ಅಲಿ ಲಾರ್ಟರ್‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಲಿ ಲಾರ್ಟರ್‌
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Alison Elizabeth Larter
(1976-02-28) ಫೆಬ್ರುವರಿ ೨೮, ೧೯೭೬(ವಯಸ್ಸು ೩೯)
Cherry Hill, New Jersey, U.S.
ಬೇರೆ ಹೆಸರುಗಳು Allegra Coleman[೧]
ವೃತ್ತಿ Actress
ವರ್ಷಗಳು ಸಕ್ರಿಯ 1997–present
ಪತಿ/ಪತ್ನಿ Hayes MacArthur (2009–present)


ಅಲಿಸನ್‌ ಎಲಿಝಬೆತ್‌ "ಅಲಿ" ಲಾರ್ಟರ್‌ (1976ರ ಫೆಬ್ರವರಿ 28ರಂದು ಜನನ) ಒಬ್ಬ [೧] ಅಮೆರಿಕನ್‌ ನಟಿ ಹಾಗೂ ಮಾಜಿ ಫ್ಯಾಷನ್ ರೂಪದರ್ಶಿ. 1990ರ ದಶಕದ ಕಾಲಾವಧಿಯಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಅತಿಥಿನಟಿಯಾದ ನಂತರ, ತಮ್ಮ ಬೆಳ್ಳಿತೆರೆ ನಟನಾವೃತ್ತಿಯನ್ನು ಆರಂಭಿಸಿದರು. 2006ರಿಂದ, ಎನ್‌ಬಿಸಿ ವಾಹಿನಿಯಲ್ಲಿ ಪ್ರಸಾರಗೊಂಡ ವಿಜ್ಞಾನ ಕಾಲ್ಪನಿಕ ಕಥೆ ಹೀರೋಸ್‌ ನಲ್ಲಿ ಅಲಿ ಲಾರ್ಟರ್‌ ನಿಕಿ ಸ್ಯಾಂಡರ್ಸ್ ಹಾಗೂ ದೀರ್ಘಕಾಲದಿಂದ ಅಗಲಿದ ಆಕೆಯ ಅವಳಿ ಸಹೋದರಿ ಟ್ರೇಸಿ ಸ್ಟ್ರಾಸ್‌ ಪಾತ್ರಗಳನ್ನು ನಿರ್ವಹಿಸಿದರು. [೨][೩]

ಅಲಿ ಲಾರ್ಟರ್‌ ಒಬ್ಬ ರೂಪದರ್ಶಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಆದರೆ, ನಂತರ ಅವರು ನಟಿಯಾಗಿ ರೂಪುಗೊಂಡರು. 1999ರಲ್ಲಿ ಬಿಡುಗಡೆಯಾದ ವಾರ್ಸಿಟಿ ಬ್ಲೂಸ್ ‌ನಲ್ಲಿನ ಅವರು ನಿಭಾಯಿಸಿದ ಪಾತ್ರವು ಅಲಿ ಲಾರ್ಟರ್‌ಗೆ ಮಹತ್ವದ ತಿರುವು ನೀಡಿತು. ಇದಾದ ನಂತರ, ಹಾರರ್(ಭಯಹುಟ್ಟಿಸುವ) ಚಲನಚಿತ್ರ 'ಹೌಸ್‌ ಆನ್‌ ಹಾಂಟೆಡ್‌ ಹಿಲ್ ‌' (1999), ಫೈನಲ್‌ ಡೆಸ್ಟಿನೇಷನ್ '‌ (2000) ಹಾಗೂ ಲೀಗಲ್ಲಿ ಬ್ಲೋಂಡ್ ‌' (2001)ಗಳಲ್ಲಿ ಅಲಿ ಲಾರ್ಟರ್‌ ನಟಿಸಿದರು. ಅಂದಿನಿಂದಲೂ, ಅಲಿ ಲಾರ್ಟರ್‌ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಫೈನಲ್ ಡೆಸ್ಟಿನೇಷನ್‌ 2 (2003) ತನ್ನ ಮುಂಚಿನ ಪಾತ್ರದ ಪುನರ್ನಿರ್ವಹಣೆ, ಹಿಂದಿ (ಬಾಲಿವುಡ್‌) ಚಲನಚಿತ್ರ ಮ್ಯಾರಿಗೋಲ್ಡ್‌ (2007) ನಲ್ಲಿ ಚಿತ್ರದ ಹೆಸರಿನ ಪಾತ್ರ ಮತ್ತು ರೆಸಿಡೆಂಟ್ ಇವಿಲ್‌ ಫ್ರಾಂಚೈಸ್‌ನಲ್ಲಿ ಕ್ಲೇರ್‌ ರೆಡ್ಫೀಲ್ಡ್‌ ಎಂಬ ವೀಡಿಯೊ ಆಟದ ಪಾತ್ರವೊಂದನ್ನು ನಿರ್ವಹಿಸಿದರು. ಇನ್ನೂ ಇತ್ತೀಚೆಗೆ, 2009ರಲ್ಲಿ ಬಿಡುಗಡೆಯಾದ ಆಬ್ಸೆಸ್ಡ್ ‌ ಎಂಬ ರೋಮಾಂಚನಕಾರಿ ಚಲನಚಿತ್ರದಲ್ಲಿ ಅಲಿ ಲಾರ್ಟರ್‌ ಕಾಣಿಸಿಕೊಂಡರು.

ಲಾರ್ಟರ್ ಅವರನ್ನು "ಅತೀ ಲೈಂಗಿಕ ಆಕರ್ಷಣೆಯ ಜೀವಂತ ಮಹಿಳೆಯರ" ಪಟ್ಟಿಗಳಲ್ಲಿ ಹೆಸರಿಸಲಾಗಿದೆ. [೪] ಮೂರು ವರ್ಷದ ಕಾಲದಿಂದಲೂ ತಮ್ಮ ಪ್ರಿಯಕರರಾಗಿದ್ದ ಹೇಯ್ಸ್‌ ಮೆಕಾರ್ಥರ್‌ರನ್ನು 2009ರ ಆಗಸ್ಟ್‌ 1ರಂದು ಅಲಿ ಲಾರ್ಟರ್‌ ಮೇಯ್ನ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು. [೫]


ಆರಂಭಿಕ ಜೀವನ ಮತ್ತು ರೂಪದರ್ಶಿ ವೃತ್ತಿ[ಬದಲಾಯಿಸಿ]

ಅಲಿ ಲಾರ್ಟರ್‌ ನ್ಯೂಜರ್ಸಿಯ ಚೆರಿ ಹಿಲ್‌ನಲ್ಲಿ ಜನಿಸಿದರು. ಕರ್ಸ್ಟೆನ್ ಎಂಬ ಹೆಸರಿನ ಅವರ ಅಕ್ಕ ಅಧ್ಯಾಪಕಿಯಾಗಿದ್ದಾರೆ. ಲಾರಿ ಚಾಲಕ ಡ್ಯಾನ್ಫರ್ತ್‌ ಲಾರ್ಟರ್‌ ಹಾಗೂ ಗೃಹಿಣಿ ಮಾರ್ಗರೆಟ್‌ ದಂಪತಿಯ ಎರಡನೆಯ ಪುತ್ರಿ ಅಲಿ ಲಾರ್ಟರ್‌. [೬][೭] ಕ್ಯಾರುಸಿ ಮಾಧ್ಯಮಿಕ ಶಾಲೆ ಹಾಗೂ ಚರಿ ಹಿಲ್‌ ವೆಸ್ಟ್‌ ಪ್ರೌಢಶಾಲೆಯಲ್ಲಿ ಶಾಲಾ ವ್ಯಾಸಂಗ ಮಾಡಿದರು. ತಮ್ಮ 14ನೆಯ ವಯಸ್ಸಿನಲ್ಲಿ ರೂಪದರ್ಶಿಗಳ ಅನ್ವೇಷಕನೊಬ್ಬ ಅಲಿ ಲಾರ್ಟರ್‌ನ್ನು ರಸ್ತೆಯಲ್ಲಿ ಪತ್ತೆ ಮಾಡುವುದರೊಂದಿಗೆ ಲಾರ್ಟರ್ ರೂಪದರ್ಶಿ ವೃತ್ತಿಯನ್ನು ಆರಂಭಿಸಿದರು. ಮೊದಲಿಗೆ ಫಿಲ್ಲೀಸ್‌ ಜಾಹೀರಾತಿನಲ್ಲಿ ನಟಿಸಲು ಅಲಿ ಲಾರ್ಟರ್‌ಗೆ ತಿಳಿಸಲಾಯಿತು. ನಂತರ, ನ್ಯೂಯಾರ್ಕ್‌ನ ಪ್ರತಿಷ್ಠಿತ ಫೋರ್ಡ್‌ ಮಾಡೆಲಿಂಗ್‌ ಏಜೆನ್ಸಿಯೊಂದಿಗೆ ರೂಪದರ್ಶಿ ವೃತ್ತಿಯ ಕರಾರಿಗೆ ಸಹಿ ಹಾಕಿದರು. ನಂತರ, ಜಪಾನ್‌ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ರೂಪದರ್ಶಿಯಾಗಿ ಕಾರ್ಯನಿರ್ವಹಿಸಲು ಅಲಿ ಲಾರ್ಟರ್‌ ತಮ್ಮ ಉನ್ನತ ವ್ಯಾಸಂಗವನ್ನು ಅರ್ಧಕ್ಕೆ ತ್ಯಜಿಸಿದರು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಅಲಿ ಲಾರ್ಟರ್‌ ತಾತ್ಕಾಲಿಕವಾಗಿ ಜಪಾನ್‌ನಲ್ಲಿ ನೆಲೆಸಿದರು. [೮] ಆನಂತರ, 1995ರಲ್ಲಿ ಕ್ಯಾಲಿಫೊರ್ನಿಯಾದ ಲಾಸ್‌ ಏಂಜಲಿಸ್‌ಗೆ ಸ್ಥಳಾಂತರವಾದ ತಮ್ಮ ಗೆಳೆಯನೊಂದಿಗೆ ಅಲಿ ಲಾರ್ಟರ್‌ ಜೊತೆಗೂಡಿದರು.

ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ(1993–2001)[ಬದಲಾಯಿಸಿ]

ಇಟಲಿ ದೇಶದಲ್ಲಿ ಅಲಿ ಲಾರ್ಟರ್‌ ರೂಪದರ್ಶಿಯಾಗಿದ್ದಾಗ, ರೂಪದರ್ಶಿ ಮತ್ತು ನಟಿಯಾಗುವ ಆಕಾಂಕ್ಷೆ ಹೊಂದಿದ್ದ ಆಮಿ ಸ್ಮಾರ್ಟ್‌ರನ್ನು ಭೇಟಿಯಾದರು. ಅಲಿ ಲಾರ್ಟರ್‌ ಪ್ರಕಾರ, ಇವರಿಬ್ಬರೂ 'ಬಹಳ ಬೇಗ ಸ್ನೇಹಿತೆಯರಾದರು'. [೯] ನಂತರ, ರೂಪದರ್ಶಿಯ ಕಸುಬಿನ ನಿಮಿತ್ತ ಅಲಿ ಲಾರ್ಟರ್‌ L.A.‌ಗೆ ಸ್ಥಳಾಂತರಗೊಂಡರು. ಅಲ್ಲಿದ್ದಾಗ ಅಲಿ ಲಾರ್ಟರ್‌ ಆಮಿ ಸ್ಮಾರ್ಟ್‌ರೊಂದಿಗೆ ನಟನಾ ತರಗತಿಗಳಿಗೆ ಸೇರಲು ನಿರ್ಧರಿಸಿದರು. [೧೦]‌ ಇವರಿಬ್ಬರೂ ನಂತರ ವಸತಿನಿಲಯವೊಂದಕ್ಕೆ ಸ್ಥಳಾಂತರಗೊಂಡರು.

1994ರ ನವೆಂಬರ್‌ ತಿಂಗಳಲ್ಲಿ, ಅಲಿ ಲಾರ್ಟರ್‌ ಎಸ್ಕ್ವಯರ್‌ ಪತ್ರಿಕೆಯಲ್ಲಿ ನಕಲೀ ರೂಪದರ್ಶಿ ಅಲೆಗ್ರಾ ಕೊಲ್ಮನ್‌ ಆಗಿ ಕಾಣಿಸಿಕೊಂಡರು. ಈ ಪತ್ರಿಕೆಯಲ್ಲಿ, ಡೇವಿಡ್‌ ಸ್ವಿಮ್ಮರ್‌ ಒಂದಿಗಿನ ಈ ಕಾಲ್ಪನಿಕ ರೂಪದರ್ಶಿಯ ಸಂಬಂಧ, ಈಕೆಯ ಜತೆ ವಿಹಾರ ನಡೆಸಲೆಂದು ಕ್ವೆಂಟಿನ್‌ ಟರಾಂಟಿನೊ ಹೇಗೆ ಮಿರಾ ಸೊರ್ವಿನೊರಿಂದ ಬೇರೆಯಾದರು; ಹಾಗೂ, ಅವರನ್ನು ನಟಿಯಾಗಿಸಲು ವುಡಿ ಅಲೆನ್‌ ಇಡೀ ಚಲನಚಿತ್ರದ ಕೂಲಂಕಷ ಪರೀಕ್ಷೆ ನಡೆಸಿದ ಬಗ್ಗೆ ಪ್ರಕಟಿಸಲಾಗಿತ್ತು. ಈ ಪತ್ರಿಕೆ ಪ್ರಕಟವಾದಾಗ, ಅಸ್ತಿತ್ವದಲ್ಲೇ ಇರದ ಕೊಲ್ಮನ್‌ ಕುರಿತು ಎಸ್ಕ್ವಯರ್‌ಗೆ ಹಲವಾರು ದೂರವಾಣಿ ಕರೆಗಳು ಬಂದವು. ನಂತರ ಇದು ಸುಳ್ಳೆಂದು ತಿಳಿದ ಮೇಲೂ, ಹಲವು ಪ್ರತಿಭೆಗಳನ್ನು ಬೆಳೆಸುವ ನಿಯೋಗಗಳು ಆಕೆಯನ್ನು ಪ್ರತಿನಿಧಿಸಲು ಬಯಸಿದವು. [೧೧][೧೨]

1997ರಲ್ಲಿ ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ, ಅಲಿ ಲಾರ್ಟರ್ ತಮ್ಮ ಮೊದಲ ವೃತ್ತಿಪರ ನಟನೆ ಆರಂಭಿಸಿದರು. ಬ್ರೂಕ್‌ ಷೀಲ್ಡ್ಸ್‌ರ ಕಿರುತೆರೆ ಸರಣಿ ಸಡನ್ಲಿ ಸೂಸಾನ್ ನ ಒಂದು ಸಂಚಿಕೆ ಹಾಗೂ ಮೊಟಕುಗೊಳಿಸಲಾದ ಕಿರುತೆರೆ ಸರಣಿ ಷಿಕಾಗೊ ಸನ್ಸ್ ‌ನಲ್ಲಿ ಸಹ ಕಾಣಿಸಿಕೊಂಡರು. ಈ ಪಾತ್ರಗಳ ನಂತರ ಡಾಸನ್ಸ್‌ ಕ್ರೀಕ್‌ , ಷಿಕಾಗೋ ಹೋಪ್ ‌ ಮತ್ತು ಜಸ್ಟ್‌ ಷೂಟ್‌ ಮಿ! ಸರಣಿಗಳಲ್ಲಿ ಅಲಿ ಲಾರ್ಟರ್‌ ಕಾಣಿಸಿಕೊಂಡರು.

1999ರಲ್ಲಿ, ವಾರ್ಸಿಟಿ ಬ್ಲೂಸ್‌ ಎಂಬ ಚಲನಚಿತ್ರದೊಂದಿಗೆ ಅಲಿ ಲಾರ್ಟರ್‌ ತಮ್ಮ ಚಲನಚಿತ್ರ ವೃತ್ತಿಯನ್ನು ಆರಂಭಿಸಿದರು. ಇದರಲ್ಲಿ ಅವರು ಡಾಸನ್ಸ್‌‌ ಕ್ರೀಕ್ ‌ ನಟ ವಾನ್‌ ಡರ್ ಬೀಕ್‌ ಮತ್ತು ನಿಕಟ ಸ್ನೇಹಿತೆ ಆಮಿ ಸ್ಮಾರ್ಟ್‌ರೊಂದಿಗೆ ಪುನರ್ಮಿಲನಕ್ಕೆ ದಾರಿ ಕಲ್ಪಿಸಿತು. ಈ ಚಲನಚಿತ್ರದಲ್ಲಿ ಅಲಿ ಲಾರ್ಟರ್‌ ಪ್ರಮುಖ ಪಾತ್ರವೊಂದರ ಪ್ರಿಯತಮೆ ಡಾರ್ಸಿ ಸಿಯರ್ಸ್‌ ಪಾತ್ರ ನಿರ್ವಹಿಸಿದರು. 15 ದಶಲಕ್ಷ ಡಾಲರ್‌ ಮೊತ್ತ ಬಜೆಟ್‌ನಲ್ಲಿ ನಿರ್ಮಿಸಲಾದ ವಾರ್ಸಿಟಿ ಬ್ಲೂಸ್ ‌ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 53 ದಶಲಕ್ಷ ಡಾಲರ್‌ ಗಳಿಸಿತು. [೧೩] ಅದೇ ವರ್ಷ, ಹದಿಹರೆಯದ ಹಾಸ್ಯಪ್ರಧಾನ ಚಲನಚಿತ್ರಗಳಾದ ಗಿವಿಂಗ್‌ ಇಟ್‌ ಅಪ್ ‌ ಮತ್ತು ಡ್ರೈವ್ ಮಿ ಕ್ರೇಜಿ ಯಲ್ಲಿ ಅಲಿ ಲಾರ್ಟರ್‌ ನಟಿಸಿದರು. ಭಯಾನಕ ಕಥೆಯುಳ್ಳ ರೀಮೇಕ್‌(ಪುನರ್ನಿರ್ಮಿತ) ಚಲನಚಿತ್ರ ಹೌಸ್‌ ಆನ್‌ ಹಾಂಟೆಡ್‌ ಹಿಲ್ ‌ನಲ್ಲಿ ಕೂಡ ಅಲಿ ಲಾರ್ಟರ್‌ ನಟಿಸಿದರು. ಸುಮಾರು 20 ದಶಲಕ್ಷ ಡಾಲರ್‌ ಮೊತ್ತ ವೆಚ್ಚದಲ್ಲಿ ನಿರ್ಮಿಸಲಾದ ಈ ಚಲನಚಿತ್ರವು ವಿಮರ್ಶಕರಿಂದ ಟೀಕೆಗೊಳಗಾದರೂ, [೧೪] ಆರಂಭದ ವಾರಾಂತ್ಯದಲ್ಲಿ 15 ದಶಲಕ್ಷ ಡಾಲರ್‌ ಗಳಿಸಿ, ಕ್ರಮೇಣ 40 ದಶಲಕ್ಷ ಡಾಲರ್‌ ಗಳಿಸಿತು. [೧೫]

ಕಾಮಿಕ್‌-ಕಾನ್‌ 2006 ಸಮಾರಂಭದಲ್ಲಿ ಹೀರೋಸ್‌ ಚಲನಚಿತ್ರವನ್ನು ಉತ್ತೇಜಿಸುತ್ತಿರುವ ಅಲಿ ಲಾರ್ಟರ್‌.

2000ದಲ್ಲಿ ಬಿಡುಗಡೆಯಾದ ಹದಿಹರೆಯದ ಭಯಾನಕ ಕಥಾವಸ್ತುವಿನ ಚಲನಚಿತ್ರ ಫೈನಲ್‌ ಡೆಸ್ಟಿನೇಷನ್ ‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದನ್ನು (ಕ್ಲಿಯರ್‌ ರಿವರ್ಸ್‌) ಅಲಿ ಲಾರ್ಟರ್‌ ನಿರ್ವಹಿಸಿದರು. ಈ ಚಲನಚಿತ್ರದಲ್ಲಿ ಡಿವೊನ್‌ ಸವಾ ಮತ್ತು ಕೆರ್‌ ಸ್ಮಿತ್‌ ಸಹ ನಟಿಸಿದರು. ಚಲನಚಿತ್ರದ ಪೀಠಿಕೆಯಲ್ಲಿ ವಿಮಾನ ಪತನವಾಗಿ ಬದುಕುಳಿದ ಹಲವು ಹದಿಹರೆಯದವರಿರುತ್ತಾರೆ, ಆದರೆ ಅವರನ್ನು ಒಬ್ಬೊಬ್ಬರನ್ನಾಗಿ ಸಾವು ಬಲಿತೆಗೆದುಕೊಳ್ಳುವುದನ್ನು ಕಾಣುತ್ತಾರೆ. ಫೈನಲ್‌ ಡೆಸ್ಟಿನೇಷನ್ ‌ ಚಲನಚಿತ್ರಮಂದಿರಗಳಲ್ಲಿ ಅಂತಿಮ ಪ್ರದರ್ಶನ ಕೊನೆಗೊಂಡಾಗ 112 ದಶಲಕ್ಷ ಡಾಲರ್‌ ಗಳಿಸಿತ್ತು. [೧೬] ತರುವಾಯ ವರ್ಷ 2001ರಲ್ಲಿ, ನಟಿ ರೀಸ್‌ ವಿದರ್ಸ್ಪೂನ್‌ರೊಂದಿಗೆ ಅಲಿ ಲಾರ್ಟರ್‌ ಲೀಗಲಿ ಬ್ಲೋಂಡ್ ‌ ಎಂಬ ಹಾಸ್ಯಪ್ರಧಾನ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ತನ್ನ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ವಿಚಾರಣೆ ಎದುರಿಸುತ್ತಿದ್ದ ಮಹಿಳೆ ಬ್ರೂಕ್‌ ಟೇಯ್ಲರ್‌ ವಿಂಡ್‌ಹ್ಯಾಮ್‌ ಪಾತ್ರ ನಿರ್ವಹಿಸಿದರು. [೧೭] ಈ ಚಲನಚಿತ್ರ ಭಾರೀ ಯಶಸ್ಸು ಗಳಿಸಿತು. ಆರಂಭಿಕ ವಾರಾಂತ್ಯದಲ್ಲಿ 20,377,426 ಡಾಲರ್‌ ಗಳಿಸಿ ಅಗ್ರಸ್ಥಾನದಲ್ಲಿತ್ತು. [೧೮] ವಿಶ್ವದಾದ್ಯಂತ 141,774,679 ಡಾಲರ್‌ ಗಳಿಕೆಯಲ್ಲಿ ಮುಕ್ತಾಯ ಕಂಡಿತು. [೧೯] ಕೊಲಿನ್‌ ಫ್ಯಾರೆಲ್‌ರೊಂದಿಗೆ ವೆಸ್ಟರ್ನ್ ಚಲನಚಿತ್ರ ಅಮೆರಿಕನ್‌ ಔಟ್ಲಾಸ್ ‌ನಲ್ಲಿ, ಹಾಗೂ ಕೆವಿನ್‌ ಸ್ಮಿತ್‌ ನಿರ್ದೇಶಿತ ಜೇಯ್‌ ಅಂಡ್‌ ಸೈಲೆಂಟ್‌ ಬಾಬ್‌ ಸ್ಟ್ರೈಕ್‌ ಬ್ಯಾಕ್‌ ಚಲನಚಿತ್ರದಲ್ಲಿ ಅಲಿ ಲಾರ್ಟರ್‌ ಕಾಣಿಸಿಕೊಂಡರು. ಅದೇ ವರ್ಷ, ಮ್ಯಾಕ್ಸಿಮ್ ‌ ಪತ್ರಿಕೆಯ ರಕ್ಷಾಪುಟದಲ್ಲಿ ಅಲಿ ಲಾರ್ಟರ್‌ ಕಾಣಿಸಿಕೊಂಡರು. ಅಲ್ಲದೆ, ನ್ಯೂಯಾರ್ಕ್‌ ನಗರದಲ್ಲಿ ನಡೆದ ರಂಗಭೂಮಿ ನಾಟಕ ದಿ ವ್ಯಾಜೈನಾ ಮೊಲೊಲೊಗ್ಸ್‌ ನಲ್ಲಿ ನಟಿಸಿದರು.

ಪ್ರಮುಖ ಬೆಳವಣಿಗೆ, 2002–2008[ಬದಲಾಯಿಸಿ]

2002ರ ವಸಂತಕಾಲದಲ್ಲಿ, ಅಲಿ ಲಾರ್ಟರ್‌ ಲಾಸ್‌ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡರು. ಒಂದು ನಗರದಿಂದ ಇನ್ನೊಂದಕ್ಕೆ ಸ್ಥಳಾಂತರವಾಗುವುದು ಬಹಳಷ್ಟು ಸಾಹಸವನ್ನೊಳಗೊಂಡಿತ್ತು. ಆದರೂ, ಅಲಿ ಲಾರ್ಟರ್‌ ಹೇಳಿದಂತೆ, ಇದು ಅವರ ವೃತ್ತಿಗೆ ಬಹಳ ನೆರವಾಯಿತು. [೧೦] ಅಲ್ಲಿ ಫೈನಲ್‌ ಡೆಸ್ಟಿನೇಷನ್ ‌ ಚಲನಚಿತ್ರದ ಉತ್ತರ ಭಾಗ ಫೈನಲ್‌ ಡೆಸ್ಟಿನೇಷನ್‌ 2 ರಲ್ಲಿ ಕ್ಲಿಯರ್‌ ರಿವರ್ಸ್‌ ಪಾತ್ರವನ್ನು ಪುನಃ ನಿರ್ವಹಿಸಿದರು. IGN‌ ವಾಹಿನಿಯೊಂದಿಗಿನ ಸಂದರ್ಶನವೊಂದರಲ್ಲಿ, ಅಲಿ ಲಾರ್ಟರ್‌ ಫ್ರಾಂಚೈಸ್‌ಗೆ ಮರಳುವುದರ ಕುರಿತು ವಿವರಣೆ ನೀಡಿದರು. 'ನ್ಯೂಲೈನ್‌ ನನಗೆ ವಾಪಸಾಗಲು ತಿಳಿಸಿದಾಗ, ಇದನ್ನು ಮಹತ್ತರವೆಂದು ನಾನು ಭಾವಿಸಿದೆ. ಅವರು ಚಿತ್ರಕಥೆಯನ್ನು ತೋರಿಸಿ, ಕೆಲವು ಮಾಹಿತಿಯನ್ನು ನನಗೆ ತೋರಿಸಿದರು. ಅದು ನಿಜಕ್ಕೂ ಅದ್ಭುತವಾಗಿತ್ತು.' [೨೦] ಈ ಚಲನಚಿತ್ರವು ಆರಂಭಿಕ ವಾರಾಂತ್ಯದಲ್ಲಿ 16,017,141 ಡಾಲರ್‌ ಗಳಿಸಿ ಎರಡನೆಯ ಸ್ಥಾನದಲ್ಲಿತ್ತು. [೨೧] ಈ ಚಲನಚಿತ್ರಕ್ಕೆ ಮಿಶ್ರಿತ ಪ್ರತಿಕ್ರಿಯೆ ದೊರೆಯಿತು. [೨೨] ಒಂದು ವರ್ಷದ ನಂತರ, ಅಲಿ ಲಾರ್ಟರ್‌ ಥ್ರೀ-ವೇ ಎಂಬ ರೋಮಾಂಚಕ ಚಲನಚಿತ್ರದ ಸಹ-ನಿರ್ಮಾಪಕಿ ಹಾಗೂ ನಟಿಯೂ ಆದರು. 2005ರಲ್ಲಿ, ಅಲಿ ಲಾರ್ಟರ್‌ ಸ್ವತಂತ್ರ ರಾಜಕೀಯ ರೋಮಾಂಚಕ ಕಥೆಯುಳ್ಳ ಚಲನಚಿತ್ರ ಕನ್ಫೆಸ್ ‌ನಲ್ಲಿ ನಟಿಸಿದರು. ನಂತರ, ಅವರು ಅಮಾಂಡಾ ಪೀಟ್‌ ಮತ್ತು ಆಷ್ಟನ್‌ ಕುಚರ್‌ ಒಂದಿಗೆ ಪ್ರಣಯಭರಿತ ಹಾಸ್ಯ ಚಲನಚಿತ್ರ ಎ ಲಾಟ್‌ ಲೈಕ್‌ ಲವ್‌ ನಲ್ಲಿ ನಟಿಸಿದರು.

2005ರಲ್ಲಿ ಅಲಿ ಲಾರ್ಟರ್‌ ಲಾಸ್‌ ಏಂಜಲೀಸ್‌ಗೆ ಮರಳಿದರು. [೮] 2006ರ ಸೆಪ್ಟೆಂಬರ್‌‌ನಿಂದ 2010ರ ಮಾರ್ಚ್‌ ತಿಂಗಳ ವರೆಗೂ, ಟಿಮ್‌ ಕ್ರಿಂಗ್‌ ನಿರ್ಮಾಣದ ಹೀರೋಸ್ ‌ ಎಂಬ ವೈಜ್ಞಾನಿಕ ಕಾಲ್ಪನಿಕ ಕಥೆಯ ನಾಟಕ ರೂಪೀ ಕಿರುತೆರೆ ಸರಣಿಯಲ್ಲಿ ಅಲಿ ಲಾರ್ಟರ್‌ ನಟಿಸಿದರು. ಇದರಲ್ಲಿ ಅವರು ನಿಕಿ ಸ್ಯಾಂಡರ್ಸ್‌ ಮತ್ತು ಟ್ರೇಸಿ ಸ್ಟ್ರಾಸ್‌ ಪಾತ್ರ ನಿರ್ವಹಿಸಿದರು. ಈ ಸರಣಿ ಎನ್‌ಬಿಸಿ ವಾಹಿನಿಯಲ್ಲಿ ಪ್ರಸಾರವಾಗಿ, ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನ [೨೩] ಗಳಿಸಿತು. ಇದರಲ್ಲಿ ಅಲಿ ಲಾರ್ಟರ್‌‌ ವಹಿಸಿದ ಆರಂಭಿಕ ಪಾತ್ರವು ನಿಕ್ಕಿ ಸ್ಯಾಂಡರ್ಸ್‌ ಲಾಸ್ ವೆಗಸ್‌ ಮೂಲದ ಒಬ್ಬ ಪತ್ನಿ, ತಾಯಿ ಹಾಗೂ ಮಾಜಿ ಅಂತರಜಾಲ ಬತ್ತಲೆ-ನರ್ತಕಿ. ಈಕೆ ಅತಿಮಾನುಷ ಶಕ್ತಿಯನ್ನು ಹಾಗೂ ಜೆಸ್ಸಿಕಾ ಎಂಬ ಹೆಸರಿನಲ್ಲಿ ಪರ್ಯಾಯ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಾಳೆ. 33ನೆಯ ಸ್ಯಾಟರ್ನ್‌ ಅವಾರ್ಡ್ಸ್‌ ಪ್ರಶಸ್ತಿಗಾಗಿ ಅಲಿ ಲಾರ್ಟರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮನಿರ್ದೇಶನ ಗಳಿಸಿದರು. [೨೪] ಮೂರನೆಯ ಋತುವಿನಲ್ಲಿ, ಅಲಿ ಲಾರ್ಟರ್‌ ಟ್ರೇಸಿ ಸ್ಟ್ರಾಸ್‌ ಎಂಬ ಹೊಸ ಪಾತ್ರದಲ್ಲಿ ಅಭಿನಯಿಸತೊಡಗಿದರು. ಟ್ರೇಸಿ ವಸ್ತುಗಳನ್ನು ಜಡಗೊಳಿಸುವ ಹಾಗೂ ತನ್ನ ಶರೀರವನ್ನು ನೀರಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುತ್ತಾಳೆ. [೨೫]

ಅಂತಿಮವಾಗಿ, ಅಲಿ ಲಾರ್ಟರ್‌ ಹೌಸ್‌ ಆನ್‌ ಹಾಂಟೆಡ್‌ ಹಿಲ್‌ ನಲ್ಲಿ ಉತ್ತರ ಭಾಗದಲ್ಲಿ ನಟಿಸಲು ಒಪ್ಪಲಿಲ್ಲ. 'ಈಗ ನಾನು ಮಾಡುತ್ತಿರುವ ಪಾತ್ರಗಳು ನನಗೆ ಸಂತಸ ತಂದಿವೆ. ಈ ತರಹದ ಪಾತ್ರಗಳು ಬಹಳ ಹಿಂದಿನದು' ಎಂದು ವಿವರಿಸಿದರು. [೨೬]

2007ರಲ್ಲಿ, ಬಾಲಿವುಡ್‌ (ಹಿಂದಿ ಭಾಷಾ) ಚಲನಚಿತ್ರ ಮ್ಯಾರಿಗೊಲ್ಡ್‌ ನಲ್ಲಿ ಅಲಿ ಲಾರ್ಟರ್‌ ಶೀರ್ಷಿಕೆ ಪಾತ್ರದಲ್ಲಿ ನಟಿಸಿದರು. ಸಲ್ಮಾನ್‌ ಖಾನ್‌ರೊಂದಿಗೆ ನಟಿಸಿದ ಈ ಚಲನಚಿತ್ರವು ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಯಿತು. [೨೭] ಬಿಬಿಸಿಯೊಂದಿಗಿನ ಸಂದರ್ಶನವೊಂದರಲ್ಲಿ ಮ್ಯಾರಿಗೋಲ್ಡ್‌ ಪಾತ್ರದ ಕುರಿತು ತಮ್ಮಲ್ಲಿ ಆಸಕ್ತಿ ಮೂಡಿಸಿದ್ದು ಹೇಗೆ ಹಾಗೂ ತಾವು ಬಾಲಿವುಡ್‌ ಚಲನಚಿತ್ರದಲ್ಲಿ ನಟಿಸಲು ಬಯಸಿದ್ದೇಕೆ ಎಂಬ ಬಗ್ಗೆ ವಿವರಣೆ ನೀಡಿದರು. (ನಿರ್ದೇಶಕ) ವಿಲಿಯಮ್‌ ಕ್ಯಾರೊಲ್‌ಚಲನಚಿತ್ರದ ಕಥಾವಸ್ತುವನ್ನು ನನಗೆ ನೀಡಿದಾಗ ನಾನು ಅವರ ಅತಿಥಿಗೃಹದಲ್ಲಿದ್ದೆ. ಅವರು ನಿಜವಾಗಿಯೂ ದೃಢ ಮಹಿಳಾ ಪಾತ್ರವನ್ನು ಬರೆದಿದ್ದರು. ನನಗೆ ನೃತ್ಯ ಮತ್ತು ಗಾಯನದಲ್ಲಿ ವೃತ್ತಿಪರ ತರಬೇತಿ ಇಲ್ಲದ ಕಾರಣ, ಈ ಅಂಜಿಕೆಗಳನ್ನು ಮೆಟ್ಟಿ ನಿಲ್ಲಲು ನನಗೆ ಸುವರ್ಣಾವಕಾಶ ಕಲ್ಪಿಸಿತು. ಜೊತೆಗೆ, ನಾನು ಒಂದೆರಡು ತಿಂಗಳುಗಳ ಕಾಲ ಇನ್ನೊಂದು ದೇಶದಲ್ಲಿ ವಾಸಿಸಲು ಅವಕಾಶ ನೀಡುತ್ತದೆ. ಹೀರೋಸ್‌ ಚಲನಚಿತ್ರವು ಅಷ್ಟು ದೊಡ್ಡ ವಿಜ್ಞಾನ-ಕಾಲ್ಪನಿಕ ಕಥೆಯ ಸರಣಿಯಾಗಿರುತ್ತದೆ ಎಂದು ನಾನು ಭಾವಿಸಿರಲಿಲ್ಲ; ಮ್ಯಾರಿಗೋಲ್ಡ್‌ ವಿಚಾರದಲ್ಲೂ ಹೀಗೇ ಆಯಿತು. ನಾನು ಈ ಪಾತ್ರದತ್ತ ಬಹಳಷ್ಟು ಗಮನ ಕೊಟ್ಟೆ, ಈ ಪಾತ್ರದ ಪಯಣ ಹಾಗೂ ಅನುಭವಗಳು ನನಗೆ ಇಷ್ಟವಾದವು. [೨೮] ಮ್ಯಾರಿಗೋಲ್ಡ್‌ ಪಾತ್ರ ನಿಭಾಯಿಸಲು ಅಲಿ ಲಾರ್ಟರ್‌‌ಗೆ ಏಳು ಅಂಕಿಗಳ ವೇತನ ನೀಡಲಾಯಿತು. [೨೯][೩೦]

2008ರಲ್ಲಿ ಹೀರೋಸ್‌ ಚಲನಚಿತ್ರದ ಮೂರನೆಯ ಋತುವಿನ ಪ್ರಥಮಪ್ರದರ್ಶನ ಸಮಾರಂಭಕ್ಕೆ ಹಾಜರಾಗುತ್ತಿರುವ ಅಲಿ ಲಾರ್ಟರ್‌.

ಇದೇ ವರ್ಷ ಭಯಾನಕ ಕಥಾವಸ್ತು ಚಲನಚಿತ್ರದಲ್ಲಿ Resident Evil: Extinction ಕ್ಲೇರ್‌ ರೆಡ್ಫೀಲ್ಡ್‌ ಪಾತ್ರದಲ್ಲಿ, ಮಿಲ್ಲಾ ಜೊವೊವಿಚ್‌ರೊಂದಿಗೆ ನಟಿಸಿದ್ದರು. ಈ ಚಲನಚಿತ್ರದ ಪಾತ್ರಕ್ಕಾಗಿ ಅಲಿ ತಮ್ಮ ಕೂದಲಿಗೆ ತಿಳಿಕೆಂಪು ಬಣ್ಣ ಲೇಪಿಸಿಕೊಂಡಿದ್ದಲ್ಲದೆ, ಮೆಕ್ಸಿಕೊ ದೇಶದ ಮೆಕ್ಸಿಕಾಲಿಯಲ್ಲಿ ಮೇನಿಂದ ಜುಲೈ ಕೊನೆವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. [೩೧] ತಮ್ಮ ಪಾತ್ರ ಕ್ಲೇರ್‌ ಬಗ್ಗೆ ವಿವರಿಸಿದ ಅಲಿ ಲಾರ್ಟರ್‌, 'ಅವಳು ಈ ಬೆಂಗಾವಲಿನ ಮುಖ್ಯಸ್ಥೆಯಾಗಿರುತ್ತಾಳೆ. ಅವಳು ಬಹಳಷ್ಟು ದೃಢ ಹಾಗು ಸಹನಾಶಕ್ತಿಯುಳ್ಳವಳಾಗಿರುತ್ತಾಳೆ. ಯಾರೋ ಒಬ್ಬರಿಗೆ ತಾಯಿ, ಅಥವಾ ಆಪ್ತಸ್ನೇಹಿತೆಯಾಗಿರಲಿ, ಈ ಬೆಂಗಾವಲಿನಲ್ಲಿ ಪ್ರತಿಯೊಬ್ಬರ ಜತೆಗೂ ಆದರ್ಶಪ್ರಾಯವಾಗಿ ಸೇವೆ ಸಲ್ಲಿಸುತ್ತಾಳೆ. [೩೧] ಈ ಚಲನಚಿತ್ರವನ್ನು ಉತ್ತೇಜಿಸಲು ಅಲಿ ಲಾರ್ಟರ್‌ 2007ರ ಕಾಮಿಕ್‌ ಕಾನ್‌ ಇಂಟರ್ನ್ಯಾಷನಲ್‌ ಸಮಾರಂಭಕ್ಕೂ ಹಾಜರಾದರು. ಈ ಸಮಾರಂಭದಲ್ಲಿ ಅವರು ಹಾಜರಾದದ್ದು ಎರಡನೆಯ ಬಾರಿ. ಇದು 2007 ಸೆಪ್ಟೆಂಬರ್‌ 21ರಂದು ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಶ್ವದಾದ್ಯಂತ ಈ ಚಲನಚಿತ್ರವು ನಿರ್ಮಾಣ ವೆಚ್ಚದ ಮೂರುಪಟ್ಟು ಅಧಿಕ ಹಣ (147,717,833 ಡಾಲರ್‌ಗಳು) ಗಳಿಸಿತು. [೩೨] ಅದೇ ವರ್ಷ, ಹೇಯ್ಸ್‌ ಮೆಕಾರ್ಥರ್‌ ಜೊತೆ ಹೊಮೊ ಇರೆಕ್ಟಸ್‌ ಎಂಬ ಹಾಸ್ಯ ಚಲನಚಿತ್ರದಲ್ಲಿ ನಟಿಸಿದರು. ಗಿಟಾರ್ ವಾದಕ ಹ್ಯಾಂಕ್‌ ಗಾರ್ಲೆಂಡ್‌ ಜೀವನಚರಿತ್ರೆ ಆಧಾರಿತ ಕ್ರೇಜಿ ಯಲ್ಲೂ ನಟಿಸಿದರು. ಈ ಚಲನಚಿತ್ರವನ್ನು 2008ರ ಚಲನಚಿತ್ರೋತ್ಸವದಲ್ಲಿ ಹಾಗೂ 2010ರಲ್ಲಿ ಡಿವಿಡಿ ಆವೃತ್ತಿಯಲ್ಲಿ ಬಿಡುಗಡೆಯಾಯಿತು. [೩೩]

ರೆಸಿಡೆಂಟ್‌ ಈವಿಲ್‌: ಎಕ್ಸ್‌ಟಿಂಕ್ಷನ್ ‌ಗಾಗಿ ಸಂದರ್ಶನವೊಂದರಲ್ಲಿ ಅಲಿ ಲಾರ್ಟರ್‌ ಚಲನಚಿತ್ರ ನಿರ್ಮಾಣದಲ್ಲಿ ತೊಡಗುವ ಬಯಕೆ ವ್ಯಕ್ತಪಡಿಸಿದರು. 'ನನ್ನ ವೃತ್ತಿಜೀವನ ಸಾಗಿದಂತೆ ನನಗೆ ಖಂಡಿತವಾಗಿ ಅನೇಕ ಕಲ್ಪನೆಗಳು ಮತ್ತು ವಿವಿಧ ಮಾರ್ಗಗಳಿವೆ' ಎಂದರು. [೩೧]

ಇತ್ತೀಚಿನ ಹಾಗೂ ಮುಂಬರುವ ಪಾತ್ರಗಳು, 2009-ಇಂದಿನವರೆಗೆ[ಬದಲಾಯಿಸಿ]

2009ರ ಏಪ್ರಿಲ್ ತಿಂಗಳಲ್ಲಿ ಅಲಿ ಲಾರ್ಟರ್‌ ಬೆಯೊನ್ಸ್‌ ನೋಲ್ಸ್‌ ಮತ್ತು ಇದ್ರಿಸ್‌ ಎಲ್ಬಾ ಎದುರು, ಸ್ಕ್ರೀನ್‌ ಜೆಮ್ಸ್‌-ನಿರ್ಮಾಣದ ಆಬ್ಸೆಸ್ಡ್ ‌ ಎಂಬ ರೋಮಾಂಚಕ ಕಥೆಯ ಚಲನಚಿತ್ರದಲ್ಲಿ ನಟಿಸಿದರು. [೩೪] ಈ ಚಲನಚಿತ್ರದಲ್ಲಿ ಕಚೇರಿ ಕಾರ್ಯನಿರ್ವಾಹಕ ( ಎಲ್ಬಾ) ಹಾಗೂ ನೋಲ್ಸ್‌ ಪಾತ್ರಗಳ ನಡುವಿನ ವಿವಾಹಕ್ಕೆ ಸಹೋದ್ಯೋಗಿಯ (ಅಲಿ ಲಾರ್ಟರ್‌ ಪಾತ್ರ)ಆಕ್ರಮಣಶೀಲ ಹಿತಾಸಕ್ತಿಗಳಿಂದ ಬೆದರಿಕೆ ಉಂಟಾಗುತ್ತದೆ. ಗ್ಲ್ಯಾಮ್‌ನೊಂದಿಗಿನ ಸಂದರ್ಶನವೊಂದರಲ್ಲಿ, ಈ ರೀತಿಯ ಅಪಾಯಕಾರಿ ಪ್ರಲೋಭನಕಾರಿಣಿಯ(ಮೋಹಿನಿ) ಪಾತ್ರ ವಹಿಸಲು ತಮಗೆ ಬಹಳ ಆಸಕ್ತಿಯಿತ್ತು ಎಂದು ಅಲಿ ಲಾರ್ಟರ್‌ ತಿಳಿಸಿದರು. ಸ್ವಲ್ಪಮಟ್ಟದ ಹುಚ್ಚುತನದ ಭಾವನೆಯಿಂದ ತುಂಬಿದ ಕರಾಳ ಮತ್ತು ಭೇದ್ಯ ಮಹಿಳೆಯರ ಪಾತ್ರದಲ್ಲಿ ನಟಿಸಲು ತಾವು ಇಷ್ಟಪಡುವುದಾಗಿ' ಅವರು ಹೇಳಿದರು.[೩೫] ಈ ಚಲನಚಿತ್ರದ ಕಥೆಯು ಫೇಟಲ್‌ ಅಟ್ರ್ಯಾಕ್ಷನ್‌ ಮತ್ತು ಹ್ಯಾಂಡ್‌ ದಟ್‌ ರಾಕ್ಸ್ ದಿ ಕ್ರೇಡ್ಲ್ ‌ನಂತೆ ಕಥಾಹಂದರ ಹೊಂದಿದ್ದರೂ, ಅಷ್ಟೇನೂ ಯಶಸ್ವಿಯಾಗಲಿಲ್ಲ. [೩೬] ಅದೇನೇ ಇದ್ದರೂ, ಆಬ್ಸೆಸ್ಡ್‌ ಚಲನಚಿತ್ರವು ಮೊದಲ ವಾರ ಬಾಕ್ಸ್‌ಆಫೀಸಿನಲ್ಲಿ 28,612,730 ಡಾಲರ್‌ ಸಂಪಾದಿಸಿ ಅಗ್ರಸ್ಥಾನ ಗಳಿಸಿತು [೩೭]; ಅಲಿ ಲಾರ್ಟರ್‌ ತಮ್ಮ ಮೂರನೆಯ ಟೀನ್‌ ಚಾಯ್ಸ್‌ ಪ್ರಶಸ್ತಿಗಾಗಿ ನಾಮನಿರ್ದೇಶನ ಹಾಗೂ ಬೆಯೊನ್ಸ್‌ನೊಂದಿಗೆ ಅತ್ಯುತ್ತಮ ಹೋರಾಟದ ಪ್ರದರ್ಶನಕ್ಕಾಗಿ ಎಂಟಿವಿ ಮೂವೀ ಪ್ರಶಸ್ತಿ ಗೆದ್ದರು. [೩೮]

3ಡಿ ಆವೃತ್ತಿಯಲ್ಲಿ ಚಿತ್ರಿಸಲಾದ Resident Evil: Afterlife ರಲ್ಲಿ ಅಲಿ ಲಾರ್ಟರ್‌ ಕ್ಲೇರ್‌ ರೆಡ್ಫೀಲ್ಡ್‌ ಪಾತ್ರವನ್ನು ಪುನಃ ನಿರ್ವಹಿಸಿದ್ದಾರೆ. ಈ ಚಲನಚಿತ್ರವು 2010ರ ಸೆಪ್ಟೆಂಬರ್‌ 10ರಂದು ಬಿಡುಗಡೆಯಾಗಲಿದೆ. ಇದರ ನಿರ್ದೇಶಕರು ಪಾಲ್ W.S. ಅಂಡರ್ಸನ್‌. [೩೯] ಈ ಚಲನಚಿತ್ರವನ್ನು ಉತ್ತೇಜಿಸಲು ಅವರು ವಂಡರ್‌ಕಾನ್‌ ಮತ್ತು ಕಾಮಿಕ್‌ ಕಾನ್ ಸಮಾರಂಭಗಳಿಗೆ ಹಾಜರಾದರು. ‌[೪೦][೪೧] JoBlo.comನೊಂದಿಗಿನ ಸಂದರ್ಶನದಲ್ಲಿ, ಅಲಿ ಲಾರ್ಟರ್‌ ತಮ್ಮ ಹೊಸ ಚಲನಚಿತ್ರದಲ್ಲಿನ ಪಾತ್ರ ಕುರಿತು ವಿವರಿಸಿದರು: 'ಜನರು ಅವಳ ಪಾತ್ರದಲ್ಲಿ ನನ್ನನ್ನು ಇಷ್ಟಪಟ್ಟಿರಬಹುದು.ನನ್ನನ್ನು ವಾಪಸ್‌ ಕರೆತಂದಿರುವುದು ನನಗೆ ಬಹಳ ಖುಷಿ ತಂದಿದೆ. ಮಿಲ್ಲಾ‌ ಜೊತೆ ನಟಿಸಲು ನಾನು ಇಷ್ಟಪಡುವೆ. ಅಲ್ಲದೇ ಈ ಚಲನಚಿತ್ರ ನಿರ್ದೇಶನಕ್ಕೆ ಪಾಲ್ ಮರಳಿರುವುರಿಂದ ಅತೀವ ಉತ್ಸುಕನಾಗಿದ್ದೇನೆ. ಈ ಪ್ರಪಂಚವನ್ನು ಸೃಷ್ಟಿ ಮಾಡಿದ ವ್ಯಕ್ತಿಯ ಜತೆ ಕೆಲಸಮಾಡುವುದು ಹಾಗೂ ಈ ದೃಷ್ಟಿಕೋನವು ಮುಂದಿನ ಕಂತಿನಲ್ಲಿ ಸೇರುವ ಬಗ್ಗೆ ನಾನು ಉತ್ಸುಕನಾಗಿರಲು ಕಾರಣ' [೪೨]

ಕಾಮಿಕ್‌ ಕಾನ್‌90] ಪ್ರಸಾರದ ಸಮಾರಂಭದಲ್ಲಿ ಮಿಲ್ಲಾ ಜೊವೊವಿಚ್‌ ಜೊತೆ ಕಾಣಿಸಿಕೊಂಡ ಅಲಿ ಲಾರ್ಟರ್

UFO ಕಥಾವಸ್ತುವನ್ನು ಬೆಳ್ಳಿತೆರೆಗೆ ಹೊಂದಿಸಿದ ಆವೃತ್ತಿಯಲ್ಲಿ ಅಲಿ ಲಾರ್ಟರ್‌ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಕರ್ನಲ್‌ ವಿರ್ಜಿನಿಯಾ ಲೇಕ್‌ ಪಾತ್ರಧಾರಿಯಾಗಿ ಜೊಷುವಾ ಜ್ಯಾಕ್ಸನ್‌ ಜೊತೆ ನಟಿಸಲಿದ್ದಾರೆ. [೪೩][೪೪]

ವಂಡರ್ಕಾನ್‌ನಲ್ಲಿದ್ದಾಗ, ಅಲಿ ಲಾರ್ಟರ್‌ ಹೀರೋಸ್‌'ನ ಐದನೆಯ ಋತುವಿನ ಬಗ್ಗೆ ಮಾತನಾಡಿದರು. 'ನಾವು ಪುನಃ ವಾಪಸಾಗುತ್ತೇವೆ ಅನಿಸುತ್ತೆ... ಹೇಳಬೇಕಾದ ಕಥೆಗಳು ಇನ್ನೂ ಇವೆಯೆಂದು ನಾನು ಭಾವಿಸುತ್ತೇನೆ.' [೪೫]

 2010ರ ಮೇ 14ರಂದು ಎನ್‌ಬಿಸಿ ಕಾರ್ಯಕ್ರಮದ ರದ್ಧತಿಯನ್ನು ಘೋಷಿಸಿತು.[೪೬][೪೭] ಆದರೂ ಇದರ ಕಥಾವಸ್ತುವಿನಲ್ಲಿ ತಲ್ಲಿನವಾಗಿರಲು ಒಂದು ಕಿರುಸರಣಿ ಅಥವಾ ಚಲನಚಿತ್ರದ ನಿರ್ಮಾಣವಾಗಲಿದೆ. [೪೮]' 

ಸಾರ್ವಜನಿಕ ಕಲ್ಪನೆ[ಬದಲಾಯಿಸಿ]

2002ರಲ್ಲಿ, ಸ್ಟಫ್‌ ನಿಯತಕಾಲಿಕೆಯ ವಿಶ್ವದ 102 ಅತಿ ಲೈಂಗಿಕಾರ್ಷಕ ಮಹಿಳೆಯರಲ್ಲಿ ಅಲಿ ಲಾರ್ಟರ್‌ 40ನೆಯ ಸ್ಥಾನದಲ್ಲಿದ್ದರು. 2007ರಲ್ಲಿ, FHM' ‌' ಪತ್ರಿಕೆಯ ವಿಶ್ವದ 100 ಅತೀ ಲೈಂಗಿಕಾಕಾರ್ಷಕ ಮಹಿಳೆಯರಲ್ಲಿ ಅಲಿ ಲಾರ್ಟರ್‌ 49ನೆಯ ಸ್ಥಾನದಲ್ಲಿದ್ದರು. [೪೯] 2007ರಲ್ಲಿ ಮ್ಯಾಕ್ಸಿಮ್‌ ಪತ್ರಿಕೆಯ 100 (ಹಾಟ್)ಮಾದಕ ಮಹಿಳೆಯರಲ್ಲಿ ಅಲಿ ಲಾರ್ಟರ್‌ ಆರನೆಯ ಸ್ಥಾನದಲ್ಲಿದ್ದರು. [೫೦] 2008ರಲ್ಲಿ ಅಲಿ ಲಾರ್ಟರ್‌ ಮೂರು ಪಟ್ಟಿಗಳಲ್ಲಿ ಸೇರಿದ್ದರು. AskMen.com ಅಂತರಜಾಲತಾಣದ ವಿಶ್ವದ 100 ಅತಿ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಅಲಿ ಲಾರ್ಟರ್‌ 92ನೆಯ ಸ್ಥಾನ ಗಳಿಸಿದರು. 2008ರಲ್ಲಿ FHM ನಿಯತಕಾಲಿಕವು 2008ರ 100 ಅತೀ ಲೈಂಗಿಕಾಕಾರ್ಷಕ ಮಹಿಳೆಯರ ಪೂರಕ ಪಟ್ಟಿಯಲ್ಲಿ ಅಲಿ ಲಾರ್ಟರ್‌‌ಗೆ 19ನೆಯ ಸ್ಥಾನ ನೀಡಿತು. [೫೧] ಮ್ಯಾಕ್ಸಿಮ್‌ 'ಭಯಾನಕ ಕಥೆ ಚಲನಚಿತ್ರಗಳ ಅತಿಮಾದಕ ಮಹಿಳೆಯರ ಪಟ್ಟಿಯಲ್ಲಿ ಅಲಿ ಲಾರ್ಟರ್‌ ಎರಡನೆಯ ಸ್ಥಾನದಲ್ಲಿದ್ದರು. [೧] 2009ರಲ್ಲಿ, FHM'‌ ಪತ್ರಿಕೆಯ ವಿಶ್ವದ ಅತಿ ಲೈಂಗಿಕಾಕರ್ಷಕ ಮಹಿಳೆಯರ ಪಟ್ಟಿಯಲ್ಲಿ ಅಲಿ ಲಾರ್ಟರ್‌ 91ನೆಯ ಸ್ಥಾನ ಗಳಿಸಿದರು. [೫೨]

ಪೀಪಲ್‌ ಪತ್ರಿಕೆಯ "ಟೆನ್ ಬೆಸ್ಟ್ ಡ್ರೆಸ್ಸಡ್ ಲಿಸ್ಟ್‌" ನಲ್ಲಿ "ದಿ ನ್ಯೂಕಮರ್‌"ಆಗಿ ಕಾಣಿಸಿಕೊಂಡರು[೫೩] ಹಾಗೂ ವಿಕ್ಟೊರಿಯಾಸ್‌ ಸಿಕ್ರೆಟ್‌ನ‌2008ರ ಅತೀ ಲೈಂಗಿಕಾಕರ್ಷಕ ಕಾಲುಗಳು ಎಂದು ಹೆಸರಿಸಲಾಯಿತು.[೫೪]

2007ರಲ್ಲಿ ಗ್ಲ್ಯಾಮರ್ ‌ ಪತ್ರಿಕೆಯ ರಕ್ಷಾಪುಟದಲ್ಲಿ ಅಲಿ ಲಾರ್ಟರ್‌ ಸಹ ನಟಿಯರಾದ ರಾಚೆಲ್‌ ಬಿಲ್ಸನ್‌ ಮತ್ತು ಡಯೇನ್‌ ಲೇನ್‌ರೊಂದಿಗೆ ಕಾಣಿಸಿಕೊಂಡರು. ತಾವು 20ನೆಯ ಹರೆಯದಲ್ಲಿದ್ದಾಗ ಇದ್ದ ಆಕರ್ಷಕ ಮೈಕಟ್ಟು ಇಂದಿಗೂ ಇರಲೆಂದು ಬಯಸುವಿರಾ ಎಂದು ಕೇಳಿದಾಗ, 'ಹಾಗೇನಿಲ್ಲ, ನಾನು ಇಂದು ಇನ್ನೂ ಉತ್ತಮವಾಗಿ ಕಾಣುತ್ತಿರುವೆ, ಏಕೆಂದರೆ ನಾನು ನನ್ನ ಬಗ್ಗೆ ಉತ್ತಮ ರೀತಿಯಲ್ಲಿ ಭಾವಿಸಿರುವೆ. ಸ್ವಾರಸ್ಯವಿರುವುದು ಇಲ್ಲೇ. ನಿಮಗೆ ವಯಸ್ಸು ಹೆಚ್ಚಾದಷ್ಟು ನೀವು ಉತ್ತಮರಾಗುವಿರಿ... ವ್ಯಾನೆಸಾ ರೆಡ್‌ಗ್ರೇವ್‌ರಂತಹ ಅಸಾಮಾನ್ಯ ಮಹಿಳೆಯರನ್ನು ನೋಡಿ, ಅವರು ಇನ್ನೂ ಸುಂದರವಾಗಿಯೇ ಇದ್ದಾರೆ. ಅವರ ವ್ಯಕ್ತಿತ್ವ ಹೇಗೇ ಇರಲಿ ಅದನ್ನು ಸ್ವೀಕರಿಸುತ್ತಾರೆ [೫೫] ಎಂದು ಅಲಿ ಲಾರ್ಟರ್‌ ಉತ್ತರಿಸಿದರು. ಅಲ್ಯೂರ್‌ ಒಂದಿಗಿನ ಸಂದರ್ಶನವೊಂದರಲ್ಲಿ, ಲಾರ್ಟರ್ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವಂತೆ ಕೆಲವು ನಿರ್ಮಾಪಕರು ತಮ್ಮ ಪ್ರತಿನಿಧಿ ಹಾಗೂ ಕಾರ್ಯದರ್ಶಿಗಳಿಗೆ ಫ್ಯಾಕ್ಸ್‌ ಸಂದೇಶ ಕಳಿಸಿದ್ದನ್ನು ಬಹಿರಂಗಪಡಿಸಿದರು. 'ನಾನು ನನ್ನ ಟ್ರೇಲರ್‌ನಲ್ಲಿ ಕುಳಿತು, ನನ್ನ ಬಗ್ಗೆ ಹಾಗೂ ಶರೀರದ ಬಗ್ಗೆ ಹಾಗೂ ಯಾರೂ ನೇರವಾಗಿ ಈ ಕುರಿತು ಮಾತನಾಡದ ಬಗ್ಗೆ ಉಂಟಾದ ಮುಜುಗರದಿಂದ ಭಾವೋದ್ರೇಕದಿಂದ ಅಳುತ್ತಿರುವುದು ಕೇವಲ ನೆನಪಿಗೆ ಬರುತ್ತದೆ..' ಪರಿಪೂರ್ಣ ಹಾಲಿವುಡ್‌ ಶರೀರದ ಕಲ್ಪನೆಗೆ ಒಗ್ಗಿಕೊಳ್ಳಲು ತಾನು ನಿರಾಕರಿಸಿದೆ ಎಂದು ಅವರು ಹೇಳುತ್ತಾರೆ. [೫೬] 2009ರಲ್ಲಿ ಬೆವರಲಿ ಹಿಲ್ಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅಲಿ ಲಾರ್ಟರ್‌ಗೆ ಕಾಸ್ಮೊಪೊಲಿಟನ್ ‌ ಪತ್ರಿಕೆಯ ವರ್ಷದ 'ಫನ್‌ ಫಿಯರ್ಲೆಸ್‌ ಫಿಮೇಲ್‌' ಎಂದು ಗೌರವಿಸಲಾಯಿತು. [೫೭]

ಕೇಶವಿನ್ಯಾಸಕ ತಂಡವನ್ನು ಬಳಸಿಕೊಳ್ಳುವ ಪದ್ಧತಿಗೆ ತದ್ವಿರುದ್ಧವಾಗಿ, 2007 ಎಮ್ಮಿ ಪ್ರಶಸ್ತಿ ಸಮಾರಂಭಕ್ಕಾಗಿ ಅಲಿ ಲಾರ್ಟರ್‌ ತಾವೇ ಸ್ವತಃ ಕೇಶ ವಿನ್ಯಾಸ ಮಾಡಿಕೊಂಡರು. ಇದು ಡವ್‌ ಹೇರ್ಸ್‌ 'ರಿಯಲ್ ಬ್ಯೂಟಿ' ಸ್ಪರ್ಧೆಯ ಭಾಗವಾಗಿತ್ತು. ಡವ್‌‌ನ ಹೊಸ ಆರ್ಧ್ರಕ ಶ್ಯಾಂಪೂಗಳು, ಕಂಡೀಷನರ್‌ಗಳು ಮತ್ತು ಚಿಕಿತ್ಸೆಗಳನ್ನು ಬಳಸಬೇಕಾದ ಅಗತ್ಯವಿತ್ತು. [೫೮]


ಇವರು ಷೇಪ್‌ , ಕಾಸ್ಮೊಪೊಲಿಟನ್‌ , ಅಲ್ಯೂರ್‌ , ಗ್ಲ್ಯಾಮರ್‌ , ಲಕಿ ಹಾಗೂ ಎಂಟರ್ಟೇನ್ಮೆಂಟ್‌ ವೀಕ್ಲಿ ಪತ್ರಿಕೆಗಳ ರಕ್ಷಾಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ. [೯][೫೯][೬೦][೬೧]

ವೈಯಕ್ತಿಕ ಜೀವನ[ಬದಲಾಯಿಸಿ]

ತಾವು ರೂಪದರ್ಶಿಯಾಗಿರುವಾಗ, ಅಲಿ ಲಾರ್ಟರ್‌ ನಟನಾ ವೃತ್ತಿಯಲ್ಲಿ ತಮ್ಮ ಜೀವನ ಕಂಡುಕೊಳ್ಳಲು ಲಾಸ್‌ ಏಂಜಲೀಸ್‌ಗೆ ಸ್ಥಳಾಂತರಗೊಂಡರು. 2002ರಲ್ಲಿ ಅವರು ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡು ಮೂರು ವರ್ಷಗಳ ಕಾಲ ವಾಸಿಸಿದರು. ಫಿಲಿಮ್ಯಾಗ್‌ನೊಂದಿಗಿನ ಸಂದರ್ಶನವೊಂದರಲ್ಲಿ, 'ಉದ್ದಿಮೆಯ ಒತ್ತಡಗಳ ಹೊರಗೆ ಆತ್ಮಾವಲೋಕನ ಮಾಡಿಕೊಳ್ಳಲು ಸ್ವಲ್ಪ ಸಮಯ ಬಿಡುವು ಮಾಡಿಕೊಂಡೆ.ನಾನು ಇನ್ನು ಜೀವನಪರ್ಯಂತ ಮಾಡಬೇಕಾದದ್ದು ಇದನ್ನೇನು' ಎಂದು ನನ್ನ ಆಂತರ್ಯದ ಒಂದು ಭಾಗವು ನಿಜವಾಗಲೂ ತಿಳಿಯುವುದು ಅಗತ್ಯವಾಗಿತ್ತು' ಎಂದು ಅಲಿ ಲಾರ್ಟರ್‌ ತಿಳಿಸಿದರು. [೬೨] ಹೀರೋಸ್ ‌ ಚಲನಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಲೆಂದು ಅವರು ಜನವರಿ 2005ರಲ್ಲಿ ಲಾಸ್‌ ಏಂಜಲೀಸ್‌ಗೆ ಸ್ಥಳಾಂತರಗೊಂಡರು. [೬೩]

2007ರ ಡಿಸೆಂಬರ್‌ ತಿಂಗಳಲ್ಲಿ, ಅಲಿ ಲಾರ್ಟರ್‌ ಹಾಗೂ ಮೂರು ವರ್ಷಗಳಿಂದ ಅವರ ಪ್ರಿಯಕರನಾಗಿದ್ದ ಹೇಯ್ಸ್‌ ಮೆಕಾರ್ಥರ್‌ರ ವಿವಾಹ ನಿಶ್ಚಿತಾರ್ಥವಾಯಿತು. [೬೪] ನ್ಯಾಷನಲ್‌ ಲ್ಯಾಂಪೂನ್‌ನ ಹೊಮೊ ಇರೆಕ್ಟಸ್ ‌ ಚಲನಚಿತ್ರದ ಸೆಟ್‌ಗಳಲ್ಲಿ ಮೊದಲ ಬಾರಿ ಭೇಟಿಯಾದರು. 2007ರಲ್ಲಿ ಕಾಸ್ಮೊ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, 'ಮೂರು ವಾರಗಳ ನಂತರ ಅವನನ್ನು ಮದುವೆಯಾಗಲು ಬಯಸುವುದಾಗಿ ಹಾಗೂ ನಾಳೆ ಅದನ್ನು ಸಾಧ್ಯವಾಗಿಸಬಹುದು' ಎಂದು ಪ್ರಿಯಕರನಿಗೆ ಹೇಳಿದ್ದಾಗಿ ಲಾರ್ಟರ್ ತಿಳಿಸಿದರು. [೬೫]

2009ರ ಆಗಸ್ಟ್‌ 1ರಂದು ಅಲಿ ಲಾರ್ಟರ್‌ ಹೇಯ್ಸ್‌ ಮೆಕಾರ್ಥರ್‌‌ರನ್ನು [೬೬]ಆತ್ಮೀಯ ಹೊರಾಂಗಣ ಸಮಾರಂಭದಲ್ಲಿ ವಿವಾಹವಾದರು. ಹೇಯ್ಸ್‌ ಮೆಕಾರ್ಥರ್‌ ಪರಂಪರೆಯ ಗೌರವಾರ್ಥವಾಗಿ ಐರಿಷ್‌ ಸಾಂಪ್ರದಾಯಿಕ ಸಂಗೀತ ದನಿ ಕೇಳಲು ಅತಿಥಿಗಳು ಟ್ರಾಲಿಗಳ ಮೂಲಕ ಆಗಮಿಸಿದರು. [೫] ಆಮಂತ್ರಿತರಲ್ಲಿ ಅಲಿ ಲಾರ್ಟರ್‌ರ ನಿಕಟ ಸ್ನೇಹಿತೆ ಆಮಿ ಸ್ಮಾರ್ಟ್‌ ಸಹ ಇದ್ದರು. [೫] ಮೇಯ್ನ್‌ನ ಕೆನಿಬಂಕ್‌ಪೋರ್ಟ್‌ನಲ್ಲಿರುವ ಮೆಕಾರ್ಥರ್‌ ಹೆತ್ತವರ ತೋಟದಲ್ಲಿ ಈ ವಿವಾಹ ಸಮಾರಂಭವು ನಡೆಯಿತು. [೬೭] ದಂಪತಿ ಹಾಲಿವುಡ್‌ ಹಿಲ್ಸ್‌ನಲ್ಲಿ 2.9 ದಶಲಕ್ಷ ಡಾಲರ್‌ ಮೌಲ್ಯದ ಮೂರು ಮಹಡಿಗಳ ನಿವಾಸವನ್ನು ಖರೀದಿಸಿದರು. [೬೮] 2010ರ ಜುಲೈ 20ರಂದು, ತಾವು ಮತ್ತು ಮೆಕಾರ್ಥರ್‌ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದೇವೆಂದು ಅಲಿ ಲಾರ್ಟರ್‌ ತಿಳಿಸಿದರು. [೬೯] ತಮ್ಮ ಗರ್ಭಾವಸ್ಥೆಯ ಸುದ್ದಿಯನ್ನು ಗೌಪ್ಯವಾಗಿಡಲೆಂದೇ ಅವರು ಮತ್ತು ಹೇಯ್ಸ್‌ ಮೆಕಾರ್ಥರ್‌ ದೇಶ ಬಿಟ್ಟು ಯುರೋಪ್‌ಗೆ ಹೋದೆವು ಎಂದು ಅಲಿ ಲಾರ್ಟರ್‌ ಒಪ್ಪಿಕೊಂಡರು. [೭೦][೭೧]

ಕಾಸ್ಮೊಪೊಲಿಟನ್ ‌ ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ, ಅಲಿ ಲಾರ್ಟರ್‌ ತಮ್ಮ ಜೀವನದ ಸ್ಥಿತಿಗತಿ ಕುರಿತು ಗಾಢಚಿಂತನೆಯಲ್ಲಿ ಮಗ್ನರಾದಂತೆ ಕಂಡುಬಂದರು. 'ನಾನು ಇಷ್ಟಪಡುವ ಟಿವಿ ಕಾರ್ಯಕ್ರಮದಲ್ಲಿ ನಾನು ಕೆಲಸ ಮಾಡುತ್ತಿರುವೆ. ನಾನು ಗೌರವದಿಂದ ಕಾಣುವ ನಟರೊಂದಿಗೆ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ದೊರಕಿದೆ. ಇಡೀ ಜೀವನ ಜತೆಯಾಗಿ ಕಳೆಯಲಿರುವ ಮನುಷ್ಯನನ್ನು ನಾನು ಗಾಢವಾಗಿ ಪ್ರೀತಿಸುತ್ತೇನೆ; ಅವನು ನನ್ನನ್ನು ಮುನ್ನಡೆಸುತ್ತಾನೆ ಹಾಗೂ ಉತ್ಸಾಹಗೊಳಿಸುತ್ತಾನೆ.ನನ್ನೊಳಗೆ ಒಬ್ಬ ಹೋರಾಟಗಾರ್ತಿಯಿದ್ದಾಳೆ. ಅವಳು ಸ್ವಲ್ಪ ಮಟ್ಟಿಗೆ ಶಾಂತವಾಗಿರಬೇಕಾದ ಅಗತ್ಯವಿದೆ. ನಾನು ನನ್ನನ್ನು ರಕ್ಷಿಸಿಕೊಳ್ಳಲು ಅಷ್ಟೊಂದು ಕಠಿಣಮನಸ್ಕಳಾಗುವ ಅವಶ್ಯಕತೆಯಿಲ್ಲ." [೭] ತಮ್ಮ ಚಲನಚಿತ್ರ ಆಬ್ಸೆಸ್ಡ್‌ ನ ಪ್ರಥಮಪ್ರದರ್ಶನದ ಸಮಯ ವ್ಯಾನಿಟಿ ಫೇರ್ ‌ ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ, ಅಲಿ ಲಾರ್ಟರ್‌ ತಮ್ಮದೇ ಆದ ಗೀಳುಗಳ ಬಗ್ಗೆ ಮಾತನಾಡಿದರು. 'ನನಗೆ ಅಡುಗೆ ಮಾಡಲು ಇಷ್ಟ. ವಾರಾಂತ್ಯಗಳಲ್ಲಿ ನಾನು ಪಾಕಪುಸ್ತಕಗಳನ್ನು ಓದುವುದರಲ್ಲಿ ಸಮಯ ಕಳೆಯುವೆ-ಇದು ನಿಜವಾಗಲೂ ನನಗೆ ವಿಶ್ರಾಂತಿ.' [೭೨]

2010ರ ಜೂನ್ ತಿಂಗಳಲ್ಲಿ, ವಾಷಿಂಗ್ಟನ್‌ D.C. ನಗರದಲ್ಲಿ ನಡೆದ 'ವಿಮೆನ್‌ ಡೆಲಿವರ್‌' ಎಂಬ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ 130 ದೇಶಗಳ ಸಾವಿರಾರು ಪ್ರತಿನಿಧಿಗಳಲ್ಲಿ ಅಲಿ ಲಾರ್ಟರ್‌ ಸಹ ಒಬ್ಬರಾಗಿದ್ದರು. [೭೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1999 ಹೌಸ್‌ ಆನ್‌ ಹಾಂಟೆಡ್‌ ಹಿಲ್‌ ಸಾರಾ ವುಲ್ಫ್‌
ವಾರ್ಸಿಟಿ ಬ್ಲೂಸ್‌ ಡಾರ್ಸಿ ಸಿಯರ್ಸ್
ಡ್ರೈವ್‌ ಮಿ ಕ್ರೇಜಿ ಡಲ್ಸಿ
ಗಿವಿಂಗ್‌ ಇಟ್‌ ಅಪ್‌ ಅಂಬರ್‌ ಕ್ಯಾಸನೊವಾ ಫಾಲಿಂಗ್‌ ಎಂದು ಪರಿಚಿತ.
2000 ಫೈನಲ್‌ ಡೆಸ್ಟಿನೇಷನ್‌ ಕ್ಲಿಯರ್‌ ರಿವರ್ಸ್‌ ಅತ್ಯುತ್ತಮ ಗಮನ ಸೆಳೆವ ನಟನೆಗಾಗಿ

ಯಂಗ್‌ ಹಾಲಿವುಡ್‌ (ಮಹಿಳಾ) ಪ್ರಶಸ್ತಿ
ನಾಮನಿರ್ದೇಶಿತ — ಭಯಾನಕ ಕಥೆಯುಳ್ಳ ಚಲನಚಿತ್ರದ ಅತ್ಯುತ್ತಮ ನಟಿಗಾಗಿ ಕೊಡುವ ಬ್ಲಾಕ್ಬಸ್ಟರ್‌ (ಅತಿಜನಪ್ರಿಯ)ಎಂಟರ್ಟೇನ್ಮೆಂಟ್‌ ಪ್ರಶಸ್ತಿ

2001 ಅಮೆರಿಕನ್‌ ಔಟ್ಲಾಸ್‌ ಜೆರೆಲ್ಡಾ 'ಝೀ' ಮಿಮ್ಸ್‌
2001 ಜಯ್ ಅಂಡ್ ಸೈಲೆಂಟ್ ಬಾಬ್ ಸ್ಟ್ರೈಕ್ ಬ್ಯಾಕ್ ಕ್ರಿಸ್ಸಿ
ಲೀಗಲ್ಲಿ ಬ್ಲೋಂಡ್‌ ಬ್ರೂಕ್‌ ಟೇಯ್ಲರ್‌ ವಿಂಡ್‌ಹ್ಯಾಮ್‌
2003 ಫೈನಲ್‌ ಡೆಸ್ಟಿನೇಷನ್‌ 2 ಕ್ಲಿಯರ್‌ ರಿವರ್ಸ್‌
2004 ಥ್ರೀ-ವೇ ಇಸಬೆಲ್‌ ಡೆಲಾನೊ 3-ವೇ ಎಂದೂ ಚಿರಪರಿಚಿತ
ಸಹ-ನಿರ್ಮಾಪಕಿ ಕೂಡ
2005 ಕಾನ್ಫೆಸ್‌ ಒಲಿವಿಯಾ ಅವೆರಿಲ್‌
ಎ ಲಾಟ್‌ ಲೈಕ್‌ ಲವ್‌ ಜೀನಾ
2007 ಮ್ಯಾರಿಗೋಲ್ಡ್‌ ಮ್ಯಾರಿಗೋಲ್ಡ್‌ ಲೆಕ್ಸ್‌ಟನ್‌ ಬಾಲಿವುಡ್‌ (ಹಿಂದಿ) ಚಲನಚಿತ್ರ
Resident Evil: Extinction ಕ್ಲೇರ್‌ ರೆಡ್ಫೀಲ್ಡ್‌
ಹೋಮೋ ಎರೆಕ್ಟಸ್‌ ಫಾರ್ಡಾರ್ಟ್‌ ನ್ಯಾಷನಲ್‌ ಲ್ಯಾಂಪೂನ್ಸ್‌ ದಿ ಸ್ಟೋನ್ಡ್ನ್‌ ಏಜ್‌ ಎಂದೂ ಚಿರಪರಿಚಿತ
2008 ಕ್ರೇಜಿ ಇವ್ಲಿನ್‌ ಗಾರ್ಲೆಂಡ್‌
2009 ಆಬ್ಸೆಸ್ಡ್‌ ಲೀಸಾ ಷೆರಿಡ್ಯಾನ್‌ ಅತ್ಯುತ್ತಮ ಹೋರಾಟ ದೃಶ್ಯಕ್ಕಾಗಿ MTVಮೂವೀ ಪ್ರಶಸ್ತಿ ಬೆಯಾನ್ಸ್ ನೋಲ್ಸ್‌ ಜತೆ ಹಂಚಲಾಯಿತು
ನಾಮನಿರ್ದೇಶಿತ — ಛಾಯ್ಸ್‌ ಚಲನಚಿತ್ರ 'ರಂಬಲ್‌'ಗಾಗಿ ಟೀನ್‌ ಛಾಯ್ಸ್‌ ಪ್ರಶಸ್ತಿ ಬೆಯಾನ್ಸ್‌ ನೋಲ್ಸ್‌ರೊಂದಿಗೆ ಹಂಚಲಾಯಿತು
2010 Resident Evil: Afterlife ಕ್ಲೇರ್‌ ರೆಡ್ಫೀಲ್ಡ್‌ ಬಿಡುಗಡೆಗಾಗಿ ಕಾದಿದೆ

ಕಿರುತೆರೆ[ಬದಲಾಯಿಸಿ]

ವರ್ಷ Show ಪಾತ್ರ ಟಿಪ್ಪಣಿಗಳು
1997 ಸಡೆನ್ಲಿ ಸೂಸಾನ್‌ ಮ್ಯಾಡೀ ಸಂಚಿಕೆ: "ದಿ ವೇಸ್‌ ಅಂಡ್‌ ಮೀನ್ಸ್‌"
ಷಿಕಾಗೊ ಸನ್ಸ್‌ ಏಂಜೆಲಾ ಸಂಚಿಕೆ: "ಬ್ಯೂಟಿ ಅಂಡ್‌ ದಿ ಬಟ್‌"
1998 ಷಿಕಾಗೊ ಹೋಪ್‌ ಸಾಮಂಥ ಸಂಚಿಕೆ: "ಮೆಮೆಂಟೊ ಮೋರಿ"
ಜಸ್ಟ್‌ ಷೂಟ್‌ ಮಿ! ಕೇರೀ ಬರ್ಕ್‌ ಸಂಚಿಕೆ: "ಕಾಲೇಜ್‌ ಆರ್‌ ಕಾಲಜನ್‌"
ಡಾಸನ್ಸ್‌ ಕ್ರೀಕ್‌ ಕ್ರಿಸ್ಟಿ ಲಿವಿಂಗ್‌ಸ್ಟೋನ್‌ ಸಂಚಿಕೆಗಳು: "ದಿ ಡ್ಯಾನ್ಸ್‌" ಹಾಗೂ "ದಿ ಕಿಸ್‌"
2004 ಎಂಟೂರೇಜ್‌ ಸ್ವಯಂ ಪಾತ್ರ ಸಂಚಿಕೆ: "ಪೈಲಟ್‌"
2006–2010 ಹೀರೋಸ್‌ ನಿಕಿ/ ಜಸ್ಸಿಕಾ ಸ್ಯಾಂಡರ್ಸ್‌ / ಟ್ರೇಸಿ ಸ್ಟ್ರಾಸ್‌ ನಾಟಕ ಸರಣಿಯಲ್ಲಿ ಮಹೋನ್ನತ ಪೋಷಕ ನಟಿಗೆ ಮೀಸಲಾದ ಗ್ರೇಸೀ ಅಲೆನ್‌ ಪ್ರಶಸ್ತಿಗಳು
ಛಾಯ್ಸ್‌ ಕಿರುತೆರೆ ನಟಿಗಾಗಿರುವ ಟೀನ್‌ ಚಾಯ್ಸ್‌ ಪ್ರಶಸ್ತಿ: ಸಾಹಸ
ನಾಮನಿರ್ದೇಶನಗೊಂಡ — ಚಾಯ್ಸ್ ಚಿತ್ರ ನಟಿಗಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ: ಆಕ್ಷನ್ ಸಾಹಸ
ನಾಮನಿರ್ದೇಶಿತ — ಕಿರುತೆರೆಯ ಅತ್ಯುತ್ತಮ ಪೋಷಕನಟಿಗಾಗಿ ಸ್ಯಾಟರ್ನ್‌ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ "Biography for Ali Larter". IMBd. ತೆರೆದುನೋಡಿದ್ದು 2010-06-27. 
 2. "Heroes Cast Members, Tracy Strauss". NBC. ತೆರೆದುನೋಡಿದ್ದು 2010-07-24. 
 3. Feinburg, Daniel (2006-07-03). "NBC's 'Heroes' Fascinates Larter". Zap2it. ತೆರೆದುನೋಡಿದ್ದು 2010-06-27. 
 4. "Ali Larter". Celebritywonder.com. ತೆರೆದುನೋಡಿದ್ದು 2010-02-30.  Check date values in: |accessdate= (help)
 5. ೫.೦ ೫.೧ ೫.೨ Everett, Christina (2009-08-03). "'Heroes' star Ali Larter marries actor Hayes MacArthur in Maine". New York Daily. ತೆರೆದುನೋಡಿದ್ದು 2010-06-27. 
 6. "Ali Larter Biography". Tvguide.com. ತೆರೆದುನೋಡಿದ್ದು 2007-08-27. 
 7. ೭.೦ ೭.೧ Fahner, Molly. "Fun Fearless Female of the Year: Ali Larter". Cosmopolitan. ತೆರೆದುನೋಡಿದ್ದು 2010-06-27. 
 8. ೮.೦ ೮.೧ "Ali Larter Biography". Yahoo.com. ತೆರೆದುನೋಡಿದ್ದು 2007-08-27. 
 9. ೯.೦ ೯.೧ "Ali Larter People Biography". People. ತೆರೆದುನೋಡಿದ್ದು 2010-02-30.  Check date values in: |accessdate= (help)
 10. ೧೦.೦ ೧೦.೧ "Ali Larter thinks a 64-year-old is sexier than she is". Showbiz Spy. ತೆರೆದುನೋಡಿದ್ದು 2010-07-27. 
 11. Futrelle, David. "Esquire's sexy starlet is the hoax with the most". Salon. ತೆರೆದುನೋಡಿದ್ದು 2007-12-18. 
 12. Das, Lina (2007-08-09). "Actress Ali is a hero for our time". London: The Daily Mail. ತೆರೆದುನೋಡಿದ್ದು 2010-06-27. 
 13. "Varsity Blues". Box Office Mojo. ತೆರೆದುನೋಡಿದ್ದು 2007-08-27. 
 14. "House on Haunted Hill". Rotten Tomatoes. ತೆರೆದುನೋಡಿದ್ದು 2010-02-30.  Check date values in: |accessdate= (help)
 15. "House on Haunted Hill". The Numbers. ತೆರೆದುನೋಡಿದ್ದು 2010-02-30.  Check date values in: |accessdate= (help)
 16. "Final Destination". Box Office Mojo. ತೆರೆದುನೋಡಿದ್ದು 2010-08-13. 
 17. Feiwell, Jill (2000-10-09). "Larter goes 'Blonde' in laffer". Variety. ತೆರೆದುನೋಡಿದ್ದು 2010-08-10. 
 18. "Weekend Box Office Results for July 13-15, 2001". Box Office Mojo. ತೆರೆದುನೋಡಿದ್ದು 2010-08-10. 
 19. "Legally Blonde". Box Office Mojo. ತೆರೆದುನೋಡಿದ್ದು 2007-08-27. 
 20. B., Scott (2003-01-30). "An Interview with Ali Larter". IGN. ತೆರೆದುನೋಡಿದ್ದು 2010-06-27. 
 21. "Weekend Box Office Results for January 31-February 2, 2003". Box Office Mojo. ತೆರೆದುನೋಡಿದ್ದು 2007-08-27. 
 22. "Final Destination 2". Rotten Tomotoes. ತೆರೆದುನೋಡಿದ್ದು 2007-08-27. 
 23. "The 59th Primetime Emmy Awards and Creative Arts Emmy Awards Nominees". Academy of Television Arts & Sciences. ತೆರೆದುನೋಡಿದ್ದು 2007-07-31. 
 24. "33rd Saturn Awards Nominations". Saturnawards.org. ತೆರೆದುನೋಡಿದ್ದು 2007-08-27. 
 25. West, Abby (2008-08-30). "Ali Larter on her 'Heroes' transformation". Entertainment Weekly. ತೆರೆದುನೋಡಿದ್ದು 2010-07-02. 
 26. "Ali Larter Turns Down Role in 'House' Sequel". Bloody Disgusting. 2006-06-26. ತೆರೆದುನೋಡಿದ್ದು 2010-08-06. 
 27. Maloney, Alison (2007-08-10). "Heroes' Ali takes on Bollywood". The Sun. ತೆರೆದುನೋಡಿದ್ದು 2010-04-10. 
 28. Pandohar, Jaspreet. "Ali Larter 'Marigold' Interview". BBC News. ತೆರೆದುನೋಡಿದ್ದು 2010-01-18. 
 29. Ramesh, Randeep (2009-03-14). "Kylie does Bollywood: Stars go east to beat the Hollywood crunch". London: The Guardian. ತೆರೆದುನೋಡಿದ್ದು 2010-07-24. 
 30. "Marigold: An Adventure in India". Box Office Prophets. ತೆರೆದುನೋಡಿದ್ದು 2010-06-23. 
 31. ೩೧.೦ ೩೧.೧ ೩೧.೨ "Resident Evil: Extinction - Interview w/Star Ali Larter". Bloody Disgusting. ತೆರೆದುನೋಡಿದ್ದು 2007-09-16. 
 32. "'Resident Evil: Extinction". Box Office Mojo. ತೆರೆದುನೋಡಿದ್ದು 2007-08-27. 
 33. Sciretta, Peter (2010-05-26). "Movie Trailer: Rick Bieber’s Crazy". Slash Film. ತೆರೆದುನೋಡಿದ್ದು 2010-07-02. 
 34. Fleming, Michael (2008-03-05). "Knowles, Larter, Elba are 'Obsessed'". Variety. ತೆರೆದುನೋಡಿದ್ದು 2010-08-09. 
 35. Barth, Lauren. "Obsessed with Ali Larter". Glam. ತೆರೆದುನೋಡಿದ್ದು 2009-12-18. 
 36. Malcolm, Derek (2009-05-29). "Obsessed is a dim reworking of Fatal Attraction". London Evening Standard. ತೆರೆದುನೋಡಿದ್ದು 2010-08-09. 
 37. Ryan, Joel (2009-04-26). "Box Office Totally Obsessed with Beyoncé, Larter". E! Online. ತೆರೆದುನೋಡಿದ್ದು 2007-12-18. 
 38. Neel, Julia (2010-06-07). "MTV Movie Awards 2010". Vogue. ತೆರೆದುನೋಡಿದ್ದು 2010-06-27. 
 39. "Ali Larter Returns in 'Resident Evil: Afterlife'". Bloody Disgusting. 2009-09-22. ತೆರೆದುನೋಡಿದ್ದು 2010-06-27. 
 40. Rudden, David (2010-03-29). "Ali Larter, Paul Anderson to talk about Resident Evil movie". Network World. ತೆರೆದುನೋಡಿದ್ದು 2010-04-18. 
 41. Bentley, David (2010-08-09). "Milla Jovovich, Wentworth Miller, Ali Larter talk Resident Evil: Afterlife". Coventry Telegraph. Archived from the original on 2012-07-07. ತೆರೆದುನೋಡಿದ್ದು 2010-08-10. 
 42. Walkuski, Eric (2010-04-03). "A visit to the set of Resident Evil: Afterlife!". JoBlo. ತೆರೆದುನೋಡಿದ್ದು 2010-06-27. 
 43. Porter, Leo (2009-12-11). "Ali Larter Possibly Joining UFO". Comingsoon.net. ತೆರೆದುನೋಡಿದ್ದು 2010-06-27. 
 44. Mike, Moody (2009-12-12). "Ali Larter circling 'UFO' role". Digital Spy. ತೆರೆದುನೋಡಿದ್ದು 2010-06-28. 
 45. Fienberg, Daniel (2010-04-03). "Ali Larter thinks 'Heroes' will be back". Hitfix.com. ತೆರೆದುನೋಡಿದ್ದು 2010-06-27. 
 46. Schnieder, Michael (2010-05-14). "NBC stops holding out for "Heroes"". Variety. Archived from the original on 2012-07-20. ತೆರೆದುನೋಡಿದ್ದು 2010-06-27. 
 47. Brown, Lane (2010-05-14). "Heroes Officially Dead". New York Magazine. ತೆರೆದುನೋಡಿದ್ದು 2010-06-29. 
 48. Andreeva, Nellie (2010-05-17). "'Heroes' Creator Tim King Comments On The Show's Cancellation By NBC". Deadline. ತೆರೆದುನೋಡಿದ್ದು 2010-06-28. 
 49. "The full list of FHM's 100 Sexiest Women in the World 2007". London: The Daily Mail. 2007-04-26. ತೆರೆದುನೋಡಿದ್ದು 2010-02-08. 
 50. "Maxim's 'Hot 100'". The Boston Globe. 2007-05-18. ತೆರೆದುನೋಡಿದ್ದು 2010-05-27. 
 51. "#19 Ali Larter". FHM Online. ತೆರೆದುನೋಡಿದ್ದು 2010-06-28. 
 52. "Full list of FHM's top 100 world's sexiest women 2010". Metro. 2010-04-29. ತೆರೆದುನೋಡಿದ್ದು 2010-08-10. 
 53. "The Ten Best Dressed of 2007". People. ತೆರೆದುನೋಡಿದ್ದು 2010-06-26. 
 54. "Ryan Seacrest & Eva Mendes Among Victoria's Secret's 'What Is Sexy' List". Access Hollywood. 2008-01-30. ತೆರೆದುನೋಡಿದ್ದು 2010-06-26. 
 55. Hollandsworth, Skip (2008-09-01). "Gorgeous At Any Age". Glamour. ತೆರೆದುನೋಡಿದ್ದು 2010-06-28. 
 56. "Ali Larter's 'Hot-Girl Syndrome'". Melbourne: The Age. 2008-06-18. ತೆರೆದುನೋಡಿದ್ದು 2010-07-27. 
 57. Cohen, Sandy (2009-03-03). "Eckhart, Larter receive Cosmo Fun Fearless awards". The Arizona Republic. ತೆರೆದುನೋಡಿದ್ದು 2010-07-24. 
 58. "Ali Larter Gets Real for Dove Hair!". Entertainment Today. 2007-08-22. ತೆರೆದುನೋಡಿದ್ದು 2010-07-25. 
 59. "Ali Larter does Shape". Glam. ತೆರೆದುನೋಡಿದ್ದು 2010-06-29. 
 60. Carter, Kelley L. (2009-03-03). "'Cosmo' award winners embrace fun and fear". USA Today. ತೆರೆದುನೋಡಿದ್ದು 2010-06-29. 
 61. Thomson, Katherine (2008-06-25). "Ali Larter Nearly Naked In Allure, Talks "Juicy Butt"". The Huffington Post. ತೆರೆದುನೋಡಿದ್ದು 2010-06-29. 
 62. Rys, Richard (2007-08-29). "Exit Interview: Ali Larter". Philadelphia. ತೆರೆದುನೋಡಿದ್ದು 2010-08-10. 
 63. Hiltbrand, David (2007-01-31). "Split personalities make solid role for Ali Larter". Chicago Tribune. ತೆರೆದುನೋಡಿದ್ದು 2010-06-28. 
 64. Chiu, Alex (2007-12-17). "Heroes Star Ali Larter Gets Engaged". People. ತೆರೆದುನೋಡಿದ್ದು 2007-12-18. 
 65. "Our Heroine". Cosmopolitan. ತೆರೆದುನೋಡಿದ್ದು 2010-06-28. 
 66. Garcia, Jennifer (2009-08-03). "Ali Larter Weds in Maine". People. ತೆರೆದುನೋಡಿದ್ದು 2009-08-03. 
 67. "Heroes' Ali Larter Ties the Knot!". Us Magazine. 2009-08-01. ತೆರೆದುನೋಡಿದ್ದು 2010-06-30. 
 68. Beale, Lauren (2009-10-30). "Ali Larter of 'Heroes' buys three-story Hollywood Hills home". Los Angeles Times. ತೆರೆದುನೋಡಿದ್ದು 2010-06-28. 
 69. Michaud, Sarah (2010-07-20). "Ali Larter Is Pregnant!". People. ತೆರೆದುನೋಡಿದ್ದು 2010-07-20. 
 70. Wedemeyer, Jessica (2010-07-06). "Ali Larter Admits Her Strongest Pregnancy Craving". People. ತೆರೆದುನೋಡಿದ್ದು 2010-07-06. 
 71. Wiley, Clare (2010-07-27). "Ali Larter left country to hide pregnancy". Digital Spy. ತೆರೆದುನೋಡಿದ್ದು 2010-07-28. 
 72. Guinness, Rebecca (2009-04-24). "Obsessed with Cooking, M.J., and Being a Manny". Vanity Fair. ತೆರೆದುನೋಡಿದ್ದು 2010-06-28. 
 73. Abrams, Tamar (2010-06-08). "Ali Larter Is Ready to be a Hero for Women and Girls". The Huffington Post. ತೆರೆದುನೋಡಿದ್ದು 2010-06-28. 

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]