ಆರ್.ನಾಗೇಂದ್ರರಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆರ್. ನಾಗೇಂದ್ರರಾಯರು(ಆರೆನ್ನಾರ್) ಕನ್ನಡ ಚಿತ್ರರಂಗದ ಆರಂಭಿಕ ವರ್ಷಗಳಲ್ಲಿನ ಹೆಸರಾಂತ ನಿರ್ದೇಶಕರು, ನಿರ್ಮಾಪಕರೊಲ್ಲಬ್ಬರು. ಆರ್.ಎನ್.ಆರ್. ಪಿಕ್ಚರ್ಸ್ ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ ಮಹಾತ್ಮ ಕಬೀರ್, ವಿಜಯನಗರದ ವೀರಪುತ್ರ ಹಾಗು ನಮ್ಮ ಮಕ್ಕಳು ಚಿತ್ರಗಳು ಪ್ರಮುಖವಾದವುಗಳು.

ಪರಿವಿಡಿ

[ಬದಲಾಯಿಸಿ] 'ಆರ್.ನಾಗೇಂದ್ರರಾಯರು ಜನಿಸಿದ್ದು, ಹೊಳಲ್ಕೆರೆಯಲ್ಲಿ

ಕನ್ನಡ ಚಿತ್ರರಂಗದ 'ಭೀಷ್ಮಾಚಾರ್ಯ'ರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ. ತಂದೆ 'ರಟ್ಟೆಹಳ್ಳಿ ಕೃಷ್ಣರಾವ್.' ತಾಯಿ, 'ರುಕ್ಮಿಣೀದೇವಿ.' ವೃತ್ತಿ ರಂಗಭೂಮಿಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ, 'ಆರೆನ್ನಾರ್' ಪ್ರಸಿದ್ಧರಾಗಿದ್ದು ಸೀತೆ, ಚಂದ್ರಮತಿ, ಶಕುಂತಲೆ, ಮುಂತಾದ ಸ್ತ್ರೀಪಾತ್ರಗಳಿಂದ. ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ, ನಾಯಕನಟ, ಖಳನಟನಾಗಿ ವೈವಿಧ್ಯಮಯ ಹಾಗೂ, ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ. 1943 ರಲ್ಲೇ ಡಬ್ಬಿಂಗ್ ತಂತ್ರಜ್ಞಾನಕ್ಕೆ ಓಂಕಾರ ಹಾಕಿದ ಖ್ಯಾತಿ ಆರ್. ನಾಗೇಂದ್ರರಾವ್ ಅವರದು. ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನಾಗೇಂದ್ರರಾವ್ ಅವರು ತಮಿಳಿಗೆ ಡಬ್ ಮಾಡಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಡಬ್ ಮಾಡಿದ ಯಶಸ್ಸನ್ನುಮೊಟ್ಟಮೊದಲಿಗೆ ಕನ್ನಡಿಗರದಾಗಿಸಿದರು.ಕನ್ನಡದ ಮೊದಲ ವಾಕ್ಚಿತ್ರದ ಸಂಗೀತ ನಿರ್ದೇಶಕ ಎಂಬ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

[ಬದಲಾಯಿಸಿ] 'ನಮ್ಮ ಮಕ್ಕಳು ಚಿತ್ರ'ಕ್ಕೆ ರಾಷ್ಟ್ರಪ್ರಶಸ್ತಿ'

೧೯೬೯ರಲ್ಲಿ ಬಿಡುಗಡೆಯಾದ ನಮ್ಮ ಮಕ್ಕಳು ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು. ೧೯೬೮ರಲ್ಲಿ ಬಿಡುಗಡೆಯಾಗಿದ್ದ ಹಣ್ಣೆಲೆ ಚಿಗುರಿದಾಗ ಚಿತ್ರದ ಉತ್ತಮ ಅಭಿನಯಕ್ಕಾಗಿ, ಆರ್.ನಾಗೇಂದ್ರರಾಯರಿಗೆ,'ಶ್ರೇಷ್ಟ ನಾಯಕನಟ ಪ್ರಶಸ್ತಿ' ದೊರಕಿತ್ತು."ಪ್ರೇಮದ ಪುತ್ರಿ "ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರವರಿಂದ ಪಡೆದರು.೧೯೭೬ ರಲ್ಲಿ ಅವರಿಗೆ ಕೇಂದ್ರ ಸರಕಾರ "ಪದ್ಮಶ್ರೀ "ಪ್ರಶಸ್ತಿ ನೀಡಿ ಗೌರವಿಸಿತು.

[ಬದಲಾಯಿಸಿ] ಆರೆನ್ನಾರ್ ರವರ ಮಕ್ಕಳು

ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ಆರ್.ಎನ್. ಜಯಗೋಪಾಲ್, ಹೆಸರಾಂತ ನಟರೊಲ್ಲಬ್ಬರಾದ ಆರ್.ಎನ್.ಸುದರ್ಶನ್ ಹಾಗೂ ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಅವರು ಆರ್.ನಾಗೇಂದ್ರರಾಯರ ಮೊದಲ ಹೆಂಡತಿಯ ಪುತ್ರರು.ಇವರ ಮೊದಲ ಮಡದಿ "ರತ್ನಾ ಬಾಯಿ"ಯವರು ಕ್ಯಾನ್ಸರ್ ನಿಂದ ಅಕಾಲ ಮ್ರತ್ಯುವಿಗೆ ಬಲಿಯಾದರು.

೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ.ಹೇಗೆಂದರೆ ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು.(ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್. ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್. ಸುದರ್ಶನ್ ಅವರು ಈ ಚಿತ್ರದ ನಾಯಕನಾಗಿ ಮಾತ್ರವಲ್ಲ, ಗಾಯಕನಾಗಿಯೂ ಮಿಂಚಿದರು ಎಂಬುದು ಮತ್ತೊಂದು ವಿಶೇಷ.

ಕನ್ನಡ ವಾಕ್ಚಿತ್ರ ರಂಗದ ವರ್ಣಮಯ ಪುಟಗಳನ್ನೂ ತುಂಬಿದ ಆರ್,ನಾಗೇಂದ್ರ ರಾವ್ ಅವರು ೧೯೭೭ ರ ಫೆಬ್ರವರಿ ೯ ರಂದು ತಮ್ಮ ೮೨ನೇ ವಯಸ್ಸಿನಲ್ಲಿ ನಿದನರಾಗುವುದರೊಂದಿಗೆ ಕನ್ನಡ ಚಿತ್ರರಂಗದ ಇತಿಹಾಸದ ಒಂದು ಅದ್ಯಾಯದ ಅಂತ್ಯವಾದಂತಾಯಿತು."ನಮನ"

[ಬದಲಾಯಿಸಿ] ನಾಗೇಂದ್ರ ರಾಯರ ವಿಶೇಷ ಪತ್ನಿ ಸೇವೆ

ಆರ್,ಎನ್,ನಾಗೇಂದ್ರ ರಾವ್ ಕನ್ನಡದ ಮೊದಲ ಸಂಗೀತ ನಿರ್ದೇಶಕರು,ಕನ್ನಡ ಚಿತ್ರರಂಗಕ್ಕೆ ಹಲವು ಪ್ರಥಮಗಳನ್ನು ನೀಡಿದವರು,ಇವರ ಮೊದಲ ಮಡದಿ "ರತ್ನಾ ಬಾಯಿ" ಕ್ಯಾನ್ಸರ್ ನಿಂದ ಅಕಾಲ ಮೃತ್ಯುವಿಗೆ ಬಲಿಯಾದ ಮೇಲೆ,ಮೊದಲ ವಾಕ್ಚಿತ್ರ "ಸತಿ ಸುಲೋಚನ "ಚಿತ್ರೀಕರಣದ ವೇಳೆ ಪರಿಚಿತರಾದ ಕಲಾವಿದೆ ಕಮಲಾ ಬಾಯಿ ಅವರನ್ನು ಪ್ರೇಮ ವಿವಾಹವಾದರು,ಕಮಲಾಬಾಯಿ ಕನ್ನಡದ ಇನ್ನೊಬ್ಬ ಪ್ರಸಿದ್ದ ಅಭಿನೀತ್ರಿ ಲಕ್ಷ್ಮೀ ಬಾಯಿ ಯವರ ಸಹೋದರಿ, ಮುಂದೆ ಹಲವು ಕಾಲದ ನಂತರ ಕಮಲಾ ಬಾಯಿಯವರಿಗೆ ಶಸ್ತ್ರ ಚಿಕಿತ್ಸೆಯಾಲ್ಲದ ತಪ್ಪಿನಿಂದ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು,ನಾಗೇಂದ್ರ ರಾಯರಿಗೆ ಮೊದಲ ಹೆಂಡತಿಯಿಂದ ನಾಲ್ವರು ಮಕ್ಕಳಿದ್ದರು,ಎಲ್ಲರೂ ಸ್ಥಿತಿವಂತರಾಗಿದ್ದರು, ಆ ಹೊತ್ತಿಗೆ ನಾಗೇಂದ್ರರಾಯರು ನಟ-ನಿರ್ದೇಶಕರಾಗಿ ಹೆಸರು ಮಾಡಿದ್ದರು,ಕಮಲಾ ಬಾಯಿಯವರಿಗೆ ಮಕ್ಕಳಿರಲಿಲ್ಲ.ದತ್ತು ತೆಗೆದುಕೊಂಡ ಮಗನೂ ಅಕಾಲ ಮೃತ್ಯುವಿಗೆ ಒಳಗಾಗಿದ್ದ.ನಾಗೇಂದ್ರರಾಯರು ಎರಡನೆಯ ಯೋಚನೆಯನ್ನೇ ಮಾಡದೆ ಕಮಲಾ ಬಾಯಿಯವರ ಸೇವೆಗೆ ತಮ್ಮ ಉಳಿತದ ಜೀವನವನ್ನು ಮೀಸಲಿಟ್ಟರು.ಅಡುಗೆ ಮಾಡಿ,ಸ್ನಾನ ಮಾಡಿಸಿ ಕೊನೆಗೆ ಜಡೆ ಹಾಕುವುದರಿಂದ ಹಿಡಿದು ಸಕಲ ಸೇವೆಗಳನ್ನೂ ಮಾಡಿದರು.ಈ ಕಾಲದಲ್ಲಿಯೇ ಅಂದರೆ ೧೯೭೬ರಲ್ಲಿ ನಾಗೇಂದ್ರ ರಾಯರಿಗೆ "ಪದ್ಮಶ್ರೀ" ಗೌರವ ದೊರಕಿತು.ಆಗೆಲ್ಲ ಪದ್ಮಶ್ರೀಗೆ ಸಾಕಷ್ಟು ಬೆಲೆ ಇತ್ತು!.ಈಗಿನಂತೆ ಬಹಳ ಜನಕ್ಕೆ ಕೊಡುತ್ತಿರಲಿಲ್ಲ!. ಜೊತೆಗೆ ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ಪದ್ಮಶ್ರೀ ಗೌರವ ಅದಾಗಿತ್ತು.ಪತ್ರಿಕೆಗಳ ತುಂಬೆಲ್ಲ ಸುದ್ದಿಗಳು ಬಂದವು.ಆದರೆ ನಾಗೇಂದ್ರ ರಾಯರು ತಮ್ಮ ಸತಿ ಸೇವೆಯಿಂದ ಕಿಂಚತ್ಹೂ ವಿಚಲಿತರಾಗಲಿಲ್ಲ.ದಿನಪತ್ರಿಕೆಗಳಲ್ಲಿ "ರಾಷ್ಟ್ರ ಮಟ್ಟದಲ್ಲಿ ಹರಡಿದ ಕನ್ನಡದ ಪತಾಕೆ:ಇಂದು ನಗೆಂದರ ರಾಯರಿಗೆ ಪದ್ಮಶ್ರೀ ಗೌರವ" ಎಂಬ ಸುದ್ದಿ ಮುಖಪುಟದ ಶೀರ್ಷಿಕೆಯಾಗಿತ್ತು. ಪತ್ರಿಕೆ ಓದುತಿದ್ದ ಓದುಗರೊಬ್ಬರು ಬೆಚ್ಚಿಬಿದ್ದರು.ಏಕೆಂದರೆ ಅವರ ಕಣ್ಣೆದುರಿಗೇ ನಾಗೇಂದ್ರ ರಾಯರು ಕಂಟೋನ್ ಮೆಂಟ್ನಲ್ಲಿ ತರಕಾರಿ ಕೊಳ್ಳುತಿದ್ದರು.ಆ ಓದುಗ ಕುತೂಹಲ ತಡೆಯಲಾಗದೆ "ಸರ್ ನೀವು ಇವತ್ತು ದೆಹಲಿಯಲ್ಲಿ ಪದ್ಮಶ್ರೀ ಸ್ವೀಕರಿಸಬೇಕಿತ್ತಲ್ಲವೇ" ಎಂದಾಗ "ನನ್ನ ಪದ್ಮಶ್ರೀ ಮನೆಯಲ್ಲಿದ್ದಾಳಪ್ಪ,ಅದಕ್ಕಿಂತ ದೊಡ್ಡ ಗೌರವ ಅವರೇನು ನೀಡಿಯಾರು"ಎಂದು ಅವರು ಅರ್ಥಪೂರ್ಣವಾಗಿ ಉತ್ತರಿಸಿದ್ದರು. ಈ ಒಂದು ಉದಾಹರಣೆ ಸಾಕು ನಾಗೇಂದ್ರರಾಯರ ಉನ್ನತ ವ್ಯಕ್ತಿತ್ವವನ್ನು ತಿಳಿಸಲು.."ನಮನ"

[ಬದಲಾಯಿಸಿ] ಆರ್.ನಾಗೇಂದ್ರರಾಯರ ನಿರ್ದೇಶನದ ಚಿತ್ರಗಳು

ವರ್ಷ ಚಿತ್ರ
೧೯೪೩ ಸತ್ಯ ಹರಿಶ್ಚಂದ್ರ
೧೯೪೭ ಮಹಾತ್ಮ ಕಬೀರ್
೧೯೫೩ ಜಾತಕ ಫಲ
೧೯೫೭ ಪ್ರೇಮದ ಪುತ್ರಿ
೧೯೬೧ ವಿಜಯನಗರದ ವೀರಪುತ್ರ
೧೯೬೩ ಆನಂದಭಾಷ್ಪ
೧೯೬೪ ಪತಿಯೇ ದೈವ
೧೯೬೭ ಪ್ರೇಮಕ್ಕು ಪರ್ಮಿಟ್ಟೆ
೧೯೬೯ ನಮ್ಮ ಮಕ್ಕಳು
೧೯೭೦ ನಾಡಿನ ಭಾಗ್ಯ

[ಬದಲಾಯಿಸಿ] 'ಆರೆನ್ನಾರ್'ರವರು, ಅಭಿನಯದ ಕೆಲವು ಚಿತ್ರಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ