂಡ್, "ದಿ ನಾರ್ತ್" ಎಂಬ ಪದಗಳನ್ನು ಬಳಸದಿರಲು ನಿರ್ಧರಿಸಿದವು, ಈ ಪದಗಳ ಬಳಕೆಯು ಕೆಲವು ಏಕೀಕರಣವಾದಿಗಳ ಸಿಟ್ಟಿಗೆ ಪುಷ್ಟಿ ನೀಡುವಂತೆ ಗಣರಾಜ್ಯದ ಪ್ರಸಾರ ಮಾಧ್ಯಮದಲ್ಲಿ ಇಂದಿಗೂ ಸಹ ಸಾಮಾನ್ಯವಾಗಿ ಬಳಕೆಯಾಗುತ್ತವೆ.[ಸೂಕ್ತ ಉಲ್ಲೇಖನ ಬೇಕು] ಈ ಹಿಂದೆ ಟಾವೋಯಿಸೆಚ್ (ಸರ್ಕಾರಿ ಮುಖ್ಯಸ್ಥ)ಆಗಿದ್ದ ಬೇರ್ಟಿ ಅಹೆರ್ನ್, ಇದೀಗ ಬಹುತೇಕ ಸಾರ್ವಜನಿಕವಾಗಿ "ಉತ್ತರ ಐರ್ಲೆಂಡ್‌‌" ಎಂದೇ ಬಳಸುತ್ತಾರೆ, ಇವರು ಈ ಹಿಂದೆ ಕೇವಲ "ದಿ ನಾರ್ತ್" ಎಂದು ಬಳಸುತ್ತಿದ್ದರು. ಉತ್ತರ ಐರ್ಲೆಂಡ್ ನ ಎರಡನೇ ಅತ್ಯಂತ ದೊಡ್ಡ ನಗರದಲ್ಲಿ, ಯಾವುದೇ ಸಮುದಾಯಕ್ಕೆ ಸರಿಹೊಂದದೆ ಎರಡೂ ಸಮುದಾಯಗಳಿಗೆ ಬಿತ್ತರ ಮಾಡುವ ಪ್ರಸಾರ ಮಾರುಕಟ್ಟೆಗಳು ಎರಡೂ ಹೆಸರುಗಳನ್ನು ಪರಸ್ಪರ ಬದಲಾವಣೆ ಮಾಡಿ ಬಳಕೆ ಮಾಡುತ್ತವೆ. ಸಾಮಾನ್ಯವಾಗಿ ವರದಿಯ ಆರಂಭದಲ್ಲಿ "ಲಂಡನ್ ಡೆರ್ರಿ" ಎಂದು ಬಳಸಿ, ಬಳಿಕ ಉಳಿದ ವರದಿಯಲ್ಲಿ ಕೇವಲ "ಡೆರ್ರಿ" ಎಂದು ಬಳಸುತ್ತವೆ. ಆದಾಗ್ಯೂ, ಉತ್ತರ ಐರ್ಲೆಂಡ್ ನೊಳಗೆ, ಎರಡೂ ಸಮುದಾಯಗಳಿಗೆ ಹೊಂದಿಕೆಯಾಗುವ ಮುದ್ರಣ ಮಾಧ್ಯಮವು (ನ್ಯೂಸ್ ಲೆಟರ್ , ಏಕೀಕರಣವಾದಿ ಸಮುದಾಯಕ್ಕೆ ಹೊಂದಿಕೆಯಾದರೆ, ಐರಿಶ್ ನ್ಯೂಸ್ , ರಾಷ್ಟ್ರೀಯತಾವಾದಿ ಸಮುದಾಯಕ್ಕೆ ಹೊಂದಾಣಿಕೆಯಾಗುತ್ತದೆ.) ಸಾಧಾರಣವಾಗಿ ತಮ್ಮ ಸಮುದಾಯವು ಆಯ್ಕೆಮಾಡಿಕೊಳ್ಳುವ ಪದವನ್ನೇ ಬಳಸುತ್ತವೆ. ಏಕೀಕರಣವಾದಿ ಪಕ್ಷದೆಡೆಗೆ ಒಲವನ್ನು ಹೊಂದಿರುವ ಬ್ರಿಟಿಶ್ ದಿನಪತ್ರಿಕೆಗಳು, ಉದಾಹರಣೆಗೆ ಡೈಲಿ ಟೆಲಿಗ್ರ್ಯಾಫ್ , ಸಾಮಾನ್ಯವಾಗಿ ಏಕೀಕರಣವಾದಿ ಸಮುದಾಯದ ಭಾಷೆಯನ್ನು ಬಳಕೆಮಾಡುತ್ತದೆ. ಆದಾಗ್ಯೂ, ಎಡ-ಪಂಥೀಯರೆಡೆಗೆ ಹೆಚ್ಚು ಒಲವು ಹೊಂದಿದ್ದ ಗಾರ್ಡಿಯನ್ , ತನ್ನ ಬರವಣಿಗೆ ಶೈಲಿಯಲ್ಲಿ "ಡೆರ್ರಿ" ಹಾಗು "ಕೋ ಡೆರ್ರಿ" ಪದಗಳನ್ನು ಬಳಸಲು ಸೂಚಿಸುತ್ತದೆ; ಆದರೆ "ಲಂಡನ್ ಡೆರ್ರಿ ಪದವನ್ನಲ್ಲ".[೭೫] ಪರಿಭಾಷೆಯಲ್ಲಿನ ಪ್ರತ್ಯೇಕತೆಯು ವಿಶೇಷವಾಗಿ ಕ್ರೀಡೆ ಹಾಗು ಸಮುದಾಯಗಳೊಂದಿಗೆ ಸಹಯೋಗ ಹೊಂದಿರುವ ಧರ್ಮಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ಗೇಲಿಕ್ ಕ್ರೀಡೆಗಳು "ಡೆರ್ರಿ" ಎಂದು ಬಳಸುತ್ತವೆ. ಒಂದು ಹೆಸರನ್ನು ಹೇಗೆ ಕರೆಯಬೇಕೆಂಬುದನ್ನು ನಿರ್ಧರಿಸಲು ಯಾವುದೇ ಸ್ಪಷ್ಟ ಒಪ್ಪಂದವಿಲ್ಲ. ರಾಷ್ಟ್ರೀಯತಾವಾದಿ-ನಿಯಂತ್ರಿತ ಸ್ಥಳೀಯ ಮಂಡಳಿಯು, ನಗರವನ್ನು "ಡೆರ್ರಿ" ಎಂದು ಮರುನಾಮಕರಣ ಮಾಡಲು ಬಹುಮತದ ಅನುಮೋದನೆಯನ್ನು ನೀಡುವುದರ ಜೊತೆಗೆ ತನ್ನ ನಗರದ ಸ್ಥಾನಮಾನವು ರಾಯಲ್ ಚಾರ್ಟರ್ ನಿಂದ ಋಣಿಯಾಗಿದೆಯೆಂದು ಸ್ಪಷ್ಟಪಡಿಸಿತು. ಕೇವಲ ರಾಣಿಯಿಂದ ನೀಡಲಾದ ಸನ್ನದುಪತ್ರದಿಂದ ಮಾತ್ರ ಹೆಸರನ್ನು ಬದಲಿಸಲು ಸಾಧ್ಯ. ರಾಣಿಯು ಈ ಸಂಗತಿಗೆ ಮಧ್ಯ ಪ್ರವೇಶಿಸದ ಕಾರಣ ಮಂಡಳಿಯನ್ನು ಈಗ ಡೆರ್ರಿ ಸಿಟಿ ಕೌನ್ಸಿಲ್ ಎಂದು ಕರೆಯಲಾಗುತ್ತದೆ. ಆದರೆ ನಗರದ ಹೆಸರು ಇಂದಿಗೂ ಅಧಿಕೃತವಾಗಿ ಲಂಡನ್ ಡೆರ್ರಿ ಎಂದೇ ಇದೆ. ಅದೇನೇ ಇದ್ದರೂ, ಮಂಡಳಿಯು ಲೇಖನ-ಟಿಪ್ಪಣಿಗಳ ಎರಡು ಶ್ರೇಣಿಯನ್ನು ಮುದ್ರಿಸಿದ - ಪ್ರತಿ ಪದಕ್ಕೆ ಒಂದೊಂದು - ಹಾಗು ಅವರ ನೀತಿಯೆಂದರೆ, ಪತ್ರವನ್ನು ಮೂಲದಲ್ಲಿ ಬಳಸಿದಂತೆ ಬರೆದರು, ಯಾವ ಪದವನ್ನು ಬಳಸಿದ್ದಾರೆಯೋ ಅದೇ ಪದವನ್ನು ಬಳಸಿ ಪ್ರತಿಕ್ರಿಯಿಸಲಾಗುತ್ತಿತ್ತು. ಜನಾಂಗೀಯ ಘರ್ಷಣೆಗಳು ಅಧಿಕಗೊಂಡ ಸಮಯದಲ್ಲಿ, ಪ್ರತಿ ಗುಂಪು, ಕ್ರಮವಾಗಿ ಇತರ ಸಮುದಾಯದೊಂದಿಗೆ ಸಹಯೋಗ ಹೊಂದಿರುವ ಪದಗಳನ್ನು ಮೂರನೇ ಗುಂಪಿನಿಂದ ಅಂದರೆ ಮಾಧ್ಯಮ ಸಂಸ್ಥೆಗಳಿಂದ ಬಳಸಲ್ಪಟ್ಟಿದೆಯೆಂದು ಆರೋಪ ಮಾಡುತ್ತದೆ. ಇಂತಹ ಬಳಕೆಗಳು ತಮ್ಮ ಸಮುದಾಯಕ್ಕೆ ವಿರುದ್ಧವಾಗಿ ಸ್ಪಷ್ಟ "ಪಕ್ಷಪಾತ",ಪೂರ್ವಗ್ರಹವನ್ನು ಸೂಚಿಸುತ್ತವೆ ಎಂದು ವಾದಿಸುತ್ತವೆ.

ಯೂನಿಯನಿಸ್ಟ್(ಏಕೀಕರಣವಾದಿ)/ಲಾಯಲಿಸ್ಟ್(ನಿಷ್ಠಾವಂತ)[ಬದಲಾಯಿಸಿ]

  • ಅಲ್ಸ್ಟರ್ (ಉಲೈಡ್ಹ್ ), ನಿರ್ದಿಷ್ಟವಾಗಿ ಹೇಳಬಹುದಾದರೆ, ಇದು ಅಲ್ಸ್ಟರ್ ಪ್ರಾಂತಕ್ಕೆ ಸೂಚಿತವಾಗಿದೆ. ಇದರ ಒಂಬತ್ತು ಐತಿಹಾಸಿಕ ಪ್ರಾಂತಗಳಲ್ಲಿ ಆರು ಉತ್ತರ ಐರ್ಲೆಂಡ್ ನಲ್ಲಿದೆ. "ಅಲ್ಸ್ಟರ್" ಪದವನ್ನು ಏಕೀಕರಣವಾದಿ ಸಮುದಾಯವು ವ್ಯಾಪಕವಾಗಿ ಬಳಸುತ್ತದೆ. ಅಲ್ಲದೇ ಬ್ರಿಟಿಶ್ ಮುದ್ರಣಾಲಯವು ಉತ್ತರ ಐರ್ಲೆಂಡ್ ಪದದ ಸಂಕ್ಷಿಪ್ತ ರೂಪವಾಗಿ ಬಳಸುತ್ತದೆ.[೭೬] ಈ ಹಿಂದೆ, ಉತ್ತರ ಐರ್ಲೆಂಡ್ ಎಂಬ ಹೆಸರನ್ನು ಅಲ್ಸ್ಟರ್ ಎಂದು ಬದಲಿಸಬೇಕೆಂದು ಕರೆ ನೀಡಲಾಗಿತ್ತು. ಈ ಪ್ರಸ್ತಾಪವನ್ನು, 1937ರಲ್ಲಿ ಉತ್ತರ ಐರ್ಲೆಂಡ್‌‌ ಸರ್ಕಾರವು ಅಧಿಕೃತವಾಗಿ ಪರಿಗಣಿಸಿತ್ತು. ಅದಕ್ಕೆ 1949ರಲ್ಲಿ ಮತ್ತೊಮ್ಮೆ ಯಾವುದೇ ಬದಲಾವಣೆ ಮಾಡಲಿಲ್ಲ.[೭೭]
  • ದಿ ಪ್ರಾವಿನ್ಸ್(ಪ್ರಾಂತ) (ಆನ್ ಕುಯಿಗೆ ), ಅಲ್ಸ್ಟರ್ ನ ಐತಿಹಾಸಿಕ ಐರಿಶ್ ಪ್ರಾಂತಕ್ಕೆ ಪದಶಃ ಸೂಚಿತವಾಗಿದೆ ಆದರೆ ಇಂದು ಈ ಪದವನ್ನು ಉತ್ತರ ಐರ್ಲೆಂಡ್‌‌ ನ ಸಂಕ್ಷಿಪ್ತ ಪದವಾಗಿ ಬಳಸಲಾಗುತ್ತದೆ. BBC, ರಿಪೋರ್ಟಿಂಗ್ ದಿ ಯುನೈಟೆಡ್ ಕಿಂಗ್ಡಮ್ ಎಂಬ ತನ್ನ ಸಂಪಾದಕೀಯ ಮಾರ್ಗದರ್ಶನದಲ್ಲಿ, "ದಿ ಪ್ರಾವಿನ್ಸ್" ಎಂಬುದು ಉತ್ತರ ಐರ್ಲೆಂಡ್‌‌ ಗೆ ಮಾಡಬಹುದಾದ ಸೂಕ್ತ ದ್ವಿತೀಯಕ(ಎರಡನೆಯ ಪ್ರಧಾನ) ಸಮಾನಾರ್ಥಕ ಪದವಾಗಿದೆ. ಆದರೆ "ಅಲ್ಸ್ಟರ್" ಪದವು ಅಷ್ಟು ಸೂಕ್ತವಾಗಿಲ್ಲವೆಂದು ಸೂಚಿಸುತ್ತದೆ. "ಉತ್ತರ ಐರ್ಲೆಂಡ್‌‌ ನ ಜನರನ್ನು", "ಬ್ರಿಟಿಷರೆಂದು" ಪರಿಗಣಿಸಬೇಕೆಂದು ಸೂಚಿಸುತ್ತದೆ. ಜೊತೆಗೆ "ಮುಖ್ಯಭೂಮಿ" ಎಂಬ ಪದವನ್ನು ಉತ್ತರ ಐರ್ಲೆಂಡ್ ಗೆ[೭೮] ಸಂಬಂಧಿಸಿದಂತೆ ಗ್ರೇಟ್ ಬ್ರಿಟನ್ ನನ್ನು ಸೂಚಿಸುವಾಗ ಬಿಟ್ಟು ಬಿಡಬೇಕು.

ರಾಷ್ಟ್ರೀಯತಾವಾದಿ/ಗಣತಂತ್ರವಾದಿ[ಬದಲಾಯಿಸಿ]

  • ನಾರ್ತ್ ಆಫ್ ಐರ್ಲೆಂಡ್ (ಟುವಾಯಿಸ್ಸೇಯರ್ಟ್ ನ ಹೆಯಿರೆಯನ್ನ್ ) ಅಥವಾ ಐರ್ಲೆಂಡ್ ನ ಈಶಾನ್ಯ ಭಾಗ (ಒಯಿರ್ತುವೈಸ್ಸೇಯರ್ಟ್ ಇರೆಯನ್ನ್ ) - ದ್ವೀಪದ ಉಳಿದ ಭಾಗದೊಂದಿಗೆ ಉತ್ತರ ಐರ್ಲೆಂಡ್ ನ ಸಂಬಂಧಕ್ಕೆ ಪ್ರಾಶಸ್ತ್ಯ ನೀಡುವುದು, ಹಾಗು ಈ ರೀತಿ ಮಾಡುವುದರೊಂದಿಗೆ ಉತ್ತರ ಐರ್ಲೆಂಡ್ ಮೇಲೆ ಗ್ರೇಟ್ ಬ್ರಿಟನ್ ನ ಪ್ರಭಾವ ತಗ್ಗಿಸುವುದು.[೭೯]
  • ದಿ ಸಿಕ್ಸ್ ಕೌಂಟಿಸ್(ಆರು ಪ್ರಾಂತಗಳು) (ನಾ ಸೆ ಚೊಂತಯೆ ) - ಗಣತಂತ್ರವಾದಿಗಳು ಬಳಸುವ ಭಾಷೆ, ಉದಾಹರಣೆಗೆ, ಸಿನ್ನ್ ಫೆಯಿನ್, ಬ್ರಿಟಿಶ್ ಕಾನೂನು ಗವರ್ನಮೆಂಟ್ ಆಫ್ ಐರ್ಲೆಂಡ್ ಆಕ್ಟ್ 1920 ನೀಡಿದ ಹೆಸರನ್ನು ಬಳಸಲು ನಿರಾಕರಿಸುತ್ತದೆ.(ಗಣತಂತ್ರವಾದವು ಇಪ್ಪತ್ತಾರು ಕೌಂಟಿಗಳಲ್ಲಿ ಏಕರೀತಿಯಾಗಿ ವಿವರಿಸಲಾಗುತ್ತದೆ).[೮೦] ಈ ಪದಗಳನ್ನು ಬಳಸುವ ಹಲವರು, ಪ್ರದೇಶದ ಅಧಿಕೃತ ಹೆಸರಿನ ಬಳಕೆಯು, ಗವರ್ನಮೆಂಟ್ ಆಫ್ ಐರ್ಲೆಂಡ್ ಆಕ್ಟ್ ಗೆ ಸಮ್ಮತಿ ಇದೆಯೆಂದು ವಾದಿಸುತ್ತಾರೆ.
  • ಆಕ್ರಮಿಸಿಕೊಳ್ಳಲಾದ ಆರು ಕೌಂಟಿಗಳು . ಐರ್ಲೆಂಡ್ ರಾಜ್ಯವನ್ನು, ಬೆಲ್ಫಾಸ್ಟ್ ಒಪ್ಪಂದಕ್ಕೆ ವಿರೋಧಿಸಿದ ಗಣತಂತ್ರವಾದಿಗಳು ಕಾನೂನು ಸಮ್ಮತವೆಂದು ಗುರುತಿಸಿಲ್ಲ, ಇದನ್ನು ಐರಿಶ್ ಫ್ರೀ ಸ್ಟೇಟ್ ಬಗ್ಗೆ ಸೂಚಿಸುತ್ತ "ದಿ ಫ್ರೀ ಸ್ಟೇಟ್" ಎಂದು ವಿವರಿಸುತ್ತಾರೆ, ಇದು 1922ರಲ್ಲಿ ಸ್ವಾತಂತ್ರ್ಯ ಪಡೆಯಿತು.(ಒಂದು ಪರಮಾಧಿಕಾರವಾಗಿ ಸ್ವತಂತ್ರವಾಯಿತು).[೮೧]
  • ಬ್ರಿಟಿಶ್ ಆಕ್ರಮಿತ ಐರ್ಲೆಂಡ್‌‌ . ವಶಪಡಿಸಿಕೊಳ್ಳಲಾದ ಆರು ಕೌಂಟಿಗಳಿಗೆ ಸಮಾನವಾಗಿ ಈ ಪದವನ್ನು ಹೆಚ್ಚು ತತ್ತ್ವಾತ್ಮಕ ಗುಡ್ ಫ್ರೈಡೆ ಒಪ್ಪಂದದ ವಿರೋಧಿ ಗಣತಂತ್ರವಾದಿಗಳು ಬಳಸುತ್ತಾರೆ. ಇವರು ಇಂದಿಗೂ ಫಸ್ಟ್ ಡೈಲ್ ಐರ್ಲೆಂಡ್ ನ ಕಡೆ ಕಾನೂನು ಸಮ್ಮತ ಸರ್ಕಾರವೆಂದು ಸಮರ್ಥಿಸುತ್ತಾರೆ ಹಾಗು ಅಲ್ಲಿಂದೀಚೆಗೆ ರಚಿತ ಎಲ್ಲ ಸರ್ಕಾರಗಳು, ಐರಿಶ್ ರಾಷ್ಟ್ರೀಯ ಸ್ವಯಮಾಧಿಕಾರಕ್ಕೆ ವಿದೇಶಿಯರ ದುರಾಕ್ರಮಣವೆಂದು ವಾದಿಸುತ್ತಾರೆ.[೮೨]
  • ಫೋರ್ಥ್ ಗ್ರೀನ್ ಫೀಲ್ಡ್ (ಆನ್ ಚೆಯಥ್ರು ಗೋರ್ಟ್ ಗ್ಲಾಸ್ ).[ಸೂಕ್ತ ಉಲ್ಲೇಖನ ಬೇಕು] ಟಾಮಿ ಮಾಕೆಂರ ಫೋರ್ ಗ್ರೀನ್ ಫೀಲ್ಡ್ಸ್ ಹಾಡು, ಐರ್ಲೆಂಡ್ ನಾಲ್ಕು ಹಸಿರು ಪ್ರದೇಶಗಳ ಒಂದರಲ್ಲಿ ವಿಭಾಗವಾಗಿದೆಯೆಂದು ವಿವರಿಸುತ್ತದೆ. (ಸಾಂಪ್ರದಾಯಿಕ ಐರ್ಲೆಂಡ್ ಪ್ರಾಂತಗಳು), ಇನ್ ಸ್ಟ್ರೆನ್ಜರ್ಸ್ ಹ್ಯಾಂಡ್ ಗಳಲ್ಲಿರುವುದು, ಐರ್ಲೆಂಡ್ ನ ಇಬ್ಭಾಗವನ್ನು ಸೂಚಿಸುತ್ತದೆ.

ಇತರೆ[ಬದಲಾಯಿಸಿ]

  • ದಿ ನಾರ್ತ್ (ಆನ್ ಟುವಾಯಿಸ್ಸೇಯರ್ಟ್ ) - ಗಣತಂತ್ರವಾದದ ವಿವರಣೆಯಲ್ಲಿ ಬಳಸಲಾಗುತ್ತಿದ್ದ "ದಿ ಸೌತ್" ನ ಮಾದರಿಯಲ್ಲೇ ಉತ್ತರ ಐರ್ಲೆಂಡ್ ನ್ನು ವಿವರಿಸಲು ಬಳಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]
  • ನಾರ್ನ್ ಐರನ್ (ಈ ಹಿಂದೆ ರಾಜಕೀಯ ಪರಿಭಾಷೆ "ನಾರ್ನ್ ಐರ್ನ್" ಎಂದು ಭಾಷಾಂತರಿಸಲಾಗುತ್ತಿತ್ತು.)[೮೩][೮೪] - ಎಂಬ ಅನೌಪಚಾರಿಕ ಹಾಗು ಸ್ನೇಹಪೂರ್ಣವಾದ[ಸೂಕ್ತ ಉಲ್ಲೇಖನ ಬೇಕು] ಸ್ಥಳೀಯ ಸಂಕ್ಷಿಪ್ತ ಹೆಸರನ್ನು, ಉತ್ತರ ಐರ್ಲೆಂಡ್ ನ್ನು ಸೂಚಿಸಲು ರಾಷ್ಟ್ರೀಯತಾವಾದಿಗಳು ಹಾಗು ಏಕೀಕರಣವಾದಿಗಳು ಇಬ್ಬರೂ ಬಳಸುತ್ತಾರೆ. ಇದು "ನಾರ್ತ್ ಐರ್ಲೆಂಡ್" ಎಂಬ ಉತ್ಪ್ರೇಕ್ಷಿತ ಅಲ್ಸ್ಟರ್ ಉಚ್ಚಾರಣಾ ಶೈಲಿಯಿಂದ ವ್ಯುತ್ಪತ್ತಿ ಹೊಂದಿದೆ.(ಅದರಲ್ಲೂ ವಿಶೇಷವಾಗಿ ಗ್ರೇಟರ್ ಬೆಲ್ಫಾಸ್ಟ್ ಪ್ರದೇಶದ ಉಚ್ಚಾರಣಾ ಶೈಲಿ). ಪದಗುಚ್ಚವನ್ನು ಪ್ರಾದೇಶಿಕ ಉಚ್ಚಾರಣಾ ಶೈಲಿಯನ್ನು ಆಧರಿಸಿ, ಉತ್ತರ ಐರ್ಲೆಂಡ್ ನ್ನು ಸೂಚಿಸುವ ನಿರಾತಂಕವಾದ ಮಾದರಿಯಾಗಿ ಕಾಣಲಾಗುತ್ತದೆ. ಇದು ಸಾಮಾನ್ಯವಾಗಿ ಉತ್ತರ ಐರ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಸೂಚಿತವಾಗುತ್ತದೆ.

ಉತ್ತರ ಐರ್ಲೆಂಡ್‌‌ ನ ವಿಸ್ತೃತ ವಿವರಣೆ [ಬದಲಾಯಿಸಿ]

ಉತ್ತರ ಐರ್ಲೆಂಡ್ ನ್ನು ವಿವರಿಸಲು ಸಾಧಾರಣವಾಗಿ ಸ್ವೀಕೃತವಾದ ಯಾವುದೇ ಪದವಿಲ್ಲ: ಪ್ರಾಂತ, ಪ್ರದೇಶ, ರಾಷ್ಟ್ರ ಅಥವಾ ಬೇರೆ ಯಾವುದಾದರೂ.[೮೫][೮೬][೮೭] ಪದದ ಆಯ್ಕೆ ವಿವಾದಕ್ಕೆ ಎಡೆ ಮಾಡಿಕೊಡಬಹುದು. ಜೊತೆಗೆ ಇದು ಲೇಖಕನ ರಾಜಕೀಯ ಆದ್ಯತೆಯನ್ನು ಪ್ರಕಟಿಸುತ್ತದೆ.[೮೬] ಇದು ಉತ್ತರ ಐರ್ಲೆಂಡ್ ಗೆ ಸಮಸ್ಯೆಯಾಗಿ ಪರಿಣಮಿಸಬಹುದೆಂದು ಹಲವಾರು ಲೇಖಕರು ಗಮನಿಸುತ್ತಾರೆ. ಜೊತೆಗೆ ಇದಕ್ಕೆ ಸಾಧಾರಣವಾಗಿ ಯಾವುದೇ ಪರಿಹಾರ ಸೂಚಿತವಾಗಿಲ್ಲ.[೮೫][೮೬][೮೭] ಯುನೈಟೆಡ್ ಕಿಂಗ್ಡಮ್ ಹಾಗು ಉತ್ತರ ಐರ್ಲೆಂಡ್ ಅಸ್ತಿತ್ವಕ್ಕೆ ಬಂದ ಬಗೆಯ ಕಾರಣದಿಂದಾಗಿ ಭಾಗಶಃ, ಉತ್ತರ ಐರ್ಲೆಂಡ್ 'ಏನು' ಎಂಬುದನ್ನು ವಿವರಿಸುವ ಯಾವುದೇ ಕಾನೂನಿನಿಂದ ಅರ್ಥ ನಿರೂಪಿತ ಪದವಿಲ್ಲ. UK ಸರ್ಕಾರದ ಏಜೆನ್ಸಿಗಳೊಳಗೆ ಉತ್ತರ ಐರ್ಲೆಂಡ್ ಗೆ ಸೂಚಿತವಾಗುವ ಯಾವುದೇ ಸಮಾನಾಂತರ ಅಥವಾ ಮಾರ್ಗದರ್ಶಕ ವಿಧಾನಗಳಿಲ್ಲ. ಉದಾಹರಣೆಗೆ, ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿ ಕಚೇರಿಯ ವೆಬ್ಸೈಟ್ ಗಳು[೪] ಹಾಗು ಉಕ್ ಸ್ಟ್ಯಾಟಿಸ್ಟಿಕ್ಸ್ ಅಥಾರಿಟಿ[೩], ಯುನೈಟೆಡ್ ಕಿಂಗ್ಡಮ್ ನಾಲ್ಕು ರಾಷ್ಟ್ರಗಳಿಂದ ರಚಿತವಾಗಿದೆಯೆಂದು ವಿವರಿಸುತ್ತವೆ. ಇದರಲ್ಲಿ ಒಂದು ಉತ್ತರ ಐರ್ಲೆಂಡ್ ಆಗಿದೆ. ಅದೇ ವೆಬ್ಸೈಟ್ ನ ಇತರ ಪುಟಗಳು[೮೮] ಉತ್ತರ ಐರ್ಲೆಂಡ್ ನ್ನು ನಿರ್ದಿಷ್ಟವಾಗಿ "ಪ್ರಾಂತ'ವೆಂದು ಸೂಚಿಸುತ್ತವೆ. ಇದೇ ರೀತಿಯಾಗೂ UK ಸ್ಟ್ಯಾಟಿಸ್ಟಿಕ್ಸ್ ಅಥಾರಿಟಿಯ ಲೇಖನಗಳೂ ಸಹ ಸೂಚಿಸುತ್ತವೆ.[೮೯] ನಾರ್ತ್ ಐರ್ಲೆಂಡ್ ಸ್ಟ್ಯಾಟಿಸ್ಟಿಕ್ಸ್ ನ ವೆಬ್ಸೈಟ್ ಹಾಗು ರಿಸರ್ಚ್ ಏಜೆನ್ಸಿ ಸಹ ಉತ್ತರ ಐರ್ಲೆಂಡ್ ನ್ನು ಪ್ರಾಂತವೆಂದು ಕರೆಯುತ್ತವೆ.[೯೦], ಇದೇ ರೀತಿಯಾಗಿ ಉತ್ತರ ಐರ್ಲೆಂಡ್ ನೊಳಗಿರುವ ಆಫೀಸ್ ಆಫ್ ದಿ ಪಬ್ಲಿಕ್ ಸೆಕ್ಟರ್ ಇನ್ಫಾರ್ಮೇಶನ್[೯೧] ಹಾಗು ಇತರ ಏಜೆನ್ಸಿಗಳೂ ಸಹ ಇದೇ ರೀತಿಯಾಗಿ ಕರೆಯುತ್ತವೆ.[೯೨] ಮತ್ತೊಂದು ಕಡೆಯಲ್ಲಿ HM ಟ್ರೆಷರಿಯ ಮುದ್ರಣಗಳು[೯೩] ಹಾಗು ಉತ್ತರ ಐರ್ಲೆಂಡ್ ಎಕ್ಸಿಕ್ಯುಟಿವ್ ನ ಹಣಕಾಸು ಹಾಗು ಸಿಬ್ಬಂದಿ ಇಲಾಖೆಯು,[೯೪] ಉತ್ತರ ಐರ್ಲೆಂಡ್ ನ್ನು "UKಯ ಪ್ರದೇಶವೆಂದು" ವಿವರಿಸುತ್ತವೆ. 2007ರಲ್ಲಿ ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಆನ್ ದಿ ಸ್ಟ್ಯಾನ್ಡರ್ಡೈಸೆಷನ್ ಆಫ್ ಜಿಯೋಗ್ರ್ಯಾಫಿಕ್ ನೇಮ್ಸ್ ಗೆ UK ಸಲ್ಲಿಸಿದ ವರದಿಯ ಪ್ರಕಾರ UK ಎರಡು ರಾಷ್ಟ್ರಗಳಿಂದ ರಚಿತವಾಗಿದೆ.(ಇಂಗ್ಲೆಂಡ್ ಹಾಗು ಸ್ಕಾಟ್ಲ್ಯಾಂಡ್), ಒಂದು ಸಂಸ್ಥಾನ (ವೇಲ್ಸ್) ಹಾಗು ಒಂದು ಪ್ರಾಂತ(ಉತ್ತರ ಐರ್ಲೆಂಡ್).[೯೫] ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗು ವೇಲ್ಸ್ ಗಿಂತ ಭಿನ್ನವಾಗಿ, ಉತ್ತರ ಐರ್ಲೆಂಡ್ ಒಂದು ಸ್ವತಂತ್ರ ರಾಷ್ಟ್ರದ ಅಥವಾ ತನ್ನದೇ ಹಕ್ಕನ್ನು ಹೊಂದಿರುವ ರಾಷ್ಟ್ರವಾಗಿ ಯಾವುದೇ ಇತಿಹಾಸವನ್ನು ಹೊಂದಿಲ್ಲ.[೯೬] ಕೆಲವು ಲೇಖಕರು, ಯುನೈಟೆಡ್ ಕಿಂಗ್ಡಮ್ ಮೂರು ರಾಷ್ಟ್ರಗಳು ಹಾಗು ಒಂದು ಪ್ರಾಂತದಿಂದ ರಚಿತವಾಗಿದೆಯೆಂದು ವಿವರಿಸುತ್ತಾರೆ.[೯೭] ಅಥವಾ ಉತ್ತರ ಐರ್ಲೆಂಡ್‌‌ ನ್ನು ಒಂದು ರಾಷ್ಟ್ರವೆಂದು ಕರೆಯಲು ಎದುರಾಗುವ ಸಮಸ್ಯೆಯನ್ನು ಗುರುತಿಸುತ್ತಾರೆ.[೯೮] ಉತ್ತರ ಐರ್ಲೆಂಡ್‌‌ ನ ಬಗ್ಗೆ ಬರೆಯುವ ಲೇಖಕರು, ಸಾಧಾರಣವಾಗಿ ಉತ್ತರ ಐರ್ಲೆಂಡ್‌‌ ನ್ನು ಒಂದು "ರಾಷ್ಟ್ರ"ವೆಂದು ಕರೆಯುವ ಆಲೋಚನಾ ವಿಧಾನವನ್ನು ತಳ್ಳಿಹಾಕುತ್ತಾರೆ.[೮೫][೮೭][೯೯][೧೦೦] ಅದಲ್ಲದೇ ಈ ನಿಟ್ಟಿನಲ್ಲಿ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗು ವೇಲ್ಸ್ ನೊಂದಿಗೆ ಭೇದ ಹೊಂದಿದ್ದಾರೆ.[೧೦೧] ಉತ್ತರ ಐರ್ಲೆಂಡ್‌‌ ಅಸ್ತಿತ್ವಕ್ಕೆ ಬಂದ ಮೊದಲ ಐವತ್ತು ವರ್ಷಗಳ ಅವಧಿಯಲ್ಲಿ, ಹಲವು ನಿರ್ಣಯಗಳು ಲಂಡನ್ ನಲ್ಲೇ ತೆಗೆದುಕೊಳ್ಳುತ್ತಿದ್ದ ಕಾರಣದಿಂದಾಗಿ ರಾಷ್ಟ್ರ ಎಂಬ ಪದವು ಅಸಮಂಜಸವೆಂದು ಹಲವು ರಾಜಕೀಯ ತಜ್ಞರು ಪರಿಗಣಿಸುತ್ತಾರೆ.[೯೬] ಐರ್ಲೆಂಡ್ ನ ದ್ವೀಪದೊಳಗೆ ಪ್ರತ್ಯೇಕವಾಗಿ, ಉತ್ತರ ಐರ್ಲೆಂಡ್ ಒಂದು ಗಮನಾರ್ಹ ರಾಷ್ಟ್ರವೆಂಬ ಖ್ಯಾತಿಗಳಿಸಲು ಅಸಮರ್ಥವಾಗಿದ್ದೂ ಸಹ, ಈ ಪದದ ಬಳಕೆಯಲ್ಲಿ ಸಮಸ್ಯೆಯನ್ನು ಹುಟ್ಟುಹಾಕಿದೆಯೆಂದು ಗುರುತಿಸಲಾಗುತ್ತದೆ.[೮೭][೧೦೨][೧೦೩] ಜೊತೆಗೆ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗು ವೇಲ್ಸ್ ನೊಂದಿಗೆ ಅಭಿಪ್ರಾಯ ಭೇದ ಹೊಂದಿದೆ.[೧೦೪] ಹಲವು ವ್ಯಾಖ್ಯಾನಕಾರರು "ಪ್ರಾಂತ" ಎಂಬ ಪದವನ್ನು ಬಳಸಲು ಇಚ್ಚಿಸುತ್ತಾರೆ. ಆದಾಗ್ಯೂ ಈ ಪದವೂ ಸಹ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ವಿಶೇಷವಾಗಿ ರಾಷ್ಟ್ರೀಯವಾದಿಗಳ ನಡುವೆ ಇದು ಕಿರಿಕಿರಿಯನ್ನು ಉಂಟುಮಾಡಬಹುದು. ಇವರುಗಳು ಪ್ರಾಂತ ಎಂಬ ಪದವು ಸಾಂಪ್ರದಾಯಿಕ ಅಲ್ಸ್ಟರ್ ನ ಪ್ರಾಂತಕ್ಕೆ ಮಾತ್ರ ಮೀಸಲಾಗಿದೆಯೆಂದು ಹೇಳುತ್ತಾರೆ. ಇದರಂತೆ ‌‌ಒಂಬತ್ತು ಕೌಂಟಿಗಳಲ್ಲಿ ಆರು ಕೌಂಟಿಗಳು ಉತ್ತರ ಐರ್ಲೆಂಡ್ ನ ವಶದಲ್ಲಿವೆ.[೮೬][೯೮] BBC ಯ ಶ್ರೇಣೀಕೃತ ಮಾರ್ಗದರ್ಶಿಯು ಉತ್ತರ ಐರ್ಲೆಂಡ್ ನ್ನು ಒಂದು ಪ್ರಾಂತವಾಗಿ ಸೂಚಿಸುತ್ತದೆ. ಜೊತೆಗೆ ಈ ಪದವು ಸಾಹಿತ್ಯ ಹಾಗು ಉತ್ತರ ಐರ್ಲೆಂಡ್ ಹಾಗು ಯುನೈಟೆಡ್ ಕಿಂಗ್ಡಮ್ ನ ದಿನಪತ್ರಿಕೆ ವರದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವು ಲೇಖಕರು ಈ ಪದದ ಅರ್ಥವು ಅಸ್ಪಷ್ಟವಾಗಿದೆಯೆಂದು ವಿವರಿಸುತ್ತಾರೆ: ಉತ್ತರ ಐರ್ಲೆಂಡ್‌‌, ಯುನೈಟೆಡ್ ಕಿಂಗ್ಡಮ್ ಹಾಗು ಸಾಂಪ್ರದಾಯಿಕ ಐರ್ಲೆಂಡ್ ರಾಷ್ಟ್ರ ಎರಡರಲ್ಲೂ ಪ್ರಾಂತವೆಂದೇ ಸೂಚಿತವಾಗುತ್ತದೆ.[೧೦೨] "ಪ್ರದೇಶ" ಎಂದು ಹಲವಾರು UK ಸರ್ಕಾರಿ ಏಜೆನ್ಸಿಗಳು ಹಾಗು ಯುರೋಪಿಯನ್ ಒಕ್ಕೂಟ ಬಳಸುತ್ತವೆ. ಕೆಲವು ಲೇಖಕರು ಈ ಪದವನ್ನು ಆಯ್ದುಕೊಂಡರೂ ಸಹ ಇದು "ಸ್ವೀಕಾರಾರ್ಹವಲ್ಲವೆಂದು" ಭಾವಿಸುತ್ತಾರೆ.[೮೬][೮೭] ಉತ್ತರ ಐರ್ಲೆಂಡ್ ನ್ನು ಕೇವಲ "UKಯ ಭಾಗವೆಂದು" ವಿವರಿಸಬಹುದು; ಇದರಲ್ಲಿ UK ಸರ್ಕಾರಿ ಕಚೇರಿಗಳೂ ಸಹ ಸೇರುತ್ತವೆ.[೪]

ಕ್ರೀಡೆ[ಬದಲಾಯಿಸಿ]

ಉತ್ತರ ಐರ್ಲೆಂಡ್‌‌ ನಲ್ಲಿ, ಕ್ರೀಡೆಯು ಜನಪ್ರಿಯವಾಗಿರುವುದರ ಜೊತೆಗೆ ಹಲವರ ಬದುಕಿನಲ್ಲಿ ಪ್ರಮುಖವಾಗಿದೆ. ಕ್ರೀಡೆಗಳನ್ನು, ಉತ್ತರ ಐರ್ಲೆಂಡ್‌‌ ಹಾಗು ಗಣರಾಜ್ಯ ಎರಡನ್ನು ಒಳಗೊಂಡಂತೆ ಸಂಪೂರ್ಣ-ಐರ್ಲೆಂಡ್ ಆಧಾರದ ಮೇಲೆ ಆಯೋಜಿಸಲಾಗುತ್ತದೆ. ಉದಾಹರಣೆಗೆ ಗೇಲಿಕ್ ಫುಟ್ಬಾಲ್, ರಗ್ಬಿ, ಹಾಕಿ, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಹಾಗು ಹರ್ಲಿ ಆಟ.[೧೦೫] ಇದಕ್ಕೆ ಹೊರತಾಗಿದ್ದೆಂದರೆ ಅಸೋಸಿಯೇಶನ್ ಫುಟ್ಬಾಲ್, ಇದಕ್ಕೆ ಪ್ರತಿ ಕ್ಷೇತ್ರದಲ್ಲಿ ಪ್ರತ್ಯೇಕ ಕಾರ್ಯನಿರ್ವಹಣಾ ಅಂಗಗಳಿರುತ್ತವೆ.[೧೦೫]

ಅಸೋಸಿಯೇಶನ್ ಫುಟ್ಬಾಲ್ (ಸಾಕರ್)[ಬದಲಾಯಿಸಿ]

ಐರಿಶ್ ಫುಟ್ಬಾಲ್ ಅಸೋಸಿಯೇಶನ್ (IFA), ಉತ್ತರ ಐರ್ಲೆಂಡ್ ನಲ್ಲಿ ನಡೆಯುವ ಅಸೋಸಿಯೇಶನ್ ಫುಟ್ಬಾಲ್ ನ್ನು ಆಯೋಜಿಸುವ ಅಂಗವಾಗಿದೆ. ಉತ್ತರ ಐರ್ಲೆಂಡ್ ನೊಳಗೆ ನಡೆಯುವ ಉನ್ನತ ಮಟ್ಟದ ಸ್ಪರ್ಧೆಯೆಂದರೆ IFA ಪ್ರೀಮಿಯರ್ಶಿಪ್. ಸಂಪೂರ್ಣ-ದ್ವೀಪದ ಟೂರ್ನಮೆಂಟ್ ಆದ ಸೇಟನ್ಟ ಕಪ್ ಸಹ ಆಯೋಜಿಸಲಾಗುತ್ತದೆ. ಇದು ನಾಲ್ಕು IFA ಪ್ರೀಮಿಯರ್ಶಿಪ್ ತಂಡಗಳು ಹಾಗು ರಿಪಬ್ಲಿಕ್ಸ್ ಲೀಗ್ ನ ನಾಲ್ಕು ತಂಡಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಉತ್ತಮ ಪ್ರದರ್ಶನವನ್ನು ನೀಡುವ ಉತ್ತರ ಐರಿಶ್ ಆಟಗಾರರು, ಇಂಗ್ಲಿಷ್ ಅಥವಾ ಸ್ಕಾಟಿಷ್ ಲೀಗ್ ಗಳಲ್ಲಿ ಗ್ರೇಟ್ ಬ್ರಿಟನ್ ನ ಕ್ಲಬ್ ಗಳಿಗಾಗಿ ಆಟವಾಡುತ್ತಾರೆ. ಉತ್ತರ ಐರ್ಲೆಂಡ್‌‌ ನ ಸಣ್ಣ ಜನಸಂಖ್ಯೆಯ ಹೊರತಾಗಿಯೂ, ಅದರ ಅಂತರರಾಷ್ಟ್ರೀಯ ತಂಡವು ಹಲವಾರು ಗಮನಾರ್ಹ ಯಶಸ್ಸುಗಳನ್ನು ಹೊಂದಿದೆ. ಇದರಲ್ಲಿ 1958 ಹಾಗು 1982ರ ವಿಶ್ವ ಕಪ್ ಕ್ವಾರ್ಟರ್ ಫೈನಲ್ ಪ್ರದರ್ಶನಗಳೂ ಸೇರಿವೆ.

ಕ್ರಿಕೆಟ್[ಬದಲಾಯಿಸಿ]

ರಾಷ್ಟ್ರದಲ್ಲಿ ಕ್ರಿಕೆಟ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಗಣರಾಜ್ಯ ಹಾಗು ಉತ್ತರ ಐರ್ಲೆಂಡ್ ನ್ನು ಪ್ರತಿನಿಧಿಸುವ ಐರ್ಲೆಂಡ್ ಕ್ರಿಕೆಟ್ ತಂಡವು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸಹ ಸದಸ್ಯನಾಗಿದೆ. ಇದು 2007ರ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಭಾಗವಹಿಸಿ ಸುಪರ್ 8ಗೆ ಅರ್ಹತೆ ಪಡೆಯಿತು. ಅಲ್ಲದೇ ಇದು 2009ರ ICC ವಿಶ್ವ ಟ್ವೆಂಟಿ20ಯಲ್ಲೂ ಪುನರಾವರ್ತನೆಯಾಯಿತು. ಐರ್ಲೆಂಡ್‌‌ ತಂಡದವರು ICC ಇಂಟರ್ಕಾಂಟಿನೆಂಟಲ್ ಕಪ್ ನ ಹಾಲಿ ಚ್ಯಾಂಪಿಯನ್ ಗಳಾಗಿದ್ದಾರೆ. ಅಲ್ಲದೇ ಅಂಡರ್-19 ತಂಡವೂ ಸಹ ಉತ್ತಮ ಪ್ರದರ್ಶನ ನೀಡುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ಬೆಲ್ಫಾಸ್ಟ್ ನ ಸ್ಟೋರ್ಮೊಂಟ್ ನಿಗದಿಯಾದ ಅಂತರರಾಷ್ಟ್ರೀಯ ಕ್ರೀಡಾಂಗಣವಾಗಿದೆ.

ಗೇಲಿಕ್ ಆಟಗಳು[ಬದಲಾಯಿಸಿ]

ಗೇಲಿಕ್ ಆಟಗಳಲ್ಲಿ ಗೇಲಿಕ್ ಫುಟ್ಬಾಲ್, ಹರ್ಲ್ ಆಟ, ಗೇಲಿಕ್ ಹ್ಯಾಂಡ್ ಬಾಲ್ ಹಾಗು ರೌಂಡರ್ ಗಳು ಸೇರಿವೆ. ಈ ನಾಲ್ಕರಲ್ಲಿ, ಫುಟ್ಬಾಲ್ ಉತ್ತರ ಐರ್ಲೆಂಡ್‌‌ ನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಆಟಗಾರರು ಸ್ಥಳೀಯ ಕ್ಲಬ್ ಗಳಿಗಾಗಿ ಆಡುತ್ತಾರೆ. ಅಲ್ಲದೇ ಇವರಲ್ಲಿ ಉತ್ತಮ ಪ್ರದರ್ಶನ ತೋರಿದವರು ತಮ್ಮ ಕೌಂಟಿ ತಂಡಗಳಿಗೆ ಆಯ್ಕೆಯಾಗುತ್ತಾರೆ: ಆಂಟ್ರಿಂ, ಅರ್ಮಗ್ಹ್, ಡೆರ್ರಿ, ಡೌನ್, ಫೆರ್ಮನಗ್ಹ್ ಹಾಗು ಟೈರೋನ್. ಅಲ್ಸ್ಟರ್ GAA, ಗೇಲಿಕ್ ಅಥ್ಲೆಟಿಕ್ ಅಸೋಸಿಯೇಶನ್ ನ ಶಾಖೆಯಾಗಿದೆ. ಇದು ಅಲ್ಸ್ಟರ್ ನ ಎಲ್ಲ ಒಂಬತ್ತು ಕೌಂಟಿಗಳ ಜವಾಬ್ದಾರಿ ಹೊಂದಿದ್ದು, ಇದರಲ್ಲಿ ಆರು ಕೌಂಟಿಗಳು ಉತ್ತರ ಐರ್ಲೆಂಡ್ ನಲ್ಲಿವೆ. ಎಲ್ಲ ಒಂಬತ್ತು ತಂಡಗಳು ಅಲ್ಸ್ಟರ್ ಸೀನಿಯರ್ ಫುಟ್ಬಾಲ್ ಚ್ಯಾಂಪಿಯನ್ಶಿಪ್, ಅಲ್ಸ್ಟರ್ ಸೀನಿಯರ್ ಹರ್ಲಿಂಗ್ ಚ್ಯಾಂಪಿಯನ್ಶಿಪ್, ಆಲ್-ಐರ್ಲೆಂಡ್ ಸೀನಿಯರ್ ಫುಟ್ಬಾಲ್ ಚ್ಯಾಂಪಿಯನ್ಶಿಪ್ ಹಾಗು ಆಲ್-ಐರ್ಲೆಂಡ್ ಸೀನಿಯರ್ ಹರ್ಲಿಂಗ್ ಚ್ಯಾಂಪಿಯನ್ಶಿಪ್ ನಲ್ಲಿ ಭಾಗವಹಿಸುತ್ತವೆ. ಉತ್ತರ ಐರ್ಲೆಂಡ್‌‌ ತಂಡಗಳ ಇತ್ತೀಚಿನ ಯಶಸ್ಸಿನಲ್ಲಿ ಅರ್ಮಗ್ಹ್ ನ 2002ರ ಆಲ್ ಐರ್ಲೆಂಡ್‌‌ ಸೀನಿಯರ್ ಫುಟ್ಬಾಲ್ ಚ್ಯಾಂಪಿಯನ್ಶಿಪ್ ಜಯ ಹಾಗು 2003, 2005 ಹಾಗು 2008ರಲ್ಲಿ ಟೈರೋನ್ ತಂಡದ ಜಯ.

ಗಾಲ್ಫ್‌[ಬದಲಾಯಿಸಿ]

ಉತ್ತರ ಐರ್ಲೆಂಡ್‌‌, ಹಲವಾರು ಗಾಲ್ಫ್ ಕೋರ್ಸ್ ಗಳನ್ನು ಹೊಂದಿದೆ. ಉದಾಹರಣೆಗೆ ರಾಯಲ್ ಬೆಲ್ಫಾಸ್ಟ್ ಗಾಲ್ಫ್ ಕ್ಲಬ್(1881ರಲ್ಲಿ ಸ್ಥಾಪಿತ ಅತ್ಯಂತ ಹಳೆಯ ಕ್ಲಬ್), ರಾಯಲ್ ಪೋರ್ಟ್ರಷ್ ಗಾಲ್ಫ್ ಕ್ಲಬ್(ದಿ ಓಪನ್ ಚ್ಯಾಂಪಿಯನ್ಶಿಪ್ ನ್ನು ಗ್ರೇಟ್ ಬ್ರಿಟನ್ ನ ಹೊರಗೆ ಆಯೋಜಿಸಿದ ಏಕೈಕ ಕೋರ್ಸ್), ಹಾಗು ರಾಯಲ್ ಕೌಂಟಿ ಡೌನ್ ಗಾಲ್ಫ್ ಕ್ಲಬ್(ಅಮೆರಿಕ ಸಂಯುಕ್ತ ಸಂಸ್ಥಾನದ ಹೊರಗಿರುವ ಗಾಲ್ಫ್ ಡೈಜೆಸ್ಟ್ ನಿಯತಕಾಲಿಕದ ಅಗ್ರಮಾನ್ಯ ಕೋರ್ಸ್).[೧೦೬][೧೦೭] ಗಮನಾರ್ಹ ಗಾಲ್ಫ್ ಆಟಗಾರರಲ್ಲಿ ಡಾರ್ರೆನ್ ಕ್ಲಾರ್ಕೆ, ಫ್ರೆಡ್ ಡಾಲಿ(1947ರ ದಿ ಓಪನ್ ವಿಜೇತ), ಗ್ರೆಮೆ ಮ್ಯಾಕ್ ಡೋವೆಲ್(2010ರ U.S.ಓಪನ್ ವಿಜೇತ, 1970ರಿಂದೀಚೆಗಿನ ಮೊದಲ ಯುರೋಪಿಯನ್) ಹಾಗು ರೋರಿ ಮ್ಯಾಕ್ ಲ್ಲ್ರೊಯ್.[೧೦೮]

ರಗ್ಬಿ ಯೂನಿಯನ್‌[ಬದಲಾಯಿಸಿ]

ಐರಿಶ್ ರಗ್ಬಿ ಫುಟ್ಬಾಲ್ ಯೂನಿಯನ್ ನ ಸಂಪೂರ್ಣ-ದ್ವೀಪದ ಕಾರ್ಯನಿರ್ವಹಣಾ ಅಂಗವಾದ ಅಲ್ಸ್ಟರ್ ಶಾಖೆಯ ಒಂಬತ್ತು ಕೌಂಟಿಗಳಲ್ಲಿ ಉತ್ತರ ಐರ್ಲೆಂಡ್ ನ ಆರು ಕೌಂಟಿಗಳು ಸೇರಿವೆ. ಅಲ್ಸ್ಟರ್, ಐರ್ಲೆಂಡ್ ದ್ವೀಪದ ನಾಲ್ಕು ವೃತ್ತಿಪರ ಪ್ರಾಂತೀಯ ತಂಡಗಳಲ್ಲಿ ಒಂದಾಗಿದೆ. ಜೊತೆಗೆ ಇದು ಸೆಲ್ಟಿಕ್ ಲೀಗ್ ಹಾಗು ಯುರೋಪಿಯನ್ ಕಪ್ ನಲ್ಲಿ ಪಾಲ್ಗೊಳ್ಳುತ್ತದೆ. ಅಲ್ಸ್ಟರ್, 1999ರಲ್ಲಿ ಯುರೋಪಿಯನ್ ಕಪ್ ನ್ನು ಗೆದ್ದುಕೊಂಡಿತು. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ, ಉತ್ತರ ಐರ್ಲೆಂಡ್‌‌ ನ ಆಟಗಾರರು, ಐರ್ಲೆಂಡ್ ನ ರಾಷ್ಟ್ರೀಯ ರಗ್ಬಿ ತಂಡವನ್ನು ಪ್ರತಿನಿಧಿಸುತ್ತಾರೆ. ಇವರ ಇತ್ತೀಚಿನ ಯಶಸ್ಸಿನಲ್ಲಿ 2004 ಹಾಗು 2009ರ ನಡುವೆ ಗೆದ್ದ ನಾಲ್ಕು ಟ್ರಿಪಲ್ ಕ್ರೌನ್ ಗಳು ಹಾಗು 2009ರಲ್ಲಿ ಗೆದ್ದ ಗ್ರ್ಯಾಂಡ್ ಸ್ಲ್ಯಾಮ್ ಸೇರಿವೆ.

ಶಿಕ್ಷಣ[ಬದಲಾಯಿಸಿ]

ಕ್ವೀನ್'ಸ್ ವಿಶ್ವವಿದ್ಯಾಲಯ ಬೆಲ್ ಫಾಸ್ಟ್

ಉತ್ತರ ಐರ್ಲೆಂಡ್ ನ ಶಿಕ್ಷಣ ವ್ಯವಸ್ಥೆಯು, ಯುನೈಟೆಡ್ ಕಿಂಗ್ಡಮ್ ನ ಬೇರೆ ಭಾಗಗಳ ವ್ಯವಸ್ಥೆಗಳಿಗಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿದೆ. ಯುನೈಟೆಡ್ ಕಿಂಗ್ಡಮ್ ನ ಹೆಚ್ಚಿನ ಪ್ರದೇಶಗಳಿಗಿಂತ ಭಿನ್ನವಾಗಿ, ಪ್ರಾಥಮಿಕ ಶಾಲೆಯ ಕಡೆಯ ವರ್ಷದಲ್ಲಿ ಮಕ್ಕಳು ಇಲೆವೆನ್ ಪ್ಲಸ್ ಟ್ರ್ಯಾನ್ಸ್ಫರ್ ಟೆಸ್ಟ್ ನ್ನು ಬರೆಯುತ್ತಾರೆ. ಅದಲ್ಲದೇ ಇದರ ಫಲಿತಾಂಶವು ಅವರು ಗ್ರ್ಯಾಮರ್ ಶಾಲೆಗಳಿಗೆ [[ಹೋಗಬೇಕೆ ಅಥವಾ ಮಾಧ್ಯಮಿಕ ಶಾಲೆಗಳಿಗೆ]] ಹೋಗಬೇಕೆ ಎಂಬುದನ್ನು ನಿರ್ಣಯಿಸುತ್ತದೆ. ಕೆಲವು ವಿವಾದಗಳ ನಡುವೆ, 2008ರಲ್ಲಿ ಈ ವ್ಯವಸ್ಥೆಯು ಬದಲಾವಣೆಯಾಯಿತು, ಈ ವ್ಯವಸ್ಥೆಗೆ ಉತ್ತರ ಅರ್ಮಗ್ಹ್ ನಲ್ಲಿ ಜಾರಿಯಲ್ಲಿರುವ ಡಿಕ್ಸನ್ ಪ್ಲಾನ್ ಹೊರತಾಗಿದೆ. ಅಲ್ಲಿಂದೀಚೆಗೆ ಇಲೆವೆನ್ ಪ್ಲಸ್ ಪ್ರವೇಶ ಪರೀಕ್ಷೆಯನ್ನು ಬಹುತೇಕ ಗ್ರ್ಯಾಮರ್ ಶಾಲೆಗಳಲ್ಲಿ ರದ್ದುಪಡಿಸಲಾಗಿದೆ. ಇವುಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತವೆ, ಮಾಧ್ಯಮಿಕ ಶಾಲಾ ವಿಧ್ಯಾರ್ಥಿಗಳು ಇಂತಹ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ. ಉತ್ತರ ಐರ್ಲೆಂಡ್‌‌ ನ ಸರ್ಕಾರಿ(ನಿಯಂತ್ರಿತ) ಶಾಲೆಗಳು ಉತ್ತರ ಐರ್ಲೆಂಡ್‌‌ ನ ಎಲ್ಲ ಮಕ್ಕಳಿಗೆ ಮುಕ್ತವಾಗಿವೆ. ಆದಾಗ್ಯೂ ವಾಡಿಕೆಯಂತೆ, ಇಂತಹ ಶಾಲೆಗಳಲ್ಲಿ ಮುಖ್ಯವಾಗಿ ಪ್ರಾಟೆಸ್ಟೆಂಟ್ ಅಥವಾ ಯಾವುದೇ ಧರ್ಮದ ಹಿನ್ನೆಲೆ ಹೊಂದಿರದ ಮಕ್ಕಳು ಕಲಿಯುತ್ತಾರೆ. ರೋಮನ್ ಕ್ಯಾಥೋಲಿಕ್ಕರಿಗೆ ಪ್ರತ್ಯೇಕ ಸಾರ್ವಜನಿಕ ಅನುದಾನಿತ ಶಾಲಾ ವ್ಯವಸ್ಥೆಯಿದೆ. ಆದಾಗ್ಯೂ ರೋಮನ್ ಕ್ಯಾಥೋಲಿಕ್ಕರು ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಅವಕಾಶವಿದೆ.(ಹಾಗು ರೋಮನ್ ಕ್ಯಾಥೊಲಿಕ್ ಪಂಥಕ್ಕೆ ಸೇರದ ಕೆಲವರು ರೋಮನ್ ಕ್ಯಾಥೊಲಿಕ್ ಶಾಲೆಗಳಲ್ಲಿ ಕಲಿಯುತ್ತಾರೆ). ಪ್ರಾಟೆಸ್ಟೆಂಟ್, ರೋಮನ್ ಕ್ಯಾಥೊಲಿಕ್ ಹಾಗು ಇತರ ಧರ್ಮಗಳ (ಅಥವಾ ಯಾವುದೇ ಹಿನ್ನೆಲೆಯನ್ನು ಹೊಂದಿರದವರು)ವಿದ್ಯಾರ್ಥಿಗಳನ್ನು ಸಮಾನವಾಗಿ ದಾಖಲಾತಿ ಮಾಡಿಕೊಳ್ಳಲು ಪ್ರಯತ್ನಿಸುವ ಸಂಘಟಿತ ಶಾಲೆಗಳ ಜನಪ್ರಿಯತೆಯು ಅಧಿಕವಾಗುತ್ತಿದೆ. ಆದಾಗ್ಯೂ ಉತ್ತರ ಐರ್ಲೆಂಡ್‌‌ ಪ್ರಾಥಮಿಕವಾಗಿ ವಾಸ್ತವವಾದ ಧಾರ್ಮಿಕವಾಗಿ ಬೇರ್ಪಟ್ಟ ಶಿಕ್ಷಣ ವ್ಯವಸ್ಥೆಯನ್ನು ಇಂದಿಗೂ ಹೊಂದಿದೆ. ಪ್ರಾಥಮಿಕ ಶಾಲಾ ವರ್ಗದಲ್ಲಿ, ನಲವತ್ತು ಶಾಲೆಗಳು(ಒಟ್ಟಾರೆ ಸಂಖ್ಯೆಯಲ್ಲಿ 8.9%ರಷ್ಟು) ಸಂಘಟಿತ ಶಾಲೆಗಳು ಹಾಗು ಮೂವತ್ತೆರೆಡು(ಒಟ್ಟಾರೆ ಸಂಖ್ಯೆಯಲ್ಲಿ 7.2%ರಷ್ಟು) ಗೇಲ್ಸ್ಕೊಯಿಲೆಯನ್ನ (ಐರಿಶ್ ಮಾಧ್ಯಮಗಳ) ಶಾಲೆಗಳಾಗಿವೆ. ನೋಡಿ:

  • ಉತ್ತರ ಐರ್ಲೆಂಡ್‌‌ ನಲ್ಲಿರುವ ಗೇಲಿಕ್ ಮಾಧ್ಯಮದ ಪ್ರಾಥಮಿಕ ಶಾಲೆಗಳ ಪಟ್ಟಿ
  • ಉತ್ತರ ಐರ್ಲೆಂಡ್‌‌ ನಲ್ಲಿರುವ ಪ್ರಾಥಮಿಕ ಶಾಲೆಗಳ ಪಟ್ಟಿ
  • ಉತ್ತರ ಐರ್ಲೆಂಡ್‌‌ ನಲ್ಲಿರುವ ಗ್ರಾಮರ್ ಶಾಲೆಗಳ ಪಟ್ಟಿ
  • ಉತ್ತರ ಐರ್ಲೆಂಡ್‌‌ ನಲ್ಲಿರುವ ಮಾಧ್ಯಮಿಕ ಶಾಲೆಗಳ ಪಟ್ಟಿ
  • ಉತ್ತರ ಐರ್ಲೆಂಡ್‌‌ ನಲ್ಲಿರುವ ಸಮಗ್ರ ಶಾಲೆಗಳ ಪಟ್ಟಿ

ಉತ್ತರ ಐರ್ಲೆಂಡ್‌‌ ನಲ್ಲಿ ಎರಡು ಪ್ರಮುಖ ವಿಶ್ವವಿದ್ಯಾಲಯಗಳಿವೆ - ದಿ ಕ್ವೀನ್'ಸ್ ಯೂನಿವರ್ಸಿಟಿ ಆಫ್ ಬೆಲ್‌ಫಾಸ್ಟ್, ಹಾಗು ಯುನಿವರ್ಸಿಟಿ ಆಫ್ ಅಲ್ಸ್ಟರ್.

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal box

  • ಸಾಮಾನ್ಯ ಪ್ರವಾಸಿ ಪ್ರದೇಶ
  • ಉತ್ತರ ಐರ್ಲೆಂಡ್‌ ನ ರಾಷ್ಟ್ರೀಯ ಉದ್ಯಾನವನಗಳು ‌
  • ಉತ್ತರ ಐರ್ಲೆಂಡ್‌‌ ರಾಷ್ಟ್ರೀಯ ಫುಟ್ಬಾಲ್ ತಂಡ
  • ಐರ್ಲೆಂಡ್‌ ಗಣರಾಜ್ಯ-ಯುನೈಟೆಡ್‌ ಕಿಂಗ್‌ಡಂ ಗಡಿ
  • ಐರ್ಲೆಂಡ್‌‌ ನಿಧಿಗಳು

ಯಾದಿಗಳು

  • ಉತ್ತರ ಐರ್ಲೆಂಡ್‌‌ ನ ಸಾಂಸ್ಕೃತಿಕ ಐಕಾನ್ ಗಳ ಪಟ್ಟಿ
  • ಉತ್ತರ ಐರ್ಲೆಂಡ್‌‌ ಜನರ ಪಟ್ಟಿ
  • ಉತ್ತರ ಐರ್ಲೆಂಡ್‌‌ ನ ನ್ಯಾಷನಲ್ ಟ್ರಸ್ಟ್ ಸ್ವಾಮ್ಯಗಳ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

  1. "Northern Ireland Census 2001 Commissioned Output". NISRA. 2001. Archived from the original on 25 ಡಿಸೆಂಬರ್ 2018. Retrieved 8 ಡಿಸೆಂಬರ್ 2009.
  2. "Population and Migration Estimates Northern Ireland (2009) – Statistical Report" (PDF). Northern Ireland Statistics and Research Agency. 24 ಜೂನ್ 2010. Archived from the original (PDF) on 14 ಡಿಸೆಂಬರ್ 2010. Retrieved 11 ನವೆಂಬರ್ 2010.
  3. ೩.೦ ೩.೧ "The Countries of the UK". www.statistics.gov.uk - geography - beginners' guide to UK geography. UK Statistics Authority. 11 ನವೆಂಬರ್ 2005. Archived from the original on 11 ನವೆಂಬರ್ 2009. Retrieved 11 ನವೆಂಬರ್ 2009. The top-level division of administrative geography in the UK is the 4 countries - England, Scotland, Wales and Northern Ireland.
  4. ೪.೦ ೪.೧ ೪.೨ "countries within a country". Number10.gov.uk. The Office of the Prime Minister of the United Kingdom. 10 ಜನವರಿ 2003. Archived from the original on 11 ನವೆಂಬರ್ 2009. Retrieved 11 ನವೆಂಬರ್ 2009. The United Kingdom is made up of four countries: England, Scotland, Wales and Northern Ireland. Its full name is the United Kingdom of Great Britain and Northern Ireland...Northern Ireland is a part of the United Kingdom with a devolved legislative Assembly and a power sharing Executive made up of ministers from four political parties representing different traditions.
  5. ಪ್ರಾಧಿಕಾರವು ಮುದ್ರಿಸಿದ ಕಾನೂನುಸಮ್ಮತ ನಿಯಮಗಳು & ಆದೇಶಗಳು, 1921 (ನಂ. 533) ಆಲ್ವಿನ್ ಜಾಕ್ಸನ್, ಹೋಮ್ ರೂಲ್ - ಆನ್ ಐರಿಷ್‌ ಹಿಸ್ಟರಿ ,ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 2004, ಪುಟ 198.
  6. ಸ್ಟ್ಯಾನ್ಡಿಂಗ್ ಅಪ್ ಫಾರ್ ನಾರ್ದನ್ ಐರ್ಲೆಂಡ್‌‌ Archived 4 May 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. www.uup.org. ಆಗಸ್ಟ್ 2, 2008ರಲ್ಲಿ ಮರುಸಂಪಾದಿಸಲಾಗಿದೆ.
  7. ರಿಚರ್ಡ್ ಜೆಂಕಿನ್, 1997, ರೀಥಿಂಕಿಂಗ್ ಎಥ್ನಿಸಿಟಿ: ಆರ್ಗ್ಯೂಮೆಂಟ್ಸ್ ಅಂಡ್ ಎಕ್ಸ್ಪ್ಲೋರೆಶನ್ಸ್ , SAGE ಪ್ರಕಟಣಾಲಯ: ಲಂಡನ್: "ಉತ್ತರ ಐರ್ಲೆಂಡ್ ನಲ್ಲಿ ಸಮಕಾಲೀನ ರಾಷ್ಟ್ರೀಯತಾವಾದಿಗಳ ಉದ್ದೇಶವೆಂದರೆ ಐರ್ಲೆಂಡ್ ನ ಮರುಏಕೀಕರಣ ಹಾಗು ಬ್ರಿಟಿಶ್ ಆಡಳಿತವನ್ನು ವಜಾಗೊಳಿಸುವುದು."
  8. ಪೀಟರ್ ಡೋರೆಯ್, 1995, ಬ್ರಿಟಿಶ್ ಪಾಲಿಟಿಕ್ಸ್ ಸಿನ್ಸ್ 1945 , ಬ್ಲ್ಯಾಕ್ ವೆಲ್ ಪ್ರಕಾಶಕರು: ಆಕ್ಸ್ಫರ್ಡ್: "ಐರಿಶ್ ಮರುಏಕೀಕರಣವನ್ನು ಭದ್ರಪಡಿಸಲು ಕೆಲವು ರಾಷ್ಟ್ರೀಯತಾವಾದಿಗಳು ಹಿಂಸಾಚಾರಕ್ಕೆ ತಯಾರಾದಂತೆ, ಕೆಲವು ಏಕೀಕರಣವಾದಿಗಳು ಅದನ್ನು ವಿರೋಧಿಸಲು ಹಿಂಸಾಚಾರದ ಬಳಕೆ ಮಾಡಲು ತಯಾರಾಗಿದ್ದರು."
  9. "Strategy Framework Document: Reunification through Planned Integration: Sinn Féin's All Ireland Agenda". Archived from the original on 16 ಜುಲೈ 2006. ಸಿನ್ನ್ ಫೆಯಿನ್. 2 ಆಗಸ್ಟ್ 2008ರಲ್ಲಿ ಮರುಸಂಪಾದಿಸಲಾಗಿದೆ
  10. ಪಾಲಿಸಿ ಸಮ್ಮರೀಸ್: ಕಾನ್ಸ್ಟಿಟ್ಯೂಶನಲ್ ಇಷ್ಯೂಸ್ Archived 18 June 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. SDLP. 2 ಆಗಸ್ಟ್ 2008ರಲ್ಲಿ ಮರುಸಂಪಾದಿಸಲಾಗಿದೆ.
  11. "ದಿ ಸ್ಕಾಟ್ಚ್-ಐರಿಶ್ Archived 20 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.". ಅಮೆರಿಕನ್ ಹೆರಿಟೇಜ್ ಮ್ಯಾಗಜಿನ್. ಡಿಸೆಂಬರ್ 1970. ಸಂಪುಟ 22, ಸಂಚಿಕೆ 1.
  12. Thernstrom, Stephan (1980). Harvard encyclopedia of American ethnic groups. Harvard University Press. p. 896. ISBN 0674375122. {{cite book}}: External link in |title= (help)
  13. "Born Fighting: How the Scots-Irish Shaped America". Powells.com. 12 ಆಗಸ್ಟ್ 2009. Retrieved 30 ಏಪ್ರಿಲ್ 2010.
  14. Gwynn, Stephen. The birth of the Irish Free State. Retrieved 14 ಜುಲೈ 2010. {{cite book}}: |work= ignored (help)
  15. Pilkington, Colin (2002). Devolution in Britain Today. Manchester University Press. p. 75. ISBN 0719060761.
  16. ಮಂಡಳಿಯ ಆದೇಶದ ಮೇರೆಗೆ ಉತ್ತರ ಐರ್ಲೆಂಡ್‌‌ ಯುನೈಟೆಡ್ ಕಿಂಗ್ಡಮ್ ನ ವಿಶಿಷ್ಟ ಪ್ರದೇಶವಾಗಿ 3 ಮೇ 1921ರಲ್ಲಿ ಅಸ್ತಿತ್ವಕ್ಕೆ ಬಂದಿತು.(ಪ್ರಾಧಿಕಾರವು ಮುದ್ರಿಸಿದ ಕಾನೂನುಸಮ್ಮತ ನಿಯಮಗಳು & ಆದೇಶಗಳು (SR&O) 1921, ನಂ. 533). ಇದರ ಸಾಂವಿಧಾನಿಕ ಬೇರುಗಳು, ಆಕ್ಟ್ ಆಫ್ ಯೂನಿಯನ್ ಆಗೇ ಉಳಿದಿವೆ. ಪರಸ್ಪರ ಪೂರಕವಾದ ಎರಡು ಕಾನೂನುಗಳು, ಒಂದಕ್ಕೆ ಗ್ರೇಟ್ ಬ್ರಿಟನ್ ನ ಸಂಸತ್ತು ಅಂಗೀಕಾರ ನೀಡಿದರೆ, ಮತ್ತೊಂದಕ್ಕೆ ಐರ್ಲೆಂಡ್ ಸಂಸತ್ತು ಅಂಗೀಕಾರ ನೀಡಿದೆ.
  17. 7 ಡಿಸೆಂಬರ್ 1922ರಂದು(ಐರಿಶ್ ಫ್ರೀ ಸ್ಟೇಟ್ ನ ಸ್ಥಾಪನೆಯಾದ ಮರುದಿವಸ), ರಾಜರಿಗೆ ಈ ಕೆಳಕಂಡಂತೆ ಮನವಿ ಮಾಡಲು ಸಂಸತ್ತನ್ನು ವಿಭಜಿಸಿತು. ಈ ರೀತಿಯಾಗಿ ಐರಿಶ್ ಫ್ರೀ ಸ್ಟೇಟ್ ನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿತು: "ಅತ್ಯಂತ ಕರುಣಾಪೂರಿತರಾದ ಸಾರ್ವಭೌಮರೇ, ತಮ್ಮ ಅತ್ಯಂತ ಕರ್ತವ್ಯನಿಷ್ಠ ಹಾಗು ನಿಷ್ಠಾವಂತ ಪ್ರಜೆಗಳು, ಸೆನೆಟರುಗಳು ಹಾಗು ಸಂಸತ್ತಿನಲ್ಲಿರುವ ಉತ್ತರ ಐರ್ಲೆಂಡ್ ನ ಕಾಮನ್ಸ್ ಗಳಾದ ನಮಗೆ, ಐರಿಶ್ ಫ್ರೀ ಸ್ಟೇಟ್ ಕಾನ್ಸ್ಟಿಟ್ಯೂಶನ್ ಆಕ್ಟ್ 1922ರ ಅಂಗೀಕಾರದ ಬಗ್ಗೆ ತಿಳಿದುಬಂತು. ಗ್ರೇಟ್ ಬ್ರಿಟನ್ ಹಾಗು ಐರ್ಲೆಂಡ್ ನಡುವಿನ ಒಪ್ಪಂದಕ್ಕಾಗಿ ಅವುಗಳಲ್ಲಿರುವ ನಿಬಂಧನೆಗಳನ್ನು ಊರ್ಜಿತಗೊಳಿಸಲು ಸಂಸತ್ತಿನ ಕಾನೂನಿಗೆ ಸಂಬಂಧಿಸಿದಂತೆ, ನಾವು ಈ ನಮ್ರ ಕೋರಿಕೆಯ ಮೂಲಕ ಸಾರ್ವಭೌಮರಲ್ಲಿ ಕೇಳಿಕೊಳ್ಳುವುದೆನೆಂದರೆ, ಐರಿಶ್ ಫ್ರೀ ಸ್ಟೇಟ್ ನ ಸಂಸತ್ತು ಹಾಗು ಸರ್ಕಾರದ ಅಧಿಕಾರಗಳನ್ನು ಉತ್ತರ ಐರ್ಲೆಂಡ್‌‌ ಗೆ ಇನ್ನು ಮುಂದೆ ವಿಸ್ತರಿಸಬಾರದು" ಮೂಲ: ನಾರ್ದನ್ ಐರ್ಲೆಂಡ್ ಪಾರ್ಲಿಮೆಂಟರಿ ರಿಪೋರ್ಟ್, 7 ಡಿಸೆಂಬರ್ 1922 Archived 15 April 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಹಾಗು ಆಂಗ್ಲೋ-ಐರಿಶ್ ಟ್ರೀಟಿ, ವಿಭಾಗಗಳು 11, 12
  18. "ಆಂಗ್ಲೋ-ಐರಿಶ್ ಸಂಬಂಧಗಳು, 1939–41: ಬಹುಪಕ್ಷೀಯ ರಾಜತಂತ್ರ ಹಾಗು ಮಿಲಿಟರಿ ನಿರ್ಬಂಧದಲ್ಲಿ ಒಂದು ಅಧ್ಯಯನ" ಟ್ವೆನ್ಟೀಯತ್ ಸೆಂಚುರಿ ಬ್ರಿಟಿಶ್ ಹಿಸ್ಟರಿ (ಆಕ್ಸ್ಫರ್ಡ್ ಜರ್ನಲ್ಸ್, 2005), ISSN 1477-4674
  19. ಮಾಲ್ಕಂ ಸುಟ್ಟನ್ ರ ಪುಸ್ತಕ, "ಬೇರ್ ಇನ್ ಮೈಂಡ್ ದೀಸ್ ಡೆಡ್: ಆನ್ ಇಂಡೆಕ್ಸ್ ಆಫ್ ಡೆತ್ಸ್ ಫ್ರಂ ದಿ ಕಾನ್ಫ್ಲಿಕ್ತ್ ಇನ್ ಐರ್ಲೆಂಡ್ 1969 - 1993.
  20. "The Cameron Report - Disturbances in Northern Ireland (1969)". http://cain.ulst.ac.uk. {{cite web}}: External link in |publisher= (help)
  21. ದಿ ಬಾಲ್ಲಸ್ಟ್ ರಿಪೋರ್ಟ್ Archived 25 June 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.: "...ಪೋಲಿಸ್ ಒಮ್ಬುಡ್ಸ್ಮನ್ ಗಳು, ಇದು ಗುರುತಿಸಲ್ಪಟ್ಟ UVF ಬಾತ್ಮೀದಾರರೊಂದಿಗೆ ಕೆಲವು ಪೋಲಿಸ್ ಅಧಿಕಾರಿಗಳು ನಡೆಸಿದ ತಂತ್ರ."
  22. "1973: Northern Ireland votes for union". BBC News. 9 ಮಾರ್ಚ್ 1973. Retrieved 20 ಮೇ 2010.
  23. ಪಾರ್ಲಿಮೆಂಟರಿ ಡಿಬೇಟ್: "ಕ್ರಮವಾಗಿ ಎರಡು ಭಾಗಗಳ ನಡುವಿನ ಒಪ್ಪಂದದ ಮೂಲಕ ಕೇವಲ ಐರ್ಲೆಂಡ್ ದ್ವೀಪದ ಜನರು ಮಾತ್ರ, ಉತ್ತರ ಹಾಗು ದಕ್ಷಿಣ ಭಾಗವನ್ನು ಒಂದುಗೂಡಿಸಿ ಏಕೀಕೃತ ಐರ್ಲೆಂಡ್ ನ್ನು ಅಸ್ತಿತ್ವಕ್ಕೆ ತರುವುದು ಅವರ ಇಚ್ಛೆಯೇ ಆಗಿದ್ದರೆ, ಸಮ್ಮತಿಯನ್ನು ಆಧರಿಸಿ ಸ್ವಯಮಾಧಿಕಾರದ ಹಕ್ಕನ್ನು, ಮುಕ್ತವಾಗಿ ಹಾಗು ಸಮ್ಮತವಾಗಿ ಚಲಾವಣೆ ಮಾಡಬಹುದೆಂದು ಬ್ರಿಟಿಶ್ ಸರ್ಕಾರ ಒಪ್ಪಿಕೊಂಡಿತು."
  24. "Northern Ireland Act 2006 (c. 17)". Opsi.gov.uk. Retrieved 16 ಜೂನ್ 2010.
  25. (BBC)
  26. pdf file PDF (64.6 KB)"ಇಂಗ್ಲಿಷ್ ಕಾನ್ಫ್ಲಿಕ್ಟ್ ಆಫ್ ಲಾಸ್ ನ ಉದ್ದೇಶಕ್ಕಾಗಿ, ಇಂಗ್ಲೆಂಡ್ ಹಾಗು ವೇಲ್ಸ್ ನ ಭಾಗವಾಗಿರದ ವಿಶ್ವದ ಪ್ರತಿ ರಾಷ್ಟ್ರವು, ಒಂದು ವಿದೇಶಿ ರಾಷ್ಟ್ರವಾಗಿದೆ ಹಾಗು ತನ್ನ ವಿದೇಶ ಕಾನೂನುಗಳನ್ನು ಹೊಂದಿದೆ. ಇದರರ್ಥ ಒಟ್ಟಾರೆಯಾಗಿ ಸ್ವತಂತ್ರ ವಿದೇಶ ರಾಷ್ಟ್ರಗಳು ಮಾತ್ರವಲ್ಲದೆ ಉದಾಹರಣೆಗೆ ಫ್ರಾನ್ಸ್ ಅಥವಾ ರಷ್ಯಾ...ಗಳು ವಿದೇಶಿ ರಾಷ್ಟ್ರಗಳಾಗಿವೆ. ಜೊತೆಗೆ ಬ್ರಿಟಿಶ್ ವಸಾಹತು ನೆಲೆಗಳಾದ ಫಾಲ್ಕ್ಲ್ಯಾಂಡ್ ದ್ವೀಪಗಳು. ಇದಕ್ಕಿಂತ ಹೆಚ್ಚಾಗಿ, ಯುನೈಟೆಡ್ ಕಿಂಗ್ಡಮ್ ನ ಇತರ ಭಾಗಗಳಾದ - ಸ್ಕಾಟ್ಲ್ಯಾಂಡ್ ಹಾಗು ಉತ್ತರ ಐರ್ಲೆಂಡ್ - ಗಳು ಪ್ರಸಕ್ತದ ಉದ್ದೇಶಗಳಿಗಾಗಿ ವಿದೇಶಿ ರಾಷ್ಟ್ರಗಳೆನಿಸಿವೆ. ಇದರಂತೆ ಬ್ರಿಟಿಶ್ ಐಲೆಂಡ್ಸ್, ಐಲ್ ಆಫ್ ಮ್ಯಾನ್, ಜರ್ಸಿ ಹಾಗು ಗುಯೇರ್ನ್ಸೇಯ್." ಕಾನ್ಫ್ಲಿಕ್ಟ್ ಆಫ್ ಲಾಸ್ , JG ಕಾಲ್ಲಿಯೆರ್, ಫೆಲೋ ಆಫ್ ಟ್ರಿನಿಟಿ ಹಾಲ್ ಹಾಗು ಕಾನೂನು ಅಧ್ಯಾಪಕ, ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್
  27. "Professor John H. Whyte paper on discrimination in Northern Ireland". Cain.ulst.ac.uk. Retrieved 16 ಜೂನ್ 2010.
  28. "CAIN website key issues discrimination summary". Cain.ulst.ac.uk. 5 ಅಕ್ಟೋಬರ್ 1968. Retrieved 16 ಜೂನ್ 2010.
  29. ಲಾರ್ಡ್ ಸ್ಕಾರ್ಮನ್, "1969ರಲ್ಲಿ ಉತ್ತರ ಐರ್ಲೆಂಡ್ ನಲ್ಲಿ ನಡೆದ ಹಿಂಸಾಚಾರ ಹಾಗು ನಾಗರಿಕ ಶಾಂತಿಭಂಗ: ತನಿಖೆ ನಡೆಸಿದ ನ್ಯಾಯಮಂಡಳಿಯ ವರದಿ" ಬೆಲ್ಫಾಸ್ಟ್: HMSO, Cmd 566. (ಸ್ಕಾರ್ಮನ್ ವರದಿ ಎಂದೇ ಪರಿಚಿತವಾಗಿದೆ)
  30. "Ark survey, 2007. Answer to the question "Generally speaking, do you think of yourself as a unionist, a nationalist or neither?"". Ark.ac.uk. 17 ಮೇ 2007. Retrieved 16 ಜೂನ್ 2010.
  31. ಆನ್ಸರ್ಸ್ ಟು ದಿ ಕೊಶ್ಚನ್ "ಡು ಯು ಥಿಂಕ್ ದಿ ಲಾಂಗ್ ಟರ್ಮ್ ಪಾಲಿಸಿ ಫಾರ್ ನಾರ್ದನ್ ಐರ್ಲೆಂಡ್ ಶುಡ್ ಬಿ ಫಾರ್ ಇಟ್(ಒನ್ ಆಫ್ ದಿ ಫಾಲೋಯಿಂಗ್)"
  32. Ark survey, 2009. ಆನ್ಸರ್ಸ್ ಟು ದಿ ಕೊಶ್ಚನ್ "ಡು ಯು ಥಿಂಕ್ ದಿ ಲಾಂಗ್ ಟರ್ಮ್ ಪಾಲಿಸಿ ಫಾರ್ ನಾರ್ದನ್ ಐರ್ಲೆಂಡ್ ಶುಡ್ ಬಿ ಫಾರ್ ಇಟ್ [ಒನ್ ಆಫ್ ದಿ ಫಾಲೋಯಿಂಗ್
  33. "NI Life and Times Survey - 2009: NIRELND2". Ark.ac.uk. 2009. Retrieved 13 ಜುಲೈ 2010.
  34. "Department Of the Taoiseach". Taoiseach.gov.ie. Retrieved 16 ಜೂನ್ 2010.
  35. ಬ್ರೀನ್, R., ದೆವಿನೆ, P. ಹಾಗು ಡೌಡ್ಸ್, L. (ಸಂಪಾದಕರು), 1996: ISBN 0-86281-593-2. ಅಧ್ಯಾಯ 2 'ಏಕೀಕೃತ ಐರ್ಲೆಂಡ್‌‌ ಯಾರಿಗೆ ಬೇಕು? ಕ್ಯಾಥೋಲಿಕ್ಕರು ಹಾಗು ಪ್ರಾಟೆಸ್ಟೆಂಟ್ ಗಳ ನಡುವೆ ಸಾಂವಿಧಾನಿಕ ಆಯ್ಕೆಗಳು' ರಿಚರ್ಡ್ ಬ್ರೀನ್ ರಿಂದ (1996), ಉತ್ತರ ಐರ್ಲೆಂಡ್ ನ ಸಾಮಾಜಿಕ ವರ್ತನೆಯಲ್ಲಿ: ದಿ ಫಿಫ್ತ್ ರಿಪೋರ್ಟ್ 24 ಆಗಸ್ಟ್ 2006ರಲ್ಲಿ ಮರುಸಂಪಾದಿಸಲಾಗಿದೆ; ಸಾರಾಂಶ: 1989—1994ರಲ್ಲಿ, 79%ನಷ್ಟು ಪ್ರಾಟೆಸ್ಟೆಂಟ್ ಗಳು "ಬ್ರಿಟಿಶ್" ಅಥವಾ "ಅಲ್ಸ್ಟರ್" ಎಂದು ಉತ್ತರಿಸಿದರೆ, 60%ನಷ್ಟು ಕ್ಯಾಥೋಲಿಕ್ಕರು "ಐರಿಶ್" ಎಂದು ಉತ್ತರಿಸಿದರು.
  36. ನಾರ್ದನ್ ಐರ್ಲೆಂಡ್ ಲೈಫ್ ಅಂಡ್ ಟೈಮ್ಸ್ ಸರ್ವೇ, 1999; ಮಾಡ್ಯೂಲ್: ಕಮ್ಯೂನಿಟಿ ರಿಲೇಶನ್ಸ್, ವೇರಿಯಬಲ್: NINATID ಸಾರಾಂಶ: 72%ರಷ್ಟು ಪ್ರಾಟೆಸ್ಟೆಂಟ್ ಗಳು "ಬ್ರಿಟಿಶ್" ಎಂದು ಉತ್ತರಿಸಿದರೆ, 68%ನಷ್ಟು ಕ್ಯಾಥೋಲಿಕ್ಕರು "ಐರಿಶ್" ಎಂದು ಉತ್ತರಿಸಿದರು.
  37. ನಾರ್ದನ್ ಐರ್ಲೆಂಡ್‌‌ ಲೈಫ್ ಅಂಡ್ ಟೈಮ್ಸ್ ಸರ್ವೇಮಾಡ್ಯೂಲ್: ಕಮ್ಯೂನಿಟಿ ರಿಲೇಶನ್ಸ್. ವೇರಿಯಬಲ್:BRITISH. ಸಾರಾಂಶ: 78%ರಷ್ಟು ಪ್ರಾಟೆಸ್ಟೆಂಟ್ ಗಳು "ಬಲವಾಗಿ ಬ್ರಿಟಿಷರೆಂದು" ಉತ್ತರಿಸಿದರು.
  38. ನಾರ್ದನ್ ಐರ್ಲೆಂಡ್‌‌ ಲೈಫ್ ಅಂಡ್ ಟೈಮ್ಸ್ ಸರ್ವೇ, 1999; ಮಾಡ್ಯೂಲ್: ಕಮ್ಯೂನಿಟಿ ರಿಲೇಶನ್ಸ್, ವೇರಿಯಬಲ್:IRISH ಸಾರಾಂಶ: 77%ನಷ್ಟು ಕ್ಯಾಥೋಲಿಕ್ಕರು "ಬಲವಾಗಿ ಐರಿಶ್" ಎಂದು ಉತ್ತರಿಸಿದರು.
  39. ಇನ್ಸ್ಟಿಟ್ಯೂಟ್ ಆಫ್ ಗವರ್ನೆನ್ಸ್, 2006 UKಯ "ರಾಷ್ಟ್ರೀಯ ಸ್ವಸ್ವಾರೂಪಗಳು: ಇವುಗಳು ಮುಖ್ಯವಾಗುತ್ತವೆಯೇ?" ಸಾರಾಂಶ ನಂ. 16, ಜನವರಿ 2006; 24 ಆಗಸ್ಟ್ 2006ರಲ್ಲಿ "IoG_Briefing" (PDF). Archived from the original (PDF) on 22 ಆಗಸ್ಟ್ 2006. PDF (211 KB)ರಿಂದ ಮರುಸಂಪಾದಿಸಲಾಗಿದೆ. ಉದ್ಧೃತ ಭಾಗ:"ಉತ್ತರ ಐರ್ಲೆಂಡ್ ನ ಮುಕ್ಕಾಲು ಭಾಗ ಪ್ರಾಟೆಸ್ಟೆಂಟ್ ಗಳು ತಮ್ಮನ್ನು ತಾವು ಬ್ರಿಟಿಷರೆಂದು ಗುರುತಿಸಿಕೊಳ್ಳುತ್ತಾರೆ, ಆದರೆ ಕೇವಲ 12 ಶೇಖಡ ಉತ್ತರ ಐರ್ಲೆಂಡ್ ನ ಜನರು ತಮ್ಮನ್ನು ತಾವು ಬ್ರಿಟಿಷರೆಂದು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಪರ್ಯಾಯವಾಗಿ, ಬಹುತೇಕ ಕ್ಯಾಥೋಲಿಕ್ಕರು (65%) ತಮ್ಮನ್ನು ತಾವು ಐರಿಶ್ ಎಂದು ಕರೆದುಕೊಳ್ಳುತ್ತಾರೆ, ಈ ನಡುವೆ ಕೆಲವೇ ಕೆಲವು ಪ್ರಾಟೆಸ್ಟೆಂಟ್ ಗಳು (5%) ಈ ರೀತಿ ಮಾಡುತ್ತಾರೆ. ಕೆಲವೇ ಕೆಲವು ಕ್ಯಾಥೋಲಿಕ್ಕರು (1%) ಪ್ರಾಟೆಸ್ಟೆಂಟ್ ಗಳಿಗೆ ಹೋಲಿಸಿದರೆ (19%) ತಮ್ಮ ಅಲ್ಸ್ಟರ್ ಸ್ವರೂಪವನ್ನು ಗುರುತಿಸಿಕೊಳ್ಳುತ್ತಾರೆ ಆದರೆ ಉತ್ತರ ಐರಿಶ್ ಸ್ವಸ್ವರೂಪವನ್ನು ವಿಶಾಲವಾಗಿ ಸಮಾನಾಂತರವಾಗಿ ಧಾರ್ಮಿಕ ಸಂಪ್ರದಾಯಗಳುದ್ದಕ್ಕೂ ಹಂಚಿಕೆ ಮಾಡಲಾಗಿದೆ."ಡಿಟೈಲ್ಸ್ ಫ್ರಂ ಆಟಿಟ್ಯೂಡ್ ಸರ್ವೆಸ್ ಆರ್ ಇನ್ ಡೆಮೋಗ್ರ್ಯಾಫಿಕ್ಸ್ ಅಂಡ್ ಪಾಲಿಟಿಕ್ಸ್ ಆಫ್ ನಾರ್ದನ್ ಐರ್ಲೆಂಡ್
  40. L219252024 - ಪಬ್ಲಿಕ್ ಆಟಿಟ್ಯೂಡ್ಸ್ ಟು ಡೆವಲ್ಯೂಶನ್ ಅಂಡ್ ನ್ಯಾಷನಲ್ ಐಡೆನ್ಟಿಟಿ ಇನ್ ನಾರ್ದನ್ ಐರ್ಲೆಂಡ್ Archived 27 September 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಯೂನಿವರ್ಸಿಟಿ ಆಫ್ ಯಾರ್ಕ್ ರಿಸರ್ಚ್ ಪ್ರಾಜೆಕ್ಟ್ 2002-2003
  41. ಉತ್ತರ ಐರ್ಲೆಂಡ್‌‌: ಸಾಂವಿಧಾನಿಕ ಪ್ರಸ್ತಾಪಗಳು ಹಾಗು ಸ್ವಸ್ವರೂಪದ ಸಮಸ್ಯೆ, J. R. ಆರ್ಚರ್ ರಿಂದ ದಿ ರಿವ್ಯೂ ಆಫ್ ಪಾಲಿಟಿಕ್ಸ್, 1978
  42. "Chapter 7 > A changed Irish nationalism? The significance of the Belfast Agreement of 1998" (PDF). Archived from the original (PDF) on 10 ಮೇ 2007. PDF (131 KB) ಬದಲಾವಣೆಯಾದ ಐರಿಶ್ ರಾಷ್ಟ್ರೀಯತೆ? 1998ರ ಬೆಲ್ಫಾಸ್ಟ್ ಒಪ್ಪಂದದ ಮಹತ್ವ, ಜೋಸೆಫ್ ರುಯನೆ ಹಾಗು ಜೆನ್ನಿಫಾರ್ ಟಾಡ್ ರಿಂದ
  43. "Northern Ireland Life and Times Survey, 2008; Module:Community Relations, Variable:IRISH". Ark.ac.uk. 17 ಮೇ 2007. Retrieved 16 ಜೂನ್ 2010.
  44. "Northern Ireland Life and Times Survey, 1998; Module:Community Relations, Variable:IRISH". Ark.ac.uk. 9 ಮೇ 2003. Retrieved 16 ಜೂನ್ 2010.
  45. "NI's population passes 1.75m mark". BBC News. 10 ಡಿಸೆಂಬರ್ 2008. Retrieved 20 ಮೇ 2010.
  46. "Northern Ireland Census 2001, Table KS07a: Religion". Archived from the original on 24 ಏಪ್ರಿಲ್ 2012. Retrieved 16 ಜೂನ್ 2010.
  47. "Northern Ireland Census 2001, Table KS07b: Community background: religion or religion brought up in". Archived from the original on 24 ಏಪ್ರಿಲ್ 2012. Retrieved 16 ಜೂನ್ 2010.
  48. Prof Bob Osborne (19 ಡಿಸೆಂಬರ್ 2002). "Fascination of religion head count". BBC News. Retrieved 16 ಜೂನ್ 2010.
  49. "Statistics press notice; 2006-based population projections" (PDF). Northern Ireland Statistics and Research Agency. 2006. Archived from the original (PDF) on 17 ಸೆಪ್ಟೆಂಬರ್ 2010. Retrieved 21 ಜೂನ್ 2010.
  50. ವ್ಯಾನ್ಡಲ್ಸ್ ಕರ್ಬ್ಡ್ ಬೈ ಪ್ಲ್ಯಾಸ್ಟಿಕ್ ಎಡ್ಜಿಂಗ್ BBC ನ್ಯೂಸ್, 25 ನವೆಂಬರ್ 2008.
  51. ಸ್ಟ್ಯಾಟುಟರಿ ರೂಲ್ 2000 ನಂ. 347.
  52. ದಿ ಯೂನಿಯನ್ ಫ್ಲ್ಯಾಗ್ ಅಂಡ್ ಫ್ಲ್ಯಾಗ್ಸ್ ಆಫ್ ದಿ ಯುನೈಟೆಡ್ ಕಿಂಗ್ಡಮ್ Archived 18 June 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಹೌಸ್ ಆಫ್ ಕಾಮನ್ ಲೈಬ್ರರಿ, 3 ಜೂನ್ 2008.
  53. ವಿಶ್ವ ಧ್ವಜ ದತ್ತಾಂಶ ಸಂಗ್ರಹದಿಂದ ಉತ್ತರ ಐರಿಶ್ ಧ್ವಜಗಳು.
  54. ಕ್ರೀಡೆ, ರಾಷ್ಟ್ರೀಯತೆ ಹಾಗು ಜಾಗತೀಕರಣ: ಯುರೋಪಿಯನ್ ಹಾಗು ಉತ್ತರ ಅಮೆರಿಕಾದ ದೃಷ್ಟಿಕೋನಗಳು ಅಲನ್ ಬೈರ್ನೆರ್ ರಿಂದ(ISBN 978-0-7914-4912-7), ಪುಟ 38
  55. ವಿಭಜಿತ ಐರ್ಲೆಂಡ್ ನಲ್ಲಿ ಕ್ರೀಡೆ, ಪಂಥೀಯತೆ ಹಾಗು ಸಮಾಜ ಜಾನ್ ಸುಗ್ಡೆನ್ ಹಾಗು ಅಲನ್ ಬೈರ್ನೆರ್ ರಿಂದ (ISBN 978-0-7185-0018-4), ಪುಟ 60
  56. "FIFA.com: Northern Ireland, Latest News". Archived from the original on 10 ಡಿಸೆಂಬರ್ 2005.
  57. John Sugden and Scott Harvie (1995). "Sport and Community Relations in Northern Ireland 3.2 Flags and anthems". Retrieved 26 ಮೇ 2008.
  58. Peter Berlin (29 ಡಿಸೆಂಬರ್ 2004). "Long unsung teams live up to anthems: Rugby Union". International Herald Tribune via HighBeam Research. Archived from the original on 12 ಜನವರಿ 2019. Retrieved 26 ಮೇ 2008. the band played Nkosi Sikelel' iAfrika and Die Stem for the Springboks and Soldier's Song, the national anthem that is otherwise known as Amhran na bhFiann, and Ireland's Call, the team's official rugby anthem.
  59. "Belfast, Northern Ireland - Average Conditions". BBC Weather Centre. BBC. Archived from the original on 6 ಡಿಸೆಂಬರ್ 2003. Retrieved 8 ಅಕ್ಟೋಬರ್ 2009.
  60. ಹಲವು ರಾಷ್ಟ್ರೀಯತಾವಾದಿಗಳು ಕೌಂಟಿ ಡೆರ್ರಿ ಎಂಬ ಹೆಸರನ್ನು ಬಳಕೆ ಮಾಡುತ್ತಾರೆ.
  61. The Agreement PDF (204 KB)
  62. Ryan, James G. (1997). Irish Records: Sources for Family and Local History. Flyleaf Press. p. 40. ISBN 978-0916489762.
  63. ಪ್ರಾಟೆಸ್ಟೆಂಟ್ ಗಳು ಹಾಗು ಐರಿಶ್ ಭಾಷೆ: ಉತ್ತರ ಐರ್ಲೆಂಡ್ ನಲ್ಲಿರುವ ಐತಿಹಾಸಿಕ ಪರಂಪರೆ ಹಾಗು ಪ್ರಸಕ್ತ ನಡವಳಿಕೆಗಳು ರೊಸಲಿಂಡ್ M.O. ಪ್ರಿಟ್ಚರ್ಡ್ ಯೂನಿವರ್ಸಿಟಿ ಆಫ್ ಅಲ್ಸ್ಟರ್ ಅಟ್ ಕಾಲೇರೈನ್, UK
  64. ದಿ ಲೋಕಲ್ ಗವರ್ನಮೆಂಟ್ (ಮಿಸಲೇನಿಯಸ್ ಪ್ರಾವಿಶನ್ಸ್) (ಉತ್ತರ ಐರ್ಲೆಂಡ್‌‌) ಆರ್ಡರ್ 1995 (ನಂ. 759 (N.I. 5))[೧]
  65. ೬೫.೦ ೬೫.೧ ಉತ್ತರ ಐರ್ಲೆಂಡ್‌‌ ಸ್ಟ್ಯಾಟಿಸ್ಟಿಕ್ಸ್ ಜನಗಣತಿ 2001ರ ಫಲಿತಾಂಶ Archived 14 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  66. ೬೬.೦ ೬೬.೧ ನಾರ್ದನ್ ಐರ್ಲೆಂಡ್‌‌ ಲೈಫ್ & ಟೈಮ್ಸ್ ಸರ್ವೇ: ನಿಮ್ಮ ಮನೆಗಳಲ್ಲಿ ಮಾತನಾಡುವ ಮುಖ್ಯ ಭಾಷೆ ಯಾವುದು?
  67. "A Statement by Edwin Poots MLA, Minister of Culture, Arts and Leisure, to the Northern Ireland Assembly on the proposal to introduce Irish Language legislation" (PDF). Archived from the original (PDF) on 25 ಮಾರ್ಚ್ 2009. Retrieved 16 ಜೂನ್ 2010.
  68. ೬೮.೦ ೬೮.೧ "ಆರ್ಕೈವ್ ನಕಲು". Archived from the original on 16 ಏಪ್ರಿಲ್ 2009. Retrieved 23 ನವೆಂಬರ್ 2010.
  69. ೬೯.೦ ೬೯.೧ ಆಯೋಡನ್ ಮ್ಯಾಕ್ ಪೋಯಿಲಿನ್, 1999, "ಉತ್ತರ ಐರ್ಲೆಂಡ್‌‌ ನ ಭಾಷೆ, ಸ್ವಸ್ವರೂಪ ಹಾಗು ರಾಜಕೀಯ" ಅಲ್ಸ್ಟರ್ ಫೋಕ್ ಲೈಫ್ ನಲ್ಲಿ ಸಂಪುಟ. 45, 1999
  70. ಉತ್ತರ ಐರ್ಲೆಂಡ್‌‌ ಲೈಫ್ & ಟೈಮ್ಸ್ ಸರ್ವೇ: ನೀವು ನಿಮ್ಮಷ್ಟಕ್ಕೆ ಅಲ್ಸ್ಟರ್-ಸ್ಕಾಟ್ಸ್ ಭಾಷೆಯನ್ನು ಮಾತನಾಡುತ್ತೀರಾ?
  71. "Stranmillis University College - Ulster Scots Project". Stranmillis University College. Retrieved 16 ಜುಲೈ 2008.
  72. "St Andrews Agreement" (PDF). Archived from the original (PDF) on 4 ನವೆಂಬರ್ 2006. PDF (131 KB)
  73. Independent.ie (2 ಜುಲೈ 1998). "Sunday Independent article on Mallon and the use of "Six Counties"". Independent.ie. Retrieved 16 ಜೂನ್ 2010.
  74. Peterkin, Tom (31 ಜನವರಿ 2006). "Example of Daily Telegraph use of "Ulster" in text of an article, having used "Northern Ireland" in the opening paragraph". Telegraph.co.uk. Retrieved 16 ಜೂನ್ 2010.
  75. "The Guardian style guide". Guardian. 14 ಡಿಸೆಂಬರ್ 2008. Retrieved 16 ಜೂನ್ 2010.
  76. ಈ ಪದದ ಬಳಕೆಯ ಉದಾಹರಣೆಗಳಲ್ಲಿ ರೇಡಿಯೋ ಅಲ್ಸ್ಟರ್, ಅಲ್ಸ್ಟರ್ ಆರ್ಕೆಸ್ಟ್ರಾ ಹಾಗು RUC; ರಾಜಕೀಯ ಪಕ್ಷಗಳಾದ ಅಲ್ಸ್ಟರ್ ಯೂನಿಯನಿಸ್ಟ್ ಪಾರ್ಟಿ , ಅರೆಸೈನಿಕ ಸಂಸ್ಥೆಗಳಾದ ಅಲ್ಸ್ಟರ್ ಡಿಫೆನ್ಸ್ ಅಸೋಸಿಯೇಶನ್ ಹಾಗು ಅಲ್ಸ್ಟರ್ ವಾಲೆನ್ಟೀರ್ ಫೋರ್ಸ್. ಅಲ್ಸ್ಟರ್ ಎಂಬ ಪದವನ್ನು ರಾಜಕೀಯ ಕಾರ್ಯಚಟುವಟಿಕೆಗಳಲ್ಲೂ ಸಹ ಬಳಸಲಾಗಿದೆ. ಉದಾಹರಣೆಗೆ "ಅಲ್ಸ್ಟರ್ ಸೇಸ್ ನಂ" ಹಾಗು ಸೇವ್ ಅಲ್ಸ್ಟರ್ ಫ್ರಂ ಸೊಡೋಮಿ .
  77. ಉತ್ತರ ಐರ್ಲೆಂಡ್ ಸಂಸತ್ತಿನ ವರದಿಗಳು, ಸಂಪುಟ 20 (1937) ಹಾಗು ದಿ ಟೈಮ್ಸ್ , 6 ಜನವರಿ 1949 - ಉತ್ತರ ಐರ್ಲೆಂಡ್ ಗಿರುವ ಪರ್ಯಾಯ ಹೆಸರುಗಳು ವಿಭಾಗವನ್ನೂ ಸಹ ನೋಡಿ
  78. "Editorial Policy, Guidance Note" (PDF). BBC. undated. Archived from the original (PDF) on 9 September 2008. Retrieved 16 July 2008. {{cite web}}: Check date values in: |date= (help)[ಮಡಿದ ಕೊಂಡಿ]""ಪ್ರಾಂತ" ಎಂಬ ಪದವನ್ನು ಸಾಮಾನ್ಯವಾಗಿ ಉತ್ತರ ಐರ್ಲೆಂಡ್ ನೊಂದಿಗೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ ಹಾಗು ಇದನ್ನು "ಪ್ರಾಂತಕ್ಕೆ" ದ್ವಿತೀಯಕ ಉಲ್ಲೇಖಗಳನ್ನು ಮಾಡಲು ಸಾಧಾರಣವಾಗಿ ಸೂಕ್ತವೆನಿಸುತ್ತದೆ"
  79. "Example of "North of Ireland"". Archived from the original on 18 ಮೇ 2006.
  80. "Sinn Féin usage of "Six Counties"". Sinnfein.ie. 14 ಆಗಸ್ಟ್ 1969. Retrieved 16 ಜೂನ್ 2010.
  81. "Examples of usage by the United States-based extreme republican "Irish Freedom Committee"". Irishfreedomcommittee.net. 6 ಮೇ 2007. Archived from the original on 22 ಡಿಸೆಂಬರ್ 2005. Retrieved 16 ಜೂನ್ 2010.
  82. "Usage on "Gaelmail.com", a republican website". Webcitation.org. Archived from the original on 22 ಅಕ್ಟೋಬರ್ 2009. Retrieved 13 ನವೆಂಬರ್ 2010.
  83. "New Norn Irn manager named…". Slugger O'Toole. 31 ಮೇ 2007. Retrieved 26 ಸೆಪ್ಟೆಂಬರ್ 2008.
  84. "norn irn v denmark". Belfast Forum. 17 ನವೆಂಬರ್ 2007. Retrieved 26 ಸೆಪ್ಟೆಂಬರ್ 2008. ಸ್ಥಳೀಯ ಬಳಕೆಗಳ ಸಚಿತ್ರ ವಿವರಣೆ
  85. ೮೫.೦ ೮೫.೧ ೮೫.೨ S. Dunn and H. Dawson (2000), An Alphabetical Listing of Word, Name and Place in Northern Ireland and the Living Language of Conflict, Lampeter: Edwin Mellen Press
  86. ೮೬.೦ ೮೬.೧ ೮೬.೨ ೮೬.೩ ೮೬.೪ J. Whyte and G. FitzGerald (1991), Interpreting Northern Ireland, Oxford: Oxford University Press
  87. ೮೭.೦ ೮೭.೧ ೮೭.೨ ೮೭.೩ ೮೭.೪ D. Murphy (1979), A Place Apart, London: Penguin Books
  88. ಉದಾಹರಣೆ: "'Normalisation' plans for Northern Ireland unveiled". Office of the Prime Minister of the United Kingdom. 1 ಆಗಸ್ಟ್ 2005. Archived from the original on 11 ಜನವರಿ 2012. Retrieved 11 ನವೆಂಬರ್ 2009. ಅಥವಾ "26 January 2006". Office of the Prime Minister of the United Kingdom. 1 ಆಗಸ್ಟ್ 2005. Archived from the original on 11 ಜನವರಿ 2012. Retrieved 11 ನವೆಂಬರ್ 2009.
  89. ಉದಾಹರಣೆ: Office for National Statistics (1999), Britain 2000: the Official Yearbook of the United Kingdom, London: The Stationary Office ಅಥವಾ Office for National Statistics (1999), UK electoral statistics 1999, London: Office for National Statistics
  90. "The Population of Northern Ireland". Northern Ireland Statistical Research Agency. Archived from the original on 13 ಜುಲೈ 2018. Retrieved 11 ನವೆಂಬರ್ 2009.
  91. ಉದಾಹರಣೆ: "Background - Northern Ireland)". Office of Public Sector Information. Retrieved 11 ನವೆಂಬರ್ 2009. ಅಥವಾ "Acts of the Northern Ireland Assembly (and other primary legislation for Northern Ireland)". Office of Public Sector Information. Archived from the original on 13 ಜುಲೈ 2018. Retrieved 11 ನವೆಂಬರ್ 2009.
  92. Fortnight, 1992 {{citation}}: Missing or empty |title= (help)
  93. Sir David Varney December (2007), Review of Tax Policy in Northern Ireland, London: Her Majesty's Stationary Office
  94. Department of Finance and Personnel (2007), The European Sustainable Competitiveness Programme for Northern Ireland, Belfast: Northern Ireland Executive
  95. United Kingdom (2007), "Report of the United Kingdom of Great Britain and Northern Ireland" (PDF), Report by Governments on the Situation in their Countries on the Progress Made in the Standardization of Geographical Names Since the Eight Conferences, New York: United Nations, archived from the original (PDF) on 26 ಡಿಸೆಂಬರ್ 2018, retrieved 23 ನವೆಂಬರ್ 2010
  96. ೯೬.೦ ೯೬.೧ A Aughey and D Morrow (1996), Northern Ireland Politics, London: Longman
  97. P Close, D Askew, Xin X (2007), The Beijing Olympiad: the political economy of a sporting mega-event, Oxon: Routledge{{citation}}: CS1 maint: multiple names: authors list (link)
  98. ೯೮.೦ ೯೮.೧ Global Encyclopedia of Political Geography, 2009
  99. M Crenshaw (1985), "An Organizational Approach to the Analysis of Political Terrorism", Orbis, vol. 29, no. 3
  100. P Kurzer (2001), Markets and moral regulation: cultural change in the European Union, Cambridge: Cambridge University Press
  101. J Morrill, ed. (2004), The promotion of knowledge: lectures to mark the Centenary of the British Academy 1992-2002, Oxford: Oxford University Press
  102. ೧೦೨.೦ ೧೦೨.೧ F. Cochrane (2001), Unionist politics and the politics of Unionism since the Anglo-Irish Agreement, Cork: Cork University Press
  103. W V Shannon (1984), K M. Cahill (ed.), The American Irish revival: a decade of the Recorder, Associated Faculty Press
  104. R Beiner (1999), Theorizing Nationalism, Albany: State University of New York Press
  105. ೧೦೫.೦ ೧೦೫.೧ ಪರಿಸ್ಥಿತಿಯೊಂದಿಗೆ ಇತರ ಕ್ರೀಡೆಗಳು ಹೇಗೆ ದ್ವೀಪದೊಂದಿಗೆ ಸಮರ್ಥವಾಗಿ ನಿಭಾಯಿಸುತ್ತವೆ? ದಿ ಹೆರಾಲ್ಡ್ , 3 ಏಪ್ರಿಲ್ 2008
  106. Redmond, John (1997). The Book of Irish Golf. Pelican Publishing Company. p. 10.
  107. "The Best Of The Rest: A World Of Great Golf". Golf Digest. 2009. p. 2. Retrieved 21 ಜೂನ್ 2010.
  108. Gagne, Matt (20 ಜೂನ್ 2010). "Northern Ireland's Graeme McDowell wins U.S. Open at Pebble Beach, ends European losing streak". NYDailyNews.com. Archived from the original on 24 ಆಗಸ್ಟ್ 2010. Retrieved 29 ಜೂನ್ 2010.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಜೊನಾಥನ್ ಬಾರ್ಡನ್, ಏ ಹಿಸ್ಟರಿ ಆಫ್ ಅಲ್ಸ್ಟರ್ (ಬ್ಲ್ಯಾಕ್ ಸ್ಟ್ಯಾಫ್ ಪ್ರೆಸ್, ಬೆಲ್‌ಫಾಸ್ಟ್‌, 1992), ISBN 0-85640-476-4
  • ಬ್ರಿಯಾನ್ E. ಬಾರ್ಟನ್, ದಿ ಗವರ್ನಮೆಂಟ್ ಆಫ್ ನಾರ್ದನ್ ಐರ್ಲೆಂಡ್‌‌, 1920–1923 (ಅತ್ಹೊಲ್ ಬುಕ್ಸ್, 1980)
  • ಪಾಲ್ ಬೆವ್, ಪೀಟರ್ ಗಿಬ್ಬೊನ್ ಹಾಗು ಹೆನ್ರಿ ಪ್ಯಾಟರ್ಸನ್ ದಿ ಸ್ಟೇಟ್ ಇನ್ ನಾದರ್ನ್ ಐರ್ಲೆಂಡ್‌‌, 1921–72: ಪೊಲಿಟಿಕಲ್ ಫೋರ್ಸಸ್ ಅಂಡ್ ಸೋಶಿಯಲ್ ಕ್ಲ್ಯಾಸಸ್, ಮ್ಯಾಂಚೆಸ್ಟರ್ (ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್, 1979)
  • Tony Geraghty (2000). The Irish War. Johns Hopkins University Press. ISBN 0-8018-7117-4.
  • ರಾಬರ್ಟ್ ಕೀ, ದಿ ಗ್ರೀನ್ ಫ್ಲ್ಯಾಗ್: ಏ ಹಿಸ್ಟರಿ ಆಫ್ ಐರಿಶ್ ನ್ಯಾಶನಲಿಸಂ (ಪೆಂಗ್ವಿನ್, 1972–2000), ISBN 0-14-029165-2
  • ಆಸ್ಬಾರ್ನ್ ಮಾರ್ಟನ್, 1994, ಮರೈನ್ ಆಲ್ಗೆ ಆಫ್ ನಾರ್ದನ್ ಐರ್ಲೆಂಡ್‌‌. ಅಲ್ಸ್ಟರ್ ಸಂಗ್ರಹಾಲಯ, ಬೆಲ್‌ಫಾಸ್ಟ್‌. ISBN 0-5900761-28-8
  • ಹೆನ್ರಿ ಪ್ಯಾಟರ್ಸನ್, "ಐರ್ಲೆಂಡ್‌‌ ಸಿನ್ಸ್ 1939: ದಿ ಪರ್ಸಿಸ್ಟೆನ್ಸ್ ಆಫ್ ಕಾನ್ಫ್ಲಿಕ್ಟ್" (ಪೆಂಗ್ವಿನ್, 2006), ISBN 978-1-84488-104-8
  • ಹ್ಯಾಕ್ನೆಯ್, P. (ಸಂಪಾದನೆ) 1992, ಸ್ಟೆವರ್ಟ್'ಸ್ ಅಂಡ್ ಕಾರ್ರಿ'ಸ್ ಫ್ಲೋರ ಆಫ್ ನಾರ್ತ್-ಈಸ್ಟ್ ಆಫ್ ಐರ್ಲೆಂಡ್‌‌ ಮೂರನೇ ಆವೃತ್ತಿ ಇನ್ಸ್ಟಿಟ್ಯೂಟ್ ಆಫ್ ಐರಿಶ್ ಸ್ಟಡೀಸ್, ದಿ ಕ್ವೀನ್'ಸ್ ಯೂನಿವರ್ಸಿಟಿ ಆಫ್ ಬೆಲ್‌ಫಾಸ್ಟ್, ISBN 0-85389-446-9(HB)
  • ಬೆಟ್ಸ್, N.L.ಇನ್ ಹ್ಯಾಕ್ನೆಯ್, P. 1992, ಸ್ಟೆವರ್ಟ್ & ಕಾರ್ರಿ'ಸ್ ಫ್ಲೋರ ಆಫ್ ದಿ ನಾರ್ತ್-ಈಸ್ಟ್ ಆಫ್ ಐರ್ಲೆಂಡ್ ಮೂರನೇ ಆವೃತ್ತಿ, ಇನ್ಸ್ಟಿಟ್ಯೂಟ್ ಆಫ್ ಐರಿಶ್ ಸ್ಟಡೀಸ್, ದಿ ಕ್ವೀನ್'ಸ್ ಯೂನಿವರ್ಸಿಟಿ ಆಫ್ ಬೆಲ್‌ಫಾಸ್ಟ್ ISBN 0-85389-446-9 (HB)

ಬಾಹ್ಯ ಕೊಂಡಿಗಳು[ಬದಲಾಯಿಸಿ]