"ಮತ್ತೇಭವಿಕ್ರೀಡಿತ ವೃತ್ತ
ವಿಕಿಪೀಡಿಯ ಇಂದ
ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ "ಸಭರನಮಯ ಲಗು" ಗಣಗಳಿರುತ್ತವೆ. (ಲ-ಲಘು,ಗು-ಗುರು)
ಇದರ ಸೂತ್ರ ಪದ್ಯ ಹೀಗಿದೆ.
"ಸಭರಂನಂ ಮಯಲಾಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ"
ಇದರ ಪ್ರಸ್ತಾರ ವಿನ್ಯಾಸ ಹೀಗಿದೆ
U U _| _ U U| _ U _| U U U |_ _ _| U _ _| U _
ಸಭರಂ | ನಂಮಯ|ಲಾಗಮುಂ|ಬಗೆಗೊ|ಳಲ್ ಮತ್ತೇ|ಭ ವಿಕ್ರೀ|ಡಿತಂ
ಸಂಸ್ಕೃತ ವಾಙ್ಮಯದಲ್ಲಿ ಇದು ಹೆಚ್ಚೇನೂ ಬಳಕೆಯಲ್ಲಿಲ್ಲ. ಕನ್ನಡದಲ್ಲಿ ಮತ್ತೇಭ ವಿಕ್ರೀಡಿತದ ಪದ್ಯಗಳು ವಿಫುಲವಾಗಿ ಸಿಗುತ್ತವೆ.
ಇದು ಶಾರ್ದೂಲವಿಕ್ರೀಡಿತ ಪದ್ಯದ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ವ್ಯತ್ಪತ್ತಿಯಾಗುತ್ತದೆ.