ಆವರಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆವರಣ  
ಲೇಖಕ ಎಸ್.ಎಲ್.ಭರಪ್ಪ
ದೇಶ ಭಾರತ
ಭಾಷೆ ಕನ್ನಡ
ಶೈಲಿ (ಗಳು) ಐತಿಹಾಸಿಕ ಕಾಂದಬರಿ
ಪುಟಗಳು ೨೭೫

ಆವರಣ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ ತಂದಿದೆ. ಬೆಲೆ ಭಾರತದಲ್ಲಿ ೧೭೫ ರೂಪಾಯಿಗಳು, ಅಮೇರಿಕಾದಲ್ಲಿ ೧೩ ಡಾಲರ್. ಕಾದಂಬರಿಯ ವಸ್ತು ಇತಿಹಾಸ ಮತ್ತು ಇತಿಹಾಸದ ಹೆಸರಿನಲ್ಲಿ ಚಲಾವಣೆಗೆ ಬರುವ ಸುಳ್ಳುಗಳು. ಕಾದಂಬರಿಯ ಮುಖ್ಯ ಪಾತ್ರಗಳು ರಜಿಯಾ ಉರ್ಫ್ ಲಕ್ಷ್ಮೀ, ಆಕೆಯ ಗಂಡ ಅಮೀರ್ ಮತ್ತು ರಜಿಯಾಳ ಬೀಗರಾದ ಪ್ರೊಫೆಸರ್ ಶಾಸ್ತ್ರೀ.


ಪ್ರಕಟಗೊಳ್ಳುತ್ತಲೇ ಬಹಳ ಜನರ ಗಮನವನ್ನು ಸೆಳೆದ ಕಾದಂಬರಿ 'ಆವರಣ'. ಭೈರಪ್ಪನವರ ಜನಪ್ರಿಯತೆ ಇನ್ನೂ ಜೀವಂತ ಎನ್ನುವುದಕ್ಕೆ ಸಾಕ್ಷಿ ಈ ಕಾದಂಬರಿಯ ಪ್ರತಿಗಳ ಮಾರಾಟ ಮತ್ತು ಪತ್ರಿಕೆಗಳಲ್ಲಿ ಅದಕ್ಕೆ ಸಿಕ್ಕ ಪ್ರಾಮುಖ್ಯತೆ. ಕಾದಂಬರಿಯ ವಸ್ತು ಮತ್ತು ವಸ್ತು ನಿರ್ವಹಣೆ ಎರಡೂ ಅಸಾಮಾನ್ಯವಾದುದರಿಂದ ಸಹಜವಾಗಿಯೇ ಕಾದಂಬರಿಯ ಸುತ್ತ ವಿವಾದದ ಕೋಟೆ ನಿರ್ಮಿತವಾಗಿದೆ.


'ಆವರಣ'ದ ಬಗ್ಗೆ ಖ್ಯಾತ ಸಾಹಿತಿ ಅನಂತಮೂರ್ತಿಯವರು ಮಾಡಿದ ಭಾಷಣದ ಸಂಗ್ರಹಿತ ರೂಪವನ್ನು ಇಲ್ಲಿ ಕಾಣಬಹುದು: [೧]


'ಆವರಣ'ದ ಮೂಲ ತಕರಾರು ಇತಿಹಾಸಕ್ಕೆ ಸಂಬಂಧಪಟ್ಟಿದ್ದು. ಭಾರತದ ಇತಿಹಾಸವನ್ನು ನಿರ್ಮಿಸಿರುವ ಪರಿಕಲ್ಪನೆಗಳನ್ನು ನಮ್ಮ ವಸಾಹಾತು ಅನುಭವದ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಅಂತಹ ಒಂದು ವಿಶ್ಲೇಷಣೆಯನ್ನು ಈ ಲೇಖನದಲ್ಲಿ ಓದಬಹುದು: ಎಸ್. ಎನ್. ಬಾಲಗಂಗಾಧರ, 'Some Thesis on Colonial Consciousness' [೨]


ಆವರಣದ ಪರ ವಿರೋಧವಾಗಿ ಗಟ್ಟಿ ಧ್ವನಿಯಲ್ಲಿ ಚರ್ಚೆಯಾಗುತ್ತಿದ್ದಾಗ ತಣ್ಣನೆಯ ಧ್ವನಿಯಲ್ಲಿ ಬಂದ ಒಂದು ಅನನ್ಯ ವಿಡಂಬನಾತ್ಮಕ ವಿಮರ್ಶೆ 'ಆಭರಣ: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ'. ಇದನ್ನು ಇಲ್ಲಿ ಓದಬಹುದು: [೩]

"http://kn.wikipedia.org/w/index.php?title=ಆವರಣ&oldid=488392" ಇಂದ ಪಡೆಯಲ್ಪಟ್ಟಿದೆ