ಅಕ್ಷರಬ್ರಹ್ಮಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತೆ

Aum
ಅಧ್ಯಾಯಗಳು
  1. ಅರ್ಜುನ ವಿಷಾದ ಯೋಗ
  2. ಸಾಂಖ್ಯಯೋಗಃ
  3. ಕರ್ಮಯೋಗಃ
  4. ಜ್ಞಾನಯೋಗಃ
  5. ಸಂನ್ಯಾಸಯೋಗಃ
  6. ಧ್ಯಾನಯೋಗಃ
  7. ಜ್ಞಾನವಿಜ್ಞಾನಯೋಗಃ
  8. ಅಕ್ಷರಬ್ರಹ್ಮಯೋಗಃ
  9. ರಾಜವಿದ್ಯಾರಾಜಗುಹ್ಯಯೋಗಃ
  10. ವಿಭೂತಿಯೋಗಃ
  11. ವಿಶ್ವರೂಪದರ್ಶನಯೋಗಃ
  12. ಭಕ್ತಿಯೋಗಃ
  13. ಕ್ಷೇತ್ರಕ್ಷೇತ್ರಜ್ಞಯೋಗಃ
  14. ಗುಣತ್ರಯವಿಭಾಗಯೋಗಃ
  15. ಪುರುಷೋತ್ತಮಯೋಗಃ
  16. ದೈವಾಸುರಸಂಪದ್ವಿಭಾಗಯೋಗಃ
  17. ಶ್ರದ್ಧಾತ್ರಯವಿಭಾಗಯೋಗಃ
  18. ಮೋಕ್ಷಸಂನ್ಯಾಸಯೋಗಃ

ಅರ್ಜುನ ಉವಾಚ:
ಕಿಂ ತದ್ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ।।೧।।

ಅರ್ಜುನನು ಇಂತೆಂದನು - ಹೇ ಪುರುಷೋತ್ತಮ! ಆ ಬ್ರಹ್ಮವು ಯಾವುದು? ಅಧ್ಯಾತ್ಮವು ಯಾವುದು? ಕರ್ಮವು ಯಾವುದು? ಯಾವುದಕ್ಕೆ ಅಧಿಭೂತವೆಂದು ಹೆಸರು? ಅಧಿದೈವವೆಂಬುದು ಯಾವುದು? Arjuna says: O Purushottama, What is that Brahma? What about the Individual Self(ಅಧ್ಯಾತ್ಮ)? What is action(ಕರ್ಮ)? And what is declared to be the physical region(ಅಧಿಭೂತ) and what is divine(ಅಧಿದೈವ)?

ಅಧಿಯಜ್ಞಃ ಕಥಂ ಕೋತ್ರ ದೇಹೇಸ್ಮಿನ್ಮದುಸೂದನ ।
ಪ್ರಯಾಣಕಾಲೇ ಚ ಕಥಂ ಜ್ಞೇಯೋಸಿ ನಿಯತಾತ್ಮಭಿಃ ।।೨।।

ಈ ದೇಹದಲ್ಲಿ ಅಧಿಯಜ್ಞನು ಯಾರು? ಅವನು ಹೇಗೆ ಅಧಿಯಜ್ಞ? ಮರಣಕಾಲದಲ್ಲಿ ನಿಯತಾತ್ಮರು ನಿನ್ನನ್ನು ಸ್ಮರಿಸಿಕೊಳ್ಳುವುದು ಹೇಗೆ? And how and who is Adhiyajna, the entity concerned with sacrifice here in this body? And how at the time of death are you to be known by those who are self-controlled?

ಶ್ರೀ ಭಗವಾನುವಾಚ:
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ।।೩।।

ಭಗವಂತನು ಹೇಳಿದನು - ಪರಮಶ್ರೇಷ್ಠವಾಗಿದ್ದು ನಾಶವಾಗದ(ಅಕ್ಷರ) ಯಾವ ತತ್ತ್ವ ಉಂಟೋ ಅದೇ ಬ್ರಹ್ಮ. ಪ್ರತಿಯೊಂದು ದೇಹದಲ್ಲಿಯೂಆ ಬ್ರಹ್ಮದ ಭಾವ ಎಂದರೆ ಅವಸ್ಥಾನವೇ ಎಂದರೆ ಪ್ರತ್ಯಗ್ರೂಪವಾದ ಬ್ರಹ್ಮವೇ ಅಧ್ಯಾತ್ಮವೆನಿಸುತ್ತದೆ. ಪ್ರಾಣಿಗಳ ಉತ್ಪತ್ತಿಗೆ ಕಾರಣವಾದ ಹವಿಸ್ತ್ಯಾಗವು ಕರ್ಮವೆನಿಸುತ್ತದೆ.

ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವಕಮ್ ।
ಅಧಿಯಜ್ಞೋಹಮೇವಾತ್ರ ದೇಹೇ ದೇಹಭೃತಾಂ ವರ ।।೪।।

ಪ್ರಾಣಿಗಳಿಗೆ ಸಂಬಂಧಿಸಿದ ನಶ್ವರಭಾಗವೇ - ಎಂದರೆ ದೇಹವೇ ಅಧಿಭೂತವು. ಪುರುಷನೇ ಅಧಿದೈವತ. ದೇಹಧಾರಿಗಳಲ್ಲಿ ಉತ್ತಮವಾದ ಅರ್ಜುನ, ಈ ದೇಹದಲ್ಲಿ ನೆಲೆಸಿರುವ ವಿಷ್ಣುವಾದ ನಾನೇ ಅಧಿಯಜ್ಞನಾಗಿದ್ದೇನೆ. The physical region(ಅಧಿಭೂತ) is the perishable existence, and Purusha or the soul is the divine region(ಅಧಿದೈವತ). The Adhiyajna(entity concerned with sacrifice) is Me, here in the body, O best of the embodied(ದೇಹಭೃತಾಂ ವರ).

ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಲೇವರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ।।೫।।

ಯಾವತನು ಕಡೆಯ ಕಾಲದಲ್ಲಿ ನನ್ನನ್ನೇ ಸ್ಮರಿಸುತ್ತ ಕಳೇಬರವನ್ನು ತ್ಯಜಿಸಿ ಹೋಗುವನೋ ಅವನು ನನ್ನನ್ನು ಸೇರಿಕೊಳ್ಳುವನು. ಇದರಲ್ಲಿ ಯಾವ ಸಂಶಯವೂ ಇಲ್ಲ. And, whoso at the time of death thinking of Me alone, leaves the body and goes forth, he reaches My being; there is no doubt in this.

ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ ।
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ ।।೬।।

ಕೌಂತೇಯ, ಮನುಷ್ಯನು ಕಡೆಗಾಲದಲ್ಲಿ ಯಾವ ಯಾವ ದೇವತಾವಿಶೇಷವನ್ನು ಸ್ಮರಿಸಿಕೊಳ್ಳುತ್ತ ದೇಹವನ್ನು ಬಿಡುವನೋ, ಅವನು ಆಯಾ ದೇವತೆಯನ್ನೇ ಸೇರಿಕೊಳ್ಳುತ್ತಾನೆ. ಅದೇಕೆ ಸ್ಮರಣೆಗೆ ಬರುತ್ತದೆಯೆಂದರೆ, ಅವನು ಸರ್ವದಾ ಆ ದೇವತೆಯನ್ನೇ ನೆನೆಯುತ್ತೆ ಅದರಿಂದ ವಾಸಿತಚಿತ್ತನಾಗಿರುತ್ತಾನೆ. Thinking of whatever being a man leaves his body, that being alone, O Arjuna will be reached by one, by whom that being has been constantly dwelt upon. A man reaches, on his death, that being or deity which has been the subject of his constant meditation.

ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ ।।೭।।

ಆದ್ದರಿಂದ ಎಲ್ಲಾಕಾಲದಲ್ಲಿಯೂ ನನ್ನನ್ನು ಸ್ಮರಿಸುತ್ತಿರು. ನಿನಗೆ ಸ್ವಧರ್ಮವಾದ ಯುದ್ಧವನ್ನ್ನು ಮಾಡು. ಮನೋಬುದ್ಧಿಗಳನ್ನು ನನ್ನಲ್ಲಿಯೇ ಅರ್ಪಿಸಿದವನಾಗಿ ಸಂದೇಹವಿಲ್ಲದೆ ನನ್ನನ್ನು ಸೇರಿಕೊಳ್ಳುವೆ. Therefore at all times meditate on Me and fight(as befits Arjuna's Dharma): with mind and reason fixed on Me, you will doubtless come to Me alone.

ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ।।೮।।

ಪಾರ್ಥ! ಸತತವಾಗಿ ನನ್ನನ್ನೇ ಧ್ಯಾನಿಸುವ ಅಭ್ಯಾಸವೆಂಬ ಯೋಗದಿಂದ ಕೂಡಿದವನು ಬೇರೆಕಡೆ ಹರಿಯದ ಮನಸ್ಸಿನಿಂದ, ಪರಮಪುರುಷವನ್ನು ಧ್ಯಾನಿಸುತ್ತಿದ್ದರೆ ಆ ದಿವ್ಯಪುರುಷನನ್ನು ಸೇರಿಕೊಳ್ಳುತ್ತಾನೆ. Meditating with the mind engaged in the Yoga of constant practice, not passing over to anything else, one goes to the Supreme Purusha, the Resplendent.

ಕವಿಂ ಪುರಾಣಮನುಶಾಸಿತಾರಮ್ ಅಣೋರಣೀಯಾಂಸಮನುಸ್ಮರೇದ್ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಮ್ ಆದಿತ್ಯವರ್ಣ್ಂ ತಮಸಃ ಪರಸ್ತಾತ್ ।।೯।।

ಕವಿಯೂ ಎಂದರೆ ಕ್ರಾಂತದರ್ಶಿಯಾದ ಸರ್ವಜ್ಞನೂ ಚಿರಂತನನೂ ಸರ್ವಜಗತ್ತಿನ ನಿಯಾಮಕನೂ ಅಣುವಿಗಿಂತ ಸೂಕ್ಷ್ಮತರನೂ ಸಮಸ್ತ ಕರ್ಮಫಲವನ್ನು ವಿಂಗಡಿಸಿ ನೀಡತಕ್ಕವನೂ ಊಹಿಸಲು ಶಕ್ಯವಿಲ್ಲದೆ ಅಚಿಂತ್ಯಸ್ವರೂಪನೂ ಸೂರ್ಯನಂತೆ ನಿತ್ಯಪ್ರಕಾಶನೂ ಅಜ್ಞಾನವೆಂಬ ಕತ್ತಲೆಯ ಆಚೆಗಿರವನೂ ಆದ ಪರಮಪುರುಷನನ್ನು ಆ ಯೋಗಿಯು ಸೇರಿಕೊಳ್ಳುತ್ತಾನೆ.

ಪ್ರಯಾಣಕಾಲೇ ಮನಸಾಚಲೇನ ಭಕ್ತ್ಯಾಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ।।೧೦।।

ಪ್ರಯಾಣಕಾಲದಲ್ಲಿ ಎಂದರೆ ಮರಣಕಾಲದಲ್ಲಿ ಅಚಲವಾದ ಮನಸ್ಸಿನಿಂದಲೂ ಭಕ್ತಿಯಿಂದಲೂ ಯೋಗಬಲದಿಂದಲೂ ಯುಕ್ತನಾಗಿ, ಭ್ರೂಮಧ್ಯದಲ್ಲಿ ಪ್ರಾಣವಾಯುವನ್ನು ಸರಿಯಾಗಿ ನಿಲ್ಲಿಸಿ, ಯೋಗಿಯ ಪ್ರಕಾಶಮಯವಾದ ಆ ಪರಮಪುರುಷನನ್ನು ಸೇರಿಕೋಳ್ಳುತ್ತಾನೆ. 9-10: Whoever meditates on the Sage, the Ancient, the Ruler, subtler than the subtlest, the Dispenser of all, that which has an unthinkable nature, glorious like the Sun and beyond the darkness, at the time of one's death, with a steady mind endued with devotion and strength of Yoga, fixing the Prana between one's eyebrows, one reaches that Supreme Purusha that is Resplendent.

ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ।।೧೧।।

ಯಾವ ಪದವನ್ನು ಅಕ್ಷರವೆಂದು ವೇದವಿದರು ಹೇಳುತ್ತಾರೋ ರಾಗರಹಿತರಾದ ಯತಿಗಳು ಯಾವುದನ್ನು ಪ್ರವೇಶಿಸುವರೋ ಯಾವುದನ್ನು ತಿಳಿಯಲು ಬಯಸತಕ್ಕವರು ಗುರುಶುಶ್ರೂಷಾದಿಬ್ರಹ್ಮಚರ್ಯವ್ರತವನ್ನು ಪಾಲಿಸುವರೋ ಪದವನ್ನು ನಿನಗೆ ಸಂಕ್ಷೇಪವಾಗಿ ತಿಳಿಸುವೆನು. That imperishable objective which the knowers of the Vedas declare, which the persevering and those free of passions enter, that desiring which they lead a life of Brahmacharis, that goal will I expound to you with brevity.

ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ ।
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ ।।೧೨।।

ಇಂದ್ರಿಯಗಳೆಂಬ ಎಲ್ಲ ದ್ವಾರಗಳನ್ನು ತಡೆಹಿಡಿದು, ಮನಸ್ಸನ್ನು ಹೃದಯಕಮಲದಲ್ಲಿ ನಿರೋಧಿಸಿ ತನ್ನ ಪ್ರಾಣವಾಯುವನ್ನು ನಡುನೆತ್ತಿಗೆ ಏರಿಸಿ, ಈ ಪ್ರಕಾರದ ಯೋಗಧಾರಣವನ್ನು ಅವಲಂಬಿಸಿದವನಾಗಿ -

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ।।೧೩।।

ಓಂ ಎಂಬ ಏಕಾಕ್ಷರದ ಶಬ್ದಬ್ರಹ್ಮವನ್ನು ಉಚ್ಚರಿಸುತ್ತ, ನನ್ನನ್ನು ಸ್ಮರಿಸುತ್ತ ಯಾವತನು ದೇಹತ್ಯಾಗ ಮಾಡಿ ಪ್ರಯಾಣಮಾಡುತ್ತಾನೋ ಅವನು ಪರಮ ಗತಿಯನ್ನೈದುತ್ತಾನೆ. 12-13: Having closed all the gates(senses), having confined the mind in the heart, having fixed one's Prana in the head, engaged in firm Yoga, uttering Brahma as the one-syllabled Om, thinking of Me, whoso departs one's body, he reaches the Supreme Goal.

ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ।
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ।।೧೪।।

ಅರ್ಜುನ, ಇನ್ನೊಂದು ವಸ್ತುವಿನಲ್ಲಿ ಚಿತ್ತವನ್ನಿಡದೆ ಯಾವತನು ನನ್ನನ್ನು ಸತತವಾಗಿ ದೀರ್ಘಕಾಲದವರೆಗೆ ಧ್ಯಾನಿಸುತ್ತಲೇ ಇರುತ್ತಾನೋ ಅಂತಹ ನಿತ್ಯಯುಕ್ತನಾದ ಯೋಗಿಗೆ ನಾನು ಸುಲಭವಾಗಿ ದೊರೆಯುತ್ತೇನೆ. Arjuna, whoso constantly and for a long time thinks of Me, to that person, the ever-devout Yogi, I am easily accessible.

ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ ।
ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ।।೧೫।।

ಈಶ್ವರನಾದ ನನ್ನನ್ನು ಸೇರಿ ಮೋಕ್ಷವೆಂಬ ಪರಮಸಿದ್ಧಿಯನ್ನು ಪಡೆದ ಮಹಾತ್ಮರು ನಾನಾ ದುಃಖಗಳಿಗೆ ಆಗರವೂ, ಇದ್ದಂತೆ ಇರದೆ ಅಶಾಶ್ವತವೂ ಆದ ಪುನರ್ಜನ್ಮವನ್ನು ಪಡೆಯುವುದಿಲ್ಲ. Having attained to Me, they do not again attain birth which is the seat of pain(ದುಃಖಾಲಯಂ) and is not eternal(ಅಶಾಶ್ವತಂ), they have reached the highest perfection.

ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ ।
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ।।೧೬।।

ಅರ್ಜುನ, ಬ್ರಹ್ಮಲೋಕವನ್ನು ಮೊದಲ್ಗೊಂಡು ಸಮಸ್ತಲೋಕಗಳೂ ಮರಳಿ ಭೂಲೋಕಕ್ಕೆ ತಂದಿಳಿಸಿತಕ್ಕವೇ. ಆದರೆ ನನ್ನನ್ನು ಸೇರಿದ ಬಳಿಕ ಪುನರ್ಜನ್ಮವಿಲ್ಲ. All worlds including that of Brahma are subject to returning again, O Arjuna, but on reaching Me, there is no rebirth.

ಸಹಸ್ರಯುಗಪರ್ಯಂತಮಹರ್ಯದ್ಬ್ರಹ್ಮಣೋ ವಿದುಃ ।
ರಾತ್ರಿಂ ಯುಗಸಹಸ್ರಾಂತಾಂ ತೇಹೋರಾತ್ರವಿದೋ ಜನಾಃ ।।೧೭।।

ಹಗಲು ರಾತ್ರಿಗಳ ಕಾಲಸಂಖ್ಯೆಯನ್ನು ಬಲ್ಲ ಶಾಸ್ತ್ರಜ್ಞರು ಬ್ರಹ್ಮದೇವನ ಒಂದು ಹಗಲು ಒಂದು ಸಾವಿರ ಯುಗಪರ್ಯಂತವೆಂದೂ ಹಾಗೆಯೇ ರಾತ್ರಿಯೂ ಒಂದು ಸಾವಿರ ಯುಗಪರ್ಯಂತವೆಂದು ತಿಳಿದಿದ್ದಾರೆ. They - those people who know day and night - know that the day of Brahma is a thousand yugas long and the night is also a thousand yugas long.

ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ ।
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಿಕೇ ।।೧೮।।

ಬ್ರಹ್ಮದೇವನಿಗೆ ಹಗಲಾದಾಗ ಎಂದರೆ - ಅವನ ಎಚ್ಚರದ ಕಾಲದಲ್ಲಿ ಅವ್ಯಕ್ತದಿಂದ ಸಮಸ್ತ ವ್ಯಕ್ತಿಗಳೂ ಉದ್ಭವಿಸುತ್ತವೆ. ಅವನಿಗೆ ರಾತ್ರಿ ಆದಾಗ ಈ ವ್ಯಕ್ತಿಗಳೆಲ್ಲವೂ ಅದೇ ಅವ್ಯಕ್ತದಲ್ಲಿ ಅಡಗಿಹೋಗುತ್ತವೆ. From the Unmanifested, all the manifestations proceed at the coming of day; at the coming of night, they dissolve there, in what is called the Unmanifested.

ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ ।
ರಾತ್ರ್ಯಾಗಮೇ ಅವಶಃ ಪಾರ್ಥ ಪ್ರಭವತ್ಯಹರಾಗಮೇ ।।೧೯।।

ಅದೇ ಈ ಸ್ಥಾವರಜಂಗಮಗಳೆಂಬ ಭೂತಸಮುದಾಯವು ಅವಶವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದೆ ಹುಟ್ಟಿ ಹುಟ್ಟಿ ಬ್ರಹ್ಮ್ದೇವನಿಗೆ ರಾತ್ರಿಯಾದಕೂಡಲೆ ಲಯವಾಗುತ್ತದೆ. ಅರ್ಜುನ, ಮತ್ತೆ ಹಗಲಾದೊಡನೆ ಕಾಣಿಸಿಕೊಳ್ಳುತ್ತದೆ. This same multitude of beings having come into being again and again, is dissolved at the coming of night, not of their will, and comes forth at the coming of day.

ಪರಸ್ತಸ್ಮಾತ್ತು ಭಾವೋನ್ಯೋ ಅವ್ಯಕ್ತೋಅವ್ಯಕ್ತಾತ್ ಸನಾತನಃ ।
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ।।೨೦।।

ಆದರೆ ಆ ಅವ್ಯಕ್ತವೆಂಬ ಅವಿದ್ಯೆಗಿಂತಲೂ ಬೇರೆ ಬಗೆಯದಾದ ಸನಾತನವಾದ ಇನ್ನೊಂದ ಅವ್ಯಕ್ತವೆಂಬ ಭಾವಪದಾರ್ಥ ಉಂಟು. ಸಕಲಭೂತಗಳು ನಾಶವಾದರೂ ಅದಕ್ಕೆ ನಾಶವೆಂಬುದಿಲ್ಲ. But that other eternal Unmanifested Being, distinct from this Unmanifested, He will not perish when all creatures perish.

ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ।।೨೧।।

ಆ ಅವ್ಯಕ್ತವನ್ನೇ ಅಕ್ಷರವೆಂದು ಹಿಂದೆ ಕರೆದಿದೆ. ಅದೇ ಪ್ರಾಣೀಗಳ ಪರಮಗತಿಯೆಂದು ಹೇಳುತ್ತಾರೆ. ಏಕೆಂದರೆ ಆ ಭಾವವನ್ನು ಪಡೆದುಕೊಂಡರೆ ಸಂಸಾರಕ್ಕೆ ಮರಳಿ ಬರುವುದಿಲ್ಲ. ಅದೇ ನನ್ನ ಪರಮಧಾಮ.

ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ।।೨೨।।

ಅಕ್ಷರನೆಂಬ ಆ ಪರಮಪುರುಷನು, ಪಾರ್ಥ, ಕೇವಲ ಆತ್ಮವಿಷಯಕವಾದ ಭಕ್ತಿಯೆಂಬ ಜ್ಞಾನದಿಂದ ದೊರೆಯುತ್ತಾನೆ. ಈ ಭೂತಗಳೆಲ್ಲವೂ ಆತನೊಳಗೆ ಸೇರಿಕೊಂಡಿವೆ. ಆತನು ಎಲ್ಲೆಲ್ಲಿಯೂ ಸರ್ವವನ್ನೂ ವ್ಯಾಪಿಸಿದ್ದಾನೆ.

ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ।।೨೩।।

ಹೇ ಭರತಕುಲೋತ್ತಮ, ಯೋಗಿಗಳು ಯಾವ ಕಾಲದಲ್ಲಿ ಪ್ರಯಾಣ ಮಾಡಿದರೆ ಅಣಾವೃತ್ತಿಯನ್ನು ಪಡೆಯುತ್ತಾರೋ ಮತ್ತು ಯಾವ ಕಾಲದಲ್ಲಿ ಮೃತರಾದರೆ ಅವೃತ್ತಿಯನ್ನು ಎಂದರೆ ಪುನರ್ಜನ್ಮವನ್ನು ಪಡೆಯುತ್ತಾರೋ ಆ ಕಾಲವನ್ನು ಹೇಳುವೆನು.

ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ।।೨೪।।

ಅಗ್ನಿ, ಜ್ಯೋತಿ, ಹಗಲು, ಶುಕ್ಲಪಕ್ಷ, ಉತ್ತರಾಯಣದ ಆರು ತಿಂಗಳು - ಇವುಗಳಲ್ಲಿ ಪ್ರಯಾಣಮಾಡುವ ಬ್ರಹ್ಮಜ್ಞರಾದ ಜನರು ಕ್ರಮವಾಗಿ ಬ್ರಹ್ಮವನ್ನು ಸೇರುತ್ತಾರೆ.

ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ ।।೨೫।।

ಧೂಮ, ರಾತ್ರಿ, ಕೃಷ್ಣಪಕ್ಷ, ದಕ್ಷಿಣಾಯನದ ಆರು ತಿಂಗಳು - ಇವುಗಳಲ್ಲಿ ಪ್ರಯಾಣಮಾಡಿದ ಯೋಗಿಯು ಚಂದ್ರನ ಜ್ಯೋತಿಯನ್ನು ಸೇರಿ ಮತ್ತೆ ಹಿಂದಿರುಗಿ ಪುನರ್ಜನ್ಮವನ್ನು ಪಡೆಯುವನು.

ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ ।
ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನಃ ।।೨೬।।

ಶುಕ್ಲ, ಕೃಷ್ಣಗಳೆಂಬ ಈ ಎರಡು ಗತಿಗಳು ಜಗತ್ತಿಗೆ ಶಾಶ್ವತವಾಗಿರುತ್ತವೆ. ಇವುಗಳಲ್ಲಿ ಒಂದರಿಂದ ಹೋದವನು ಪುನರ್ಜನ್ಮವನ್ನು ಪಡೆಯುವುದಿಲ್ಲ. ಇನ್ನೊಂದರಿಂದ ಹೋದವನು ಮತ್ತೆ ಹಿಂದಿರುಗಿ ಬರುತ್ತಾನೆ.

ನೈತೇ ಸೃತೀ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ।।೨೭।।

ಅರ್ಜುನ, ಈ ಎರಡು ಸೃತಿಗಳು ಎಂದರೆ ಮಾರ್ಗಗಳು ಸರಿಯಾಗಿ ತಿಳಿದುಕೊಂಡಿದ್ದರೆ - ಎಂದರೆ ದೇವಯಾನದಲ್ಲಿ ಹೋದವರಿಗೆ ಸಂಸಾರವಿಲ್ಲವೆಂದೂ ಪಿತೃಯಾಣದಲ್ಲಿ ಹೋದರೆ ಸಂಸಾರ ಉಂಟೆಂದೂ ಮನವರಿಕೆ ಮಾಡಿಕೊಂಡಿದ್ದರೆ, ಯಾವ ಯೋಗಿಯೂ ಮೋಹಕ್ಕೆ ಈಡಾಗುವುದಿಲ್ಲ. ಆದ್ದರಿಂದ ನೀನು ಸಮಾಹಿತನಾಗಿರು.

ವೇದೇಷು ಯಜ್ಞೇಷು ತಪಃಸು ಚೈವ ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ।।೨೮।।

ನಿನ್ನ ಏಳು ಪ್ರಶ್ನೆಗಳಿಗೆ ಉತ್ತರವಾದ ಇದನ್ನು ಅರಿತುಕೊಂಡ ಯೋಗಿಯು ವೇದಾಧ್ಯಯನ, ಯಜ್ಞಾನುಷ್ಠಾನ, ತಪಶ್ಚರ್ಯೆ, ಐಶ್ವರ್ಯದಾನ - ಇವನ್ನು ಚೆನ್ನಾಗಿ ಆಚರಿಸಿದರೆ ಯಾವ ಪುಣ್ಯಫಲವನ್ನೂ ದಾಟಿಹೋಗುವನು. ಅವನು ಪ್ರಕೃಷ್ಟವಾದ ಸ್ಥಾನವನ್ನು ಆದಿಕಾರಣವಾದ ಬ್ರಹ್ಮವನ್ನೈದುವನು.