"ಉತ್ಪಲ ಮಾಲಾ ವೃತ್ತ"
ವಿಕಿಪೀಡಿಯ ಇಂದ
ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು)
ಸೂತ್ರ ಪದ್ಯ ಹೀಗಿದೆ
"ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್"
ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ
_UU |_U_ | UUU|_UU | _UU | _U_ |U_
ಉತ್ಪಲ|ಮಾಲೆಯ|ಪ್ಪುದುಭ|ರಂನಭ|ಭಂರಲ|ಗಂ ನೆಗ |ಳ್ದಿರಲ್
ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ.