ಅಲ್ಲಮಪ್ರಭು
ವಿಕಿಪೀಡಿಯ ಇಂದ
| ಈ ಲೇಖನವನ್ನು ಅಲ್ಲಮ ಪ್ರಭು ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ |
ಅಲ್ಲಮ ಪ್ರಭುಗಳು, ನಾಡು ಕಂಡ ಅಸಾಮಾನ್ಯ ಜ್ಞಾನಿ, ಯೋಗಿ, ಸಾಧಕ ಮತ್ತು ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ವಚನ ಅಂಕಿತ ನಾಮ ಗುಹೇಶ್ವರಾ ಎಂದಾಗಿದೆ.
[ಬದಲಾಯಿಸಿ] ವಚನಗಳು
೧)" ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ
ಗುಹೇಶ್ವರಾ!
ನಿಮಗಾಗಿ ಸತ್ತವರನಾರನೂ ಕಾಣೆ"
ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನೆಡೆದ ರಾಮ-ರಾವಣರ ಯುದ್ಧ, ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಎತ್ತಿ ತೋರಿಸಿದ್ದಾರೆ.