ಅಂದಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಜಾಡಿಯಲ್ಲಿರುವ ವಸ್ತುಗಳ ಸಂಖ್ಯೆಯನ್ನು ನೋಡಿದೊಡನೆಯ ಹೇಳಲು ಸಾದ್ಯವಿಲ್ಲ. ಏಕೆಂದರೆ ಜಾಡಿಯ ಒನ್ನೊಂದು ಪಾರ್ಶ್ವ ನಮಗೆ ಕಾಣಿಸುವುದಿಲ್ಲ.ಆದರೆ ಕಾಣಿಸುವ ಪಾರ್ಶ್ವದಲ್ಲಿರುವ ವಸ್ತುಗಳನ್ನು ಲೆಕ್ಕಮಾಡಿದರೆ ಕಾಣಿಸದ ಪಾರ್ಶ್ವದಲ್ಲಿ ಸಮಾನ ಸಂಖ್ಯೆಯ ವಸ್ತುಗಳಿವೆ ಎಂದು ಅಂದಾಜು ಮಾಡಿ ಒಟ್ಟು ಸಂಖ್ಯೆಯನ್ನು ಹೇಳಬಹುದು.

ಅಂದಾಜು ಬೆಲೆ ಕಟ್ಟುವ ಅಥವಾ ನಿಶ್ಚಯಿಸುವ ಕ್ರಮ. ಇದು ಒಟ್ಟು ಮೊತ್ತ, ಪ್ರಮಾಣ ಅಥವಾ ಸನ್ನಿವೇಶ ಇವುಗಳನ್ನು ಮೂಲವಾಗಿಟ್ಟುಕೊಂಡು ನಿರ್ಧರಿಸುವ ಒಂದು ಸರಿಸುಮಾರಾದ ತೀರ್ಮಾನ ಮಾತ್ರ. ಎಂಜಿನಿಯರಿಂಗ್ ಉದ್ಯೋಗದಲ್ಲಿ ಅಂದಾಜು ಆಗಬೇಕಾಗಿರುವ ಒಂದು ಕೆಲಸಕ್ಕೆ, ಅದರ ನಕ್ಷೆಯ ಆಧಾರದ ಮೇಲೆ, ಈ ಕೆಲಸಕ್ಕೆ ಬೇಕಾಗುವ ಶರೀರಶ್ರಮ ಮತ್ತು ಸಾಮಗ್ರಿಗಳ ಪ್ರಮಾಣವನ್ನನುಸರಿಸಿ ಅದಕ್ಕಾಗುವ ಅಂದಾಜು ಖರ್ಚನ್ನು ತಿಳಿಸುವ ಕ್ರಮ ಬಳಕೆಯಲ್ಲಿದೆ. ನಿರ್ಮಾಣಕಾರ್ಯವೊಂದನ್ನು ಕೈಗೊಳ್ಳಲು ಬೇಕಾದ ಹಣವನ್ನು ಸಾರ್ವಜನಿಕ ನಿಧಿಯಿಂದ ಪಡೆಯುವ ಬಗ್ಗೆ ಸರ್ಕಾರಿ ಖಜಾನೆ ಅಥವಾ ಹಣಕಾಸಿನ ಇಲಾಖೆಗೆ ಪುರ್ವಭಾವಿ ತಿಳಿವಳಿಕೆ ನೀಡಲು ಈ ಅಂದಾಜನ್ನು (ಎಸ್ಟಿಮೇಟ್) ತಯಾರಿಸಲಾಗುವುದು. ಕೆಲವು ವೇಳೆ ನಿರ್ದಿಷ್ಟವಾದ ಒಂದು ಕೆಲಸವನ್ನು ಕೈಗೊಳ್ಳುವ ಕಂತ್ರಾಟುದಾರರು ಅಥವಾ ಇತರ ಕಸಬುದಾರರು, ತಾವು ಎಷ್ಟು ಖರ್ಚಿನಲ್ಲಿ ಆ ಕೆಲಸವನ್ನು ಮುಗಿಸುವುದಾಗಿ ತಿಳಿಸುವ ಒಂದು ಹೇಳಿಕೆಗೂ ಅಂದಾಜು ಎಂದು ಹೇಳಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಅಂದಾಜು&oldid=801955" ಇಂದ ಪಡೆಯಲ್ಪಟ್ಟಿದೆ