ಸ್ಮಾರ್ತ ಸಂಪ್ರದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಮಾರ್ತರ ಐದು ಪ್ರಧಾನ ದೇವತೆಗಳು

ಸ್ಮಾರ್ತ ಸಂಪ್ರದಾಯ ಪುರಾಣ ಶೈಲಿಯ ಸಾಹಿತ್ಯದೊಂದಿಗೆ ಬೆಳೆದು ವಿಸ್ತರಿಸಿದ ಹಿಂದೂ ಧರ್ಮದ ಚಳುವಳಿ. ಈ ಪೌರಾಣಿಕ ಧರ್ಮ ಐದು ದೇವತೆಗಳಿರುವ ಐದು ದೇಗುಲಗಳ ದೇಶೀಯ ಪೂಜೆಗೆ ಗಮನಾರ್ಹವಾಗಿದೆ, ಎಲ್ಲ ಐದು ದೇವತೆಗಳನ್ನು ಸಮಾನವಾಗಿ ಕಾಣಲಾಗುತ್ತದೆ - ವಿಷ್ಣು, ಶಿವ, ಗಣೇಶ, ಸೂರ್ಯ, ಮತ್ತು ದೇವಿ (ದುರ್ಗೆ). ಸ್ಮಾರ್ತ ಸಂಪ್ರದಾಯ ಹೆಚ್ಚು ಹಳೆಯ ಶ್ರೌತ ಸಂಪ್ರದಾಯದಿಂದ ಭಿನ್ನವಾಗಿದೆ, ಏಕೆಂದರೆ ಶ್ರೌತ ಸಂಪ್ರದಾಯವು ವಿಸ್ತಾರವಾದ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ಆಧರಿಸಿತ್ತು. ಸ್ಮಾರ್ತ ಸಂಪ್ರದಾಯವು ಅದ್ವೈತ ವೇದಾಂತದೊಂದಿಗೆ ಹೊಂದಿಕೆ ಯಾಗುತ್ತದೆ, ಮತ್ತು ಆದಿ ಶಂಕರರನ್ನು ತನ್ನ ಸ್ಥಾಪಕ ಅಥವಾ ಸುಧಾರಕನೆಂದು ಪರಿಗಣಿಸುತ್ತದೆ.