"ಕರ್ನಾಟಕ ಮಲ್ಲ
Wikipedia ಇಂದ
ಮುಂಬೈನಿಂದಲೇ ನೇರವಾಗಿ ಪ್ರಕಾಶಿತಗೊಳ್ಳುವ ಏಕೈಕ, ದೈನಂದಿಕ ಕನ್ನಡ-ಪತ್ರಿಕೆ. ಇದಕ್ಕೆ ಶಾಖೆಗಳಿಲ್ಲ. ಮುಂಬೈ ಜನಜೀವನ, ಕ್ರೀಡೆ, ರಾಜಕೀಯ, ಸ್ಥಳೀಯ ವಾರ್ತೆಗಳು, ನಗೆ-ಹನಿ, ಕೆಲವು ಸಾಲುಗಳಲ್ಲಿ ಕೊಡುವ ತುಳು ನಗೆಬರಹಗಳು, ಅಂಕಣ, ಸಂಪಾದಕೀಯ, ಹಾಗೂ ಅತ್ಯುತ್ತಮ ವರ್ಣ-ಚಿತ್ರಗಳು-ಇವೇ ಅದರ ಪ್ರಮುಖ ಬಲಗಳು. ಕ್ರೀಡೆಯಬಗ್ಗೆ ಬರೆಯುವ ಲೇಖನಗಳಲ್ಲಿ ಬಳಸುವ ಕನ್ನಡ ಭಾಷೆ, ಅತ್ಯಂತ ಪ್ರಭಾವಿ ಹಾಗೂ ಮನೋರಂಜಕ. ಉದಯವಾಣಿಪತ್ರಿಕೆ ಇದಕ್ಕೆ ಸ್ವಲ್ಪ ಸ್ಪರ್ಧೆ ಕೊಟ್ಟರೂ, ಸ್ಥಳೀಯ ವಾರ್ತೆಗಳಿಗೆ ಕರ್ನಾಟಕಮಲ್ಲ ದ ತರಹದ ಆದ್ಯತೆ, ಬೇರೆ ಕನ್ನಡ ಪತ್ರಿಕೆಗಳಿಗಿಲ್ಲ. ಇದರ ಬೆಲೆಯೂ ಅತ್ಯಂತ ಸೋವಿಯಾಗಿದೆ. ಕೇವಲ ೨ ರೂಪಾಯಿಗಳು, ಮಾತ್ರ..

