"ಚಂಪಕಮಾಲಾವೃತ್ತ"

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: move to wikisource

ಚಂಪಕಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೧ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ನಜಭಜಜಜರ" ಗಣವಿನ್ಯಾಸವಿರುತ್ತದೆ.
ಇದಕ್ಕೆ "ಶಶಿವದನಾ" ಎಂಬ ಹೆಸರೂ ಇದೆ ಎಂದು ಪುರಾತನರ ಕೃತಿಗಳಲ್ಲಿ ತಿಳಿಯುತ್ತದೆ. ಸೂತ್ರ ಪದ್ಯ ಹೀಗಿದೆ
"ನಜಭಜಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲೆಯೆಂದಪರ್"
ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಚಂಪಕಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ
UUU|U_U |_ UU |U_U |U _U|U _U|_ U_|
ನಜಭ|ಜಜಂಜ|ರಂ ಬಗೆ|ಗೊಳ್ಳುತ್ತಿ|ರೆ ಚಂಪ|ಕಮಾಲೆ|ಯೆಂದಪರ್|
ಈ ವೃತ್ತದ ಮೊದಲ ಎರಡು ಲಘುಗಳನ್ನು ಒಂದು ಗುರುವಿನಿಂದ ಬದಲಾಯಿಸಿದಾಗ ಉತ್ಪಲಮಾಲಾವೃತ್ತವಾಗುತ್ತದೆ.
ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ವಿಪುಲವಾಗಿ ಬಳಕೆಯಾಗಿದೆ. ಸಂಸ್ಕೃತದಲ್ಲಿ ವಿರಳಪ್ರಚುರವಾದ ಛಂದಸ್ಸು..
ಉದಾಹರಣೆ:-
ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತರಸಪ್ರಸಾದಮು-
ಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ|
ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ
(ವಿಕ್ರಮಾರ್ಜುನವಿಜಯ ೧-೨)