ಜಾನಿ ಲಿವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಜಾನಿ ಲಿವರ್' (ಜನನ : ೧೪, ಆಗಸ್ಟ್, ೧೯೫೬)'ಜಾನ್ ರಾವ್ ಜಾನುಮಲ' ಹಿಂದಿ ಚಿತ್ರರಂಗದಲ್ಲಿ,ಜಾನಿಲಿವರ್ ಯೆಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದಾರೆ.

Johnny Lever
Johnny Lever in 2011
ಪೂರ್ಣ ಹೆಸರುJohn Prakasa Rao Janumala
ಜನನ (1957-08-14) ೧೪ ಆಗಸ್ಟ್ ೧೯೫೭ (ವಯಸ್ಸು ೬೬)
Kanigiri, ಆಂಧ್ರ ಪ್ರದೇಶ, India[೧]
ರಾಷ್ಟ್ರೀಯತೆIndian
ಸಂಗಾತಿSujata Janumala

'ಜಾನಿ ಲಿವರ್' ಜನಿಸಿದ್ದು ಆಂಧ್ರಪ್ರದೇಶದಲ್ಲಿ[ಬದಲಾಯಿಸಿ]

ಆಂದ್ರಪ್ರದೇಶದ 'ಪ್ರಕಾಸಮ್ ಜಿಲ್ಲೆ ಯ,ಉಸಲ್ಲಪಲ್ಲೆ ಯೆಂಬ ಗ್ರಾಮದಲ್ಲಿ, ಜನಿಸಿದರು. ತಂದೆ, ಪ್ರಕಾಶ್ ರಾವ್ ಜನುಮಲ ಮತ್ತು ತಾಯಿ, ಕರುಣಮ್ಮ ಜನುಮಲ. ಒಬ್ಬ ಒಳ್ಳೆಯ ಹಾಸ್ಯನಟ, ಟೆಲಿವಿಶನ್ ನಲ್ಲಿ ಸ್ಟಾಂಡ್ ಅಪ್ ಕಮೆಡಿಯನ್ ಎಂಬ ಹೆಸರುಮಾಡಿದ್ದಾರೆ. ಬೊಂಬಾಯಿನಲ್ಲಿ ಧಾರಾವಿಯಲ್ಲಿ ಬೆಳೆದರು. ಆಂಧ್ರ ತೆಲುಗು ಶಾಲೆಯಲ್ಲಿ ೭ ನೆಯ ತರಗತಿಯವರೆಗೆ ಕಲಿತರು. ಮುಂದೆ ಓದಲು ಹಣದ ಅಭಾವದಿಂದಾಗಿ ಮುಂದುವರೆಸಲಾಗಲಿಲ್ಲ. ಅಂತಹ ಸಮಯದಲ್ಲಿ ಜಾನಿಲಿವರ್ ಬೊಂಬಾಯಿನ ರಸ್ತೆಗಳಲ್ಲಿ ಪೆನ್ ಗಳ ವ್ಯಾಪಾರ ಮಾಡುತ್ತಿದ್ದರು. ಬಾಲಿವುಡ್ ನಟರ ಮಾತಿನ ಮೋಡಿಯಲ್ಲಿ. ಹಾಡಿಗೆ ಸರಿಯಾಗಿ ಕುಣಿಯುತ್ತಿದ್ದರು. ಮಿಮಿಕ್ರಿ ಅವರಿಗೆ ಕರಗತವಾಯಿತು. ಕಿಶೋರ್ ಕುಮಾರ್, ಮೆಹ್ಮೂದ್ ಮತ್ತು ದಿನೇಶ್ ಹಿಂಗೂ ರವರ ಹಾಸ್ಯಪ್ರಧಾನ ನಟನೆಗಳಿಂದ ಪ್ರಭಾವಿತರಾದರು. ಮಿಮಿಕ್ರಿ ಕಲಾವಿದನಾಗಲು ಮನಸ್ಸು ಮಾಡಿದರು. ಪ್ರತಾಪ್ ಜಾನಿ, ರಾಮ್ ಕುಮಾರ್ ರವರ ಸಹಕಾರ ಕೋರಿದರು. ತಂದೆಯವರ ಜೊತೆಗೆ ಹಿಂದೂಸ್ತಾನ್ ಲಿವರ್ ಕಂಪೆನಿಯಲ್ಲಿ ಕೆಲಸಮಾಡಿದರು. ಎಲ್ವಿಸ್ ಪ್ರಸ್ಲಿ ಯವರ ನಕಲು ಮಾಡಿತೋರಿಸಿ ಹೆಸರುಮಾಡಿದರು. ಜಾನಿ ಲಿವರ್ ರವರ ಹೆಂಡತಿಯ ಹೆಸರು ಸುಜಾತ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ; ಒಬ್ಬ ಮಗಜಮ್ಮಿ,ಮಗಳು ಜಸ್ಸಿ

'ಜಾನಿ ಲಿವರ್' ಹೆಸರು ಬರಲು ಕಾರಣ[ಬದಲಾಯಿಸಿ]

ಒಮ್ಮೆ ಕಾರ್ಖಾನೆಯಲ್ಲಿ ಒಂದು ಪ್ರದರ್ಶನಮಾಡಿ ಅವರ ಯೂನಿಯನ್ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳ ನಕಲು ಮಾಡಿತೋರಿಸಿದದರು. ಎಲ್ಲಾ ಯೂನಿಯನ್ ಲೀಡರ ಗಳು ಪ್ರಭಾವಿತರಾಗಿ ಅವರಿಗೆ ಜಾನಿಲಿವರ್ ಎಂದು ನಾಮಕರಣ ಮಾಡಿದರು. ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಕೊಟ್ಟರು. ಕಲ್ಯಾನ್ ಜಿ ಅನಂದ್ ಜಿಯವರ ಜೊತೆ ಸೇರಿ ಹಲವಾರು ಶೋಗಳನ್ನು ಕೊಟ್ಟರು. ವಿಶ್ವದಲ್ಲೆಲ್ಲಾ ಸುತ್ತಾಡಿದರು. ೧೯೮೨ ನಲ್ಲಿ, ಅಮಿತಾಬ್ ಬಚ್ಚನ್ ರವರ ಜೊತೆಯಲ್ಲಿ ಹೋಗಿ ನಡೆಸಿಕೊಟ್ಟ ಕಾರ್ಯಕ್ರಮಗಳು ಜಾನಿ ಲಿವರ್ ರವರ ಜೀವನದಲ್ಲಿ ಒಂದು ತಿರುವನ್ನೇ ಕೊಟ್ಟಿತು. ಜಾನಿ ಲಿವರ್, ಕಲ್ಯಾಣ್ ಜಿ ಆನಂದ್ ಜಿಯವರ ಬಗ್ಗೆ, ಹೇಳುತ್ತಿದ್ದ ಮಾತುಗಳು ಹೀಗಿದ್ದವು. 'ಕಲ್ಯಾನ್ ಜಿ ಆನಂದ್ ಜೀ ಒಳ್ಳೆಯ ಅನುಭವ ಪಡೆದವರು. ಒಳ್ಳೆಯ ತತ್ವಜ್ಞಾನಿಗಳು, ಹಾಗೂ ಹಾಸ್ಯಪ್ರಿಯರು' ಸುನಿಲ್ ದತ್ ಒಮ್ಮೆ ಭೆಟ್ಟಿಯಾದಾಗ ಜಾನಿಲಿವರ್ ನ್ನು ಗುರುತಿಸಿದರು. ದರ್ದ್ ಕ ರಿಶ್ತ ಚಿತ್ರದಲ್ಲಿ ಒಂದು ಪಾತ್ರಕೊಟ್ಟರು. ೧೯೮೦ ರಲ್ಲಿ ತಮ್ಮದೆ ಆದ ಧ್ವನಿ ಸುರುಳಿಯನ್ನು ತಯಾರಿಸಿ, ವಿತರಿಸಿದರು. ಮಿಮಿಕ್ರಿ ಕಾಮೆಡಿ, ’ಹಸೀ ಕೆ ಹಂಗಾಮೆ', ದೇಶವಿದೇಶಗಳಲ್ಲಿ ಮನೆಯಮಾತಾಯಿತು. ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ತಂದಿತು.

೧೯೮೯ ರ ಸಮಯದ ಸಹಾಯಾರ್ಥ ಮಾಡಿದ ಶೋ-೮೬[ಬದಲಾಯಿಸಿ]

೧೯೮೬ ರಲ್ಲಿ ಒಂದು ಸಹಾಯಾರ್ಥ ಶೋಹೋಪ್-೮೬ ಪ್ರಾರಂಭಿಸಿದರು. ಬಾಲಿವುಡ್ ಚಿತ್ರರಂಗದೆದಿರು.ಪ್ರೇಕ್ಷಕರು ಅತಿ ಮೆಚ್ಚುಗೆಯನ್ನು ಸೂಚಿಸಿದರು. ಗುಲ್ ಆನಂದ್, ತಾವು ತಯಾರಿಸಿದ, 'ಜಲ್ವ' ಚಿತ್ರದಲ್ಲಿ ಒಂದು ರೋಲ್ ಕೊಟ್ಟರು. ನಸಿರ್ ಉದ್ದೀನ್ ಶ ಜೊತೆ, ಇಂದು ಜಾನಿಯವರು ಒಬ್ಬ ಸಮರ್ಥ ಸ್ಟಾಂಡ್ ಅಪ್ ಕಾಮೆಡಿ ಶೋನ ಸರ್ದಾರರಾಗಿ ಹೊರಹೊಮ್ಮಿದ್ದಾರೆ.

'ದರ್ದ್ ಕ ರಿಶ್ತಾ ' ಪ್ರಥಮ ಹಿಂದಿ ಚಿತ್ರ[ಬದಲಾಯಿಸಿ]

ಸುನಿಲ್ ದತ್ ರವರ ಕೃಪೆಯಿಂದ, ಅಲ್ಲಿಂದ ಮುಂದೆ ಅವರು ೩೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂದೆ 'ಜಲ್ವಾ' ದಲ್ಲಿ,ನಾಸೀರುದ್ಧೀನ್ ಷಾ ಕೂಡ ನಟಿಸಿದ್ದರು. ಯಶಸ್ಸು ಕಣ್ತೆರೆದು ನೋಡಿದ್ದು, 'ಬಾಝಿಗರ್ ಚಿತ್ರದಲ್ಲಿ. ಪ್ರತಿ ಚಿತ್ರದಲ್ಲೂ ಇದ್ದೇ ಇರುತ್ತಿದ್ದರು. ಚಲನಚಿತ್ರಗಳಲ್ಲಿ ವೇಳೆ ದೊರೆಯದಿದ್ದರೂ ಟೆಲಿವಿಶನ್ ಶೋಗಳನ್ನು ನಿಲ್ಲಿಸುತ್ತಿರಲಿಲ್ಲ. ೧೯೯೯ ರ ಮೈಖೇಲ್ ಜಾನ್ಸನ್ ರವರ ಜೊತೆಯಲ್ಲಿ ,ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಿತಿಯಲ್ಲಿದ್ದರು. ಈಗ ಜಾನಿಲಿವರ್ ರವರು, CINTAA (CINE AND T.V. ARTIST ASSOCIATION) ಸಮಿತಿಯ ಅಧ್ಯಕ್ಷರಾಗಿದ್ದಾರೆ.

'ಸ್ಟಾರ್ ಪ್ಲಸ್' ಟೆಲಿವಶನ್ ವಾಹಿನಿಯಲ್ಲಿ ಪ್ರಸಿದ್ಧರಾದರು[ಬದಲಾಯಿಸಿ]

ಪ್ರಸ್ತುತ ಪಡಿಸುತ್ತದೆ. 'CINTAA' Sports star ka jalva'ಪ್ರತಿ ರವಿವಾರ, ’ಸ್ಟಾರ್ ಪ್ಲಸ್’ ನಲ್ಲಿ, ರವರ ತಮ್ಮ, ’ಜಿಮ್ಮಿ ಮೋಸೆಸ್’, ಕೂಡ ಕಾಮೆಡಿ, ಮತ್ತು ಮಿಮಿಕ್ರಿಯನ್ನು ಬಲ್ಲವರು.

'ಜಾನಿ ಆಲಾರೆ,' ಜಾನಿಲಿವರ್ ರವರ ಸ್ವಂತ ಕಾಮೆಡಿ ಕಾರ್ಯಕ್ರಮ[ಬದಲಾಯಿಸಿ]

ಝೀ ಟೆಲಿವಿಶನ್ ನಲ್ಲಿ ತಮ್ಮ ಸ್ವಂತ ಜಾನಿ ಆಲಾರೆ ಯೆಂಬ ಪ್ರಸ್ತುತಪಡಿಸಿದ್ಸರು. ನಟಿಸಿದ್ದರು. ೨೦೦೭ ರಲ್ಲಿ ತೀರ್ಪುಗಾರರಾಗಿ, ’ಸ್ಟಾಂಡ್ ಅಪ್ ರಿಯಾಲಿಟಿ ಶೊ ’ಕಾಮೆಡಿ ಸರ್ಕಸ್, ಬಾಝಿಗರ್ ಚಿತ್ರದಲ್ಲಿ ’ಬಾಬುಲ್ ಲಾಲ್’ ಪಾತ್ರ ತುಂಬಾ ಹಿಡಿಸಿತು. ಅಬ್ಬಾಸ್ ಮಸ್ತಾನ್ ದಿಗ್ದರ್ಶನ. ’ಚೋಟಾ ಛತ್ರಿ, ಅಸ್ಲಮ್ ಭಾಯಿ, ಜುದಾಯಿ, ಹೆಸರುವಾಸಿಯಾಗಿವೆ. ಅಬ್ಬ ಡಬ್ಬ ಜಬ್ಬ ಚಿತ್ರದಲ್ಲಿ ಸಂಭಾಷಣೆಗಾಗಿ, ಮೊಟ್ಟಮೊದಲ ತಮಿಳು ಚಿತ್ರದಲ್ಲಿ ಅನ್ಬಿರಕ್ಕು ಅಲವಿಲ್ಲೈ ಚಿತ್ರದಲ್ಲಿ, ೨೦೧೦ ರಲ್ಲಿ ರಿಲೀಸ್ ಆಗುತ್ತದೆ. (SIMPL) (Shepherd India Media Pvt. Ltd.), ನಿರ್ಮಾಪಕರು. ತೆಲುಗು ಚಿತ್ರ, ವಿಶೇಷ ಅತಿಥಿಪಾತ್ರದಲ್ಲಿ, ’ಕ್ರಿಮಿನಲ್’ ಮಹೇಶ್ ಭಟ್ ನಿರ್ದೇಶನ.(Feature Film Criminal directed by Mahesh Bhatt , the famous bollywood director)

  1. "Johnny Lever-IMDb". www.imdb.com. Retrieved 27 ಅಕ್ಟೋಬರ್ 2015.