ಬಾಲ್ಯ ವಿವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Child marriage in India. In 1900, Rana Prathap Kumari age 12 married Krishnaraja Wadiyar IV age 16. Two years later, he was recognized as the King of Mysore under British India.
Christian child marriage in the Middle Ages
Poster against child and forced marriage
Birth rates per 1,000 women aged 15-19 years, worldwide.

ಬಾಲ್ಯ ವಿವಾಹ ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ ೧೮ ಹಾಗೂ ಹುಡುಗರಿಗೆ ೨೧ ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.[೧][೨]

ಇತಿವೃತ್ತ[ಬದಲಾಯಿಸಿ]

  • ಕೆಲವು ಸಮಾಜಗಳಲ್ಲಿ ರೂಢಿಯಲ್ಲಿರುವ ಬಾಲ್ಯ ವಿವಾಹ ಸಾಧಾರಣವಾಗಿ ಎರಡು ಪ್ರತ್ಯೇಕ ಸಾಮಾಜಿಕ ತತ್ವಗಳನ್ನು ಉಲ್ಲೇಖಿಸುತ್ತದೆ. ಮೊದಲ ಮತ್ತು ವ್ಯಾಪಕವಾಗಿ ಹರಡಿರುವ ರೂಢಿ ಅಂದರೆ ಅದು ಒಬ್ಬ ವಯಸ್ಕ ಪುರುಷ ಚಿಕ್ಕ ಹುಡುಗಿಯನ್ನು (ಸಾಮಾನ್ಯವಾಗಿ ಹದಿನೈದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹುಡುಗಿ ಎನ್ನಲಾಗಿದೆ) ಮದುವೆಯಾಗುವುದು. ರೂಢಿಯಲ್ಲಿ, ಯಾವಾಗಲೂ ಚಿಕ್ಕ ಹುಡುಗಿ ಒಂದು ಗಂಡಸನ್ನು ಮದುವೆಯಾಗುವುದಾಗಿದೆ.
  • ಎರಡನೆಯ ರೂಢಿಯೆಂದರೆ ವ್ಯವಸ್ಥಿತ ಮದುವೆ, ಇದರಲ್ಲಿ ಎರಡೂ ಮಕ್ಕಳ ತಂದೆ-ತಾಯಿಗಳು ಮುಂದೆಂದೋ ಭವಿಷ್ಯದಲ್ಲಿ ನಡೆವ ಮದುವೆಯನ್ನು ಯೋಜಿಸುವುದು. ಈ ರೂಢಿಯಲ್ಲಿ, ಮದುವೆಗೆ ನಿಶ್ಚಿತಾರ್ಥವಾದ ಹುಡುಗ ಹುಡುಗಿಯನ್ನು ಮದುವೆ ಸಮಾರಂಭದವರೆಗೂ ಒಬ್ಬರಿಗೊಬ್ಬರು ಭೇಟಿ ಆಗುವ ಹಾಗಿಲ್ಲ, ಮದುವೆ ವಯಸ್ಸಿಗೆ ಅವರಿಬ್ಬರೂ ಮುಟ್ಟಿದ ಮೇಲೆ ಆಗ ಮದುವೆ ಸಮಾರಂಭ ನಡೆಯುತ್ತದೆ.
  • ಮಹಿಳಾ ಹಕ್ಕುಗಳು ಅಥವಾ ಮಕ್ಕಳ ಹಕ್ಕುಗಳ ಹೋರಾಟದಂತೆ ಮಾನವ ಹಕ್ಕುಗಳ ಹೋರಾಟವು ಹೆಚ್ಚಿದಂತೆಲ್ಲಾ ಬಾಲ್ಯ ವಿವಾಹಗಳ ಸಂಪ್ರದಾಯವು ಸಾಕಷ್ಟು ಕಡಿಮೆ ಆಗಿದೆ ಕಾರಣ ಬಾಲ್ಯ ವಿವಾಹವು ಸರಿಯಾದುದಲ್ಲವೆಂದು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಬಾಲ್ಯ ವಿವಾಹದ ಉದ್ದೇಶಗಳು[ಬದಲಾಯಿಸಿ]

  • ಬಾಲ್ಯ ವಿವಾಹಗಳಿಗೆ ಅನೇಕ ಉದ್ದೇಶಗಳಿರಬಹುದು. ಕೆಲವು ಸಂಸ್ಕೃತಿಗಳಲ್ಲಿನ ಶ್ರೀಮಂತ ಪ್ರಭುತ್ವ-ಗುಣ ವರ್ಗದ ಜನ, ಅನ್ಯ ವರ್ಗಕ್ಕೆ ಸೇರಿದ ಬಾಲಕ ಬಾಲಕರಲ್ಲಿ ಬಾಲ್ಯ ವಿವಾಹಗಳನ್ನು ತಮ್ಮ ತಮ್ಮ ರಾಜಕೀಯ ಭವಿಷ್ಯಗಳಿಗಾಗಿ ಎರಡು ವರ್ಗದ ಸಂಬಂಧಗಳನ್ನು ಭದ್ರ ಮಾಡಿಕೊಳ್ಳಲು ಏಪರ್ಡಿಸಿರುವುದೂ ಇದೆ. ಉದಾಹರಣೆಗೆ, ಅಷ್ಟೇನೂ ಬಲಾಢ್ಯವಲ್ಲದ ವರ್ಗದ ಉನ್ನತ ಕುಟುಂಬದ ಮಗ ಅಥವಾ ಮಗಳನ್ನು ಬಲಾಢ್ಯ ವರ್ಗದ ಕುಟುಂಬದವರಲ್ಲಿ ಮದುವೆ ಏರ್ಪಡಿಸಿ ತಮ್ಮ ಕುಲ ಅಂತರ್ಗತವಾಗುವುದನ್ನು ತಪ್ಪಿಸಲು ಬಾಲ್ಯ ವಿವಾಹಗಳನ್ನು ಏರ್ಪಡಿಸಿರುವುದಿದೆ. ಕೆಳವರ್ಗದವರೇನಾದರು ಅದೃಷ್ಟವಂತರಾಗಿದ್ದಲ್ಲಿ, ವಾರಸುದಾರಿಕೆಯನ್ನು ದೃಢಪಡಿಸಿಕೊಂಡು ಅವರ ಮಕ್ಕಳನ್ನು ಶ್ರೀಮಂತ ವರ್ಗದವರಿಗೆ ಕೊಟ್ಟು ಮದುವೆ ಮಾಡಿಸುತ್ತಿದ್ದರು.
  • ಈ ಮುಖಾಂತರ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿದ್ದರು. ಮಗುವಿನ ನಿಶ್ಚಿತಾರ್ಥದ ವಿಚಾರದಲ್ಲಿ ಮಗುವಿನ ತಂದೆ-ತಾಯಿಗಳು ಇನ್ನೊಂದು ಮಗುವಿನ ತಂದೆ ತಾಯಿಗಳ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿ ಮತ್ತು ವಿದ್ಯಾಭ್ಯಾಸದ ಮಟ್ಟ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ತಮ್ಮ ಮಗುವಿನ ಭವಿಷ್ಯವನ್ನು ಚಿಕ್ಕ ವಯಸ್ಸಿನಲ್ಲೇ ಏಕಪಕ್ಷೀಯವಾಗಿ ನಿರ್ಧರಿಸಿ ಬಿಡುತ್ತಿದ್ದರು.[೩]
  • ಬಾಲ್ಯ ವಿವಾಹಗಳನ್ನು ಆಯೋಜಿಸುವವರು ಭೌತಿಕ ಆಕರ್ಷಣೆಯು ಮದುವೆ ಮತ್ತು ಕುಟುಂಬದ ವಿಚಾರದಲ್ಲಿ ಅಷ್ಟೇನು ಮುಖ್ಯವಲ್ಲ ಎಂದು ಆಲೋಚಿಸುತ್ತಾರೆ. ನಿಶ್ಚಿತಾರ್ಥಕ್ಕೂ ಮದುವೆಗೂ ಎಷ್ಟು ಸಮಯದ ಅಂತರವಿರಬೇಕೆಂಬುದು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳುವ ವಿಚಾರ. ಅಂತರ ವರ್ಗದ ವಿವಾಹದಿಂದ ಕುಟುಂಬಗಳು ರಾಜಕೀಯ ಮತ್ತು/ಅಥವಾ ಆರ್ಥಿಕ ಸಬಲತೆಯನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ನಿಶ್ಚಿತಾರ್ಥವನ್ನು ಕುಂಟುಂಬ ಮತ್ತು ಮಕ್ಕಳ ಮೇಲಿನ ಒಪ್ಪಂದ ಎಂದು ಪರಿಗಣಿಸಲಾಗುತ್ತದೆ. ಈ ನಿಶ್ಚಿತಾರ್ಥವು ಏನಾದರೂ ಮುರಿದು ಬಿದ್ದ ಪಕ್ಷದಲ್ಲಿ ಕುಟುಂಬಗಳ ಮೇಲೆ ಮತ್ತು ಮಧು ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಧರ್ಮಾನುಸಾರ ಬಾಲ್ಯ ವಿವಾಹ[ಬದಲಾಯಿಸಿ]

ಜೂಡಾಯಿಸಂನಲ್ಲಿ[ಬದಲಾಯಿಸಿ]

ಜೂಡಾಯಿಸಂ ಧರ್ಮದಲ್ಲಿ ಬಾಲ್ಯವಿವಾಹ ಸಾಧ್ಯ, ಕಾರಣ ಮಹಿಳೆಯರಲ್ಲಿನ ಅತಿ ಕಡಿಮೆ ಮದುವೆಯಾಗಬಲ್ಲ ವಯಸ್ಸು. ಕೆಟಾನ್ನಾಹ್ (ಅಕ್ಷರಶ:, ೩ ವರ್ಷದಿಂದ ೧೨ ವರ್ಷ ಮತ್ತು ಒಂದು ದಿನ[೪] ದವರೆಗೂ ವಯಸ್ಸಿನ ಯಾವುದಾದರು [ಒಂದು] ಚಿಕ್ಕ ) ಮಗು; ಕೆಟಾನ್ನಾಹ್ ಸಂಪೂರ್ಣವಾಗಿ ಅವಳ ತಂದೆಯ ಸುಪರ್ದಿಗೆ ಮತ್ತು ಆಧೀನಕ್ಕೆ ಒಳಪಟ್ಟವಳು ಮತ್ತು ಅವಳ ತಂದೆ ಅವಳು ಒಪ್ಪಲಿ ಬಿಡಲಿ ಅವಳಿಗೊಂದು ಮದುವೆ ಏರ್ಪಡಿಸಬಹುದು.[೪]. ತಲ್ಮುಡ್ ಪ್ರಕಾರ, ಮದುವೆ ಏನಾದರೂ ವಿಚ್ಛೇದನದಿಂದಲೋ ಅಥವಾ ಗಂಡನ ಸಾವಿನಿಂದಲೋ ಮುರಿದು ಬಿದ್ದರೆ ಮುಂದೆ ಮದುವೆಯಾಗುವುದು ಅಥವಾ ನಿರಾಕರಿಸುವುದು ಐಚ್ಛಿಕವಾದದ್ದು; ಕೆಟಾನ್ನಾಹ್ ಗೆ ಅದನ್ನು ಅಳಿಸಿಹಾಕಲು ಹಕ್ಕಿರುತ್ತಿತ್ತು.[೫]. ತಂದೆ ಮರಣವನಪ್ಪಿದ್ದರೆ ಅಥವಾ ಎಲ್ಲೋ ಕಳೆದು ಹೋಗಿದ್ದರೆ ಕೆಟಾನ್ನಾಹ್ ಳ ಅಣ್ಣ-ತಮ್ಮಂದಿರು ಅವಳಿಗೊಂದು ಮದುವೆ ಏರ್ಪಡಿಸಬೇಕಾಗುತ್ತದೆ, ತಾಯಿಯಿದ್ದರೂ ಅಷ್ಟೇ[೪], ಆದಾಗ್ಯೂ ಇಂಥ ಪರಿಸ್ಥಿತಿಗಳಲ್ಲಿ ಕೆಟಾನ್ನಾಹ್ ಗೆ ಅದು ಮೊದಲನೇ ಮದುವೆ ಆಗಿದ್ದರೂ ಅದನ್ನು ರದ್ದುಪಡಿಸಲು ಎಂದೂ ಹಕ್ಕಿರುತ್ತಿತ್ತು.[೫].

ಕೆಟಾನ್ನಾಹ್ ಳು ತನ್ನ ಮದುವೆಯನ್ನು ರದ್ದು ಪಡಿಸುವ ಹಕ್ಕನ್ನು ಹೀಬ್ರೂವಿನಲ್ಲಿ ಮೀಉನ್ ಎನ್ನುತ್ತಾರೆ (ಅಕ್ಷರಶ: ಒಪ್ಪದಿರುವುದು /ನಿರಾಕರಣೆ /ಪ್ರತಿಭಟನೆ ಎಂದು ಅರ್ಥ)[೫], ನಿಜ ರದ್ದತಿಗೆ ಮಾರ್ಗವಾಗುತ್ತದೆ ಆದರೆ ವಿಚ್ಛೇದನಕ್ಕಲ್ಲ; ವಿಚ್ಛೇದನದ ದಾಖಲೆ (ತೆಗೆದುಕೊಳ್ಳುವುದು ) ಅಷ್ಟೇನೂ ಅಗತ್ಯವಿಲ್ಲ[೬], ಮತ್ತು ಕೆಟಾನ್ನಾಹ್ ಈ ರೀತಿ ಮಾಡಿದ್ದಲ್ಲಿ ಮದುವೆಗೆ ಸಂಬಂಧಿಸಿದ ಹಾಗೆ ಅದನ್ನು ಕಾನೂನು ಪರಿಧಿಯಲ್ಲಿ ವಿಚ್ಛೇದಿತಳು ಎನ್ನುವ ಹಾಗಿಲ್ಲ.[೭] ವಿಚ್ಛೇದನವನ್ನು ಪರಿಗಣಿಸುವಂತೆ ಪರಿಗಣಿಸದೆ ಮೀಉನ್ ಅನ್ನು ರಾಬಿನಿಕ ಬರಹಗಾರರು[೫] ಕೆಟ್ಟ ಅಭಿರುಚಿಯಿಂದ ಕಂಡರು[೫] ತಾಲ್ಮುಡ್‌[೮] ನಲ್ಲೂ ಇದೇ ರೀತಿ ಕಾಣಲಾಗುತ್ತದೆ; ಯೆಹೂದಿ ಮತದ ಆರಂಭದ ಸಂಪ್ರದಾಯದಲ್ಲಿ ಹೌಸ್ ಆಫ್ ಶಮಾಯ್ ಎಂಬ ಒಂದು ಗುಂಪು ಮದುವೆ ರದ್ದು ಪಡಿಸುವ ಹಕ್ಕು ಇರುವುದು ನಿಶ್ಚಿತಾರ್ಥದ ಸಮಯದಲ್ಲಿ ಮಾತ್ರ (ಎರೂಸಿನ್ ) ಆದರೆ ಒಮ್ಮೆ ಮದುವೆ (ನಿಸ್ಸೂಇನ್ ) ಶುರುವಾದ ಮೇಲೆ ರದ್ಧತಿಗೆ ಅವಕಾಶವಿಲ್ಲ ಎಂದು ವಾದಿಸಿತ್ತು[೯].

ಇಸ್ಲಾಂ ಧರ್ಮದಲ್ಲಿ[ಬದಲಾಯಿಸಿ]

ಸಾಂಪ್ರದಾಯಿಕ ಇಸ್ಲಾಮೀ ಕಾನೂನಿನಲ್ಲಿ ವಿವಾಹಕ್ಕೆ ಯಾವುದೇ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗಿಲ್ಲ. ಈ ವಿಷಯದ ಕುರಿತಾದ ಚರ್ಚೆಯು ಮುಖ್ಯವಾಗಿ ಮಹಿಳೆಯರ ದೈಹಿಕ ಪ್ರಬುದ್ಧತೆಯ ಮೇಲೆ ಕೇಂದ್ರೀಕೃತವಾಗಿದೆ. ಸಾಂಪ್ರದಾಯಿಕ ಸುನ್ನಿ ಕರ್ಮಶಾಸ್ತ್ರದ ಪ್ರಕಾರ ತನ್ನ ಅಪ್ರಾಪ್ತ ಮಗಳಿಗೆ ವಿವಾಹ ಒಪ್ಪಂದ ಮಾಡಲು ತಂದೆಗೆ ಅವಕಾಶವಿದೆ. ದಾಂಪತ್ಯವನ್ನು ಆರಂಭಿಸಲು ಸೂಕ್ತವಾದ ವಯಸ್ಸನ್ನು (ಇದು ಕೆಲವೊಮ್ಮೆ ವಿವಾಹದ ಒಪ್ಪಂದಕ್ಕೆ ಸಹಿ ಹಾಕಿ ಹಲವಾರು ವರ್ಷಗಳ ನಂತರ ಸಂಭವಿಸಬಹುದು) ವಧು, ವರ ಮತ್ತು ವಧುವಿನ ಪೋಷಕರು ನಿರ್ಧರಿಸಬೇಕಾಗಿದೆ. ಏಕೆಂದರೆ ಕಾಲ, ಪ್ರದೇಶ ಮತ್ತು ದೈಹಿಕ ವ್ಯತ್ಯಾಸಗಳಿಗೆ ಅನುಗಣವಾಗಿ ಹುಡುಗಿಯರಲ್ಲಿ ಋತುಸ್ರಾವ ಆರಂಭವಾಗುವ ವಯಸ್ಸು ಹೆಚ್ಚು ಕಮ್ಮಿಯಾಗುವುದರಿಂದ ಮಧ್ಯಕಾಲೀನ ಇಸ್ಲಾಮೀ ಕರ್ಮಶಾಸ್ತ್ರಜ್ಞರು ದಾಂಪತ್ಯದ ಆರಂಭಕ್ಕೆ ಸೂಕ್ತವಾದ ವಯಸ್ಸು ನಿಗದಿಪಡಿಸಿಲ್ಲ.[೧೦] ಮುಹಮ್ಮದ್ ಪೈಗಂಬರರ ನಡವಳಿಕೆಗಳು ಒಳಗೊಂಡಿದೆಯೆಂದು ನಂಬಲಾಗುವ ಹದೀಸ್‌ಗಳನ್ನು ಇದಕ್ಕೆ ಆಧಾರವಾಗಿ ಮಾಡಿಕೊಳ್ಳಲಾಗಿದೆ.

ಮುಹಮ್ಮದ್ ತನ್ನ ಮೂರನೇ ಪತ್ನಿ ಆಯಿಶರನ್ನು ಸುಮಾರು ಆರು ಅಥವಾ ಏಳನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು ಸುಮಾರು ಒಂಬತ್ತು ಅಥವಾ ಹತ್ತನೇ ವಯಸ್ಸಿನಲ್ಲಿ ಆಯಿಶಳೊಡನೆ ದಾಂಪತ್ಯ ಆರಂಭಿಸಿದರು ಎಂದು ಹೇಳಲಾಗಿದೆ.[೧೧] ಆದರೆ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿಯಾಗಿ ಸೇವೆ ಸಲ್ಲಿಸಿದ ಅಲಿ ಗೊಮಾ ಮುಂತಾದ ಕೆಲವು ಆಧುನಿಕ ಮುಸ್ಲಿಂ ಲೇಖಕರು ಮತ್ತು ಇಸ್ಲಾಮೀ ವಿದ್ವಾಂಸರು ಆಯಿಶರ ವಯಸ್ಸಿನ ಬಗ್ಗೆ ಇಸ್ಲಾಮೀ ಗ್ರಂಥಗಳಲ್ಲಿ ಸಾಂಪ್ರದಾಯಿಕವಾಗಿ ಅಂಗೀಕರಿಸಲ್ಪಟ್ಟ ನಿರೂಪಣೆಯಲ್ಲಿ ಸಂಶಯ ವ್ಯಕ್ತಪಡಿಸುತ್ತಾರೆ ಮತ್ತು ಆಯಿಶ ತನ್ನ ಮದುವೆಯ ಸಮಯದಲ್ಲಿ ಹದಿಹರೆಯದ ಕೊನೆಯ ಹಂತದಲ್ಲಿದ್ದರು ಎಂದು ಇತರ ಪುರಾವೆಗಳ ಆಧಾರದ ಮೇಲೆ ಸಮರ್ಥಿಸುತ್ತಾರೆ.[೧೨]

ಸಾಮಾನ್ಯ ನಿಯಮದಂತೆ, ಸಂಭಾವ್ಯ ದೈಹಿಕ ಹಾನಿಯಿರುವ ಕಾರಣ ಎಳೆಯ ಹುಡುಗಿಯರೊಡನೆ ಸಂಭೋಗ ಮಾಡುವುದನ್ನು ಇಸ್ಲಾಮೀ ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹುಡುಗಿಯ ದೈಹಿಕ ಪ್ರಬುದ್ಧತೆಗೆ ಸಂಬಂಧಿಸಿದ ವಿವಾದಗಳನ್ನು ನ್ಯಾಯಾಧೀಶರು ಮಹಿಳಾ ತಜ್ಞ ಸಾಕ್ಷಿಯ ಪರೀಕ್ಷೆಯ ನಂತರ ನಿರ್ಧರಿಸಬೇಕು.[೧೦] ಒಟ್ಟೋಮನ್ ಸಾಮ್ರಾಜ್ಯದಲ್ಲಿ ೧೯೧೭ ರ ಇಸ್ಲಾಮೀ ಕೌಟುಂಬಿಕ ಕಾನೂನಿನ ಕ್ರೋಡೀಕರಣವು, ಹುಡುಗರಿಗೆ ಕನಿಷ್ಠ ೧೨ ಮತ್ತು ಹುಡುಗಿಯರಿಗೆ ಕನಿಷ್ಠ ೯ ವಯಸ್ಸನ್ನು ವಿವಾಹ ಪ್ರಾಯವಾಗಿ ನಿಗದಿಪಡಿಸಿದೆ. ಆದರೆ ಸಂಭೋಗ ಮಾಡಲು (ದಾಂಪತ್ಯ ಆರಂಭಿಸಲು) ಹುಡುಗರಿಗೆ ೧೮ ಮತ್ತು ಹುಡುಗಿಯರಿಗೆ ೧೭ ವಯಸ್ಸನ್ನು ನಿಗದಿಪಡಿಸಲಾಗಿದೆ. ಲೈಂಗಿಕ ಪ್ರಬುದ್ಧತೆಯ ಪುರಾವೆಯನ್ನು ನ್ಯಾಯಾಲಯದಲ್ಲಿ ಅಂಗೀಕರಿಸಲಾದರೆ ಮಾತ್ರ ೧೮ ಮತ್ತು ೧೭ ವಯಸ್ಸಿನ ಕೆಳಗಿನ ಹುಡುಗರು ಮತ್ತು ಹುಡುಗಿಯರ ದಾಂಪತ್ಯವನ್ನು ಅನುಮತಿಸಲಾಗುತ್ತದೆ. ಆದರೆ ಕನಿಷ್ಠ ವಯಸ್ಸಿಗಿಂತ ಕೆಳಗಿನ ವಿವಾಹವನ್ನು ನಿಷೇಧಿಸಲಾಗಿದೆ. ೨೦ ನೇ ಶತಮಾನದ ಅವಧಿಯಲ್ಲಿ, ಮಧ್ಯಪ್ರಾಚ್ಯದ ಹೆಚ್ಚಿನ ದೇಶಗಳಲ್ಲಿ ಇಸ್ಲಾಮೀ ಧರ್ಮಶಾಸ್ತ್ರ-ಆಧಾರಿತ ಶಾಸನವು ವಿವಾಹದ ವಯಸ್ಸಿನ ವಿಷಯದಲ್ಲಿ ಒಟ್ಟೋಮನ್ ಮಾದರಿಯನ್ನು ಅನುಸರಿಸಿವೆ. ಆದರೆ ಹುಡುಗರಿಗೆ ಕನಿಷ್ಠ ವಯಸ್ಸನ್ನು ೧೫ ಅಥವಾ ೧೬ ಮತ್ತು ಹುಡುಗಿಯರಿಗೆ ೧೩ ರಿಂದ ೧೬ ಕ್ಕೆ ಏರಿಸಿವೆ.[೧೩] 2019 ರಲ್ಲಿ ಸೌದಿ ಅರೇಬಿಯಾ ಮದುವೆಯ ವಯಸ್ಸನ್ನು 18 ಕ್ಕೆ ಏರಿಸಿತು.[೧೪]

೨೧ ನೇ ಶತಮಾನದ ಆರಂಭದ ವೇಳೆಗೆ, ಹೆಚ್ಚಿನ ದೇಶಗಳ ಕಾನೂನುಗಳು ೧೮ ವರ್ಷಗಳಲ್ಲಿ ಮದುವೆಗೆ ಸಾಮಾನ್ಯ ಕನಿಷ್ಠ ವಯಸ್ಸನ್ನು ಸ್ಥಾಪಿಸಿವೆ, ಅನೇಕ ದೇಶಗಳಲ್ಲಿ ಕೆಲವು ವಿನಾಯಿತಿಗಳು ಪೋಷಕರ ಒಪ್ಪಿಗೆಯೊಂದಿಗೆ ಮತ್ತು/ಅಥವಾ ನ್ಯಾಯಾಲಯದ ತೀರ್ಪಿನೊಂದಿಗೆ ಈ ವಯಸ್ಸಿನ ಮೊದಲು ಮದುವೆಯನ್ನು ಅನುಮತಿಸುತ್ತವೆ. ಕೆಲವು ದೇಶಗಳಲ್ಲಿ, ಧಾರ್ಮಿಕ ವಿವಾಹವನ್ನು ಇನ್ನೂ ರಾಜ್ಯ ಅಧಿಕಾರಿಗಳು ಗುರುತಿಸುತ್ತಾರೆ ಆದರೆ ಇತರರಲ್ಲಿ, ನೋಂದಾಯಿತ ನಾಗರಿಕ ವಿವಾಹವು ಕಡ್ಡಾಯವಾಗಿದೆ.

ಪ್ರಾಂತಾನುಸಾರ ಬಾಲ್ಯ ವಿವಾಹ[ಬದಲಾಯಿಸಿ]

ಆಫ್ರಿಕಾದಲ್ಲಿ[ಬದಲಾಯಿಸಿ]

  • ಅನೇಕ ದೇಶಗಳಲ್ಲಿ ಮದುವೆಯಾಗಬಲ್ಲ ವಯಸ್ಸು ೧೬ ರಿಂದ ೧೮ಕ್ಕೆ ಕನಿಷ್ಠ ವಯೋಮಿತಿಯನ್ನು ನಿಯಮ ಎಂದು ಮಾಡಲಾಗಿದೆ. ಕಾನೂನು ವ್ಯಾಪ್ತಿಗೆ ಒಳಪಟ್ಟಂತೆ, ಸಾಂಪ್ರದಾಯಿಕ ಮದುವೆಗಳು ವ್ಯಾಪಕವಾಗಿ ನಡೆಯುತ್ತಿದೆ. ದಕ್ಷಿಣ ಏಷಿಯಾದಲ್ಲಿ ಹೇಗೆ ಬಡತನ, ಧರ್ಮ, ಸಂಪ್ರದಾಯ ಮತ್ತು ಘರ್ಷಣೆ ಬಾಲ್ಯವಿವಾಹಗಳಿಗೆ ಕಾರಣವಾಗಿತ್ತೋ ಹಾಗೆಯೇ ಸಬ್-ಸಹರನ್ ಆಫ್ರೀಕಾದಲ್ಲೂ ಕಾರಣವೆನ್ನಲಾಗಿದೆ.[೧೫]
  • ಬುಡಕಟ್ಟು ಜನಾಂಗದ ಮದುವೆ ವ್ಯವಸ್ಥೆಯಲ್ಲಿ, ಪುರುಷ ವಧು ದಕ್ಷಿಣೆಯನ್ನು ಹೆಣ್ಣಿನ ಮನೆಯವರಿಗೆ ಕೊಟ್ಟು ಮದುವೆಯಾಗುವುದಿದೆ. (ಈ ಪದ್ಧತಿಯನ್ನು ವರದಕ್ಷಿಣೆ ಮತ್ತು ವಧು ದಕ್ಷಿಣೆಗೆ ಹೋಲಿಸಬಹುದಾಗಿದೆ.) ಆಫೀಕಾದ ಅನೇಕ ಪ್ರದೇಶಗಳಲ್ಲಿ ಇದನ್ನು ನಗದಿನ ಮೂಲಕ, ದನಗಳನ್ನು ಕೊಡುವ ಮೂಲಕ ಅಥವಾ ಇನ್ನಿತರ ಮೌಲ್ಯದ ವಸ್ತುಗಳನ್ನು ಕೊಡುವ ಮೂಲಕ ನಡೆಯುತ್ತದೆ. ಹೆಣ್ಣಿನ ವಯಸ್ಸು ಹೆಚ್ಚಿದಂತೆಲ್ಲಾ ಕೊಡಬೇಕಾದ ಮೌಲ್ಯವು ಕಡಿಮೆಗೊಳ್ಳುತ್ತದೆ.
  • ಬಾಲ್ಯವಿವಾಹಗೊಂಡ ಹೆಣ್ಣು ತಾನು ಪ್ರೌಢಾವಸ್ಥೆಗೇರುವ ಮುನ್ನವೆ ಅಂದರೆ ನೆರೆಯುವ ಮೊದಲೇ ತನ್ನ ತಂದೆ ತಾಯಿಗಳನ್ನು ಬಿಟ್ಟು ಗಂಡನ ಮನೆ ಸೇರಬಹುದು. ಅನೇಕ ವಿವಾಹಗಳು ಬಡತನಕ್ಕೆ ಸಂಬಂಧಿತವು, ತಂದೆ-ತಾಯಿಗಳು ತಮ್ಮ ಮನೆಯನ್ನು ನಡೆಸುವುದಕ್ಕೆ ಬೇಕಾಗುವ ಕೌಟುಂಬಿಕ ಖರ್ಚು ಅಂದರೆ ಆಹಾರಕ್ಕೆ, ಬಟ್ಟೆಗೆ ಹಣ ಬೇಕಾದಾಗ ಈ ರೀತಿಯ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವುದುಂಟು.
  • ಇಂಥ ಸಂದರ್ಭಗಳಲ್ಲಿ ಗಂಡು ಮಕ್ಕಳು ಪೂರ್ಣ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ನೌಕರಿಯನ್ನು ಸಂಪಾದಿಸುವುದಕ್ಕೆ ಕಾರಣವಾಗುತ್ತದೆ ಮತ್ತು ಇವರು ಮದುವೆಯನ್ನು ಆನಂತರವಷ್ಟೇ ಮಾಡಿಕೊಳ್ಳುತ್ತಾರೆ. ೧೮ವರ್ಷಕ್ಕೂ ಮೊದಲೇ ಮದುವೆಯಾಗುವ ಹೆಣ್ಣು:ಗಂಡು ಅನುಪಾತವು ಮಾಲಿಯಲ್ಲಿ 72:1 ಇದ್ದರೆ ಕೀನ್ಯಾದಲ್ಲಿ 21:1 ಇರುತ್ತದೆ.[೧೫]
  • ವಿವಿಧ UN ಆಯೋಗಗಳು ಸೂಚಿಸಿರುವ ಪ್ರಕಾರ ಅನೇಕ ಸಬ್-ಸಹರನ್ ದೇಶಗಳಲ್ಲಿ ೧೫ಕ್ಕೂ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮದುವೆ ಅಧಿಕ ಸಂಖ್ಯೆಯಲ್ಲಿ ನಡೆಯುತ್ತದೆ. ಅನೇಕ ಸರಕಾರಗಳು ಬಾಲ್ಯವಿವಾಹಗಳಾಗುವುದಕ್ಕೆ ಇರುವ ನಿರ್ದಿಷ್ಟ ಕಾರಣಗಳತ್ತ ಗಮನ ಹರಿಸಿರುತ್ತದೆ, ಅವುಗಳಲ್ಲಿ ಆಬ್ಸ್‌ಟೆಟ್ರ‍ಿಕ್ ಫಿಸ್ಟುಲಾ, ಪ್ರಿಮೆಚ್ಯೂರಿಟಿ, ಮೃತಶಿಶುವಿನ ಜನನ, ಲೈಂಗಿಕವಾಗಿ ಹರಡುವ ಕಾಯಿಲೆಗಳು ಇವುಗಳಲ್ಲಿ ಸರ್ವೈಕಲ್ ಕ್ಯಾನ್ಸರ್) ಮತ್ತು ಮಲೇರಿಯಾ.[೧೫]
  • ಇಥಿಯೋಪೀಯಾ ಮತ್ತು ನೈಜೀರಿಯಾ ದೇಶಗಳಲ್ಲಿ ೧೫ಕ್ಕೂ ಕಡಿಮೆ ವಯಸ್ಸಿನ ಸಾಕಷ್ಟು ಸಂಖ್ಯೆಯ ಹೆಣ್ಣು ಮಕ್ಕಳಿಗೆ ಮದುವೆ ಆಗುತ್ತದೆ ಮತ್ತು ಕೆಲವು ಹೆಣ್ಣು ಮಕ್ಕಳಿಗೆ ೭ ವರ್ಷಕ್ಕೂ ಕಡಿಮೆಗೇನೇ ಮದುವೆ ಆಗುವುದೂ ಇದೆ.[೧೬] ಮಾಲಿಯ ಕೆಲವು ಭಾಗಗಳಲ್ಲಿ ೩೯% ಹೆಣ್ಣು ಮಕ್ಕಳಿಗೆ ೧೫ ವರ್ಷಕ್ಕೂ ಕಡಿಮೆಯೇ ಮದುವೆ ಆಗಿಬಿಡುತ್ತದೆ.
  • ನೈಜರ್ ಮತ್ತು ಚಾಡ್‍ನಲ್ಲಿ ೭೦% ರಷ್ಟು ಹೆಣ್ಣು ಮಕ್ಕಳಿಗೆ ೧೮ ವಯಸ್ಸಿಗೂ ಕಡಿಮೆ ಇರುವಾಗಲೇ ಮದುವೆ ಆಗಿ ಬಿಡುತ್ತದೆ.[೧೫] ದಕ್ಷಿಣ ಆಫ್ರಿಕಾದಲ್ಲಿ ಸಂಪ್ರದಾಯ ಮದುವೆಗಳನ್ನು ಗೌರವಿಸುವ ಸಲುವಾಗಿ ಒಬ್ಬ ಮನುಷ್ಯ ೧೨ ವರ್ಷದಷ್ಟು ಕಡಿಮೆ ವಯಸ್ಸಿನ ಹೆಣ್ಣನ್ನು ಮತ್ತು ಕಡಿಮೆಯೆಂದರೆ ೧೪ ವರ್ಷದ ಗಂಡು ಹುಡುಗನಿಗೆ ಮದುವೆ ಏರ್ಪಡಿಸಬಹುದು ಎಂದು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.[೧೫]
  • ಚಿಕ್ಕ ವಯಸ್ಸಿನಲ್ಲೇ ಮದುವೆ ಆದರೆ ಅದು "ಹುಡುಗರಿಗಾಗಲಿ ಹುಡುಗಿಯರಿಗಾಗಲಿ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ತಡೆ" ಎಂದು ಹೇಳಲಾಗಿದೆ. ಇದರಲ್ಲಿ ಅಬ್ಸುಮಾ (ಸೋದರ ಸಂಬಂಧದ ನಡುವೆ ಹುಟ್ಟಿದಾರಭ್ಯವೇ ಏರ್ಪಡಿಸಿದ ಮದುವೆ ಗಳು ), ಹೆಣ್ಣನ್ನು ಅಪಹರಿಸುವುದು ಮತ್ತು ಜೋಡಿಗಳು ಪಲಾಯನ ಮಾಡುವುದೂ ಸೇರಿದೆ[೧೭].

ದಕ್ಷಿಣ ಏಷ್ಯಾದಲ್ಲಿ[ಬದಲಾಯಿಸಿ]

ಚೈಳ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಆಕ್ಟ್, 1929 ಅನ್ನು ವಿಭಜನೆ ಪೂರ್ವ ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ ಜಾರಿಗೆ ತರಲಾಗಿತ್ತು ಇದರ ಪ್ರಕಾರ ಗಂಡಿಗೆ ಮದುವೆ ವಯಸ್ಸು ಇಪ್ಪತೊಂದು ಮತ್ತು ಹೆಣ್ಣಿಗೆ ಹದಿನೆಂಟು ಆಗಿರಲೇಬೇಕಾಗಿತ್ತು. ಮದುವೆ ಮಾಡುವ ಎರಡೂ ಕಡೆಯವರು ಈ ಕಾಯಿದೆ ಅಡಿ ಬರುವ ಎಲ್ಲಾ ಮಾನದಂಡಗಳನ್ನು ಪೂರಯಿಸಬೇಕಾಗುತ್ತದೆ.[೧೮] ವಿಶ್ವದ ಯಾವುದೇ ಪ್ರದೇಶಕ್ಕಿಂತ ದಕ್ಷಿಣ ಏಷಿಯಾದಲ್ಲಿ ಅತ್ಯಧಿಕ ಬಾಲ್ಯವಿವಾಹಗಳು ನಡೆಯುತ್ತವೆ ಎಂಬ ವದ್ಧಂತಿ ಇದೆ.

ಭಾರತದಲ್ಲಿ[ಬದಲಾಯಿಸಿ]

  • ಬಾಲ್ಯವಿವಾಹದ ಪದ್ದತಿಯನ್ನು ನಿಯಂತ್ರಿಸಲು ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬಿಹಾರ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಮದುವೆಯ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢ ಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹವನ್ನು ನೊಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿರುತ್ತಾರೆ. ಆದಾಗ್ಯೂ, ಸಾಮೂಹಿಕ ಮದುವೆಗಳಲ್ಲಿ ಬಾಲ್ಯವಿವಾಹಗಳು ನುಸುಳಿದ್ದರೆ ಅದನ್ನು ಅಧಿಕಾರಿಗಳು ನಿರ್ಲಕ್ಷಿಸಿರುತ್ತಾರೆ.[೧೯]
  • “ನ್ಯಾಷನಲ್ ಪ್ಲಾನ್ ಆಫ್ ಆಕ್ಷನ್ ಫಾರ್ ಚಿಳ್ಡ್ರನ್ 2005,” (ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಿಸಿರುವಂತೆ) 2010ರಷ್ಟು ಹೊತ್ತಿಗೆ ಬಾಲ್ಯವಿವಾಹಗಳನ್ನು ಏರ್ಪಡಿಸುವುದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಗುರಿಯನ್ನು ಹೊಂದಲಾಗಿದೆ. ಭಾರತದ ಭಾರಿ ಜನಸಂಖ್ಯೆಯಿಂದಾಗಿ ಪ್ರತಿಯೊಂದು ಮಗುವನ್ನು ಗಮನಿಸುವುದು ಅಸಾಧ್ಯವಾದರೂ ಈ ಯೋಜನೆ ಬಹುತೇಖವಾಗಿ ಯಶಸ್ಸನ್ನು ಕಂಡಿದೆ.[೨೦]
  • UNICEF’ನ “ಸ್ಟೇಟ್ ಆಫ್ ದಿ ವರ್ಳ್‌ಡ್ಸ್ ಚಿಳ್ಡ್ರನ್-2009” ವರದಿಯ ಪ್ರಕಾರ, 47%ರಷ್ಟು ಭಾರತೀಯ ಮಹಿಳೆಯರು 20–24 ವಯಸ್ಸಿನ ಹೆಣ್ಣುಗಳು ಕಾನೂನಿನ ವಿರೋಧವಾಗಿ 18 ವಯಸ್ಸಿನೊಳಗೇ ಮದುವೆ ಆಗಿದ್ದಾರೆ, 56% ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದವರು.[೨೧] ವಿಶ್ವದಲ್ಲಿ ನಡೆವ ಬಾಲ್ಯವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುವಂತಹುದು ಎಂದು ವರದಿ ಮಾಡಿದೆ.[೨೨]

ಪಾಕಿಸ್ತಾನದಲ್ಲಿ[ಬದಲಾಯಿಸಿ]

ಮೇಲ್ಕಾಣಿಸಿದ ಕಾಯಿದೆ ಇದಾಗ್ಯೂ, ಬಾಲ್ಯವಿವಾಹದ ಪದ್ಧತಿ ಇನ್ನೂ ಕೆಲವು ಪ್ರದೇಶಗಳಲ್ಲಿ ವಾಣಿ ಮತ್ತು ವಾಟಾ ಸಟ್ಟಾ ಮತ್ತು ಸ್ವರ ಮುಂತಾದ ಆಚಾರಗಳಲ್ಲಿ ರೂಢಿಯಲ್ಲಿದೆ[೨೩]. ಮದುವೆಯ ಕನಿಷ್ಠ ವಯೋಮಿತಿ ಗಂಡಿಗೆ 18 ವರ್ಷವಿದ್ದರೆ ಹೆಣ್ಣಿಗೆ 16 ವರ್ಷವಿರುತ್ತದೆ.[೨೪]

ಬಾಂಗ್ಲಾದೇಶದಲ್ಲಿ[ಬದಲಾಯಿಸಿ]

  • ಬಾಂಗ್ಲಾದೇಶದಲ್ಲಿ ೨೦೦೫ರಿಂದ ಅಂಕಿಅಂಶಗಳ ಪ್ರಕಾರ, ೪೫% ರಷ್ಟು ಮಹಿಳೆಯರು ಆಗ ೨೫ ರಿಂದ ೨೯ರ ವಯೋಮಾನದವರಾಗಿದ್ದವರು ೧೫ನೇ ವಯಸ್ಸಿಗೇ ಮದುವೆಯಾಗಿದ್ದಾರೆ.[೧೬] “ಸ್ಟೇಟ್ ಆಫ್ ದಿ ವರ್ಲ್‌ಡ್ಸ್ ಚಿಳ್ಡ್ರನ್-2009” ವರದಿಯ ಪ್ರಕಾರ, ಒಟ್ಟು ಮಹಿಳೆಯರಲ್ಲಿ ೬೩% ರಷ್ಟು ಹೆಣ್ಣುಗಳು, ೨೦-೨೪ ವಯೋಮಾನದವರು ತಮ್ಮ ವಯಸ್ಸು ೧೮ ಆಗುವ ಮೊದಲೇ ಮದುವೆಯಾದವರು.[೨೧]
  • ಮಹಿಳಾ ಮತ್ತು ಮಕ್ಕಳ ಕಾರ್ಯಗಳ ಸಚಿವಾಲಯವು ಮಹಿಳೆಯರ ವಿದ್ಯಾಭ್ಯಾಸ ಮತ್ತು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಇದು ಮತ್ತು ಬಾಲ್ಯವಿವಾಹದ ಬಗ್ಗೆ ನಿರ್ದಿಷ್ಟ ಬೋಧನೆ ಹಾಗೂ ಧಾರ್ಮಿಕ ನಾಯಕರ ಸಹಕಾರ ಎಲ್ಲವೂ ಸೇರಿ ಬಾಲ್ಯವಿವಾಹಗಳ ಸಂಖ್ಯೆ ಇಳಿಯುತ್ತದೆ ಎಂದು ನಂಬಲಾಗಿದೆ.

ಯೆಮೆನ್‌[ಬದಲಾಯಿಸಿ]

  • "ಯೆಮೆನ್ ಪೂರ್ತ ಬಾಲ ಮಧು ಮಕ್ಕಳೇ. ಯೆಮೆನ್ ಹುಡುಗಿಯರಲ್ಲಿ ಅಂದಾಜು ಅರ್ಧದಷ್ಟು ಹುಡುಗಿಯರು 18ನೇ ವಯಸ್ಸಿನೊಳಗೇ ಮದುವೆಯಾಗಿರುತ್ತಾರೆ ಅದರಲ್ಲೂ ಕೆಲವರಂತೂ ಎಂಟು ವಯಸ್ಸಿಗಿಂತ ಕಡಿಮೆಯೇ ಮದುವೆ ಆಗಿದ್ದಾರೆ."[೨೫] ಇತ್ತೀಚಿನವರೆಗೂ ಯೆಮೆನಿ ಕಾನೂನು, ಮದುವೆಗೆ ಕನಿಷ್ಠ ವಯೋಮಾನವನ್ನು 15ಕ್ಕೆ ನಿಗದಿಪಡಿಸಿತ್ತು. ಆದರೆ ಬುಡಕಟ್ಟು ಆಚರಣೆಗಳು ಮತ್ತು ಇಸ್ಲಾಂ ವ್ಯಾಖ್ಯಾನಗಳು ಆಗಾಗ್ಗೆ ನಿಯಮವನ್ನು ಸೋಲಿಸುತ್ತದೆ.
  • ವಾಸ್ತವದಲ್ಲಿ, "ಯೆಮೆನಿ ಕಾನೂನು ಯಾವುದೇ ವಯಸ್ಸಿನಲ್ಲಿ ಮದುವೆಯಾಗಲು ಹೆಣ್ಣಿಗೆ ಅವಕಾಶವನ್ನು ಕೊಡುತ್ತದೆ ಆದರೆ ಲೈಂಗಿಕ ಅವಕಾಶವನ್ನು ಹೆಣ್ಣು ಸೂಕ್ತ ವಯಸ್ಸನ್ನು ತಾಳುವವರೆಗೂ ನಿಷೇಧಿಸುತ್ತದೆ."[೨೫][೨೫] ಅಪರೂಪಕ್ಕೆ ಚಾಲ್ತಿಯಲ್ಲಿದ್ದ, ಮದುವೆಗೆ ಕನಿಷ್ಠ ವಯೋಮಾನ ಹದಿನೈದು ಎಂಬ ಕಾನೂನನ್ನು 1999ರಲ್ಲಿ ರದ್ದು ಪಡಿಸಲಾಯಿತು; ದೃಢವಾದ ಪ್ರೌಢಾವಸ್ಥೆ, ಹೆಣ್ಣಿನ ಒಂಬತ್ತನೇ ವಯಸ್ಸಿಗೆ ಮದುವೆ ಬಗ್ಗೆ ಸಂಪ್ರದಾಯವಾದಿಗಳ ವ್ಯಾಖ್ಯಾನ ಹೀಗೆ ಇವೆಲ್ಲಾ ಮದುವೆಯನ್ನು ಪೂರ್ಣಗೊಳಿಸುವುದಕ್ಕೆ ಬೇಕಾದವು.[೨೬]
  • ಏಪ್ರಿಲ್ 2008ರಲ್ಲಿ ನುಜೂದ್ ಅಲಿ ಎಂಬ 10 ವರ್ಷದ ಹೆಣ್ಣು ಮಗಳು ವಿಚ್ಛೇಧನವನ್ನು ಪಡೆಯುವಲ್ಲಿ ಯಶಸ್ವಿಯಾದ ಸುದ್ದಿ ಪ್ರಪಂಚಾದ್ಯಂತ ಪ್ರಾಮುಖ್ಯತೆ ಪಡೆಯಿತು ಮತ್ತು ಈ ಉದಾಹರಣೆಯು ಮದುವೆಯ ವಯಸ್ಸು 18 ಆಗಬೇಕೆಂಬ ಕಾನೂನಿಗೆ ಬೆಂಬಲ ಸಿಕ್ಕಂತಾಯಿತು.[೨೭] 2008ರ ತರುವಾಯ, ದಿ ಸುಪ್ರೀಮ್ ಕೌನ್ಸಿಲ್ ಫಾರ್ ಮದರ್‌ಹುಡ್ ಆಂಡ್ ಚೈಳ್ಡ್‌ಹುಡ್‌ನವರು ಮದುವೆಯ ಕನಿಷ್ಠ ವಯಸ್ಸು 18 ಇರಲೇ ಬೇಕೆಂದು ಪ್ರಸ್ತಾವಣೆಯನ್ನು ಇಟ್ಟರು. ಏಪ್ರಿಲ್ 2009ರಲ್ಲಿ ಮದುವೆಯ ವಯಸ್ಸು 17 ಇರಬೇಕೆಂದು ಕಾಯಿದೆಯನ್ನು ಜಾರಿ ಮಾಡಲಾಯಿತು.
  • ಪಾರ್ಲಿಮೆಂಟರಿಯ ವಿರೋಧ ಪಕ್ಷದವರ ಕುತಂತ್ರದಿಂದಾಗಿ ಆ ಕಾಯಿದೆಯನ್ನು ಮರುದಿನವೇ ಹಿಂದೆಗೆಯಲಾಯಿತು. ಶಾಸನವನ್ನು ಜಾರಿ ಮಾಡಲು ಸಂಧಾನಗಳು ಮುಂದುವರೆದಿವೆ. ಈ ನಡುವೆ, ಯೆಮೆನಿಗಳು ನುಜೂದಳ ಶ್ರಮದಿಂದ ಪ್ರೇರಿತವಾಗಿ ಬದಲಾವಣೆ ಬಯಸಿದರು ಅದರಲ್ಲಿ ಸ್ವತ: ನುಜೂದಳೇ ಒಂದು ಹೋರಾಟದಲ್ಲಿ ಭಾಗವಹಿಸಿದಳು. ಈ ರೀತಿಯ ಜಾಗೃತಿ ಅಭಿಯಾನವೊಂದು ಅಮ್ರಾನ್ ನ ಆಳ್ವಿಕೆಯಲ್ಲಿ ಕೆಲವು ಬಾಲ್ಯವಿವಾಹಗಳನ್ನು ಯೆಮೆನ್‌ನಲ್ಲಿ ತಡೆದಿದ್ದೇವೆ ಎಂದು ಹೇಳಿಕೊಂಡಿದೆ.[೨೮]

ಮಧ್ಯ ಪೌರಾತ್ಯ[ಬದಲಾಯಿಸಿ]

ಸೌದಿ ಅರೇಬಿಯಾ[ಬದಲಾಯಿಸಿ]

ಕಿಂಗ್ಡ್ಂ ಆಫ್ ಸೌದಿ ಅರೇಬಿಯಾದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಬಾಲ್ಯವಿವಾಹಗಳನ್ನು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ದಾಖಲಿಸಿವೆ.[೧] Archived 2009-03-20 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2012-07-12 at Archive.is. ಸೌದಿ ಪುರೋಹಿತ ವರ್ಗದವರು ಹೆಣ್ಣು ಮಗುವಿಗೆ 9 ವರ್ಷಕ್ಕೇ ಮದುವೆ ಮಾಡಿದರೂ ತಪ್ಪಿಲ್ಲ ಎಂದು ಬಾಲ್ಯವಿವಾಹಗಳನ್ನು ಸಮರ್ಥಿಸಿ ಅದಕ್ಕೆ ನ್ಯಾಯಾಂಗಗಳ ಇಪ್ಪಿಗೆಯನ್ನೂ ಪಡೆದಿದ್ದಾರೆ.[೩].ಸೌದಿ ಅರೇಬಿಯಾದಲ್ಲಿ ಮದುವೆ ವಯಸ್ಸನ್ನು ನಿಗದಿಪಡಿಸಿಲ್ಲವಾದ ಕಾರಣ ಎಂಟು ವರ್ಷದ ಹೆಣ್ಣು ಮಗುವಿಗೂ ಅಲ್ಲಿ ಮದುವೆ ಜರುಗುತ್ತದೆ.[೪].

ಉತ್ತರ ಅಮೇರಿಕಾ[ಬದಲಾಯಿಸಿ]

ಕೆನಡಾ[ಬದಲಾಯಿಸಿ]

ಕೆನಡಾದಲ್ಲಿ ಹೆಣ್ಣಿಗಾಗಲಿ ಅಥವಾ ಗಂಡಿಗಾಗಲಿ ಮದುವೆಯಾಗಲು 18 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರಬೇಕು ಇಲ್ಲವಾದಲ್ಲಿ ತಂದೆ-ತಾಯಿಯ ಒಪ್ಪಿಗೆ ಇರಬೇಕು. ನ್ಯಾಯಾಲಯದ ಒಪ್ಪಿಗೆಯಿದ್ದಲ್ಲಿ ಜನ್ಮದಾತರ ಒಪ್ಪಿಗೆಯು ಇರಲೇ ಬೇಕೆಂದೇನೂ ಇಲ್ಲ. ಹೆಣ್ಣಿಗೆ 16 ವರ್ಷಕ್ಕೂ ಕಡಿಮೆ ವಯಸ್ಸಿದ್ದಲ್ಲಿ ಆಗ ಮದುವೆ ಆಗಬಹುದು ಆದರೆ ನ್ಯಾಯಾಲಯದ ಒಪ್ಪಿಗೆ ಇರಬೇಕಾಗುತ್ತದೆ.[೨೯]. ಕೆನಡಾದಲ್ಲಿ ಮದುವೆ ಆದವರ ಸರಾಸರಿ ವಯಸ್ಸು 33 ಆಗಿರುತ್ತದೆ.[೩೦]

ಅಮೇರಿಕಾ ಸಂಯುಕ್ತ ಸಂಸ್ಥಾನ[ಬದಲಾಯಿಸಿ]

  • ಯುನೈಟೆಡ್ ಸ್ಟೇಟ್ಸ್ ಆದ್ಯಂತ ಬಾಲ್ಯವಿವಾಹಗಳ ಬಗೆಗಿನ ಕಾನೂನು ಒಂದೇ ರೀತಿಯಲ್ಲಿ ಇರುವುದಿಲ್ಲ ಮಕ್ಕಳು 16 ವರ್ಷದವರಾಗಿದ್ದರೂ ಮದುವೆ ಆಗಬಹುದು ಆದರೆ ಅದಕ್ಕೆ ಜನ್ಮದಾತರ ಒಪ್ಪಿಗೆ ಇರಬೇಕು. 16 ವರ್ಷಕ್ಕೂ ಕಡಿಮೆ ವಯಸ್ಸಿದ್ದಲ್ಲಿ ಆಗ ಜನ್ಮದಾತರ ಒಪ್ಪಿಗೆಯ ಜೊತೆಗೆ ನ್ಯಾಯಾಲಯದ ಅನುಮತಿಯೂ ಬೇಕಾಗುತ್ತದೆ.[೩೧]
  • 2008ರವರೆಗೂ, ಫಂಡಾಮೆಂಟಲಿಸ್ಟ್ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್ ಡೇ ಸೇಂಟ್ಸ್ ನವರು ಬಾಲ್ಯವಿವಾಹವನ್ನು ಆಧ್ಯಾತ್ಮಿಕ ಆಚರಣೆ ಎಂದು 'ಸ್ಪಿರಿಚ್ಯೂಲ್ (ರಿಲಿಜೀಯಸ್ ಒನ್ಲಿ) ಮ್ಯಾರೇಜಸ್,' ಎಂಬ ಹೆಸರಿನಲ್ಲಿ ಹೆಣ್ಣು ಪ್ರೌಢಾವಸ್ಥೆಗೆ ಬಂದೊಡನೆ ಮಾಡುತ್ತಿದ್ದರು ಅದು ಏಕ ಕಾಲದಲ್ಲಿ ಒಬ್ಬಳಿಗಿಂತ ಹೆಚ್ಚು ಪತ್ನಿಯರನ್ನು ಪಡೆಯುವ ಪದ್ಧತಿಯ ಭಾಗವಾಗಿ ಇದನ್ನು ಕೈಗೊಳ್ಳಲಾಗುತ್ತಿತ್ತು ನಂತರ ಜನರ ಟೀಕೆಗೆ ಬಾಗಿ ಈ ಪದ್ಧತಿಯ ವಿರುದ್ಧ ಕಾನೂನನ್ನು ಮಾಡಿ ಮದುವೆಯ ವಯಸ್ಸನ್ನು ಏರಿಸಲಾಯಿತು. 2008ರಲ್ಲಿ, ಚರ್ಚ್‌ನವರು ತಮ್ಮ ನಿಯಮವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬದಲಾಯಿಸಿ, ಇನ್ನು ಮುಂದೆ ಸ್ಥಳೀಯ ಕಾನೂನು ನಿರ್ಧಸಿರುವ ಮದುವೆಯ ವಯೋಮಾನಕ್ಕಿಂತ ಕಡಿಮೆ ವಯಸಿದ್ದರೆ ಮದುವೆ ಆಗಕೂಡದೆಂದು ಹೇಳಿದೆ.

2007ರಲ್ಲಿ, ಚರ್ಚ್‌ನ ಮುಖ್ಯಸ್ಥ ವಾರ್ರೆನ್ ಜೆಫ್ಸ್ ಅನ್ನು 14-ವರ್ಷದ ಬಾಲಕಿಗೂ 19 ವರ್ಷದ ಬಾಲಕನಿಗೂ ಮದುವೆ ವ್ಯವಸ್ಥೆಗೊಳಿಸಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಡೆದ ಶಾಸನವಿಹಿತ ಅತ್ಯಾಚಾರಕ್ಕೆ ಶಾಮೀಲುದಾರ ಎಂದು ಆರೋಪಿಸಿ ಬಂಧಿಸಲಾಯಿತು.[೩೨] ಮಾರ್ಚ್ 2008ರಲ್ಲಿ, ಟೆಕ್ಸಾಸ್ ಆಡಳಿತವು ಯಾರ್ನಿಂಗ್ ಫಾರ್ ಜೀಯಾನ್ ರಾಂಚ್ ನಲ್ಲಿ ಮಕ್ಕಳನ್ನು ವಯಸ್ಕ ಪುರುಷರಿಗೆ ಮದುವೆ ಮಾಡಿಕೊಟ್ಟು ಅವರನ್ನು ಹಿಂಸಿಸಲಾಗುತ್ತದೆ.[೩೩] ಟೆಕ್ಸಾಸ್‌ನ ಆಡಳಿತವು ರಾಂಚ್‌ನಿಂದ 468 ಮಕ್ಕಳನ್ನು ರಕ್ಷಿಸಿ ತಾತ್ಕಾಲಿಕವಾಗಿ ಸರಕಾರದ ಸುಪರ್ದಿಯಲ್ಲಿ ಇಟ್ಟುಕೊಳ್ಳಲಾಯಿತು.[೩೩] FLDS ಈ ಆರೋಪಗಳನ್ನು ನಿರಾಕರಿಸಲಾಯಿತು. ಈ ಆರೋಪಗಳು ನ್ಯಾಯಾಲಯದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಯಿತು ಮತ್ತು ರಾಂಚ್‌ನಲ್ಲಿ ಸರಕಾರ ಪ್ರವೇಶಿಸಿದ್ದು ಕಾನೂನು ಬಾಹಿರವೆಂದು ತೀರ್ಮಾನಿಸಿತು.

ಪ್ರಚಲಿತ ಪದ್ಧತಿ[ಬದಲಾಯಿಸಿ]

ಅಕ್ಟೋಬರ್ 30, 2008ರಲ್ಲಿ ಪಾಕಿಸ್ತಾನದ ಪೊಲೀಸರು ಬಾಲ್ಯವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಇಟ್ಟು ಇಬ್ಬರು ಸಂಘಟಕರನ್ನು ಬಂಧಿಸಿದರು ಮತ್ತು ಅವರ ಜಹಗೀರನ್ನು ಕೊನೆಗಾಣಿಸಿದರು. ಜೊತೆಗೆ ಕರಾಚಿ ಬಳಿಯ ನಜೀಮಾಬಾದ್ ಬಳಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಏಳು ವರ್ಷದ ಗಂಡು ಹುಡುಗನಿಗೆ ಮದುವೆಯನ್ನು ಕಾನೂನು ಬಾಹಿರವಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.[೨೪]

ಐತಿಹಾಸಿಕ ಸಾಹಿತ್ಯಗಳಲ್ಲಿ ದಾಖಲಾಗಿರುವ ಗತಕಾಲದ ಪದ್ಧತಿ[ಬದಲಾಯಿಸಿ]

  • ಪರಾಗುವಾದ ರೀಯೋ ಸಾವೋ ಲಾರಂಜೋದಲ್ಲಿ ನೆಲೆಸಿರುವ ಅಮೇರಿಕಾ-ಭಾರತೀಯ ಗ್ವಾಟೋಗಳಲ್ಲಿ ತಮಗಿಂತ ಐದರಿಂದ ಎಂಟು ವರ್ಷಗಳು ಹೆಚ್ಚಿನವರನ್ನು ಮದುವೆ ಆಗುತ್ತಿದ್ದರು.
  • ಪರ್ಷಿಯಾದ ಚಿರಾಸ್‌‌ನಲ್ಲಿ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಗೂ ಮುನ್ನವೇ ಮದುವೆ ಆಗಿಬಿಡುತ್ತದೆ.
  • ಸಿರಿಯಾದಲ್ಲಿ ... ಹೆಣ್ಣು ಮಕ್ಕಳು ಹತ್ತು ವರ್ಷ ವಯಸ್ಸಾಗುವುದಕ್ಕೆ ಮೊದಲೇ ಮದುವೆ ಆಗುತ್ತಾರೆ.
  • ಪಶ್ಚಿಮ ಆಫ್ರೀಕಾದ ಆರ್ಕಿರಾ ಬಳಿಯ ಗಬೋನ್‌ನಲ್ಲಿ ಪ್ರೌಢಾವಸ್ಥೆ ಕಾಣಿಸುವವರೆಗೂ ಮದುವೆಯನ್ನು ವಿಳಂಬ ಮಾಡುವುದಿಲ್ಲ.
  • ಸೂದನ್‌ನ ನೂಬಿಯಾದ ಪುರುಷರು ತರುಣಿಯರನ್ನು ಅವರು ಮುಟ್ಟಾಗುವ ಮೊದಲೇ ಅವರೊಡನೆ ಲೈಂಗಿಕ ಸುಖ ಅನುಭವಿಸುತ್ತಾರೆ.
  • ಸುಮಾತ್ರದ ಅಟ್ಜೇಹ್‌ನವರು, ಪ್ರೌಢಾವಸ್ಥೆ ತಲುಪದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾರೆ ಜೊತೆಗೂ ಮಲಗುತ್ತಾರೆ.
  • ಫಿಜಿಯಲ್ಲಿರುವ ವಿಟಿಯ ದ್ವೀಪದವರೂ ಕೂಡ ಹೆಣ್ಣುಗಳು ಮೈನೆರೆಯುವ ಮೊದಲೇ ಅವರನ್ನು ಮದುವೆ ಆಗಿ ಬಿಡುತ್ತಾರೆ.[೩೪]

ಬಾಲ್ಯ ವಿವಾಹ ನಿಷೇಧ ಕಾಯ್ದೆ -2006 (ಕೇಂದ್ರ ಕಾಯ್ದೆ – 2006)[ಬದಲಾಯಿಸಿ]

  • ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1154/2006ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್.ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ: 30.06.2011ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ.
  • ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 501 ಎಸ್.ಜೆ.ಡಿ 2011, ದಿನಾಂಕ: 16.11.2011ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ 1 ಉಪ ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.
  • 1955ರ ಹಿಂದೂ ವಿವಾಹ ಕಾಯ್ದೆೆ ಪ್ರಕಾರ ಮದುವೆಗೆ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಸೆಕ್ಷನ್ 11 ಹಾಗೂ 12 ಅಡಿ ಕೇಸ್ ದಾಖಲಿಸಬಹುದು. ಹಾಗು ಸೆಕ್ಷನ್ 13ರ ಅಡಿ ವಿಚ್ಛೇದನ ಪಡೆಯಲು ಅವಕಾಶ ಇದೆ ಎಂದು ಹೇಳಿದೆ.
  • 2012-13ನೇ ಸಾಲಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಎಲ್ಲಾ ಮಕ್ಕಳು ಆರೈಕೆ ಹಾಗೂ ರಕ್ಷಣೆಯ ಮೂಲಕ ಅಭಿವೃದ್ಧಿ ಯೊಂದಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯುವ ಹಕ್ಕನ್ನು ಹೊಂದಿರುತ್ತಾರೆ. ಬಾಲ್ಯ ವಿವಾಹವು ಈ ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಬಾಲ್ಯ ವಿವಾಹದಿಂದ ಉಂಟಾಗುವ ಅಪ್ರಾಪ್ತ ವಯಸ್ಸಿನ ತಾಯ್ತನವು ತಾಯಿ ಹಾಗೂ ಮಗುವನ್ನು ಅಪಾಯದ ಅಂಚಿನಲ್ಲಿ ತಳ್ಳುವಂತಾಗುತ್ತದೆ. ಇದರಿಂದಾಗಿ ಶಿಶು ಮರಣ ಹಾಗೂ ತಾಯಂದಿರ ಮರಣ ಹೆಚ್ಚಾಗಲು ಕಾರಣವಾಗುತ್ತದೆ.

ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು[ಬದಲಾಯಿಸಿ]

  • ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು ಮೂಡಿಸಲು "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/-ರ ನಗದು ಬಹುಮಾನ ನೀಡಲಾಗುತ್ತಿದೆ. ರಾಜ್ಯದಲ್ಲಿ 300 ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 10 ಜಿಲ್ಲೆಗಳಲ್ಲಿ 10 ಕಡೆ ಬಾಲ್ಯ ವಿವಾಹ ನಿಷೇಧದ ಬಗ್ಗೆ ಗೋಡೆ ಬರಹ ಬರೆಸಲಾಗಿದೆ.
  • ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕರಪತ್ರಗಳು, ಬ್ರೋಷರ್, ಎಫ್.ಎ.ಕ್ಯೂ.ಗಳು, ಸ್ಟಿಕ್ಕರ್ ಗಳನ್ನು ಮತ್ತು 5 ಬಗೆಯ ಪೋಸ್ಟರ್ ಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗಿದೆ. ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ತರಬೇತಿ ಮೂಲಕ ಅರಿವು ಮೂಡಿಸಲಾಗಿರುತ್ತದೆ. ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ. ಕಲಾ ಜಾಥಾಗಳ ಮೂಲ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ.

ಇತರ ದೇಶಗಳಲ್ಲಿನ ಬಾಲ್ಯವಿವಾಹದ ಪಟ್ಟಿ[ಬದಲಾಯಿಸಿ]

Country % girls married before 18
ICRW-UNICEF data[೩೫][೩೬]
(Year of data)
% girls married
before 18
(UN data)[೩೭]
 ನೈಜರ್ 76 (2012) 62
 ಚಾಡ್ 68 (2010) 49
 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 68 (2010) 42
 ಬಾಂಗ್ಲಾದೇಶ 65 (2011) 48
 ಮಾಲಿ 55 (2010) 50
 ಗಿನಿ 52 (2012) 46
 ಮಲಾವಿ 50 (2010) 37
 ಮೊಜಾಂಬಿಕ್ 48 (2011) 47
 ಮಡಗಾಸ್ಕರ್ 41 (2012) 34
 ಸಿಯೆರ್ರಾ ಲಿಯೋನ್ 44 (2010) 47
 ಬುರ್ಕೀನ ಫಾಸೊ 52 (2010) 35
 ಭಾರತ 47 (1999-2005) 30
 ಸೊಮಾಲಿಯ 45 (1998-2006) 38
 ನಿಕರಾಗುವ 41 (2000-2006) 32
 ಜಾಂಬಿಯ 42 (2002-2007) 24
 ಎರಿಟ್ರಿಯ 41 (2010) 38
 ಉಗಾಂಡ 40 (2011) 32
 ಇಥಿಯೊಪಿಯ 41 (2011) 30
 ನೇಪಾಳ 41 (2011) 40
 ಡೊಮಿನಿಕ ಗಣರಾಜ್ಯ 41 (2009-2010) 29
 ಅಫ್ಘಾನಿಸ್ತಾನ 40 (2012) 29

ಅಮೇರಿಕಾದಲ್ಲಿ ಬಾಲ್ಯವಿವಾಹ[ಬದಲಾಯಿಸಿ]

  • ಅಮೆರಿಕದ 38 ರಾಜ್ಯಗಳಲ್ಲಿ 2000ದಿಂದ 2010ರ ನಡುವಣ ಅವಧಿಯಲ್ಲಿ 17 ವರ್ಷದೊಳಗಿನ 1.67 ಲಕ್ಷ ಬಾಲಕಿಯರಿಗೆ ಮದುವೆ ಆಗಿದೆ ಎಂಬುದನ್ನು ಲಭ್ಯ ಇರುವ ವಿವಾಹ ನೋಂದಣಿ ದಾಖಲೆ ತೋರಿಸಿಕೊಡುತ್ತದೆ. ಬಾಲ್ಯ ವಿವಾಹ ನಿಷೇಧಕ್ಕಾಗಿ ಕೆಲಸ ಮಾಡುವ ‘ಅನ್‌ಚೈನ್ಡ್ ಅಟ್ ಲಾಸ್ಟ್’ ಎಂಬ ಸಂಸ್ಥೆ ಈ ಮಾಹಿತಿ ಕಲೆ ಹಾಕಿದೆ. ಅಲಾಸ್ಕ, ಲೂಸಿಯಾನಾ ಮತ್ತು ಸೌಥ್ ಕೆರೊಲಿನಾದಲ್ಲಿ 12 ವರ್ಷಕ್ಕೆ ಮದುವೆಯಾದ ಬಾಲಕಿಯರ ಪ್ರಕರಣಗಳತ್ತ ಈ ಸಂಸ್ಥೆ ಬೆಳಕು ಚೆಲ್ಲಿದೆ. ಉಳಿದ ರಾಜ್ಯಗಳಲ್ಲಿಯೂ 14 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮದುವೆ ಆಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ.
  • ಆದರೆ ಇತರ ರಾಜ್ಯಗಳ ನಿಖರ ಮಾಹಿತಿ ಸಂಗ್ರಹ ಸಾಧ್ಯವಾಗಿಲ್ಲ ಎಂದು ‘ಅನ್‌ಚೈನ್ಡ್ ಅಟ್ ಲಾಸ್ಟ್’ ಹೇಳಿದೆ. ಆದರೆ ಇಡೀ ದೇಶದಲ್ಲಿ 2000ದಿಂದ 2010ರ ಅವಧಿಯಲ್ಲಿ ಕನಿಷ್ಠ 2.5 ಲಕ್ಷ ಬಾಲ್ಯ ವಿವಾಹ ನಡೆದಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ಜನಗಣತಿ ವರದಿ ಕೂಡ ಇದನ್ನು ಸಮರ್ಥಿಸುತ್ತದೆ. 2014ರಲ್ಲಿ 57,800 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ ಎಂದು ಗಣತಿ ಹೇಳಿದೆ.
  • ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ರಾಜ್ಯಗಳೆಂದರೆ ಅರ್ಕಾನ್ಸಸ್, ಇಡಾಹೊ ಮತ್ತು ಕೆಂಟಕಿ. ಅಮೆರಿಕದಲ್ಲಿ ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಎಲ್ಲ ರಾಜ್ಯಗಳಲ್ಲಿಯೂ ಹೆತ್ತವರು, ನ್ಯಾಯಾಧೀಶ ಅಥವಾ ಈ ಇಬ್ಬರ ಸಮ್ಮತಿಯೊಂದಿಗೆ ಬಾಲ್ಯವಿವಾಹಕ್ಕೆ ಅವಕಾಶ ಇದೆ. 27 ರಾಜ್ಯಗಳಲ್ಲಿ ವಿವಾಹಕ್ಕೆ ಕನಿಷ್ಠ ವಯಸ್ಸು ನಿಗದಿ ಮಾಡಿರುವ ಕಾನೂನೇ ಇಲ್ಲ ಎಂದು ತಹಿರೀಹ್ ಜಸ್ಟಿಸ್ ಸೆಂಟರ್ ಎಂಬ ಸಂಸ್ಥೆ ಹೇಳಿದೆ.
  • ಬಾಲ್ಯ ವಿವಾಹದ ಬಹುಸಂಖ್ಯಾತ ಪ್ರಕರಣಗಳಲ್ಲಿ ವಧು ಬಾಲಕಿಯಾಗಿದ್ದರೆ ವರ ಪ್ರೌಢನಾಗಿರುತ್ತಾನೆ. ಈ ಇಬ್ಬರ ನಡುವಣ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಕಾನೂನು ಪರಿಗಣಿಸುತ್ತದೆ. ಆದರೆ ಮದುವೆ ಆಗುವುದರಿಂದಾಗಿ ಇದು ಕಾನೂನುಬದ್ಧ ಆಗಿಬಿಡುತ್ತದೆ.[೩೮]

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2015-11-17. Retrieved 2018-08-27.
  2. https://www.globalcitizen.org/en/content/child-marriage-brides-india-niger-syria/
  3. https://www.girlsnotbrides.org/about-child-marriage/
  4. ೪.೦ ೪.೧ ೪.೨  This article incorporates text from a publication now in the public domain"Majority". [[Jewish Encyclopedia]]. 1901–1906. {{cite encyclopedia}}: Cite has empty unknown parameter: |HIDE_PARAMETER= (help); Invalid |ref=harv (help); URL–wikilink conflict (help)
  5. ೫.೦ ೫.೧ ೫.೨ ೫.೩ ೫.೪  This article incorporates text from a publication now in the public domain"Mi'un". [[Jewish Encyclopedia]]. 1901–1906. {{cite encyclopedia}}: Cite has empty unknown parameter: |HIDE_PARAMETER= (help); Invalid |ref=harv (help); URL–wikilink conflict (help)
  6. ಯೇಬಾಮಟ್ 107a
  7. ಯೇಬಾಮಟ್ 108a
  8. ಯೇಬಾಮಟ್ 109a
  9. ಯೇಬಾಮಟ್ 107a
  10. ೧೦.೦ ೧೦.೧ Brown, Jonathan A.C. (2015). Misquoting Muhammad: The Challenge and Choices of Interpreting the Prophet's Legacy. Oneworld Publications (Kindle edition). pp. 3090–3110 (Kindle locations).
  11. Spellberg, Denise (1996). Politics, Gender, and the Islamic Past: The Legacy of 'A'isha Bint Abi Bakr. Columbia University Press. pp. 39–40. ISBN 978-0231079990.
  12. Brown, Jonathan A.C. (2015). Misquoting Muhammad: The Challenge and Choices of Interpreting the Prophet's Legacy. Oneworld Publications (Kindle edition). pp. 3200 (Kindle location).
  13. Schacht, J.; Layish, A.; Shaham, R.; Ansari, Ghaus; Otto, J.M.; Pompe, S.; Knappert, J.; Boyd, Jean (1995). "Nikāḥ". In P. Bearman; Th. Bianquis; C.E. Bosworth; E. van Donzel; W.P. Heinrichs (eds.). Encyclopaedia of Islam. Vol. 8 (2nd ed.). Brill. p. 29.
  14. "Saudi Arabia bans under 18 marriage". 24 December 2019.
  15. ೧೫.೦ ೧೫.೧ ೧೫.೨ ೧೫.೩ ೧೫.೪ Nour, Nawal M. (2006), "Health Consequences of Child Marriage in Africa", Emerging Infectious Diseases, 12 (11): 1644–1649, ISSN 1080-6059
  16. ೧೬.೦ ೧೬.೧ ಚೈಳ್ಡ್ ಮ್ಯಾರೇಜ್ ಫ್ಯಾಕ್ಟ್‌ಶೀಟ್: ಸ್ಟೇಟ್ ಆಫ್ ವರ್ಲ್ಡ್ ಪಾಪ್ಯೂಲೇಷನ್ 2005 - UNFPA
  17. ಲರ್ನಿಂಗ್ ಫ್ರಂ ಚಿಳ್ಡ್ರನ್, ಫ್ಯಾಮಿಲೀಸ್, ಆಂಡ್ ಕಮ್ಯೂನಿಟೀಸ್ ಟು ಇನ್‌ಕ್ರೀಸ್ ಗರ್ಲ್ಸ್’ ಪಾರ್ಟಿಸಿಪೇಷನ್ ಇನ್ ಪ್ರೈಮರಿ ಸ್ಕೂಲ್ Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ. ಮಕ್ಕಳನ್ನು ರಕ್ಷಿಸಿ USA ವರದಿ
  18. ಚೈಳ್ಡ್ ಮ್ಯಾರೇಜ್ ರಿಸ್ಟ್ರೇಂಟ್ ಆಕ್ಟ್,1929
  19. "ಚೈಳ್ಡ್ ಮ್ಯಾರೇಜಸ್ ಟಾರ್ಗೆಟೆಡ್ ಇನ್ ಇಂಡಿಯಾ", BBC ವಾರ್ತೆಗಳು 24 ಅಕ್ಟೋಬರ್, 2001
  20. "ಸ್ಟೇಟಸ್ ಆಫ್ ಚಿಳ್ಡ್ರನ್ ಇನ್ ಇಂಡಿಯಾ". Archived from the original on 2012-03-07. Retrieved 2010-05-06.
  21. ೨೧.೦ ೨೧.೧ "ಆರ್ಕೈವ್ ನಕಲು" (PDF). Archived from the original (PDF) on 2009-06-19. Retrieved 2010-05-06.
  22. "ಆರ್ಕೈವ್ ನಕಲು". Archived from the original on 2009-01-27. Retrieved 2010-05-06.
  23. BBC NEWS | ವರ್ಲ್ಡ್ | ಸೌತ್ ಏಷಿಯಾ | ಫೋರ್ಸ್ಡ್ ಚೈಳ್ಡ್ ಮ್ಯಾರೇಜ್ ಟೆಸ್ಟ್ಸ್ ಪಾಕಿಸ್ತಾನ್ ಲಾ
  24. ೨೪.೦ ೨೪.೧ http://www.news.com.au/heraldsun/story/0,21985,24589595-5005961,00.html[ಶಾಶ್ವತವಾಗಿ ಮಡಿದ ಕೊಂಡಿ]
  25. ೨೫.೦ ೨೫.೧ ೨೫.೨ Power, Carla (12 August 2009), Nujood Ali & Shada Nasser win “Women of the Year Fund 2008 Glamour Award”, Yemen Times, archived from the original on 5 ಏಪ್ರಿಲ್ 2011, retrieved 16 February 2010
  26. Human Rights Watch (2001), "Yemen: Human Rights Developments", World Report 2001, Human Rights Watch, retrieved 8 April 2010
  27. Daragahi, Borzou (June 11 2008), Yemeni bride, 10, says I won't, Los Angeles Times, retrieved 16 February 2010 {{citation}}: Check date values in: |date= (help)
  28. https://plan-international.org/sexual-health/child-early-forced-marriage
  29. "ಆರ್ಕೈವ್ ನಕಲು". Archived from the original on 2011-01-13. Retrieved 2010-05-06.
  30. "ಸ್ಟಾಟಿಸ್ಟಿಕ್ಸ್ ಕೆನಡಾ". Archived from the original on 2008-12-20. Retrieved 2010-05-06.
  31. "ಮ್ಯಾರೇಜ್ ಲಾವ್ಸ್ ಇನ್ ದಿ US ಬೈ ಏಜ್"
  32. ಡಾಬ್ನರ್, ಜೆನ್ನಿಫರ್. ಪಾಲಿಗ್ಯಾಮಿಸ್ಟ್ ಲೀಡರ್ ಕನ್ವಿಕ್ಟಡ್ ಇನ್ ಉಟಾಹ್. ಅಸೋಸಿಯೇಟೆಡ್ ಪ್ರೆಸ್. ABC ವಾರ್ತೆಗಳು. 2007-09-25.
  33. ೩೩.೦ ೩೩.೧ ಬ್ಲೂಮೆಂಥಾಲ್, ರಾಲ್ಫ್. ಕೋರ್ಟ್ ಸೇಯ್ಸ್ ಟೆಕ್ಸಾಸ್ ಇಲ್ಲೀಗಲಿ ಸೀಜ್ಡ್ ಸೆಕ್ಟ್ಸ್ ಚಿಲ್ಡ್ರನ್. ದಿ ನ್ಯೂ ಯಾರ್ಕ್ ಟೈಮ್ಸ್.2008-05-23. 2008-05-24ರಲ್ಲಿ ಮರು ಸಂಪಾದಿಸಲಾಗಿದೆ.
  34. ಎಲೀ ಮೆಚಿಂಕಾಫ್ : ದಿ ನೇಚರ್ ಆಫ್ ಮ್ಯಾನ್ : ಸ್ಟಡೀಸ್ ಇನ್ ಆಪ್ಟಿಮಿಸ್ಟಿಕ್ ಫಿಲಾಸಫಿ . ಪುಟ್ನಾಮ್, ನ್ಯೂ ಯಾರ್ಕ್, 1903. p. 90
  35. "Child Marriage Facts and Figures". icrw.org. Archived from the original on 2018-08-28. Retrieved 2016-09-24.
  36. Percentage of women aged 20 to 24 years who were first married or in union before ages 15 and 18, UNICEF
  37. "United Nations Statistics Division - Demographic and Social Statistics". un.org.
  38. "ಅಮೆರಿಕವನ್ನೂ ಕಾಡುತ್ತಿರುವ 'ಬಾಲ್ಯ ವಿವಾಹ'; ಅನಿಷ್ಟ ಪದ್ಧತಿ ನಿಷೇಧಕ್ಕೆ ಭಾರೀ ಅಭಿಯಾನ;ಅತ್ಯಾಚಾರ ತನಿಖೆ ತಪ್ಪಿಸಲು ಬಾಲ್ಯವಿವಾಹ;ನಿಕೋಲಸ್ ಕ್ರಿಸ್ಟೋಫ್;3 Jun, 2017". Archived from the original on 2017-06-02. Retrieved 2017-06-03.

ಬಾಹ್ಯ ಕೊಂಡಿಗಳು[ಬದಲಾಯಿಸಿ]