ವೀಟ್ ಗ್ರಾಸ್(ಹಬ್ಬುಬೇರುಹುಲ್ಲು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಳಾಂಗಣದಲ್ಲಿ ಬೆಳೆಯಲಾದ ವೀಟ್ ಗ್ರಾಸ್, ಇದರ ಬೆಳೆ ಬರುವ 8-14 ದಿನಗಳ ಮುಂಚಿತವಾಗಿ ಬೆಳೆಯಲಾಗುತ್ತದೆ.

ವೀಟ್ ಗ್ರಾಸ್ ಎಂಬುದು ಸಾಮಾನ್ಯ ಗೋಧಿಯ ಸಸ್ಯವಾದ, ಟ್ರಿಟಿಕಂ ಯೆಸ್ಟಿವಂ ನ ಕಾಟಿಲೀಡನ್(ಮೊಳಕೆ ಎಲೆ)ನಿಂದ ತಯಾರಿಸಲಾಗುವ ಆಹಾರ. ಇದನ್ನು ರಸವಾಗಿ ಅಥವಾ ಪುಡಿಯ ಸಾಂದ್ರಣವಾಗಿ ಮಾರಾಟ ಮಾಡಲಾಗುತ್ತದೆ. ವೀಟ್ ಗ್ರಾಸ್ ಗೋಧಿಯ ಮೊಳಕೆ ಕಾಳಿನ ಹಾಲಿಗಿಂತ ಭಿನ್ನವಾಗಿದೆ, ಇದನ್ನು ಶೈತ್ಯೀಕರಿಸಿ ಒಣಗಿಸಿ ಅಥವಾ ತಾಜಾ ಆಗಿ ನೀಡಲಾಗುತ್ತದೆ, ಆದರೆ ಗೋಧಿಯ ಮೊಳಕೆ ಹಾಲನ್ನು ಸಂವಾಹಕವಾಗಿ ಒಣಗಿಸಲಾಗುತ್ತದೆ. ವೀಟ್ ಗ್ರಾಸ್ ನ್ನು ಮೊಳಕೆ ಗೋಧಿಯ ಧಾನ್ಯಕ್ಕಿಂತ ಉದ್ದ ಬೆಳೆಯಲಾಗುತ್ತದೆ. ಇದು ಹರಿತ್ತು, ಅಮೈನೋ ಆಮ್ಲಗಳು, ಖನಿಜಗಳು, ಜೀವಸತ್ವಗಳು, ಹಾಗು ಕಿಣ್ವಗಳನ್ನು ಒದಗಿಸುತ್ತದೆ. ವೀಟ್ ಗ್ರಾಸ್ ಪೂರಕ ಪೌಷ್ಟಿಕಾಂಶಗಳಿಂದ ಹಿಡಿದು ರೋಗಪರಿಹಾರಕ ವಿಶಿಷ್ಟ ಲಕ್ಷಣಗಳನ್ನು ಹೊಂದುವ ಮೂಲಕ ಆರೋಗ್ಯಕ್ಕೆ ಅನುಕೂಲಗಳನ್ನು ಒದಗಿಸುತ್ತವೆ ಎಂಬ ಸಮರ್ಥನೆಗಳಿವೆ. ಕೆಲವು ಗ್ರಾಹಕರು ತಮ್ಮ ಮನೆಗಳಲ್ಲಿ ವೀಟ್ ಗ್ರಾಸ್ ನ್ನು ಬೆಳೆದು ಅದರಿಂದ ರಸವನ್ನು ಆಹರಿಸುತ್ತಾರೆ. ಇದು ಸಾಮಾನ್ಯವಾಗಿ ಜ್ಯೂಸ್ ಬಾರ್ ಗಳಲ್ಲಿ, ಏಕೈಕವಾಗಿ ಅಥವಾ ಮಿಶ್ರ ಹಣ್ಣಿನ ರಸದೊಟ್ಟಿಗೆ ಅಥವಾ ತರಕಾರಿ ರಸಗಳ ಮಿಶ್ರಣದೊಂದಿಗೆ ದೊರೆಯುತ್ತದೆ. ಇದು ಹಲವು ಸ್ವಸ್ಥ ಆಹಾರದ ಅಂಗಡಿಗಳಲ್ಲಿ ತಾಜಾ ಉತ್ಪನ್ನವಾಗಿ, ಮಾತ್ರೆಗಳಾಗಿ, ಶೈತ್ಯೀಕರಿಸಿದ ರಸವಾಗಿ ಹಾಗು ಪುಡಿಯ ರೂಪದಲ್ಲಿಯೂ ಸಹ ಲಭ್ಯವಿದೆ.

ಇತಿಹಾಸ[ಬದಲಾಯಿಸಿ]

ಪಾಶ್ಚಿಮಾತ್ಯ ಜಗತ್ತಿನಲ್ಲಿ ವೀಟ್ ಗ್ರಾಸ್ ನ ಸೇವನೆಯು 1930ರಲ್ಲಿ, ಸಸ್ಯವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಚಾರ್ಲ್ಸ್ F. ಸ್ಚನಬೆಲ್ ನಡೆಸಿದ ಪ್ರಯೋಗಗಳ ಪರಿಣಾಮವಾಗಿ ಆರಂಭಗೊಂಡಿತು.[೧]

ವ್ಯಾವಸಾಯಿಕ ರಸಾಯನವಿಜ್ಞಾನಿಯಾಗಿದ್ದ ಸ್ಚನಬೆಲ್, 1930ರಲ್ಲಿ ಎಳೆ ಹುಲ್ಲುಗಳೊಂದಿಗೆ ತಮ್ಮ ಮೊದಲ ಪ್ರಯೋಗಗಳನ್ನು ನಡೆಸಿದರು. ಇವರು ಸಾಯುವ ಹಂತದಲ್ಲಿದ್ದ ಒಂದು ಕೋಳಿಯನ್ನು ಬದುಕಿಸುವ ಪ್ರಯತ್ನದಲ್ಲಿ ಅದೇ ತಾನೇ ಕತ್ತರಿಸಿದ ಹುಲ್ಲನ್ನು ಅದರ ಉಪಚಾರಕ್ಕೆ ಬಳಸಿದರು. ಕೋಳಿಗಳು ಚೇತರಿಸಿಕೊಳ್ಳುವುದಷ್ಟೇ ಅಲ್ಲದೆ, ಆರೋಗ್ಯಕರವಾಗಿದ್ದ ಕೋಳಿಗಳಿಗಿಂತ ಅಧಿಕ ಪ್ರಮಾಣದಲ್ಲಿ ಮೊಟ್ಟೆಗಳನ್ನು ಇಡುತ್ತಿದ್ದವು. ಈ ಫಲಿತಾಂಶದಿಂದ ಉತ್ತೇಜನಗೊಂಡು, ಅವರು ತಮ್ಮ ಕುಟುಂಬ ಹಾಗು ನೆರೆಯವರಿಗೆ ಪೂರಕ ಆಹಾರವಾಗಿ ಹುಲ್ಲನ್ನು ಒಣಗಿಸಿ ಪುಡಿ ಮಾಡತೊಡಗಿದರು. ಅದರ ಮರು ವರ್ಷ, ಸ್ಚನಬೆಲ್ ಮತ್ತೊಮ್ಮೆ ತಮ್ಮ ಪ್ರಯೋಗವನ್ನು ನಡೆಸಿ ಇದೆ ರೀತಿಯಾದ ಫಲಿತಾಂಶಗಳನ್ನು ಪಡೆದರು. ಕೋಳಿಗಳು, ಈ ಹುಲ್ಲಿನೊಂದಿಗೆ ಪೂರಕವಾದ ಆಹಾರವನ್ನು ಸೇವಿಸಿದಾಗ ಅವುಗಳ ಮೊಟ್ಟೆ ಉತ್ಪತ್ತಿಯು ದ್ವಿಗುಣವಾಯಿತು. ಸ್ಚನಬೆಲ್ ತಮ್ಮ ಪರಿಶೋಧನೆಯನ್ನು ಧಾನ್ಯದ ಗಿರಣಿಗಳಲ್ಲಿ, ರಸಾಯನವಿಜ್ಞಾನಿಗಳ ನಡುವೆ ಹಾಗು ಆಹಾರ ಕ್ಷೇತ್ರದಲ್ಲಿ ಪ್ರಚಾರಪಡಿಸಲು ಆರಂಭಿಸಿದರು. ಎರಡು ದೊಡ್ಡ ಸಂಸ್ಥೆಗಳಾದ, ಕ್ವೇಕರ್ ಓಟ್ಸ್ ಹಾಗು ಅಮೆರಿಕನ್ ಡೈರೀಸ್ Inc.ಟೆಂಪ್ಲೇಟು:Ambigಇದರ ಬಗ್ಗೆ ಮತ್ತಷ್ಟು ಸಂಶೋಧನೆ, ಅಭಿವೃದ್ಧಿ, ಹಾಗು ಪ್ರಾಣಿಗಳು ಹಾಗು ಮನುಷ್ಯರಿಗೆ ಹುಲ್ಲಿನ ಉತ್ಪನ್ನಗಳ ತಯಾರಿಕೆಗೆ ಲಕ್ಷಗಟ್ಟಲೆ ಡಾಲರುಗಳನ್ನು ಹೂಡಿಕೆ ಮಾಡಿದವು. 1940ರ ಸುಮಾರಿಗೆ, ಸ್ಚನಬೆಲ್ ರ ಪುಡಿ ರೂಪದ ಹುಲ್ಲಿನ ಉತ್ಪನ್ನವು ಅಮೆರಿಕನ್ ಸಂಯುಕ್ತ ಸಂಸ್ಥಾನ ಹಾಗು ಕೆನಡಾದ ಪ್ರಮುಖ ಔಷಧಿ ಅಂಗಡಿಗಳಲ್ಲಿ ಮಾರಾಟಕ್ಕೆ ಸಿದ್ಧಗೊಂಡವು.[೨]

ಸಾಗುವಳಿ[ಬದಲಾಯಿಸಿ]

ಕೈಯಿಂದ ರಸ ತೆಗೆಯುವ ಯಂತ್ರದ ಮೂಲಕ ವೀಟ್ ಗ್ರಾಸ್ ನ ರಸವನ್ನು ತೆಗೆಯುತ್ತಿರುವುದು.
ಹೊರಾಂಗಣದಲ್ಲಿ ಬೆಳೆಯಲಾದ ವೀಟ್ ಗ್ರಾಸ್, ಅಮೆರಿಕ ಸಂಯುಕ್ತ ಸಂಸ್ಥಾನದ ಕಾನ್ಸಾಸ್ ಪ್ರದೇಶದ ವಾತಾವರಣದಲ್ಲಿ ಚಳಿಗಾಲದುದ್ದಕ್ಕೂ ನಿಧಾನವಾಗಿ ಬೆಳೆಯುತ್ತದೆ.

ಸ್ಚನಬೆಲ್ ರ ಸಂಶೋಧನೆಯು ಕಾನ್ಸಾಸ್ ನ ಹೊರಭಾಗದಲ್ಲಿ ಬೆಳೆಯಲಾದ ವೀಟ್ ಗ್ರಾಸ್ ನೊಂದಿಗೆ ನಡೆಸಲಾಗಿತ್ತು. ಅವರ ವೀಟ್ ಗ್ರಾಸ್ ಚಳಿಗಾಲ ಹಾಗು ವಸಂತ ಋತುವಿನ ಆರಂಭದವರೆಗೂ ನಿಧಾನವಾಗಿ ಬೆಳೆಯಲು 200 ದಿನಗಳನ್ನು ತೆಗೆದುಕೊಂಡಿತು, ಇದನ್ನು ಎಲೆ ಅಥವಾ ಕೊಂಬೆ ಹುಟ್ಟುವ ಹಂತದಲ್ಲಿ ಕಟಾವು ಮಾಡಲಾಯಿತು. ಈ ಹಂತದಲ್ಲಿ ಸಸ್ಯವು ಪೌಷ್ಟಿಕಾಂಶದ ಮೌಲ್ಯದಲ್ಲಿ ಅತ್ಯುಚ್ಚ ಪ್ರಮಾಣದಲ್ಲಿತ್ತು; ಎಲೆ ಅಥವಾ ಕೊಂಬೆಯ ಹುಟ್ಟಿನ ನಂತರ, ಹರಿತ್ತಿನ ಸಾರೀಕರಣಗಳು, ಪ್ರೋಟೀನ್ ಹಾಗು ಜೀವಸತ್ವಗಳು ತೀವ್ರವಾಗಿ ಕ್ಷೀಣಿಸುತ್ತವೆ.[೩] ಕಟಾವಾದ ಹುಲ್ಲನ್ನು ನಿರಾರ್ದ್ರಿಕರಣಗೊಳಿಸಿ, ಮನುಷ್ಯರು ಹಾಗು ಪ್ರಾಣಿಗಳ ಸೇವನೆಗಾಗಿ ಪುಡಿ ಹಾಗು ಮಾತ್ರೆಗಳ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ. ಒಳಾಂಗಣದಲ್ಲಿ ಹತ್ತು ದಿನಗಳ ಕಾಲ ಟ್ರೇನಲ್ಲಿ ಬೆಳೆಯಲಾದ ವೀಟ್ ಗ್ರಾಸ್ ಇದೆ ರೀತಿಯಾದ ಪೌಷ್ಟಿಕಾಂಶದ ಪ್ರಮಾಣವನ್ನು ಹೊಂದಿರುತ್ತದೆ. ಹೊರಾಂಗಣದಲ್ಲಿ ಬೆಳೆಯಲಾದ ವೀಟ್ ಗ್ರಾಸ್ ನ್ನು ಕಟಾವು ಮಾಡಿ, ಅತ್ಯಂತ ಕಡಿಮೆ ತಾಪಮಾನದಲ್ಲಿ ನಿರಾರ್ದ್ರಿಕರಣಗೊಳಿಸಿ ಮಾತ್ರೆ ಹಾಗು ಪುಡಿಯ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ವೀಟ್ ಗ್ರಾಸ್ ನ ರಸದ ಪುಡಿಯೂ(ತಾಜಾ ಹುಲ್ಲಿನ ರಸವನ್ನು ಹಿಂಡಿ ನೀರನ್ನು ತೆಗೆದುಹಾಕಲಾಗುತ್ತದೆ) ಸಹ ಸಿಂಪಡಿಸಿ ಒಣಗಿಸಿದ ಅಥವಾ ಶೈತ್ಯೀಕರಿಸಿ ಒಣಗಿಸಿದ ರೂಪದಲ್ಲಿ ಲಭ್ಯವಿದೆ.

ಒಳಾಂಗಣದಲ್ಲಿ ಬೆಳವಣಿಗೆ ಹಾಗು ಬೂಸ್ಟು ಹಿಡಿಯುವಿಕೆ[ಬದಲಾಯಿಸಿ]

ವೀಟ್ ಗ್ರಾಸ್ ನ್ನು ಒಳಾಂಗಣದಲ್ಲಿ ಸಾಮಾನ್ಯವಾಗಿ ಬೆಳೆಯಲು, ಅಧಿಕ ಇಳುವರಿಗಾಗಿ ಗೋಧಿ ಧಾನ್ಯದೊಂದಿಗೆ ಸಣ್ಣ ಟ್ರೇಗಳಲ್ಲಿ ಹುಲ್ಲನ್ನು ಒಟ್ಟಾಗಿ ಬೆಳೆಯುವ ಅಗತ್ಯವಿರುತ್ತದೆ. ಪ್ರತಿ ಗೋಧಿ ಬೀಜವು ಮೊಳಕೆಯೊಡೆಯುವುದಿಲ್ಲ. ಕುಡಿಯೊಡೆಯದ ಬೀಜಗಳಲ್ಲಿ ಬೂಸ್ಟು ಬೆಳವಣಿಗೆಯಾಗಿ ಅದು ಹತ್ತಿರದ ಮೊಳಕೆಯೊಡೆದ ಸಸ್ಯಗಳಿಗೂ ಸಹ ಹರಡಬಹುದು. ಇದು ಒಂದು ಅಹಿತಕರ ರುಚಿಯನ್ನು ಉಂಟುಮಾಡಬಹುದು ಜೊತೆಗೆ, ಕೆಲವೊಂದು ತೀವ್ರತರ ಪರಿಸ್ಥಿತಿಗಳಲ್ಲಿ ಅಲರ್ಜಿ ಪ್ರತಿರೋಧವನ್ನು ಉಂಟುಮಾಡಬಹುದು.[೪]

ಗೋಧಿಯನ್ನು ನೆಲದಲ್ಲಿ ಬೆಳೆಯುವಾಗ ಈ ಪರಿಸ್ಥಿತಿಯು ಒಂದು ಸಮಸ್ಯೆಯಾಗಲಾರದು, ಏಕೆಂದರೆ ಬೀಜಗಳು ಹೆಚ್ಚು ರಾಶಿಯಾಗಿ ಬೆಳೆಯುವುದಿಲ್ಲ ಹಾಗು ಇದರ ಪರಿಣಾಮವಾಗಿ ಉಂಟಾಗುವ ಗಾಳಿಯ ಪರಿಚಲನೆಯಲ್ಲಿನ ಸುಧಾರಣೆ. ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾದ ಬ್ರೆಡ್ ಬ್ಯಾಸ್ಕೆಟ್(ಆಹಾರ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವ, ಮುಖ್ಯವಾಗಿ ಇತರ ಕಡೆಗಳಿಗೆ ಒದಗಿಸುವ ದೇಶ-ಪ್ರದೇಶ) ಪ್ರದೇಶಗಳ ಹೊರಾಂಗಣದಲ್ಲಿ ವೀಟ್ ಗ್ರಾಸ್ ನ್ನು ಪ್ರತಿ ವರ್ಷದ ಕೆಲ ದಿವಸಗಳು ಮಾತ್ರ ಕಟಾವು ಮಾಡಲಾಗುತ್ತದೆ.

ಬಳಕೆ[ಬದಲಾಯಿಸಿ]

ವೀಟ್ ಗ್ರಾಸ್ ನ್ನು ಗ್ರಾಹಕರು ಸರಾಸರಿ 3.5 ಗ್ರಾಂಗಳಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ(ಪುಡಿ ಅಥವಾ ಮಾತ್ರೆಯ ರೂಪದಲ್ಲಿ). ಕೆಲವರು ಹಿಂಡಿದ ತಾಜಾ ರಸವನ್ನು ಒಂದು ಬಾರಿಗೆ 30 mlನಷ್ಟು ಪ್ರತಿ ದಿವಸ ಸೇವಿಸುತ್ತಾರೆ ಅಥವಾ,[ಸೂಕ್ತ ಉಲ್ಲೇಖನ ಬೇಕು] ಆರೋಗ್ಯದ ಅನುಕೂಲಕ್ಕಾಗಿ ಅದಕ್ಕೂ ಹೆಚ್ಚಿನ ಪ್ರಮಾಣವಾದ 2–4 ozನ್ನು(60 - 120 ml) ಪ್ರತಿ ದಿನ 1-3 ಬಾರಿ ಖಾಲಿ ಹೊಟ್ಟೆಯಲ್ಲಿ ಹಾಗು ಊಟಕ್ಕಿಂತ ಮುಂಚೆ ಸೇವಿಸುತ್ತಾರೆ. ನಿರ್ವಿಷೀಕರಣಕ್ಕಾಗಿ, ಕೆಲವರು ಪ್ರತಿ ದಿನ 3–4 ಬಾರಿ ಸೇವನೆ ಮಾಡುತ್ತಾರೆ. ಕಳಪೆಯಾದ ಆಹಾರಕ್ರಮವನ್ನು ಹೊಂದಿರುವವರು ವೀಟ್ ಗ್ರಾಸ್ ನ ಅಧಿಕ ಪ್ರಮಾಣದ ಸೇವನೆಯಿಂದ ಪಿತ್ತೊದ್ರೇಕವನ್ನು ಅನುಭವಿಸಬಹುದು.[ಸೂಕ್ತ ಉಲ್ಲೇಖನ ಬೇಕು]

ಆರೋಗ್ಯ ಸಮರ್ಥನೆಗಳು[ಬದಲಾಯಿಸಿ]

ಕೋಷ್ಟಕ 1. 1 oz (28.35 g) ವೀಟ್ ಗ್ರಾಸ್ ರಸ, ಬ್ರಾಕಲಿ(ಚಳಿ ತಡೆದುಕೊಂಡು ಬಯಲಿನಲ್ಲಿ ಬೆಳೆಯಬಲ್ಲ ಒಂದು ಬಗೆಯ ಹೂಕೋಸು) ಹಾಗು ಸ್ಪಿನಾಚ್ ಸೊಪ್ಪುಗಳ ನಡುವಿನ ಪೌಷ್ಟಿಕಾಂಶದ ಹೋಲಿಕೆ.
ಪೌಷ್ಟಿಕ ವೀಟ್ ಗ್ರಾಸ್ ರಸ ಬ್ರಾಕಲಿ(=ಚಳಿ ಸಹಿಷ್ಣು ಹೂಕೋಸು) ಸ್ಪಿನಾಚ್
ಪ್ರೋಟೀನ್‌‌ 860 mg 800 mg 810 mg
ಬೀಟಾ-ಕೆರೋಟಿನ್ 120 IU 177 IU 2658 IU
E ಜೀವಸತ್ವ 880 mcg 220 mcg 580 mcg
C ಜೀವಸತ್ವ 1 mg 25.3 mg 8 mg
B12 ಜೀವಸತ್ವ 0.30 mcg 0 mcg 0 mcg
ರಂಜಕ 21 mg 19 mg 14 mg
ಮೆಗ್ನೀಶಿಯಮ್ 8 mg 6 mg 22 mg
ಕ್ಯಾಲ್ಸಿಯಂ 7.2 mg 13 mg 28 mg
ಕಬ್ಬಿಣ 0.66 mg 0.21 mg 0.77 mg
ಪೊಟಾಸಿಯಂ 42 mg 90 mg 158 mg
USDA ದತ್ತಾಂಶ ಸಂಗ್ರಹದಿಂದ ಬ್ರಾಕಲಿ ಹಾಗು ಸ್ಪಿನಾಚ್ ನ ದತ್ತಾಂಶ.[೫]
 ಒಳಾಂಗಣದಲ್ಲಿ ಬೆಳೆಯಲಾದ ವೀಟ್ ಗ್ರಾಸ್ ನಿಂದ ಸಂಗ್ರಹಿಸಲಾದ ವೀಟ್ ಗ್ರಾಸ್ ರಸದ ದತ್ತಾಂಶ. [೨]

ವೀಟ್ ಗ್ರಾಸ್ ನ ಪ್ರತಿಪಾದಕರು ಅದರ ಆರೋಗ್ಯದ ಲಕ್ಷಣಗಳಿಂದಾಗಿ ಹಲವು ಸಮರ್ಥನೆಗಳನ್ನು ನೀಡುತ್ತಾರೆ, ಇದರಂತೆ ಇದರ ಸೇವನೆಯಿಂದಾಗಿ ಉತ್ತಮ ಆರೋಗ್ಯದಿಂದ ಹಿಡಿದು ಕ್ಯಾನ್ಸರ್ ನ ತಡೆಗಟ್ಟುವಿಕೆ ಹಾಗು ಭಾರಿ-ಲೋಹಗಳ ನಿರ್ವಿಷೀಕರಣವು ಒಳಗೊಂಡಿದೆ. ಈ ಸಮರ್ಥನೆಗಳು ವೈಜ್ಞಾನಿಕ ಸಾಹಿತ್ಯದಲ್ಲಿ ರುಜುವಾತುಗೊಂಡಿಲ್ಲ,[೧] ಆದಾಗ್ಯೂ ಮಾನವನ ಆಹಾರ ಕ್ರಮದಲ್ಲಿ ಹರಿತ್ತವು ಲಾಭದಾಯಕ ಪರಿಣಾಮವನ್ನು ಬೀರುತ್ತದೆಂಬುದನ್ನು ಸಮರ್ಥಿಸಲು ಕೆಲವು ಸಾಕ್ಷ್ಯಾಧಾರಗಳಿವೆ.[೬][೭] ಕೆಲವು ಸಂಶೋಧನೆಗಳು, ಹರಿತ್ತವು ಅಧಿಕವಾಗಿರುವ ಆಹಾರಗಳಿಗೆ ಸಂಬಂಧಿಸಿವೆ, ಇದು ಅಧಿಕವಾಗಿರುವ ಎಲೆಯುಳ್ಳ ಹಸಿರು ತರಕಾರಿಗಳ ಸೇವನೆಯಿಂದ ಕರುಳಿನ ಕ್ಯಾನ್ಸರ್ ನ ಪ್ರಮಾಣವನ್ನು ಕಡಿಮೆಯಾಗುತ್ತದೆ ಎಂದು ತೋರಿಸಿವೆ.[೬]

ಇತರ ಹಲವು ಸಣ್ಣ ಅಧ್ಯಯನಗಳು ಹಾಗು ಪ್ರಾಯೋಗಿಕ ಯೋಜನೆಗಳು ವೀಟ್ ಗ್ರಾಸ್ ರಸದ ಸಂಭಾವ್ಯ ಪ್ರಯೋಜನಗಳನ್ನು ಗುರುತಿಸಿವೆ.[೮] ಸ್ಲೋಯನ್ ಕೆಟ್ಟೆರಿಂಗ್ ಸ್ಮಾರಕ ಕ್ಯಾನ್ಸರ್ ಕೇಂದ್ರದ ಪ್ರಕಾರ[೯], ಅಲ್ಸರೆಟಿವ್ ಕಾಲ್ಲಿಟಿಸ್ ಗೆ ವೀಟ್ ಗ್ರಾಸ್ ನ ಚಿಕಿತ್ಸೆಗೆ ಮತ್ತಷ್ಟು ಸಂಶೋಧನೆಯ ಅಗತ್ಯವಿದೆ; ಒಂದು ಸಣ್ಣ ಪ್ರಾಯೋಗಿಕ ಯೋಜನೆಯು, ವೀಟ್ ಗ್ರಾಸ್ ರಸದ ನಿಯಮಿತ ಸೇವನೆಯು ಗುದನಾಳದ ರಕ್ತಸ್ರಾವವನ್ನು ಮಹತ್ವವಾಗಿ ಕಡಿಮೆಗೊಳಿಸುವುದರ ಜೊತೆಗೆ ಕಾಯಿಲೆಯ ಒಟ್ಟಾರೆ ಕಾರ್ಯ ಚಟುವಟಿಕೆಯನ್ನು ಕಡಿಮೆ ಮಾಡಿತು.[೧೦]

ವೀಟ್ ಗ್ರಾಸ್ ರಕ್ತದ ಪರಿಚಲನೆ, ಜೀರ್ಣಕ್ರಿಯೆ ಹಾಗು ಸಾಮಾನ್ಯವಾಗಿ ದೇಹವನ್ನು ನಿರ್ವಿಷೀಕರಣಗೊಳಿಸುವಲ್ಲಿ ಸಹಕಾರಿಯಾಗಿದೆಯೆಂದು ಸಮರ್ಥಿಸಲಾಗಿದೆ. ಈ ಸಮರ್ಥನೆಗಳನ್ನು ವಿಶ್ವಾಸಾರ್ಹವಾಗಿ ರುಜುವಾತುಗೊಳಿಸಲಾಗಿಲ್ಲ. ಆದಾಗ್ಯೂ, ಥಲಸ್ಸೇಮಿಯ(ರಕ್ತಹೀನತೆಯ ಒಂದು ವಂಶವಾಹಿ ರೂಪವಾದ ಈ ಕಾಯಿಲೆಗೆ ಸಾಮಾನವಾಗಿ ರಕ್ತವರ್ಗಾವಣೆಯ ಅಗತ್ಯವಿರುತ್ತದೆ) ಹೊಂದಿರುವ ಮಕ್ಕಳ ಬಗ್ಗೆ ನಡೆಸಲಾದ ಒಂದು ಪ್ರಾಯೋಗಿಕ ಅಧ್ಯಯನದಲ್ಲಿ, ನಿಯಮಿತವಾಗಿ 100 mlನಷ್ಟು ವೀಟ್ ಗ್ರಾಸ್ ನ ರಸವನ್ನು ಸೇವಿಸಿದ ರೋಗಿಗಳಲ್ಲಿ, ರಕ್ತ ವರ್ಗಾವಣೆಯ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆಮಾಡಿದ್ದು ಕಂಡುಬಂದಿತು. ಯಾವುದೇ ಪ್ರತಿಕೂಲ ಪರಿಣಾಮಗಳು ಕಂಡುಬರಲಿಲ್ಲ.[೧೧] ಮ್ಯೇಲೋಡಿಸ್ಪ್ಲ್ಯಾಸ್ಟಿಕ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು, ರಕ್ತವರ್ಗಾವಣೆಯನ್ನು-ಅವಲಂಬಿಸಿರುವ ರೋಗಿಗಳ ಮೇಲೆ ನಡೆಸಲಾದ ಒಂದು ಸಣ್ಣ ಅಧ್ಯಯನವು, ಇದೆ ರೀತಿಯಾಗಿ ರೋಗಿಗಳು ವೀಟ್ ಗ್ರಾಸ್ ಚಿಕಿತ್ಸೆಗೆ ಪ್ರತಿಕ್ರಯಿಸಿದ್ದ ಬಗ್ಗೆ ವಿವರಿಸುತ್ತದೆ; ಅದೆಂದರೆ, ರಕ್ತವರ್ಗಾವಣೆಯ ಅಂತರವು ಅಧಿಕಗೊಂಡಿತ್ತು. ಇದರ ಜೊತೆಯಲ್ಲಿ, ಇದೆ ರೋಗಿಗಳ ಮೇಲೆ ಕೊಂಡಿಗೂಡಿಕೆಯ(ರಕ್ತದಿಂದ ಭಾರಿ ಲೋಹಗಳ ತೆಗೆದುಹಾಕುವುದು)ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಯಿತು; ವೀಟ್ ಗ್ರಾಸ್ ಚಿಕಿತ್ಸೆಯು ಒಂದು ಮಹತ್ವದ ಕಬ್ಬಿಣ ಕೊಂಡಿಗೂಡಿಕೆಯ ಪರಿಣಾಮವನ್ನು ಪ್ರದರ್ಶಿಸಿತು.[೧೨]

ಮತ್ತೊಂದು ಪ್ರಾಯೋಗಿಕ ಪರೀಕ್ಷೆಯಲ್ಲಿ, ಪ್ರತಿ ನಿತ್ಯವೂ ವೀಟ್ ಗ್ರಾಸ್ ರಸವನ್ನು ಸೇವಿಸಿದ ಸ್ತನ ಕ್ಯಾನ್ಸರ್ ರೋಗಿಗಳಿಗೆ, ಚಿಕಿತ್ಸೆಯ ಪರಿಣಾಮದಲ್ಲಿ ಯಾವುದೇ ಕೊರತೆಯುಂಟಾಗಾದೆ ರಕ್ತದ ಹಾಗು ಕೀಮೋಥೆರಪಿಯ ಸಂದರ್ಭದಲ್ಲಿ ಮೂಳೆಕೊಬ್ಬಿನ-ನಿರ್ಮಾಪನಾ ಔಷಧೀಕರಣದ ಅಗತ್ಯವು ಕಡಿಮೆಯಾಗುತ್ತದೆ.[೧೩]

ವೀಟ್ ಗ್ರಾಸ್ ಗೆ ಪ್ರತಿಯಾಗಿ ಸಾಮಾನ್ಯ ತರಕಾರಿಗಳು[ಬದಲಾಯಿಸಿ]

ವೀಟ್ ಗ್ರಾಸ್ ನ ಪ್ರತಿಪಾದಕ ಸ್ಚನಬೆಲ್ 1940ರಲ್ಲಿ, "ಹದಿನೈದು ಪೌಂಡ್ ಗಳಷ್ಟು ವೀಟ್ ಗ್ರಾಸ್, 350 ಪೌಂಡ್ ನಷ್ಟು ಸಾಧಾರಣ ತೋಟದ ತರಕಾರಿಗಳಿಗೆ ಸಮನಾಗಿದೆ",[೨] 1:23ರಷ್ಟು ಅನುಪಾತದಲ್ಲಿ.[೧೪] ಇತರ ತರಕಾರಿಗಳಿಗೆ ಹೋಲಿಸಿದರೆ ಜೀವಸತ್ವ ಹಾಗು ಖನಿಜಾಂಶಗಳು ಅಸಮತೆಯಿಂದ ಕೂಡಿದುದೆಂಬ ವಾದಗಳ ಹೊರತಾಗಿಯೂ, ವೀಟ್ ಗ್ರಾಸ್ ರಸದ ಪೌಷ್ಟಿಕಾಂಶವು ಸಾಮಾನ್ಯ ತರಕಾರಿಗಳಿಗೆ ಸ್ಥೂಲವಾಗಿ ಸರಿಸಮನಾಗಿದೆ (ಕೋಷ್ಟಕ 1ನ್ನು ನೋಡಿ).

ಒಂದು ಜೀವಾಧಾರಕ ಪೌಷ್ಟಿಕವಾದ ಜೀವಸತ್ವ B12 ನ ಅಂಶದಲ್ಲಿ ಅಧಿಕವಾಗಿರುವ ವೀಟ್ ಗ್ರಾಸ್ ಇತರ ತರಕಾರಿಗಳಿಗಿಂತ ಉತ್ತಮವಾದುದ್ದೆನಿಸಿದೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, B12 ಜೀವಸತ್ವವು ವೀಟ್ ಗ್ರಾಸ್ ಅಥವಾ ಯಾವುದೇ ತರಕಾರಿಯಲ್ಲಿ ಇರುವುದಿಲ್ಲ, ಬದಲಿಗೆ ಇದು ಸಸ್ಯಗಳ ಮೇಲೆ ಜೀವಿಸುವ ಸೂಕ್ಷ್ಮಜೀವಿಗಳ ಉಪೋತ್ಪನ್ನವಾಗಿರುತ್ತದೆ.[೧೫]. ಸಸ್ಯಗಳನ್ನು ಸೇವಿಸುವುದಕ್ಕೆ ಮುಂಚೆ ತೊಳೆದರೆ, ನೀರಿನಲ್ಲಿ ವಿಲೇಯವಾಗುವ B12 ನಾಶವಾಗುತ್ತದೆ, ಇದರಿಂದ ಹೆಚ್ಚಿನ ಸಸ್ಯಗಳು B12ನ ಆಧಾರವನ್ನು ಹೊಂದಿರುವ ಬಗ್ಗೆ ಖಾತರಿ ಇರುವುದಿಲ್ಲ.[೧೬]

ನಿರ್ವಿಷೀಕರಣ[ಬದಲಾಯಿಸಿ]

ವೀಟ್ ಗ್ರಾಸ್ ನ ಬಗ್ಗೆ ಇರುವ ಮತ್ತೊಂದು ಸಾಮಾನ್ಯ ಸಮರ್ಥನೆಯೆಂದರೆ ಇದು ನಿರ್ವಿಷೀಕರಣವನ್ನು ಉತ್ತೇಜಿಸುತ್ತದೆ. ಈ ಸಮರ್ಥನೆಗೆ ಸಹಾಯಕವಾಗಿರುವ ಸೀಮಿತ ದತ್ತಾಂಶವು ಹೆಚ್ಚಿನ ಹಸಿರು ತರಕಾರಿಗಳಿಗೆ ಅನ್ವಯವಾಗುತ್ತವೆ. [೧೭]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Murphy, Sean (2002-10-13). "Wheatgrass, healthy for the body and the bank account". ABC Landline. Retrieved 2006-10-06.
  2. ೨.೦ ೨.೧ ೨.೨ Meyerowitz, Steve (1999). "Nutrition in Grass". Wheatgrass Nature's Finest Medicine: The Complete Guide to Using Grass Foods & Juices to Revitalize Your Health (6th ed.). Book Publishing Company. p. 53. ISBN 1878736973. {{cite book}}: Cite has empty unknown parameters: |chapterurl= and |coauthors= (help); Unknown parameter |month= ignored (help)
  3. [೧]
  4. "I hate wheatgrass....and now I know why!". We lLke It Raw. Archived from the original on 2010-05-07. Retrieved 2010-06-04.
  5. "USDA Nutrient Database". Archived from the original on 2015-03-03. Retrieved 2007-11-06.
  6. ೬.೦ ೬.೧ de Vogel, Johan (August 2005). "Natural Chlorophyll but Not Chlorophyllin Prevents Heme-Induced Cytotoxic and Hyperproliferative Effects in Rat Colon". J. Nutr. The American Society for Nutritional Sciences. 135 (8): 1995–2000. PMID 16046728. {{cite journal}}: Unknown parameter |coauthors= ignored (|author= suggested) (help)
  7. Ferruzzia, Mario G.; Blakesleeb, Joshua (2007). "Digestion, absorption, and cancer preventative activity of dietary chlorophyll derivatives". Nutrition Research. 27 (1): 1–12. doi:10.1016/j.nutres.2006.12.003. Archived from the original on 2009-12-21. Retrieved 2010-11-02. {{cite journal}}: Unknown parameter |month= ignored (help)
  8. ಗ್ರಾಸ್ ರಸದ ಸಂಭಾವ್ಯ ಪ್ರಯೋಜನಗಳನ್ನು ಗುರುತಿಸಿವೆ
  9. [೨]
  10. Ben-Arye, E; Goldin, E; Wengrower, D; Stamper, A; Kohn, R; Berry, E (2002). "Wheat grass juice in the treatment of active distal ulcerative colitis: a randomized double-blind placebo-controlled trial". Scand J Gastroenterol. 37 (4): 444–9. doi:10.1080/003655202317316088. PMID 11989836. {{cite journal}}: Unknown parameter |month= ignored (help)
  11. ಮಾರವಾಹ, RK; ಬನ್ಸಾಲ್, D; ಕೌರ್, S; ಟ್ರೆಹನ್, A; ವೀಟ್ ಗ್ರಾಸ್ ರಸವು ಥಲಸ್ಸೇಮಿಯದ ರೋಗಿಗಳಿಗೆ ಅಗತ್ಯವಿರುವ ರಕ್ತವರ್ಗಾವಣೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ: ಒಂದು ಪ್ರಾಯೋಗಿಕ ಅಧ್ಯಯನ. ಇಂಡಿಯನ್ ಪೀಡಿಯಾಟ್ರಿಕ್ 2004 ಜುಲೈ;41(7):716-20
  12. S. ಮುಖ್ಯೋಪಾಧ್ಯಾಯ; J. ಬಸಕ್; M. ಕಾರ್; S. ಮಂಡಲ್; A. ಮುಖ್ಯೋಪಾಧ್ಯಾಯ; ನೇತಾಜಿ ಸುಭಾಷ್; ಚಂದ್ರ ಬೋಸ್; ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್, ಕೊಲ್ಕತ್ತಾ, ಇಂಡಿಯಾ; NRS ಮೆಡಿಕಲ್ ಕಾಲೇಜು, ಕೊಲ್ಕತ್ತಾ, ಇಂಡಿಯಾ; ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ (ಆಯುರ್ವೇದ), ಕೊಲ್ಕತ್ತಾ, ಇಂಡಿಯಾ. ಮ್ಯೇಲೋಡಿಸ್ಪ್ಲ್ಯಾಸ್ಟಿಕ್ ಸಿಂಡ್ರೋಮ್ ನ ರೋಗಿಗಳು ವೀಟ್ ಗ್ರಾಸ್ ರಸದ ಸೇವನೆಯಿಂದ ಅವರಲ್ಲಿ ಉಂಟಾಗುವ ಕಬ್ಬಿಣ ಕೊಂಡಿಗೂಡಿಕೆಯ ಕಾರ್ಯಚಟುವಟಿಕೆಯ ಪಾತ್ರ. ಜರ್ನಲ್ ಆಫ್ ಕ್ಲಿನಿಕಲ್ ಆನ್ಕಾಲಜಿ 27:15s, 2009 (suppl; abstr 7012) 2009 ASCO ವಾರ್ಷಿಕ ಸಭೆ. ಪ್ರಸ್ತುತ ಪಡಿಸಿದವರು: ಸೋಮಾ ಮುಖ್ಯೋಪಾಧ್ಯಾಯ, PhD.
  13. ಬಾರ್-ಸೆಲ, ಗಿಲ್; ಸಾಲಿಕ್, ಮೆಡಿ; ಫ್ರೈಡ್, ಗೆಟ್ಟ; ಗೋಲ್ಡ್ ಬರ್ಗ್, ಹಡಸ್ಸಃ. ವೀಟ್ ಗ್ರಾಸ್ ರಸವು, ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಕೀಮೊಥೆರಪಿಗೆ ಸಂಬಂಧಿಸಿದ ಹೆಮಟೋಲಾಜಿಕಲ್ ವಿಷದ ಪ್ರಮಾಣವನ್ನು ಕಡಿಮೆಮಾದುತ್ತದೆ: ಒಂದು ಪ್ರಾಯೋಗಿಕ ಅಧ್ಯಯನ. ನ್ಯೂಟ್ರಿಶನ್ ಅಂಡ್ ಕ್ಯಾನ್ಸರ್ 2007, ಸಂಪುಟ. 58, ನಂ. 1, ಪುಟಗಳು 43-48.
  14. http://www.ahr-kc.com/reports/american_butter_company
  15. ಮೆಲಿನ, ವೆಸಂಟೋ, MS, RD & ಡೇವಿಸ್, ಬ್ರೆಂಡ, RD: "ದಿ ನ್ಯೂ ಬಿಕಮಿಂಗ್ ವೆಜಿಟೇರಿಯನ್", ಪುಟ 186-187. ಹೆಲ್ತಿ ಲಿವಿಂಗ್ ಪಬ್ಲಿಕೇಷನ್ಸ್, 2003.
  16. http://www.vitamin-basics.com/index.php?id=48
  17. Fahey, Jed W. (2005). "Chlorophyll, chlorophyllin and related tetrapyrroles are significant inducers of mammalian phase 2 cytoprotective genes". Carcinogenesis. 26 (7): 1247–55. doi:10.1093/carcin/bgi068. PMID 15774490. {{cite journal}}: Unknown parameter |coauthors= ignored (|author= suggested) (help)