ಆರ್‌.ಡಿ.ಬರ್ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್‌.ಡಿ.ಬರ್ಮನ್
RD Burman 2013 stamp of India
ಹಿನ್ನೆಲೆ ಮಾಹಿತಿ
ಜನ್ಮನಾಮರಾಹುಲ್ ದೇವ್ ಬರ್ಮನ್
ಮೂಲಸ್ಥಳIndia
ಸಂಗೀತ ಶೈಲಿಹಿನ್ನಲೆ ಸಂಗೀತ
ವೃತ್ತಿಸಂಗೀತ ನಿರ್ದೇಶಕರು
ಸಕ್ರಿಯ ವರ್ಷಗಳು1957–1994

ರಾಹುಲ್ ದೇವ್‌ ಬರ್ಮನ್‌ (ಬಂಗಾಳಿ:রাহুল দেব বর্মন, ಹಿಂದಿ:राहुल देव बर्मन) (೨೭ ಜೂನ್‌ ೧೯೩೯ – ೪ ಜನವರಿ ೧೯೯೪), ಸಾಮಾನ್ಯವಾಗಿ ಆರ್‌.ಡಿ ಬರ್ಮನ್ ಮತ್ತು ಪಂಚಮ್‌ ದಾ (पंचम दा) ಅಥವಾ ಕೇವಲ ಪಂಚಮ್ ಎಂಬ ಅಡ್ಡ ಹೆಸರುಗಳನ್ನು ಹೊಂದಿರುವ ಇವರು ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಹಾಡುಗಾರ ಮತ್ತು ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್‌ ಮತ್ತು ಅವರ ಹೆಂಡತಿ ಮೀರಾರ ಏಕೈಕ ಪುತ್ರರಾಗಿದ್ದಾರೆ.

ಜೀವನ ಚರಿತ್ರೆ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ರಾಹುಲ್ ದೇವ್‌ ಬರ್ಮನ್‌ ಕಲ್ಕತ್ತಾದಲ್ಲಿ ಜನಿಸಿದರು.[೧] ಕಥೆಗಳ ಪ್ರಕಾರ ಮಗುವಾಗಿದ್ದಾಗ ಅಳಲು ಬಾಯ್ತೆರೆದರೆ ಭಾರತೀಯ ಸಪ್ತಸ್ವರದ ಐದನೆ ಅಕ್ಷರ ( ) ಎ೦ಬ ಉಚ್ಚಾರದಂತೆ ಇರುತ್ತಿತ್ತಂತೆ, ಇದರಿಂದಾಗಿ ಪಂಚಮ್ ಎಂದು ಕರೆದರ೦ತೆ. ಪಂಚಮ್ ಎಂದರೆ ಬೆಂಗಾಲಿಯಲ್ಲಿ ಐದು(ಅಥವಾ ಐದನೇ) ಎಂದರ್ಥವಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಭಾರತೀಯ ಹಿರಿಯ ನಟ ಅಶೋಕ್ ಕುಮಾರ್ ನವಜಾತ ರಾಹುಲ್ ದೇವ್‌ ಬರ್ಮನ್‌‌ರ ಮಗ ಅತ್ತಾಗ ಎಂದು ಕೇಳಿದ್ದರಿಂದ ಪಂಚಮ್ ಎಂದು ಹೆಸರಿಟ್ಟರೆಂದು ಪ್ರತೀತಿ. ಮುಂಬೈಗೆ ಬಂದ ನಂತರ, ಅವರು ಉಸ್ತಾದ್ ಅಲಿ ಅಕ್ಬರ್ ಖಾನ್‌ರಿಂದ ಸರೋದ್‌ನ್ನು ಕಲಿತರು.[೨]. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಲ್ಕತ್ತಾದ ಬ್ಯಾಲಿಗಂಜ್‌ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಡೆದರು.[೩] ಅವರು ಒಂಭತ್ತು ವರ್ಷದವರಿದ್ದಾಗ ಅವರ ಮೊದಲ ಹಾಡಾದ ಆಯೆ ಮೇರಿ ಟೋಪಿ ಪಲಟ್ ಕೆ ಆ , ಅದನ್ನು ಅವರ ತಂದೆ ಪಂಟೂಷ್ (1956) ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಸಾರ್ ಜೊ ತೆರಾ ಚಕ್ರಾಯೆ ಹಾಡಿನ ಸಂಗೀತ ಸಂಯೋಜನೆಯನ್ನು ಅವರು ಮಗುವಾಗಿದ್ದಾಗ ಮಾಡಿದ್ದರು. ಅವರ ತಂದೆಗೆ ಅ ಧಾಟಿ ಇಷ್ಟವಾಗಿ ಅದನ್ನು ಗುರು ದತ್‌ರ ಪ್ಯಾಸಾ ದ ಧ್ವನಿವಾಹಿನಿಯಲ್ಲಿ ಬಳಸಿಕೊಂಡರು. 2004ರಲ್ಲಿ, ಪ್ಯಾಸಾ ದ ಧ್ವನಿವಾಹಿನಿಗಾಗಿ ಬ್ರಿಟೀಷ್ ಫಿಲ್ಮ್ ಇನ್‌ಸ್ಟಿ‌ಟ್ಯೂಟ್‌ ನಿಯಕಾಲಿಕೆಯ ಸೈಟ್ & ಸೌಂಡ್‌ ರವರು "ದ ಬೆಸ್ಟ್ ಮ್ಯೂಸಿಕ್ ಇನ್ ಫಿಲ್ಮ್‌" ಪ್ರಶಸ್ತಿಯನ್ನು ನೀಡಿದರು. ಮಗುವಾಗಿದ್ದಾಗ ಪಂಚಮ್‌ರ ಹಾರ್ಮೊನಿಕಾ (ಮೌತ್ ಆರ್ಗನ್)ನ ನುಡಿಸುವಿಕೆಯನ್ನು ಪ್ರಖ್ಯಾತ ಹಾಡಾದ ಹೈ ಅಪ್ನಾ ದಿಲ್ ತೊ ಅವಾರಾ (ದೇವ್‌ ಆನಂದ್‌ಅಭಿನಯಿಸಿದ ಚಿತ್ರ ಸೊಲ್ವ ಸಾಲ್ - 1958) ಬಳಸಿಕೊ೦ಡಿದ್ದಾರೆ. ಪಂಚಮ್ ತಂದೆಗೆ ಸಹಾಯಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರ ಬಿಡುಗಡೆಯಾದ ಒಟ್ಟು 331 ಚಿತ್ರಗಳಲ್ಲಿ 292 ಹಿಂದಿ, 31 ಬಾಂಗ್ಲಾ, 3 ತೆಲುಗು, ಮತ್ತು ತಲಾ 2 ತಮಿಳು & ಒರಿಯಾ ಮತ್ತು 1 ಮರಾಠಿಯವಾಗಿವೆ. ಆರ್‌ಡಿ‌ ಹಿಂದಿ ಮತ್ತು ಮರಾಠಿಯ 5 ಟಿವಿ ಧಾರವಾಹಿಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಅನೇಕ ಸಿನಿಮೇತರ (ಪೂಜಾ ಹಾಡುಗಳು ಅಥವಾ ಆಧುನಿಕ ಹಾಡುಗಳೆಂದು ಕರೆಯುವ), ಹಾಡುಗಳಿಗೆ ಗಾಯನ ಸಂಯೋಜಿಸಿದ್ದಾರೆ, ಇವುಗಳು ವಿವಿದ ಅಲ್ಬಮ್‌ಗಳಲ್ಲಿ ಲಭ್ಯವಿದೆ. ಆರ್‌ಡಿ ಬರ್ಮನ್‌ ತನ್ನ ತಂದೆಯಾದ ಸಚಿನ್ ದೇವ್ ಬರ್ಮನ್‌‌ರಿಗೆ ಸಹಾಯಕರಾಗಿ ತಮ್ಮ ವೃತ್ತಿಯನ್ನಾರಂಭಿಸಿದರು. ಅವರ ತಂದೆಗೆ ಚಲ್ತಿ ಕಾ ನಾಮ್ ಗಾಡಿ (1958) ಮತ್ತು ಕಾಗಜ್ ಕೆ ಫೂಲ್ (1959)ಗಳಲ್ಲಿ ಸಹಾಯಕರಾಗಿದ್ದರು, ಮತ್ತು ತಂದೆಯ ಸಂಯೋಜನೆಯೊಂದಿಗೆ ಕೆಲಸ ಮಾಡಿದ ಹಾಡೆಂದರೆ ಗೀತಾ ದತ್‌ ಹಾಡಿದ ಪ್ಯಾಸಾ (1957)ಚಿತ್ರಕ್ಕಾಗಿ ಜಾನೆ ಕ್ಯಾ ತೂನೆ ಕಹಿ [೪]. ಗುರು ದತ್‌ರ ರಾಜ್‌ (1959) ಸಿನಿಮಾಕ್ಕೆ ಮೊದಲು ಸಂಗೀತ ನಿರ್ದೇಶಕರಾದರು.

೧೯೬೦ರ ದಶಕ[ಬದಲಾಯಿಸಿ]

ಬರ್ಮನ್‌‌ರ ಮೊದಲು ಸಂಗೀತ ನಿರ್ದೇಶಕರಾಗಿ ಬಿಡುಗಡೆಯಾದ ಸಿನಿಮಾ ಮೆಹ್ಮೂದರ ಚೋಟೆ ನವಾಬ್ (1961). ಮೆಹ್ಮೂದ್‌ ಒಮ್ಮೆ ಬರ್ಮನ್‌ ನಿರಂತರವಾಗಿ ಬೆರಳಿನಿಂದ ನಿರಂತರವಾಗಿ ತನ್ನ ಕಾರನ್ನು ಬಡಿಯುತ್ತಾ ನೆಗ್ಗಿಸಿದುದರಿಂದ ಸುಸ್ತಾಗಿ ಅವರಿಗೆ ಚಿತ್ರವನ್ನು ನೀಡಿದೆ ಎನ್ನುತ್ತಾರೆ. ಈ ಹಾಡು ಎಸ್‌ ಡಿ ಬರ್ಮನ್‌ ಮತ್ತು 1957ರ ನಂತರ ಮುದ್ರಣವನ್ನು ನಿಲ್ಲಿಸಿದ್ದ ಲತಾ ಮಂಗೇಶ್ಕರ್‌‌ರನ್ನು ಒಟ್ಟಿಗೆ ತಂದಿತು. ಬರ್ಮನ್‌ ಬಾಂದಿನಿ (1963), ತೀನ್ ದೇವಿಯಾನ್ (1965) ಮತ್ತು ಗೈಡ್ (1965)ಗಳಲ್ಲಿ ತಂದೆಯೊಂದಿಗೆ ಸಹಾಯಕರಾಗಿ ಮುಂದುವರೆದರು. ಮೆಹ್ಮೂದ್‌ ತನ್ನ ಎರಡನೇ ಚಿತ್ರವಾದ 1965ರ - ಬೂತ್ ಬಂಗ್ಲಾ ದಲ್ಲಿ ಸಂಗೀತ ನಿರ್ದೇಶಕರನ್ನಾಗಿಸಿಕೊಂಡರು. ಕಿಶೋರ್ ಕುಮಾರ್‌ಹಾಡಿದ ಶಾಂತ ಧ್ವನಿಯ "ಜಾಗೊ ಸೊನೆವಾಲೊ" ಮತ್ತು ಚಬ್ಬಿ ಚೆಕರ್‌ರ "ಲೆಟ್ಸ್ ಟ್ವಿಸ್ಟ್"ನ ದೇಸೀ ಆವೃತ್ತಿಯಾದ ಮನ್ನಾ ಡೇ[೫] ಹಾಡಿದ ವಿರುದ್ಧವಾದ "ಆವೊ ಟ್ವಿಸ್ಟ್ ಕರೋ" ಗೀತೆಗಳು ಗಮನಾರ್ಹವಾಗಿವೆ. ಚಿತ್ರದಲ್ಲಿ ಬರ್ಮನ್‌ ಮೆಹ್ಮೂದ್‌ರೊಂದಿಗೆ ನಟನೆಯನ್ನೊ ಮಾಡಿದ್ದಾರೆ. 1965ರ ತೀಸ್ರಾ ಕೌನ್ ರ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಬರ್ಮನ್‌ನ ಮೊದಲ ಯಶಸ್ಸು ಕಂಡ ಚಿತ್ರ ತೀಸ್ರಿ ಮಂಜಿಲ್ (1966). ಬರ್ಮನ್‌ ಗೀತಕಾರ ಮಜ್ರೂಹ್ ಸುಲ್ತಾನ್ ಪುರಿಯವರಿಗೆ ಕೀರ್ತಿ ತಂದುಕೊಟ್ಟರು ಮತ್ತು ತೀಸ್ರಿ ಮಂಜಿಲ್ ನ ನಿರ್ಮಾಪಕ ಮತ್ತು ಕಥೆಗಾರರಾದ ನಾಸಿರ್ ಹುಸೇನ್‌‌ರಿಗೆ ಪರಿಚಯಿಸಿದರು.[೬] ‌ನಾಸಿರ್ ಹುಸೇನ್‌ರಿಗಿಂತ ಮೊದಲೇ ವಿಜಯ್ ಆನಂದ್‌ ಅವರಿಗಾಗಿ ಸಂಗೀತ ಕಚೇರಿಯನ್ನೇರ್ಪಡಿಸಿದುದಾಗಿ ಹೇಳಿದರು‌.[೭] ಅವರ ಸಂಗೀತವನ್ನು ಕೇಳಿ, ನಾಸಿರ್ ಹುಸೇನ್‌ ತೀಸ್ರಿ ಮಂಜಿಲ್ ಗಾಗಿ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದರು. ಮೊದಲು ಶಮ್ಮಿ ಕಪೂರ್‌ (ಚಿತ್ರದ ನಾಯಕ) ಬರ್ಮನ್‌ರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಂತೋಷವಾಗಿರಲಿಲ್ಲ‌. ಅವರ ಹೆಚಿನ ಸಿನಿಮಾಗಳಲ್ಲಿ ಕಾರ್ಯನಿವಹಿಸಿದ್ದ, ಮತ್ತು ಆಗಲೇ ನುರಿತಿದ್ದ ಶಂಕರ್-ಜೈಕಿಶನ್‌ರನ್ನು ಸೇರಿಸಿಕೊಳ್ಳಲು ಬಯಸಿದ್ದರು. ಆರ್‌ಡಿ ಬರ್ಮನ್‌ರ ಸಂಗೀತವನ್ನು ಕೇಳಿದ ನಂತರ ಯಾವುದೇ ವಿರೋಧವನ್ನುಂಟುಮಾಡಲಿಲ್ಲ. "ಓ ಹಸೀನಾ" ಮತ್ತು "ಆಜಾ ಆಜಾ"ಗಳ ಪ್ರಕಾರವು ಭಾರತೀಯ ಸಂಗೀತ ಪ್ರೇಮಿಗಳಿಗೆ ಹೊಸದಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಮಹಮದ್ ರಫಿ ಎಲ್ಲಾ ಆರು ಹಾಡುಗಳನ್ನು ಹಾಡಿದ್ದರು, ನಾಲ್ಕು ಆಶಾ ಬೋಂಸ್ಲೆಯವರೊಂದಿಗೆ ಹಾಡಿದ ಯುಗಳ ಗೀತೆಗಳಾಗಿವೆ. ನಾಸಿರ್ ಹುಸೇನ್‌ರು ಆರ್‌ಡಿ ಬರ್ಮನ್‌ ಮತ್ತು ಗೀತಕಾರ ಮಜ್ರೂಹ್ ಸುಲ್ತಾನ್ ಪುರಿರವರೊಂದಿಗೆ ಆರು ತಿಂಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದರು, ಆ ಸಮಯದಲ್ಲಿ ತೆಗೆದ ಚಿತ್ರಗಳೆಂದರೆ ಬಹರಾನ್ ಕೆ ಸಪ್ನೆ (೧೯೬೭), ಪ್ಯಾರ್ ಕಾ ಮೌಸಮ್ (೧೯೬೯) ಮತ್ತು ಯಾದೋಂಕಿ ಬಾರಾತ್ (೧೯೭೩).

೧೯೬೭ ರಲ್ಲಿ, ಬರ್ಮನ್‌ ಚಿತ್ರಗಳಾದ ಚಂದನ್ ಕಿ ಪಲ್ನ ಮತ್ತು ಬಹರಾನ್ ಕೆ ಸಪ್ನೆ ಗಳಲ್ಲಿ ಬರ್ಮನ್‌‌ರ ಸಂಯೋಜನೆಯನ್ನು ಮೆಚ್ಚಿದರೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಇದರ ಮಧ್ಯೆ ಅವರು ತನ್ನ ತಂದೆಯೊಡನೆ ಜ್ಯುವೆಲ್ ಥೀಫ್ (೧೯೬೭) ಮತ್ತು ತಲಾಶ್ (೧೯೬೯)ಗಳಲ್ಲಿ ಸಹಾಯಕರಾಗಿ ಮುಂದುವರೆದರು. ೧೯೬೮ ರಲ್ಲಿ, ಬರ್ಮನ್ ತೀಸ್ರಿ ಮಂಜಿಲ್‌ನ ನಂತರದ ಬಾಕ್ಸ್ ಆಫೀಸಿನಲ್ಲಿ ಯಶಸ್ಸನ್ನು ಕಂಡ ಚಿತ್ರ ಪಡೋಸನ್‌ . ಹಾಸ್ಯ ಪ್ರಧಾನ ಚಿತ್ರದಲ್ಲಿನ ಅವರ ಸಂಗೀತವು ಪ್ರಶಂಸೆಗೆ ಪಾತ್ರವಾಯಿತು.[ಸೂಕ್ತ ಉಲ್ಲೇಖನ ಬೇಕು] 1969ರಲ್ಲಿ, ವಾರೀಸ್ ಮತ್ತು ಮ್ಯೂಜಿಕಲ್ ಹಿಟ್ ನಾಸಿರ್ ಹುಸೇನ್‌‌ರ ಪ್ಯಾರ್ ಕಾ ಮೌಸಮ್ (ಪೋಷಕ ಪಾತ್ರದಲ್ಲೂ ಪಾತ್ರ ನಿರ್ವಹಿಸಿದ್ದರು)ಗಳು ಬಿಡುಗಡೆಯಾದವು. ಆರಾಧನಾ (೧೯೬೯)ರಲ್ಲಿ ಬರ್ಮನ್‌ ಸಹಾಯಕ ಸಂಯೋಜಕರಾದರು. ಆರಾಧನಾ (೧೯೬೯)ದ ಸಂಗೀತ ಎಸ್‌ ಡಿ ಬರ್ಮನ್‌ ಧ್ವನಿಮುದ್ರಣದ ಸಮಯದಲ್ಲಿ ಅನಾರೋಗ್ಯ ಪೀಡಿತರಾದುದರಿಂದ ಅವರ ಮಗ ಸಂಗೀತವನ್ನು ಸಂಪೂರ್ಣಗೊಳಿಸಿದರು .

1970ರ ದಶಕ[ಬದಲಾಯಿಸಿ]

1970ರ ದಶಕದ (ಹಿಂದಿ ಸಿನಿಮಾದ ಶ್ರೇಷ್ಠತಾರಾ ಯುಗದಲ್ಲಿ) ಆರ್‌ಡಿ ಬರ್ಮನ್‌ ಭಾರತದ ಅತ್ಯಂತ ಜನಪ್ರಿಯ ಸಂಗೀತ ಸಂಯೋಜಕರಾಗಿದ್ದರು, ಅವರು ತಮ್ಮ ಉತ್ಸಾಹಿ ಧಾಟಿಗಾಗಿ ಪ್ರಸಿದ್ಧರಾಗಿದ್ದರು. ಸಂಗೀತಗಾರರಾದ ಮಹಮದ್ ರಫಿ, ಆಶಾ ಬೋಂಸ್ಲೆ, ಕಿಶೋರ್ ಕುಮಾರ್‌, ಲತಾ ಮಂಗೇಶ್ಕರ್‌‌ ಮತ್ತಿತರರೊಂದಿಗೆ ತಂಡ ಕಟ್ಟಿಕೊಂಡು ಮಂಥನ ನಡೆಸಿ ಸಿನಿಮಾ ಸಂಗೀತದ ಇತಿಹಾಸಕ್ಕೆ ಕೆಲವು ಯಶಸ್ವಿ ಹಾಡುಗಳನ್ನು ನೀಡಿದರು.

1970ರಲ್ಲಿ, ಆರ್‌ಡಿ ಬರ್ಮನ್‌ ಆರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದರು, ಅವುಗಳಲ್ಲಿ ಕಟಿ ಪತಂಗ್ (ರಾಜೇಶ್‌ ಖನ್ನಾ ನಟಿಸಿರುವ) ಸಂಗೀತದ ಮೂಲಕ ಯಶಸ್ವಿಯಾಯಿತು, ಇದು ಶಕ್ತಿ ಸಮಾಂತ ಅವರ ನಿರ್ದೇಶನದ 70ರ ದಶಕದ ಪ್ರಾರಂಭದ ಸಿನಿಮಾಗಳಾಗಿವೆ. ಕಟಿ ಪತಂಗ್ ಹಾಡುಗಳಾದ 'ಯೆಹ್ ಶ್ಯಾಮ್ ಮಸ್ತಾನಿ' ಮತ್ತು 'ಯೆಹ್ ಜೊ ಮೊಹಬತ್ ಹೈ' ಯಶಸ್ಸಿನ ಉತ್ತುಂಗಕ್ಕೇರಿದವು. ಅವರು ದ ಟ್ರೈನ್, ಎಹಸಾನ್ ಪುರಸ್ಕಾರ್, .ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥಿ ಮತ್ತು ರತನ್ ಕಾ ರಾಜಾದಲ್ಲೂ ಕಾರ್ಯ ನಿರ್ವಹಿಸಿದರು.

1971ರಲ್ಲಿ ಆರ್‌ಡಿ ಬರ್ಮನ್‌‌ರ ಸಂಗೀತ ನಿರ್ದೇಶನದಲ್ಲಿ ಹನ್ನೊಂದು ಸಿನಿಮಾಗಳು ಬಿಡುಗಡೆಯಾದವು. ಅವುಗಳಲ್ಲಿ ಅಮರ್ ಪ್ರೇಮ್, ಬುಡ್ಡಾ ಮಿಲ್ ಗಯಾ, ಕರವಾನ್, ಮತ್ತು ಹರೆ ರಾಮ್ ಹರೆ ಕೃಷ್ಣ‌ ಗಳು ಸಂಗೀತದಲ್ಲಿ ಯಶಸ್ಸನ್ನು ಕಂಡಿವೆ. ಅಮರ್ ಪ್ರೇಮ್ ರೆಹನಾ ಬೀತ್ ಜಾಯೆ (ಲತಾ ಮಂಗೇಶ್ಕರ್ ಹಾಡಿದ‌)ಗಳಂತಹ ಜಟಿಲವಾದ ಭಾರತೀಯ ಶಾಸ್ತ್ರೀಯ ಸಂಗೀತವನ್ನಾಧರಿಸಿದ್ದು ಗಮನಾರ್ಹವಾಗಿದೆ. ಈ ಸಿನಿಮಾದಲ್ಲಿನ ಕಿಶೋರ್ ಕುಮಾರ್‌ ಹಾಡಿದ ಹಾಡಿಗಳು (ಚಿಂಗಾರಿ ಕೊಯಿ ಭಡ್ಕೆ, ಯೆಹ್ ಕ್ಯಾ ಹುವ ಮತ್ತು ಕುಚ್ ತೊ ಲೋಗ್ ಕಹೆಂಗೆ) ಬಹಳ ಜನಪ್ರಿಯವಾಗಿವೆ. ಈ ಸಿನಿಮಾ ಆನಂದ್ ಭಕ್ಷಿಯನ್ನು ಶ್ರೇಷ್ಠ ಗೀತಕಾರರನ್ನಾಗಿಸಿತು ಮತ್ತು ಅವರು ಬರ್ಮನ್‌ರೊಂದಿಗೆ ಅನೇಕ ಸಿನಿಮಾಗಳನ್ನು ಮಾಡುತ್ತಾ ಹೋದರು‌. ಬುಡ್ಡಾ ಮಿಲ್‌ ಗಯಾ ಸರಳವಾದ, ಉತ್ಸಾಹಿಯಾದ ರಾತ್ ಕಾಲಿ ಎಕ್ ಖ್ವಾಬ್ ಮೇ ಆಯಿ ಮತ್ತು ಭಲಿ ಭಲಿ ಸಿ ಏಕ್ ಸೂರತ್‌ ಹಾಡುಗಳನ್ನು ಹೊಂದಿವೆ. ಇದು ಶಾಸ್ತ್ರೀಯವಾದ ಆಯೋ ಕಹಾ ಸೆ ಘನಶ್ಯಾಮ್ ? ಹಾಡನ್ನೂ ಹೊಂದಿದೆ. ಕರಾವನ್ ಬಾಲಿವುಡ್‌ನ ಉತ್ತಮ ಕ್ಯಾಬರೆಯಾದ -ಹೆಲೆನ್‌ರೊಂದಿಗೆ ಚಿತ್ರೀಕರಿಸಿದ ಆಶಾ ಬೋಂಸ್ಲೆ ಮತ್ತು ಆರ್‌ಡಿ ಬರ್ಮನ್‌‌ರು ಹಾಡಿದ ಪಿಯಾ ತು ಅಬ್ ತೊ ಆಜಾ("ಮೊನಿಕ! ಓ ಮೈ ಡಾರ್ಲಿಂಗ್")ಯನ್ನು ಹೊಂದಿದೆ. "ಕಾರಾವಾನ್‌"ಗಾಗಿ ಅವರು ಉತ್ತಮ ಸಂಗೀತ ನಾಮನಿರ್ದೇಶನ ಫಿಲ್ಮ್‌ಫೇರ್‌ನ್ನು ಪಡೆದರು. ಹರೆ ಕೃಷ್ಣ ಹರೆ ರಾಮ ದ ಶೇರ್ಷಿಕೆಯ ಗೀತೆಯನ್ನು ಹಾಡಿದ ಆಶಾ ಯವಜನತೆಯ ಮನದಲ್ಲುಳಿದರು. Grand Theft Auto: Liberty City Stories soundtrack 2006ರಲ್ಲಿ ರೇಡಿಯೋ ಡೆಲ್ ಮುಂಡೊಗಾಗಿ ದಮ್ ಮಾರೊ ದಮ್‌ ಅನ್ನು ಬಳಸಿಕೊಳ್ಳಲಾಯಿತು. ಹಲವಾರು ವರ್ಷಗಳ ಕಾಲ ಈ ಹಾಡು ಜನಮನದಲ್ಲುಳಿಯಿತು. ಇತರ ಹಾಡುಗಳಾದ ಫೂಲೊಂಕಾ ತಾರೊಂಕಾ ಮತ್ತು ಕಾಂಚಿ ರೇ ಗಳೂ ಸಹ ಜನಪ್ರಿಯವಾದವು. ಪರಾಯ್‌ ಧನ್‌ ಅವಿಸ್ಮರಣೀಯವಾದ ಹಾಡುಗಳಾದ ’ತೆರಾ ಮೇರಾ ಜುದಾ ಹೋನಾ’ ಮತ್ತು ’ತೇರಾ ಮೇರಾ ದಿಲ್’ ಹಾಡುಗಳನ್ನೊಳಗೊಂಡಿದೆ. ಅಧಿಕಾರ್‌ನ 'ಕೋಯಿ ಮಾನೆ ಯಾ ನಾ ಮಾನೆ'ಯೂ ಸಹ ಗಮನಾರ್ಹವಾಗಿದೆ.

1972ರಲ್ಲಿ, ಆರ್‌ಡಿ ಬರ್ಮನ್‌ ಹತ್ತೊಂಭತ್ತು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದರು. ಸೀತಾ ಔರ್‌ ಗೀತಾ , ರಾಂಪುರ್‌ ಕಾ ಲಕ್ಷ್ಮಣ್‌ , ಮೇರೆ ಜೀವನ್‌ ಸಾಥಿ , ಬಾಂಬೆ ಟು ಗೋವಾ , ಅಪ್ನಾ ದೇಸ್‌ ಮತ್ತು ಪರಿಚಯ್‌ ಮುಂತಾದ ಚಲನಚಿತ್ರಗಳ ಹಾಡುಗಳು ಜನಪ್ರಿಯವಾಗಿವೆ. ಏರು ಸ್ವರದಲ್ಲಿರುವ ಆಶಾ-ಆರ್‌ಡಿ‌ ಬರ್ಮನ್‌ ಅಪ್ನಾ ದೇಶ್ ಚಿತ್ರದಲ್ಲಿನ ದುನಿಯಾ ಮೈ ಲಗಾನ್ ಕೊ ಹಾಡು ಜನಪ್ರಿಯವಾಗಿದೆ. ಆರ್‌ಡಿ ಬರ್ಮನ್‌ ಮತ್ತು ಗೀತಕಾರ ಗುಲ್ಜಾರ್‌ನ ಬೀತಿ ನಾ ಬಿತಾಯಿ ರೈನಾ ಮತ್ತು ಪರಿಚಯ್‌‌ಮುಸಾಫಿರ್ ಹೂ ಯಾರೊ ಗಳು ಎಂಭತ್ತರ ದಶಕದವರೆಗೂ ಜನಜನಿತವಾಗಿತ್ತು. ರಾಜೇಶ್‌ ಖನ್ನಾರ ಮೇರೆ ಜೀವನ್ ಸಾಥಿ ಕಿಶೋರ್ ಕುಮಾರ್‌‌ರ ಒ ಮೇರೆ ದಿಲ್ ಕೆ ಚೈನ್ ಎಂದಿಗೂ ಜನಪ್ರಿಯವಾಗಿರುವ ಹಾಡಾಗಿದೆ. 1972ರಲ್ಲಿ ಬಿಡುಗಡೆಯಾದ ಜವಾನಿ ದಿವಾನಿ ಯೂ ಜನಪ್ರಿಯವಾಗಿದೆ. ಅಭಿ ನಹಿ , ಜಾನ್‌-ಎ-ಜಾನ್ ದೂದ್‌ತಾ ಫಿರ್ ರಹಾ ಮತ್ತು ಶೀರ್ಷಿಕೆಯ ಹಾಡುಗಳು ಆ ವರ್ಷದ ಹಿಟ್‌ ಆದ ಹಾಡುಗಳಾಗಿವೆ. ಹಾಸ್ಯ ಪ್ರಧಾನ ಚಿತ್ರವಾದ ಬಾಂಬೆ ಟು ಗೋವಾ,'ದೆಖಾ ನಾ ಹಾಯೆ ರೆ’ಯಂತಹ ಉಲ್ಲಾಸದ ಹಾಡುಗಳನ್ನು ಹೊಂದಿದೆ. ಸೀತಾ ಔರ್‌ ಗೀತಾ ಬರ್ಮನ್‌ರೊಂದಿಗೆ ರಮೇಶ್ ಸಿಪ್ಪಿ ಕೆಲಸ ಮಾಡಿದ ಮೊದಲ ಸಿನಿಮಾವಾಗಿದೆ‌. 80ರ ದಶಕದ ವರೆಗಿನ ಅವರ ಎಲ್ಲಾ ಸಿನಿಮಾಗಳಲ್ಲಿ ಬರ್ಮನ್‌ರ ಸಂಗೀತವನ್ನು ಅಳವಡಿಸಿಕೊಂಡಿದ್ದರು.

1973ಯಲ್ಲಿ ಹದಿನಾಲ್ಕಕ್ಕೂ ಹೆಚ್ಚು ಆರ್‌ಡಿ ಬರ್ಮನ್‌‌ರ ಸೌಂಡ್‌ಟ್ರ್ಯಾಕ್‌‍ಗಳು ಬಿಡುಗಡೆಯಾದವು, ಅವುಗಳಲ್ಲಿ ನಾಸಿರ್ ಹುಸೇನ್‌ರ ಯಾದೋಂ ಕಿ ಭಾರಾತ್, ಶರೀಫ್ ಬದ್ಮಾಶ್ , ಹೀರಾ ಪನ್ನಾ/2} ಮತ್ತು ’ಬಾಹೂ ಮೆ ಚಲಿ ಆ’ ಮತ್ತು ಮೇರಿ ಭೀಗಿ ಭೀಗಿ’ಯಂತಹ ಜನಪ್ರಿಯ ಹಾಡುಗಳನ್ನು ಹೊಂದಿರುವ ಅನಾಮಿಕ ಚಲನಚಿತ್ರಗಳು ಜನಪ್ರಿಯವಾಗಿವೆ. ಯಾದೋಂಕಿ ಭಾರಾತ್‌ 'ಚುರಾ ಲಿಯಾ ಹೈ', 'ಯಾದೋಂಕಿ ಭಾರಾತ್‌', 'ಲೇಕರ್ ಹಮ್ ದಿವಾನ ದಿಲ್', 'ಮೇರಿ ಸೋನಿ ತಮನ್ನಾ’ಗಳಂತಹ ಕೆಲವು ಹಾಡುಗಳು ಜನಪ್ರಿಯವಾಗಿದೆ.

1974ರಲ್ಲಿ, ಆರ್‌ಡಿ ಬರ್ಮನ್‌ ಸಂಗೀತದ ಹದಿನಾರು ಹಾಡುಗಳು ಬಿಡುಗಡೆಯಾದವು. ಆಪ್ ಕಿ ಕಸಮ್ ಮತ್ತು ಅಜನಬೀ ಗಳು ಸಂಗೀತದಿಂದ ಜನಪ್ರಿಯವಾದವುಗಳಾಗಿವೆ.

1975ರಲ್ಲಿ, ಆರ್‌ಡಿ ಬರ್ಮನ್‌ ಸೌಂಡ್‌ಟ್ರ್ಯಾಕ್‌ಗಳನ್ನು ಹೊಂದಿದ ಒಂಭತ್ತು ಚಿತ್ರಗಳಲ್ಲಿ ಶೋಲೆ , ದೀವಾರ್ ,ಆಂಧಿ , ಕುಶ್ಬೂ ಮತ್ತು ಧರಮ್ ಕರಮ್‌ ಸೂಪರ್‌ಹಿಟ್‌ ಆದವುಗಳಾಗಿವೆ. ಶೋಲೆ ಯಲ್ಲಿ, ಹೆಲೆನ್‌ ಮತ್ತು ಜಲಾಲ್ ಅಘಾ ನಟಿಸಿದ ಮೆಹಬೂಬಾ ಮೆಹಬೂಬಾ ಹಾಡನ್ನು ಅವರು ಹಾಡಿದರು, ಅದರ ಹಿನ್ನಲೆ ಗಾಯನಕ್ಕಾಗಿ ಅವರು ಸೋಲ್‌ ಫಿಲ್ಮ್‌ಫೇರ್‌ಗೆ ನಾಮನಿರ್ದೇಶನಗೊಂಡರು. ಆಂಧಿ ಚಿತ್ರವು ಕಿಶೋರ್-ಲತಾ ಹಾಡಿದ ಇಸ್ ಮೂಡ್ ಸೆ ಜಾತೆ ಹೈ , ತುಮ್ ಆ ಗೆಯೆ ಹೊ , ತೇರೆ ಬಿನಾ ಜಿಂದಗಿ ಸೆ ಕೋಯಿ ಮತ್ತಿತರ ಶಾಸ್ತ್ರೀಯ ಗುಲ್ಜಾರ್‌ರ ಹಾಡುಗಳನ್ನು ಹೊಂದಿದೆ. ಕುಶ್ಬೂ ಓ ಮಾಜಿ ರೇ ಗಳಂತಹ ಹಾಡುಗಳನ್ನು ಹೊಂದಿದ ಆರ್‌ಡಿ ಬರ್ಮನ್‌ರ ಗುಲ್ಜಾರ್‌ರೊಂದಿಗಿನ ಇನ್ನೊಂದು ಅತ್ಯುತ್ತಮ ಸಿನಿಮಾವಾಗಿದೆ.

1975ರಲ್ಲಿ ಅವರು ಚಿಕ್ಕ ಡಾಕ್ಯುಮೆಂಟರಿ ಚಿತ್ರವಾದ ಮಾ ಕಿ ಪುಕಾರ್‌ಗೆ ಹಾಡೊಂದನ್ನು ಸಂಯೋಜಿಸಿದರು. ಆರ್‌ಡಿ ಬರ್ಮನ್‌ ಅವರ ತಂದೆ ಕೋಮಾದಲ್ಲಿದ್ದು ಸಾವಿಗೀಡಾದ ನಂತರ ತಂದೆಯ ಮಿಲಿ (1975) ಚಿತ್ರವನ್ನು ಪೂರ್ಣಗೊಳಿಸಿದರು.

1976ರಲ್ಲಿ, ಆರ್‌ಡಿ ಬರ್ಮನ್‌ ಸಂಗೀತ ನಿರ್ದೇಶಕರಾಗಿ 8 ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದರು, ಅದರಲ್ಲಿ ಮೆಹೆಬೂಬ (1976) ಶಾಸ್ತ್ರೀಯ ಸಂಗೀತವನ್ನಾಧರಿಸಿದ ಚಿತ್ರವಾಗಿದ್ದು ರಾಜೇಶ್‌ ಖನ್ನಾರು ಸಂಗೀತಕಾರರಾಗಿ (ಶಾಸ್ತ್ರೀಯ ಮತ್ತು ಆಧುನಿಕ) ದ್ವಿಪಾತ್ರದಲ್ಲಿ ವಿಭಿನ್ನವಾಗಿ ಅಭಿನಯಿಸಿದ್ದಾರೆ.

1977ರಲ್ಲಿ ಒಂಭತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದವು. ನಾಮ್ ಗಂ ಜಾಯೆಂಗಾ (ಕಿನಾರ , 1977) ಆರ್‌ಡಿ ಬರ್ಮನ್‌-ಗುಲ್ಜಾರ್‌ರ ಇನ್ನೊಂದು ಸಿನಿಮಾವಾಗಿದೆ, ಆದರೆ ಇದು "ಕ್ಯಾ ಹುವಾ ತೇರಾ ವಾದ" (ನಾಸಿರ್ ಹುಸೇನ್‌‌ರ ಹಮ್ ಕಿಸಿ ಸೆ ಕಮ್ ನಹಿ, 1977) ಮೊಹಮದ್‌‌ ರಫಿಯವರೊಂದಿಗೆ ನಿರ್ಮಿಸಿದ ಅತ್ಯಾಕರ್ಷಕವಾದ ಸಿನಿಮಾವಾಗಿದೆ, ಮತ್ತು ಆ ಹಾಡು ಅತ್ಯಂತ ಪ್ರಖ್ಯಾತ ಹಾಡಾಯಿತು. ಹಾಗಿದ್ದರೂ ಕಿಶೋರ್ ಕುಮಾರ್ ಆರ್‌ಡಿ ಬರ್ಮನ್‌ರ ಪ್ರಧಾನ ಪುರುಷ ಹಾಡುಗಾರರಾಗಿ ಮುಂದುವರೆದರು, "ಕ್ಯಾ ಹುವಾ ತೇರಾ ವಾದ"ವು ಬರ್ಮನ್‌‌ರು ಆಗಾಗ ರಫಿಯವರನ್ನು ತನ್ನ ಹಾಡಿಗೆ ಬಳಸಿಕೊಳ್ಳುವಂತೆ ಮಾಡಿತು.

1978ರಲ್ಲಿ, ಆರ್‌ಡಿ ಬರ್ಮನ್‌ರ ಶಾಲಿಮರ್‌ ಮತ್ತು ಕಸ್ಮೆ ವಾದೆ ಗಳನ್ನೊಳಗೊಂಡಂತೆ ಒಂಭತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದವು. ‌ಶಾಲಿಮರ್ ಹಿಟ್‌ಗಳಾದ ಹಮ್ ಬೆಫಾ ಹರ್ಗಿಝ್ ನ ಥೆ (ಕಿಶೋರ್ ಕುಮಾರ್‌) ಮತ್ತು ಶೀರ್ಷಿಕೆ ಗೀತೆ(ಆಶಾ ಬೋಂಸ್ಲೆ)ಗಳನ್ನೊಳಗೊಂಡಿತ್ತು. ಕಸ್ಮೆ ವಾದೆ ಯ ಶೀರ್ಷಿಕೆ ಗೀತೆಯಾದ ಮಿಲೆ ಜೊ ಕಡಿ ಕಡಿ ಮತ್ತು ಆತಿ ರಹೆಂಗಿ ಬೆಹರಿನ್‌ ಗಳು ಬಹಳ ಜನಪ್ರಿಯವಾಗಿವೆ. ಧರ್ಮೇಂದ್ರ-ನಟನೆಯ ಆಜಾದ್‌‌ ರ ಶೀರ್ಷಿಕೆ ಗೀತೆ ಮತ್ತು ರಾಜು ಚಲ್ ರಾಜು ಗಳು ತಕ್ಕಮಟ್ಟಿನ ಜನಪ್ರಿಯತೆಯನ್ನು ಪಡೆದಿವೆ. ಘರ್ ಚಿತ್ರದ ಆರ್‌ಡಿ ಬರ್ಮನ್-ಗುಲ್ಜಾರ್ ಜೋಡಿಯ ತೇರೆ ಬಿನಾ ಜಿಯೆ ಜಾಯೆ ನಾ , ಆಜ್ ಕಲ್ ಪಾಂವ್ ಜಮೀನ್ ಪರ್ , ಫಿರ್ ವೊಹಿ ರಾತ್ ಹೈ ಗಳು ಬೃಹತ್ ಪ್ರಮಾಣದಲ್ಲಿ ಹಿಟ್‌ ಆದ ಹಾಡುಗಳಾಗಿವೆ.

1979 ವರ್ಷ ಪೂರ್ತಿ ಆರ್‌ಡಿ ಬರ್ಮನ್‌ ಕಾರ್ಯ ನಿರ್ವಹಿಸಿದರೂ ಹತ್ತು ಚಿತ್ರಗಳನ್ನು ಸಂಯೋಜಿಸಿದರು. ಅವರ ಅತ್ಯಂತ ಹಿಟ್‌ ಆದ ಚಿತ್ರವೆಂದರೆ ಗೋಲ್‌ಮಾಲ್‌ . ಅತ್ಯಂತ ಜನಪ್ರಿಯ ಹಾಡುಗಳೆಂದರೆ ಆನೆವಾಲಾ ಪಲ್ (ಕಿಶೋರ್ ಕುಮಾರ್‌) ಮತ್ತು ಶೀರ್ಷಿಕೆ ಗೀತೆಯಾದ ಆರ್‌ಡಿ ಬರ್ಮನ್‌ ಮತ್ತು ಅವರ ಸಹಾಯಕ ಸಪನ್ ಚಕ್ರವರ್ತಿ ಹಾಡಿದ ಗೋಲ್‌ಮಾಲ್ ಹೈ ಭಾಯ್ ಗೋಲ್‌ಮಾಲ್ ಹೈ‌ ). 1979ರ ಆರ್‌ಡಿ ಬರ್ಮನ್‌ರ ಇನ್ನಿತರ ‌ಜನಪ್ರಿಯ ಹಾಡುಗಳೆಂದರೆ ಜೀವನ್ ಕೆ ಹರ್ ಮೋಡ್ ಪೆ (ಜಟಾ ಕಹಿ ಕಾ ), ರಿಮ್ ಜಿಮ್ ಗಿರೆ ಸಾವನ್ (ಮಂಜಿಲ್ ), ಸಾವನ್ ಕೆ ಜೂಲೆ ಪಡೆ (ಜುರ್ಮನಾ ) ಮತ್ತು ದೊ ಲಫ್ಜೋಂಕಿ ಹೈ ದಿಲ್ ಕಿ ಕಹಾನಿ (ಆಶಾ ಬೋಂಸ್ಲೆ ಮತ್ತು ನಟ ಶರದ್ ಕುಮಾರ ಹಾಡಿದ,ದ ಗ್ರೇಟ್‌ ಗ್ಯಾಂಬ್ಲರ್ ).

1980ರ ದಶಕ[ಬದಲಾಯಿಸಿ]

1980ರಲ್ಲಿ ಹತ್ತು ಚಿತ್ರಗಳು ಬಿಡುಗಡೆಯಾದವು. "ಹಮೆ ತುಮ್ಸೆ ಪ್ಯಾರ್ ಕಿತ್ನಾ" ಎಂಬ ಹಾಡನ್ನು ಗಾಯಕ (ಕಿಶೋರ್ ಕುಮಾರ್‌) ಮತ್ತು ಗಾಯಕಿ (ಪರ್ವಿನ್ ಸುಲ್ತಾನಾ) ಇಬ್ಬರ ಕಂಠದಲ್ಲೂ ಧ್ವನಿ ಮುದ್ರಿಸಲಾಯಿತು, ಸುಲ್ತಾನಾರವರು ಪಿಲ್ಮ್‌ಫೇರ್ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದುಕೊಂಡರು.[೮] ಆರ್‌ಡಿ ಬರ್ಮನ್‌ ದ ಬರ್ನಿಂಗ್ ಟ್ರೇನ್ ಮತ್ತು ಶಾನ್ ಚಿತ್ರಗಳಿಗೂ ಹಾಡ ಬರೆದರು. ದ ಬರ್ನಿಂಗ್ ಟ್ರೇನ್ ಚಿತ್ರದ ಸಾಹಿರ್ ಲುಧಿಯಾನ್ವಿಯವರ ಖವಾಲಿ ಪಲ್ ದೊ ಪಲ್ ಕಾ ಸಾಥ್ ಹಮಾರೆ ಯನ್ನು ಆಶಾ ಬೋಂಸ್ಲೆ ಮತ್ತು ಮಹಮದ್ ರಫಿ ಹಾಡಿದ್ದಾರೆ. ಚಿತ್ರದ ತೇರಿ ಹೈ ಜಮೀನ್ ಹಾಡನ್ನು ಸುಷ್ಮಾ ಶ್ರೇಷ್ಠಾ ಮತ್ತು ಬಾಲ ಗಾಯಕಿಯಾಗಿ ಪದ್ಮಿನಿ ಕೊಲ್ಹಾಪುರಿ ಹಾಡಿದ್ದಾರೆ. ಶಾನ್ ಚಿತ್ರದ ಪ್ಯಾರ್ ಕರ್ನೆ ವಾಲೆ ಪ್ಯಾರ್ ಕರ್ತೆ ಹೈ ಶಾನ್ ಸೆ (ಆಶಾ ಬೋಂಸ್ಲೆ), ದೋಸ್ತೋಸೆ ಪ್ಯಾರ್ ಕಿಯಾ (ಉಷಾ ಉತ್ತಪ್) ಮತ್ತು ಯಮ್ಮಾ ಯಮ್ಮಾ (ಡ್ಯುಯೆಟ್ ಹಾಡನ್ನು ರಫಿ ಮತ್ತು ಆರ್‌ಡಿ ಬರ್ಮನ್‌ ಹಾಡಿದ್ದಾರೆ). ಆರ್‌ಡಿ ಬರ್ಮನ್‌ ಅಲಿಬಾಬಾ ಔರ್ 40 ಚೋರ್ ( ರಶಿಯನ್‌ನಲ್ಲಿ Приключения Али-Бабы и сорока разбойников ), ಇದು ಇಂಡೋ-ರಶಿಯಾನ್ ಸಹಯೋಗದಲ್ಲಿ ತಯಾರಾದ ಚಿತ್ರ. ಕೂಬ್‌ಸೂರತ್‌ (1980)ಚಿತ್ರದಲ್ಲಿ ನಟಿ ರೇಖಾ ಮೊದಲ ಬಾರಿಗೆ ಆರ್‌ಡಿ ಬರ್ಮನ್‌ ಜೊತೆಗೆ ಕಾಯದಾ ಕಾಯದಾ ಮತ್ತು ಸಾರೆ ನಿಯಮ್ ತೋಡ್ ದೊ ಹಾಡನ್ನು ಹಾಡಿದರು. ಇದರ ಸಾಹಿತ್ಯವನ್ನು ಗುಲ್ಜಾರ್ ರಚಿಸಿದರು. ಇತರೆ ಹಾಡುಗಳಾದ ಸುನ್ ಸುನ್ ದೀದಿ ತೆರೆ ಲಿಯೇ (ಆಶಾ ಬೋಂಸ್ಲೆ) ಮತ್ತು ಪಿಯಾ ಬಾವರಿ (ಆಶಾ ಬೋಸ್ಲೆ, ಅಶೋಕ್ ಕುಮಾರ್)ಹಾಡಿದರು. ರಫಿ-ಹಾಡಿದ ಮೇನೆ ಪೂಚಾ ಚಾಂದ ಸೆ ಹಾಡನ್ನು ಆರ್‌ಡಿ ಬರ್ಮನ್‌ ತಮ್ಮ ತಂದೆ ಸಚಿನ್ ದೇವ್ ಬರ್ಮನ್‌ರ ರಾಗವನ್ನೆ ಆಧುನಿಕರಿಸಿದ್ದರು. ಮೊಹಮ್ಮದ್‌.

1981ರಲ್ಲಿ ಆರ್‌ಡಿ ಬರ್ಮನ್‌ ಹದಿನೈದು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. ಗೀತಕಾರ ಗುಲ್ಶನ್ ಬಾವ್ರಾ ಮತ್ತು ಯುನಿವರ್ಸಲ್ ಮ್ಯೂಸಿಕ್ ಇಂಡಿಯಾ (ನಂತರ ಇದನ್ನು ಮ್ಯೂಸಿಕ್ ಇಂಡಿಯಾ ಎಂದು ಕರೆಯಲಾಯಿತು) ಜೊತೆ ಸೇರಿ ಎರಡು ಸೌಂಡ್‌ಟ್ರ್ಯಾಕ್ಸ್ ಹುಟ್ಟುಹಾಕಿದರು - ಸತ್ತೆ ಪೆ ಸತ್ತಾ ಮತ್ತು ಯೆ ವಾದಾ ರಹಾ . ಅಮಿತಾಬ್ ಬಚ್ಚನ್ಅಮಿತಾಭ್ ಬಚ್ಚನ್-ನಟನೆಯ ಸತ್ತೆ ಪೆ ಸತ್ತಾ 7 ಜನ ಸಹೋದರರು ಮತ್ತು ಅವರ 7 ವಧುಗಳ ಕುರಿತ ಕಥೆಯಾಗಿದೆ. ಈ ಏಳು ಜನ ಸಹೋದರರ ಮೇಲೆ ಚಿತ್ರಿಸಲಾದ ಹಾಡಿಗೆ ಆರ್‌ಡಿ ಬರ್ಮನ್‌, ಇವರ ಸಹಾಯಕ ಬಸು ಮತ್ತು ಸಪನ್ ಚಕ್ರವರ್ತಿ, ಗೀತಕಾರ ಗುಲ್ಶನ್ ಬಾವ್ರಾ, ಭುಪೆಂದ್ರಾ, ಆನಂದ್ ಕುಮಾರ್ ಸಿ, ಮತ್ತು ಕಿಶೋರ್ ಕುಮಾರ್ ಹಾಡಿದ್ದಾರೆ. ಮಹಿಳೆಯರ ಹಾಡಿಗೆ ಆಶಾ ಬೋಂಸ್ಲೆ,ಅನ್ನೆಟ್ ಮತ್ತು ದಿಲ್ರಾಜ್ ಕೌರ್ ಹಾಡಿದ್ದಾರೆ. ದುಕ್ಕಿ ಪೆ ದುಕ್ಕಿ ಹೋ , ಪ್ಯಾರ್ ಹಮೆ ಕಿಸ್ ಮೋಡ್ ಪೆ , ದಿಲ್ಬರ್ ಮೇರೆ ಮತ್ತು ಜಿಂದಗಿ ಮಿಲ್ಕೆ ಬಿತಾಯೆಂಗೆ ಹಾಡುಗಳನ್ನು ಹೊಂದಿದೆ. 1981ರಲ್ಲಿ ಆರ್‌ಡಿ ಬರ್ಮನ್‌ರ ಹಾಡು ಸನಮ್ ತೇರಿ ಕಸಮ್ . ಈ ಧ್ವನಿವಾಹಿನಿಯು ಕಿತ್ನೆ ಭಿ ತು ಕರ್ ಲೆ ಸಿತಮ್ , ಜಾನ್-ಎ ಜಾನ್ ಮತ್ತು ದೇಕ್ತಾ ಹೂ ಕೋಯಿ ಲಡ್ಕಿ ಹಸೀನ್ ಹಾಡುಗಳನ್ನು ಒಳಗೊಂಡಿತ್ತು. 12 ವರ್ಷಗಳ ನಂತರ ನಾಮಾಂಕಿತರಾಗಿ 1981ರಲ್ಲಿ ಈ ಚಿತ್ರಕ್ಕಾಗಿ ಮೂದಲ ಬಾರಿಗೆ ಉತ್ತಮ ಸಂಗೀತಕ್ಕಾಗಿನ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡರು, ಆರ್‌ಡಿ ಬರ್ಮನ್‌ ರಾಕಿ (ಸಂಜಯ್ ದತ್‌ ಮೊದಲ ಚಿತ್ರ) ಮತ್ತು ಲವ್ ಸ್ಟೋರಿ (ಸಂಜಯ್ ದತ್‌ರ ಭಾವಮೈದುನ, ಕುಮಾರ್ ಗೌರವ್‌ರ ಮೊದಲ ಚಿತ್ರ) ಚಿತ್ರಕ್ಕಾಗಿ ಸಂಗೀತ ಸಂಯೋಜಿಸಿದ್ದರು.

1982ರಲ್ಲಿ ಆರ್‌ಡಿ ಬರ್ಮನ್‌‌ರ ಹದಿನಾಲ್ಕು ಸಂಗೀತ ಸಂಯೋಜನೆಯ ಚಿತ್ರಗಳು ಬಿಡುಗಡೆಯಾದವು. 1982ರಲ್ಲಿ ನಾಸಿರ್ ಹುಸೇನ್‌, ಆರ್‌ಡಿ ಬರ್ಮನ್‌ ಮತ್ತು ಮಜ್ರೂಹ್ ಸುಲ್ತಾನ್ ಪುರಿಯವರ ಒಂದು ತಂಡದಲ್ಲಿ (ತೀಸ್ರಿ ಮಂಜಿಲ್ (1966)ನಿಂದ ಶುರುವಾಗಿತ್ತು) ಜಮಾನೆ ಕೊ ದಿಖಾನಾ ಹೈ ಚಿತ್ರ ಮೂಡಿಬಂತು. ರಫಿ ಅವರು ನಾಸಿರ್ ಹುಸೇನ್-ಆರ್‌ಡಿ ಬರ್ಮನ್-ಮಜ್ರೂಹ್ ಸುಲ್ತಾನ್ ಪುರಿ ಅವರ ಜೋಡಿಯಲ್ಲಿ ಹಾಡಿದ್ದಾರೆ. ಅಶೋಕ್ ಕುಮಾರ್‌ರ ಕೊನೆಯ ಹಾಡು (ಶೌಕೀನ್ 1982)ಚಿತ್ರದಲ್ಲಿ ಹಾಡಿದ ಚಲೋ ಹಸೀನ್ ಗೀತ್ ಇದನ್ನು ಆರ್‌ಡಿ ಬರ್ಮನ್‌ ಸಂಯೋಜಿಸಿದ್ದರು. ಅಂಗೂರ್ (1982) ಚಿತ್ರದಲ್ಲಿ ಸಪನ್ ಚಕ್ರವರ್ತಿ ಹಾಡಿದ ಪ್ರೀತಮ್ ಆನ್ ಮಿಲೊ ಓ.ಪಿ ನಯ್ಯರ್‌ ಸಂಯೋಜಿಸಿದ ಹಾಡನ್ನು ಆರ್‌ಡಿ ಬರ್ಮನ್‌ ಅನುಕರಿಸಿದರು. ಮಾಸೂಮ್ ಮತ್ತು ಅಗರ್ ತುಮ್ ನ ಹೋತೆ ಒಳಗೊಂಡಂತೆ 1983ರಲ್ಲಿ ಆರ್‌ಡಿ ಬರ್ಮನ್‌ರ 15 ಸೌಂಡ್‌ಟ್ರ್ಯಾಕ್ಸ್ ಬಿಡುಗಡೆಯಾದವು. "ಮಾಸೂಮ್" ಚಿತ್ರದ ಉತ್ತಮ ಸಂಗೀತಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡರು.

1984ರಲ್ಲಿ, ಆರ್‌ಡಿ ಬರ್ಮನ್‌‌ರ 14 ಸೌಂಡ್‌ಟ್ರ್ಯಾಕ್ಸ್ ಬಿಡುಗಡೆಯಾದವು. ಇದೇ ವರ್ಷ ಗುಲ್ಶನ್ ಕುಮಾರ್‌ರ ಟೀ-ಸಿರೀಸ್ ಒರಿಜಿನಲ್ ಸೌಂಡ್‌ಟ್ರ್ಯಾಕ್ಸ್ ರಂಗಕ್ಕ ಪ್ರವೇಶಿಸಿತು. ಕಂಪನಿಯು ಮೊದಲ ಬಾರಿಗೆ ಎರಡು ಭಾಷೆಗಳ ಜಾಗೀರ್(ಹಿಂದಿ)/ತೀನ್ ಮೂರ್ತಿ(ಬೆಂಗಾಲಿ) ಚಿತ್ರದ ಸಂಗೀತದ ಹಕ್ಕನ್ನು ಪಡೆದುಕೊಂಡಿತು. ಈ ಚಿತ್ರದ ಸಂಗೀತವನ್ನು ಆರ್‌ಡಿ ಬರ್ಮನ್‌ ಸಂಯೋಜಿಸಿದ್ದರು. ಕುಮಾರ್ ಸಾನು ಕೂಡ ಆರ್‌ಡಿ ಬರ್ಮನ್‌‌ರ ಯೆ ದೇಸ್ (1984) ಚಿತ್ರದಲ್ಲಿ ಕಮಲ್ ಹಾಸನ್‌ಗೆ ಹಿನ್ನೆಲೆ ಗಾಯನ ಮಾಡುವ ಮೂಲಕ ಮೊದಲ ಗೆಲವು ಪಡೆದರು. ಅಭಿಜಿತ್ ಕೂಡ ಆರ್‌ಡಿ ಬರ್ಮನ್‌‌ ಸಂಯೋಜನೆಯ ಆನಂದ್ ಔರ್ ಆನಂದ್ ಚಿತ್ರದ ಮೂಲಕ ಗೆಲುವು ಪಡೆದುಕೊಂಡರು(1984). ಆದರೆ ಇವರು ಬಹಳ ಹಿಂದೆಯೇ ರಂಗಕ್ಕೆ ಪ್ರವೇಶ ಪಡೆದಿದ್ದರು, ಹರಿಹರನ್ ಮೊದಲ ಬಾರಿಗೆ ಕವಿತಾ ಕೃಷ್ಣಮೂರ್ತಿ ಜೊತೆಗೆ ಹೈ ಮುಬಾರಕ್ ಆಜ್ ಜಾ ದಿನ್ (ಬಾಕ್ಸರ್ , 1984) ಯುಗಳಗೀತೆ ಹಾಡಿದರು, ಇದಕ್ಕೂ ಆರ್‌ಡಿ ಬರ್ಮನ್‌ ಸಂಗೀತ ಸಂಯೋಜಿಸಿದ್ದರು. ರಫಿಯನ್ನು ಅನುಕರಿಸಿ ಹಾಡುವ 1980ರ ದಶಕದ ಮಹಮ್ಮದ್ ಅಜೀಜ್ 1985ರಲ್ಲಿ ಆರ್‌ಡಿ ಬರ್ಮನ್‌ ಅಡಿಯಲ್ಲಿ ಮೊದಲ ಬಾರಿಗೆ ಶಿವಾ ಕಾ ಇನ್‌ಸಾಫ್ (1985) ಮೂಲಕ ಪರಿಚಯವಾದರು. ಹುಸೇನ್ ಬರ್ಮನ್‌‌ರನ್ನು ಮಾದ್ಯಮದಲ್ಲಿ ಬೆಂಬಲಿಸಿದರು: "(ಜಮಾನೆ ಕೊ ದಿಖಾನಾ ಹೈ (1982) ಮತ್ತು ಮಂಜಿಲ್ ಮಂಜಿಲ್ (1984)) ಚಿತ್ರದಲ್ಲಿ ಆರ್‌ಡಿ ಚೆನ್ನಾಗಿ ಸಂಗೀತ ನೀಡಲಿಲ್ಲ ಎಂಬುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಜಬರ್ದಸ್ತ್ ಚಿತ್ರದ ಸಮಯದಲ್ಲಿ ತುಂಬಾ ಕಷ್ಟಕರ ದಿನಗಳನ್ನು ಎದುರಿಸಿದರು."[೯] ಹುಸೇನ್ ಚಿತ್ರ ನಿರ್ಮಿಸುವುದನ್ನು ನಿಲ್ಲಿಸಿ ತಮ್ಮ ಮಗ ಮನ್ಸೂರ್ ಖಾನ್‌ಗೆ ವಹಿಸಿದರು,ಇವರು ಬೇರೆ ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡರು. ಈ ಸಂದರ್ಭವನ್ನು ಹೇಳುವಾಗ ಹುಸೇನ್ ಸಕಾರಾತ್ಮಕವಾಗಿ ಹೇಳುತ್ತಾರೆ, " ನಾವು ಪಂಚಮ್‌ರನ್ನು ಕೈಬಿಟ್ಟಿಲ್ಲ-ಮನ್ಸೂರ್ ಬೇರೆ ರೀತಿಯಾದ ಶೈಲಿಯನ್ನು ಬಯಸುತ್ತಿದ್ದ ಆದರೆ ಅದನ್ನು ಪಂಚಮ್ ಅಂಕಲ್‌ಗೆ ಹೇಳಲು ಸಾಧ್ಯವಾಗಲಿಲ್ಲ. ಶೀಘ್ರವೆ ನಾನು ನಿರ್ದೇಶನ ಮಾಡಲು ಯೋಜನೆ ತಯಾರಿಸಿದ್ದೇನೆ ಆಗ ಪಂಚಮ್ ಮತ್ತೆ ಬರುತ್ತಾರೆ."[೯] ತೀಸ್ರಿ ಮಂಜಿಲ್ (1966) ಮೂಲಕ ಪ್ರಾರಂಭವಾದ ಹುಸೇನ್ ಬರ್ಮನ್‌ ಪಾಲುದಾರಿಕೆ ಸುಮಾರು ಇಪ್ಪತ್ತು ವರ್ಷ ನಡೆಯಿತು.

1986ರ ನಂತರ ಕಡಿಮೆ ಪ್ರಮಾಣದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1987ಲ್ಲಿ ಇಜಾಜತ್ ಒಳಗೊಂಡಂತೆ ಕೇವಲ 5 ಚಿತ್ರಗಳು ಬಿಡುಗಡೆಯಾದವು. ಇಜಾಜತ್ ಚೋಟಿ ಸಿ ಕಹಾನಿ ಸೆ , ಖಾಲಿ ಹಾತ್ ಶಾಮ್ ಆಯಿ ಹೆ , ಕತ್ರಾ ಕತ್ರಾ ಮತ್ತು ಮೇರಾ ಕುಚ್ ಸನಮ್ ನಂತಹ ಹಾಡುಗಳನ್ನು ಒಳಗೊಂಡಿತು (ಆಶಾ ಬೋಂಸ್ಲೆ ಅತ್ಯುತ್ತಮ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು). ಗೀತಕಾರ ಗುಲ್ಜಾರ್, ಆರ್‌ಡಿ ಬರ್ಮನ್ ಮತ್ತು ಆಶಾ ಬೋಂಸ್ಲೆ,ಜೊತೆಯಾಗಿ ಸೇರಿ 1987ರಲ್ಲಿ ದಿಲ್ ಪಡೊಸಿ ಹೆ ಹೆಸರಿನ ಎರಡು ಆಲ್ಬಮ್‌ಗಳನ್ನು ಹೊರ ತಂದರು, ಇದು ಆಶಾ ಬೋಂಸ್ಲೆಯವರ ಜನ್ಮದಿನವಾದ 8 1987ರಂದು ಬಿಡುಗಡೆಯಾಯಿತು[೧೦]. ಸಂಬಾ ಮೇಲೆ ಒಂದು ಮತ್ತು ಬಾಯ್ ಜಾರ್ಜ್ ಜೊತೆಯಾಗಿ, ಆರ್‌ಡಿ ಬರ್ಮನ್‌ ಪ್ರತ್ಯೇಕವಾಗಿ ಆಲ್ಬಮ್‌ಗಳನ್ನು ನಿರ್ಮಿಸಿದರು. 1987ರಲ್ಲಿ ಪಂತೇರಾ ಎಂಬ ಆಲ್ಬಮ್‌ಗೂ ಸಂಗೀತ ಸಂಯೋಜಿಸಿದರು, ಪೀಟ್ ಗೋವಂಕರ್ ಇದನ್ನು ನಿರ್ಮಿಸಿದರು ಮತ್ತು ಜೋಸ್ ಫ್ಲೋರ್ಸ್ ಇದಕ್ಕೆ ಗೀತ ರಚನೆ ಮಾಡಿದ್ದಾರೆ.

1988ರಲ್ಲಿ ಆರ್‌ಡಿ ಬರ್ಮನ್‌ ಮತ್ತೆ ನಾಲ್ಕು ಸೌಂಡ್‌ಟ್ರ್ಯಾಕ್ಸ್ ನೀಡಿದರು ಅದರಲ್ಲಿ ಲಿಬಾಸ್ ಕೂಡ ಒಂದು ಆದರೆ ನಿರ್ಮಾಪಕರು ಚಿತ್ರವನ್ನು ಬಿಡುಗಡೆ ಮಾಡಲು ನಿರಾಕರಿಸಿದರು. ಆರ್‌ಡಿ ಬರ್ಮನ್‌

1989ರಲ್ಲಿ ಪರಿಂದಾ ಮತ್ತು ಜೋಶೀಲೆ ಸೇರಿದಂತೆ 6 ಚಿತ್ರಕ್ಕೆ ಸಂಗೀತ ನೀಡಿದರು.

1990ರ ದಶಕ[ಬದಲಾಯಿಸಿ]

ಆರ್‌ಡಿ ಬರ್ಮನ್‌‌ರ ಕೊನೆಯ ವರ್ಷ ಚೆನ್ನಾಗಿರಲಿಲ್ಲ. ಸಂಗೀತ ನೀಡಿದ ಕೆಲವು ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋತವು. ಸುಭಾಷ್ ಘಾಯ್ ರಾಮ್ ಲಖನ್ ಚಿತ್ರಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದರು ಆದರೆ ಲಕ್ಷ್ಮಿಕಾಂತ್-ಪ್ಯಾರೆಲಾಲ್‌‌ಗೆ ಅವಕಾಶ ನೀಡಿದರು. ಇದು ಪಂಚಮ್‌ರ‍ನ್ನು ತುಂಬಾ ನಿರಾಶೆಗೊಳಿಸಿತು. 1988ರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಗೊಳಗಾದರು. ಈ ಸಮಯದಲ್ಲಿ ಹಲವಾರು ರಾಗಗಳನ್ನು ಸಂಯೋಜಿಸಿದ್ದರು ಆದರೆ ಅವು ಯಾವವು ಬಿಡುಗಡೆಯಾಗಲಿಲ್ಲ. ಆರ್‌ಡಿ ಬರ್ಮನ್‌ 1990 (ಎರಡು), 1991 (ಮೂರು) ಮತ್ತು 1992 (ಆರು)ರಲ್ಲಿ ನೀಡಿದ ಸಂಗೀತಗಳು. 1994ರಲ್ಲಿ ಮತ್ತೆ ನಾಲ್ಕು ಚಿತ್ರಗಳು ಬಿಡುಗಡೆಯಾದವು, 1942: A Love Story (ಅವರ ಸಾವಿನ ನಂತರ) ಇವುಗಳು ಅವಿಸ್ಮರಣೀಯ ಸಂಗೀತವಾಗಿ ಉಳಿದವು. ಈ ಚಿತ್ರವು ಅವರಿಗೆ ಮೂರನೇಯ ಮತ್ತು ಕೊನೆಯ ಫಿಲ್ಮ್‌ಫೇರ್ ಪ್ರಶಸ್ತಿ ತಂದು ಕೊಟ್ಟಿತು. ಜಾನಮ್ ಸೇ ಪೆಹಲೆ (1994) ಚಿತ್ರಕ್ಕೆ ಕೂಡ ಆರ್‌ಡಿ ಬರ್ಮನ್‌ ಸಂಗೀತ ನೀಡಿದ್ದಾರೆ. ಇವರ ಸಾವಿನ ನಂತರ, Ghatak: Lethal (1996) ಬಿಡುಗಡೆಯಾಯಿತು. ಸಂಗೀತ ಸಂಯೋಜಿಸಲು ಸಹಿ ಹಾಕಿದ ಕೊನೆಯ ಚಿತ್ರ ಪ್ರಿಯದರ್ಶನ್ ನಿರ್ದೇಶನದ ತೆನ್ಮವಿನ್ ಕೊಂಬಾತ್, ಎಂಬ ಮಲಯಾಳಂ ಚಿತ್ರ, ಆದರೆ ಸಂಗೀತ ನೀಡುವುದಕ್ಕಿಂದ ಮೊದಲಿಗೆ ಮರಣ ಹೊಂದಿದರು.

ಪರಂಪರೆ[ಬದಲಾಯಿಸಿ]

ಇವರ ಸಾವಿನ ನಂತರ 1990ರ ದಶಕದ ಮಧ್ಯಭಾಗದಲ್ಲಿ, ಆರ್‌ಡಿ ಬರ್ಮನ್‌‌ ನೀಡಿದ ಹಿಟ್ ಗೀತೆಗಳೆ ರಿಮಿಕ್ಸ್ ಆಗಿ ಭಾರತೀಯ ಸಂಗೀತವನ್ನು ಆಳಿದವು. ಇಂದಿಗೂ ಕೂಡ ಇವರು ಸಂಯೋಜಿಸಿದ ಹಾಡುಗಳು ರಿಮಿಕ್ಸ್ ಆಗುತ್ತಿವೆ.[ಸೂಕ್ತ ಉಲ್ಲೇಖನ ಬೇಕು] ಗ್ಯಾಂಗ್ (2000) ಆರ್‌ಡಿ ಬರ್ಮನ್‌ ಸತ್ತ ಎಷ್ಟೋ ವರ್ಷಗಳ ನಂತರ ಬಿಡುಗಡೆಯಾಯಿತು. ಸಾವಿನ ನಂತರವು ಕೆಲವು ಚಿತ್ರಗಳಿಗೆ ಸಂಗೀತ ನೀಡಿದ ಕಿರ್ತಿ ಇವರಿಗೆ ಸಲ್ಲುತ್ತದೆ. ಉದಾಹರಣೆಗೆ, ಮಾನ್ಸೂನ್ ವೆಡ್ಡಿಂಗ್ ಚುರಾ ಲಿಯಾ ಹೆ ಹಾಡಿಗೆ ಕೀರ್ತಿ ಸಲ್ಲುತ್ತದೆ) ಮತ್ತು ದಿಲ್ ವಿಲ್ ಪ್ಯಾರ ವ್ಯಾರ್ (2002), ಆರ್‌ಡಿ ಬರ್ಮನ್‌ ಸಹಾಯಕರಾದ ಬಬ್ಲೂ ಚಕ್ರವರ್ತಿಯಿಂದ ಪುನಃಸೃಷ್ಟಿಸಲ್ಪಟ್ಟಿತು. ಜನ್ಕಾರ್ ಬೀಟ್ಸ್ (2003ರ ಚಿತ್ರ) ಸಂಜಯ್ ಸೂರಿ, ರಾಹುಲ್ ಬೋಸ್, ಜೂಹಿ ಚಾವ್ಲಾ & ರಿಂಕಿ ಖನ್ನಾ ಅಭಿನಯಿಸಿದ್ದರು, ಸೂರಿ ಮತ್ತು ಬೋಸ್ ಸಂಗೀತಗಾರರಾಗಿ ಅಭಿನಯ ಅವರು ಬರ್ಮನ್‌ ಸ್ಫೂರ್ತಿಯಿಂದ ಸಂಗೀತ ಸಂಯೋಜಿಸುತ್ತಿದ್ದರು ಈ ಮೂಲಕ ಬರ್ಮನ್‌‌ರಿಗೆ ಗೌರವ ಪ್ರಶಂಸೆ ಸಲ್ಲಿಸಿದರು. ಆರ್‌ಡಿ ಬರ್ಮನ್ ಸಂಯೋಜಿಸಿದ ಕಿಶೋರ್ ಕುಮಾರ್‌ ಹಾಡಿದ "ಹಮೆ ತುಮ್ಸೆ ಪ್ಯಾರ್ ಕಿತನಾ" ರಿಮಿಕ್ಸ ಹಾಡು ಚಿತ್ರದ ಭಾಗವಾಗಿತ್ತು. ದಿಲ್ ವಿಲ್ ಪ್ಯಾರ ವ್ಯಾರ್ ಮತ್ತು ಜನ್ಕಾರ್ ಬೀಟ್ಸ್ ಚಿತ್ರಗಳು ಆರ್‌ಡಿ ಬರ್ಮನ್ ಮತ್ತು ಅವರ ಸಂಗೀತಕ್ಕೆ ಗೌರವ ನೀಡಿದವು.[೧೧]"ಜನ್ಕಾರ್ ಬೀಟ್ಸ್"ನಲ್ಲಿ ಇವರ ಪ್ರಸಿದ್ಧ ಕುದ್ರತ್ ಚಿತ್ರದ ರಾಗಗಳನ್ನು ಬಳಸಿಕೊಂಡು ಗೌರವ ನೀಡಿದರು.

1995ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ, ಆರ್‌ಡಿ ಬರ್ಮನ್ ನೆನಪಿನಲ್ಲಿ ಹೊಸದಾದ ಹೊಸ ಸಂಗೀತ ಪ್ರತಿಭೆಗಾಗಿ ಫಿಲ್ಮ್‌ಫೇರ್ ಆರ್‌ಡಿ‌ ಬರ್ಮನ್‌ ಪ್ರಶಸ್ತಿ ಹೆಸರಿನ ಪ್ರಶಸ್ತಿ ರಚಿಸಿತು, ಹಿಂದಿ ಸಿನೆಮಾದ ಹೊಸ ಸಂಗೀತ ನಿರ್ದೇಶಕ ಮತ್ತು ಹಾಡುಗಾರರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕಿಂತ ಮೊದಲಿಗೆ ಭಾರತೀಯ ಟೆಲಿವಿಜನ್ ಪ್ರೋಗ್ರಾಮ್ ಸುಪರ್ ಹಿಟ್ ಮುಕ್ಕಾಬುಲಾ‌ ಆರ್‌ಡಿ ಬರ್ಮನ್‌‍ಗಾಗಿ ಸುಮು ಪ್ರಶಸ್ತಿ ನೀಡಲು ಪ್ರಾರಂಭಿಸಿತ್ತು. ಆದರೆ ಈ ಕಾರ್ಯಕ್ರಮದ ನಿರ್ಮಾಪಕರ ಕೆಲವು ತೊಂದರೆಗಳಿಂದಾಗಿ ಪ್ರಶಸ್ತಿ ನೀಡುವಿಕೆ ಮುಂದುವರೆಯಲಿಲ್ಲ. ಹೊಸ ಸಂಗೀತ ಪ್ರತಿಭೆಗಳಿಗಾಗಿ ನೀಡುವ ಫಿಲ್ಮ್‌ಫೇರ್ ಆರ್‌ಡಿ‌ ಬರ್ಮನ್‌ ಪ್ರಶಸ್ತಿಯನ್ನು ಮುಂಬರುವ ಸಂಗೀತ ಪ್ರತಿಭೆಗಳಿಗಾಗಿ ನೀಡಲಾಗುತ್ತಿದೆ.

ಏಪ್ರಿಲ್ 26 2008ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಐಫ್ಲಾ (ಆರ್ಕ್‌ಲೈಟ್ ಹಾಲಿವುಡ್)ನಲ್ಲಿ 'ಪಂಚಮ್ ಅನ್‌ಮಿಕ್ಸ್ಡ್ - ಮುಜೆ ಚಲ್ತೆ ಜಾನಾ ನಹಿ' ಹೆಸರಿನ 113 ನಿಮಿಷಗಳ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನವಾಯಿತು[೧೨]. ಈ ಸಿನೆಮಾ ಪಂಚಮ್‌ನ ಪ್ರತಿಫಲನಾ ಕಲೆಯನ್ನು ತೋರ್ಪಡಿಸುತ್ತದೆ. ಅಲ್ಲದೆ ಇದು ಹೆಚ್ಚು ತೆರೆದುಕೊಳ್ಳುವ ಆದರೆ ಏಕಾಂಗಿ ವ್ಯಕ್ತಿಯ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ. ಇದರಲ್ಲಿ ತನ್ನ ಆತ್ಮಿಯ ಸ್ನೇಹಿತರು, ಸಹೊದ್ಯೋಗಿಗಳು ತನ್ನನ್ನು ನಂಬಿಕೊಂಡವರನ್ನು ಬಳಸಿಕೊಳ್ಳಲಾಗುತ್ತಿತ್ತು. ಶ್ಲಾಘನೆ ಮತ್ತು ನೆನಪು ಇವತ್ತಿನವರೆಗೂ ಅವರ ಸಂಗೀತ ಮಾಡುತ್ತಿರುವ ಕಾರ್ಯ.

ವೈಯಕ್ತಿಕ ಜೀವನ[ಬದಲಾಯಿಸಿ]

ಪಂಚಮ್ 1966ರಲ್ಲಿ ರೀಟಾ ಪಟೇಲ್‌ರನ್ನು ಮದುವೆಯಾದರು, ಆದರೆ 1971ರಲ್ಲಿ ವಿಚ್ಛೇದನ ಕೊಂಡರು. ನಂತರ 1980ರಲ್ಲಿ ಆಶಾ ಬೋಸ್ಲೆಯವರನ್ನು ಮದುವೆಯಾದರು. ಇವರಿಬ್ಬರು ಜೊತೆಯಾಗಿ ಹಲವಾರು ಅವಿಸ್ಮರಣೀಯ ಹಾಡುಗಳನ್ನು ಮತ್ತು ಹಲವಾರು ನೇರ ಕಾರ್ಯಕ್ರಮಗಳನ್ನು ನೀಡಿದ್ದಾರೆ. 1975ರಲ್ಲಿ ತಂದೆಯ ಸಾವಿನ ನಂತರ, ತಾಯಿಯನ್ನು ನೋಡಿಕೊಂಡರು. ಪಂಚಮ್ ಸತ್ತ ನಂತರ ಇವರ ತಾಯಿಯು ವೃದ್ಧಾಶೃಮ ಸೇರಿದರು ಆದರೆ ಅಲ್ಲಿಂದ ಹಿಂದಿರುಗಿ ಬಂದು ಅಕ್ಟೋಬರ್ 15 2007ರಂದು ಸಾಯುವವರೆಗೂ ಇವರ ಮನೆಯಲ್ಲೇ ಇದ್ದರು.[೧೩] ಬರ್ಮನ್‌ ತಮ್ಮ ಕೊನೆಯ ಸಮಯದಲ್ಲಿ ಆರ್ಥಿಕ ದುಸ್ಥಿತಿಗೆ ಒಳಗಾಗಿದ್ದರು. ಸಂಗೀತದ ಯಶಸ್ಸು ಮತ್ತು ಅವರ ಆರ್ಥಿಕ ದುಸ್ಥಿತಿಯ ನಡುವಿನ ತಪ್ಪಿರುವ ಸಂಬಂಧದ ಕುರಿತಾಗಿ ಹಲವಾರು ಚರ್ಚೆಗಳು ನಡೆದವು.

ಸಂಗೀತ ಶೈಲಿ[ಬದಲಾಯಿಸಿ]

ಪಂಚಮ್‌ರಿಗೆ ಎಲ್ಲಾ ವಿಧವಾದ ಸಂಗೀತ ಪ್ರಕಾರಗಳು ಹಿತಕರವಾಗಿದ್ದವು, ಬುಡ್ಡಾ ಮಿಲ್‌ಗಯಾ ಚಿತ್ರದ ರಾತ್ ಕಲಿ ರೋಮ್ಯಾಂಟಿಕ್ ಹಾಡು, (1971),ಕರಾವನ್‌ (1971) ಚಿತ್ರದ ಪಿಯಾ ತು ಅಬ್ ತೊ ಆಜಾ ಕ್ಯಾಬರೆ ಹಾಡು, ಹರೇ ರಾಮ ಹರೇ ಕಷ್ಣ (1972) ಚಿತ್ರದ ದಮ್ ಮಾರೊ ದಮ್ ಹಿಪ್ಪಿ ಹರ್ಷಗೀತೆ, ರೆಹನಾ ಬೀತ್ ಜಾಯೆ ಯಂತಹ ಶಾಸ್ತ್ರೀಯ ಶೈಲಿಯ ಹಾಡುಗಳು. ಹರೇ ರಾಮ ಹರೇ ಕಷ್ಣದಮ್ ಮಾರೊ ದಮ್ ಹಾಡನ್ನು ಪೂರ್ತಿಯಾಗಿ ಬಳಸಗಾಗಿಲ್ಲ, ಪೂರ್ತಿಯಾಗಿ ಬಳಸಿದ್ದರೆ ಚಿತ್ರದ ಪ್ರಾಮುಖ್ಯತೆಯನ್ನು ಕಡಮೆ ಮಾಡುತ್ತಿತ್ತು ಎಂದು ದೇವ್‌ ಆನಂದ್‌ ಚಿಂತಿತರಾಗಿದ್ದರು ಎಂದು ಹೇಳುತ್ತಾರೆ[ಸೂಕ್ತ ಉಲ್ಲೇಖನ ಬೇಕು]. ಇದೇ ಸಮಯದಲ್ಲಿ, ಆರ್‌ಡಿ ಹಾಡುಗಾರರಾಗಿಯೂ ಪ್ರಸಿದ್ಧರಾದರು. ಶೋಲೆ ಚಿತ್ರದ ಮೆಹಬೂಬಾ ಹಾಡು ತುಂಬಾ ಜನಪ್ರಿಯವಾಯಿತು. ಈ ಹಾಡು ಸಿಪ್ರಿಯಾಟ್‌ನ ಸಾಂಪ್ರದಾಯಿಕ ಹಾಡಾದ "ತಾ ರಿಯಾಲಿಯಾ"ದಿಂದ ಸ್ಫೂರ್ತಿ ಪಡೆದುಕೊಂಡಿದೆ. ಪಂಚಮ್ ತುಂಬಾ ಸೃಜನಾತ್ಮಕ ವ್ಯಕ್ತಿಯಾಗಿದ್ದರು. ಯಾದೋಂಕಿ ಭಾರಾತ್‌ ಚಿತ್ರದ (ಚುರಾ ಲಿಯಾ ಹೈ ಹಾಡಿನಲ್ಲಿ ಗಾಜಿನ ಬಡಿತದ ಬದಲಾಗಿ ಚಮಚವನ್ನು ಬಳಸಿದ್ದಾರೆ"). ಪಂಚಮ್ ಬಾಂಗ್ಲಾ, ಓರಿಯಾ, ತಮಿಳ್, ತೆಲಗು ಮತ್ತು ಮರಾಠಿ ಪ್ರಾದೇಶಿಕ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಗಾಯಕ್ ಎಂಬ (ಅಮಿತ್ ಕುಮಾರ್ ದೇಬಶ್ರೀ ರಾಯ್ ನಟಿಸಿದ)ಬೆಂಗಾಲಿ ಚಿತ್ರದಲ್ಲೂ ನಟಿಸಿದ್ದರು, ಈ ಚಿತ್ರದಲ್ಲಿ ಆರ್‌ಡಿ‌ ತಮ್ಮದೆ ಪಾತ್ರ ಮಾ್ಡಿದ್ದರು ಮತ್ತು ಸಮುದ್ರ ತೀರದಲ್ಲಿ ಅಮಿತ್ ಹಾಡುವುದನ್ನು ನೋಡಿದರು. ಪಂಚಮ್‌ ಸಿನೆಮಾ ಹೊರತಾಗಿ ಕೆಲವೊಂದು ಆಲ್ಬಮ್‌ಗಳಿಗೂ ಸಂಗೀತ ನೀಡಿದ್ದಾರೆ ಇದರಲ್ಲಿ ಪಂಥೆರಾ ಎಂಬ ಅಂತರಾಷ್ಟ್ರೀಯ ಆಲ್ಬಮ್‌ ಕೂಡ, ಇದರ ಕೀರ್ತಿಯನ್ನು ಲ್ಯಾಟಿನ್ ಅಮೆರಿಕಾದ ಸಂಯೋಜಕ ಜೋಸ್ ಫ್ಲೋರ್ಸ್ ಜೊತೆಗೆ ಹಂಚಿಕೊಂಡಿದ್ದಾರೆ.

ಹಮೆ ತುಮ್ಸೆ ಪ್ಯಾರ್ ಕಿತನಾ ಹಮೆ ತುಮ್ಸೆ ಪ್ಯಾರ್ ಕಿತನಾ ಹಾಡಿನ ಶಾಸ್ತ್ರೀಯ ಆವೃತ್ತಿಯನ್ನು ಪರ್ವಿನ್ ಸುಲ್ತಾನಾ ಹಾಡಿದ್ದರು ಮತ್ತು ಸರಳ ಆವೃತ್ತಿಯನ್ನು ಕಿಶೋರ್ ಕುಮಾರ್‌ ಕಂಠದಲ್ಲಿ ಮುದ್ರಿಸಿದ್ದರು ಈ ರೀತಿಯ ಪ್ರಯೋಗ ಮಾಡಿದವರು ಇವರೊಬ್ಬರೆ[ಸೂಕ್ತ ಉಲ್ಲೇಖನ ಬೇಕು]. ಇವರು ವಿಶೇಷವಾಗಿ ಕಿಶೋರ್ ಕುಮಾರ್‌ ಕಂಠದಲ್ಲಿ ಹಲವಾರು ವಿಧವಾದ ಹಾಡುಗಳನ್ನು ಮುದ್ರಿಸಿದ್ದಾರೆ. ಶಾಸ್ತ್ರೀಯ ಹಾಡು ಮೇರೆ ನೆನಾ ಸಾವನ್ ಭಾಗೋ , ದುಃಖದ ಹಾಡು ಚಿಂಗಾರಿ ಕೋಯಿ ಬಡಕೆ ,ತತ್ವದ ಹಾಡು ಆನಾವಾಲಾ ಪಲ್ , ಪಿನೊ ಹಾಡು ಪ್ಯಾರ್ ದೀವಾನಾ ಹೋತಾ ಹೈ , ರೋಮ್ಯಾಂಟಿಕ್ ಹಾಡು ಓ ಮೇರೆ ದಿಲ್ ಕಿ ಚೇನ್ , ಗುಂಯ್‌ಗುಡುವ ಹಾಡು ರಾತ್ ಕಲಿ ,ಅಗಲಿಕೆ ಹಾಡು ಜಿಂದಗಿ ಕಿ ಸಫರ್ ಮೇ , ಮಳೆಯ ಹಾಡು ರಿಮ ಜಿಮ ಗಿರೆ ಸಾವನ್ . ತುಮ್ ಬಿನ್ ಜಾವು ಕಹಾ ಹಾಡನ್ನುಕಿಶೋರ್ ಕುಮಾರ್‌ ಮತ್ತು ಮೊಹಮ್ಮದ್. ರಫಿಯವರ ಕಂಠದಲ್ಲಿ ಬೇರೆ ಬೇರೆಯಾಗಿ ಮುದ್ರಿಸಲಾಯಿತು. ಬರ್ಮನ್‌‌ರ ಪ್ರಮುಖ ಸಂಗೀತ ಸಹಾಯಕರು ಮನೋಹರಿ ಸಿಂಗ್ ಮತ್ತು ಸಪನ್ ಚಕ್ರವರ್ತಿ.

ಸ್ಫೂರ್ತಿಗಳು[ಬದಲಾಯಿಸಿ]

ಇವರು ಹಲವಾರು ಪಾಶ್ಚಿಮಾತ್ಯ ಹಾಡುಗಳನ್ನು ತಮ್ಮದೆ ರಾಗದಲ್ಲಿ ಸಂಯೋಜಿಸಿದ್ದಾರೆ. ಡೆಮಿಸ್ ರೌವ್ಸಸ್ ಸಂಗ್ರಹಿಸಿ ಹಾಡಿದ ಸೈಪ್ರಸ್ ಸಾಂಪ್ರದಾಯಿಕ ಹಾಡು "ಸೇ ಯು ಲವ್ ಮಿ"ಯಿಂದ ಮೆಹಬೂಬಾ ಮೆಹಬೂಬಾ ಎಂಬ ಪ್ರಸಿದ್ಧ ಹಾಡು ಸ್ಫೂರ್ತಿ ಪಡೆದಿದೆ.[೧೪]. ಇವರು ಕೂಡ ಎಬಿಬಿಎ ಎಂಬ ಸ್ವೀಡೀಶ್ ಬ್ಯಾಂಡ್‌ನಿಂದ ಸ್ಫೂರ್ತಿ ಪಡೆದಿದ್ದಾರೆ. [೧೫]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಕರಾವನ್‌ (1971)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಯಾದೊಂಕಿ ಕಿ ಭಾರಾತ್‌ (1973)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಆಪ್ ಕಿ ಕಸಮ್ (1974)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಖೇಲ್ ಖೇಲ್ ಮೆ (1975)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಶೋಲೆ (1975)
  • ಫಿಲ್ಮ್‌ಫೇರ್ ಪ್ರಶಸ್ತಿ ಶೋಲೆ (1975) ಚಿತ್ರದ "ಮೆಹಬೂಬಾ ಮೆಹಬೂಬಾ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನೆಕ್ಕೆ ನಾಮನಿರ್ದೇಶನ
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಮೆಹಬೂಬಾ (1976)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಹಮ್ ಕಿಸಿ ಸೆ ಕಮ್ ನಹಿ (1977)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಕಿರಾಣಾ (1977)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಶಾಲಿಮರ್‌ (1978)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಶಾನ್ (1980)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಲವ್ ಸ್ಟೋರಿ (1981)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ - ಸನಮ್ ತೇರಿ ಕಸಮ್ (1982)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ - ಮಾಸೂಮ್ (1983)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಬೇತಾಬ್ (1983)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಜವಾನಿ (1984)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನಾಮನಿರ್ದೇಶನ - ಸಾಗರ್ (1986)
  • ಫಿಲ್ಮ್‌ಫೇರ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ - ೧೯೪೨ ಲವ್ ಸ್ಟೋರಿ (1994)

ಉಲ್ಲೇಖಗಳು[ಬದಲಾಯಿಸಿ]

  1. Ranganathan Magadi (2006). India Rises in the West. p. 360.
  2. ಆರ್‌ಡಿ‌ ಬರ್ಮನ್‌ - ಪ್ರೊಫೈಲ್ Upperstall.com .
  3. ಆರ್‌ಡಿ ಬರ್ಮನ್, ಹೂ ಹ್ಯಾಡ್ ಬೀನ್ ದಿಲ್ಶಾದ್ ಖಾನ್ಸ್ ಕ್ಲಾಸ್‌ಮೇಟ್ ಇನ್ ಸೇಂಟ್ ಕ್ಸೇವಿಯರ್ ಸ್ಕೂಲ್, ಕೊಲ್ಕತ್ತಾ. Archived 2012-07-11 at Archive.is entertainment.oneindia.in, ಅಕ್ಟೋಬರ್ 12 2007.
  4. "ದಾದಾ ಫೆಲ್ಟ್ ಗುರು ದತ್‌ ವಾಸ್ ಸ್ಪೊಯ್ಲಿಂಗ್ ಮಿ" - ಆರ್‌ಡಿ ಬರ್ಮನ್ www.bollywoodhungama.com. ಜನವರಿ 24 2008.
  5. ದ ರೇರ್ ಪಂಚಮ್ Rediff.com ,ಜೂನ್‌ 27 2002.
  6. ಆರ್‌ಡಿ ಬರ್ಮನ್‌ - ಮೈ ಗಾಡ್, ದ್ಯಾಟ್ಸ್ ಮೈ ಟ್ಯೂನ್
  7. ಸ್ಕ್ರೀನ್ ದ ಬಿಜಿನೆಸ್ ಆಫ್ ಎಂಟರ್‌ಟೇನ್ಮೆಂಟ್-ಫಿಲ್ಮ್ಸ್-ನೋಸ್ಟೇಲ್ಗಿಯಾ
  8. "1st ಫಿಲ್ಮ್‌ಫೇರ್ ಅವಾರ್ಡ್ಸ್ 1953" (PDF). Archived from the original (PDF) on 2009-06-12. Retrieved 2011-01-12.
  9. ೯.೦ ೯.೧ ಸ್ಕ್ರೀನ್ ದ ಬಿಜಿನೆಸ್ ಆಫ್ ಎಂಟರ್‌ಟೇನ್ಮೆಂಟ್-ಫಿಲ್ಮ್ಸ್-ಟ್ರಿಬ್ಯೂಟ್
  10. ದಿಲ್ ಪಡೊಸಿ ಹೆ , ರಿಲೀಜ್
  11. ಪಲ್ಸ್‌ಲೇಟಿಂಗ್ ಪಂಚಮ್ Archived 2011-06-06 ವೇಬ್ಯಾಕ್ ಮೆಷಿನ್ ನಲ್ಲಿ. ದ ಹಿಂದೂ ,ಜೂನ್‌ 27 2007.
  12. ಪಂಚಮ್ ಅನ್‌ಮಿಕ್ಸ್ಡ್ : ಎ ಸೆಲ್ಯೂಟ್ ಟು ದ ಬಾಸ್ - ಆರ್‌ಡಿ ಬರ್ಮನ್ Archived 2010-04-15 ವೇಬ್ಯಾಕ್ ಮೆಷಿನ್ ನಲ್ಲಿ. passionforcinema.com.
  13. "ಎಸ್.ಡಿ. ಬರ್ಮನ್ಸ್ ವೈಫ್ ಮೀರಾ ಡೆಡ್ - ಮ್ಯೂಸಿಕ್ ಇಂಡಿಯಾ ಆನ್‌ಲೈನ್". Archived from the original on 2009-08-15. Retrieved 2011-01-12.
  14. "chronicles of plagiarism in Indian film music R D Burman [Hindi]".
  15. "ಆರ್ಕೈವ್ ನಕಲು". Archived from the original on 2010-01-17. Retrieved 2011-01-12.

ಬಾಹ್ಯ ಕೊಂಡಿಗಳು[ಬದಲಾಯಿಸಿ]