ಇಯಾನ್ ಹೀಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಯಾನ್ ಹೀಲಿ

ಇಯಾನ್ ಹೀಲಿ(ಜನನ:ಏಪ್ರಿಲ್ ೩೦,೧೯೬೪) ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರರಾಗಿದ್ದರು ಮತ್ತು ಮಧ್ಯಮ ಕ್ರಮಾಂಕದ ಉಪಯುಕ್ತ ಬ್ಯಾಟ್ಸಮನ್ನರಾಗಿದ್ದರು. ಇವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತಮ್ಮ ರಾಜ್ಯವಾದ ಕ್ವೀನ್ಸ್ ಲ್ಯಾಂಡ್ ತಂಡದ ಪರವಾಗಿ ಆಡಿದರು. ಇವರ ಕ್ರಿಕೆಟ್ ಜೀವನದಲ್ಲಿ ಗಳಿಸಿದ ನಾಲ್ಕೂ ಶತಕಗಳು ಟೆಸ್ಟ್ ಪಂದ್ಯಗಳಲ್ಲಿ ಬಾರಿಸಿದಂಥವು. ತಮ್ಮ ನಿವೃತ್ತಿಯ ಮೊದಲು ಇವರು ವಿಕೆಟ್ ಕೀಪಿಂಗ್ನಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಕ್ಯಾಚುಗಳನ್ನು ಹಿಡಿದ ಮತ್ತು ಸ್ಟಂಪಿಂಗಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದರು, ಮುಂದೆ ಈ ದಾಖಲೆಯನ್ನು ಇವರ ತಂಡದವರೇ ಆದ ಆಡಮ್ ಗಿಲ್ ಕ್ರಿಸ್ಟ್ ಮುರಿದರು.

ಟೆಸ್ಟ್ ಪಾದಾರ್ಪಣೆ[ಬದಲಾಯಿಸಿ]

೧೯೮೮ರ ಪಾಕಿಸ್ತಾನ್ ಪ್ರವಾಸಕ್ಕೆ ಇಯಾನ್ ಹೀಲಿ ಆಯ್ಕೆಯಾದಾಗ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಆವಾಗ ಇವರು ತಮ್ಮ ರಾಜ್ಯ ತಂಡದ ಪರವಾಗಿ ಕೇವಲ ೬ ಪಂದ್ಯಗಳನ್ನಾಡಿದ್ದರು. ರಾಡ್ನಿ ಮಾರ್ಷ್ರ ನಿವೃತ್ತಿಯ ನಂತರ ೧೯೮೪ರಿಂದ ವಿಕೆಟ್ ಕೀಪರರ ಸ್ಥಾನ ಆಸ್ಟ್ರೇಲಿಯಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು. ವೇಯ್ನ್ ಫಿಲಿಪ್ಸ್, ಟಿಮ್ ಜೋಹ್ರರ್, ಗ್ರೇಗ್ ಡೈಯರ್, ಸ್ಟೀವ್ ರಿಕ್ಸನ್ ಇವರನ್ನು ಆಡಿಸಲಾಗಿತ್ತು, ಅವರ ಸಾಧನೆ ಉತ್ತಮ ಮಟ್ಟದ್ದಾಗಿಲ್ಲ. ಕ್ವೀನ್ಸ್ ಲ್ಯಾಂಡ್ ತಂಡದಲ್ಲಿನ ಇವರ ಸಾಧನೆಯನ್ನು ನೋಡಿದ್ದ ಆಯ್ಕೆದಾರ ಗ್ರೇಗ್ ಚಾಪೆಲ್ ಇವರು ತಂಡಕ್ಕೆ ಉಪಯುಕ್ತ ಕೆಳಗಿನ ಕ್ರಮಾಂಕದ ಬ್ಯಾಟ್ಸಮನ್ ಮತ್ತು ವಿಕೆಟ್ ಕೀಪಿಂಗ್ ಮತ್ತು ತಂಡಕ್ಕೆ ಬೇಕಾಗಿದ್ದ ಗಟ್ಟಿತನವನ್ನು ತರುವರೆಂದು, ತಂಡಕ್ಕೆ ಶಿಫಾರಸು ಮಾಡಿದರು. ಕಠಿಣವಾದ ಪಾಕಿಸ್ತಾನ್ ಪ್ರವಾಸ ಮತ್ತು ತವರು ನೆಲದಲ್ಲಿ ಆಡಿದ ವೆಸ್ಟ್ ಇಂಡೀಜ್ ಸರಣಿಗಳೆರಡರಲ್ಲಿ ಇವರು ಸತತ್ವಾಗಿ ಆಡಿದರು. ಇವೆರಡೂ ಸರಣಿಗಳನ್ನು ಆಸ್ಟ್ರೇಲಿಯಾ ಸೋತಿತು. ತಂಡದ ಸಾಧನೆ ಸುಧಾರಿಸಿದ ಹಾಗೆ ಇವರ ಸಾಧನೆಯು ಸುಧಾರಿಸಿ ತಂಡದ ಖಾಯಂ ಸದಸ್ಯರಾದರು. ೧೯೮೯ರಲ್ಲಿ ಆಷಸ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಇವರು ೧೪ಕ್ಯಾಚುಗಳನ್ನು ಹಿಡಿದು ಉತ್ತಮ ಸಾಧನೆ ಮಾಡಿದರು. ಮುಂದೆ ನ್ಯೂಜಿಲ್ಯಾಂಡ್, ಶ್ರೀಲಂಕಾ ಮತ್ತು ಪಕಿಸ್ತಾನಗಳ ವಿರುದ್ಧ ೭ ಟೆಸ್ಟ್ ಪಂದ್ಯಗಳಲ್ಲಿ ೨೩ ಕ್ಯಾಚುಗಳನ್ನು ಹಿಡಿದರು. ೧೯೯೩ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದರು ಮತ್ತು ಸ್ಟೀವ್ ವಾ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಶೇನ್ ವಾರ್ನ್ ತಂಡಕ್ಕೆ ಸೇರ್ಪಡೆಯಾದ ನಂತರ ಅವರ ಬೌಲಿಂಗಿಗೆ ಉತ್ತಮ ವಿಕೆಟ್ ಕೀಪಿಂಗ್ ಮಾಡಿದ ಹೀಲಿ, ಬ್ಯಾಟ್ಸಮನ್ನುಗಳಿಗೆ ಮಾರಕ ಬೌಲಿಂಗ್-ಕೀಪಿಂಗ್ ಜೋಡಿಯೆನಿಸಿದ್ದರು. 'ಕಮಾನ್ ಶೇನ್' ಮತ್ತು 'ವೆಲ್ ಬೌಲ್ಡ್ ಶೇನ್' ಇವರು ಕಾಯಂ ಉದ್ಘರಿಸುತ್ತಿದ್ದ ವಾಕ್ಯಗಳಗಿರುತ್ತಿದ್ದವು. ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಇವರ ಸಾಧನೆ ಇಳಿತವಾದಾಗ ಆಯ್ಕೆಗಾರರು ಇವರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿದರು. ಒಂದು ಸರಣಿ ಅಥವಾ ತಮ್ಮ ಮನೆಯಂಗಳದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಲೂ ಕೇಳಿಕೊಂಡರೂ ಆಯ್ಕೆಗಾರರು ಕೇಳಲಿಲ್ಲ, ಹೀಗಾಗಿ ಇವರು ತಮ್ಮ ನಿವೃತ್ತಿ ಘೋಷಿಸಿದರು.

ವಿಕೆಟ್ ಕೀಪಿಂಗ್ ಅಂಕಿ ಅಂಶಗಳು[ಬದಲಾಯಿಸಿ]

ಟೆಸ್ಟ್ ಸಾಧನೆ
ಕ್ಯಾಚುಗಳು ಸ್ಟಂಪಿಂಗಗಳು
೩೬೬ ೨೯
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಕ್ಯಾಚುಗಳು ಸ್ಟಂಪಿಂಗಗಳು
೧೯೪ ೩೯

ಬ್ಯಾಟಿಂಗ್ ಅಂಕಿ ಅಂಶಗಳು[ಬದಲಾಯಿಸಿ]

ಟೆಸ್ಟ್ ಪಂದ್ಯಗಳು[ಬದಲಾಯಿಸಿ]

ಟೆಸ್ಟ್ ಸಾಧನೆ
ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ
೧೧೯ ೪,೩೫೬ ೨೭.೩೯ ೨೨ ೧೬೧*

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು[ಬದಲಾಯಿಸಿ]

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಪಂದ್ಯಗಳು ರನ್ನುಗಳು ಸರಾಸರಿ ಅರ್ಧಶತಕಗಳು ಗರಿಷ್ಟ ಮೊತ್ತ
೧೬೮ ೧೭೬೪ ೨೧.೦೦ ೫೬