ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸನ್.೨೦೦೮ ರಲ್ಲಿ ಆಯೋಜಿಸಲಾದ, '೫ ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ'(ಚಿಕಾಗೋ ನಗರ)

ಅಮೇರಿಕ ದೇಶಕ್ಕೆ ಹಲವು ವರ್ಷಗಳಿಂದ ಕರ್ನಾಟಕ ಮೂಲದ ಜನರು ವಲಸೆ ಹೋಗಿರುವರು. ಈ ಜನರಿಂದ ಸ್ಥಾಪಿಸಲ್ಪಟ್ಟ ಅನೇಕ ಕೂಟಗಳೇ ಅಮೇರಿಕ ಕನ್ನಡ ಕೂಟಗಳು. ಈ ಕೂಟಗಳಿಗೆ ಕೇಂದ್ರ ಬಿಂದು ಆಗಿ ಕಾರ್ಯ ನಿರ್ವಹಿಸಲು ಅಮೇರಿಕ ಕನ್ನಡ ಕೂಟಗಳ ಆಗರ (Association of Kannada Kootas of America,AKKA) ಪ್ರಯತ್ನಿಸುತ್ತದೆ.

೧೯೯೮ ರಲ್ಲಿ ಅರಿಝೋನಾಫೀನಿಕ್ಸ್ ನಗರದಲ್ಲಿ ಜನುಮ ಹೊಂದಿದ, ಈ 'ಅಕ್ಕ ವಿಶ್ವಕನ್ನಡ ಸಮ್ಮೇಳನ'ದ ಕಲ್ಪನೆ ಅಮೆರಿಕದ ಕೆಲವು ಕನ್ನಡಿಗರ ಮನಸ್ಸಿನಲ್ಲಿ ಮೂಡಿಬಂತು. ಹಾಗಾಗಿ ಮೈತಳೆದ 'ಅಕ್ಕಾ ಸಂಸ್ಥೆ' ಯ ' ದಶಮಾನೋತ್ಸವ ' ದ ಸಂಭ್ರಮವೂ ಮೈತಳೆದಿದೆ. ಈ ಸಂಸ್ಥೆಯ ಹೆಗ್ಗಳಿಕೆ ಯೆಂದರೆ, ಪ್ರತಿವರ್ಷಕ್ಕೆ ಎರಡು ಬಾರಿ ಪ್ರಕಟವಾಗುವ 'ಸಂಗಮ ಪತ್ರಿಕೆ ,' ವಿಶ್ವದ ಕನ್ನಡಿಗರಿಗೆ ಚಿರಪರಿಚಿತವಾಗಿದೆ. ಅಮೆರಿಕ ಕೆನಡಾ ದಲ್ಲಿರುವ ಕನ್ನಡಿಗರನ್ನು, ಕನ್ನಡ ಭಾಷಿಕರನ್ನು ಒಂದು ಸೂರಿನಡಿಯಲ್ಲಿ ಸೇರಿಸಿ, ಕನ್ನಡ ಸಂಸ್ಕೃತಿ, ಕನ್ನಡ ಭಾಷೆ, ಕಲೆ, ಸಾಹಿತ್ಯ ಸಂಗೀತ ಹಿರಿಮೆ ಗರಿಮೆಗಳನ್ನು ಮನದಟ್ಟುಮಾಡಿ, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ, ಉಳಿಸಿ ಬೆಳೆಸಿ ಪೋಷಿಸುವ, ಸಂರಕ್ಶಿಸುವ ಉದಾತ್ತ ಧ್ಯೇಯವನ್ನು ಸ್ಥಾಪಿಸಲ್ಪಟ್ಟ ಸಾಂಸ್ಕೃತಿಯ ವೇದಿಕೆಯೇ ಅಕ್ಕ. ವಿಶ್ವದ ಕನ್ನಡಿಗರೆಲ್ಲರಿಗೆ ಒಂದು ಪ್ರೇರಣೆಯನ್ನು ೨ ವರ್ಷಗಳಿಗೊಮ್ಮೆ ಆಚರಿಸುತ್ತಾ ಬಂದಿವೆ. ೩೦ ಕ್ಕೂ ಮೀರಿ, ಬೆಳೆದಿರುವ ಕನ್ನಡ ಸಂಘಗಳ ಒಟ್ಟಾರೆ ಕನ್ನಡಿಗರ ಸದಸ್ಯತ್ವ ೭೦,೦೦೦ಕ್ಕೂ ಹೆಚ್ಚಾಗಿದೆ. ಈ ಕನ್ನಡಿಗರೆಲ್ಲಾ ಅಕ್ಕ ವೇದಿಕೆಯಲ್ಲಿ ಒಂದಾಗಿ ಮಾಡಿರುವ ಕನ್ನಡಪರ ಕಾರ್ಯಚಟುವಟಿಕೆಗಳು, ಅನುಕರಣೀಯವಾಗಿವೆ.

(AKKA) ಅಮೆರಿಕದ ಕನ್ನಡ ಕೂಟಗಳ ಆಗರ, 'ಅಕ್ಕ '[ಬದಲಾಯಿಸಿ]

'ಅಕ್ಕ'ದ ಸ್ಥಾಪನೆ[ಬದಲಾಯಿಸಿ]

'AKKA,' ಸ್ಥಾಪನೆ, ೧೯೯೮ ರಲ್ಲಿ ಆಯಿತು. 'ವಿಶ್ವ ಕನ್ನಡ ಸಮ್ಮೆಳನ'ವನ್ನು ಆಯೋಜಿಸುವ ಬಗ್ಗೆ ಸದಸ್ಯರು ಒಮ್ಮತದಿಂದ ತೀರ್ಮಾನಿಸಿ, ಅಮೆರಿಕದ 'ಅರಿಜೋನ' ರಾಜ್ಯದ 'ಫೊನೆಕ್ಸ್' ನಲ್ಲಿ -೯೮ ಒಂದು ಸಮಿತಿಯ ಘಟನೆಯಾಯಿತು. ಸದಸ್ಯರನ್ನು ಸಂಘಟನೆ ಮಾಡಿ ಕಾನೂನನ್ನು ಮಾಡಿತು. ಸನ್, ೨೦೦೦ ರಲ್ಲಿ, ಟೆಕ್ಸಾಸ್ ರಾಜ್ಯದ ಹೂಸ್ಟನ್ ಕನ್ನಡ ವೃಂದವರಿಂದ ಮೊಟ್ಟಮೊದಲ 'ಅಕ್ಕಾ ವಿಶ್ವ ಕನ್ನಡ ಸಮ್ಮೇಳನ' ದ ಶುಭಾರಂಭವಾಯಿತು. ಅಲ್ಲಿ ಸುಮಾರು ೨,೦೦೦ ಕ್ಕಿಂತ ಹೆಚ್ಚು ಕನ್ನಡಿಗರು ಭಾಗವಹಿಸಿ ಆನಂದಿಸಿದ್ದರು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆಯಂತೆ, ಒಟ್ಟು ೫ ವಿಶ್ವ ಕನ್ನಡ ಸಮ್ಮೇಳನಗಳಾಗಿವೆ.

'೨೦೦೨ ದಲ್ಲಿ ೨ ನೇ ಅಕ್ಕಾ ವಿಶ್ವ ಕನ್ನಡ ಸಮ್ಮೇಳನ', 'ಪಂಪ ಕನ್ನಡ ಕೂಟ', ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಜರುಗಿತು. ಅಲ್ಲಿ ಒಟ್ಟು, ೪, ೦೦೦ ಜನ ಅತಿಥಿಗಳು ಬಂದಿದ್ದರು. ೨೦೦೪ ರಲ್ಲಿ, ೩ ನೇ ಅಕ್ಕಾ ವಿಶ್ವ ಕನ್ನಡ ಸಮ್ಮೇಳನ, ಆರ್ಲ್ಯಾಂಡೋ, ಫ್ಲಾರಿಡದಲ್ಲಿ ಶ್ರೀಗಂಧ ಕನ್ನಡ ಕೂಟದವರು ನಡೆಸಿಕೊಟ್ಟರು. ೨೦೦೬ ರ ೪ ನೇ ಅಕ್ಕಾ ವಿಶ್ವ ಕನ್ನಡ ಸಮ್ಮೇಳನ, ಮೇರಿಲ್ಯಾಂಡ್ ನ, ' ಕಾವೇರಿ ಕನ್ನಡ ಅಸೋಸಿಯೇಷನ್' ನವರು ನಿಭಾಯಿಸಿದರು.

 • ೧೯೯೮- ಫಿನಿಕ್ಸ್,ನಲ್ಲಿ ಒಕ್ಕೂಟದ ಶುಭಾರಂಭವಾಯಿತು.
 • ೨೦೦೦- ಹೂಸ್ಟನ್, ನಲ್ಲಿ ಮೊಟ್ಟಮೊದಲನೆಯ ಅಕ್ಕ 'ವಿಶ್ವ ಕನ್ನಡ ಸಮ್ಮೆಳನ,' ವಿಧ್ಯುಕ್ತವಾಗಿ ಪ್ರಾರಂಭವಾಯಿತು.
 • ೨೦೦೨- ಡೆಟ್ರಾಯಿಟ್, ಎರಡನೆಯ 'ವಿಶ್ವ ಕನ್ನಡ ಸಮ್ಮೆಳನ,' 'ಪಂಪ ಕನ್ನಡ ಕೂಟ'ದ ಆಶ್ರಯದಲ್ಲಿ ಜರುಗಿತು.
 • ೨೦೦೪- ಆರ್ಲ್ಯಾಂಡೋ, ಮೂರನೆಯ 'ವಿಶ್ವ ಕನ್ನಡ ಸಮ್ಮೆಳನ,' 'ಶ್ರೀಗಂಧ ಕನ್ನಡ ಕೂಟ'ದವರ ಆಶ್ರಯದಲ್ಲಿ ನೆರವೇರಿತು
 • ೨೦೦೬- ಬಾಲ್ಟಿಮೋರ್ ನಾಲ್ಕನೆಯ 'ವಿಶ್ವ ಕನ್ನಡ ಸಮ್ಮೆಳನ,' 'ಕಾವೇರಿ ಕನ್ನಡ ಅಸೋಸಿಯೇಷನ್' ನವರ ಸಹಯೋಗದಿಂದ ಜರುಗಿತು.
 • ೨೦೦೮- ಚಿಕಾಗೊ ನಗರ, ಐದನೆಯ 'ವಿಶ್ವ ಕನ್ನಡ ಸಮ್ಮೆಳನ,' 'ಚಿಕಾಗೋ ನಗರ'ದಲ್ಲಿ ನೆರವೇರಿತು.
 • ೨೦೧೦- ಮ್ಯೂಜರ್ಸಿ ನಗರ, ಆರನೆಯ 'ವಿಶ್ವ ಕನ್ನಡ ಸಮ್ಮೆಳನ,' 'ನ್ಯೂಜೆರ್ಸಿ 'ಯಲ್ಲಿ ಜರುಗಿತು.
 • ೨೦೧೨- ಅಟ್ಲಾಂಟ ನಗರ, '೭ ನೆಯ 'ವಿಶ್ವ ಕನ್ನಡ ಸಮ್ಮೆಳನ' 'ಅಟ್ಲಾಂಟ ನಗರ'ದಲ್ಲಿ ಜರುಗಿತು.
 • ೨೦೧೪ - ಸ್ಯಾನ್ ಹೋಸೆ, ೮ ನೆಯ 'ವಿಶ್ವ ಕನ್ನಡ ಸಮ್ಮೆಳನ' 'ಸ್ಯಾನ್ ಹೋಸೆ ನಗರ'ದಲ್ಲಿ ಜರುಗಿತು.

ಸಂಸ್ಥಾಪಕರು/ 'ಅಕ್ಕ'ದ ಅಧ್ಯಕ್ಷರುಗಳು[ಬದಲಾಯಿಸಿ]

ಸಂಸ್ಥಾಪಕರು

ಅಧ್ಯಕ್ಷರು

 • ಎಚ್. ಎಸ್ .ಜಯಸ್ವಾಮಿ
 • ಅಮರನಾಥ ಗೌಡ
 • ಕುಡೂರ್ ಮುರಳಿ
 • ರಮೇಶ್ ಗೌಡ
 • ರವಿ ಡಂಕನಿಕೋಟೇ ಎ
 • ಹಳೇಕೋಟೆ ವಿಶ್ವಾಮಿತ್ರ

೬ ನೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ,' ವನ್ನು ಅಮೆರಿಕದ ನ್ಯೂಜೆರ್ಸಿಯ, 'ಬೃಂದಾವನ ಕನ್ನಡ ಕೂಟ,' ಆಯೋಜಿಸಲಾಯಿತು[ಬದಲಾಯಿಸಿ]

೨೦೧೦ ನೇ ಸೆಪ್ಟೆಂಬರ್, ೩ ರಿಂದ ೫ ನೇ ತಾರೀಖಿನವರೆಗೆ, ಅಮೆರಿಕ ಸಂಯುಕ್ತ ಸಂಸ್ಥಾನದ 'ನ್ಯೂಜೆರ್ಸಿ'ರಾಜ್ಯದ 'ಎಡಿಸನ್',ನಲ್ಲಿ, ೬ ನೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅತ್ಯಂತ ಹರ್ಷೋಲ್ಲಾಸಗಳಿಂದಲೂ, ವಿಜೃಂಭಣೆಯಿಂದಲೂ ನೆರೆವೇರಿಸ ಲಾಯಿತು.[AKKA ಕೂಟದ ಅಂತರ್ಜಾಲ ತಾಣ]

೭ ನೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ[ಬದಲಾಯಿಸಿ]

ಸನ್ ೨೦೧೨ ರ, (ಆಗಸ್ಟ್ ೩೧-ಸೆಪ್ಟೆಂಬರ್,೨)ರಂದು, 'ಅಮೆರಿಕದ ಸಂಯುಕ್ತ ಸಂಸ್ಥಾನ'ದ, ಜಾರ್ಜಿಯಾ ರಾಜ್ಯದ ಅಟ್ಲಾಂಟ ನಗರದಲ್ಲಿ '೭ ನೆಯ ಅಕ್ಕ ಸಮ್ಮೇಳನ'ವನ್ನು ಆಯೋಜಿಸಲಾಗುತ್ತಿದೆ. ನೃಪತುಂಗ ಕನ್ನಡ ಕೂಟ, ಹಾಗೂ ಅಕ್ಕ ಒಕ್ಕೂಟ ಜೊತೆಗೂಡಿ, ನಡೆಸಿಕೊಡಲಿರುವ ಈ 'ಮೆಗಾ ಇವೆಂಟ್' ಕರ್ನಾಟಕದ ಸಂಗೀತ, ನೃತ್ಯ, ಜನಪದ ಸಾಹಿತ್ಯ, ಹಾಗೂ ಸಂಸ್ಕೃತಿಗಳನ್ನು ವಿಶ್ವದ ಕನ್ನಡಿಗರೊಡನೆ ಹಂಚಿಕೊಳ್ಳುವುದಲ್ಲದೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಕನ್ನಡದ ಯುವ-ಜನತೆಗೆ ಪರಿಚಯಿಸುವ ಬೃಹತ್ ಜವಾಬ್ದಾರಿಯನ್ನು ನಿಭಾಯಿಸಲಿದೆ.

೮ ನೆಯ 'ಅಕ್ಕ ವಿಶ್ವಕನ್ನಡ ಸಮ್ಮೇಳನ'[ಬದಲಾಯಿಸಿ]

'೮ ನೆಯ ಅಕ್ಕಾ-ವಿಶ್ವ ಕನ್ನಡ ಸಮ್ಮೇಳನ',೨೦೧೪ ರ ಆಗಸ್ಟ್ ೨೯, ೩೦, ಹಾಗು ೩೧ ರಂದು ಬಹಳ ಅದ್ಧೂರಿಯಿಂದ ನಡೆಯಿತು. 'ಅಕ್ಕಾ ಒಕ್ಕೂಟ', ಕರ್ನಾಟಕದ ಹಲವಾರು ಬಡ ಸಂಸ್ಥೆಗಳಿಗೆ ಆರ್ಥಿಕವಾಗಿ ಉಪಕಾರವನ್ನು ಮಾಡಲು ಹಣ ಸಂಗ್ರಹಣೆಯ ಕಾರ್ಯವನ್ನು ಸಮರ್ಪಕವಾಗಿ ಹಣ ಸಂಗ್ರಹ ಮಾಡಿದೆ. [೧] ಉತ್ತರ ಅಮೇರಿಕಾದ ಉದ್ದಗಲಕ್ಕೂ ಚಂದಾ ಹಣವನ್ನು ಸಂಗ್ರಹಿಸುವ ಮಹತ್ಕಾರ್ಯದಲ್ಲಿ ಕನ್ನಡಿಗರೆಲ್ಲ ತಮ್ಮ ಧನಸಹಾಯ ಮಾಡುವ ಮೂಲಕ ಸಹಕರಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ಅಕ್ಕಾ ಅಧ್ಯಕ್ಷ,