ಕಾತ್ಯಾಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾತ್ಯಾಯನನು (ಕ್ರಿ.ಪೂ. ೩ನೇ ಶತಮಾನ) ಪ್ರಾಚೀನ ಭಾರತದಲ್ಲಿ ಜೀವಿಸಿದ್ದ ಒಬ್ಬ ಸಂಸ್ಕ್ರತ ವ್ಯಾಕರಣಜ್ಞ, ಗಣಿತಜ್ಞ ಮತ್ತು ವೈದಿಕ ಪುರೋಹಿತನಾಗಿದ್ದನು. ಪಾಣಿನಿಯ ವ್ಯಾಕರಣದ ಒಂದು ವಿಸ್ತೃತ ವಿವರಣೆಯಾಗಿದ್ದ ವಾರ್ತಿಕ ಅವನ ಒಂದು ಕೃತಿ. ಪತಂಜಲಿಯ ಮಹಾಭಾಷ್ಯದ ಜೊತೆಗೆ, ಈ ಪಠ್ಯವು ವ್ಯಾಕರಣ ಕಟ್ಟಳೆಯ ಒಂದು ಪ್ರಮುಖ ಭಾಗವಾಯಿತು.