ಅಣು ಸ್ಥಾವರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸ್ವಿಟ್ಜರ್‍ಲ್ಯಾಂಡ್ನಲ್ಲಿ ಪರಿಶೋಧನೆಗಾಗಿ ಉಪಯೋಗಿಸಲ್ಪಡುವ ಕ್ರೊಕಸ್ ಸ್ಥಾವರದ ತಿರುಳಿನ ಚಿತ್ರ

ಅಣು ಸ್ಥಾವರವು ಪರಮಾಣು ಪ್ರಕ್ರಿಯೆಗಳನ್ನು ನಿಯಂತ್ರಿತವಾಗಿ ನಡೆಸಲು ಬಳಸಲಾಗುವ ವ್ಯವಸ್ಥೆ. ಅಣುಬಾಂಬ್ನಲ್ಲಿ ಈ ಅಣು ವಿದಳನ ಪ್ರಕ್ರಿಯೆಯು ನಿಗ್ರಹವಿಲ್ಲದೆ ನಡೆಯುವುದರಿಂದ ಅ ಶಕ್ತಿಯ ಉಪಯೋಗ ಪಡೆಯಲಾಗುವುದಿಲ್ಲ. ಆದರೆ ಅಣು ಸ್ಥಾವರಗಳಲ್ಲಿ ನಿಯಂತ್ರಣದಿಂದ ಈ ಶಕ್ತಿಯನ್ನು ವಿದ್ಯತ್ಛಕ್ತಿಯಾಗಿ ಪರಿವರ್ತಿಸಬಹುದಾಗಿದೆ.

ಅಣು ವಿದಳನ ಪ್ರಕ್ರಿಯೆಯೆಂದರೆ ನ್ಯೂಕ್ಲಿಯಸ್ಸನ್ನು ಅದರ ಭಾಗಗಳಾಗಿ(ಹಗುರ ನ್ಯೂಕ್ಲಿಯೈಗಳಾಗಿ) ಮಾರ್ಪಡಿಸುವ ಪ್ರಕ್ರಿಯೆ. ಇದರಲ್ಲಿ ನವಜಾತ ನ್ಯೂಟ್ರಾನುಗಳೂ(Free neutrons) ಬಿಡುಗಡೆಗೊಳ್ಳುತ್ತವೆ. ಈ ಪ್ರಕ್ರಿಯೆ ಫೋಟಾನುಗಳನ್ನು ಬಿಡುಗಡೆ ಮಾಡುತ್ತದೆ(ಗಾಮಾ ಕಿರಣಗಳ ರೂಪದಲ್ಲಿ) ಅಣು ವಿದಳನವು [ಬಹಿರ್ ಉಷ್ಣ](exothermic reaction)ಪ್ರಕ್ರಿಯೆಯಾಗಿರುವುದರಿಂದ ಅಪಾರ ಪ್ರಮಾಣದ ಶಕ್ತಿಯನ್ನು ವಿದ್ಯುತ್ಕಾಂತೀಯ ಕಿರಣಗಳ ರೂಪದಲ್ಲಿ ಮತ್ತು ಚಲನಶಕ್ತಿಯ ರೂಪದಲ್ಲಿ ಬಿಡುಗಡೆ ಮಾಡುತ್ತದೆ.

ಅಣು ವಿದಳನ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯನ್ನು ಮತ್ತೆ ವಿದಳನ ಪ್ರಕ್ರಿಯೆಗೆ ಬಳಸಿ ಅಣು ಬಾಂಬ್ ತಯಾರಿಸಬಹುದು. ಅಣು ಸ್ಥಾವರಗಳಲ್ಲಿ ಬಿಡುಗಡೆಯಾಗುವ ಮತ್ತು ಹೀರಿಕೊಳ್ಳುವ ನ್ಯೂಟ್ರಾನುಗಳು ಸಮ ಪ್ರಮಾಣದಲ್ಲಿರುತ್ತವೆ.

ವೈಯಕ್ತಿಕ ಉಪಕರಣಗಳು