ಆರಿಸ್ಟಿಪಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರಿಸ್ಟಿಪಸ್
ಜನನc. 435 BCE
ಸಿರೀನ್
ಮರಣc. 356 BCE
ಸಿರೀನ್e
ಕಾಲಮಾನಪ್ರಾಚೀನ ತತ್ವಜ್ಞಾನ
ಪ್ರದೇಶಪಾಶ್ವಾತ್ಯ ತತ್ವಜ್ಞಾನ
ಪರಂಪರೆಸಿರನೇಯಿಕ್ ದರ್ಶನ
ಮುಖ್ಯ  ಹವ್ಯಾಸಗಳುHedonism
ಪ್ರಭಾವಕ್ಕೋಳಗಾಗು

ಆರಿಸ್ಟಿಪಸ್ .ಶ.ಪು. ೪೩೦-೩೦೦. ಸಿರೀನಿನ ಪ್ರಾಚೀನ ಗ್ರೀಕ್ ದಾರ್ಶನಿಕ. ಆದ್ದರಿಂದಲೇ ಇವನ ದರ್ಶನಕ್ಕೆ ಸಿರಿನೇಯಿಕ್ ದರ್ಶನ ಎಂದು ಹೆಸರಾಯಿತು. ಸಾಕ್ರಟೀಸನ ಶಿಷ್ಯ. ಸಿಸಿಲಿಯ ದೊರೆ ಡಯೋನಿಸಿಯಸ್ನ ಆಸ್ಥಾನದಲ್ಲಿ ಸ್ವಲ್ಪಕಾಲ ಇದ್ದು, ತನ್ನ ವೃದ್ಧಾಪ್ಯದಲ್ಲಿ ಸಿರೀನಿಗೆ ಹಿಂದಿರುಗಿದ. ಸಾಕ್ರಟೀಸನ ಶಿಷ್ಯರಲ್ಲಿ ವಿದ್ಯಾದಾನಮಾಡಿ ಸಂಭಾವನೆ ತೆಗೆದುಕೊಂಡವರಲ್ಲಿ ಇವನೇ ಮೊದಲನೆಯವ. ಸಾಕ್ರಟೀಸನ ಸಂತುಷ್ಟಿವಾದವನ್ನು ವಿಷಯಸುಖವಾದವನ್ನಾಗಿ ಪರಿವರ್ತಿಸಿದ. ಪ್ರಾಪಂಚಿಕ ಸುಖವನ್ನು ಗಳಿಸುವುದೇ ಜೀವನದ ಗುರಿ. ಕ್ಷಣಿಕವಾದರೂ ಸುಖವೇ ನಮ್ಮ ವ್ಯವಹಾರಗಳೆಲ್ಲದರ ಉದ್ದೇಶ. ಇಷ್ಟಪ್ರಾಪ್ತಿ, ಅನಿಷ್ಟ ನಿವೃತ್ತಿ-ಇವೇ ಜೀವನವೆಲ್ಲದರ ವ್ಯಾಪಕಧರ್ಮ. ನಿಜವಾದ ಜ್ಞಾನವೆಲ್ಲ ಇಂದ್ರಿಯಜನ್ಯ. ಸತ್ಯವೆಂಬುದೆಲ್ಲ ವೈಯಕ್ತಿಕ, ನಿರಪೇಕ್ಷ. ಸತ್ಯ ಅಸಾಧ್ಯ- ಇದು ಅವನ ತತ್ತ್ವ. ಪ್ಲೇಟೊ ಮತ್ತು ಸೆನಫನ್ ಇವನನ್ನು ಖಂಡಿಸಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]