ಅಡುಗೆಪುಸ್ತಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಅಡುಗೆಪುಸ್ತಕ ವು, ಅಡುಗೆಮನೆಯ ನಿರ್ದೇಶಿಕೆಯಾಗಿದ್ದು, ಮಾದರಿಯಾಗಿ ಪಾಕವಿಧಾನಗಳ ಸಂಗ್ರಹವನ್ನು ಒಳಗೊಂಡಿರುತ್ತದೆ. ಆಧುನಿಕ ರೂಪಾಂತರಗಳು ವರ್ಣಮಯ ವಿವರಣೆಗಳನ್ನು ಹಾಗು ಉತ್ತಮ ಗುಣಮಟ್ಟದ ಪದಾರ್ಥಗಳ ಖರೀದಿ ಅಥವಾ ಬದಲಿ ಬಳಕೆಗಳ ಬಗ್ಗೆ ಸಲಹೆಯನ್ನು ಕೂಡ ಒಳಗೊಂಡಿರಬಹುದು. ವ್ಯಾಪಕವಾದ ವೈವಿಧ್ಯಮಯ ಪುಸ್ತಕಗಳು ಮನೆಯಲ್ಲಿ ಅಡುಗೆ ಮಾಡುವ ಕೌಶಲಗಳು, ಪ್ರಸಿದ್ಧ ಬಾಣಸಿಗರ ಪಾಕವಿಧಾನಗಳು ಹಾಗು ಪ್ರತಿಕ್ರಿಯೆಗಳು, ಸಾಂಸ್ಥಿಕ ಅಡುಗೆ ಮನೆ ಕೈಪಿಡಿಗಳು ಹಾಗು ದೊಡ್ಡ ಸಮುದಾಯಗಳಲ್ಲಿನ ಸಾಂಸ್ಕೃತಿಕ ವ್ಯಾಖ್ಯಾನವನ್ನು ಒಳಗೊಂಡಿರುತ್ತದೆ.

ಇತಿಹಾಸ[ಬದಲಾಯಿಸಿ]

ಫೋರ್ಮ್ ಆಫ್ ಕರಿಯ ೧೮ನೇ ಶತಮಾನದ ಆವೃತ್ತಿಯ ಶೀರ್ಷಿಕೆ ಪುಟ

ಮೊಟ್ಟ ಮೊದಲಿಗೆ ದಾಖಲೆಯಾಗಿರುವ ಅಡುಗೆ ಪುಸ್ತಕಗಳಲ್ಲಿ ಮುಖ್ಯವಾಗಿ ಹಾಟೆ ಪಾಕಪದ್ಧತಿ ಎಂದು ಕರೆಯಲ್ಪಡುವ ಪಾಕವಿಧಾನಗಳ ಪಟ್ಟಿಗಳಾಗಿ ಕಂಡುಬರುತ್ತದೆ, ಹಾಗು ಇವುಗಳನ್ನು ಸಾಮಾನ್ಯವಾಗಿ ಲೇಖಕರ ಮೆಚ್ಚಿನ ತಿನಿಸುಗಳ ಬಗ್ಗೆ ದಾಖಲೆಯನ್ನು ಒದಗಿಸಲು ಪ್ರಾಥಮಿಕವಾಗಿ ಬರೆಯಲಾಗುತ್ತಿತ್ತು ಅಥವಾ ಭೋಜನಕೂಟಗಳಿಗೆ ಹಾಗು ಮೇಲ್ವರ್ಗಕ್ಕೆ ಸೇರಿದ ಶ್ರೀಮಂತರ ಮನೆಗಳಲ್ಲಿನ ವೃತ್ತಿಪರ ಅಡುಗೆಯವರಿಗೆ ತರಬೇತಿ ನೀಡಲು ಬರೆಯಲಾಗುತ್ತಿತ್ತು. ಹೀಗಾಗಿ, ಈ ಅಡುಗೆ ಪುಸ್ತಕಗಳಲ್ಲಿ ಹಲವು, ಕೇವಲ ಸೀಮಿತವಾದ ಸಾಮಾಜಿಕ ಅಥವಾ ಪಾಕಯೋಗ್ಯ ಮೌಲ್ಯವನ್ನು ಒದಗಿಸುತ್ತದೆ, ಏಕೆಂದರೆ ಇವುಗಳು ಪ್ರಾಚೀನ ಪಾಕ ಪದ್ಧತಿಗಳಾದ ರೈತರ ಆಹಾರ, ಬ್ರೆಡ್‌ಗಳು, ಹಾಗು ಪಾಕ ವಿಧಾನಕ್ಕೆ ಸಮರ್ಥನೆಯಾದ ಬಹಳ ಸರಳವೆನಿಸಬಹುದಾದ ತರಕಾರಿಯಿಂದ ತಯಾರಾದ ಖಾದ್ಯಗಳ ಬಗೆಗಿನ ಮಹತ್ವದ ವಿಭಾಗವನ್ನು ಒಳಗೊಳ್ಳುವುದಿಲ್ಲ. ಯುರೋಪ್ ನಲ್ಲಿ ಅಸ್ತಿತ್ವದಲ್ಲಿದ್ದ ಪಾಕ ವಿಧಾನದ ಮೊಟ್ಟ ಮೊದಲ ಸಂಗ್ರಹವೆಂದರೆ ಡೆ ರೆ ಕೊಕ್ವಿನಾರಿಯಾ , ಇದನ್ನು ಲ್ಯಾಟಿನ್ ಭಾಷೆಯಲ್ಲಿ ಬರೆಯಲಾಗಿದೆ. ಇದರ ಹಿಂದಿನ ಆವೃತ್ತಿಯನ್ನು ಮೊದಲ ಶತಮಾನದಲ್ಲಿ ಸಂಕಲಿಸಲಾಗಿದೆ ಹಾಗು ಸಾಮಾನ್ಯವಾಗಿ ಇದಕ್ಕೆ ರೋಮನ್ ಭೋಜನರಸಿಕ ಮಾರ್ಕಸ್ ಗವಿಯಸ್ ಅಪಿಸಿಯಸ್ ಕಾರಣನೆನ್ನಲಾಗುತ್ತದೆ, ಆದಾಗ್ಯೂ ಆಧುನಿಕ ಸಂಶೋಧನೆಯಿಂದ ಇದರ ಬಗ್ಗೆ ಸಂಶಯಗಳು ಎದ್ದಿವೆ. ಒಂದು ಅಪಿಸಿಯಸ್ , ಪಾಕವಿಧಾನದ ಪುಸ್ತಕವನ್ನು ಗೊತ್ತುಪಡಿಸುವ ಉದ್ದೇಶದಿಂದ ಬಂದಿದೆ. ಪ್ರಸಕ್ತ ಗ್ರಂಥವನ್ನು ೪ನೇ ಶತಮಾನದ ಕೊನೆಯಲ್ಲಿ ಅಥವಾ ೫ನೇ ಶತಮಾನದ ಆರಂಭದಲ್ಲಿ ಸಂಕಲಿಸಿರಬಹುದು. ೧೪೮೩ರಿಂದ ಮೊದಲ ಮುದ್ರಿತ ಆವೃತ್ತಿಯು ದಾಖಲಾಗಿದೆ. ಇದು ಪ್ರಾಚೀನ ಗ್ರೀಕ್ ಹಾಗು ರೋಮನ್ ಪಾಕಪದ್ಧತಿಗಳ ಮಿಶ್ರಿತ ದಾಖಲೆಯಾಗಿದೆ, ಆದರೆ ತಯಾರಿಕೆ ಹಾಗು ಅಡುಗೆ ಮಾಡುವ ವಿಧಾನದ ಬಗ್ಗೆ ಕೆಲವೇ ಕೆಲವು ವಿವರಣೆಗಳನ್ನು ಹೊಂದಿದೆ.[೧] ಅಪಿಸಿ ಏಕ್ಸೆರ್ಪ್ಟಾ ಏ ವಿನಿಡರಿಯೋ ಎಂಬ ಒಂದು ಸಂಕ್ಷಿಪ್ತ ಸಂಗ್ರಹ, "ಒಬ್ಬ ಸುಪ್ರಸಿದ್ಧ ವ್ಯಕ್ತಿ",ವಿನಿಡೇರಿಯಸ್ ರಚಿತ ಒಂದು "ಕಿಸೆಯಲ್ಲಿಡಬಹುದಾದ ಅಪಿಸಿಯಸ್,[೨] ಇದನ್ನು ಕಾರೋಲಿಂಗಿಯನ್ ಶಕೆಯಲ್ಲಿ ರಚಿಸಲಾಯಿತು.[೩] ಇದು ನಂತರದ ದಿನಗಳ ಪಾಕಶಾಸ್ತ್ರವನ್ನು ಪ್ರತಿನಿಧಿಸಿದ್ದರ ಹೊರತಾಗಿಯೂ, ಇದು ಪ್ರಾಚೀನ ಪಾಕಪದ್ಧತಿಯ ಕಡೆ ಪುರಾವೆಯಾಗಿದೆ. ಅರೇಬಿಕ್ ನಲ್ಲಿ ಕಂಡುಬರುವ ಮೊಟ್ಟ ಮೊದಲ ಅಡುಗೆ ಪುಸ್ತಕಗಳೆಂದರೆ ಅಲ್-ವರ್ರಾಕ್ (೧೦ನೇ ಶತಮಾನ) ಹಾಗು ಅಲ್-ಬಾಗ್ದಾದಿ (೧೩ನೇ ಶತಮಾನ). ಕುಬ್ಲೈ ಖಾನ್ ನ ಆಸ್ಥಾನದಲ್ಲಿದ್ದ ಮುಖ್ಯ ಬಾಣಸಿಗ ಹುಯೌ, ಪಾಕವಿಧಾನಗಳ ಒಂದು ಸಂಗ್ರಹವಾದ "ದಿ ಇಂಪಾರ್ಟೆಂಟ್ ಥಿಂಗ್ಸ್ ಟು ನೋ ಅಬೌಟ್ ಈಟಿಂಗ್ ಹಾಗು ಡ್ರಿಂಕಿಂಗ್" ನ್ನು ೧೩ನೇ ಶತಮಾನದಲ್ಲಿ ರಚಿಸುತ್ತಾನೆ, ಇದು ಮುಖ್ಯವಾಗಿ ಸೂಪ್ ಗಳ ತಯಾರಿಕೆಯ ಬಗ್ಗೆ ಮಾಹಿತಿ ಹಾಗು ಕುಟುಂಬದ ಬಗ್ಗೆ ಸಲಹೆಯನ್ನು ಒಳಗೊಂಡಿರುತ್ತದೆ.[೪] ಒಂದು ದೀರ್ಘಾವಧಿಯ ವಿರಾಮದ ನಂತರ, ಲೇಟ್ ಆಂಟಿಕ್ವಿಟಿಯಿಂದೀಚೆಗೆ ಯುರೋಪ್ ನಲ್ಲಿ ಸಂಕಲಿತವಾದ ಮೊದಲ ಪಾಕವಿಧಾನದ ಪುಸ್ತಕಗಳು ಹದಿಮೂರನೇ ಶತಮಾನದ ನಂತರದ ಭಾಗದಲ್ಲಿ ಪ್ರಕಟಗೊಳ್ಳಲು ಆರಂಭಿಸಿದವು. ಎಲ್ಲವೂ ಹೇಳಿಕೆಯಲ್ಲಿರುವ ಇವುಗಳಲ್ಲಿ, ಸುಮಾರು ನೂರರಷ್ಟು ಅಸ್ತಿತ್ವದಲ್ಲಿದೆ, ಬಹುತೇಕವಾಗಿ ಅಸಮಗ್ರವಾಗಿರುವ ಇದು ಮುದ್ರಣ ಯುಗಕ್ಕೂ ಮೊದಲೇ ಅಸ್ತಿತ್ವದಲ್ಲಿತ್ತು.[೫] ಮೊಟ್ಟ ಮೊದಲ ನಿಜವಾದ ಮಧ್ಯಯುಗದ ಪಾಕವಿಧಾನಗಳು ಸುಮಾರು ೧೩೦೦ರಿಂದ ಡ್ಯಾನಿಷ್ ಹಸ್ತಪ್ರತಿಗಳಲ್ಲಿ ಕಂಡುಬಂದಿವೆ, ಇದು ಅನುಕ್ರಮವಾಗಿ ೧೩ನೇ ಶತಮಾನದ ಅಥವಾ ಅದಕ್ಕೂ ಮುಂಚಿನ ಹಳೆಯ ಗ್ರಂಥಗಳ ಪ್ರತಿಗಳಲ್ಲಿ ಕಂಡುಬಂದಿವೆ.[೬] ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋ ಹಾಗು ಹೈ ಜರ್ಮನ್ ಹಸ್ತಪ್ರತಿಗಳಲ್ಲಿ ಕಂಡುಬಂದಿವೆ. ಇದರಲ್ಲಿ ಡಾಜ್ ಬುಚ್ ವೊನ್ ಗುಟರ್ ಸ್ಪೈಸೆ ("ದಿ ಬುಕ್ ಆಫ್ ಗುಡ್ ಫುಡ್"), ಇದನ್ನು ಸುಮಾರು ೧೩೫೦ರಲ್ಲಿ ವುರ್ಜ್ಬರ್ಗ್ ಬರೆದಿದ್ದಾರೆ ಹಾಗು ಕುಚೆನ್‌ಮೈಸ್ಟೆರಿ ("ಕಿಚನ್ ಮಾಸ್ಟೆರಿ"), ೧೪೮೫ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಜರ್ಮನ್ ಅಡುಗೆಪುಸ್ತಕ.[೭] ಎರಡು ಫ್ರೆಂಚ್ ಸಂಗ್ರಹಗಳು ಬಹುಶಃ ಅತ್ಯಂತ ಪ್ರಸಿದ್ಧವಾಗಿದೆ: ಲೇ ವಿಯಾನ್ಡಿಯೆರ್ ("ದಿ ಪ್ರಾವಿಷನರ್") ಇದನ್ನು ೧೪ನೇ ಶತಮಾನದಲ್ಲಿ ಗುಯಿಲ್ಲೌಮೆ ಟಿರೆಲ್ ಸಂಕಲಿಸಿದರು, ಇವರು ಇಬ್ಬರು ಫ್ರೆಂಚ್ ದೊರೆಗಳ ಆಸ್ಥಾನದಲ್ಲಿ ಮುಖ್ಯ ಬಾಣಸಿಗರಾಗಿದ್ದರು: ಹಾಗು ಲೇ ಮೆನಗಿಯೇರ್ ಡೆ ಪ್ಯಾರಿಸ್ ("ದಿ ಹೌಸ್ ಹೋಲ್ಡರ್ ಆಫ್ ಪ್ಯಾರಿಸ್"), ಈ ಕೌಟುಂಬಿಕ ಪುಸ್ತಕವನ್ನು ೧೩೯೦ರ ದಶಕದಲ್ಲಿ ಮಧ್ಯಮ ವರ್ಗದ ಪ್ಯಾರಿಸಿಯನ್ ಅನಾಮಿಕ ವ್ಯಕ್ತಿ ಬರೆದಿದ್ದಾನೆ.[೮] ದಕ್ಷಿಣ ಯುರೋಪ್ ನಿಂದ ೧೪ನೇ ಶತಮಾನದ ಕ್ಯಾಟಲನ್ ಹಸ್ತಪ್ರತಿಯು ದೊರೆತಿದೆ ಲಿಬ್ರೆ ಡೆ ಸೆಂಟ್ ಸೋವಿ ("ದಿ ಬುಕ್ ಆಫ್ ಸೈಂಟ್ ಸೋಫಿಯಾ") ಹಾಗು ಹಲವಾರು ಇಟಾಲಿಯನ್ ಸಂಗ್ರಹಗಳು, ಇದರಲ್ಲಿ ಗಮನಾರ್ಹವಾಗಿ ವೆನೆಷಿಯನ್ ೧೪ನೇ-ಶತಮಾನದ ಮಧ್ಯಭಾಗದ ಲಿಬ್ರೋ ಪರ ಕುವೊಕೋ ,[೯] ಜೊತೆಗೆ ಇದರಲ್ಲಿ ೧೩೫ ಪಾಕವಿಧಾನಗಳು ವರ್ಣಾನುಕ್ರಮದಲ್ಲಿ ರಚನೆಯಾಗಿದೆ. ಮುದ್ರಣಗೊಂಡ ಡೆ ಹಾನೆಸ್ಟಾ ವೋಲುಪ್ಟೇಟ್ ("ಆನ್ ಹಾನರಬಲ್ ಪ್ಲೆಶರ್") ೧೪೭೫ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು, ಇದು ನವೋದಯ ಆದರ್ಶಗಳ ಮೇಲೆ ಆಧಾರಿತವಾದ ಮೊದಲ ಅಡುಗೆಪುಸ್ತಕಗಳಲ್ಲಿ ಒಂದಾಗಿದೆ, ಹಾಗು, ಅಡುಗೆಪುಸ್ತಕವಾಗಿ ನೀತಿ ಪ್ರಬಂಧಗಳ ಸರಣಿಯನ್ನು ಹೊಂದಿದ್ದರೂ ಸಹ, ಇದನ್ನು "ಮಧ್ಯಯುಗದ ಇಟಾಲಿಯನ್ ಪಾಕಶಾಸ್ತ್ರದ ಮೇಲೆ ಪುಸ್ತಕವಾಗಿ ಒಟ್ಟುಗೂಡಿದ ಸಂಕಲನವೆಂದು" ವಿವರಿಸಲ್ಪಡುತ್ತದೆ.[೧೦] ಇಂಗ್ಲೆಂಡ್ ನಲ್ಲಿ ಹುಟ್ಟಿಕೊಂಡ ಪಾಕವಿಧಾನಗಳಲ್ಲಿ ಮೊದಲು ದಾಖಲುಗೊಂಡ ಪಾಕವಿಧಾನವು ರಾವಿಯೋಲಿಯದಾಗಿತ್ತು(೧೩೯೦ರಲ್ಲಿ) ಹಾಗು ಫಾರ್ಮೆ ಆಫ್ ಕ್ಯೂರಿ , ಇದು ಇಂಗ್ಲೆಂಡ್ ನ ರಿಚರ್ಡ್ IIನ ಆಸ್ಥಾನದಲ್ಲಿದ್ದ ಬಾಣಸಿಗರು ಬರೆದ ೧೪ನೇ ಶತಮಾನದ ನಂತರದ ಭಾಗದ ಹಸ್ತಪ್ರತಿಯಾಗಿದೆ.[೧೧]

ಅಡುಗೆಪುಸ್ತಕಗಳ ಮಾದರಿಗಳು[ಬದಲಾಯಿಸಿ]

ಮೂಲವಾಗಿ ಅಡುಗೆಮನೆಗೆ ಉಲ್ಲೇಖಗಳನ್ನು ಒದಗಿಸುವ ಅಡುಗೆಪುಸ್ತಕಗಳು ನವಯುಗದ ಆರಂಭದಿಂದ ಪ್ರಕಟಗೊಳ್ಳಲು ಆರಂಭಿಸಿದವು(ಕೆಲವೊಂದು ಬಾರಿ ಇವುಗಳು "ಕಿಚನ್ ಬೈಬಲ್ ಗಳೆಂದು" ಹೆಸರಾಗಿವೆ). ಇವುಗಳು ಕೇವಲ ಪಾಕವಿಧಾನದ ಬಗ್ಗೆ ಮಾಹಿತಿಯನ್ನಷ್ಟೇ ಅಲ್ಲದೆ ಅಡುಗೆಮನೆಯ ಕೌಶಲ ಹಾಗು ಕುಟುಂಬದ ನಿರ್ವಹಣೆಯ ಬಗ್ಗೆ ಒಟ್ಟಾರೆ ಮಾಹಿತಿಯನ್ನು ನೀಡುತ್ತಿತ್ತು. ಇಂತಹ ಪುಸ್ತಕಗಳನ್ನು ಪ್ರಾಥಮಿಕವಾಗಿ ಗೃಹಿಣಿಯರು ಹಾಗು ಸಾಂದರ್ಭಿಕವಾಗಿ ಮನೆಕೆಲಸ ಮಾಡುವ ಸೇವಕರು ವೃತ್ತಿಪರ ಅಡುಗೆಯವರಿಗೆ ತದ್ವಿರುದ್ಧವಾಗಿ ಬರೆಯುತ್ತಿದ್ದರು, ಹಾಗು ಕೆಲವೊಂದು ಬಾರಿ ಪುಸ್ತಕಗಳಾದ ದಿ ಜಾಯ್ ಆಫ್ ಕುಕಿಂಗ್ (USA), ಲ ಬೋನ್ನೇ ಕ್ಯುಸಿನ್ ಡೆ ಮಾಡೆಮ್ E. ಸೈಂಟ್-ಆನ್ಗೆ (ಫ್ರಾನ್ಸ್), ದಿ ಆರ್ಟ್ ಆಫ್ ಕುಕರಿ (UK,USA), II ಕುಚ್ಚಿಯಯಿಯೋ ಡ' ಆರ್ಗೆನ್ಟೋ (ಇಟಲಿ), ಹಾಗು ಏ ಗಿಫ್ಟ್ ಟು ಯಂಗ್ ಹೌಸ್ ವೈವ್ಸ್ (ರಷ್ಯಾ) ದೇಶೀಯ ಪಾಕವಿಧಾನಗಳ ದಾಖಲೆ ಸೂಚಕಗಳಾಗಿ ಇವುಗಳು ಒದಗಿಬರುತ್ತಿದ್ದವು. ಈ ವಿಭಾಗಕ್ಕೆ ಸಂಬಂಧಿಸಿದ್ದವುಗಳೆಂದರೆ ಮಾಹಿತಿ ಅಡುಗೆಪುಸ್ತಕಗಳು, ಇದು ಆಳವಾಗಿ ಪಾಕವಿಧಾನಗಳನ್ನು ಸಂಯೋಜಿಸುತ್ತವೆ, ಅಡುಗೆಯನ್ನು ಕಲಿಯಲು ಆರಂಭಿಸುವವರಿಗೆ ಹಂತ ಹಂತವಾಗಿ ಪಾಕವಿಧಾನಗಳ ಮೂಲ ಕಲ್ಪನೆಗಳು ಹಾಗು ಕೌಶಲವನ್ನು ಹೇಳಿಕೊಡುತ್ತದೆ. ದೇಶೀಯ ಸಾಹಿತ್ಯದಲ್ಲಿ, ಜನರು ಸಾಂಪ್ರದಾಯಿಕ ಪಾಕವಿಧಾನಗಳನ್ನು ಕೌಟುಂಬಿಕ ಅಡುಗೆಪುಸ್ತಕಗಳಲ್ಲಿ ಸಂಗ್ರಹಿಸಬಹುದು. ಅಂತಾರಾಷ್ಟ್ರೀಯ ಹಾಗು ಜನಾಂಗೀಯ ಅಡುಗೆಪುಸ್ತಕಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ: ಇತರ ಸಂಸ್ಕೃತಿಗಳಲ್ಲಿರುವ ಅಡುಗೆಮನೆಯ ಉಲ್ಲೇಖಗಳು, ಇತರ ಭಾಷೆಗಳಿಗೆ ತರ್ಜುಮೆಗೊಂಡಿರುತ್ತವೆ; ಹಾಗು ಮತ್ತೊಂದು ಸಂಸ್ಕೃತಿಯ ಪಾಕವಿಧಾನಗಳನ್ನು ಹೊಸ ವೀಕ್ಷಕರ ಭಾಷೆಗಳಿಗೆ, ಕೌಶಲಗಳಿಗೆ ಮತ್ತು ಘಟಕಾಂಶಗಳಿಗೆ ತರ್ಜುಮೆ ಮಾಡುವ ಪುಸ್ತಕಗಳು. ನಂತರದ ಶೈಲಿಯು, ಸಾಮಾನ್ಯವಾಗಿ ಪಾಕಶಾಲೆಯ ಪ್ರವಾಸ ಕಥನದ ಮಾದರಿಯಲ್ಲಿ ದುಪ್ಪಟ್ಟಾಗುತ್ತದೆ, ಅದರ ಪ್ರೇಕ್ಷಕರಿಗೆ ಈಗಾಗಲೇ ಪರಿಚಯವಿರುವ ಪ್ರಥಮ ವಿಧದ ಪುಸ್ತಕದ ಪಾಕವಿಧಾನಕ್ಕೆ ಹಿನ್ನೆಲೆ ಮತ್ತು ಸಂದರ್ಭವನ್ನು ನೀಡುತ್ತದೆ. ವೃತ್ತಿಪರ ಅಡುಗೆಪುಸ್ತಕಗಳನ್ನು ಬಾಣಸಿಗರಾಗಿ ಕಾರ್ಯನಿರ್ವಹಿಸುವವರಿಗೆ ಹಾಗು ಪಾಕಶಾಲಾ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಹಾಗು ಕೆಲವೊಂದು ಬಾರಿ ಪಾಕಶಾಲಾ ವಿದ್ಯಾರ್ಥಿಗಳಿಗೆ ಇದು ಪಾಠ ಪುಸ್ತಕವಾಗಿ ಬಳಕೆಯಾಗುತ್ತದೆ. ಇಂತಹ ಪುಸ್ತಕಗಳು ಕೇವಲ ಪಾಕವಿಧಾನಗಳು ಹಾಗು ಕೌಶಲಗಳ ನಿರ್ವಹಣೆ ಮಾತ್ರವಲ್ಲದೇ, ಸೇವೆ ಮತ್ತು ಅಡುಗೆಮನೆಯ ಕೆಲಸದ ಪ್ರಗತಿಯನ್ನು ನಿಭಾಯಿಸುತ್ತದೆ. ಇಂತಹ ಹಲವು ಪುಸ್ತಕಗಳು ಮನೆಯ ಅಡುಗೆಪುಸ್ತಕಗಳಿಗಿಂತ ದೊಡ್ಡ ಪ್ರಮಾಣಗಳಲ್ಲಿ ಮಾಹಿತಿಯನ್ನು ಒದಗಿಸುತ್ತವೆ, ಉದಾಹರಣೆಗೆ ಲೀಟರ್ ಅಳತೆಯ ಮೂಲಕ ತಯಾರಿಸಬಹುದಾದ ಸಾಸ್ ಗಳು ಅಥವಾ ಆಹಾರ ಪೂರೈಕೆ ವ್ಯವಸ್ಥೆಯಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಖಾದ್ಯಗಳನ್ನು ತಯಾರಿಸುವುದು. ಇಂದು ಪ್ರಸಿದ್ಧವಾಗಿರುವ ಇಂತಹ ಪುಸ್ತಕಗಳಲ್ಲಿ ಎಸ್ಕಾಫ್ಫಿಯೆರ್ ರಚಿತ ಲೇ ಗೈಡ್ ಕ್ಯುಲಿನೇರ್ ಅಥವಾ ಕ್ಯುಲಿನರಿ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದ ದಿ ಪ್ರೊಫೆಶನಲ್ ಚೆಫ್ , ಇಂತಹ ಪುಸ್ತಕಗಳು ಕಡೇಪಕ್ಷ ಮಧ್ಯ ಯುಗದಿಂದಲೂ ಅಸ್ತಿತ್ವದಲ್ಲಿದೆ, ಇದು ಅಂದಿನ ಟೈಲ್ಲೇವೆಂಟ್ ರ ವಿಯನ್ಡಿಯೇರ್ ಹಾಗು ಚಿಕ್ವಾರ್ಟ್ ಡ' ಅಮಿಕೋಸ್ ರ ಡು ಫೈಟ್ ಡೆ ಕ್ಯುಸಿನ್ ಮುಂತಾದ ಕೃತಿಗಳಿಂದ ನಿರೂಪಿತವಾಗಿವೆ. ಒಂದೇ-ವಿಷಯಾಧಾರಿತ ಪುಸ್ತಕಗಳು, ಸಾಮಾನ್ಯವಾಗಿ ನಿರ್ದಿಷ್ಟ ಪದಾರ್ಥಗಳೊಂದಿಗೆ, ಕೌಶಲದೊಂದಿಗೆ, ಅಥವಾ ಖಾದ್ಯಗಳ ವರ್ಗಗಳಿಗೆ ಸಂಬಂಧಿಸಿರುತ್ತದೆ, ಇವುಗಳು ಸಹ ಸಾಮಾನ್ಯವಾಗಿರುತ್ತದೆ; ವಾಸ್ತವವಾಗಿ, ಕರ್ರಿಗಳು, ಪಿಜ್ಜಾ, ಹಾಗು ಸರಳವಾದ ಜನಾಂಗೀಯ ಆಹಾರ ಮುಂತಾದ ತಿನಿಸುಗಳ ಬಗ್ಗೆ ಪುಸ್ತಕಗಳೊಂದಿಗೆ ಕೆಲವು ಅಂಕಿತಗಳಾದ ಕ್ರೋನಿಕಲ್ ಬುಕ್ಸ್, ಈ ಮಾದರಿಯ ಪುಸ್ತಕಗಳಲ್ಲಿ ವಿಶೇಷತೆಯನ್ನು ಪಡೆದಿವೆ. ಅಡುಗೆ ಮಾಡುವ ಕೌಶಲದ ಬಗ್ಗೆ ಕಡಿಮೆ-ವಿಷಯಾಧಾರಿತ ಪುಸ್ತಕಗಳ ಜನಪ್ರಿಯ ವಿಷಯಗಳಲ್ಲಿ ಸರಳು ಕಾವಲಿಯಲ್ಲಿ ಗ್ರಿಲ್ಲಿಂಗ್ ಮಾಡುವುದು, ಬೇಯಿಸುವುದು, ಹೊರಾಂಗಣದಲ್ಲಿ ಅಡುಗೆ ಮಾಡುವುದು, ಹಾಗು ಪಾಕವಿಧಾನದ ತದ್ರೂಪು ಸೃಷ್ಟಿ ಮಾಡುವುದೂ ಸಹ ಸೇರಿದೆ. ಸಾಮುದಾಯಿಕ ಅಡುಗೆಪುಸ್ತಕಗಳು(ಇವುಗಳು ಸಂಕಲಿತ, ಪ್ರಾದೇಶಿಕ, ದಾನಶೀಲ, ಹಾಗು ಚಂದಾ-ಸಂಗ್ರಹ ಅಡುಗೆಪುಸ್ತಕಗಳೆಂದೂ ಸಹ ಪರಿಚಿತವಾಗಿವೆ) ಪಾಕಶಾಲಾ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಪ್ರಕಾರವಾಗಿದೆ. ಸಾಮುದಾಯಿಕ ಅಡುಗೆಪುಸ್ತಕಗಳು, ಮನೆಯಲ್ಲಿ ಅಡುಗೆ ಮಾಡುವುದು, ಸಾಮಾನ್ಯವಾಗಿ ಪ್ರಾದೇಶಿಕ, ಜನಾಂಗೀಯ, ಕೌಟುಂಬಿಕ ಹಾಗು ಸಾಮಾಜಿಕ ಸಂಪ್ರದಾಯಗಳು ಜೊತೆಗೆ ಸ್ಥಳೀಯ ಇತಿಹಾಸವನ್ನು ದಾಖಲಿಸುತ್ತವೆ.[೧೨] ಗೂಸ್ಬೇರಿ ಪ್ಯಾಚ್, ೧೯೯೨ರಿಂದಲೂ ಸಮುದಾಯ-ಶೈಲಿಯ ಅಡುಗೆಪುಸ್ತಕಗಳನ್ನು ಪ್ರಕಟಿಸುತ್ತದೆ ಹಾಗು ಈ ಸಮುದಾಯದ ಮೇಲೆ ತಮ್ಮದೇ ಆದ ಬ್ರಾಂಡ್ ನ್ನು ನಿರ್ಮಾಣ ಮಾಡಿದೆ. ಅಡುಗೆಪುಸ್ತಕವು ನಿರ್ದಿಷ್ಟ ಮುಖ್ಯ ಬಾಣಸಿಗನ(ವಿಶೇಷವಾಗಿ ಅಡುಗೆ ಪ್ರದರ್ಶನದ ಸಂಯೋಗದೊಂದಿಗೆ) ಅಥವಾ ರೆಸ್ಟೊರೆಂಟ್‌ನ ಆಹಾರವನ್ನು ಕೂಡ ದಾಖಲಿಸಬಹುದು. ಇವುಗಳಲ್ಲಿ ಅನೇಕ ಪುಸ್ತಕಗಳು ವಿಶೇಷವಾಗಿ ಅಥವಾ ಸ್ಥಿರವಾಗಿ ಸ್ಥಾಪಿತವಾದ ಬಾಣಸಿಗನಿಗಾಗಿ ಸುದೀರ್ಘವಾಗಿ ನಡೆಯುವ ಟಿವಿ ಪ್ರದರ್ಶನದೊಂದಿಗೆ ಅಥವಾ ಜನಪ್ರಿಯ ರೆಸ್ಟೊರೆಂಟ್‌ ಬಗ್ಗೆ ಬರೆದಿರುವುದು ಅನೇಕ ವರ್ಷಗಳ ಕಾಲಾವಧಿಯಲ್ಲಿ ಬಿಡುಗಡೆಯಾಗುವ ವಿಸ್ತರಿತ ಪುಸ್ತಕಗಳ ಸರಣಿಯ ಭಾಗವಾಗುತ್ತದೆ. ಇತಿಹಾಸದುದ್ದಕ್ಕೂ ಜನಪ್ರಿಯ ಬಾಣಸಿಗ ಲೇಖಕರು ಜೂಲಿಯ ಚೈಲ್ಡ್, ಜೇಮ್ಸ್ ಬಿಯರ್ಡ್, ನಿಗೇಲ್ಲಾ ಲಾಸನ್, ಎಡೋರ್ಡ್ ಡೇ ಪಾಮಿಯೇನ್, ಜೆಫ್ ಸ್ಮಿತ್, ಎಮೆರಿಲ್ ಲಗಾಸ್ಸೆ, ಕ್ಲಾಡಿಯ ರೋಡೆನ್, ಮಧುರ್ ಜೆಫ್ರೆ, ಕಾಟ್‌ಸುಯೊ ಕೊಬಾಯಾಶಿ ಮತ್ತು ಅಪಿಸಿಯಸ್ ಕೂಡ, ರೋಮನ್ ಅಡುಗೆಪುಸ್ತಕ ಡೆ ರೆ ಕಾಯಿನಾರಿಯದ ಅರೆ ಕಲ್ಪಿತ ನಾಮದಿಂದ ಬರೆಯುವ ಲೇಖಕರಾಗಿದ್ದು, ಪ್ರಾಚೀನ ವಿಶ್ವದ ಇನ್ನೊಬ್ಬ ಆಹಾರ ಸಂಬಂಧಿತ ವ್ಯಕ್ತಿಯೊಂದಿಗೆ ಹೆಸರನ್ನು ಹಂಚಿಕೊಂಡಿದ್ದಾರೆ. ಪಾಶ್ಚಿಮಾತ್ಯ ಅಡುಗೆಪುಸ್ತಕಗಳು ಸಾಮಾನ್ಯವಾಗಿ ತಿನಿಸುಗಳ ಮುಖ್ಯ ಘಟಕಾಂಶದಿಂದ ಮುಖ್ಯ ವರಿಸೆಗಳಿಗೆ ಪಾಕವಿಧಾನಗಳನ್ನು ಗುಂಪಾಗಿಸುತ್ತದೆ. ಜಪಾನಿನ ಅಡುಗೆಪುಸ್ತಕಗಳು ಸಾಮಾನ್ಯವಾಗಿ ಅಡುಗೆ ತಂತ್ರಗಳಿಂದ ಅವುಗಳನ್ನು ಗುಂಪಾಗಿಸುತ್ತದೆ(ಉದಾ.,ಹುರಿದ ಆಹಾರಗಳು, ಹಬೆ ಹಾಯಿಸಿದ ಆಹಾರಗಳು ಮತ್ತು ಬೇಯಿಸಿದ ಆಹಾರಗಳು). ಅಡುಗೆಪುಸ್ತಕದ ಎರಡೂ ಶೈಲಿಗಳು ಹೆಚ್ಚುವರಿ ಪಾಕವಿಧಾನದ ಗುಂಪುಗಳಾದ ಸೂಪ್‌ಗಳು ಮತ್ತು ಸಿಹಿಗಳನ್ನು ಹೊಂದಿರುತ್ತದೆ.

ಪ್ರಖ್ಯಾತ ಅಡುಗೆಪುಸ್ತಕಗಳು[ಬದಲಾಯಿಸಿ]

ಹಿಂದಿನ ಪ್ರಖ್ಯಾತ ಅಡುಗೆ ಪುಸ್ತಕಗಳು, ಕಾಲಾನುಕ್ರಮದಲ್ಲಿ, ಸೇರಿವೆ:

  • ದೈ ಮ್ಯಾನ್ಯುಯಲ್ ಆಫ್ ಎಪಿಕ್ ಕೂಕರಿ (ಪೂರ್ವದ ನಾಲ್ಕನೇ ಶತಮಾನ) ಥಾಮಸ್ ಗುಸಿ ಅವರಿಂದ.
  • ಡೆ ರೆ ಕಾಕ್ವಿನೇರಿಯ (ಅಡುಗೆ ಕಲೆ) (೪ನೇ ಶತಮಾನದ ಕೊನೆ/ ೫ನೇ ಶತಮಾನದ ಪೂರ್ವ) ಆಪಿಸಿಯಸ್ರಿಂದ.
  • ಕಿತಾಬ್ ಅಲ್-ಟಬಿಕ್ (ದಿ ಬುಕ್ ಆಫ್ ಡಿಶಸ್ ) (೧೦ನೇ ಶತಮಾನ) ಇಬಿನ್ ಸಯ್ಯಾರ್ ಅಲ್-ವಾರಖ್
  • ಕಿತಾಬ್ ಅಲ್-ತಾಬಿಕ್ (ದಿ ಬುಕ್ ಆಫ್ ಡಿಶಸ್ ) (೧೨೨೬) ಮುಹಮದ್ ಬಿನ್ ಹಸನ್ ಅಲ್-ಬಾಗ್ದಾದಿ ಅವರಿಂದ
  • ಲೈಬರ್ ಡೆ ಕೊಕ್ವಿನಾ (ದಿ ಬುಕ್ ಆಫ್ ಕುಕರಿ) (ಕೊನೆಯ ೧೩ನೇ ಶತಮಾನ / ೧೪ನೇ ಶತಮಾನದ ಪೂರ್ವ) ಫ್ರಾನ್ಸ್ ಮತ್ತು ಇಟಲಿಯ ಇಬ್ಬರು ಅಜ್ಞಾತ ಲೇಖಕರಿಂದ.
  • ದಿ ಫೋರ್ಮ್ ಆಫ್ ಕರಿ (೧೪ನೇ ಶತಮಾನ) ಕಿಂಗ್ ರಿಚರ್ಡ್ II ಆಫ್ ಇಂಗ್ಲೆಂಡ್ನ ಮಾಸ್ಟರ್ ಕುಕ್ಸ್ ಅವರಿಂದ.
  • ವಿಯಾಂಡಿಯರ್ (೧೪ನೇ ಶತಮಾನ) ಗುಲಿಯಾಮ್ ಟೈರೆಲ್ ಅಲಿಯಾಸ್ ಟೈಲೆವೆಂಟ್
  • ಡಿ ಹೊನೆಸ್ಟಾ ವಾಲುಪ್ಟೇಟ್ ಎಟ್ ವ್ಯಾಲೆಟುಡೈನ್ (೧೪೭೫) ಬಾರ್ಟೊಲೋಮಿಯೊ ಪ್ಲಾಟಿನಾಅವರಿಂದ - ೧೪೮೭ರಲ್ಲಿ ಸ್ಥಳೀಯ ಭಾಷೆಯಲ್ಲಿ(ಇಟಾಲಿಯನ್) ಮುದ್ರಿತವಾದ ಪ್ರಥಮ ಅಡುಗೆಪುಸ್ತಕ.
  • ದಿ ಕ್ಲೋಸೆಟ್ ಆಫ್ ದಿ ಎಮಿನೆಂಟ್ಲಿ ಲರ್ನಡ್ ಸರ್ ಕೆನೆಲ್ಮೆ ಡಿಗ್‌ಬೈ ನೈಟ್ ಓಪನ್ಡ್ ಕೆನೆಲ್ಮ್ ಡಿಗ್‌ಬೈಅವರಿಂದ (೧೬೬೯)
  • ದಿಕಂಪ್ಲೀಟ್ ಹೌಸ್‌ವೈಫ್ (ಪ್ರಥಮ ಅಮೆರಿಕನ್ ಆವೃತ್ತಿ ೧೭೪೨)ಎಲಿಜ ಸ್ಮಿತ್ ಅವರಿಂದ.
  • ದಿ ಆರ್ಟ್ ಆಫ್ ಕುಕರಿ, ಮೇಡ್ ಪ್ಲೇನ್ ಎಂಡ್ ಈಸಿ (೧೭೪೭) ಹನ್ನಾ ಗ್ಲಾಸ್ಅವರಿಂದ.
  • Hjelpreda I Hushållningen För Unga Fruentimber (೧೭೫೫)ಕಾಜ್ಸಾ ವಾರ್ಗ್ಅವರಿಂದ.
  • ಲೆ ಕುಸಿನಿಯರ್ ರಾಯಲ್ (೧೮೧೭) ಅಲೆಕ್ಸಾಂಡ್ರಾ ವಿಯಾರ್ಡ್ ಅವರಿಂದ.
  • ಮಾಡರ್ನ್ ಕುಕರಿ ಫಾರ್ ಪ್ರೈವೇಟ್ ಫ್ಯಾಮಿಲೀಸ್ (೧೮೪೫) ಎಲಿಜಾ ಆಕ್ಟನ್ ಅವರಿಂದ.
  • ಮಿಸಸ್ ಬೀಟನ್ಸ್ ಬುಕ್ ಆಫ್ ಹೌಸ್‌ಹೋಲ್ಡ್ ಮ್ಯಾನೇಜ್‌ಮೆಂಟ್ (೧೮೬೧) ಮಿಸಸ್ ಬೀಟನ್ಅವರಿಂದ.
  • El ಕೋಸಿನೆರೊ ಪ್ಯೂರ್ಟೊ - ರಿಕ್ವೆನೊ ೧೮೫೯ (ಲೇಖಕ ಅಜ್ಞಾತ)
  • La scienza in cucina e l'arte di mangiar bene (೧೮೯೧) ಪೆಲ್ಲೆಗ್ರಿನೊ ಆರ್ಟುಸಿಅವರಿಂದ
  • ದಿ ಎಪಿಕ್ಯೂರಿಯನ್ (೧೮೯೪) ಚಾರ್ಲ್ಸ್ ರಾನ್‌ಹೋಫರ್ ಅವರಿಂದ
  • ಬೋಸ್ಟನ್ ಕುಕಿಂಗ್ -ಸ್ಕೂಲ್ ಕುಕ್ ಬುಕ್ (೧೮೯೬) ಫ್ಯಾನಿ ಮೆರಿಟ್ ಫಾರ್ಮರ್ಅವರಿಂದ.
  • ದಿ ಸೆಟಲ್‌ಮೆಂಟ್ ಕುಕ್ ಬುಕ್ (೧೯೦೧) ಮತ್ತು ೩೪ ತರುವಾಯದ ಆವೃತ್ತಿಗಳು ಲಿಜೀ ಬ್ಲಾಕ್ ಕ್ಯಾಂಡರ್ಅವರಿಂದ
  • ವಿವಿಧ ಅಡುಗೆಪುಸ್ತಕಗಳು (೧೯೦೩ ಮತ್ತು ೧೯೩೪ರ ನಡುವೆ) ಆಗಸ್ಟೆ ಎಸ್ಕೋಫಿಯರ್ಅವರಿಂದ.
  • ದಿ ಜಾಯ್ ಆಫ್ ಕುಕಿಂಗ್ (೧೯೩೧) ಇರ್ಮಾ ರಾಮ್ಬಾಯರ್‌ಅವರಿಂದ
  • ಲಾರೌಸ್ ಗ್ಯಾಸ್ಟ್ರೋನೋಮಿಕ್ (೧೯೩೮)
  • ದಿ ಅಲೈಸ್ B. ಟೋಕ್ಲಾಸ್ ಕುಕ್‌ಬುಕ್ (೧೯೫೪) ಅಲೈಸ್ B. ಟೋಕ್ಲಾಸ್ಅವರಿಂದ
  • ಕುಕಿಂಗ್ ವಿತ್ ದಿ ಚೈನೀಸ್ ಫ್ಲೇವರ್ (೧೯೫೬) ಮತ್ತು ಲಿನ್ ಸುಯಿಫೆಂಗ್ ("ಮಿಸಸ್. ಲಿನ್ ಯುಟಾಂಗ್")ಅವರಿಂದ ತರುವಾಯದ ಪುಸ್ತಕಗಳು
  • ಮಾಸ್ಟರಿಂಗ್ ದಿ ಆರ್ಟ್ ಆಫ್ ಫ್ರೆಂಚ್ ಕುಕಿಂಗ್ (೧೯೬೧) ಜೂಲಿಯ ಚೈಲ್ಡ್ಅವರಿಂದ
  • ಹೆಲೆಸನ್ ಗರ್ಲಿ ಬ್ರೌನ್ಸ್ ಸಿಂಗಲ್ ಗರ್ಲ್ಸ್ ಕುಕ್‌ಬುಕ್ (೧೯೬೯) ಹೆಲೆನ್ ಗರ್ಲಿ ಬ್ರೌನ್ಅವರಿಂದ
  • ಫ್ಯಾನಿ ಎಂಡ್ ಜಾನಿ ಕ್ರಾಡಕ್ ಕುಕರಿ ಪ್ರೋಗ್ಲಾಂ (೧೯೭೦) ಫ್ಯಾನಿ ಮತ್ತು ಜಾನಿ ಕ್ರಾಡಕ್ ಅವರಿಂದ
  • ಡೈಟ್ ಫಾರ್ ಎ ಸ್ಮಾಲ್ ಪ್ಲಾನಟ್ (೧೯೭೧) ಫ್ರಾನ್ಸಸ್ ಮೂರ್ ಲ್ಯಾಪೆಅವರಿಂದ
  • ಮೂಸ್‌ವುಡ್ ಕುಕ್‌ಬುಕ್ (೧೯೭೮) ಮೋಲಿ ಕ್ಯಾಟ್‌ಜನ್ಅವರಿಂದ
  • ಕೋಶರ್ ಬೈ ಡಿಸೈನ್ , ೨೦೦೩-೨೦೧೦ರವರೆಗೆ ಆರ್ಟ್‌ಸ್ಕ್ರಾಲ್ ಪ್ರಕಟಿಸಿದ ಏಳು ಅಡುಗೆಪುಸ್ತಕಗಳ ಸರಣಿ.

ಆಹಾರ ಜಗತ್ತಿನ ಹೊರಗೆ ಬಳಕೆ[ಬದಲಾಯಿಸಿ]

ಅಡುಗೆಪುಸ್ತಕ ಪದವು ಕೆಲವುಬಾರಿ ರೂಪಕಾರ್ಥದಲ್ಲಿ ಯಾವುದೇ ಕ್ಷೇತ್ರ ಅಥವಾ ಚಟುವಟಿಕೆಯ ಈಗಾಗಲೇ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಪಾಕವಿಧಾನಗಳು ಅಥವಾ ಸೂಚನೆಗಳನ್ನು ಹೊಂದಿರುವ ಯಾವುದೇ ಪುಸ್ತಕವನ್ನು ಉಲ್ಲೇಖಿಸುತ್ತದೆ. ಇವನ್ನು ವಿವರವಾಗಿ ಮಂಡಿಸಲಾಗುತ್ತಿದ್ದು, ಇದರಿಂದ ಈ ಕ್ಷೇತ್ರದಲ್ಲಿ ತಜ್ಞರಲ್ಲದ ಬಳಕೆದಾರರು ಕಾರ್ಯಾತ್ಮಕ ಫಲಿತಾಂಶಗಳನ್ನು ಉತ್ಪಾದಿಸಬಹುದು. ಎಲೆಕ್ಟ್ರಾನಿಕ್ಸ್‌ನಲ್ಲಿ ಸರ್ಕ್ಯೂಟ್ ವಿನ್ಯಾಸಗಳ ಗುಂಪು,ಮ್ಯಾಜಿಕ್ ಸ್ಪೆಲ್ಸ್ ಪುಸ್ತಕ ಅಥವಾ ದಿ ಅನಾರ್ಚಿಸ್ಟ್ ಅಡುಗೆಪುಸ್ತಕ ಉದಾಹರಣೆಗಳಲ್ಲಿ ಸೇರಿರುತ್ತದೆ. ಇದು ವಿನಾಶವನ್ನು ಕುರಿತು ಮತ್ತು ಕಾನೂನಿನ ಹೊರಗೆ ಜೀವಿಸುವ ಬಗ್ಗೆ ಸೂಚನೆಗಳ ವರ್ಗ. O'ರೈಲಿ ಮೀಡಿಯ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಪುಸ್ತಕಗಳ ಸರಣಿಯನ್ನು ಪ್ರಕಟಿಸಿದ್ದು, ಕುಕ್‌ಬುಕ್ ಸೀರೀಸ್ಎಂದು ಹೆಸರಾಗಿದೆ. ಪ್ರತಿಯೊಂದು ಪುಸ್ತಕವೂ ಏಕ ಪ್ರೋಗ್ರಾಮಿಂಗ್ ಭಾಷೆಯಲ್ಲಿ ನಿರ್ದಿಷ್ಟ ಸಮಸ್ಯೆಯನ್ನು ಬಿಡಿಸಲು ಪ್ರತಿಯೊಂದೂ ನೂರಾರು ಬಳಕೆಗೆ ಸಿದ್ಧವಾದ ಕತ್ತರಿಸುವ ಮತ್ತು ಅಂಟಿಸುವ ಉದಾಹರಣೆಗಳನ್ನು ಹೊಂದಿವೆ.

ನಾನು ಪ್ರಭಾಕರ್

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಆಹಾರ ಲೇಖನ
  • ಗೌರ್ಮೆಟ್ ಮ್ಯೂಸಿಯಂ ಮತ್ತು ಲೈಬ್ರರಿ

ಟಿಪ್ಪಣಿಗಳು[ಬದಲಾಯಿಸಿ]

  1. ಮೆಲಿಟ್ಟಾ ವೈಸ್ ಅಡಾಂಸನ್, "ದಿ ಗ್ರೀಕೊ-ರೋಮನ್ ವರ್ಲ್ಡ್" ರೀಜನಲ್ ಕ್ವಿಸಿನ್ಸ್ ಆಫ್ ಮಿಡೈವಲ್ ಯುರೋಪ್ , p. ೬–೭; ಸೈಮನ್ ವ್ಯಾರಿ, "ಮಿಡೈವಲ್ ಎಂಡ್ ರಿನೈಸೇನ್ಸ್ ಇಟಲಿ, A. ದಿ ಪೆನಿಸ್‌ಸುಲಾ" ಇನ್ ರೀಜನಲ್ ಕ್ವಿಸಿನ್ಸ್ ಆಫ್ ಮಿಡೈವಲ್ ಯುರೋಪ್ , pp. ೮೫–೮೬.
  2. ವಿನಿಡಿಯಾರಿಸ್ ಬಗ್ಗೆ ಯಾವುದೂ ತಿಳಿದುಬಂದಿಲ್ಲ; ಅವನು ಗೋತ್ ಆಗಿರಬಹುದು, ಅಂತಹ ಪ್ರಕರಣದಲ್ಲಿ ಅವನ ಗೋಥಿಕ್ ಹೆಸರು ವಿನಿತಾರ್ಜಿಸ್ ಆಗಿರಬಹುದು.
  3. ಕ್ರಿಸ್ಟೋಫರ್ ಗ್ರೋಕೊಕ್ ಮತ್ತು ಸ್ಯಾಲಿ ಗ್ರೈಂಜರ್, ಆಪಿಸಿಯಸ್ ಎ ಕ್ರಿಟಿಕಲ್ ಎಡಿಷನ್ ವಿತ್ ಎನ್ ಇಂಟರೊಡಕ್ಷನ್ ಎಂಡ್ ಎನ್ ಇಂಗ್ಲೀಷ್ ಟ್ರಾನ್ಸ್‌ಲೇಷನ್ (ಪ್ರಾಸ್ಪೆಕ್ಟ್ ಬುಕ್ಸ್) ೨೦೦೬ ISBN ೧೯೦೩೦೧೮೧೩೭, pp. ೩೦೯-೩೨೫
  4. ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ, s.v. ಕುಕ್‌ಬುಕ್ ಪೂರ್ಣ ಪಠ್ಯ
  5. ಜಾನ್ ಡಿಕಿ, ಡೆಲಿಜಿಯ! ದಿ ಎಪಿಕ್ ಹಿಸ್ಟರಿ ಆಫ್ ದಿ ಇಂಡಿಯನ್ಸ್ ಎಂಡ್ ದೇರ್ ಫುಡ್ ೨೦೦೮, pp೫೦f.
  6. ಕಾನ್ಸ್‌ಟಾನ್ಸ್ B.ಹಿಯಾಟ್, "ಸಾರ್ಟಿಂಗ್ ಥ್ರೂ ದ ಟೈಟಲ್ಸ್ ಆಫ್ ಮಿಡೈವಲ್ ಡಿಷಸ್: ವಾಟಿ ಈಸ್, ಆರ್ ಈಸ್ ನಾಟ್, ಎ 'ಬ್ಲಾಂಕ್ ಮ್ಯಾಂಗರ್'" ಇನ್ ಫುಡ್ ಇನ್ ದಿ ಮಿಡಲ್ ಏಜಸ್ , pp. ೩೨–೩೩.
  7. ಮೆಲಿಟ್ಟಾ ವೈಸ್ ಅಡಾಂಸನ್, "ದಿ ಗ್ರೀಕೊ ರೋಮನ್ ವರ್ಲ್ಡ್" ಇನ್ ರೀಜನಲ್ ಕ್ವಿಸೈನ್ಸ್ ಆಫ್ ಮಿಡೈವಲ್ ಯುರೋಪ್ , p. ೧೬೧, ೧೮೨–೮೩
  8. ಅಡಾಂಸನ್(೨೦೦೪), pp. ೧೦೩, ೧೦೭.
  9. ಟೆಕ್ಸ್ಟ್ ಪ್ರಿನ್ಟೆಡ್ ಇನ್ ಎ. ಫಕ್ಕಿಒಲಿ, ಎಡ್. Arte della cucina dal XIV al XIX secolo (ಮಿಲನ್, ೧೯೬೬) ,ಸಂಪುಟ. I, pp.೬೧-೧೦೫, ಜಾನ್ ಡಿಕಿ ಅವರಿಂದ ವಿಶ್ಲೇಷಣೆ ೨೦೦೮, pp ೫೦ff.
  10. ಸೈಮನ್ ವ್ಯಾರಿ, "ಮಿಡೈವಲ್ ಎಂಡ್ ರಿನೈಸೇನ್ಸ್ ಇಟಲಿ, A. ದಿ ಪೆನಿನ್ಸುಲಾ ಇನ್" ರೀಜನಲ್ ಕ್ವಿಸಿನ್ಸ್ ಆಫ್ ಮಿಡೈವಲ್ ಯುರೋಪ್ , p. ೯೨.
  11. ಕಾನ್ಸ್‌ಟಾನ್ಸ್ B.ಹಿಯಾಟ್, "ಮಿಡೈವಲ್ ಬ್ರಿಟೇನ್"ರೀಜನಲ್ ಕ್ವಿಸಿನ್ಸ್ ಆಫ್ ಮಿಡೈವಲ್ ಯುರೋಪ್ , p. ೨೫.
  12. http://www.answers.com/topic/community-ಅಡುಗೆಪುಸ್ತಕs Answers.com

ಉಲ್ಲೇಖಗಳು‌‌[ಬದಲಾಯಿಸಿ]

  • ಅಡಾಂಸನ್, ಮೆಲಿಟ್ಟಾ ವೈಸ್ ಫುಡ್ ಇನ್ ಮಿಡೈವಲ್ ಟೈಮ್ಸ್ ಗ್ರೀನ್‌ವುಡ್ ಪ್ರೆಸ್, ವೆಸ್ಟ್‌ಪೋರ್ಟ್, CT. ೨೦೦೪. ISBN ೦-೩೧೩-೩೨೧೪೭-೭
  • ಫುಡ್ ಇನ್ ದಿ ಮಿಡಲ್ ಏಜಸ್: ಎ ಬುಕ್ ಆಫ್ ಎಸ್ಸೇಸ್ ಮೆಲಿಟ್ಟಾ ವೈಸ್ ಅಡಾಂಸನ್(ಸಂಪಾದಕ). ಗಾರ್ಲಾಂಡ್, ನ್ಯೂ ಯಾರ್ಕ್ ೧೯೯೫. ISBN ೦-೮೧೫೩-೧೩೪೫-೪.
  • ರೀಜನಲ್ ಕ್ವಿಸಿನ್ಸ್ ಆಫ್ ಮಿಡೈವಲ್ ಯುರೋಪ್: ಎ ಬುಕ್ ಆಫ್ ಎಸ್ಸೇಸ್. ಮೆಲಿಟ್ಟಾ ವೈಸ್ ಅಡಾಂಸನ್ ಅವರಿಂದ ಸಂಪಾದಿಸಿದೆ (ಸಂಪಾದಕ). ರೌಟ್‌ಲೆಡ್ಜ್, ನ್ಯೂ ಯಾರ್ಕ್ ೨೦೦೨. ISBN ೦-೪೧೫-೯೨೯೯೪-೬
  • ವಾಟ್ ಇಸ್ ದಿ ರಿಸೈಪ್? - ಅವರ್ ಹಂಗರ್ ಫಾರ್ ಕುಕ್‌ಬುಕ್ಸ್,ಅಡಾಂ ಗೋಪ್ನಿಕ್, ದಿ ನ್ಯೂಯಾರ್ಕರ್ , ೨೦೦೯.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: