ಬೆಸಿಮರ್ ಪರಿವರ್ತಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಗಿದ ಪಿಗ್ ಐರ್ನ್ ಇಂದ ಉಕ್ಕಿನ ರಾಶಿ-ಉತ್ಪನ್ನದ ಮೊದಲ ಅಗ್ಗದ ಔದ್ಯೋಗಿಕ ಪ್ರಕ್ರೀಯೆ ಬೆಸಿರ್ ಪ್ರಕ್ರೀಯೆ ಆಗಿತ್ತು. ಈ ಪ್ರಕ್ರೀಯೆಯ ತನ್ನ ಹೆಸರು ಅದರ ಸಂಶೋಧಕ ಹೆನ್ರಿ ಬೆಸಿಮರ್ ಇಂದ ಪಡೆದಿದೆ, 1855ರಲ್ಲಿ ಅವರು ಈ ಪ್ರಕ್ರೀಯೆಯ ಸ್ವಾಮ್ಯತೆಯನ್ನು ತೆಗೆದುಕೊಂಡರು. 1851ರಲ್ಲಿ ಈ ಪ್ರಕ್ರೀಯೆಯನ್ನು ತಕ್ಷಣವೇ ವಿಲಿಯಂ ಕೆಲಿ ಸ್ವತಂತ್ರವಾಗಿ ಸಂಶೋಧಿಸಿದರು.[೧][೨] ನೂರಾರು ವರ್ಷಗಳವರೆಗೆ ಈ ಪ್ರಕ್ರೀಯೆಯನ್ನು ಯೂರೋಪಿನ ಹೊರಗೆ ಕೂಡ ಬಳಸಲಾಗುತಿತ್ತು, ಆದರೆ ಔದ್ಯೋಗಿಕ ಮೊತ್ತದಲ್ಲಿ ಅಲ್ಲ.[೩] ಕರಗಿದ ಕಬ್ಬಿಣದ ಮುಖಾಂತರ ಗಾಳಿಯನ್ನು ಬೀಸಿ ಕಬ್ಬಿಣದ ಆಕ್ಸಿಡೀಕರಣದ ಮೂಲಕ ಕಲ್ಮಶಗಳನ್ನು ತೆಗೆಯುವುದು ಇದರ ಮೂಲ ಸಿದ್ಧಾಂತ. ಆಕ್ಸಿಡೀಕರಣ ಕಬ್ಬಿಣದ ರಾಶಿಯ ತಾಪಮಾನವನ್ನು ಕೂಡ ಹೆಚ್ಚಿಸುತ್ತದೆ ಹಾಗೂ ಅದನ್ನು ಕರಗಿದ ರೂಪದಲ್ಲೇ ಇಡುತ್ತದೆ.

ಬೆಸಿಮರ್ ಪರಿವರ್ತಕ, ಸ್ಕೀಮ್ಯಾಟಿಕ್ ಡಯಾಗ್ರಾಮ್

ಪ್ರಾಥಮಿಕ ರಿಫ್ರಾಕ್ಟರಿ ಲೈನಿಂಗ್ ಬಳಸುವ ಪ್ರಕ್ರೀಯೆ ಬೆಸಿಕ್ ಬೆಸಿಮರ್ ಪ್ರಕ್ರೀಯೆ ಅಥವಾ ಸಂಶೋಧಕ ಸಿಡ್ನಿ ಗಿಲ್‌ಕ್ರಿಸ್ಟ್ ಥೋಮಸ್ ಹೆಸರಿನ ಮೇಲೆ ಗಿಲ್‌ಕ್ರಿಸ್ಟ್-ಥೋಮಸ್ ಪ್ರಕ್ರೀಯೆ ಎಂದು ಪರಿಚಿತವಿದೆ.

ವಿವರಗಳು[ಬದಲಾಯಿಸಿ]

ಬೆಸಿಮರ್ ಪರಿವರ್ತಕ ಪರಿಕರಗಳು.

ಆಕ್ಸಿಡೀಕರಣ[ಬದಲಾಯಿಸಿ]

ಆಕ್ಸಿಡೀಕರಣದ ಪ್ರಕ್ರೀಯೆ ಸಿಲಿಕಾನ್, ಮ್ಯಾಂಗನೀಸ್ ಹಾಗೂ ಕಾರ್ಬನ್‌ಗಳಂತಹ ಕಲ್ಮಶಗಳನ್ನು ಆಕ್ಸೈಡ್ಸ್ ಆಗಿ ತೆಗೆಯುತ್ತದೆ. ಈ ಆಕ್ಸೈಡ್‌ಗಳು ಅನಿಲವಾಗಿ ತಪ್ಪಿಸಿಕೊಳ್ಳುತ್ತವೆ ಅಥವಾ ಘನ ಕಿಟ್ಟವಾಗಿ ರೂಪಗೊಳ್ಳುತ್ತವೆ. ಪರಿವರ್ತನೆಯಲ್ಲಿ ಪರಿವರ್ತಕದ ರಿಫ್ರ್ಯಾಕ್ಟರಿ ಲೈನಿಂಗ್ ಕೂಡ ಒಂದು ಪಾತ್ರವನ್ನು ನಿಭಾಯಿಸುತ್ತದೆ - ಆಮ್ಲ ಬೆಸಿಮರ್‌ ನಲ್ಲಿ ಜೇಡಿಮಣ್ಣನ್ನು ಬಳಸಿ ಒಳಪದರ ಜೋಡಿಸಲಾಗುವುದು, ಇದರ ಕಚ್ಚಾ ವಸ್ತುವಿನಲ್ಲಿ ಕಡಿಮೆ ಫೋಸ್ಫರಸ್ ಇರುತ್ತದೆ. ಬೆಸಿಕ್ ಬೆಸಿಮರ್‌ ನಲ್ಲಿ ಫೋಸ್ಫರಸ್‌ನ ಅಂಶ ಹೆಚ್ಚಿದಲ್ಲಿ ಡೊಲೊಮೈಟ್ ಅನ್ನು ಬಳಸಲಾಗುತ್ತದೆ (ಡೊಲೊಮೈಟ್ ಬದಲು ಲೈಂಸ್ಟೊನ್ ಅಥವಾ ಮ್ಯಾಗ್ನಸೈಟ್ ಅನ್ನು ಕೂಡ ಒಳಪದರ ಜೋಡಿಸಲು ಬಳಸಲಾಗುತ್ತದೆ) - ಇದು ಗಿಲ್‌ಕ್ರಿಸ್ಟ್-ಥೋಮಸ್ ಪರಿವರ್ತಕ ಎಂದು ಕೂಡ ಪರಿಚಿತವಾಗಿದೆ, ಇದರ ಸಂಶೋಧಕ ಸಿಡ್ನಿ ಗಿಲ್‌ಕ್ರಿಸ್ಟ್ ಥೋಮಸ್‌ನ ಹೆಸರಿನ ಮೇಲೆ. ಉಕ್ಕಿಗೆ ಇಚ್ಛಿತ ಗುಣಲಕ್ಷಣಗಳನ್ನು ನೀಡಲು, ಪರಿವರ್ತನೆ ಸಂಪೂರ್ಣಗೊಂಡ ಮೇಲೆ ಕರಗಿದ ಉಕ್ಕಿಗೆ ಇತರ ಪದಾರ್ಥಗಳನ್ನು ಸೇರಿಸ ಬಹುದು, ಉದಾಹರಣೆಗೆ ಸ್ಪಿಗಲೈಸನ್ (ಕಬ್ಬಿಣ-ಇಂಗಾಲ-ಮ್ಯಾಂಗನೀಸ್‌ನ ಒಂದು ಮಿಶ್ರಲೋಹ).

ಪ್ರಕ್ರೀಯೆಯನ್ನು ನಿರ್ವಹಿಸುವುದು[ಬದಲಾಯಿಸಿ]

ಅಗತ್ಯವಿರುವ ಉಕ್ಕು ತಯಾರಾದ ನಂತರ, ಅದನ್ನು ಲ್ಯಾಡಲ್‌ಗಳಲ್ಲಿ ಸುರಿದು ಅಚ್ಚುಗಳಿಗೆ ವರ್ಗಾಯಿಸಿಲಾಗುವುದು ಹಾಗೂ ಹಗೂರವಾದ ಕಿಟ್ಟ ಹಿಂದೆ ಉಳಿಯುತ್ತದೆ. "ಬ್ಲೊ" ಎಂದು ಕರೆಯಲಾದ ಪರಿವರ್ತನ ಪ್ರಕ್ರೀಯೆ ಇಪ್ಪತ್ತು ನಿಮಿಷಗಳಲ್ಲಿ ಸಂಪೂರ್ಣಗೊಂಡಿತು. ಈ ಪ್ರಕ್ರೀಯೆಯ ಸಮಯದಲ್ಲಿ ಕಲ್ಮಶಗಳ ಆಕ್ಸಿಡೀಕರಣದ ಮುಂದುವರಿಕೆಯನ್ನು ಪರಿವರ್ತಕದ ಬಾಯಿಯ ಮೂಲಕ ಕಾಣುವ ಜ್ವಾಲೆಯಿಂದ ನಿರ್ಣಯಿಸಬಹುದು: ಜ್ವಾಲೆಯ ಗುಣಲಕ್ಷಣಾಗಳನ್ನು ದಾಖಲಿಸಿಕೊಳ್ಳುವ ಫೋಟೊಎಲೆಕ್ಟ್ರಿಕ್ ಪದ್ಧತಿಗಳ ಆಧುನಿಕ ಬಳಕೆ, ಉತ್ಪನ್ನದ ಅಂತಿಮ ಗುಣಮಟ್ಟವನ್ನು ನಿಯಂತ್ರಿಸುವಲ್ಲಿ ಬ್ಲೊವರ್‌‌ಗೆ ಉತ್ಕೃಷ್ಟವಾಗಿ ಸಹಾಯ ಮಾಡುತ್ತದೆ. ಬ್ಲೊ ನಂತರ, ದ್ರವ ಧಾತು ಇಚ್ಛಿತ ಹಂತಕ್ಕೆ ಮರುಇಂಗಾಲೀಕರಣ ಮಾಡಲಾಗಿತು ಹಾಗೂ ಇಚ್ಛಿತ ಉತ್ಪನ್ನದ ಆಧಾರದ ಮೇಲೆ ಇತರ ಮಿಶ್ರಲೋಹ ಪದಾರ್ಥಗಳನ್ನು ಸೇರಿಸಲಾಗುವುದು.

ಪೂರ್ವಿಕ ಪ್ರಕ್ರೀಯೆಗಳು[ಬದಲಾಯಿಸಿ]

ಬೆಸಿಮರ್ ಪರಿವರ್ತಕ, ಸ್ಟೇಶನ್ ಸ್ಕ್ವಯರ್‌, ಪಿಟ್ಸ್‌ಬರ್ಗ್‌.

ಬೆಸಿಮರ್ ಪ್ರಕ್ರೀಯೆ ಮುಂಚೆ, ಬ್ರಿಟೆನ್ ಬಳಿ ಪಿಗ್ ಐರ್ನನ ಇಂಗಾಲು ಅಂಶವನ್ನು ಕಡಿಮೆಗೊಳಿಸಲು ಯಾವ ವಾಸ್ತವಿಕ ಪದ್ಧತಿಯೂ ಇರಲಿಲ್ಲ. ಇಂಗಾಲು-ಮುಕ್ತ ಮೆದುಕಭ್ಭಿಣಕ್ಕೆ ಇಂಗಾಲನ್ನು ಸೇರಿಸುವ ವಿಪರ್ಯಯ ಪ್ರಕ್ರೀಯೆಯ ಮೂಲಕ ಉಕ್ಕನ್ನು ಉತ್ಪಾದಿಸಲಾಗುತಿತ್ತು, ಈ ಮೆದುಕಬ್ಬಿಣವನ್ನು ಸಾಧಾರಣವಾಗಿ ಸ್ವಿಡನ್ ಇಂದ ಆಯಾತಿಸಲಾಗುತಿತ್ತು. ಸಿಮೆಂಟೆಷನ್ ಪ್ರಕ್ರೀಯೆ ಎಂದು ಕರೆಯಲಾದ ಉತ್ಪಾದನೆಯ ಪ್ರಕ್ರೀಯೆಯಲ್ಲಿ ಮೆದುಕಬ್ಬಿಣದ ಕಂಬಿಗಳನ್ನು ಇದ್ದಿಲಿನ ಜೊತೆ ಒಂದು ಉದ್ದ ಕಲ್ಲಿನ ಡಬ್ಬಿಯಲ್ಲಿ ಸುಮಾರು ಒಂದು ವಾರದವರೆಗೆ ಬಿಸಿ ಮಾಡುವ ಒಳಗೊಂಡಿದೆ. ಇದು ಬ್ಲಿಸ್ಟರ್ ಉಕ್ಕನ್ನು ಉತ್ಪಾದಿಸಿತು. ಪ್ರತಿ ಒಂದು ಟನ್ ಉಕ್ಕಿನ ಉತ್ಪಾದನೆಯಲ್ಲಿ ಸುಮಾರು 3 ಟನ್‌ಗಳಷ್ಟು ದುಬಾರಿ ಕಲ್ಲಿದ್ದಲ ಕಿಟ್ಟವನ್ನು ಸುಡಲಾಗುತಿತ್ತು. ಇಂತಹ ಉಕ್ಕನ್ನು ಕಂಬಿಗಳಾಗಿ ಸುರುಳಿ ಮಾರಿದಾಗ £50 ರಿಂದ £60 ರಷ್ಟು (2008ರಲ್ಲಿ ಸುಮಾರು £3,390 ರಿಂದ 4,070 ವರೆಗೆ)[೪] ಒಂದು ಉದ್ದ ಟನ್‌ಗೆ ದೊರಕುತಿತ್ತು. ಹೇಗಿದ್ದರೂ, ಸ್ವಿಡನ್‌ನ ಫೈನರಿ ಫೊರ್ಜ್‌ನಲ್ಲಿ ಮಾಡಲಾದ ಮೆದುಕಬ್ಬಿಣದ ಉತ್ಪಾದನೆಯು ಪ್ರಕ್ರೀಯೆಯ ಅತಿ ಕಠಿಣ ಹಾಗೂ ತೀವ್ರವಾದ ಕಾರ್ಯದ ಭಾಗವಾಗಿತ್ತು.

18ನೇಯ ಶತಮಾನದಲ್ಲಿ ಈ ಪ್ರಕ್ರೀಯೆಯನ್ನು ಬೆಂಜಮಿನ್ ಹಂಟ್ಸಮ್ಯನ್‌ರ ಕ್ರುಸಿಬಲ್ ಸ್ಟೀಲ್-ತಾಯಾರಿಕೆಯ ತಂತ್ರಜ್ಞಾನದ ಪರಿಚಯದಿಂದ ಪರಿಷ್ಕರಿಸಲಾಯಿತು, ಇದು ಅಧಿಕೃತ ಮೂರು ಘಂಟೆಗಳ ಉರಿಯುವಿಕೆಯ ಸಮಯವನ್ನು ಹಾಗೂ ಅಗತ್ಯವಿರುವ ಅಧಿಕೃತ ಹೆಚ್ಚು ಪ್ರಮಾಣದ ಕಲ್ಲಿದ್ದಲ ಕಿಟ್ಟವನ್ನು ಸೇರಿಸಿತು. ಕ್ರುಸಿಬಲ್ ಸ್ಟೀಲ್ ಮಾಡುವಾಗ, ಬ್ಲಿಸ್ಟರ್ ಉಕ್ಕಿನ ಕಂಬಿಗಳನ್ನು ತುಂಡುಗಳಾಗಿ ಮುರಿದು ಮತ್ತು 20 kg ಅಥವಾ ಅದೆ ಗಾತ್ರದ ಸಣ್ಣ ಕೂವೆಗಳಾಗಿ ಪ್ರತಿಯೊಂದನ್ನು ಕರಗಿಸಲಾಗಿತು. ಇದು ಉನ್ನತ ಗುಣಮಟ್ಟದ ಕ್ರುಸಿಬಲ್ ಸ್ಟಿಲ್ ಅನ್ನು ಉತ್ಪಾದಿಸಿತು ಆದರೆ ಬೆಲೆಯನ್ನು ಹೆಚ್ಚಿಸಿತು. ಬೆಸಿಮರ್ ಪ್ರಕ್ರೀಯೆ ಈ ಗುಣಮಟ್ಟದ ಉಕ್ಕನ್ನು ತಯಾರಿಸಲು ಅಗತ್ಯವಿರುವ ಸಮಯದಲ್ಲಿ ಅರ್ಧ ಘಂಟೆಯ ಸಮಯವನ್ನು ಕಡಿಮೆಗೊಳಿಸಿತು ಮತ್ತು ಪಿಗ್ ಐರ್ನ್ ಅನ್ನು ಕರಗಿಸಲು ಆರಂಭದಲ್ಲಿ ಬರಿ ಕಲ್ಲಿದ್ದಲ ಕಿಟ್ಟದ ಅಗತ್ಯವನ್ನು ತೋರಿತು. ಮೊದಲಿನ ಬೆಸಿಮರ್ ಪರಿವರ್ತಕಗಳು ಒಂದು ಉದ್ದ ಟನ್ ಉಕ್ಕನ್ನು £7 ಗೆ ಉತ್ಪಾದಿಸುತ್ತಿದ್ದರು, ಆದರೂ ಅವುಗಳನ್ನು ಆರಂಭದಲ್ಲಿ ಸುಮಾರು £40 ಪ್ರತಿ ಟನ್‌ಗೆ ಮಾರುತ್ತಿದ್ದರು.

ಇತಿಹಾಸ[ಬದಲಾಯಿಸಿ]

ಬೆಸಿಮರ್ ಪರಿವರ್ತಕ, ಕೇಲ್ಹಾಮ್ ಐಲ್ಯಾಂಡ್ ಮ್ಯೂಸಿಯಂ‍, ಶೆಫೀಲ್ಡ್‌, ಇಂಗ್ಲೆಂಡ್‌ (2010).

11ನೇಯ ಶತಮಾನದಲ್ಲಿ ಚೈನಾದ ಸೊಂಗ್ ರಾಜವಂಶದವರು, ಕ್ಯಾಸ್ಟ್ ಕಬ್ಬಿಣವನ್ನು ತಣ್ಣನೆಯ ಸಿಡಿತದ ಅಡಿಯಲಿ ಲೋಹದ ಕುಲುಮೆಯಲ್ಲಿ ಮತ್ತೆ ಮತ್ತೆ ಹಾಕುವ ಒಂದು "ಭಾಗಶಃ ಕಾರ್ಬನೀಕರಣವನ್ನು ರದ್ಧುಗೊಳಿಸುವಿಕೆಯ (decarbonization)" ಪದ್ಧತಿಯ ಹೊಸ ವಿಧಾನವನ್ನು ಕಂಡು ಹಿಡಿದಿದ್ದರು ಎಂದು ಇತಿಹಾಸಕಾರ ರಾಬರ್ಟ್ ಹಾರ್ಟ್‌ವೆಲ್ ಉಲ್ಲೇಖಿಸುತ್ತಾರೆ.[೫] ಇತಿಹಾಸಕಾರರಾದ ಜೊಸೆಫ್ ನಿಧಿಮ್ ಹಾಗೂ ವರ್ಟೈಮ್ ಇದನ್ನು ಉಕ್ಕಿನ ತಯಾರಿಕೆಯ ಬೆಸಿಮರ್ ಪದ್ಧತಿಯ ಪೂರ್ವಿಕ ಎಂದು ಅಂಗೀಕರಿಸಿದ್ದಾರೆ. ಈ ಪದ್ಧತಿಯನ್ನು ಮೊದಲ ಬಾರಿಗೆ ಸಂತಾನೋತ್ಪಾದಕ ವಿದ್ವಾಂಸ ಹಾಗೂ ಪೊಲಿಮ್ಯಾಥ್ ಸರ್ಕಾರದ ಅಧಿಕಾರಿಯಾದ ಶೆನ್ ಕುವೊ (1031-1095) 1075ರಲ್ಲಿ ಅವರು ಸಿಸ್‍ಹೌ ಪ್ರವಾಸ ಮಾಡಿದಾಗ ವಿವರಿಸಿದರು.[೫] 11ನೇಯ ಶತಮಾನದ ಸಮಯದಲ್ಲಿ ಇದನ್ನು ಬಳಕೆಗೆ ತಂದ ಆರಂಭದ ಕೇಂದ್ರ ಬಹುಶಃ ಶ್ರೇಷ್ಠವಾದ ಕಬ್ಬಿಣ-ಉತ್ಪಾದಕ ಜಿಲ್ಲೆ ಹೆನನ್-ಹೆಬಾಯಿ ಗಡಿಯಾಗಿತ್ತು ಎಂದು ಹಾರ್ಟ್‌ವೆಲ್ ಹೇಳುತ್ತಾರೆ.[೫]

1740ರಲ್ಲಿ ಶೆಫಿಲ್ಡ್‌ನ ಹ್ಯಾಂಡ್ಸ್‌ವರ್ಥ್ ಜಿಲ್ಲೆಯ ತನ್ನ ಕಾರ್ಯಾಗಾರದಲ್ಲಿ, ಬೆಂಜಮಿನ್ ಹಂಟ್ಸ್‌ಮ್ಯನ್ ಉಕ್ಕಿನ ಉತ್ಪಾದನೆಗೆ ಕ್ರುಸಿಬಲ್ ತಂತ್ರಜ್ಞವನ್ನು ಅಭಿವೃದ್ಧಿಗೊಳಿಸಿದರು. ಉಕ್ಕು ಉತ್ಪಾದನೆಯ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಈ ಪ್ರಕ್ರೀಯೆ ಅಗಾಧವಾದ ಪ್ರಭಾವವನ್ನು ಬೀರುತ್ತದೆ.

ಸರ್ ಹೆನ್ರಿ ಬೆಸಿಮರ್ ತನ್ನ ಆವಿಷ್ಕರಣದ ಆರಂಭದ ಬಗ್ಗೆ ತನ್ನ ಆತ್ಮಚರಿತ್ರೆಯ ಅಧ್ಯಾಯ 10 ಹಾಗೂ 11ರಲ್ಲಿ ವಿವರಿಸಿದ್ದಾರೆ. ಈ ಪುಸ್ತಕದ ಪ್ರಕಾರ ಕ್ರಿಮಿಯನ್ ಯುದ್ಧದ ನಂತರದಲ್ಲಿ ಹಲವಾರು ಇಂಗ್ಲೀಷ್ ಕೈಗಾರಿಕೋಧ್ಯಮಿಗಳು ಮತ್ತು ಆವಿಷ್ಕಾರಿಗಳು ಮಿಲಿಟರಿ ತಂತ್ರಜ್ಞಾನದ ಕುರಿತಾದ ಕುತೂಹಲವವನ್ನು ವ್ಯಕ್ತಪಡಿಸಿದರು. ಈ ಸಮಯದಲ್ಲಿ ಬೆಸೆಮರ್ ಅವನಾಗಿಯೇ ರೈಫಲ್‌ ಮಾಡುವ ಅಗತ್ಯವಿಲ್ಲದೇ ತಾವಾಗಿಯೇ ತುಂಬಿಕೊಳ್ಳುವ ಫಿರಂಗಿಗಳ ವಿಧಾನವನ್ನು ಕಂಡುಹಿಡಿದನು. 1854ರಲ್ಲಿ ಅವರು ಈ ಪದ್ಧತಿಯನ್ನು ಸ್ವಾಮ್ಯಗೊಳಿಸಿದರು ಹಾಗೂ ಫ್ರಾಂನ್ಸ್‌ನ ಸರ್ಕಾರದ ಜೊತೆ ಸೇರಿ ಇದನ್ನು ಅಭಿವೃದ್ಧಿಸಲು ಆರಂಭಿಸಿದರು. ಫ್ರಾಂನ್ಸ್‌ನ ಪಾಲಿಗಾನ್‌ನಲ್ಲಿ ಪರೀಕ್ಷಣದ ಸಫಲ ದಿನದ ನಂತರ ಕ್ಲೌಡ್-ಎಟಿನೆ ಮಿನಿಯೊಂದಿಗೆ ಸಂಭಾಷಣೆ ನಡೆಸಿದರು, ಅವರು ಇದರ ಬಗ್ಗೆ ಹೇಳಿದ್ದು ದೊಡ್ಡ ಹಾಗೂ ಭಾರವಾದ ಪರಿಭ್ರಮಿಸುವ ಪ್ರೊಜೆಕ್ಟೈಲ್‌ಗಳ ಬಳಕೆಗೆ ಪ್ರಮುಖ ಅಡಚಣೆ ಗನ್‌ನ ಶಕ್ತಿ ಹಾಗೂ ನಿರ್ಧಿಷ್ಟವಾಗಿ "...ಅವರಿಗೆ [ಮಿನಿ] ಸುರಕ್ಷಿತವಲ್ಲವೆನಿಸಿದ 12-ಪೌಂಡರ್‌‌ಗಳ ಕ್ಯಾಸ್ಟ್-ಐರ್ನ್ ಗನ್ ಮೂಲಕದ 30-lb ಶೊಟ್‌ನ ಗುಂಡು ಹಾರಿಸುವುದು. ನಿಜವಾದ ಪ್ರಶ್ನೆ ಎಂದರೆ, ಅವರು ಹೇಳಿದ್ದು; ಇಂತಹ ಭಾರವಾದ ಪ್ರೊಜೆಕ್ಟೈಲ್‌ಗಳನ್ನು ತಾಳಿಕೊಳ್ಳುವ ಶಕ್ತಿಹೊಂದ ಗನ್‌ಗಳನ್ನು ತಯಾರಿಸಬಹುದೆ?". ಇದು ಬೆಸಿಮರ್‌ ಅನ್ನು ಉಕ್ಕಿನ ಬಗ್ಗೆ ಯೋಚಿಸಲು ಪ್ರೇರಿಸಿತು. ಆ ಸಮಯದಲ್ಲಿ ಉಕ್ಕನ್ನು ತಯಾರಿಸುವುದು ಕಠಿಣ ಹಾಗೂ ದುಬಾರಿಯಾಗಿತ್ತು ಮತ್ತು ಪರಿಣಾಮವಾಗಿ ಬರಿ ಕಟ್ಲರಿ ಹಾಗೂ ಸಲಕರಣೆಗಳಂತಹ ಚಿಕ್ಕ ವಸ್ತುಗಳಲ್ಲಿ ಮಾತ್ರ ಬಳಸಲಾಗುತ್ತದೆ. ಫಿರಂಗಿ ದಳಗಳಿಗೆ ಅಗತ್ಯವಿರುವ ಭಾರಿ ಪ್ರಮಾಣದ ಉಕ್ಕನ್ನು ಉತ್ಪಾದಿಸುವ ಒಂದು ಮಾರ್ಗದತ್ತ ಅವರು ಜನವರಿ 1855ರಲ್ಲಿ ಕೆಲಸ ಪ್ರಾರಂಭಿಸಿದರು ಮತ್ತು ಅಕ್ಟೊಬರ್ ಅಷ್ಟರಲ್ಲಿ ಬೆಸಿಮರ್ ಪ್ರಕ್ರೀಯೆಗೆ ಸಂಬಂಧಿಸಿದ ಮೊದಲ ಸ್ವಾಮ್ಯವನ್ನು ಫೈಲ್ ಮಾಡಿದರು.

ತನ್ನ ಆತ್ಮಚರಿತ್ರೆಯ ಅನುಸಾರ ಬೆಸಿಮರ್ ಮೊದಲು ಒಂದು ಸಾಧಾರಣ ರೆವರ್ಬೆಟರಿ ಫರ್ನೆಸ್ ಮೇಲೆ ಕೆಲಸ ಮಾಡಲು ಆರಂಭಿಸಿದರು, ಆದರೆ ಪ್ರಯೋಗದ ಸಮಯದಲ್ಲಿ ಎರಡು ಪಿಗ್ ಇಂಗಿಟ್‌ಗಳು ಲ್ಯಾಡಲ್‌ನ ಪಕ್ಕಕೆ ಇಳಿದು ಫರ್ನೆಸ್‌ನ ಬಿಸಿ ಗಾಳಿಯ ಮೇಲೆ ಕುಳಿತ್ತಿದ್ದವು. ಅವುಗಳನ್ನು ಬೆಸಿಮರ್ ಲ್ಯಾಡಲ್ ಒಳಗೆ ತಳ್ಳಲು ಪ್ರಯತ್ನಿಸಿದಾಗ ಅದು ಉಕ್ಕಿನ ಚಿಪ್ಪುಗಳೆಂದು ಅವರು ತಿಳಿದರು: ಬರಿ ಬಿಸಿ ಗಾಳಿಯೊಂದೆ ಇಂಗೋಟ್ಸ್‌ನ ಹೊರ ಭಾಗಗಳನ್ನು ಉಕ್ಕಿಗೆ ಪರಿವರ್ತಿಸಿತು. ಈ ನಿರ್ಣಾಯಕ ಸಂಶೋಧನೆಯು ಅವರು ಫರ್ನೆಸ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲು ದಾರಿ ಮಾಡಿತು, ಹೀಗೆ ಅದು ವಿಶೇಷ ಗಾಳಿಯ ಪಂಪುಗಳನ್ನು ಬಳಸಿ ಕರಗಿದ ಕಬ್ಬಿಣದ ಮುಖಾಂತರ ಹೆಚ್ಚು-ಒತ್ತಡದ ಗಾಳಿಯನ್ನು ರಭಸದಿಂದ ತಳ್ಳಬಹುದು. ಅದೇ ರೀತಿ ಇದು ತಪ್ಪಾಗಬಹುದು ಏಕೆಂದರೆ ಇದು ಕಬ್ಬಿಣವನ್ನು ತಂಪುಗೊಳಿಸಬಹುದು ಆದರೆ ಎಕ್ಸೊಥರ್ಮಿಕ್ ಆಕ್ಸಿಡೀಕರಣದಿಂದಾಗಿ ಸಿಲಿಕಾನ್ ಮತ್ತು ಕಾರ್ಬನ್ ಎರಡೂ ಕೂಡಾ ಹೆಚ್ಚಿನ ಆಮ್ಲಜನಕದ ಬಿಟ್ಟು ಸುತ್ತಲಿನ ಮಾಲ್ಟನ್ ಕಬ್ಬಿಣವನ್ನು ಹೆಚ್ಚು ಬಿಸಿ ಮಾಡುವ ಮೂಲಕ ಸ್ಟೀಲ್‌ನ ಬದಲಾವಣೆಯನ್ನು ಹೆಚ್ಚಿಸುತ್ತದೆ.

ಒಟ್ಟು £27,000ಗೆ ಬೆಸಿಮರ್ ತನ್ನ ಪ್ರಕ್ರೀಯೆಯ ಸ್ವಾಮ್ಯದ ಪರವಾನಗಿಯನ್ನು ಐದು ಐರ್ನ್‌ಮಾಸ್ಟರ್‌ ರಿಗೆ ನೀಡಿದರು, ಆದರೆ ಈ ಪರವಾನಗಿಗಳು ಅವರು ಭರವಸೆ ನೀಡಿದ್ದ ಉಕ್ಕಿನ ಗುಣಮಟ್ಟವನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಅವರು ಅವುಗಳನ್ನು £32,500 ಗೆ ಹಿಂದೆ ಪಡೆದರು.[೬] ಕಬ್ಬಿಣದಲ್ಲಿನ ಕಲ್ಮಶಗಳು ಸಮಸ್ಯೆಗೆ ಕಾರಣ ಎಂದು ಅವರು ಮನನ ಮಾಡಿಕೊಂಡು ಪರಿಹಾರ ಈ ಪ್ರಕ್ರೀಯೆಯಲ್ಲಿ ಯಾವಾಗ ಗಾಳಿಯ ಚಲನವನ್ನು ನಿಲ್ಲಿಸಬೇಕೆಂದು ಅರಿಯುವುದರಲ್ಲಿ ಇದೆ ಎಂದು ತೀರ್ಮಾನಿಸಿದರು; ಹೀಗೆ ಕಲ್ಮಶಗಳು ಸುಟ್ಟು ಹೋಗುತ್ತವೆ, ಆದರೆ ಬರಿ ಸರಿಯಾದ ಪ್ರಮಾಣದ ಇಂಗಾಲು ಉಳಿಯುತ್ತದೆ. ಹೇಗಿದ್ದರೂ, ಪ್ರಯೋಗಗಳ ಮೇಲೆ ಹತ್ತು ಸಾವಿರಗಳ ಪೌಂಡಗಳನ್ನು ಖರ್ಚು ಮಾಡಿದರು, ಅವರಿಗೆ ಉತ್ತರ ದೊರಕಲಿಲ್ಲ.[೭] ಕೆಲವು ಉಕ್ಕಿನ ದರ್ಜೆಗಳು 78% ನೈಟ್ರೊಜನ್‌ಗೆ ಸೂಕ್ಷ್ಮಗ್ರಾಹಿವಾಗಿರುತ್ತವೆ, ಇದು ಉಕ್ಕಿನ ಮುಖಾಂತರ ಪ್ರವಾಸಿಸಿದ ಗಾಳಿಯ ಸ್ಪೋಟದ ಭಾಗವಿರಬಹುದು.

ಸರಳ ಆದರೆ ಸೊಗಸಾದ ಪರಿಹಾರವನ್ನು ಮೊದಲು ಇಂಗ್ಲಿಷ್‌ನ ಮೆಟಲರ್ಜಿಸ್ಟ್ ರೋಬರ್ಟ್ ಫೋರ್ಸ್ಟರ್ ಮುಶೆಟ್ ಸಂಶೋಧಿಸಿದರು, ಇವರು ಫೊರೆಸ್ಟ್ ಒಫ್ ಡೀನ್‌ನಲ್ಲಿ ಸಾವಿರಾರು ವೈಜ್ಞಾನಿಕವಾಗಿ ಮಾನ್ಯವಾದ ಪ್ರಯೋಗಗಳನ್ನು ನಡೆಸಿದ್ದಾರೆ. ಸಾಧ್ಯವಾದಷ್ಟು ಎಲ್ಲ ಕಲ್ಮಶಗಳನ್ನು ಹಾಗೂ ಇಂಗಾಲನ್ನು ಮೊದಲು ಸುಡಬೇಕು, ನಂತರ ಸ್ಪಿಗಲೈಸನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸುವುದರಿಂದ ಇಂಗಾಲು ಹಾಗೂ ಮ್ಯಾಂಗನೀಸ್ ಅನ್ನು ಪುನಃ ಪರಿಚಯಿಸಲಾಗುತ್ತದೆ ಅವರ ಪದ್ಧತಿಯ ಅನುಸಾರ. ಇದರಲ್ಲಿ ತಯಾರಾದ ಉತ್ಪನ್ನದ ಗುಣಮಟ್ಟವನ್ನು ವೃದ್ಧಿಸುವ ಪ್ರಭಾವವಿತ್ತು, ಹೀಗೆ ಅದರ ಹೊಂದಿಕೊಳ್ಳುವ ಸ್ವಭಾವವು ಹೆಚ್ಚಾಗುತಿತ್ತು - ಹೆಚ್ಚು ತಾಪಮಾನಗಳಲ್ಲಿ ಅದರ ಉರುಳುವಿಕೆ ಹಾಗೂ ಮುನ್ನುಗ್ಗುವಿಕೆಯನ್ನು ತಡೆಯುವ ಸಾಮರ್ಥ್ಯ ಮತ್ತು ಅದನ್ನು ವಿಶಾಲವಾದ ಉಪಯೋಗಗಳಿಗೆ ಹೆಚ್ಚು ಸಮರ್ಥ ಮಾಡುತ್ತದೆ.[೮][೯][೧೦]

ಈ ಪ್ರಕ್ರೀಯೆಯ ಪರವಾನಗಿಯನ್ನು ತೆಗೆದುಕೊಳ್ಳುವ ಮೊದಲ ಕಂಪನಿ ಡೌಲಯಿಸ್ ಐರ್ನ್ ಕಂಪನಿಯಾಗಿತ್ತು. ಮೊದಲ ಬೆಸಿಮರ್ ಉಕ್ಕನ್ನು ಉತ್ಪಾದಿಸಲು ಕಂಪನಿ ಈ ಪ್ರಕ್ರೀಯೆಯನ್ನು ನಿಯೋಜಿಸಿದ್ದು 1865.[೧೧]

1855ರಲ್ಲಿ ಸಂಯುಕ್ತ ರಾಷ್ಟ್ರ ಮಿಚಿಗನ್‌ನ ವೈನ್ಡೊಟ್‌ನಲ್ಲಿ ಮೊದಲ ಬೆಸಿಮರ್ ಉಕ್ಕಿನ ಮಿಲ್ ಅನ್ನು ಸ್ಥಾಪಿಸಲಾಗಿತ್ತು, ಇದು ಡೆಟ್ರೊಯಿಟ್ ಇಂದ ಸುಮಾರು 14 ಮೈಲಿಗಳ ದಕ್ಷಿಣದಲ್ಲಿ, ಡೆಟ್ರೊಯಿಟ್ ನದಿಯ ಮೇಲಿತ್ತು. ದೊಡ್ಡ ತಳಗಳ ಸರಳ ಹಡಗು ರವಾನೆಗಳಿಗೆ ಮತ್ತು ಉತ್ತರ ಮಿಚಿಗನ್, ವಿಸ್ಕೊಂಸಿನ್ ಹಾಗೂ ಮಿನೆಸೊಟಗಳಿಂದ ಕಬ್ಬಿಣದ ಅದಿರಿನ ಪ್ರವೇಶದ ಕಾರಣ ಉತ್ತರ ಅಮೇರಿಕಾದಲ್ಲಿ ಡೆಟ್ರೊಯಿಟ್ ಉಕ್ಕನ್ನು ಉತ್ಪಾದಿಸುವ ಆರಂಭದ ನಗರವಾಯಿತು. ಆಟೊಮೊಬೈಲ್ ಉತ್ಪಾದನೆಯ ಪ್ರಚಲಿತ ಕೇಂದ್ರವಾಗಿ ಡೆಟ್ರೊಯಿಟ್ ಅಭಿವೃದ್ಧಿಗೊಳ್ಳುವಲ್ಲಿ ಇವು ಪ್ರಮುಖ ಅಂಶಗಳಾಗಿದ್ದವು.

ಹಕ್ಕು ಸ್ವಾಮ್ಯತ್ವದ ವಿವಾದ[ಬದಲಾಯಿಸಿ]

ಬೆಸಿಮರ್ ಪರಿವರ್ತಕ, ಕೇಲ್ಹಾಮ್ ಐಲ್ಯಾಂಡ್ ಮ್ಯೂಸಿಯಂ‍, ಶೆಫೀಲ್ಡ್‌, ಇಂಗ್ಲೆಂಡ್‌ (2002)

ಹಕ್ಕು ಸ್ವಾಮ್ಯತ್ವವು ಕೂಡ ವಿಮರ್ಷೆಯಿಂದ ಹೊರತಾಗಿರಲಿಲ್ಲ, ಮತ್ತು ಅಸಂವಿಧಾನಿಕವಾಗಿ ವಿವಿಧ ತಳಹದಿಗಳಿಂದ ಒತ್ತಾಯವನ್ನು ಹೇರಲಾಯಿತು. ಆದರೆ ಬೆಸ್ಸೆಮರ್‌ ಅವರು ಖಟ್ಲೆ ಇಲ್ಲದೇ ವಿವಾದವನ್ನು ಬಗೆಹರಿಸುವಷ್ಟು ಅದೃಷ್ಟವಂತರಾಗಿದ್ದರು,ಆದ್ದರಿಂದ ಒಬ್ಬನ ಹಕ್ಕು ಸ್ವಾಮ್ಯತ್ವವನ್ನು ಖರೀದಿಸಲು ಮನಸ್ಸು ಮಾಡಿದರು. ರಾಬರ್ಟ್ ಪಾರೆಸ್ಟರ್‌ ಮುಶಿತ್‌ ಇವರ ವಿಷಯದಲ್ಲಿ 1859ರಲ್ಲಿ ಶುಲ್ಕವನ್ನು ಪಾವತಿಸದೇ ವಾಯಿದೆ ಮೀರಿದ್ದರಿಂದ ಹಕ್ಕು ಸ್ವಾಮ್ಯತ್ವದ ಭಯದಲ್ಲಿದ್ದರು.

ಮುಶೆತ್‌ ಅವರ ಕಾರ್ಯವಿಧಾನವು ಅಷ್ಟೊಂದು ಅವಶ್ಯಕವಾಗಿರಲಿಲ್ಲ ಮತ್ತು ಬೆಸ್ಸೆಮರ್‌ ಅವರು 1865ರಲ್ಲಿ ಹಲವಾರು ಉಕ್ಕಿನ ವಸ್ತುಗಳನ್ನೇ ಬಳಸಿಕೊಂಡು ಮಾಡಬಹುದಾದ ಕಾರ್ಯವಿಧಾನವನ್ನು ಸಾಧಿಸಿ ತೋರಿಸಿದ್ದರು. ಆದರೆ ಮುಶೆತ್‌ ಅವರ ಕಾರ್ಯವಿಧಾನದ ಮೌಲ್ಯವು ಬೆಸ್ಸೆಮರ್‌ ಅವರ ಕಾರ್ಯಯೋಜನೆಯ ಜೊತೆಗೂಡಿ ವಿಶ್ವವ್ಯಾಪಕವಾದ ಕಾರ್ಯವಿಧಾನವಾಗುವ ಲಕ್ಷಣವನ್ನು ಹೊಂದಿತ್ತು. ಮುಶೆತ್‌ ಅವರ ಹಕ್ಕು ಸ್ವಾಮ್ಯತ್ವವು ಆಧಾರ ಸಹಿತವಾಗಿಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲದೇ ಇದ್ದರೂ, 1866ರಲ್ಲಿ ರಾಬರ್ಟ ಮೆಶೆತ್‌ ಅವರ 16 ವರ್ಷದ ಮಗಳು, ಲಂಡನ್‌ಗೆ ತೆರಳಿ ಬೆಸ್ಸೆಮರ್‌ ಅವರನ್ನು ಸಂಧಿಸಿ ಅವರ ಸಾಧನೆಯು ತನ್ನ ತಂದೆಯ ಫಲಿತಾಂಶವನ್ನು ಆಧರಿಸಿದೆ ಎಂದು ವಾದಿಸಿದಳು. ಬೆಸ್ಸೆಮರ್‌ ಅವರು ಮುಶತ್‌ ಅವರಿಗೆ £300 ಗಳ ಪಿಂಚಣಿಯನ್ನು ನೀಡಲು ನಿರ್ಧರಿಸಿದರು.ಈ ಮೊತ್ತವನ್ನು ಅವರು ೨೫ವರ್ಷಕ್ಕಾಗಿ ನೀಡಿದ್ದರು; ಮತ್ತು ಇದು ಮುಶತ್‌ ಅವರ್‍ನ್ನು ಕಾನೂನಿನ ಪ್ರಕಾರ ಕ್ರಮ ಕೈಗೋಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಮಾಡಿದ ಕ್ರಮವಾಗಿತ್ತು.[೯][೧೨]

1866ರಲ್ಲಿ, ಲಂಡನ್‌ನ ಬೆಡ್‌ ಫೋರ್ಟ್ ಮೂಲದ ಅಮೇರಿಕಾದ ಲೊಕೊಮೊಟಿವ್‌ನ ಇಂಜಿನಿಯರ್‌ ಮತ್ತು ಪತ್ರಕರ್ತರಾದ ಝೆರಾಹ್‌ ಕೊಲ್‌ಬರ್ನ್ ಇವರಿಗೆ ’ಇಂಜಿನಿಯರಿಂಗ್‌ ’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸುವ ಸಲುವಾಗಿ ಧನ ಸಹಾಯವನ್ನೂ ಮಾಡಿದರು. ಇದು ಬಹಳವರ್ಷದ ವರೆಗೆ ಹಾಗೇಯೆ ನಡೆಯದೆ ಕೊಲ್‌ಬರ್ನ್ಸ್ ಅವರ ಪೋಷಕರು ಬದಲಾವಣೆಯನ್ನು ಕಂಡಿತು. ಇಂಜಿನಿಯರಿಂಗ್‌ ಪತ್ರಿಕೆ ಪ್ರಾರಂಭವಾಗುವ ಮೊದಲು ಕೊಲ್‌ಬರ್ನ್‌ ಅವರು ತಮ್ಮ ದ ಎಂಜಿನಿಯರ್ ಪತ್ರಿಕೆಯ ಪುಟಗಳ ತುಂಬ ಬೆಸ್ಸ್‌ಮರ್‌ ಅವರ ಕೆಲಸ ಮತ್ತು ಉಕ್ಕು ತಯಾರಿಕೆಯನ್ನು ಪ್ರತಿಪಾಧಿಸಿ ಲೇಖನಗಳನ್ನು ಪ್ರಕಟಿಸಿದರು.

ಮಹತ್ವ[ಬದಲಾಯಿಸಿ]

ಬೆಸ್ಸೆಮರ್‌ ಅವರ ಕಾರ್ಯವಿಧಾನವು ಕ್ರಾಂತಿಕಾರಕವಾಗಿ ಉಕ್ಕಿನ ತಯಾರಿಕಾ ವೆಚ್ಚವನ್ನು £40 ಲಾಂಗ್‌ ಟನ್‌ನಿಂದ £6-7 ಗೆ ಇದರ ಪರಿಚಯದ ಸಂದರ್ಭದಲ್ಲೆ ಇಳಿಸಿದರು, ಇದರ ಜೊತೆಗೆ ಒಳ್ಳೆಯ ಗುಣಮಟ್ಟದ ಮತ್ತು ಕ್ಷಿಪ್ರಗತಿಯಲ್ಲಿ ಈ ಕಚ್ಚಾವಸ್ತುಗಳ ಉತ್ಪಾದನೆಯನ್ನು ಅಳವಡಿಸಿದರು. ಈ ಕಾರ್ಯವಿಧಾನವು ಉಕ್ಕು ಉತ್ಪಾದನೆಯಲ್ಲಿ ಕಾರ್ಮಿಕರ ಅವಶ್ಯಕತೆಯನ್ನೂ ಸಹ ಕಡಿಮೆಗೊಳಿಸಿತು. ಕೈಗಾರಿಕಾ ಕ್ರಾಂತಿಯ ಮೊದಲು ಸೇತುವೆಗಳನ್ನೂ, ಮನೆಯ ಚೌಕಟ್ಟುಗಳನ್ನು ಕಟ್ಟಲು ಬಳಸುವ ಉಕ್ಕುಗಳು ತುಂಬ ದುಬಾರಿಯಾದ್ದರಿಂದ ಮೆತು ಕಬ್ಬಿಣವನ್ನು ಬಳಸಲಾಗುತ್ತಿತ್ತು. ಬೆಸ್ಸೆಮ್ಮರ್‌ ಇವರ ಕಾರ್ಯವಿಧಾನದಿಂದ ಉಕ್ಕು ಮತ್ತು ಮೆತು ಕಬ್ಬಿಣ ಎರಡರ ದರವೂ ಹತ್ತಿರ ಹತ್ತಿರ ಬಂದವು, ಇದರಿಂದ ಬಹಳಷ್ಟು ಉತ್ಪಾದಕು ಉಕ್ಕನ್ನು ಬಳಸುವಲ್ಲಿ ಮನಮಾಡಿದರು. ಉಕ್ಕು ಕಡಿಮೆ ದರದಲ್ಲಿ ದೊರೆಯತೊಡಗಿದ್ದರಿಂದ ದೊಡ್ಡ ಸೇತುವೆಗಳನ್ನೂ,ಉಗಿಬಂಡಿ ದಾರಿಗಳನ್ನೂ, ವಿಮಾನ ನಿಲ್ದಾಣಗಳನ್ನೂ, ದೊಡ್ಡ ಹಡಗುಗಳನ್ನೂ ಕಟ್ಟಲು ಸಹಾಯಕವಾಯಿತು.[೧೩] ಮತ್ತು ಉಕ್ಕಿನ ಇತರ ಉತ್ಪನ್ನಗಳಾದ ಕೇಬಲ್‌ಗಳು, ಉಕ್ಕಿನ ದಂಡಗಳನ್ನೂ, ಉಕ್ಕಿನ ಶೀಟ್‌ಗಳನ್ನೂ , ಹೆಚ್ಚು ಒತ್ತಡದ ಉಗಿಯಂತ್ರಗಳನ್ನೂ ಮತ್ತು ಯಂತ್ರಗಳಲ್ಲಿನ ಹೆಚ್ಚು ಉಷ್ಣತೆಯನ್ನು ತಡೆದುಕೊಳ್ಳುವ ಯಂತ್ರಗಳನ್ನೂ ಗೇರ್‌ಗಳನ್ನೂ ಮತ್ತು ಎಕ್ಸೆಲ್‌ಗಳನ್ನು ಮೊದಲಿಗಿಂತ ಹೆಚ್ಚು ಗಟ್ಟಿಮುಟ್ಟಾಗಿ ಮಾಡಲು ಅನುಕೂಲವಾಯಿತು. ಗಟ್ಟಿಯಾದ ಉಕ್ಕಿನ ಸಹಕಾರದೊಂದಿಗೆ ದೊಡ್ಡ ಬಂದೂಕುಗಳನ್ನೂ ಮತ್ತು ಅದಕ್ಕೆ ಹಾಕುವ ತೋಟಾ ಗಳನ್ನೂ ತಯಾರಿಸಲು ಟ್ಯಾಂಕರ್‌ಗಳನ್ನೂ, ಮಿಲಿಟಲಿಯ ಯುದ್ದವಾಹನಗಳನ್ನು ಮತ್ತು ನೌಕಾನೆಲೆಯ ಹಡಗುಗಳನ್ನು ಕಟ್ಟಲು ಸಾಧ್ಯವಾಯಿತು. ಉಕ್ಕಿನಿಂದಾಗಿ ಅದರಿಂದ ತಯಾರಿಸಿದ ಪಂಕಗಳನ್ನು ಬಳಸಿ ವಿದ್ಯುತ್‌ ಉತ್ಪಾದನೆಯಂತಹ ಕೆಲಸಗಳಿಗೂ ಸಹಾಯ ಮಾಡಿದೆ. ಇಂಗ್ಲಿಷರವರಾದ ಹೆನ್ರಿ ಬೆಸ್ಸ್ಸಮೇರ್‌ ಅವರಿಂದ ಬೆಳಕಿಗೆ ಬರಲ್ಪಟ್ಟ ಉಕ್ಕು 19 ಮತ್ತು 20ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಒಂದು ಮೂಲ ಭಾಗವೇ ಆಗಿದೆ.

ಹಳತಾಗುವಿಕೆ[ಬದಲಾಯಿಸಿ]

ಅಮೇರಿಕಾದಲ್ಲಿ ಈ ಪದ್ದತಿಯಿಂದ ವಾಣಿಜ್ಯವಾಗಿ ಉಕ್ಕನ್ನು ಉತ್ಪಾದಿಸುವಿಕೆಯನ್ನು 1968ರಲ್ಲಿ ಸ್ಥಗಿತಗೊಳಿಸಲಾಯಿತು. ಇದರ ಹೊರತಾಗಿ ರಾಸಾಯನಿಕವನ್ನು ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬಲ್ಲ ಮೂಲ ಆಮ್ಲಜನಕ(Linz-Donawitz) ಪದ್ದತಿಯನ್ನು ಬಳಸಲಾಯಿತು. ಬೆಸ್ಸೆಮರ್‍ ಇವರ ಪದ್ದತಿಯಲ್ಲಿ ಲೋಹವು ಬಿಸಿಯಾಗಲು 10–20 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದರಿಂದ ಉಕ್ಕಿನಲ್ಲಿನ ರಾಸಾಯನಿಕಗಳು ಒಂದಕ್ಕೊಂದು ರಾಸಾಯನಿಕ ಕ್ರಿಯೆ ನಡೆಯಲು ಅನುಕೂಲವಾಗುತ್ತಿತ್ತು. ಬೆಸ್ಸೆಮರ್‌ ಇವರ ವಿಧಾನದಲ್ಲಿ ಕರಗಿದ ಉಕ್ಕಿನಲ್ಲಿ ಪಾಸ್ಪರಸ್‌ನ್ನು ಬೇರ್ಪಡಿಸಲಾಗುತ್ತಿರಲಿಲ್ಲ. ಇದರಿಂದಾಗಿ ಕಡಿಮೆ ಪ್ರಮಾಣದಲ್ಲಿರುವ ಪಾಸ್ಪರಸ್‌ ಖನಿಜದ ಬೆಲೆಯೂ ಹೆಚ್ಚಾಗಿತ್ತು, ಬೆರ್ಪಡಿಸುವ ವೆಚ್ಚವೂ ಹೆಚ್ಚಾಗಿತ್ತು. ಹಳೆಯ ಉಕ್ಕುಗಳ ಮಿಶ್ರಣವು ಕಡಿಮೆ ಬೆಲೆಯಲ್ಲಾಗುತ್ತಿದ್ದಾಗ್ಯೂ ಕೂಡ ಬೆಸ್ಸೆಮ್ಸ್ ಇವರ ಪದ್ದತಿಯಲ್ಲಿ ಸ್ವಲ್ಪ ಮಾತ್ರ ಪ್ರಮಾಣದಲ್ಲಿ ಹಳೆಯ ಉಕ್ಕನ್ನು ಸೇರಿಸಬಹುದಾಗಿತ್ತು. ವಿದ್ಯುತ್ ಕುಲುಮೆಯಲ್ಲಿ ಕಾಯಿಸುವ ವಿಧಾನವು ಬಳಕೆಯಲ್ಲಿ ಬಂದಿದ್ದು ಬೆಸ್ಸೆಮ್ಸ್‌ ಇವರ ಪದ್ದತಿಯು ಹಳತಾಗಲು ಬಹುಮುಖ್ಯ ಕಾರಣವಾಯಿತು.

ಇವನ್ನೂ ಗಮನಿಸಿ‌[ಬದಲಾಯಿಸಿ]

ಟೆಂಪ್ಲೇಟು:Portal

  • ಮುಕ್ತ ಬೆಂಕಿಯ ಕುಲುಮೆ, ಸೀಮನ್ಸ್ ಮಾರ್ಟಿನ್ ಪ್ರಕ್ರಿಯೆ

ಉಲ್ಲೇಖಗಳು‌[ಬದಲಾಯಿಸಿ]

  1. "Bessemer process". Britannica. Vol. 2. Encyclopedia Britannica. 2005. p. 168. {{cite encyclopedia}}: |access-date= requires |url= (help)
  2. "Kelly, William". Britannica. Vol. 6. Encyclopedia Britannica. 2005. p. 791. {{cite encyclopedia}}: |access-date= requires |url= (help)
  3. Ponting, Clive (2000), World History, A New Perspective, Pimlico, ISBN 0-7126-6572-2
  4. "Purchasing Power of British Pounds from 1264 to Present". 2009. Retrieved January 14, 2011.
  5. ೫.೦ ೫.೧ ೫.೨ Hartwell, Robert (1966-03). "Markets, Technology, and the Structure of Enterprise in the Development of the Eleventh-Century Chinese Iron and Steel Industry". The Journal of Economic History. 26 (1): 29–58. ISSN 0022-0507. Retrieved 2009-11-24. {{cite journal}}: Check date values in: |date= (help) Page 54.
  6. Bessemer, Sir Henry (1905). Sir Henry Bessemer, F.R.S. Offices of "Engineering,". p172.
  7. Anstis 1997, p. 147.
    1. REDIRECT Template:Cite DNB
  8. ೯.೦ ೯.೧ "ಆರ್ಕೈವ್ ನಕಲು". Archived from the original on 2012-08-22. Retrieved 2011-03-07.
  9. Anstis 1997, p. 140.
  10. ಫ್ರಾಂಕ್ಸ್, ಜ್ಯೂಲಿಯನ್, ಮೇಯರ್, ಕಾಲಿನ್ ಆಂಡ್ ರೋಸಿ, ಸ್ಟೆಫಾನೊ: ದಿ ಒರಿಜಿನಲ್ ಆಂಡ್ ಎವೆಲ್ಯೂಷನ್ ಆಫ್ ಓನರ್‌ಶಿಫ್ ಆಂಡ್ ಕಂಟ್ರೋಲ್ , ಲಂಡನ್ ಬ್ಯುಸಿನೆಸ್ ಸ್ಕೂಲ್, ಡಿಸೆಂಬರ್ 2002, ಪುಟ.19 [೧]
  11. "ಆರ್ಕೈವ್ ನಕಲು". Archived from the original on 2011-01-22. Retrieved 2011-03-07.
  12. Misa, Thomas J. (1998-09-08). A Nation of Steel: The Making of Modern America, 1865-1925. The Johns Hopkins University Press. ISBN 0801860520. chapter 1 online Archived 2012-08-05 at Archive.is

ಗ್ರಂಥಸೂಚಿ[ಬದಲಾಯಿಸಿ]

  • Anstis, Ralph (1997), Man of Iron, Man of Steel: Lives of David and Robert Mushet, Albion House, ISBN 095113714X

ಬಾಹ್ಯ ಕೊಂಡಿಗಳು[ಬದಲಾಯಿಸಿ]