ರಕ್ತದಲ್ಲಿನ ಸಕ್ಕರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನುಷ್ಯರು ದಿನನಿತ್ಯದಲ್ಲಿ ಮೂರು ಬಾರಿ ತೆಗೆದುಕೊಳ್ಳುವ ಆಹಾರದಲ್ಲಿ ಉಂಟಾಗುವ ರಕ್ತದಲ್ಲಿನ ಸಕ್ಕರೆ(ಕೆಂಪು)ಯ ಏರಿಳಿತ ಹಾಗು ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಹಾರ್ಮೋನ್ ಇನ್ಸುಲಿನ್(ನೀಲಿ).ಆಹಾರದಲ್ಲಿ ಅಧಿಕ ಸಕ್ಕರೆಯ ಪ್ರಮಾಣದ ವಿರುದ್ಧ ಅಧಿಕ ಪಿಷ್ಟವುಳ್ಳ ಆಹಾರದ ಸೇವನೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಗಮನಸೆಳೆಯಲಾಗಿದೆ.

ರಕ್ತದಲ್ಲಿನ ಸಕ್ಕರೆಯ ಸಾಂದ್ರೀಕರಣ ಅಥವಾ ರಕ್ತದಲ್ಲಿನ ಗ್ಲುಕೊಸ್ ಮಟ್ಟ ವೆಂದರೆ, ಮಾನವ ಅಥವಾ ಪ್ರಾಣಿಗಳ ರಕ್ತದಲ್ಲಿ ಇರುವಗ್ಲುಕೋಸ್(ಸಕ್ಕರೆ)ನ ಪ್ರಮಾಣ. ಸಾಧಾರಣವಾಗಿ, ಸಸ್ತನಿಗಳ ದೇಹವು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು 3.6 ರಿಂದ 5.8 mM (mmol/L) ನಡುವೆ ಒಂದು ಉಲ್ಲೇಖಿತ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುತ್ತದೆ. ಇದನ್ನು ಮೆಟಬಾಲಿಕ್ (ಜೀವರಾಸಾಯನಿಕ ಕ್ರಿಯೆ) ಸಂತುಲನದ ಒಂದು ಭಾಗವಾಗಿ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.

ದೇಹದ ಜೀವಕೋಶಗಳಿಗೆ, ಗ್ಲುಕೋಸ್ ಮುಖ್ಯವಾಗಿಶಕ್ತಿಯ ಮೂಲ, ಲಿಪಿಡ್ ಗಳು(ಮೇದಸ್ಸು)(ಕೊಬ್ಬು ಹಾಗು ಎಣ್ಣೆಯ ರೂಪದಲ್ಲಿ) ಪ್ರಾಥಮಿಕವಾಗಿ ಒಂದು ಸಾಂದ್ರೀಕೃತ ಶಕ್ತಿಯ ಸಂಗ್ರಹ. ಇದು ಕರುಳು ಅಥವಾ ಪಿತ್ತಜನಕಾಂಗದಿಂದ ದೇಹದ ಜೀವಕೋಶಗಳಿಗೆ ರಕ್ತಪರಿಚಲನೆಯ ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ದೇಹದ ಜೀವಕೋಶಗಳು, ಸಾಧಾರಣವಾಗಿ ದೇಹವು ಉತ್ಪಾದಿಸುವ ಹಾರ್ಮೋನ್ ಇನ್ಸುಲಿನ್ ನ ಮಧ್ಯಸ್ಥಿಕೆಯೊಂದಿಗೆ ಹೀರಿಕೊಳ್ಳುತ್ತವೆ.

ಸಾಧಾರಣವಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಮಾನವರಲ್ಲಿ ಸರಾಸರಿ 4 mM (4 mmol/L ಅಥವಾ 72 mg/dL) ನಷ್ಟಿರುತ್ತದೆ. ಆದಾಗ್ಯೂ, ಹಗಲಿನಲ್ಲಿ ಗ್ಲುಕೋಸ್ ನ ಪ್ರಮಾಣವು ಏರುಪೇರಾಗುತ್ತದೆ. ಇದು ಊಟವಾದ ಒಂದು ಅಥವಾ ಎರಡು ಗಂಟೆಗಳ ನಂತರ ಕೆಲವು ಗ್ರಾಂಗಳಷ್ಟು ಹೆಚ್ಚಾಗುತ್ತದೆ. ಇದಲ್ಲದೆ ಹಗಲಿನಲ್ಲಿ ಮೊದಲ ಆಹಾರವನ್ನು ತೆಗೆದುಕೊಳ್ಳುವ ಮೊದಲು ಸಾಮಾನ್ಯವಾಗಿ ಕಡಿಮೆ ಇರುತ್ತದೆ (ಇದನ್ನು "ನಿರಾಹಾರ ಮಟ್ಟ" ಎಂದು ಹೆಸರಿಸಲಾಗಿದೆ).

ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಧಾರಣ ಮಟ್ಟಕ್ಕಿಂತ ಜಾಸ್ತಿಯಿದ್ದರೆ, ಈ ಪರಿಸ್ಥಿತಿಯು ವೈದ್ಯಕೀಯ ಪರಿಸ್ಥಿತಿಯನ್ನು ಸೂಚಿಸುತ್ತದೆ. ಒಂದು ಸತತವಾದ ಅಧಿಕ ಪ್ರಮಾಣವನ್ನು ಹೈಪರ್ ಗ್ಲೈಸೆಮಿಯ(ರಕ್ತದಲ್ಲಿನ ಅಧಿಕ ಸಕ್ಕರೆಯ ಅಂಶ) ಎಂದು ಹಾಗು ಕಡಿಮೆ ಪ್ರಮಾಣವಿದ್ದರೆ ಅದನ್ನು ಹೈಪೋ ಗ್ಲೈಸೆಮಿಯ(ರಕ್ತದಲ್ಲಿ ಸಕ್ಕರೆಯ ಕೊರತೆ) ಎಂದು ಸೂಚಿಸಲಾಗುತ್ತದೆ. ಡಯಾಬಿಟಿಸ್ ಮೆಲ್ಲಿಟಸ್ ಯಾವುದೇ ಹಲವಾರು ಕಾರಣಗಳಿಂದ ಉಂಟಾಗುವ ಸತತ ಹೈಪರ್ ಗ್ಲೈಸೆಮಿಯದ ಲಕ್ಷಣವನ್ನು ಹೊಂದಿರುತ್ತದೆ. ಇದಲ್ಲದೆ ರಕ್ತದಲ್ಲಿ ಸಕ್ಕರೆಯ ನಿಯಂತ್ರಣದ ವಿಫಲತೆಗೆ ಸಂಬಂಧಿಸಿದಂತೆ ಉಂಟಾಗುವ ಅತ್ಯಂತ ಪ್ರಮುಖ ಕಾಯಿಲೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತಾತ್ಕಾಲಿಕವಾಗಿ ಏರಿಕೆಯಾಗಲು ತೀವ್ರತರವಾದ ಒತ್ತಡ, ಉದಾಹರಣೆಗೆ ದೈಹಿಕ-ಹಾನಿ, ಪಾರ್ಶ್ವವಾಯು, ಹೃದಯಾಘಾತ, ಅಥವಾ ಶಸ್ತ್ರಚಿಕಿತ್ಸೆ; ಹಾಗು ಅಸ್ವಸ್ಥತೆಯಿಂದ ಉಂಟಾದ ಪರಿಣಾಮಗಳು. ಮದ್ಯಸಾರವು, ರಕ್ತದಲ್ಲಿನ ಸಕ್ಕರೆಗೆ ಪ್ರಾರಂಭಿಕ ಹೆಚ್ಚಳವನ್ನು ಉಂಟುಮಾಡಿದ ನಂತರ, ಅದು ರಕ್ತದಲ್ಲಿನ ಸಕ್ಕರೆಯ ಕುಸಿತಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಕೆಲವು ಮಾದಕ ವಸ್ತುಗಳು ಗ್ಲುಕೋಸ್ ಮಟ್ಟವನ್ನು ಅಧಿಕಗೊಳಿಸಬಹುದು ಅಥವಾ ಕಡಿಮೆ ಮಾಡಬಹುದು.[೧]

ರಕ್ತದಲ್ಲಿನ ಗ್ಲುಕೋಸ್‌ನ ಅಳತೆಮಾಡುವ ಏಕಮಾನಗಳು[ಬದಲಾಯಿಸಿ]

ಹೆಚ್ಚಿನ ರಾಷ್ಟ್ರಗಳಲ್ಲಿ, ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಮೋಲಾರ್ ಸಾಂದ್ರೀಕರಣ ವೆಂಬ ಹೆಸರಿನಿಂದ ವರದಿ ಮಾಡಲಾಗಿದೆ. ಇದನ್ನು mmol/L (ಪ್ರತಿ ಲೀಟರ್ ಗೆ ಮಿಲ್ಲಿಯೋಮೋಲ್ಸ್ ಲೆಕ್ಕದಲ್ಲಿ; ಅಥವಾ ಮಿಲ್ಲಿಮೋಲಾರ್ ನ ಸಂಕ್ಷಿಪ್ತ ರೂಪ mM) ನಲ್ಲಿ ಮಾಪನ ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್, ಹಾಗು ಇತರ ಕಡೆಗಳಲ್ಲಿ, mg/dL ನಲ್ಲಿ ಮಾಪನ ಮಾಡುವ ಮಾಸ್ ಕಾನ್ಸನ್ಟ್ರೇಷನ್ (ಪ್ರತಿ ಡೆಸಿಲೀಟರ್ ಗೆ ಮಿಲ್ಲಿಗ್ರಾಂನ ಲೆಕ್ಕದಲ್ಲಿ)ನ್ನು ವಿಶಿಷ್ಟವಾಗಿ ಬಳಸಲಾಗುತ್ತದೆ.[೨]

ಗ್ಲುಕೋಸ್ ನ ಆಣ್ವಿಕ ತೂಕವು C6H12O6 180 g/mol ನಷ್ಟಿರುವ ಕಾರಣ, ಗ್ಲುಕೋಸ್ ನ ಮಾಪನಕ್ಕೆ, ಎರಡು ಮಾಪನಗಳ ನಡುವಿನ ವ್ಯತ್ಯಾಸವು 18 ಅಂಶಗಳಷ್ಟಿರುತ್ತದೆ, ಹೀಗಾಗಿ 1 mmol/L ನ ಗ್ಲುಕೋಸ್ 18 mg/dL ಗೆ ಸಮನಾಗಿರುತ್ತದೆ.[೩]

ಸಾಧಾರಣ ಮೌಲ್ಯಗಳು[ಬದಲಾಯಿಸಿ]

ಒಬ್ಬ ಮನುಷ್ಯನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹಲವು ಅಂಶಗಳಿಂದ ಪರಿಣಾಮ ಬೀರುತ್ತದೆ. ಒಂದು ದೇಹದ ಸಮತೋಲನದ ಯಾಂತ್ರಿಕ ವ್ಯವಸ್ಥೆಯು, ನಹಜ ನಿರ್ವಹಣೆಯ ಸಂದರ್ಭದಲ್ಲಿ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಒಂದು ಪರಿಮಿತಿಯ ಮಟ್ಟವಾದ 4.4 ರಿಂದ 6.1 mmol/L (82 to 110 mg/dL)ರಲ್ಲಿ ಮರುಸ್ಥಾಪನೆ ಮಾಡುತ್ತದೆ.

ಭೋಜನಗಳ ನಡುವೆ ವ್ಯಾಪಕ ವ್ಯತ್ಯಾಸದ ವಿರಾಮಗಳಿದ್ದರೂ ಅಥವಾ ಗಣನೀಯ ಪ್ರಮಾಣದ ಕಾರ್ಬೋಹೈಡ್ರೇಟ್ ಮೊತ್ತದೊಂದಿಗೆ ಸಾಂದರ್ಭಿಕವಾಗಿ ತೆಗೆದುಕೊಳ್ಳುವ ಭೋಜನಗಳ ಹೊರತಾಗಿಯೂ ಮಾನವ ದೇಹದಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಸಾಧಾರಣವಾಗಿ ಸಾಮಾನ್ಯ ಮಟ್ಟದಲ್ಲೇ ಉಳಿಯುತ್ತದೆ. ಆದಾಗ್ಯೂ, ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ತಾತ್ಕಾಲಿಕವಾಗಿ 7.8 mmol/L (140 mg/dL)ವರೆಗೆ ಅಧಿಕವಾಗಬಹುದು ಅಥವಾ ಸಕ್ಕರೆ ಕಾಯಿಲೆ ಇಲ್ಲದವರಲ್ಲಿ ಇದು ಇನ್ನು ಕೊಂಚ ಅಧಿಕವಾಗಿರಬಹುದು. ದಿ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಶನ್ ಭೋಜನಾನಂತರದ ಗ್ಲುಕೋಸ್ ಮಟ್ಟವು 10 mmol/L (180 mg/dl)ಕ್ಕಿಂತ ಕಡಿಮೆ ಹಾಗು ಭೋಜನಕ್ಕೆ ಮುಂಚೆ ಪ್ಲಾಸ್ಮಾ ಗ್ಲುಕೋಸ್ 5 ರಿಂದ 7.2 mmol/L (90–130 mg/dL)ನಷ್ಟಿರಬೇಕೆಂದು ಶಿಫಾರಸು ಮಾಡುತ್ತದೆ.[೪]

ವಾಸ್ತವವಾಗಿ ರಕ್ತದಲ್ಲಿ ಹಾಗು ದೇಹದ ದ್ರವಗಳಲ್ಲಿ ಗ್ಲುಕೋಸ್‌ನ ಮಟ್ಟವು ಬಹಳ ಕಡಿಮೆಯಿರುತ್ತದೆ. ಮಾನವ ದೇಹದ ಯಾಂತ್ರಿಕ ವ್ಯವಸ್ಥೆಯ ನಿಯಂತ್ರಣವು, ಗ್ಲುಕೋಸ್‌ನ ಅತ್ಯಂತ ಕಡಿಮೆ ಪ್ರಮಾಣದ ಮೇಲೆ ಕಾರ್ಯನಿರ್ವಹಿಸುತ್ತದೆ. 75 ಕೆಜಿ ತೂಕವನ್ನು ಹೊಂದಿರುವ ಒಬ್ಬ ಆರೋಗ್ಯವಂತ ಪುರುಷ (165 lb)ನ ರಕ್ತದ ಪ್ರಮಾಣವು 5 ಲೀಟರ್ ಗಳಷ್ಟಿರುತ್ತದೆ (1.3 ಗ್ಯಾಲ್). 100 mg/dL ಅಥವಾ 5.5 mmol/L ನಷ್ಟು ಗ್ಲುಕೋಸ್ ಮಟ್ಟವು ರಕ್ತದಲ್ಲಿದ್ದರೆ ಅದು ಸುಮಾರು 5 g (0.2 oz ಅಥವಾ 0.002 ಗ್ಯಾಲ್, 1/500 ಒಟ್ಟಾರೆಯಾಗಿ) ನಷ್ಟು ರಕ್ತದಲ್ಲಿನ ಗ್ಲುಕೋಸ್ ಗೆ ಸಮನಾಗಿರುತ್ತದೆ. ಇದಲ್ಲದೆ ಒಟ್ಟಾರೆ ಸರಿಸುಮಾರು 45 g (1½ ಔನ್ಸ್ಸ್)ನಷ್ಟು ದೇಹದ ನೀರಿನಲ್ಲಿ ಇರುತ್ತದೆ (ಇದರಲ್ಲಿ ಕೇವಲ ರಕ್ತಕ್ಕಿಂತ ಹೆಚ್ಚಿನ ದ್ರವ ಸೇರಿದೆ ಹಾಗು ಸಾಮಾನ್ಯವಾಗಿ ಪುರುಷರಲ್ಲಿ ಸುಮಾರು 60%ನಷ್ಟು ಒಟ್ಟು ದೇಹದ ತೂಕ ವಾಗಿರುತ್ತದೆ) (ಹಲವು ಹೊಟೇಲುಗಳಲ್ಲಿ ಕಾಫಿ ಅಥವಾ ಟೀ ಜೊತೆಗೆ ನೀಡಲಾಗುವ ಸಣ್ಣ ಸಕ್ಕರೆ ಪೊಟ್ಟಣ ಗಳು ತಲಾ 5 ಗ್ರಾಂ ಇರುತ್ತದೆ.)

ನಿಯಂತ್ರಣ[ಬದಲಾಯಿಸಿ]

ಒಂದು ದೇಹದ ಸಮತೋಲನ ವ್ಯವಸ್ಥೆಯು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಒಂದು ಸಂಕುಚಿತ ಪರಿಮಿತಿಯೊಳಗೆ ಇಡುತ್ತದೆ. ಇದು ಹಲವಾರು ಪರಸ್ಪರ ಪ್ರಭಾವ ಬೀರುವ ವ್ಯವಸ್ಥೆಗಳಿಂದ ಕೂಡಿದೆ, ಇದರಲ್ಲಿ ಹಾರ್ಮೋನ್ ನಿಯಂತ್ರಣವು ಪ್ರಮುಖವಾದುದು.

ರಕ್ತದಲ್ಲಿ ಗ್ಲುಕೋಸ್ ಮಟ್ಟಗಳಿಗೆ ಪರಿಣಾಮ ಬೀರುವ ಪರಸ್ಪರ ಪ್ರತಿವರ್ತಿ ಮೆಟಬಾಲಿಕ್ ಹಾರ್ಮೋನ್‌ಗಳ ಎರಡು ವಿಧಗಳಿವೆ:

ಆರೋಗ್ಯದ ಮೇಲೆ ಪರಿಣಾಮಗಳು[ಬದಲಾಯಿಸಿ]

ರಕ್ತದಲ್ಲಿನ ಸಕ್ಕರೆ ಮಟ್ಟವು ಬಹಳ ಕುಸಿದರೆ, ಹೈಪೋಗ್ಲೈಸೆಮಿಯ ಎಂಬ ಒಂದು ತೀವ್ರತರವಾದ ಮಾರಕ ಪರಿಸ್ಥಿತಿಯು ಬೆಳವಣಿಗೆಯಾಗುತ್ತದೆ. ರೋಗ ಲಕ್ಷಣಗಳಲ್ಲಿ ಜಡತೆ, ಅಸಮರ್ಪಕ ಮಿದುಳಿನ ಕ್ರಿಯೆ, ಸಿಡುಕುತನ, ನಡುಕ, ತೋಳು ಹಾಗು ಕಾಲಿನ ಸ್ನಾಯುಗಳ ದುರ್ಬಲತೆ, ಬೆವರುವುದು ಹಾಗು ಪ್ರಜ್ಞೆ ಕಳೆದುಕೊಳ್ಳುವುದು ಒಳಗೊಂಡಿದೆ. ಮಿದುಳಿಗೆ ಹಾನಿಯು ಸಹ ಉಂಟಾಗಬಹುದು.

ಗ್ಲುಕೋಸ್ ಮಟ್ಟವು ಬಹಳ ಅಧಿಕವಾಗಿ ಉಳಿದುಬಿಟ್ಟರೆ,ಅಲ್ಪಾವಧಿಯಲ್ಲಿ ಹಸಿವು ಕುಂದುತ್ತದೆ. ದೀರ್ಘಕಾಲಿಕ ಹೈಪರ್‌ಗ್ಲೈಸೇಮಿಯ ಮಧುಮೇಹ[[]]ಕ್ಕೆ ಸಂಬಂಧಿಸಿದಂತೆ ಒಂದು ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಇದರಲ್ಲಿ ಕಣ್ಣು, ಮೂತ್ರಪಿಂಡ, ಹೃದಯ ಕಾಯಿಲೆ ಹಾಗು ನರಗಳಿಗೆ ಹಾನಿ ಕೂಡ ಸೇರಿವೆ.

ರಕ್ತದಲ್ಲಿನ ಸಕ್ಕರೆಯ ಕುಸಿತ[ಬದಲಾಯಿಸಿ]

ಕೆಲವರು ಭೋಜನವಾದ ಹಲವು ಗಂಟೆಗಳ ನಂತರ ಮಂಪರು ಅಥವಾ ಅರಿವಿನ ಕ್ರಿಯೆಯಲ್ಲಿ ದುರ್ಬಲತೆಯ ಬಗ್ಗೆ ವರದಿ ಮಾಡಿದ್ದಾರೆ. ಇದಕ್ಕೆ ಅವರು ರಕ್ತದಲ್ಲಿನ ಸಕ್ಕರೆಯ ಕುಸಿತ, ಅಥವಾ "ರಕ್ತದಲ್ಲಿನ ಸಕ್ಕರೆಯ ಕಡಿಮೆ"ಯು ಕಾರಣವೆಂದು ಭಾವಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ, ನೋಡಿ:

ಹೈಪೋಗ್ಲೈಸೆಮಿಯನಂತರ ತೃಪ್ತಿಕರವಾಗಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಮರುಸ್ಥಾಪಿಸುವ ಯಾಂತ್ರಿಕ ವ್ಯವಸ್ಥೆಗಳು ತ್ವರಿತವಾಗಿರಬೇಕು ಹಾಗು ಪರಿಣಾಮಕಾರಿಯಾಗಿರಬೇಕು, ಏಕೆಂದರೆ ಗ್ಲುಕೋಸ್‌ನ ಕೊರತೆಯು ತಕ್ಷಣವೇ ತೀವ್ರತರವಾದ ಪರಿಸ್ಥಿತಿಗಳಿಗೆ ಕಾರಣವಾಗಬಹುದು; ಒಂದು ವಿಪರೀತ ಸ್ಥಿತಿ ಕೋಮಾಕ್ಕೆ ಎಡೆಯಾಗಬಹುದು. ತಕ್ಷಣಕ್ಕೆ ಕಡಿಮೆ ಅಪಾಯಕಾರಿ,ಗೊಂದಲ ಅಥವಾ ಚಂಚಲತೆ-ಇವುಗಳು ಇತರ ಹಲವು ರೋಗ ಲಕ್ಷಣಗಳಲ್ಲಿ ಸೇರಿವೆ. ಇದಕ್ಕೆ ಕಾರಣವೆಂದರೆ, ಕಡೇಪಕ್ಷ ಅಲ್ಪಾವಧಿಯಲ್ಲಿ, ರಕ್ತದಲ್ಲಿ ಗ್ಲುಕೋಸ್ ನ ಮಟ್ಟವು ಬಹಳ ಕಡಿಮೆಯಿದ್ದರೆ, ಅಧಿಕವಾದರೆ ಉಂಟಾಗುವ ಪರಿಣಾಮಕ್ಕಿಂತ ಅಪಾಯಕಾರಿಯಾಗಿರುತ್ತದೆ. ಆರೋಗ್ಯವಂತ ಜನರಲ್ಲಿ ಈ ಯಾಂತ್ರಿಕ ವ್ಯವಸ್ಥೆಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಹಾಗು ಹೈಪೋಗ್ಲೈಸೆಮಿಯದ ಲಕ್ಷಣಗಳು ಸಾಮಾನ್ಯವಾಗಿ ಇನ್ಸುಲಿನ್ ಅಥವಾ ಇತರ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟ ಡಯಾಬಿಟಿಕ್ ರೋಗಿಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ರೀತಿಯಾದ ಹೈಪೋಗ್ಲೈಸೆಮಿಕ್ ಪ್ರಸಂಗಗಳು, ತೀವ್ರತೆಯಲ್ಲಿ ಹಾಗೂ ಹಾಗು ಪ್ರಾರಂಭವಾಗುವ ವೇಗವು ವ್ಯಕ್ತಿಗಳ ನಡುವೆ ಹಾಗು ಕಾಲಾನುಕಾಲಕ್ಕೆ ಬಹುಮಟ್ಟಿಗೆ ವ್ಯತ್ಯಾಸವನ್ನು ಹೊಂದಿರುತ್ತದೆ. ಕೆಲವೊಂದು ತೀವ್ರವಾದ ಪ್ರಕರಣಗಳಲ್ಲಿ, ಪ್ರಾಮಾಣಿಕ ವೈದ್ಯಕೀಯ ನೆರವಿನ ಅವಶ್ಯಕತೆಯಿದೆ, ಏಕೆಂದರೆ ಹಾನಿ (ಮಿದುಳು ಹಾಗು ಇತರ ಜೀವಕೋಶಗಳಿಗೆ) ಹಾಗು ಮರಣ ಕೂಡ, ರಕ್ತದಲ್ಲಿನ ಗ್ಲುಕೋಸ್ ಮಟ್ಟದಲ್ಲಿ ಕಡಿಮೆಯಾದ ಪರಿಣಾಮದಿಂದ ಸಂಭವಿಸಬಹುದು.

ತುಲನಾತ್ಮಕ ವಿಷಯ[ಬದಲಾಯಿಸಿ]

ಉಲ್ಲೇಖವು ರಕ್ತ ಪರೀಕ್ಷೆಗಳು, ಇತರ ಅಂಗಗಳೊಂದಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಹೋಲಿಕೆಯಲ್ಲಿ ಬದಲಾವಣೆಯಾಗುತ್ತದೆ( ಕಡು ಹಸಿರು ಬಣ್ಣದಲ್ಲಿ ತೋರಿಸಲಾಗಿದೆ).

ಗ್ಲುಕೋಸ್‌ನ ಮಾಪನ[ಬದಲಾಯಿಸಿ]

ಮಾದರಿ ವಿಧ[ಬದಲಾಯಿಸಿ]

ಗ್ಲುಕೋಸ್‌ನ್ನು ಸಂಪೂರ್ಣವಾಗಿ ರಕ್ತದಲ್ಲಿ ಅಥವಾ ಸೀರಮ್ (ಅದೆಂದರೆ ಪ್ಲಾಸ್ಮ)ಮೂಲಕ ಮಾಪನ ಮಾಡಬಹುದಾಗಿದೆ. ಹಿಂದೆಲ್ಲ, ರಕ್ತದಲ್ಲಿನ ಗ್ಲುಕೋಸ್ ಮೌಲ್ಯಗಳನ್ನು, ಸಂಪೂರ್ಣ ರಕ್ತದ ಆಧಾರದ ಮೇಲೆ ಮಾಪನ ಮಾಡಲಾಗುತ್ತಿತ್ತು, ಆದರೆ ಈಗ ಹೆಚ್ಚಿನ ಪ್ರಯೋಗಶಾಲೆಗಳು ಸೀರಮ್ ನ ಗ್ಲುಕೋಸ್ ಮಟ್ಟವನ್ನು ಮಾಪನ ಮಾಡಿ ವರದಿ ನೀಡುತ್ತವೆ. ಸೀರಮ್‌ಗಿಂತ ಕೆಂಪು ರಕ್ತ ಕಣಗಳು (ಏರಿಥ್ರೋಸೈಟ್ಸ್) ಅಧಿಕ ಪ್ರೋಟೀನ್‌ನ ಸಾಂದ್ರತೆಯನ್ನು ಹೊಂದಿರುವ ಕಾರಣ (ಉದಾಹರಣೆಗೆ, ಹಿಮೊಗ್ಲೋಬಿನ್), ಸೀರಮ್ ಅಧಿಕ ನೀರಿನ ಅಂಶವನ್ನು ಹೊಂದಿರುತ್ತದೆ ಹಾಗು ಪರಿಣಾಮವಾಗಿ ಒಟ್ಟು ರಕ್ತಕ್ಕಿಂತ ಹೆಚ್ಚಿನ ಗ್ಲುಕೋಸ್‌ ಕರಗಿರುತ್ತದೆ. ಸಂಪೂರ್ಣವಾಗಿ-ರಕ್ತದಲ್ಲಿನ ಗ್ಲುಕೋಸ್ ನ್ನು ಮಾರ್ಪಡಿಸಬೇಕಾದಲ್ಲಿ, 1.15 ರಿಂದ ಗುಣಿಸಿ ಸಾಮಾನ್ಯವಾಗಿ ಸೀರಮ್/ಪ್ಲಾಸ್ಮ ಮಟ್ಟವನ್ನು ಪ್ರಕಟಿಸಲಾಗುತ್ತದೆ. ಸೀರಮ್ ರಾಸಾಯನಿಕ ವಿಶ್ಲೇಷಣೆಗೆ ಗರಣೆಯ ಕೊಳವೆಗಳಲ್ಲಿ ಸಂಗ್ರಹಿಸಲಾದ ರಕ್ತವು ಅಪಕೇಂದ್ರದ ಯಂತ್ರದಿಂದ ಬೇರ್ಪಡುವ ತನಕವೂ ರಕ್ತಕಣಗಳಿಂದ ರಕ್ತಮಾದರಿಯಲ್ಲಿ ಗ್ಲುಕೋಸ್‌ನ ಜೀವರಾಸಾಯನಿಕ ಕ್ರಿಯೆಗೆ ಅವಕಾಶವಿರುತ್ತದೆ. ಉದಾಹರಣೆಗೆ ಕೆಂಪು ರಕ್ತ ಕಣಗಳಿಗೆ, ರಕ್ತದಿಂದ ಗ್ಲುಕೋಸ್ ನ್ನು ಒಳಗೆ ತೆಗೆದುಕೊಳ್ಳಲು ಇನ್ಸುಲಿನ್‌ನ ಅವಶ್ಯಕತೆಯಿರುವುದಿಲ್ಲ. ಬಿಳಿ ಅಥವಾ ಕೆಂಪು ರಕ್ತ ಕಣಗಳ ಎಣಿಕೆಯು ಸಾಧಾರಣ ಮಟ್ಟಕ್ಕಿಂತ ಅಧಿಕವಾಗಿದ್ದರೆ, ಅದು ರಕ್ತ ಸಂಗ್ರಹದ ಮಾದರಿಯಲ್ಲಿ ಅತಿಯಾದ ಗ್ಲೈಕಾಲಿಸಿಸ್ ಗೆ ದಾರಿ ಮಾಡಿಕೊಡಬಹುದು. ಜೊತೆಗೆ ಮಾದರಿಯನ್ನು ತಕ್ಷಣವೇ ಪ್ರಕ್ರಿಯೆಗೆ ಒಳಪಡಿಸದಿದ್ದಲ್ಲಿ ಗ್ಲುಕೋಸ್‌ನ ಮಟ್ಟದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಅಪಕೇಂದ್ರದ ಯಂತ್ರದಿಂದ ಬೇರ್ಪಡಿಸುವ ಮುಂಚೆ ರಕ್ತದ ಮಾದರಿಯನ್ನು ಇಡಲಾದ ಪರಿವೇಷ್ಟಕ ತಾಪಮಾನ ಹಾಗು ಪ್ಲಾಸ್ಮ/ಸೀರಮ್ ನಿಂದ ವಿಯೋಜನೆಯು ಸಹ ಗ್ಲುಕೋಸ್‌ನ ಮಟ್ಟಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ರೆಫ್ರಿಜರೇಟರ್‌ನ ತಾಪಮಾನದಲ್ಲಿ, ರಕ್ತ ಮಾದರಿಯಲ್ಲಿರುವ ಗ್ಲುಕೋಸ್ ಹಲವಾರು ಗಂಟೆಗಳ ಕಾಲ ಹೆಚ್ಚುಕಡಿಮೆ ಸ್ಥಿರವಾಗಿರುತ್ತದೆ.ಕೊಠಡಿಯ ತಾಪಮಾನದಲ್ಲಿ (25 °C), ಸಂಪೂರ್ಣ ರಕ್ತದ ಮಾದರಿಗಳಲ್ಲಿ ಪ್ರತಿ ಗಂಟೆಗೆ ಒಟ್ಟಾರೆಯಾಗಿ 1 ರಿಂದ 2%ನಷ್ಟು ಗ್ಲುಕೋಸ್ ನ ಮಟ್ಟದಲ್ಲಿ ಇಳಿಕೆಯನ್ನು ನಿರೀಕ್ಷಿಸಬಹುದು. ಈ ಪರಿಸ್ಥಿತಿಗಳಲ್ಲಿ ಗ್ಲುಕೋಸ್‌ನ ಮಟ್ಟದಲ್ಲಿ ಇಳಿಕೆಯಾಗುವುದನ್ನು ತಡೆಗಟ್ಟಲು ಫ್ಲೋರೈಡ್ ಕೊಳವೆಗಳನ್ನು (ಅದು ಬೂದುಬಣ್ಣದ-ಮೇಲ್ಭಾಗ) ಬಳಕೆ ಮಾಡಬಹುದು. ಏಕೆಂದರೆ ಫ್ಲೋರೈಡ್ ಗ್ಲೈಕಾಲಿಸಿಸ್ಅನ್ನು ನಿರೋಧಿಸುತ್ತದೆ. ಆದಾಗ್ಯೂ, ಇದನ್ನು ಕೇವಲ ಒಂದು ಆಸ್ಪತ್ರೆಯ ಪ್ರಯೋಗಶಾಲೆಯಿಂದ ಗ್ಲುಕೋಸ್‌ನ ಮಾಪನಕ್ಕೆ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಬೇಕಾದಾಗ ಮಾತ್ರ ಬಳಸಬಹುದು.ಕೆಂಪು-ಮೇಲ್ಭಾಗವನ್ನು ಹೊಂದಿದ ಸೀರಮ್ ವಿಭಜಕ ಕೊಳವೆಗಳು ಕೂಡ, ಅಪಕೇಂದ್ರದ ಯಂತ್ರದಿಂದ ಬೇರ್ಪಟ್ಟ ನಂತರ ರಕ್ತದ ಮಾದರಿಗಳಲ್ಲಿ ಗ್ಲುಕೋಸ್‌ನ್ನು ಸಂರಕ್ಷಿಸಿ, ಕೋಶಗಳಿಂದ ಸೆರಮ್‌ನ್ನು ಪ್ರತ್ಯೇಕಿಸುತ್ತದೆ. ರಕ್ತದ ಮಾದರಿಗಳನ್ನು ಸಂಗ್ರಹಿಸುವಾಗ ವಿಶೇಷ ಕಾಳಜಿಯನ್ನು ವಹಿಸಬೇಕು, ಅಭಿಧಮನಿಯ ದ್ರವಗಳೊಂದಿಗೆ ರಕ್ತ ಮಾದರಿಯು ಬೆರೆತು ಮಲಿನವಾಗುವುದನ್ನು ತಡೆಗಟ್ಟಲು ಇನ್ಟ್ರಾವೇನಸ್ ಲೈನ್(ರಕ್ತನಾಳದೊಳಕ್ಕೆ ದ್ರವ ನೀಡುವ ಪ್ರಕ್ರಿಯೆ) ಅಳವಡಿಸುವ ಕೈಯ ವಿರುದ್ಧ ಕೈನಿಂದ ರಕ್ತವನ್ನು ಸಂಗ್ರಹಿಸಬೇಕು. ಇದಕ್ಕೆ ಪರ್ಯಾಯವಾಗಿ IVನ್ನು(ಇಂಟ್ರಾವೇನಸ್ ಚಿಕಿತ್ಸೆ) ಕಡೇಪಕ್ಷ 5 ನಿಮಿಷಗಳ ಕಾಲ ಸ್ಥಗಿತಗೊಳಿಸಿದ ನಂತರ ರಕ್ತವನ್ನು IV ಲೈನ್ ಇರುವ ತೋಳಿನಿಂದ ಸಂಗ್ರಹಿಸಬಹುದು. ರಕ್ತನಾಳದಿಂದ ನೆನೆದ ದ್ರವಗಳು ಒಣಗಲು ಕೈಯನ್ನು ಮೇಲಕ್ಕೆತ್ತಬೇಕು.ನಿರ್ಲಕ್ಷ್ಯವು ದೊಡ್ಡ ತಪ್ಪುಗಳಿಗೆ ಎಡೆಯಾಗಬಹುದು. 5% ಡೆಕ್ಸ್ಟ್ರೋಸ್(D5W) ನೊಂದಿಗೆ 10% ನಷ್ಟು ಮಲಿನತೆಯು, ರಕ್ತದ ಮಾದರಿಯಲ್ಲಿ ಗ್ಲುಕೋಸ್ ನ ಮಟ್ಟವನ್ನು 500 mg/dl ಅಥವಾ ಅದಕ್ಕೂ ಅಧಿಕವಾಗಿ ಹೆಚ್ಚಿಸಬಹುದು. ವಾಸ್ತವವಾಗಿ ರಕ್ತದಲ್ಲಿನ ಗ್ಲುಕೋಸ್ ನ ಸಾಂದ್ರೀಕರಣವು ಬಹಳ ಕಡಿಮೆಯಿರುತ್ತದೆ ಎಂಬುದನ್ನು ಗಮನಿಸಬಹುದು, ಹೈಪರ್ಗ್ಲೈಸೆಮಿಯದ ಪರಿಸ್ಥಿತಿಯಲ್ಲೂ ಸಹ. ನಿರಾಹಾರವಿರುವ ವ್ಯಕ್ತಿಗಳಲ್ಲಿ ಅಪಧಮನಿಯ, ಲೋಮಧಮನಿಯ ಹಾಗು ವೀನಸ್ ರಕ್ತದಲ್ಲಿ, ಗ್ಲುಕೋಸ್‌ನ ಮಟ್ಟವು ತುಲನಾತ್ಮಕವಾಗಿರುತ್ತದೆ. ಭೋಜನದ ನಂತರ ವೀನಸ್ ಮಟ್ಟವು ಸ್ವಲ್ಪಮಟ್ಟಿಗೆ ಲೋಮಧಮನಿಯ ಅಥವಾ ಅಪಧಮನಿಯ ರಕ್ತಕ್ಕಿಂತ ಕಡಿಮೆಯಿರುತ್ತದೆ; ಒಂದು ಸಾಮಾನ್ಯ ಅಂದಾಜಿನ ಪ್ರಕಾರ ಸುಮಾರು 10% ನಷ್ಟು ಕಡಿಮೆಯಿರುತ್ತದೆ.

ಮಾಪನದ ತಂತ್ರಜ್ಞಾನಗಳು[ಬದಲಾಯಿಸಿ]

ಗ್ಲುಕೋಸ್‌ನ್ನು ಮಾಪನ ಮಾಡಲು ಎರಡು ಪ್ರಮುಖ ವಿಧಾನಗಳನ್ನು ಬಳಸಲಾಗುತ್ತದೆ. ಮೊದಲನೇಯದಾಗಿ, ಕೆಲವು ಕಡೆಗಳಲ್ಲಿ ಈಗಲೂ ಬಳಕೆಯಲ್ಲಿರುವ ರಾಸಾಯನಿಕ ವಿಧಾನದಲ್ಲಿ ಗ್ಲುಕೋಸ್‌ನ ಅನಿರ್ದಿಷ್ಟ ಅಪಕರ್ಷಣ ಲಕ್ಷಣವನ್ನು ಕ್ರಿಯೆಯ ಮೂಲಕ ಪರೀಕ್ಷೆಗೆ ಒಡ್ಡಿ, ಗ್ಲೂಕೋಸ್ ಅಪಕರ್ಷಣ ಕ್ರಿಯೆಗೆ ಒಳಗಾದ ಕೂಡಲೇ ಸೂಚಕ ವಸ್ತು ಬಣ್ಣಬದಲಿಸುತ್ತದೆ.ಇತರ ರಕ್ತದ ಸಂಯೋಗವು ಅಪಕರ್ಷಣ ಲಕ್ಷಣಗಳನ್ನು ಹೊಂದಿರುವ ಕಾರಣ (ಉದಾಹರಣೆಗೆ., ಯುರಿಯಾ, ಯುರೇಮಿಕ್ ರೋಗಿಗಳಲ್ಲಿ ಅಸಾಧಾರಣವಾಗಿ ಹೆಚ್ಚಾಗಿರುತ್ತದೆ), ಈ ತಂತ್ರಜ್ಞಾನವು, ಕೆಲವು ಪರಿಸ್ಥಿತಿಗಳಲ್ಲಿ ತಪ್ಪಾದ ರೀಡಿಂಗ್‌ಗಳನ್ನು ನೀಡಬಹುದು (5 to 15 mg/dl ವರದಿಯಾಗಿದೆ). ಇತ್ತೀಚಿನ ತಂತ್ರಜ್ಞಾನದಲ್ಲಿ, ಗ್ಲುಕೋಸ್ ಗೆ ನಿರ್ದಿಷ್ಟವಾದ ಕಿಣ್ವ ಗಳನ್ನು ಬಳಕೆ ಮಾಡಲಾಗುತ್ತದೆ, ಈ ರೀತಿಯಾದ ದೋಷಕ್ಕೆ ಈ ವಿಧಾನದಲ್ಲಿ ಅವಕಾಶವಿರುವುದಿಲ್ಲ. ಸಾಮಾನ್ಯವಾಗಿ ಬಳಸಲಾಗುವ ಎರಡು ಕಿಣ್ವಗಳೆಂದರೆ ಗ್ಲುಕೋಸ್ ಆಕ್ಸಿಡೇಸ್ ಹಾಗು ಹೆಕ್ಸೋಕಿನೇಸ್.ಪ್ರತಿಯೊಂದು ಪ್ರಕರಣದಲ್ಲೂ, ರಾಸಾಯನಿಕ ವ್ಯವಸ್ಥೆಯು ಸಾಮಾನ್ಯವಾಗಿ ಒಂದು ಪರೀಕ್ಷಾ ಪಟ್ಟಿಯಲ್ಲಿ ಒಳಗೊಂಡಿರುತ್ತದೆ. ಇದಕ್ಕೆ ರಕ್ತ ಮಾದರಿಯನ್ನು ಲೇಪಿಸಿ ನಂತರ ಮೀಟರ್‌ಗೆ ಅಳವಡಿಸಿ ಓದಲಾಗುತ್ತದೆ. ಪರೀಕ್ಷಾ ಪಟ್ಟಿಯ ಆಕಾರಗಳು ಹಾಗು ಅದರ ನಿಖರ ರಾಸಾಯನಿಕ ಸಂಯೋಜನೆಯು ಮಾಪಕ ವ್ಯವಸ್ಥೆಗಳಲ್ಲಿ ವ್ಯತ್ಯಾಸಹೊಂದಿರುತ್ತದೆ ಹಾಗು ಇದನ್ನು ಅದಲು ಬದಲು ಮಾಡಲು ಸಾಧ್ಯವಿಲ್ಲ. ಮುಂಚೆ, ಕೆಲವು ಪರೀಕ್ಷಾ ಪಟ್ಟಿಗಳನ್ನು (ಕಾಲನಿರ್ಧಾರ ಹಾಗೂ ರಕ್ತದ ಮಾದರಿಯನ್ನು ಅಳಿಸಿದ ನಂತರ)ಸೀಸೆಯ ಪಟ್ಟಿಯ ಮೇಲೆ ಮುದ್ರಿಸಲಾದ ಒಂದು ಬಣ್ಣದ ನಕ್ಷೆಯಲ್ಲಿ ದೃಷ್ಟಿಯ ಹೋಲಿಕೆ ಮೂಲಕ ಓದಲಾಗುತ್ತಿತ್ತು. ಈ ಮಾದರಿಯ ಪಟ್ಟಿಗಳನ್ನು ಮೂತ್ರದಲ್ಲಿನ ಗ್ಲುಕೋಸ್ ರೀಡಿಂಗ್‌ಗೆ ಬಳಸಲಾಗುತ್ತದೆ, ಆದರೆ ರಕ್ತದಲ್ಲಿನ ಗ್ಲುಕೋಸ್ ಮಟ್ಟಕ್ಕೆ ಅದು ಹಳತಾಗಿ ಹೋಗಿರುತ್ತದೆ. ಅವುಗಳ ದೋಷದ ಪ್ರಮಾಣವು ಸಹ ತುಂಬಾ ಅಧಿಕವಾಗಿದೆ. ಆದಾಗ್ಯೂ ಮೂತ್ರದಲ್ಲಿನ ಗ್ಲುಕೋಸ್ ನ ರೀಡಿಂಗ್‌ಗಳು ಕಡಿಮೆ ಉಪಯುಕ್ತತೆಯನ್ನು ಹೊಂದಿದೆ. ಸೂಕ್ತವಾಗಿ ಕೆಲಸ ಮಾಡುವ ಮೂತ್ರಪಿಂಡಗಳಲ್ಲಿಮೂತ್ರಪಿಂಡದ ಪ್ರತಿಕ್ರಿಯೋದಯ ಮಿತಿಯು ಮೀರುವ ತನಕವೂ ಮೂತ್ರದಲ್ಲಿ ಗ್ಲುಕೋಸ್ ಕಂಡು ಬರುವುದಿಲ್ಲ. ಇದು ಒಟ್ಟಿನಲ್ಲಿ ಯಾವುದೇ ಸಾಧಾರಣ ಗ್ಲುಕೋಸ್ ಮಟ್ಟಕ್ಕಿಂತ ಅಧಿಕವಾಗಿರುತ್ತದೆ, ಹಾಗು ಇದು ಅಸ್ತಿತ್ವದಲ್ಲಿರುವ ತೀವ್ರತರವಾದ ಹೈಪರ್ಗ್ಲಸೆಮಿಕ್ ಪರಿಸ್ಥಿತಿಗೆ ಪುರಾವೆಯಾಗಿದೆ. ಆದಾಗ್ಯೂ, ಕೋಶದಲ್ಲೂ ಮೂತ್ರದ ಸಂಗ್ರಹವಾಗುತ್ತದೆ ಹಾಗು ಕೋಶವು ಹಿಂದಿನ ಬಾರಿ ಬರಿದಾದಾಗಿನಿಂದ ಗ್ಲುಕೋಸ್ ಯಾವುದೇ ಸಮಯದಲ್ಲಿ ಉತ್ಪತ್ತಿಯಾಗಬಹುದು. ಹಲವಾರು ಅಂಶಗಳ ಕಾರಣದಿಂದ ಜೀವರಾಸಾಯನಿಕ ಕ್ರಿಯೆ ಪರಿಸ್ಥಿತಿಗಳು ತ್ವರಿತವಾಗಿ ಬದಲಾವಣೆಯಾಗಬಹುದು. ಇದು ನಿಧಾನವಾಗಿ ಪರಿಸ್ಥಿತಿಯನ್ನು ಗುರುತಿಸುವುದರ ಜೊತೆಗೆ ಬೆಳವಣಿಗೆಯಾಗುವ ಪರಿಸ್ಥಿತಿಗಳ ಬಗ್ಗೆ ಮುನ್ನೆಚರಿಕೆ ನೀಡುವುದಿಲ್ಲ. ರಕ್ತದಲ್ಲಿನ ಗ್ಲುಕೋಸ್ ನ ವಿಶ್ಲೇಷಣೆಯು ಪ್ರಾಯೋಗಿಕವಾಗಿ ಹಾಗು ಮನೆಯಲ್ಲೇ ವಿಶ್ಲೇಷಿಸುವ ರೋಗಿಗಳು ಇಬ್ಬರಿಗೂ ಯೋಗ್ಯವಾಗಿದೆ.

I. ರಾಸಾಯನಿಕ ವಿಧಾನಗಳು
A.ಉತ್ಕರ್ಷಣ-ಅಪಕರ್ಷಣ ಕ್ರಿಯೆ

1. ಕ್ಷಾರೀಯ ತಾಮ್ರದ

ಅಪಕರ್ಷಣ

ಫಾಲಿನ್ ವೂ ವಿಧಾನ ಬ್ಲೂ ಎಂಡ್-ಪ್ರಾಡಕ್ಟ್
ಬೆನೆಡಿಕ್ಟ್ ನ ವಿಧಾನ
  • ಮೂತ್ರದಲ್ಲಿನ ಗುಣಾತ್ಮಕ ಗ್ಲುಕೋಸ್‌ಗೆ ಫಾಲಿನ್‌‌ವೂ ವಿಧಾನದ ಮಾರ್ಪಾಡು
ನೆಲ್ಸನ್ ಸೋಮೊಗ್ಯಿ ವಿಧಾನ ಬ್ಲೂ ಎಂಡ್-ಪ್ರಾಡಕ್ಟ್
ನಿಯೋಕುಪ್ರೋಯಿನೆ ವಿಧಾನ * ಹಳದಿ-ಕಿತ್ತಳೆ ಬಣ್ಣ

ನಿಯೋಕುಪ್ರೋಯಿನೆ

ಷೀಫರ್ ಹಾರ್ಟ್ಮನ್ ಸೋಮೊಗ್ಯಿ
  • ಕುಪ್ರೌಸ್ ಉಪಉತ್ಪನ್ನದ ಜೊತೆಗಿನ ಐಯೋಡಿನ್ ಕ್ರಿಯೆಯ ತತ್ತ್ವವನ್ನು ಬಳಕೆ ಮಾಡಿಕೊಳ್ಳುತ್ತದೆ.
  • ಹೆಚ್ಚುವರಿ I2 ಥಿಯೋಸಲ್ಫೇಟ್ ಜೊತೆಗೆ ಟೈಟ್ರೀಕರಿಸಲಾಗುತ್ತದೆ.
2. ಕ್ಷಾರೀಯ ಫೆರ್ರಿಸೈನೆಡ್ ನ ಅಪಕರ್ಷಣ

ಹೆಗೆಡಾರ್ನ್ ಜೆನ್ಸೇನ್

ಬಣ್ಣರಹಿತ ಅಂತಿಮ ಉತ್ಪತ್ತಿ; ಇತರ ಅಪಕರ್ಷಕ ವಸ್ತುಗಳು ಈ ಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತದೆ.

B. ಸಾಂದ್ರೀಕರಣ

ಆರ್ತ್ಹೋ-ಟೋಲ್ಯುಡೈನ್ ವಿಧಾನ

ಅಂಥ್ರೋನ್ (ಫೆನೋಲ್ಸ್) ವಿಧಾನ
  • ಬಿಸಿಯಾದ ಆಸಿಟಿಕ್ ಆಮ್ಲದಲ್ಲಿ ಹೈಡ್ರಾಕ್ಸಿಮೀಥೈಲ್ ಫರ್ಫ್ಯೂರಲ್ ರೂಪಿಸುತ್ತದೆ
II. ಕಿಣ್ವಕ ವಿಧಾನಗಳು
A. ಗ್ಲುಕೋಸ್ ಆಕ್ಸಿಡೇಸ್
ಸೈಫೆರ್–ಗರ್ಸ್ಟೆನ್ ಫೆಲ್ಡ್ ವಿಧಾನ ಅಪಕರ್ಷಣ ವಸ್ತುಗಳಾದ

BUA, ಬಿಲಿರುಬಿನ್, ಗ್ಲುಟತಿಯೋನ್, ಆಸ್ಕೊರ್ಬಿಕ್ ಆಮ್ಲ ಗಳಿಂದ ಪ್ರತಿಬಂಧಕವಾಗುತ್ತದೆ.

ಟ್ರಿನ್ಡರ್ ವಿಧಾನ bgcolor ="white" colspan="2"
ಕೊಡಕ್ ಎಕ್ತಚೆಮ್ bgcolor="white" colspan="2"
ಗ್ಲುಕೋಮೀಟರ್ bgcolor="white" colspan="2"
  • ಮನೆಯಲ್ಲೇ ತಿಳಿದುಕೊಳ್ಳಬಹುದಾದ ರಕ್ತದಲ್ಲಿನ ಗ್ಲುಕೋಸ್ ವಿಶ್ಲೇಷಣಾ ವಿಧಾನ
  • ಗ್ಲುಕೋಸ್‌ನ ಆಕ್ಸಿಡೇಸ್ ಕಾರಕ ವ್ಯಾಪಿಸಿರುವ ಪಟ್ಟಿ ಬಳಸಲಾಗುತ್ತದೆ.
B. ಹೆಕ್ಸೊಕಿನೆಸ್

align="center" bgcolor="white" colspan="3"
bgcolor="white" colspan="3"
  • ಸಂಯುಕ್ತವಾಗಿ NADP
  • NADPH (ಅಪಕರ್ಷಕ ಉತ್ಪತ್ತಿ) ಯನ್ನು 340 nmನಿಂದ ಮಾಪನ ಮಾಡಲಾಗುತ್ತದೆ
  • G-6PO_4ನ ಕಾರಣದಿಂದ ಗ್ಲುಕೋಸ್ ಆಕ್ಸಿಡೇಸ್ ವಿಧಾನಕ್ಕಿಂತ ಹೆಚ್ಚು ನಿರ್ದಿಷ್ಟವಾಗಿದೆ. ಮಾದರಿಯನ್ನು ಹೆಮೋಲೈಜ್ ಮಾಡಿದಾಗ ಹೊರತುಪಡಿಸಿ ಇದು ಹಸ್ತಕ್ಷೇಪ ಮಾಡುವ ವಸ್ತುಗಳನ್ನು ಪ್ರತಿಬಂಧಿಸುತ್ತದೆ.

ರಕ್ತದಲ್ಲಿನ ಗ್ಲುಕೋಸ್ ಪ್ರಯೋಗಶಾಲೆ ಪರೀಕ್ಷೆಗಳು[ಬದಲಾಯಿಸಿ]

  1. ನಿರಾಹಾರವಿದ್ದಾಗ ರಕ್ತದಲ್ಲಿನ ಸಕ್ಕರೆ(ಅದೆಂದರೆ, ಗ್ಲುಕೋಸ್) ಪರೀಕ್ಷೆ (FBS)
  2. ಮೂತ್ರದಲ್ಲಿರುವ ಗ್ಲುಕೋಸ್‌ನ ಪರೀಕ್ಷೆ
  3. ಭೋಜನವಾದ ಎರಡು ಗಂಟೆಗಳ ನಂತರ ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ (2-h PPBS)
  4. ಬಾಯಿಯ ಮುಖಾಂತರವಾದ ಗ್ಲುಕೊಸ್ ಟಾಲರೆನ್ಸ್ ಪರೀಕ್ಷೆ(OGTT)
  5. ಇಂಟ್ರಾವೆನಸ್ ಗ್ಲುಕೋಸ್ ಟಾಲರನ್ಸ್ ಪರೀಕ್ಷೆ (IVGTT)
  6. ಗ್ಲೈಕೋಸಿಲೆಟೆಡ್ ಹಿಮೊಗ್ಲೋಬಿನ್ (HbA1C)
  7. ರೋಗಿಗಳ ಪರೀಕ್ಷೆ ಮೂಲಕ ಗ್ಲುಕೋಸ್ ಮಟ್ಟದ ಸ್ವಯಂ ವಿಶ್ಲೇಷಣೆ

ಪ್ರಾಯೋಗಿಕ ಪರಸ್ಪರ ಸಂಬಂಧ[ಬದಲಾಯಿಸಿ]

ನಿರಾಹಾರವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು, 8 ಗಂಟೆಗಳ ನಿರಾಹಾರದ ನಂತರ ಮಾಪನ ಮಾಡಲಾಗುತ್ತದೆ. ಇದು ಸಂಪೂರ್ಣ ಗ್ಲುಕೋಸ್ ಸಂತುಲನವನ್ನು ಸೂಚಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಏಕೆಂದರೆ ಹೆಚ್ಚಾಗಿ ಆಹಾರ ಸೇವನೆ ಮುಂತಾದ ಅಡ್ಡಿಯಾಗುವ ಪರಿಸ್ಥಿತಿಗಳನ್ನು ತಪ್ಪಿಸಬಹುದು.ಗ್ಲುಕೋಸ್ ಮಟ್ಟಕ್ಕೆ ಪರಿಣಾಮ ಬೀರುವ ಪರಿಸ್ಥಿತಿಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಪರೀಕ್ಷಾ ಫಲಿತಾಂಶದ ವೈಪರೀತ್ಯಗಳು ಗ್ಲುಕೋಸ್ ನಿಯಂತ್ರಣದ ಬಹುವಿಧದ ನಿಯಂತ್ರಣಾ ವ್ಯವಸ್ಥೆಯ ಸಮಸ್ಯೆಗಳ ಕಾರಣದಿಂದ ಉದ್ಭವಿಸಿದೆ.ಕಾರ್ಬೋಹೈಡ್ರೇಟ್‌ನ ಸವಾಲಿಗೆ ಜೀವರಾಸಾಯನಿಕ ಪ್ರತಿಕ್ರಿಯೆಯನ್ನು, ಭೋಜನವಾದ 2 ಗಂಟೆಗಳ ನಂತರ ಪರೀಕ್ಷಿಸಿದ ಗ್ಲುಕೋಸ್‌ನ ಮಟ್ಟದಿಂದ ಅಥವಾ ಗ್ಲುಕೋಸ್‌ನ ಮೊತ್ತದಿಂದ ಸುಲಭವಾಗಿ ಪ್ರತಿಪಾದಿಸಬಹುದು. ಇದರ ಜೊತೆಗೆ, ಬಾಯಿಯ ಮೂಲಕ ಪ್ರಮಾಣೀಕೃತ ಮೊತ್ತದ ಗ್ಲೂಕೋಸ್ ಸೇವನೆ ನಂತರ ಅನೇಕ ಕಾಲಕ್ರಮದ ಮಾಪನಗಳನ್ನು ಹೊಂದಿರುವ ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆಯು ಮಧುಮೇಹದ ರೋಗಲಕ್ಷಣ ಗುರುತಿಸಲು ಬಳಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗಳಲ್ಲಿ ಇನ್ಸುಲಿನ್/ಗ್ಲುಕೋಸ್ ನಿಯಂತ್ರಣ ವ್ಯವಸ್ಥೆಯು ಸುವರ್ಣ ಮಾನಕವೆಂದು ಭಾವಿಸಲಾಗಿದೆ, ಆದರೆ ಇದು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಹಾಗು ಪುನರಾವರ್ತಿಕ ರಕ್ತದ ಪರೀಕ್ಷೆಗಳನ್ನು ನಡೆಸುವ ಅಗತ್ಯವಿರುವುದರಿಂದ ಇದನ್ನು ನಿರ್ವಹಿಸುವುದು ಕಷ್ಟ. ಇದಕ್ಕೆ ಹೋಲಿಸಿದರೆ, ನಿರಾಹಾರವಿದ್ದಾಗ ರಕ್ತದಲ್ಲಿನ ಗ್ಲುಕೋಸ್ ನ ಮಟ್ಟವು ಒಂದು ಕಳಪೆ ಪರೀಕ್ಷಣಾ ವಿಧಾನವನ್ನು ಹೊಂದಿದೆ,ಉದಾಹರಣೆಗೆ ಕೊನೆಯ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ನ ಅಂಶ ಹಾಗು ಕೊನೆಯ ಭೋಜನ ಹಾಗೂ ಮಾಪನದ ನಡುವೆ ಉಂಟಾದ ಶಕ್ತಿಯ ವೆಚ್ಚ ಮುಂತಾದ ಪ್ರಾಯೋಗಿಕ ಪರಿಸ್ಥಿತಿಗಳಲ್ಲಿರುವ ಅಧಿಕ ವ್ಯತ್ಯಾಸದ ಕಾರಣದಿಂದ ಉಂಟಾಗಿದೆ. ವಾಸ್ತವವಾಗಿ, ಮಧುಮೇಹ ಪೂರ್ವ ಅಥವಾ ಮಧುಮೇಹ ಹೊಂದಿರುವ ಅನೇಕ ಜನರಲ್ಲಿ,ನಿರಾಹಾರವಿದ್ದಾಗ ರಕ್ತದಲ್ಲಿನ ಗ್ಲುಕೋಸ್‌ನ ಮಟ್ಟವು ಮಧುಮೇಹಪೂರ್ವ/ಮಧುಮೇಹ ಪರಿಮಿತಿಗಿಂತ ಕಡಿಮೆಯಾಗುತ್ತದೆ. ಕಡಿಮೆ ಕಾಬ್ರೋಹೈಡ್ರೇಟ್ ವುಳ್ಳ ಆಹಾರವನ್ನು ಸೇವಿಸಿದಾಗ ಹಾಗು ಪರೀಕ್ಷೆಗೆ ಮುಂಚೆ ಅವರ ದೇಹದ ಸಂಬಂಧಿಸಿದ ಎಲ್ಲ ಗ್ಲುಕೋಸ್ ರಕ್ತಪರಿಚಲನೆಯಲ್ಲಿ ಖರ್ಚಾದಾಗ ಈ ರೀತಿಯಾಗುತ್ತದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಆಹಾರದಲ್ಲಿ ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಒಳಗೊಂಡಿವೆ ಹಾಗೂ ಜೀವರಾಸಾಯನಿಕ ಕ್ರಿಯೆ ನಿಯಂತ್ರಣ ವ್ಯವಸ್ಥೆಯಲ್ಲಿ ಭಾಗಿಯಾಗುವುದಿಲ್ಲ; ಸಾಧಾರಣ ಸಕ್ಕರೆಗಳಾದ ಫ್ರುಕ್ಟೋಸ್, ಹಲವು ವಿಧದ ಡಿಸಾಕರೈಡ್‌ಗಳು(ಇದು ಗ್ಲುಕೋಸ್ ನ ಹೊರತಾಗಿ ಸಾಧಾರಣ ಸಕ್ಕರೆಗಳನ್ನು ಒಳಗೊಂಡಿರುತ್ತದೆ ಅಥವಾ ಮಾನವರಿಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ)ಹಾಗು ಅಧಿಕ ಸಂಕೀರ್ಣ ಸಕ್ಕರೆಗಳನ್ನೂ ಸಹ ಮನುಷ್ಯರಿಂದ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಕಾರ್ಬೋಹೈಡ್ರೇಟ್ ಗಳನ್ನು ಗಟ್ ಬ್ಯಾಕ್ಟೀರಿಯಗಳ ಸಹಾಯದಿಂದಲೂ ಸಹ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ; ಹಲವಾರು ನಾರಿನಂಶ ಗಳು(ಕರಗುವ ಅಥವಾ ಕರಗದಿರುವ)ರಾಸಾಯನಿಕ ಕಾರ್ಬೋಹೈಡ್ರೇಟ್‌ಗಳಾಗಿವೆ. ಆಹಾರವು, ಸಾಮಾನ್ಯವಾಗಿ ಗ್ಲುಕೋಸ್ (ಇತರ ಸಕ್ಕರೆಗಳನ್ನು ) ಜೀರ್ಣಿಸಿಕೊಳ್ಳುವ ಅಂಶಗಳನ್ನು ಒಳಗೊಂಡಿದೆ; ಉದಾಹರಣೆಗೆ; ಕೊಬ್ಬು, ಸುಲಭವಾಗಿ ನಿಬಾಯಿಸಬಹುದಾದ ಪಿಷ್ಟದಂತಹ ಆಹಾರ ಪದಾರ್ಥಗಳಿಗೂ ಸಹ ಜೀರ್ಣ ಪ್ರಕ್ರಿಯೆಯನ್ನು ಕುಂಠಿತಗೊಳಿಸುತ್ತದೆ.ರಕ್ತದಲ್ಲಿನ ಗ್ಲುಕೋಸ್‌ನ ಮಾಪನದ ಮೇಲೆ ಆಹಾರವು ಬೀರುವ ಪರಿಣಾಮಗಳನ್ನು ತಡೆಗಟ್ಟುವುದು ವಿಶ್ವಸನೀಯ ಫಲಿತಾಂಶಗಳನ್ನು ನೀಡಬೇಕಾದರೆ ಬಹಳ ಮುಖ್ಯವಾಗಿದೆ, ಏಕೆಂದರೆ ಈ ಪರಿಣಾಮಗಳು ಫಲಿತಾಂಶದ ಮೇಲೆ ಬಹಳಷ್ಟು ವ್ಯತ್ಯಾಸವನ್ನು ಬೀರುತ್ತದೆ. ರಕ್ತದಲ್ಲಿನ ಗ್ಲುಕೋಸ್‌ನ ಮಾಪನದ ವ್ಯವಸ್ಥೆಯಿಂದ ಉಂಟಾಗುವ ದೋಷದ ಪ್ರಮಾಣಗಳು, ಪ್ರಯೋಗ ಶಾಲೆಗಳು ಹಾಗು ಅವುಗಳು ಬಳಕೆ ಮಾಡಿಕೊಳ್ಳುವ ವಿಧಾನವನ್ನು ಆಧರಿಸಿ ವ್ಯತ್ಯಾಸವನ್ನು ಹೊಂದಿರುತ್ತವೆ. ಪರೀಕ್ಷಾ ಪಟ್ಟಿಯಲ್ಲಿ ಬದಲಾಗುವ ಬಣ್ಣಗಳಿಂದ(ಬಹುಶಃ ಗಾಳಿಯಿಂದ ಅಥವಾ ಬೆರಳಿನಿಂದ ಕಲುಷಿತಗೊಳ್ಳಬಹುದು) ಅಥವಾ ಬೆಳಕಿನ ಮೂಲದೊಂದಿಗೆ ಅಥವಾ ಬೆಳಕಿನ ಸಂವೇದಕದೊಂದಿಗೆ ಮಧ್ಯಪ್ರವೇಶದೊಂದಿಗೆ (ಉದಾಹರಣೆಗೆ, ಬಣ್ಣದ ಛಾಯೆಯ ಮಲಿನ) ಕಲರಿಮೆಟ್ರಿ ವಿಧಾನವು ಪೂರ್ವಗ್ರಹಪೀಡಿತವಾಗಿದೆ. ವಿದ್ಯುತ್ ವಿಧಾನವು ಈ ರೀತಿಯಾದ ದೋಷಗಳಿಗೆ ಕಡಿಮೆ ಆಸ್ಪದ ನೀಡುತ್ತದೆ ಆದರೆ ಇತರ ವಿಧಾನಗಳಿಗಲ್ಲ. ಮನೆ ಬಳಕೆಯಲ್ಲಿ, ನಿಖರತೆಗಿಂತ ಹೆಚ್ಚಾಗಿ ಶೈಲಿಯೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಆದ್ದರಿಂದ ಮಾಪಕ/ಪರೀಕ್ಷಾ ಪಟ್ಟಿಯ ವ್ಯವಸ್ಥೆಯಲ್ಲಿ ಸತತ 10%ನಷ್ಟು ತಪ್ಪಾಗಿದ್ದರೆ,ಬದಲಾವಣೆಗಳನ್ನು(ಉದಾಹರಣೆಗೆ, ದೈಹಿಕ ವ್ಯಾಯಾಮ ಅಥವಾ ಚಿಕಿತ್ಸಾ ಹೊಂದಾಣಿಕೆಗಳು), ಸೂಕ್ತವಾಗಿ ಗುರುತಿಸಿದರೆ,ಕಡಿಮೆ ಪರಿಣಾಮ ಬೀರುತ್ತದೆ. USನಲ್ಲಿ, ಮನೆಯಲ್ಲೇ ಬಳಸುವ ರಕ್ತಪರೀಕ್ಷೆ ಮಾಪಕಗಳನ್ನು ಮಾರಾಟ ಮಾಡುವುದಕ್ಕೆ ಮುಂಚೆ ಫೆಡೆರಲ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಿಂದ ಅನುಮತಿ ಪಡೆಯಬೇಕಾಗುತ್ತದೆ. ಅಂತಿಮವಾಗಿ, ಆಹಾರದ ಸ್ವೀಕರಿಸುವ ಜೊತೆಗೆ ಹಲವಾರು ಅಂಶಗಳು ರಕ್ತದಲ್ಲಿನ ಗ್ಲುಕೋಸ್ ಮಟ್ಟಕ್ಕೆ ಪ್ರಭಾವವನ್ನು ಬೀರುತ್ತದೆ. ಉದಾಹರಣೆಗೆ, ಸೋಂಕು, ರಕ್ತದಲ್ಲಿನ ಗ್ಲುಕೋಸ್ ಮಟ್ಟಕ್ಕೆ ಬದಲಾವಣೆಯನ್ನು ತರುತ್ತದೆ. ಜೊತೆಗೆ ದೈಹಿಕ ಹಾಗು ಮಾನಸಿಕ ಒತ್ತಡವು ಇದರಲ್ಲಿ ಸೇರುತ್ತದೆ. ದೈಹಿಕ ವ್ಯಾಯಾಮವು, ಆಹಾರವನ್ನು ಸ್ವೀಕರಿಸಿದ ನಂತರ ಸುದೀರ್ಘ ಅಥವಾ ದೀರ್ಘವಾಗಿದ್ದರೆ,ಅದು ಸಹ ಪರಿಣಾಮವನ್ನು ಬೀರುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ, ರಕ್ತದಲ್ಲಿನ ಗ್ಲುಕೋಸ್‌ನ ನಿರ್ವಹಣೆಯು ಸರಿಸುಮಾರು ಸ್ಥಿರವಾದ ಮಟ್ಟದಲ್ಲಿದ್ದರೆ ಅದೇನೇ ಇದ್ದರೂ ಇದು ಸಂಪೂರ್ಣ ಪರಿಣಾಮಕಾರಿಯಾಗಿರುತ್ತದೆ.

ಗ್ಲುಕೋಸ್ ನ ಮಟ್ಟದಲ್ಲಿನ ವೈಪರೀತ್ಯಕ್ಕೆ ಕಾರಣಗಳು
ನಿರಂತರವಾದ ಹೈಪರ್ಗ್ಲೈಸೆಮಿಯ ತಾತ್ಕಾಲಿಕ ಹೈಪರ್ಗ್ಲೈಸೆಮಿಯ ನಿರಂತರವಾದ ಹೈಪೋಗ್ಲೈಸೆಮಿಯ ತಾತ್ಕಾಲಿಕ ಹೈಪೋಗ್ಲೈಸೆಮಿಯ
ಉಲ್ಲೇಖಿತ ಮಟ್ಟ, FBG: 70–110 mg/dl
ಡಯಾಬಿಟೀಸ್ ಮೆಲ್ಲಿಟಸ್ ಫಿಯೋಕ್ರೋಮೋಸೈಟೋಮ ಇನ್ಸುಲಿನೋಮ

ತೀವ್ರವಾಗಿ ಮದ್ಯಪಾನದ ಸೇವನೆ


ಅಡ್ರಿನಲ್ ಕಾರ್ಟಿಕಲ್ ಹೈಪರ್ ಆಕ್ಟಿವಿಟಿ ಕುಶಿಂಗ್'ಸ್ ಸಿಂಡ್ರೋಮ್

ತೀವ್ರತರವಾದ ಪಿತ್ತಜನಕಾಂಗದ ಕಾಯಿಲೆ

ಅಡ್ರೆನಲ್ ಕಾರ್ಟಿಕಲ್ ಕೊರತೆ ಅಡ್ಡಿಸೊನ್'ಸ್ ಕಾಯಿಲೆ ಮಾದಕದ್ರವ್ಯಗಳು: ಸಾಲಿಸಿಲೆಟ್ಸ್ಕ್ಷಯವಿರೋಧಿ ಕಾರಕಗಳು
ಹೈಪರ್ ಥೈರಾಯ್ಡಿಸಂ ತೀವ್ರತರವಾದ ಒತ್ತಡದ ಪರಿಣಾಮ ಹೈಪೋ ಪಿಟ್ಯೂಟರಿಸಂ

ತೀವ್ರತರವಾದ ಪಿತ್ತಜನಕಾಂಗದ ಕಾಯಿಲೆ

ಅಕ್ರೊಮೆಗಾಲಿ ಆಘಾತ ಗಲಕ್ಟೋಸೆಮಿಯ ತೀವ್ರತರವಾದ ಗ್ಲೈಕೊಜನ್ ಸ್ಟೋರೇಜ್ ಕಾಯಿಲೆಗಳು
ಬೊಜ್ಜು ಸೆಟೆತಗಳು

ಊತಗಳಿಂದ ಅಪಸ್ಥಾನೀಯ ಇನ್ಸುಲಿನ್‌ನ ಉತ್ಪತ್ತಿ

ಅನುವಂಶೀಯ ಫ್ರಕ್ಟೋಸ್ ಇನ್‌ಟಾಲರೆನ್ಸ್

ಪದದ ವ್ಯುತ್ಪತ್ತಿ ಹಾಗು ಬಳಕೆ[ಬದಲಾಯಿಸಿ]

'ರಕ್ತದಲ್ಲಿನ ಸಕ್ಕರೆ' ಎಂಬ ಪದವು ಆಡುಮಾತಿನಿಂದ ಹುಟ್ಟಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಶರೀರ ವಿಜ್ಞಾನಕ್ಕೆ ಸಂಬಂಧಿಸಿದಂತೆ, ಈ ಪದವು ಅಪಪ್ರಯೋಗವಾಗಿದೆ. ಏಕೆಂದರೆ ಇದು ಗ್ಲುಕೋಸ್ ನ್ನು ಸೂಚಿಸುತ್ತದೆ. ಜೊತೆಗೆ ಗ್ಲುಕೋಸ್ ಅಲ್ಲದೆ ಇತರ ಸಕ್ಕರೆ ಗಳೂ ಸಹ ಉಪಸ್ಥಿತವಿದೆ. ಆಹಾರವು ಹಲವಾರು ವಿವಿಧ ಮಾದರಿಗಳನ್ನು ಒಳಗೊಂಡಿದೆ (ಉದಾಹರಣೆಗೆ, ಫ್ರುಕ್ಟೋಸ್ (ಹೆಚ್ಚಾಗಿ ಹಣ್ಣುಗಳು/ಟೇಬಲ್ ಶುಗರ್ ಅಂಗಡಿಗಳಲ್ಲಿ ಸಕ್ಕರೆ ಬದಲಿಗೆ ಬಳಸುವ ವಸ್ತು). ಗಲಾಕ್ಟೋಸ್ (ಹಾಲು ಹಾಗು ಹಾಲಿನ ಉತ್ಪನ್ನಗಳು), ಹಾಗು ಹಲವಾರು ಆಹಾರ ಸಂಯೋಜನೀಯಗಳಾದ ಸೋರ್ಬಿಟೋಲ್, ಕ್ಸೈಲೋಸ್, ಮಾಲ್ಟೋಸ್,...). ಜೀವರಾಸಾಯನಿಕ ಕ್ರಿಯೆ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದಂತೆ ಇತರೆಸಕ್ಕರೆಗಳು ಹೆಚ್ಚು ರಾಸಾಯನಿಕ ಪಟುತ್ವವಿಲ್ಲದ ಕಾರಣ (ಉದಾಹರಣೆಗೆ, ಇನ್ಸುಲಿನ್ ಸ್ರವಿಸುವಿಕೆಯಿಂದ ನಿಯಂತ್ರಿಸಲ್ಪಡುತ್ತವೆ). ಜೀವರಾಸಾಯನಿಕ ಕ್ರಿಯೆ ನಿಯಂತ್ರಣದಲ್ಲಿ ಗ್ಲುಕೋಸ್ ಒಂದು ಪ್ರಬಲ ನಿಯಂತ್ರಣಾ ಸಂಕೇತವಾಗಿರುವ ಕಾರಣ ಪದವು ಚಲಾವಣೆಯನ್ನು ಪಡೆದುಕೊಳ್ಳುವುದರ ಜೊತೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಜನಸಾಮಾನ್ಯರಲ್ಲಿ ಸಮಾನವಾಗಿ ಬಳಕೆಗೆ ಬಂದಿದೆ. ಮೇಲೆ ನೀಡಲಾಗಿರುವ ಪಟ್ಟಿಯು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಹೆಚ್ಚಿನ ತಾಂತ್ರಿಕ ಹಾಗು ಅದರ ಸಮೀಪದ ಪದಗಳನ್ನು ಸೂಚಿಸುತ್ತದೆ.

ಹಕ್ಕಿಗಳು ಹಾಗು ಸರೀಸೃಪಗಳಲ್ಲಿ ರಕ್ತದಲ್ಲಿನ ಗ್ಲುಕೋಸ್[ಬದಲಾಯಿಸಿ]

ಹಕ್ಕಿಗಳು ಹಾಗು ಸರೀಸೃಪ ಗಳಲ್ಲಿ ಸಕ್ಕರೆಯ ಪ್ರಕ್ರಿಯೆಯು ವಿವಿಧ ರೀತಿಯಲ್ಲಿ ನಡೆಯುತ್ತದೆ. ಸಸ್ತನಿಗಳಿಗಿಂತ ಹಕ್ಕಿಗಳಲ್ಲಿ ಸ್ವಲ್ಪ ಹೆಚ್ಚಿನ ಮಟ್ಟಿಗೆ ಮೇದೋಜೀರಕ ಗ್ರಂಥಿಯ ಬೆಳವಣಿಗೆಯಾಗಿರುತ್ತದೆ. ಇದು ಅವುಗಳ ಲಾಲಾರಸ ಹಾಗು ಮೆಲುಕು ಹಾಕುವ ಕೊರತೆಗೆ ಆಂಶಿಕ ಪರಿಹಾರವಾಗಿದೆ. ಇದು ಕಾರ್ಬೋಹೈಡ್ರೇಟ್, ಕೊಬ್ಬು ಹಾಗು ಪ್ರೋಟೀನ್ ಗಳನ್ನು ಪಚನಗೊಳಿಸುವ ಕಿಣ್ವಗಳನ್ನು ಉತ್ಪಾದಿಸುತ್ತದೆ. ಇದೆಲ್ಲವೂ ಸಣ್ಣ ಕರುಳಿನಲ್ಲಿ ಸ್ರವಿಸುತ್ತದೆ. ಪಿತ್ತಜನಕಾಂಗವು ಎರಡು ವಿಶಿಷ್ಟ ಹಾಲೆಗಳನ್ನು ಒಳಗೊಂಡಿದೆ. ಇದರಲ್ಲಿ ಒಂದೊಂದು ಅದರ ಸಣ್ಣ ಕರುಳಿನ ನಾಳಕ್ಕೆ ಹೋಗುತ್ತದೆ. ಸಸ್ತನಿಗಳಲ್ಲಿರುವಂತೆ, ಪಿತ್ತಜನಕಾಂಗವು ಪಿತ್ತರಸದ ಸ್ಥಾನವಾಗಿರುತ್ತದೆ. ಆದಾಗ್ಯೂ ಇದು ಹಕ್ಕಿಗಳಲ್ಲಿ ಆಮ್ಲೀಯವಾಗಿರುತ್ತದೆ, ಸಸ್ತನಿಗಳಲ್ಲಿರುವಂತೆ ಕ್ಷಾರೀಯವಾಗಿರುವುದಿಲ್ಲ. ಹಲವು ಹಕ್ಕಿಗಳಲ್ಲಿ ಪಿತ್ತರಸವನ್ನು ತುಂಬಿಕೊಳ್ಳಲು ಪಿತ್ತಕೋಶವಿರುವುದಿಲ್ಲ, ಇದು ಮೇದೋಜೀರಕ ನಾಳಗಳಲ್ಲಿ ನೇರವಾಗಿ ಸ್ರವಿಸುತ್ತದೆ.

ಆಕರಗಳು[ಬದಲಾಯಿಸಿ]

  1. ಟೈಪ್ 2 ಡಯಾಬಿಟಿಸ್ - ಯುವರ್ ಕೊಶ್ಚನ್ಸ್ ಆನ್ಸರ್ಡ್ , ಬೈ ರೋಸ್ಮೆರಿ ವಾಕೆರ್ & ಜಿಲ್ ರೋಡ್ಜರ್ಸ್, ISBN 1-74033-550-3.
  2. "ಡಯಾಬಿಟಿಸ್ ಆಸ್ - ಬ್ಲಡ್ ಗ್ಲುಕೋಸ್ ಮೆಷರ್ಮೆಂಟ್ ಯುನಿಟ್ಸ್ - ಅಬ್ಬೋಟ್ ಡಯಾಬಿಟಿಸ್ ಕೇರ್". Archived from the original on 2011-07-06. Retrieved 2010-05-21.
  3. ವಾಟ್ ಆರ್ mg/dl ಅಂಡ್ mmol/l?ಹೌ ಟು ಕನ್ವರ್ಟ್? ಗ್ಲುಕೋಸ್? ಕೊಲೆಸ್ಟರಾಲ್?
  4. ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಶನ್ ಜನವರಿ 2006 ಡಯಾಬಿಟಿಸ್ ಕೇರ್. "ಸ್ಟ್ಯಾಂಡರ್ಡ್ಸ್ ಆಫ್ ಮೆಡಿಕಲ್ ಕೇರ್-ಟೇಬಲ್ 6 ಅಂಡ್ ಟೇಬಲ್ 7, ಕೋರಿಲೇಶನ್ ಬಿಟ್ವೀನ್ A1C ಲೆವೆಲ್ ಅಂಡ್ ಮೀನ್ ಪ್ಲಾಸ್ಮ ಗ್ಲುಕೋಸ್ ಲೆವೆಲ್ಸ್ ಆನ್ ಮಲ್ಟಿಪಲ್ ಟೆಸ್ಟಿಂಗ್ ಓವರ್ 2-3 ಮನ್ತ್ಸ್." ಸಂಪುಟ.29 ಅನುಬಂಧ 1 ಪುಟಗಳು 51-580.

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

  • ಜಾನ್ ಬರ್ನಾರ್ಡ್ ಹೆನ್ರಿ, M.D.: ಕ್ಲಿನಿಕಲ್ ಡೈಅಗ್ನೋಸಿಸ್ ಅಂಡ್ ಮ್ಯಾನೇಜ್ಮೆಂಟ್ ಬೈ ಲ್ಯಾಬೋರೇಟರಿ ಮೆತಡ್ಸ್ 20ನೇ ಆವೃತ್ತಿ, ಸಾಂಡರ್ಸ್, ಫಿಲಡೆಲ್ಫಿಯ, PA, 2001.
  • ರೋನಾಲ್ಡ್ A. ಸಾಚೆರ್ ಹಾಗು ರಿಚರ್ಡ್ A. ಮ್ಯಾಕ್ಪ್ಹೆರ್ಸೋನ್: ವಿಡ್ಮನ್'ಸ್ ಕ್ಲಿನಿಕಲ್ ಇಂಟರ್ಪ್ರಿಟೇಷನ್ ಆಫ್ ಲ್ಯಾಬೋರೇಟರಿ ಟೆಸ್ಟ್ಸ್ 11ನೇ ಆವೃತ್ತಿ, F.A. ಡೇವಿಸ್ ಕಂಪನಿ, 2001 * . Archived 2011-02-24 ವೇಬ್ಯಾಕ್ ಮೆಷಿನ್ ನಲ್ಲಿ.


ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Human homeostasis

  1. REDIRECT Template:Clinical biochemistry blood tests