ಇಳಾ ಭಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇಳಾ ಭಟ್
ಹುಟ್ಟು (1933-09-07) 7 ಸಪ್ಟೆಂಬರ್ 1933 (ವಯಸ್ಸು Expression error: Unrecognized punctuation character "�".)
ಅಹ್ಮದಾಬಾದ್, ಭಾರತ
ವೃತ್ತಿ ವಕೀಲ; ಸಮಾಜ ಸೇವಕಿ
ಹೆತ್ತವರು ಸುಮಂತ್ರಾಯ್ ಭಟ್, ವನಲೀಲ ವ್ಯಾಸ್

ಇಳಾ ಭಟ್ (ಜನನ: ೭ ಸೆಪ್ಟೆಂಬರ್ ೧೯೩೩, ಅಹ್ಮದಾಬಾದ್, ಭಾರತ) ಭಾರತೀಯ ಸಾಮಾಜಿಕ-ಕಾರ್ಯಕರ್ತೆ ಮತ್ತು SEWAದ ಸ್ಥಾಪಕಿ.[೧] ಇವರು ಭಾರತದ ಬಡ-ಮಹಿಳೆಯರ ಜೀವನಮಟ್ಟವನ್ನು ಹೆಚ್ಚಿಸುವ ದಿಶೆಯಲ್ಲಿ ದೇಣಿಗೆ ನೀಡಿದ್ದು, ಅವರ ಕಾರ್ಯವನ್ನು ಎಲ್ಲರೂ ಗುರುತಿಸಿದ್ದಾರೆ.

'Self Employed Womens' Association,'SEWA'ಸಂಸ್ಥೆಯ ಸ್ಥಾಪನೆ[ಬದಲಾಯಿಸಿ]

೭೬ ವರ್ಷ ಹರೆಯದ ’ಇಳಾ ಭಾಟ್’ ರವರು, ಸನ್ ೧೯೭೨ ರಲ್ಲಿ,'Self Employed Womens' Association,'SEWA' ಸಂಸ್ಥೆಯನ್ನು ಸ್ಥಾಪಿಸಿದರು. ಇದೊಂದು ’ಟ್ರೇಡ್ ಯೂನಿಯನ್ ಸಂಸ್ಥೆಯಾಗಿದ್ದು’, ೧.೨ ಮಿಲಿಯನ್ ಗೂ ಹೆಚ್ಚು ಸದಸ್ಯರನ್ನು ಹೊಂದಿದೆ. ೧೯೭೪ ರಲ್ಲಿ ’ಇಳಾ’ರವರು, ಒಂದು ’ಸಹಕಾರಿ ಬ್ಯಾಂಕ್’ ಸ್ಥಾಪಿಸಿದರು. ಈ ಬ್ಯಾಂಕಿನ ಕಾರ್ಯವ್ಯಾಪ್ತಿ, ಸುಮಾರು ೩ ಮಿಲಿಯನ್ ಹೆಣ್ಣುಮಕ್ಕಳ ಜೀವನವನ್ನು ರೂಪಿಸಿ ಸಹಾಯಮಾಡುವಲ್ಲಿ ಯಶಸ್ವಿಯಾಗಿದೆ.

ಪುರಸ್ಕಾರಗಳು[ಬದಲಾಯಿಸಿ]

ಸನ್, ೨೦೧೦ ರ 'ನಿವಾನೋ ಶಾಂತಿ ಪುರಸ್ಕಾರ'ವನ್ನು 'ಇಳಾ ಭಟ್' ರವರಿಗೆ ಕೊಡಲಾಗಿದೆ. ೧೯೮೩ ರಿಂದ ಈ ’ನಿವಾನೋ ಶಾಂತಿ ಫೌಂಡೇಷನ್,’ ನ 'ಕ್ಲೋಡೋ 'ರವರು ತಿಳಿಸಿದಂತೆ, ಪುರಸ್ಕಾರವನ್ನು ಮಹಿಳೆಯರ ಸೇವೆಗಳನ್ನು ಗುರುತಿಸಿ ನೀಡಲಾಗುತ್ತಿದೆ. ಭಾರತದ 'ಭಟ್' ರವರ ಕೆಲಸದಲ್ಲಿ ಧಾರ್ಮಿಕ ಶ್ರದ್ಧೆ, ಉತ್ಸಾಹಗಳಿವೆ, ಸೇವಾಮನೋಭಾವಗಳಿವೆ. ಗಾಂಧೀಜಿಯವರ ಆದರ್ಶದ ಸಾಮಾಜಿಕ ಪರಿವರ್ತನೆ, ಮತ್ತು ಮಹಿಳೆಯರಿಗೆ ಸಿಕ್ಕಬೇಕಾದ ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತುನೀಡಲಾಗುತ್ತಿದೆ. ಪ್ರಶಸ್ತಿಯಲ್ಲಿ, ೨೧೫,೩೯೦ ಡಾಲರ್ ಗಳ ನಗದು ಬಹುಮಾನ, ಪದಕ, ಮತ್ತು ಪ್ರಶಸ್ತಿಪತ್ರಗಳು ದೊರೆಯುತ್ತವೆ.

ಇಳಾ ಭಟ್ ತಮ್ಮ ಸಮಾಜಸೇವೆಯನ್ನು ವಿವರಿಸಿದ ಬಗೆ[ಬದಲಾಯಿಸಿ]

’ಇಳಾ ಭಟ್’ ತಮ್ಮ ಸೇವಾ ಕಾರ್ಯವನ್ನು ಮಹಿಳೆ, ಕೆಲಸ ಮತ್ತು ಶಾಂತಿ, ಎನ್ನುವ ೩ ಪದಗಳಲ್ಲಿ ಅವರ ಕಥೆ ಮತ್ತು ಫಿಲೊಸೊಫಿಗಳನ್ನು ಅರ್ಥೈಸಿ, ವಿವರಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Women in Rajasthan set up bank to fund business ventures. DNA India. 15 Nov. 2009.
"http://kn.wikipedia.org/w/index.php?title=ಇಳಾ_ಭಟ್&oldid=320442" ಇಂದ ಪಡೆಯಲ್ಪಟ್ಟಿದೆ