ಬಿಸಿಲೆ ಘಾಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bisle
ಬಿಸ್ಲೆ
village
Country ಭಾರತ
Stateಟೆಂಪ್ಲೇಟು:Country data Karnataka
Languages
 • OfficialKannada
Time zoneUTC+5:30 (IST)

ಬಿಸಿಲೆ ಘಾಟಿಯು ಸಕಲೇಶಪುರದಿಂದ ಸುಮಾರು 50 ಕಿ.ಮೀ ದೂರವಿರುವ ಬಿಸಿಲೆ ಎಂಬ ಗ್ರಾಮದಿಂದ ಪ್ರಾರಂಭವಾಗಿ ಕುಕ್ಕೆ ಸುಬ್ರಮಣ್ಯದ ಹತ್ತಿರದವರೆಗೆ ಇದೆ. ಬಿಸಿಲೆ ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ ಅರಣ್ಯ ಇಲಾಖೆಯವರು ಬಿಸಿಲೆ ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಮತ್ತು ಇತರೆ ದಿನಗಳಲ್ಲಿ ಇಲ್ಲಿನ ಪ್ರಕೃತಿ ಸೊಬಗು ನೋಡಲು ಸಾವಿರಾರು ಜನ ಆಗಮಿಸುತ್ತಾರೆ. ಇಲ್ಲಿನ ವೀಕ್ಷಣಾ ಗೋಪುರದಿಂದ ನಿಂತು ವೀಕ್ಷಿಸಿದರೆ ಕುಮಾರ ಪರ್ವತ, ಪುಷ್ಪಗಿರಿ ಬೆಟ್ಟ, ದೊಡ್ಡ ಬೆಟ್ಟ, ಪಟ್ಲ ಬೆಟ್ಟ, ಏಣಿಕಲ್ಲು ಬೆಟ್ಟ ಹಾಗು ಗಿರಿ ಹೊಳೆಯ ನೋಟ ಬಹು ಸುಂದರ. ಇದು ಹಿಂದೆ ಟಿಪ್ಪು ಸುಲ್ತಾನನ ಕಾಲದಲ್ಲಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿತ್ತು. ಈಗಲೂ ಹಾಸನ ಹಾಗೂ ಕೊಡಗಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಬರುವವರಿಗೆ ಅತೀ ಹತ್ತಿರದ ದಾರಿಯಾಗಿದೆ.

ಬಿಸಿಲೆ ಘಾಟಿ