ಅಬ್ಬಿನೀರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬ್ಬಿನೀರು ಪ್ರಕೃತಿಯ ಒಂದು ವರ. ಇದು ವರ್ಷವಿಡೀ ದೊರೆತಾಗ ನೀರಿನ ಸಮಸ್ಯೆಗಳೇ ಬಗೆಹರಿದಂತೆ.ನೀರಿನ ಒರತೆ ಹೆಚ್ಚಾಗಿದ್ದು ಅದು ಸಹಜವಾಗಿ ಮುಂದೆ ಮುಂದೆ ಹರಿದು ಬರುವ ನೀರಿಗೆ "ಅಬ್ಬಿನೀರು" ಎಂದು ಹೆಸರು. ಇದನ್ನು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ನೋಡಬಹುದು. ಅಬ್ಬಿನೀರು ಕೆಲವು ಕಡೆ ವರ್ಷವಿಡೀ ದೊರೆತರೆ ಮತ್ತು ಕೆಲವುಕಡೆ ಮಳೆಗಾಲದಲ್ಲಿ ಮಾತ್ರ ದೊರೆಯುತ್ತದೆ.ಹಿಂದೆ ಈ ನೀರನ್ನು ಬಿದುರಿನ ಕಿರುದೋಣಿಗಳ ಮೂಲಕ ಪಡೆಯುತ್ತಿದ್ದರು. ಈಗೀಗ ಪ್ಲಾಸ್ಟಿಕ್ ಕೊಳವೆಗಳ ಮೂಲಕ ಪಡೆಯುತ್ತಿದ್ದಾರೆ.ಒಂದು ಮನೆಯಿಂದ ಹತ್ತು ಅಥವಾ ನೂರು ಮನೆಗಳ ಸದಸ್ಯರೂ ಈ ಅಬ್ಬಿನೀರನ್ನು ಬಳಸುತ್ತಿದ್ದಾರೆ. ಅಬ್ಬಿನೀರು ಅನೇಕ ಸಮಸ್ಯೆಗಳನ್ನೂ ಹುಟ್ಟುಹಾಕಬಹುದು. ಕೆಲವು ಬಾರಿ ಹರಿಯುವ ನೀರು ಮಲಿನವಾಗಿರಬಹುದು. ಕೆಲವು ಬಾರಿ ನೀರಿನ ಹಂಚಿಕೆ ಬಗ್ಗೆಯೇ ಜಗಳಗಳಾಗಬಹುದು. ಆದ್ದರಿಂದ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಗಳು ಬಾರದಂತೆ ಬಳಸಬೇಕು.