ಆರ್ಯ (ಪದ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇದೇ ಹೆಸರಿನ ಊಹಿತ ಪುರಾತನ ಜನಾಂಗದ ಬಗ್ಗೆ ಲೇಖನಕ್ಕೆ ಆರ್ಯರು ಪುಟ ನೋಡಿ (ಆಂಗ್ಲ: Aryan).

ಆರ್ಯ ಸಂಸ್ಕೃತ ಮತ್ತು ಹಳೆಯ ಪರ್ಶಿಯನ್ ಭಾಷೆಗಳಲ್ಲಿ "ಸಾತ್ವಿಕ" ಅಥವಾ "ಹಿರಿಯ" ಎಂಬ ಅರ್ಥವನ್ನು ನೀಡುವ ಪದ. ಹಿಂದಿನ ವರ್ಣ ಪದ್ಧತಿಯಲ್ಲಿ ಈ ಪದವು ಬ್ರಾಹ್ಮಣ, ಕ್ಷತ್ರಿಯ ಅಥವಾ ವೈಶ್ಯ ವರ್ಣಗಳಿಗೆ ಸೇರಿದವ ಎಂಬುದನ್ನು ಸೂಚಿಸುತ್ತಿತ್ತು. ಅಮರಕೋಶದ ಪ್ರಕಾರ "ಮಹಾಕುಲ ಕುಲಿನಾರ್ಯ ಸಭ್ಯ ಸಜ್ಜನ ಸದಾವಃ" ಅಂದರೆ "ಆರ್ಯನು ಉತ್ತಮ ಕುಲಕ್ಕೆ ಸೇರುವ, ಸಭ್ಯ ವರ್ತನೆ ಮತ್ತು ನೈತಿಕತೆ ಹೊಂದಿರುವ ಮನುಜ" ಎಂದು ಬಣ್ಣಿಸುತ್ತದೆ.

"https://kn.wikipedia.org/w/index.php?title=ಆರ್ಯ_(ಪದ)&oldid=715119" ಇಂದ ಪಡೆಯಲ್ಪಟ್ಟಿದೆ