ಆರ್. ಕೆ. ಕರಂಜಿಯ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರುಸ್ಸಿ ಕರಂಜಿಯ

ರುಸ್ತುಂ ಖುರ್ ಶೆದ್ ಕರಂಜಿಯ

(ಸೆಪ್ಟೆಂಬರ್, ೧೫, ೧೯೧೨-ಫೆಬ್ರವರಿ, ೧, ೨೦೦೮)

[ಬದಲಾಯಿಸಿ] 'Blitz', ವಾರಪತ್ರಿಕೆ, ಅಂದಿನದಿನಗಳಲ್ಲಿ ಪ್ರಚಂಡ ಜನಪ್ರಿಯತೆಯನ್ನು ಗಳಿಸಿತ್ತು :

ಕರಂಜಿಯರವರು, ಮೊದಲು ತಮ್ಮ ವೃತ್ತಿ ಜೀವನವನ್ನು 'ಟೈಮ್ಸ್ ಆಫ್ ಇಂಡಿಯ', ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಪ್ರಾರಂಭಿಸಿದರು. ಅವರ ಗೆಳೆಯರ ಮಧ್ಯೆ, 'ರುಸ್ತುಂ ಖುರ್ ಶೆದ್ ಕರಂಜಿಯ,' ಎಂದು ಪ್ರಖ್ಯಾತರಾಗಿದ್ದರು. ೧೯೪೦ ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟು, ತಮ್ಮದೇ ಆದ 'Blitz', ವಾರಪತ್ರಿಕೆಯನ್ನು ಲಾಂಚ್ ಮಾಡಿದರು. ಅವರ ಸಮಯದಲ್ಲಿ ಬಿರುಗಾಳಿಯಂತೆ ಜನರನ್ನು ತತ್ತರಿಸಿದ್ದ, ನಾನಾವಟಿಯವರ ಮೇಲಿನ ಕೊಲೆಮೊಕದ್ದಮೆಯ ಪ್ರತಿ ಹಂತಗಳನ್ನೂ ಅತ್ಯಂತ ರೋಚಕವಾಗಿ ಹೊರತರುತ್ತಿದ್ದರು. 'ಪ್ರೊತಿಮಾಬೇದಿ' ಯವರು, ಬೆತ್ತಲೆಯಾಗಿ ಬೊಂಬಾಯಿನ 'ಫ್ಲೋರ ಫೌಂಟೆನ್' ನಿಂದ 'ಜುಹುಬೀಚ್' ವರೆಗೆ ಓಡಿದ್ದ ಸಂಗತಿಯನ್ನು ಪ್ರಕಟಪಡಿಸಿದಮೇಲೆ ಅವರು ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡರು. ಅವರೊಬ್ಬ ರೂಪದರ್ಶಿಯಾಗಿ 'ವಿಮಲ್ ಸೂಟಿಂಗ್' ಬಟ್ಟೆಗಳಿಗೆ ಜಾಹಿರಾತಿಯಲ್ಲಿ ಕಾಣಿಸಿಕೊಂಡಿದ್ದರು. 'ಸೂಟ್ ಬೂಟ್ ' ಉಡುಪಿನಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಎಳೆಯ ಸುದ್ದಿಕಾರರಿಗೆ, ಪತ್ರಿಕಾಕರ್ತರಿಗೆ ಪ್ರೋತ್ಸಾಹಕೊಡುತ್ತಿದ್ದರು. ಅವರ ಕಷ್ಟಗಳನ್ನು ವಿಚಾರಿಸಲು ತಮ್ಮ ಮೆರಿನ್ ಡ್ರೈವ್ ನಲ್ಲಿದ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ರುಸ್ಸಿಯವರಿಗೆ, ಎಳೆಪ್ರಾಯದ ಅಂದಚೆಂದದ ಹುಡುಗಿಯರ ಜೊತೆ ಮಾತುಕತೆಯಾಡುವ ಹುಚ್ಚಿತ್ತು. ಸದಾ ಹಸನ್ಮುಖಿ.

[ಬದಲಾಯಿಸಿ] ಎರಡುಬಾರಿ ಹೃದಯಾಘಾತದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ.

ರುಸ್ಸಿ ಕರಂಜಿಯ ತಮ್ಮ ಮುಂಬೈ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ ಅಂತಿಮ ಸಂಸ್ಕಾರ ದಕ್ಷಿಣ ಮುಂಬೈನ್ ನ 'ಚಂದನವಾಡಿ', ಯಲ್ಲಿ ನೆರವೇರಿತು. ೯೫ ವರ್ಷವಯಸ್ಸಿನ, ರುಸ್ಸಿ ಕರಂಜಿಯ ಒಬ್ಬ ಮಗಳು, '(Rita Mehta)', ರೀಟ ಮೆಹ್ತ, ಹಾಗೂ ಆವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ, 'ಬಿ.ಕೆ. ಕಾರಂಜಿಯ' ರವರನ್ನು ಅಗಲಿ ಹೋಗಿದ್ದಾರೆ.

ವೈಯಕ್ತಿಕ ಉಪಕರಣಗಳು