ಇಕ್ಕೇರಿ
ವಿಕಿಪೀಡಿಯ ಇಂದ
ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಅಘೋರೇಶ್ವರ ದೇವಸ್ಥಾನ ತುಂಬಾ ಪ್ರಸಿದ್ಧವಾಗಿದೆ.
[ಬದಲಾಯಿಸಿ] ಅಘೋರೇಶ್ವರ ದೇವಸ್ಥಾನ
ಅಘೋರೇಶ್ವರ ದೇವಸ್ಥಾನವು ಹೊಯ್ಸಳ-ಕದಂಬ ಶೈಲಿಯಲ್ಲಿದೆ. ದೇವಸ್ಥಾನದ ಎದುರಿಗಿರುವ ಕಲ್ಲಿನ ಬೃಹತ್ ಬಸವನ ವಿಗ್ರಹವಿದ್ದು, ಅದರ ಒಂದು ಕಾಲಿನ ಕೆಳಭಾಗದಲ್ಲಿ ಚಿಕ್ಕ ಮಕ್ಕಳು ನುಸುಳುವಷ್ಟು ಜಾಗವಿದ್ದು, ಅದರಲ್ಲಿ ನುಸುಳಿದರೆ ಇಷ್ಟಾರ್ಥ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿಯಿದೆ. ದೇವಸ್ಥಾನದ ಹೊರ ಆವರಣವು ಹಚ್ಚ ಹಸುರಿನ ಹುಲ್ಲು ಹಾಸಿನಿಂದ ಕಂಗೊಳಿಸುತ್ತದೆ.
ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನು ಕೆತ್ತಲಾಗಿದ್ದು ಆ ಹಲ್ಲಿಗಳು ಗೆರೆಯನ್ನು ದಾಟಿ ಮುಂದೆ ಬಂದು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ ಎಂಬ ಐತಿಹ್ಯವಿದೆ[೧]
[ಬದಲಾಯಿಸಿ] ಉಲ್ಲೇಖಗಳು
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |